Tag: PM

  • ಕೇಂದ್ರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ- ಖರ್ಗೆ

    ಕೇಂದ್ರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ- ಖರ್ಗೆ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಅಂತ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದಕ್ಕೆ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯೇ ಕಾರಣ. ಜಿಡಿಪಿ ದರ 8.2 ಇದೆ ಅಂತ ಕೇಂದ್ರ ಕೊಚ್ಚಿಕೊಳ್ಳುತ್ತಿದೆ. ಆದ್ರೆ, ಅವರದ್ದೇ ಸಮೀಕ್ಷೆಯಲ್ಲಿ ಅದು ಶೇ. 7.2 ಅಂತ ದಾಖಲಾಗಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಎರಡು ವರ್ಷದ ಬಳಿಕ ಅತಿ ಹೆಚ್ಚು ಜಿಡಿಪಿ ಪ್ರಗತಿ ದಾಖಲು

    ನಮ್ಮ ಅಧಿಕಾರಾವಧಿಯಲ್ಲಿ ಕಚ್ಚಾ ತೈಲದ ಬೆಲೆ ಜಾಸ್ತಿ ಇದ್ರೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರಲಿಲ್ಲ. ಆದ್ರೆ, ಸದ್ಯ ಡೀಸೆಲ್ ಬೆಲೆಯೇ 70ರ ಗಡಿ ದಾಟಿದೆ. ತೈಲ ಬೆಲೆ ಏರಿಕೆಯಿಂದ ರೈತ ಸಂಕಷ್ಟಕ್ಕೀಡಾಗಿದ್ದಾನೆ ಅಂದ್ರು. ಇದನ್ನೂ ಓದಿ: ಶನಿವಾರದಿಂದ ಬೈಕು-ಕಾರುಗಳ ವಿಮೆ ದುಬಾರಿ: ಎಷ್ಟು ಸಿಸಿಗೆ ಎಷ್ಟು ಹಣ ಪಾವತಿಸಬೇಕು?

    ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಆರೋಪಿಸಿದರಲ್ಲದೇ, ತಪ್ಪು ಆರ್ಥಿಕ ನೀತಿಯಿಂದ ಕೇಂದ್ರ ಮನ ಬಂದಂತೆ ಹಣ ವ್ಯಯಿಸುತ್ತಿದ್ದು, ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. 2ಕೋಟಿ ನಿರುದ್ಯೋಗಿಗಳಿಗೆ ನೌಕರಿ ಕೊಡುವ ಭರವಸೆ ಹುಸಿಯಾಗಿದೆ. ಅಲ್ಲದೇ ಆರ್ಥಿಕವಾಗಿ, ಸಾಮಾಜಿಕವಾಗಿ ಮೋದಿ ಸರ್ಕಾರ ದೇಶವನ್ನ ಹಾಳು ಮಾಡುತ್ತಿದ್ದು, ಸಂವಿಧಾನ, ಪ್ರಜಾ ಪ್ರಭುತ್ವಕ್ಕೆ ಕೇಂದ್ರ ಬೆಲೆಯೇ ಕೊಡುತ್ತಿಲ್ಲ ಅಂತ ಗಂಭೀರವಾಗಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ಯಶಸ್ಸಿನ ಹಿಂದಿನ ನಾಯಕ ವಾಜಪೇಯಿ!

    ಮೋದಿ ಯಶಸ್ಸಿನ ಹಿಂದಿನ ನಾಯಕ ವಾಜಪೇಯಿ!

    ಬೆಂಗಳೂರು: ಬಿಜೆಪಿ ಇಂದು ಆಡಳಿರೂಢ ಪಕ್ಷವಾಗಿದೆ. ಸದ್ಯಕ್ಕೆ ಬಿಜೆಪಿ ಎಂದರೆ ಮೋದಿ ಎನ್ನುವಂತಾಗಿದೆ. ಆದರೆ ಕೆಲ ವರ್ಷಗಳ ಹಿಂದೆ “ಅಬ್ ಕೀ ಬಾರ್ ಅಟಲ್ ಸರ್ಕಾರ್” ಎಂದೇ ಕರೆಯಲಾಗುತ್ತಿತ್ತು. ಎಂತಹ ಸಂದರ್ಭದಲ್ಲೂ ಎದೆಗುಂದದ ಅಟಲ್ ಅವರ ಧೈರ್ಯ, ಪ್ರೋಖ್ರಾನ್ ಅಣು ಪರೀಕ್ಷೆಯ ಸಂದರ್ಭದಲ್ಲೇ ಆಗಲಿ, ಕಾರ್ಗಿಲ್ ಯುದ್ಧದ ಸಮಯದಲ್ಲೇ ಆಗಲಿ ಅವರು ತೋರಿದ ದಿಟ್ಟತನ ಅವರೊಳಗಿದ್ದ ಪ್ರಖರ ರಾಜಕಾರಣಿಯ ಪರಿಚಯವನ್ನು ಮಾಡಿಕೊಟ್ಟಿತ್ತು. ಇಂತಹ ವಾಜಪೇಯಿಯವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಮಾತ್ರವಲ್ಲ, ತಮ್ಮಂತೆ ಬಿಜೆಪಿ ಪಕ್ಷಕ್ಕೆ ನೇತಾರರಾಗುವಂತಹ ಸಮರ್ಥ ಶಿಷ್ಯರನ್ನ ತಯಾರು ಮಾಡಿದರು. ಇವತ್ತು ಮೋದಿ ಭಾರತದ ಯಶಸ್ವಿ ಪ್ರಧಾನಿಯಾಗಿದ್ದಾರೆ ಅಂದರೆ ಅದರ ಹಿಂದಿರುವ ಶಕ್ತಿ ಅಡ್ವಾಣಿ ಮತ್ತು ವಾಜಪೇಯಿ ಮಾತ್ರ.


