ನವದೆಹಲಿ: ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ಗೆ ಆಗಮಿಸಿದ್ದಾಗ ಪ್ರಧಾನಿ ಮೋದಿ ಅವರ ಭದ್ರತೆ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ.
ಇಲ್ಲಿ ಏಕಪಕ್ಷೀಯವಾಗಿ ತನಿಖೆ ನಡೆಯುವ ಪ್ರಶ್ನೆಯೇ ಬರುವುದಿಲ್ಲ. ನಮಗೆ ಸ್ವತಂತ್ರವಾಗಿ ನಡೆಸಿದ ತನಿಖೆ ಅಗತ್ಯವಿದೆ. ಸಮಿತಿಯು ತನಿಖಾ ವರದಿಯನ್ನು ಆದಷ್ಟು ಬೇಗ ಸಲ್ಲಿಸಲಿದೆ ಎಂದು ಕೋರ್ಟ್ ಹೇಳಿದೆ.
ಪ್ರಧಾನಿಗೆ ಭದ್ರತಾ ವೈಫಲ್ಯಕ್ಕೆ ಕಾರಣವೇನು, ಅದಕ್ಕೆ ಯಾರು ಹೊಣೆಗಾರರು, ಭವಿಷ್ಯದಲ್ಲಿ ಇಂತಹ ಲೋಪಗಳನ್ನು ತಡೆಗಟ್ಟಲು ಯಾವ ಬಗೆಯ ರಕ್ಷಣಾತ್ಮಕ ಕ್ರಮಗಳ ಅಗತ್ಯವಿದೆ ಎಂಬುದರ ಬಗ್ಗೆ ತನಿಖೆ ನಡೆಸಿ ಸಮಿತಿಯು ವರದಿ ನೀಡಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್
ತನಿಖಾ ಸಮಿತಿಯಲ್ಲಿ ಎನ್‌ಐಎ ಮಹಾನಿರ್ದೇಶಕ, ಚಂಡೀಗಢ ಪೊಲೀಸ್ ಮುಖ್ಯಸ್ಥ, ಪಂಜಾಬ್‌ನ ಎಡಿಜಿಪಿ ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರರ್ ಜನರಲ್ ಅವರು ಸದಸ್ಯರಾಗಿದ್ದಾರೆ.
ಕಳೆದ ವಾರ ಪ್ರಧಾನಿ ಮೋದಿ ಅವರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ಗೆ ಭೇಟಿ ನೀಡಿದ್ದರು. ಫಿರೋಜ್‌ಪುರ ಬಳಿ ರಸ್ತೆ ಮಾರ್ಗವಾಗಿ ತೆರಳುತ್ತಿದ್ದಾಗ ಪ್ರತಿಭಟನೆ ಕಾರಣದಿಂದಾಗಿ ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲಿ ಪ್ರಧಾನಿ ಸಿಲುಕಿದ್ದರು. ಇದು ಭದ್ರತಾ ಲೋಪ ಎಂದು ಕೇಂದ್ರ ಗೃಹ ಸಚಿವಾಲಯ ಗಂಭೀರ ಆರೋಪ ಮಾಡಿತ್ತು. ನಂತರ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿತು. ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ
ಪ್ರಕರಣದ ತನಿಖೆಗೆ ಪಂಜಾಬ್ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವಾಲಯ ಪ್ರತ್ಯೇಕ ಸಮಿತಿ ರಚಿಸಿದ್ದವು. ಆದರೆ ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಈ ಹಿನ್ನೆಲೆಯಲ್ಲಿ ಎರಡೂ ಸಮಿತಿಗಳ ತನಿಖೆಗೆ ಸುಪ್ರೀಂ ತಡೆ ನೀಡಿತು. ಈಗ ಸ್ವತಂತ್ರ ತನಿಖಾ ತಂಡವನ್ನು ಸುಪ್ರೀಂ ಕೋರ್ಟ್ ರಚಿಸಿದೆ.
ನವದೆಹಲಿ: ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವೇಳೆ ಉಂಟಾದ ಭದ್ರತಾ ಲೋಪದ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಶೀಘ್ರವೇ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದೆ.
ಪಂಜಾಬ್ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಡಿ.ಎಸ್.ಪಟ್ವಾಲಿಯ, ಪ್ರಧಾನಿಯವರ ಪ್ರಯಾಣದ ವಿವರಗಳನ್ನು ಹೈಕ ರಿಜಿಸ್ಟ್ರಾರ್ ಜನರಲ್ ಅವರು ದಾಖಲಿಸಿದ್ದಾರೆ ಎಂದು ಪ್ರಕಟಿಸಿದ್ದಾರೆ.
ರಾಜ್ಯದ ಏಳು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ನೋಟಿಸ್‌ಗಳು ಎಲ್ಲಿಂದ ಬಂದಿವೆ? ಹೀಗಿದ್ದಮೇಲೆ ಯಾವುದೇ ವಿಚಾರಣೆಯ ಅಗತ್ಯವಿಲ್ಲ. ತನಿಖೆಗೆ ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯಿಂದ ನಮಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಸ್ವತಂತ್ರ ತನಿಖೆಗೆ ಕೋರ್ಟ್ ನಿರ್ದೇಶನ ಎಂದು ಮನವಿ ಮಾಡಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್
ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ಲ್ ತುಷಾರ್ ಮೆಹ್ತಾ, ಪ್ರಧಾನಿಗಳ ಪ್ರಯಾಣಕ್ಕೆ ವಿಶೇಷ ರಕ್ಷಣಾ ಪಡೆಯ (ಎಸ್‌ಎಸ್‌ಪಿಜಿ) ಬ್ಲೂ ಬುಕ್ ಕುರಿತು ಜನಪದಕ್ಕೆ ಸಂಬಂಧಿಸಿದವರು. `ಪ್ರಧಾನಿಗಳಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಅಲ್ಲಿನ ಪೊಲೀಸ್ ವ್ಯವಸ್ಥೆಯ ಜವಾಬ್ದಾರಿ ಕುರಿತು. ಆದರೆ ಮೇಲ್ಸೇತುವೆ ಬಳಿ ಜನಸಂದಣಿ ಇದೆ ಎಂದು ಬೆಂಗಾವಲು ಪಡೆಗೆ ಯಾವುದೇ ಸೂಚನೆ ನೀಡಿಲ್ಲ. ಇದು ಸಂಪೂರ್ಣ ಗುಪ್ತಚರ ವೈಫಲ್ಯ’ ಎಂದು ತಿಳಿಸಲಾಗಿದೆ.
ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಹಿಮಾ ಕೋಲ್, ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದಮೇಲೆ ನ್ಯಾಯಾಲಯ ಏಕೆ ಪ್ರಕರಣದ ವಿಚಾರಣೆಗೆ ಹೋಗಬೇಕು ಎಂದು ಪ್ರಶ್ನಿಸಿದರು.
ನಿಮ್ಮ ಶೋಕಾಸ್ ನೋಟಿಸ್ ಸಂಪೂರ್ಣ ವಿರೋಧಾಭಾಸವಾಗಿದೆ. ಸಮಿತಿಯನ್ನು ರಚಿಸುವ ಮೂಲಕ ನೀವು ಎಸ್ಪಿಜಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ವಿಚಾರಣೆಯನ್ನು ಬಯಸುತ್ತೀರಿ. ಜೊತೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತೀರಿ. ಅವರು ತಪ್ಪಿತಸ್ಥರೇ ಎಂದು ನ್ಯಾಯಾಧೀಶ ಸೂರ್ಯಕಾಂತ್ ಕೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸೂಚನೆ ಸೂಚನೆ
ನೀವು ರಾಜ್ಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು, ನ್ಯಾಯಾಲಯಕ್ಕೆ ಏನು ಉಳಿದಿದೆ ಎಂದು ಸಿಜೆಐ ರಮಣ ಪ್ರಶ್ನಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಕೊನೆಗೆ ನಿವೃತ್ತ ನ್ಯಾಯಾಧೀಶರನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಹೇಳಿದರು,
ಚಂಡೀಗಢ: ಪ್ರಧಾನಿ ಮೋದಿ ಅವರು ಪಂಜಾಬ್‌ಗೆ ತೆರಳಿದ್ದ ಸಂದರ್ಭದಲ್ಲಿ ಫಿರೋಜ್‌ಪುರ್ ಫ್ಲೈಓವರ್ ಬಳಿ ಸಿಲುಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು 150 ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 283ರಡಿ ಎಫ್‌ಐಆರ್ ದಾಖಲಾಗಿದೆ. ಯಾವುದೇ ಸಾರ್ವಜನಿಕ ಮಾರ್ಗದಲ್ಲಿ ಯಾವುದೇ ವ್ಯಕ್ತಿಗೆ ಅಪಾಯ, ಅಡಚಣೆ ಅಥವಾ ಗಾಯವನ್ನು ಉಂಟು ಮಾಡಿದರೆ ಅಂತಹವರು ಶಿಕ್ಷೆಗೆ ಗುರಿಯಾಗುತ್ತಾರೆ. 200 ರೂ. ವರೆಗೆ ದಂಡವನ್ನೂ ವಿಧಿಸಬಹುದಾಗಿದೆ. ಇದನ್ನೂ ಓದಿ: ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?