    ವಾಜಪೇಯಿ ಎಂತಹ ಸಂದರ್ಭವನ್ನು ಹೇಗೆ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು ಎನ್ನುವುದಕ್ಕೆ ಒಂದು ಸಣ್ಣ ನಿದರ್ಶನವೆಂದರೆ, ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಉದ್ಭವಿಸಿದ್ದ ಕ್ಷೋಭೆಯನ್ನು ಸಂಭಾಳಿಸಿದ ರೀತಿ. 2002 ಫೆಬ್ರವರಿ 27. ಅಂದು ಗುಜರಾತಿನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಕೋಮುದಳ್ಳುರಿಯಲ್ಲಿ ನೊಂದು ಬೆಂದವರು ಸಾವಿರಾರು ಜನ. ಪ್ರಾಣ ಕಳೆದುಕೊಂಡವರು ನೂರಾರು ಮಂದಿ. ಗುಜರಾತ್ ರಾಜ್ಯದಲ್ಲಿ ನಡೆದ ಒಂದು ಹತ್ಯಾಕಾಂಡ ಭಾರತದ ಉದ್ದಗಲಕ್ಕೂ ಕಾವನ್ನು ಹರಡಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನರಮೇಧವನ್ನೇ ಮಾಡಿಬಿಟ್ಟರು.


    ಭಾವೈಕ್ಯತೆಗೆ ಧಕ್ಕೆ ತಂದು ಬಿಟ್ಟರು ಎಂದು ಆರೋಪಿಸಲಾಯ್ತು. ಇದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ಸರ್ಕಾರ ಭಾರೀ ಮುಖಭಂಗವನ್ನು ಅನುಭವಿಸಬೇಕಾಗಿ ಬಂತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪರ-ವಿರೋಧ ಚರ್ಚೆಗಳು ಹಲವು ದಿನಗಳ ಮಟ್ಟಿಗೆ ಭಾರೀ ಸಂಚಲನವನ್ನೇ ಉಂಟು ಮಾಡಿದವು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೋ ಬೇಡವೋ ಎನ್ನುವ ಜಿಜ್ಞಾಸೆ ತೀವ್ರವಾಗಿದ್ದ ಸಮಯದಲ್ಲಿಯೇ ಈ ಘಟನೆ ನಡೆದದ್ದು, ಆತಂಕಕ್ಕೂ ಕಾರಣವಾಗಿತ್ತು. ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವ ಒತ್ತಡ ಹೆಚ್ಚಾಗುತ್ತೆ. ಆಗ ವಾಜಪೇಯಿ ಹೇಳಿದ್ದು ಒಂದೇ ಮಾತು.


    “ಗೋಧ್ರಾ ಹತ್ಯಾಕಾಂಡವನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ರಾಜನಾದವನು ಪ್ರಜೆಗಳನ್ನು ಸಮಾನವಾಗಿ ಕಾಣಬೇಕೇ ಹೊರತು ಜಾತಿ-ಧರ್ಮಗಳ ಆಧಾರದ ಮೇಲೆ ವರ್ಗೀಕರಣ ಮಾಡುವುದು ಸರಿಯಲ್ಲ. ಮೋದಿ ಅವರೇ, ಮೊದಲು ರಾಜಧರ್ಮ ಪಾಲನೆ ಮಾಡಿ. ಅದು ನಿಮ್ಮ ಕರ್ತವ್ಯ ಕೂಡ.” ಹೀಗೆ ಹೇಳಿ ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕಿದ್ದ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ರಕ್ಷಿಸಿದ್ದರು. ಅಂದು ಅಟಲ್ ಬಿಹಾರಿ ವಾಜಪೇಯಿ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ.


    ಮೋದಿಯಂತಹ ನಾಯಕ ಮಾತ್ರವಲ್ಲ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹೀಗೆ ರಾಷ್ಟ್ರ ರಾಜಕೀಯದಿಂದ ಪ್ರಾದೇಶಿಕ ಮಟ್ಟದವರೆಗೂ ಹಲವು ನವ ನಾಯಕರ ಹುಟ್ಟಿಗೆ ಕಾರಣರಾದರು ವಾಜಪೇಯಿ. ಆ ಮೂಲಕ ಸಾವಿರಾರು ಕಾರ್ಯಕರ್ತರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಫೂರ್ತಿಯಾಗಿದ್ದ ವಾಜಪೇಯಿ ಇಂದಿಗೂ ಎಂದೆಂದಿಗೂ ಅಜರಾಮರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೆ ಮೋದಿ ಪ್ರಧಾನಿ ಆಗೋದನ್ನು ತಡೆಯಲು ವಿಪಕ್ಷ ರಣತಂತ್ರ!