ಪ್ರಧಾನಿಗೆ ಭದ್ರತಾ ವೈಫಲ್ಯ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಪಂಜಾಬ್ ಸರ್ಕಾರ, ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿತ್ತು. ಸಮಿತಿಯು ನೀಡಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 150 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ.
ಪಂಜಾಬ್ನಲ್ಲಿ ರ‍್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಆಗಮಿಸಿದ್ದರು. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ನಲ್ಲಿ ರ‍್ಯಾಲಿ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಆಗ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದಾಗ ಫಿರೋಜ್‌ಪುರ್ ಫ್ಲೈಓವರ್ ಬಳಿ ಪ್ರತಿಭಟನೆ ಕಾರಣದಿಂದಾಗಿ ಪ್ರಧಾನಿಯವರು ಸಿಲುಕಿಕೊಂಡಿದ್ದರು.
ಪಂಜಾಬ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಫ್ಲೈಓವರ್ ಬಳಿ ಪ್ರಧಾನಿ ಮೋದಿ ಅವರ ಕಾರು ಸಿಲುಕಿದ ವಿಚಾರ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇದು ಬಹುದೊಡ್ಡ ಭದ್ರತಾ ಲೋಪ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ವಿಚಾರವಾಗಿ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಅಷ್ಟಕ್ಕೂ ಪ್ರಧಾನಿಗಳ ಭದ್ರತೆಯ ಪೂರ್ವ ಸಿದ್ಧತೆ ಹೇಗಿರುತ್ತೆ, ಅದರ ಹೊಣೆಗಾರಿಕೆ ಯಾರದು, ಪಂಜಾಬ್‍ನಲ್ಲಿ ನಡೆದದ್ದಾದರೂ ಏನು ಎಂಬ ನಾನಾ ಪ್ರಶ್ನೆಗಳು ಮೂಡುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.
ಪ್ರಧಾನಿಗಳ ಭದ್ರತೆಯ ಪ್ಲಾನ್ ಹೇಗಿರುತ್ತೆ?