    ಮತ್ತೆ ಮೋದಿ ಪ್ರಧಾನಿ ಆಗೋದನ್ನು ತಡೆಯಲು ವಿಪಕ್ಷ ರಣತಂತ್ರ!

    ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಮೋದಿ ಮತ್ತೆ ಪ್ರಧಾನಿಯಾಗೋದನ್ನು ತಡೆಯಲು ವಿಪಕ್ಷ ಕಾಂಗ್ರೆಸ್ ಮಹಾ ರಣತಂತ್ರ ರೂಪಿಸಿದೆ.

    ಕಾಂಗ್ರೆಸ್ ತಾನು ಗೆಲ್ಲದಿದ್ರೂ ಪರವಾಗಿಲ್ಲ. ಎದುರಾಳಿ ಸೋಲಬೇಕು ಎನ್ನುವ ಮಂತ್ರ ಅಳವಡಿಸಿಕೊಂಡಿದೆ. ವಿಪಕ್ಷಗಳಲ್ಲಿ ಯಾರನ್ನೇ ಆದರೂ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದ್ರೆ ಅದನ್ನು ಒಪ್ಪಲು ಕಾಂಗ್ರೆಸ್ ರೆಡಿಯಾಗಿದೆ ಎನ್ನಲಾಗುತ್ತಿದೆ.

    ಕಾಂಗ್ರೆಸ್‍ನ ಒಂದು ಕಂಡೀಷನ್ ಅಂದ್ರೆ ಆ ಅಭ್ಯರ್ಥಿ ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿರಬಾರದು. ಈ ಮೂಲಕ ಲೋಕಸಮರಕ್ಕೂ ಮುನ್ನವೇ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ರೇಸ್‍ನಿಂದ ಹೊರಬಿದ್ದಂತಾಗಿದೆ.

    ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಮತ್ತು ಟಿಎಂಸಿಯ ಮಮತಾ ಬ್ಯಾನರ್ಜಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಲೋಕಸಭೆಯ ಅರ್ಧಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿ, ಉಳಿದ ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಕಾಂಗ್ರೆಸ್‍ನ ಈ ಚಿಂತನೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಕೇಳಿದಷ್ಟು ಸೀಟ್ ಕೊಟ್ಟರೆ ಮಾತ್ರ ಕಾಂಗ್ರೆಸ್ ಜೊತೆ ದೋಸ್ತಿ ಎಂದು ಮಾಯಾವತಿ ಹೇಳಿದ್ದಾರೆ.

  • ಅಪ್ಪಿಕೊಂಡ ತಕ್ಷಣವೇ ಮೋದಿ ಮೆಡಿಕಲ್ ಟೆಸ್ಟ್ ಮಾಡ್ಸಿಕೊಳ್ಬೇಕಿತ್ತು – ರಾಗಾ ಅಪ್ಪುಗೆಗೆ ಸುಬ್ರಮಣಿಯನ್ ಸ್ವಾಮಿ ಲೇವಡಿ

    ಅಪ್ಪಿಕೊಂಡ ತಕ್ಷಣವೇ ಮೋದಿ ಮೆಡಿಕಲ್ ಟೆಸ್ಟ್ ಮಾಡ್ಸಿಕೊಳ್ಬೇಕಿತ್ತು – ರಾಗಾ ಅಪ್ಪುಗೆಗೆ ಸುಬ್ರಮಣಿಯನ್ ಸ್ವಾಮಿ ಲೇವಡಿ

    ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡನೆಗೂ ಮೊದಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿರುವುದಕ್ಕೆ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಟ್ವಿಟ್ ಮಾಡಿದ್ದಾರೆ.

    ಅಪ್ಪಿಕೊಳ್ಳುವ ರಾಹುಲ್ ಗಾಂಧಿಗೆ ನಮೋ ಬಿಡಬಾರದಿತ್ತು. ರಷ್ಯಾ, ಉತ್ತರಕೊರಿಯಾದವರು ಇದೇ ರೀತಿ ಅಪ್ಪಿಕೊಳ್ಳುವ ತಂತ್ರ ಉಪಯೋಗಿಸ್ತಾರೆ. ಅಪ್ಪಿಕೊಳ್ಳುವ ತಂತ್ರ ಬಳಸಿ ವಿಷದ ಇಂಜೆಕ್ಷನ್ ಚುಚ್ತಾರೆ. ರಾಹುಲ್ ಅಪ್ಪಿಕೊಂಡ ತಕ್ಷಣವೇ ಮೋದಿ ಮೆಡಿಕಲ್ ಟೆಸ್ಟ್ ಮಾಡಿಸಿಕೊಳ್ಳಬೇಕಿತ್ತು. ಪುಷ್ಕರ್ ಕೈಯಲ್ಲಿದ್ದ ಇಂಜೆಕ್ಷನ್ ಗುರುತಿನಂತೆ ತಮಗೂ ಇಂಜೆಕ್ಷನ್ ಆಗಿದ್ಯಾ ಅಂತ ಚೆಕ್ ಮಾಡಿಸಿಕೊಳ್ಳಬೇಕಿತ್ತು ಅಂತ ಲೇವಡಿ ಮಾಡಿದ್ದಾರೆ.

    ಮೋದಿಯನ್ನು ಅಪ್ಪಿಕೊಂಡ್ರು ರಾಹುಲ್:
    ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ರಾಹುಲ್ ಗಾಂಧಿಯವರು ಸಚಿವರಾದ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಾರೆ. ಸ್ವಲ್ಪ ಸಮಯ ಕಲಾಪ ಮುಂದೂಡಿದಾಗ ನಿಮ್ಮ ಸಂಸದರೇ ನನ್ನ ಬಳಿ ಬಂದು ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಅಂತ ಕೈ ಕುಲುಕಿದರು. ಪ್ರಧಾನಿ ಮೋದಿಯವರನ್ನು ಸೋಲಿಸಲು ಅವರ ಪಕ್ಷದಲ್ಲಿಯೇ ಷಡ್ಯಂತ್ರ ರಚಿತವಾಗಿದೆ. ಬಿಜೆಪಿ, ಆರ್ ಎಸ್‍ಎಸ್ ಗಳಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ನನಗೆ ಹಿಂದೂಸ್ತಾನ್, ಭಾರತ, ಹಿಂದೂ, ನನ್ನ ಧರ್ಮದ ಬಗ್ಗೆ ಹೇಳಿಕೊಟ್ಟಿದ್ದೀರಿ. ನಾನು ಈ ವಿಷಯಕ್ಕಾಗಿ ನಿಮಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳುತ್ತಾ ನೇರವಾಗಿ ಮೋದಿಯವರ ಬಳಿ ತೆರಳಿ ಅಪ್ಪಿಕೊಂಡು, ಕೈ ಕುಲುಕಿ ಬರುವ ಮೂಲಕ ಲೋಕಸಭೆಯಲ್ಲಿ ಅಚ್ಚರಿ ಮೂಡಿಸಿದ್ದರು.

    ಎನ್‍ಡಿಎಗೆ ವಿಶ್ವಾಸ ಮತ:
    ದೇಶಾದ್ಯಂತ ಕುತೂಹಲ ಮೂಡಿಸಿದ್ದ ಅವಿಶ್ವಾಸ ನಿರ್ಣಯ ಮಂಡನೆ ಶುಕ್ರವಾರ ಲೋಕಸಭೆಯಲ್ಲಿ ನಡೆದಿದ್ದು, ನಿರೀಕ್ಷೆಯಂತೆ ಪ್ರತಿಪಕ್ಷಗಳಿಗೆ ಸೋಲಾಗಿದೆ. ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಯಶಸ್ವಿಯಾಗಿದೆ. ಬಹುಮತ ಸಾಬೀತಿಗೆ 226 ಮತ ಬೇಕಾಗಿತ್ತು. ಆದರೆ ಎನ್‍ಡಿಎ ಪರ 325 ಮತಗಳು ಚಲಾವಣೆಯಾದವು. ಕಾಂಗ್ರೆಸ್ ಮೈತ್ರಿಕೂಟದ ಪರವಾಗಿ ಕೇವಲ 126 ಮತ ಚಲಾವವಣೆಯಾದವು. ಇನ್ನು ಈ ವೇಳೆ ಸದನದಲ್ಲಿ ಒಟ್ಟು 451 ಸದಸ್ಯರು ಹಾಜರಿದ್ದು, ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಮೋದಿ, ರಾಹುಲ್ ಗಾಂಧಿಯ ಎಲ್ಲಾ ಆರೋಪಕ್ಕೆ ಕೌಂಟರ್ ಕೊಟ್ಟಿದ್ದರು.

  • ಲೋಕ ಸಮರ ಗೆಲ್ಲಲು ರಾಹುಲ್ ಹೊಸ ಫಾರ್ಮುಲಾ- ಮೋದಿನಾ ತಬ್ಬಿಕೊಂಡು ಕೊಟ್ರಾ ಪಂಥಾಹ್ವಾನ?

    ಲೋಕ ಸಮರ ಗೆಲ್ಲಲು ರಾಹುಲ್ ಹೊಸ ಫಾರ್ಮುಲಾ- ಮೋದಿನಾ ತಬ್ಬಿಕೊಂಡು ಕೊಟ್ರಾ ಪಂಥಾಹ್ವಾನ?

    ನವದೆಹಲಿ: ದೇಶಾದ್ಯಂತ ಕುತೂಹಲ ಮೂಡಿಸಿದ್ದ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ನಿರೀಕ್ಷೆಯಂತೆ ಪ್ರತಿಪಕ್ಷಗಳಿಗೆ ಸೋಲಾಗಿದ್ದು, ಇದೀಗ ಲೋಕಸಭಾ ಚುನಾವಣಾ ಸಮರ ಗೆಲ್ಲಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ವೈಎಲ್‍ಎಸ್(YLS) ಎಂಬ ಹೊಸ ಫಾರ್ಮೂಲವೊಂದನ್ನು ಸಿದ್ಧಪಡಿಸಿದ್ದಾರೆ.