ಬ್ಲೂ ಬುಕ್: ಇದು ಗಣ್ಯರ ಭದ್ರತೆ ಕುರಿತ ಮಾರ್ಗಸೂಚಿಗಳ ಸಂಗ್ರಹವಾಗಿದೆ. ಪ್ರಧಾನಿಗಳ ಭದ್ರತೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ನಿಯಮಗಳನ್ನು ‘ಬ್ಲೂ ಬುಕ್’ನಲ್ಲಿ ನಮೂದಿಸಲಾಗುತ್ತದೆ. ಈ ಯೋಜನೆಯು ಕೇಂದ್ರೀಯ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳನ್ನೂ ಒಳಗೊಂಡಿರುತ್ತದೆ. ಭದ್ರತೆಯ ಒಟ್ಟು ಜವಾಬ್ದಾರಿಯನ್ನು ವಿಶೇಷ ಭದ್ರತಾ ದಳ (ಎಸ್‍ಪಿಜಿ) ಹೊತ್ತಿರುತ್ತದೆ. ಇದನ್ನೂ ಓದಿ: ಪ್ರಧಾನಿ ಕಾರು ಸಿಲುಕಿದ್ದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರ ದಂಡು – ವೀಡಿಯೋ ವೈರಲ್
ಪ್ರಧಾನಿಯು ಸಭೆಯಲ್ಲಿ ಭಾಗವಹಿಸಿದರೆ, ರಸ್ತೆ-ವಿಮಾನದಲ್ಲಿ ಪ್ರಯಾಣಿಸಿದರೆ ಏನೇನು ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು? ಎಷ್ಟು ಸಿಬ್ಬಂದಿ ನಿಯೋಜಿಸಬೇಕು ಹಾಗೂ ಯಾವ ವಾಹನಗಳನ್ನು ಬಳಸಬೇಕು ಎಂಬುದನ್ನು ಮುಂಚಿತವಾಗಿಯೇ ಪ್ರತ್ಯೇಕ ಮಾರ್ಗಸೂಚಿಗಳನ್ನು ರಚಿಸಿಕೊಳ್ಳಲಾಗುತ್ತದೆ. ಅದರನ್ವಯ ಎಸ್‍ಪಿಜಿ ಹಾಗೂ ರಾಜ್ಯ ಪೊಲೀಸ್ ಪಡೆಗಳು ನಿಯಮಗಳನ್ನು ಪಾಲಿಸಬೇಕಿರುತ್ತದೆ.
ಭದ್ರತೆಗಾಗಿ ಸಭೆ
ಪ್ರಧಾನಿಯವರಿಗೆ ಪ್ರಯಾಣ ಸಂದರ್ಭದಲ್ಲಿ ಭದ್ರತೆ ಒದಗಿಸುವ ಸಂಬಂಧ ಸಭೆ ನಡೆಸಿ ಚರ್ಚಿಸಿ ಕ್ರಮವಹಿಸಲಾಗುತ್ತದೆ. ಪ್ರಧಾನಿ ಅವರು ಹೇಗೆ (ವಾಯು, ರಸ್ತೆ) ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡುತ್ತಾರೆ ಕಾರು ಅಥವಾ ಹೆಲಿಕಾಪ್ಟರ್‍ನಿಂದ ಇಳಿದು ಕಾರ್ಯಕ್ರಮ ಸ್ಥಳಕ್ಕೆ ಹೇಗೆ ತಲುಪುತ್ತಾರೆ ಎಂಬುದನ್ನೂ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದನ್ನು ಯೋಜಿಸುವಾಗ ಕೇಂದ್ರೀಯ ಏಜೆನ್ಸಿಗಳು ಮತ್ತು ಸ್ಥಳೀಯ ಗುಪ್ತಚರ ಘಟಕದ ಮಾಹಿತಿಗಳನ್ನೂ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರಧಾನಿ ಪ್ರಯಾಣದ ಮೂರು ದಿನಗಳ ಮುನ್ನವೇ ಈ ಎಲ್ಲಾ ಯೋಜನೆಯನ್ನು ಮಾಡಿಕೊಳ್ಳಲಾಗುತ್ತದೆ.
ಕಾರ್ಯಕ್ರಮ ಸ್ಥಳದ ಭದ್ರತೆ
ಕಾರ್ಯಕ್ರಮ ಸ್ಥಳದಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರ ವ್ಯವಸ್ಥೆ ಮಾಡಲಾಗುತ್ತದೆ. ಬರುವವರನ್ನು ಪರೀಕ್ಷಿಸಲಾಗುವುದು. ವೇದಿಕೆಯ ರಚನಾತ್ಮಕ ಸ್ಥಿರತೆಯನ್ನು ಸಹ ಪರಿಶೀಲಿಸಲಾಗುವುದು. ಸ್ಥಳದಲ್ಲಿ ಅಗ್ನಿ ಸುರಕ್ಷತೆ ಬಗ್ಗೆಯೂ ಪರಿಶೋಧನೆ ಮಾಡಲಾಗುವುದು. ಹವಾಮಾನ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ, ನಾಳೆ ಮಹತ್ವದ ವಿಚಾರಣೆ
ಕಾರ್ಯಕ್ರಮ ದಿಢೀರ್ ಬದಲಾವಣೆಯಾದರೆ?
ಇದಕ್ಕೂ ಸಹ ಮುಂಚಿತವಾಗಿ ಸೂಕ್ತ ತಯಾರಿ ಮಾಡಲಾಗುತ್ತದೆ. ಪ್ರಧಾನಿಗಳು ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ಸ್ಥಳ ತಲುಪಲು ಹವಾಮಾನ ಅಡ್ಡಿಯಾದರೆ, ಮುಂಚಿತವಾಗಿಯೇ ರಸ್ತೆ ಮಾರ್ಗವನ್ನು ಆಯ್ಕೆ ಮಾಡಲಾಗಿರುತ್ತದೆ. ರಸ್ತೆ ಮಾರ್ಗ ಸುರಕ್ಷಿತ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಮಾರ್ಗದಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ.
ಹೆಲಿಕಾಪ್ಟರ್ ಮಾರ್ಗ ಏಕೆ ಬದಲಾಗುತ್ತೆ?
ಹೆಲಿಕಾಪ್ಟರ್ ಹಾರಾಡುವಾಗ 1,000 ಮೀಟರ್ ದೂರದ ದಾರಿಯು ಪೈಲಟ್‍ಗೆ ಕಾಣುವಂತಿರಬೇಕು. ಚಳಿಗಾಲದಲ್ಲಿ ಅಥವಾ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಗೊತ್ತುಪಡಿಸಿದ ಮಾರ್ಗಗಳಲ್ಲಿ ತೊಂದರೆ ಇದೆ ಎಂದಾಗ ಪ್ರವಾಸ ರದ್ದುಗೊಳಿಸಿ ಮಾರ್ಗ ಬದಲಿಸಲಾಗುತ್ತದೆ. ತಕ್ಷಣ ಅಗತ್ಯ ಸಿದ್ಧತೆಗಳೊಂದಿಗೆ ಪರ್ಯಾಯವಾಗಿ ರಸ್ತೆ ಮಾರ್ಗದಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಲಾಗುತ್ತದೆ. ಚಳಿಗಾಲ ಅಥವಾ ಮಳೆಗಾದಲ್ಲಿ ಹಲವು ಬಾರಿ ಹೆಲಿಕಾಪ್ಟರ್ ಪ್ರಯಾಣ ರದ್ದಾಗುವುದು ಸಾಮಾನ್ಯ. ಹೀಗಾಗಿ ಮೊದಲೇ ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ ಆಗಿರುತ್ತದೆ
ರಸ್ತೆ ಮಾರ್ಗದಲ್ಲಿ ಭದ್ರತೆ ಹೇಗಿರುತ್ತೆ?
ಇಂತಹ ವೇಳೆ ರಾಜ್ಯ ಪೊಲೀಸರು ಸ್ಥಳೀಯವಾಗಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಸ್ಥಳೀಯ ಪೊಲೀಸರು ಒಪ್ಪಿಗೆ ನೀಡುವವರೆಗೂ ಪ್ರಧಾನಿ ಸಂಚಾರಕ್ಕೆ ಎಸ್‍ಪಿಜಿ ಅನುಮತಿ ನೀಡುವುದಿಲ್ಲ. ಪ್ರಧಾನಿ ವಾಹನ ಹಾಗೂ ಬೆಂಗಾವಲು ಪಡೆಯನ್ನು ರಾಜ್ಯ ಪೊಲೀಸರ ವಾಹನವು ಮುನ್ನಡೆಸಬೇಕು. ಆಯಾ ಜಿಲ್ಲೆಯ ಎಸ್‍ಪಿ ದರ್ಜೆಯ ಸಮವಸ್ತ್ರ ಇಲ್ಲದ ಅಧಿಕಾರಿ ಜೊತೆಗಿರಬೇಕು. ಪ್ರಧಾನಿಯು ಶಿಷ್ಟಾಚಾರ ಬದಿಗೊತ್ತಿ ಜನರ ಹತ್ತಿರ ಹೋಗಲು ಬಯಸಿದಾಗ, ಭದ್ರತೆಯ ಅಪಾಯವಿದ್ದಲ್ಲಿ ಎಸ್‍ಪಿಜಿ ಪ್ರಧಾನಿ ಅವರನ್ನು ತಡೆಯಬಹುದು. ರ‍್ಯಾಲಿ, ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರಧಾನಿಯನ್ನು ಜನರು ಸುತ್ತುವರಿಯುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಎಚ್ಚರವಹಿಸಬೇಕು. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ
ಭದ್ರತೆಯಲ್ಲಿ ಯಾರಿರುತ್ತಾರೆ?
ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಪಡೆಗಳಲ್ಲಿರುವ ಉತ್ಕೃಷ್ಟ ಸಾಮಥ್ರ್ಯದ ಯೋಧರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಕಠಿಣ ತರಬೇತಿ ನೀಡಲಾಗಿರುತ್ತದೆ. ಪ್ರಧಾನಿಗೆ ಭದ್ರತೆ ವೇಳೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತಿರಬೇಕು. ಎಸ್‍ಪಿಜಿ ಅನುಮತಿ ಇಲ್ಲದೇ ಅವರು ಕರ್ತವ್ಯದಿಂದ ಬಿಡುಗಡೆ ಪಡೆಯುವಂತಿಲ್ಲ.
ಪ್ರಧಾನಿ ಓಡಾಟಕ್ಕೆ ವ್ಯವಸ್ಥಿತ ‘ಕಾರ್‌ಕೇಡ್’
ಇದನ್ನು ಗೃಹ ಸಚಿವಾಲಯ ವ್ಯವಸ್ಥೆ ಮಾಡುತ್ತದೆ. ಪ್ರಧಾನಿ ಒಬ್ಬರೇ ಭೇಟಿ ನೀಡುವಾಗ ವಾಹನಗಳ ಸಂಖ್ಯೆ 8 ಮೀರಬಾರದು. ಪ್ರಧಾನಿ ಜೊತೆಗೆ ಸಂಗಾತಿ, ಗಣ್ಯರಿದ್ದರೆ ವಾಹನಗಳ ಸಂಖ್ಯೆ ಹೆಚ್ಚಿಸಬಹುದು. ಪೈಲಟ್ ಕಾರ್ (ಕಾರ್‍ಕೇಡ್ ಮುಂಭಾಗ ಇರುತ್ತೆ), ಟೆಕ್ನಿಕಲ್ ಕಾರ್ (ನೆಟ್‍ವರ್ಕ್ ಜಾಮರ್ ಮತ್ತಿತರ ತಾಂತ್ರಿಕ ಉಪಕರಣ ಹೊಂದಿರುತ್ತದೆ), ರೈಡರ್ಸ್ (ಪ್ರಧಾನಿ ಕಾರು ಚಲಿಸುವ ನಾಲ್ಕು ದಿಕ್ಕುಗಳಿಗೂ ಒಂದೊಂದು ಕಾರು), ಫ್ಲ್ಯಾಗ್ ಕಾರ್ (ಪ್ರಧಾನಿ ಸಾಗುವ ಕಾರು), ಅಂಬುಲೆನ್ಸ್ (ಪ್ರಧಾನಿಗೆ ಅಗತ್ಯ ಚಿಕಿತ್ಸೆಗೆ), ಟೇಲ್ ಕಾರ್ (ಕಾರ್‍ಕೇಡ್ ವ್ಯವಸ್ಥೆಯ ಕೊನೆಯ ಕಾರು). ಹೀಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಇದು ಪ್ರಧಾನಿ ಅವರ ಎಲ್ಲ ರಾಜ್ಯಗಳ ಪ್ರವಾಸಕ್ಕೂ ಅನ್ವಯಿಸುತ್ತದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪಂಜಾಬ್‌ಗೆ ತೆರಳಿದ್ದ ಸಂದರ್ಭದಲ್ಲಿ ಉಂಟಾದ ಭದ್ರತಾ ಲೋಪವನ್ನು ಖಂಡಿಸಿ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ವೀಡಿಯೋವೊಂದು ಹರಿದಾಡುತ್ತಿದ್ದು, ಇದು ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ.