    ಈ ಮೂಲಕ ಮೋದಿಯನ್ನ ತಬ್ಬಿಕೊಂಡ ರಾಹುಲ್ ಮುಂದೊಂದು ದಿನ ತೊಡೆ ತಟ್ಟಿ ಪಂತಾಹ್ವಾನ ನೀಡೋದು ಗ್ಯಾರಂಟಿ ಆಗಿದೆ. ಹೀಗಾಗಿ ಲೋಕಸಭೆ ಚುನಾವಣೆ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದು ರಾಹುಲ್, ಯುದ್ಧಕ್ಕೆ ಸಿದ್ಧರಾಗ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೈಎಲ್‍ಎಸ್ ಫಾರ್ಮೂಲದ ಮೂಲಕ ಗೆಲುವು ದೊರಕಿಸಿಕೊಡಬಹುದು ಎಂಬುದು ರಾಹುಲ್ ಗಾಂಧಿಯವರ ನಂಬಿಕೆಯಾಗಿದೆ. ಈಗಾಗಲೇ ದಿನೇಶ್ ಗುಂಡುರಾವ್, ಈಶ್ವರ್ ಖಂಡ್ರೆಗೂ ರಾಹುಲ್ ಅವರು ಇದೇ ಫಾರ್ಮುಲಾವನ್ನು ಬೋಧಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲು: ವಿಶ್ವಾಸ ಗೆದ್ದ ಮೋದಿ!

    ಏನಿದು ವೈಎಲ್‍ಎಸ್ ಫಾರ್ಮೂಲ?:
    ವೈಎಲ್‍ಎಸ್ ಫಾರ್ಮುಲಾ ಅಂದರೆ ಯೂತ್ಸ್, ಲೇಡಿಸ್ ಆಂಡ್ ಸ್ಟೂಡೆಂಟ್ಸ್ ಫಾರ್ಮುಲಾವಾಗಿದೆ. ಈ ಸೂತ್ರವನ್ನು ದೇಶಾದ್ಯಂತ ಜಾರಿಗೆ ತರಲು ರಾಹುಲ್ ಹೊರಟಿದ್ದು, ರಾಜ್ಯದಲ್ಲಿ ಖಡಕ್ಕಾಗಿ ಇಂಪ್ಲಿಮೆಂಟ್ ಮಾಡುವಂತೆ ಸೂಚೆನ ನೀಡಿದ್ದಾರೆ ಎನ್ನಲಾಗಿದೆ.

    ಪ್ರತಿ ಬೂತ್‍ನಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರ ತಂಡ ಸಿದ್ಧಪಡಿಸಿ, ಈ ಮೂಲಕ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಮೂಲಕ ಯುವ ಜನತೆ, ಮಹಿಳೆಯರ ಮನಸು ಗೆದ್ದರೆ ದೇಶ ಗೆಲ್ಲಬಹುದು ಎಂಬುದು ರಾಹುಲ್ ಐಡಿಯಾವಾಗಿದೆ. ಈ ಸಂಬಂಧ ಇಂದು ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ರಾಹುಲ್ ಭಾಷಣದ ವೇಳೆ ಮೋದಿ ನಕ್ಕಿದ್ದೇಕೆ?

    ದೇಶಾದ್ಯಂತ ಕುತೂಹಲ ಮೂಡಿಸಿದ್ದ ಅವಿಶ್ವಾಸ ನಿರ್ಣಯ ಮಂಡನೆ ಶುಕ್ರವಾರ ಲೋಕಸಭೆಯಲ್ಲಿ ನಡೆದಿದ್ದು, ನಿರೀಕ್ಷೆಯಂತೆ ಪ್ರತಿಪಕ್ಷಗಳಿಗೆ ಸೋಲಾಗಿದೆ. ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಯಶಸ್ವಿಯಾಗಿದೆ. ಬಹುಮತ ಸಾಬೀತಿಗೆ 226 ಮತ ಬೇಕಾಗಿತ್ತು. ಆದರೆ ಎನ್‍ಡಿಎ ಪರ 325 ಮತಗಳು ಚಲಾವಣೆಯಾದವು. ಕಾಂಗ್ರೆಸ್ ಮೈತ್ರಿಕೂಟದ ಪರವಾಗಿ ಕೇವಲ 126 ಮತ ಚಲಾವವಣೆಯಾದವು. ಹೀಗಾಗಿ 199 ಮತಗಳ ಅಂತರದಿಂದ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಗೆಲುವು ಸಾಧಿಸಿದೆ. ಇನ್ನು ಈ ವೇಳೆ ಸದನದಲ್ಲಿ ಒಟ್ಟು 451 ಸದಸ್ಯರು ಹಾಜರಿದ್ದರು. ಇನ್ನು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಮೋದಿ, ರಾಹುಲ್ ಗಾಂಧಿಯ ಎಲ್ಲಾ ಆರೋಪಕ್ಕೆ ಕೌಂಟರ್ ಕೊಟ್ಟಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ ದೊಡ್ಡ ಸುಳ್ಳುಗಾರ- ರಾಹುಲ್ ಆರೋಪಕ್ಕೆ ಸಿಡಿದೆದ್ದ ಬಿಜೆಪಿ-ರಾಹುಲ್ ಗಾಂಧಿ ಮಾತಿಗೆ ನಕ್ಕ ಚೌಕಿದಾರ

    https://www.youtube.com/watch?v=19lk2G642xM

  • ಭತ್ತದ ಗದ್ದೆಯಲ್ಲಿ ಮೋದಿ, ಅಮಿತ್ ಶಾ, ಯಡಿಯೂರಪ್ಪ!

    ಭತ್ತದ ಗದ್ದೆಯಲ್ಲಿ ಮೋದಿ, ಅಮಿತ್ ಶಾ, ಯಡಿಯೂರಪ್ಪ!

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೊಲಗದ್ದೆಗಳಲ್ಲಿ ಕಟೌಟ್ ಗಳಾಗುವ ಮೂಲಕ ರೈತ ಸ್ನೇಹಿಯಾಗಿದ್ದಾರೆ.

    ಹೌದು. ಚಿಕ್ಕಮಗಳೂರು ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಭತ್ತದ ಗದ್ದೆಯಲ್ಲಿ ಈ ಮೂವರು ಬಿಜೆಪಿ ನಾಯಕರ ಕಟೌಟ್ ಗಳನ್ನು ಕಾವಲು ಕಾಯಲು ಬಳಕೆ ಮಾಡಲಾಗಿದೆ.

    ಚುನಾವಣೆಯಲ್ಲಿ ಬಳಸಿದ ಕಟೌಟ್ ಗಳನ್ನು ಇದೀಗ ರೈತರು ತಮ್ಮ ಜಮೀನಿನಲ್ಲಿ ಬೆಳೆ ಹಾಳು ಮಾಡುವ ಪ್ರಾಣಿ, ಪಕ್ಷಿಗಳನ್ನು ಬೆದರಿಸಲು ಬಳಸಿದ್ದಾರೆ. ರೈತರ ಜಮೀನಿನಲ್ಲಿ ಮೋದಿ, ಶಾ ಮತ್ತು ಬಿಎಸ್‍ವೈ ಕಟೌಟುಗಳು ರಾರಾಜಿಸುತ್ತಿದ್ದು, ನೋಡುಗರಿಗೆ ಮನರಂಜನೆ ನೀಡುತ್ತಿವೆ.

  • ದೇಶದ ಅಭಿವೃದ್ಧಿ ಮಾಡಲು 5 ವರ್ಷ ಸಾಲಲ್ಲ – ಪ್ರಧಾನಿ ಮೋದಿ ಪರ ಯದುವೀರ್ ಬ್ಯಾಟಿಂಗ್

    ದೇಶದ ಅಭಿವೃದ್ಧಿ ಮಾಡಲು 5 ವರ್ಷ ಸಾಲಲ್ಲ – ಪ್ರಧಾನಿ ಮೋದಿ ಪರ ಯದುವೀರ್ ಬ್ಯಾಟಿಂಗ್

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಮಾಡಲು 5 ವರ್ಷಗಳ ಅವಧಿ ಸಾಲುವುದಿಲ್ಲ. ಅವರಿಗೆ ಮತ್ತಷ್ಟು ಅವಕಾಶಗಳು ಸಿಗಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

    ಸರ್ಕಾರದ ಸಾಧನೆಯ ಪುಸ್ತಕ ತೆಗೆದುಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಕುರಿತ ಮಾಹಿತಿ ನೀಡಿದ್ದಾರೆ. ಆದರೆ ಈ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರಿಸಲು ಇನ್ನು ಕೆಲ ಅವಕಾಶಗಳು ಬೇಕಿದೆ. ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸಕ್ಕೆ ನಾವೆಲ್ಲ ಬೆಂಬಲಿಸಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್‍ರನ್ನ ಭೇಟಿ ಮಾಡಿದ ಶ್ರೀರಾಮುಲು

    2019 ರ ಲೋಕಾಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರದಲ್ಲಿ ಮೋದಿ ನಾಯಕತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಸಯೋಜನೆಗಳ ಬಗ್ಗೆ ದೇಶದ ಗಣ್ಯರಿಗೆ ತಿಳಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ರಾಜ್ಯ ಬಿಜೆಪಿ ನಾಯಕರು ಕೂಡ ತಮ್ಮ ಸಂಪರ್ಕದಲ್ಲಿರುವ ಗಣ್ಯರಿಗೆ ಸರ್ಕಾರ ಸಾಧನೆ ವಿವರಿಸುವ ಪುಸ್ತಕ ನೀಡಿ ಮಾಹಿತಿ ನೀಡುತ್ತಿದ್ದಾರೆ. ಸದ್ಯ ಬಿಜೆಪಿ ಮುಖಂಡ ರಾಮ್‍ದಾಸ್ ಸೇರಿದಂತೆ ಹಲವು ಮುಖಂಡರು ಒಡೆಯರ್ ಅವರನ್ನು ಭೇಟಿ ಮಾಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಶಾಸಕ ಶ್ರೀರಾಮುಲು ಅವರು ಸಹ ನಟ ಯಶ್ ರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಸಾಧನೆಗಳನ್ನ ವಿವರಿಸಿದ್ದರು.

  • ಐಶ್ವರ್ಯಾ ರೈ ಮಗಳು ಆರಾಧ್ಯ ಪ್ರಧಾನಿಯಾಗ್ತಾಳೆ!

    ಐಶ್ವರ್ಯಾ ರೈ ಮಗಳು ಆರಾಧ್ಯ ಪ್ರಧಾನಿಯಾಗ್ತಾಳೆ!