ಫಿರೋಜ್‌ಪುರ ಬಳಿ ಪ್ರಧಾನಿ ಮೋದಿ ಅವರ ಕಾರು ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದುಕೊಂಡು, ʼಬಿಜೆಪಿ ಜಿಂದಾಬಾದ್ʼ ಎಂದು ಕೂಗುತ್ತಾ ಹಾರಿನ ಹತ್ತಿರಕ್ಕೆ ಹೋಗುತ್ತಿರುವ ದೃಶ್ಯಾವಳಿ ವೀಡಿಯೋದಲ್ಲಿ ಇದೆ. ಪ್ರಧಾನಿಗಳ ಕಾರಿಗೆ ಅನತಿ ದೂರದಲ್ಲೇ ಕಾರ್ಯಕರ್ತರು ನಿಂತು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ, ನಾಳೆ ಮಹತ್ವದ ವಿಚಾರಣೆ
ಈ ವೇಳೆ ಪ್ರಧಾನಿಯಿದ್ದ ಕಾರು ಮುಂದೆ ಸಾಗುತ್ತದೆ. ವಿಶೇಷ ರಕ್ಷಣಾ ದಳದ ಸಿಬ್ಬಂದಿ ಈ ವೇಳೆ ಪ್ರಧಾನಿ ಕಾರಿಗೆ ಅಲರ್ಟ್ ಆಗಿ ಭದ್ರತೆ ಒದಗಿಸಿತ್ತು. ಈ ಜಾಗದಲ್ಲಿ ಬಿಜೆಪಿ ಕಾರ್ಯಕರ್ತರು ಸಹ ರ‍್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದರು. ಟ್ರಾಫಿಕ್ ಆಗಿದ್ದ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಕಂಡುಬಂದಿದ್ದಾರೆ. ಆ ಕಾರು ಪ್ರಧಾನಿಗಳದ್ದು ಎಂಬುದನ್ನು ತಿಳಿದ ಅವರು ಕಾರಿನ ಬಳಿ ಹೋಗಲು ಪ್ರಯತ್ನಿಸಿದ್ದಾರೆ. ಭದ್ರತಾ ಲೋಪಕ್ಕೆ ಇದು ಒಂದು ಕಾರಣ ಎನ್ನಲಾಗುತ್ತಿದೆ.
ಪಂಜಾಬ್ ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಕೇಂದ್ರದ ಆಡಳಿತ ಪಕ್ಷ ಬಿಜೆಪಿ ಹಾಗೂ ಪಂಜಾಬ್‌ನ ಆಡಳಿತ ಪಕ್ಷ ಕಾಂಗ್ರೆಸ್ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ. ಭದ್ರತಾ ಲೋಪ ತನಿಖೆಗಾಗಿ ಮೂರು ಸದಸ್ಯರನ್ನೊಳಗೊಂಡ ತಂಡವನ್ನು ಕೇಂದ್ರ ಸರ್ಕಾರ ಹಾಗೂ ಇಬ್ಬರು ಸದಸ್ಯರನ್ನೊಳಗೊಂಡ ತಂಡವನ್ನು ಪಂಜಾಬ್ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ರಚಿಸಿವೆ. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ
ಭದ್ರತಾ ಲೋಪಕ್ಕೆ ಪಂಜಾಬ್ ಸರ್ಕಾರ ಹಾಗೂ ಪೊಲೀಸರೇ ಕಾರಣ ಎಂದು ಕೇಂದ್ರ ಸರ್ಕಾರ ಗಂಭೀರ ಆರೋಪ ಮಾಡಿದೆ. ಪ್ರಧಾನಿಗಳ ರಸ್ತೆ ಮಾರ್ಗ ಪ್ರಯಾಣವನ್ನು ಕೊನೆ ಕ್ಷಣದಲ್ಲಿ ನಿರ್ಧರಿಸಲಾಗಿದೆ ಎಂದು ಕೇಂದ್ರದ ಆರೋಪವನ್ನು ಪಂಜಾಬ್ ಸರ್ಕಾರ ತಳ್ಳಿಹಾಕಿದೆ.