    ಹೈದರಾಬಾದ್: ಬಾಲಿವುಡ್‍ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್ ಅವರ ಏಕೈಕ ಪುತ್ರಿ ಆರಾಧ್ಯ ಮುಂದೊಂದು ದಿನ ಪ್ರಧಾನಿಯಾಗ್ತಾಳೆ ಅಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಡಿ. ಜ್ಞಾನೇಶ್ವರ್ ಅವರು ಭವಿಷ್ಯ ನುಡಿದ ಜ್ಯೋತಿಷಿಯಾಗಿದ್ದು, ಆರಾಧ್ಯಾ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಅಂತ ಹೇಳಿದ್ದಾರೆ. ಮುನ್ನೋಟ 2018 ಎನ್ನುವ ವಿಚಾರದ ಬಗ್ಗೆ ಸುದ್ದಿಗೋಷ್ಠಿಯನ್ನು ನಡೆಸಿ ಜ್ಯೋತಿಷಿ ಡಿ. ಜ್ಞಾನೇಶ್ವರ್ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಆರಾಧ್ಯ ತನ್ನ ಹೆಸರನ್ನು ರೋಹಿಣಿ ಎಂದು ಬದಲಿಸಿಕೊಂಡರೆ ಅವಳು ದೇಶದ ಪ್ರಧಾನ ಮಂತ್ರಿ ಆಗಬಹುದು ಎಂದು ಸಲಹೆ ನೀಡಿದ್ರು.

    ನಟರಾದ ಚಿರಂಜೀವಿ ಮತ್ತು ರಜನಿಕಾಂತ್ ಅವರು ರಾಜಕೀಯಕ್ಕೆ ಬರುತ್ತಾರೆ. 2009ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದರು.

    ಅಷ್ಟೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರವನ್ನು ಏರಲಿದ್ದಾರೆ. ಮುಂದೆ ತಮಿಳುನಾಡಿನಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ರಜನಿಕಾಂತ್ ಪಕ್ಷ ವಿಜಯ ಸಾಧಿಸುವುದರೊಂದಿಗೆ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

    2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯ ಯುದ್ಧ ನಡೆಯಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮಾಲೀಕ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮದುವೆ 2019ರಲ್ಲಿ ನಡೆದರೆ ಉತ್ತಮ ಎನ್ನುವ ಸಲಹೆಯನ್ನು ನೀಡಿದ್ದಾರೆ.

  • ನಾನೂ ಆ ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನಾ: ಸಿಎಂ ಆಕ್ರೋಶ

    ನಾನೂ ಆ ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನಾ: ಸಿಎಂ ಆಕ್ರೋಶ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕುಮ್ಮಕ್ಕಿನಿಂದಲೇ ಬಾದಾಮಿಯಲ್ಲಿ ಐಟಿ ದಾಳಿ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ದಾಳಿಯನ್ನು ಉಗ್ರವಾಗಿ ಖಂಡಿಸುತ್ತೇನೆ. ದಾಳಿಗಳನ್ನು ಮಾಡಿಸಿ ನನ್ನ ಹೆದರಿಸೋಕೆ ಸಾಧ್ಯವಿಲ್ಲ. ನನಗೆ ಯಾವ ಹೆದರಿಕೆಯು ಇಲ್ಲ. ಚುನಾವಣಾ ಸಮಯದಲ್ಲಿ ಕೇಂದ್ರ ಸಂಸ್ಥೆಗಳನ್ನು ದುರುದ್ದೇಶದಿಂದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬೇರೆ ಪಕ್ಷದ ನಾಯಕರುಗಳು ಇಳಿದುಕೊಂಡಿರುವ ಕಡೆ ಏನಕ್ಕೆ ದಾಳಿ ಮಾಡುತ್ತಿಲ್ಲ. ಕಾಂಗ್ರೆಸ್ ನವರ ಮೇಲಷ್ಟೆ ದಾಳಿಮಾಡುತ್ತಾರೆ ಅಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

    ರೆಸಾರ್ಟ್ ನಲ್ಲಿ ಉಳಿದುಕೊಂಡು ಬಂದು ನಾಲ್ಕು ದಿನವಾದ ಮೇಲೆ ದಾಳಿಮಾಡುತ್ತಾರೆ. ನಾನೂ ಆ ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನಾ? ಈಗ ಅಲ್ಲಿ ಹಣ ಸಿಕ್ಕಿತು ಅಂತಾರೆ. ಮೊದಲನೆಯದಾಗಿ ನಾನೂ ಆ ರೂಮಿನಲ್ಲಿ ಇರಲಿಲ್ಲ. ಚುನಾವಣೆ ವೇಳೆ ಈ ದಾಳಿಗಳು ರಾಜಕೀಯ ಪ್ರೇರಿತವಲ್ಲದೆ ಇನ್ನೇನು? ಬಿಜೆಪಿಗೆ ಸೋಲಿನ ಭೀತಿ ಕಾಡುತ್ತಿದೆ. ಇದರಿಂದ ವಾಮಮಾರ್ಗದಲ್ಲಿ ನಮ್ಮನ್ನ ಎದರಿಸಲು ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಬಿಜೆಪಿಯವರು ಜಾರಿ ನಿರ್ದೇಶನಾಲಯ(ಇಡಿ)ಯವನ್ನು ದುರುಪಯೋಗ ಪಡಿಸಿಕೊಳ್ಳಲಿ. ಐಟಿ ಯನ್ನಾದರೂ ದುರುಪಯೋಗ ಮಾಡಿಕೊಳ್ಳಲಿ. ಜನ ನನ್ನ ಪರವಾಗಿದ್ದಾರೆ. ಈ ದಾಳಿಗಳಿಂದ ಅನುಕೂಲವಾಗುತ್ತದೆ ಎಂದು ಬಿಜೆಪಿ ಅಂದುಕೊಂಡರೆ ಅವರಂತ ಮೂರ್ಖರಿಲ್ಲ ಎಂದು ಲೇವಡಿ ಮಾಡಿದರು.

  • ಟ್ಯಾಟೂ ಕಂಡು ಮೋದಿ ಖುಷ್- ಭಾಷಣದಲ್ಲಿ ಅಭಿಮಾನಿಗೆ ಬುದ್ಧಿಮಾತು

    ಟ್ಯಾಟೂ ಕಂಡು ಮೋದಿ ಖುಷ್- ಭಾಷಣದಲ್ಲಿ ಅಭಿಮಾನಿಗೆ ಬುದ್ಧಿಮಾತು

    ರಾಯಚೂರು: ಬೆನ್ನ ತುಂಬಾ ಮೋದಿ ಟ್ಯಾಟೋ ಹಾಕಿಸಿಕೊಂಡು ನೆಚ್ಚಿನ ಪ್ರಧಾನಿಯನ್ನ ನೋಡಲು ಕಾಯುತ್ತಿದ್ದ ಅಭಿಮಾನಿಯ ಅಭಿಮಾನಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೆ ಸೋತು ಹೋಗಿದ್ದಾರೆ.

    ನಗರದಲ್ಲಿ ನಡೆದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಮೋದಿಯವರ ಅಭಿಮಾನಿ ದೇವದುರ್ಗದ ಬಸವರಾಜ್ ಮಡಿವಾಳ ಟ್ಯಾಟೋ ವನ್ನ ಬಹಿರಂಗವಾಗಿ ತೋರಿಸಿದರು. ಇದನ್ನ ನೋಡಿದ ಮೋದಿ ನಿಮ್ಮ ಅಭಿಮಾನಕ್ಕೆ ನಾನು ಅಭಾರಿಯಾಗಿದ್ದೇನೆ. ಆದರೆ ಯುವಕರು ಅಭಿಮಾನ ತೋರಿಸಲು ದೇಹದಂಡನೆ ಮಾಡುವುದು ಒಳ್ಳೆಯದಲ್ಲ. ಬಹಳಷ್ಟು ಗಂಟೆಗಳ ಕಾಲ ದೇಹವನ್ನು ದಂಡಿಸುವುದು ಸರಿಯಲ್ಲ. ಈ ರೀತಿ ಮಾಡಬೇಡಿ ಎಂದು ನಾನು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.

    ಈಗಾಗಲೇ ಶಿವಾಜಿ, ಉಪೇಂದ್ರ, ಯಶ್ ಅಭಿಮಾನಿಗಳಿಗೆ ಟ್ಯಾಟೋ ಹಾಕಿದ್ದ ಕಲಾವಿದ ಶಂಕರ್ ಬದಿ ಬಸವರಾಜ್ ಬೆನ್ನ ಮೇಲೆ ಮೋದಿಯ ಟ್ಯಾಟೋ ಬಿಡಿಸಿದ್ದಾರೆ. ಟ್ಯಾಟೋ ಬಿಡಿಸಲು 15 ಗಂಟೆ ತೆಗೆದುಕೊಂಡಿದ್ದರು.

    ಮೋದಿಯವರನ್ನು ಭೇಟಿಯಾಗಲೇ ಬೇಕು ಅಂತ ಪಣತೊಟ್ಟು ಬಸವರಾಜ್ ತನ್ನ ಅಭಿಮಾನವನ್ನ ವ್ಯಕ್ತಪಡಿಸಲು ಟ್ಯಾಟೋ ಹಾಕಿಸಿಕೊಂಡಿದ್ದರು. ಅಲ್ಲದೆ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಮೇಲೂ ಅಭಿಮಾನ ಇರುವುದರಿಂದ ತನ್ನ ಬಲಗೈ ಮೇಲೆ ಶಿವನಗೌಡರ ಟ್ಯಾಟೋವನ್ನೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೋಗಳು ಶಾಶ್ವತ ಟ್ಯಾಟೋಗಳಾಗಿದ್ದು ಅಳಿಸಲು ಸಾಧ್ಯವಿಲ್ಲ.

    ಮೋದಿ ತಮ್ಮನ್ನು ಗುರುತಿಸಿ ಮಾತನಾಡಿದ್ದಕ್ಕೆ ಬಸವರಾಜ್ ಹಾಗೂ ಟ್ಯಾಟೋ ಕಲಾವಿದ ಶಂಕರ್ ಸಂತೋಷ ವ್ಯಕ್ತಪಡಿಸಿದ್ದಾರೆ.