Tag: Playground

  • ಬೆಂಗಳೂರಲ್ಲಿ ಮೈದಾನದ ಗೇಟ್ ಬಿದ್ದು ಬಾಲಕ ದುರ್ಮರಣ

    ಬೆಂಗಳೂರಲ್ಲಿ ಮೈದಾನದ ಗೇಟ್ ಬಿದ್ದು ಬಾಲಕ ದುರ್ಮರಣ

    ಬೆಂಗಳೂರು: ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾಗಿರುವ ಘಟನೆ ಮಲ್ಲೇಶ್ವರಂ (Malleshwaram) ಬಿಬಿಎಂಪಿ (BBMP) ಗ್ರೌಂಡ್‌ನಲ್ಲಿ ನಡೆದಿದೆ.

    ನಿರಂಜನ್ (10) ಮೃತ ಬಾಲಕ. ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆಟ ಆಡಲು ಬಾಲಕ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ ಬಳಿಯೇ ನಿಂತಿದ್ದು, ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿದೆ. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಣಕಾಸು ವಿಚಾರಕ್ಕೆ ವ್ಯಕ್ತಿಗೆ ಜೀವ ಬೆದರಿಕೆ – ಯುಪಿ ಸಂಸದನ ಪುತ್ರನ ವಿರುದ್ಧ ಎಫ್‍ಐಆರ್

    ಮಲ್ಲೇಶ್ವರಂ ಫೈಪ್‌ಲೈನ್‌ನಲ್ಲಿ ವಾಸವಾಗಿದ್ದ ಆಟೋ ಚಾಲಕ ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಮೊದಲನೇ ಪುತ್ರ ನಿರಂಜನ್. ಮಲ್ಲೇಶ್ವರಂನ ಬಿಬಿಎಂಪಿ ಶಾಲೆಯಲ್ಲಿ ಬಾಲಕ 5ನೇ ತರಗತಿಯಲ್ಲಿ ಓದುತ್ತಿದ್ದ. ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ

  • ಬದಲಾಗುತ್ತಾ ಈದ್ಗಾ ಮೈದಾನದ ಹೆಸರು?

    ಬದಲಾಗುತ್ತಾ ಈದ್ಗಾ ಮೈದಾನದ ಹೆಸರು?

    ಬೆಂಗಳೂರು: ದಿನದಿಂದ ದಿನಕ್ಕೆ ಈದ್ಗಾ ಮೈದಾನದ ವಿವಾದ ತಾರಕಕ್ಕೇರುತ್ತಿದೆ. ಇದೀಗ ಈದ್ಗಾ ಮೈದಾನದ ಹೆಸರು ಬದಲಾವಣೆ ಬಗ್ಗೆ ಚರ್ಚೆ ಎದ್ದಿದೆ.

    ಈದ್ಗಾ ಮೈದಾನದ ಹೆಸರನ್ನು ಜಯಚಾಮರಾಜೇಂದ್ರ ಒಡೆಯರ್ ಆಟದ ಮೈದಾನ ಎಂದು ಮರುನಾಮಕರಣ ಮಾಡಲು ನಾಗರಿಕರ ಒಕ್ಕೂಟ ನಿರ್ಧಾರ ಮಾಡಿದೆ. ಮೈಸೂರು ಸಂಸ್ಥಾನದ ನೆನಪಿಗೋಸ್ಕರ ಜಯಚಾಮರಾಜೇಂದ್ರ ಹೆಸರಿಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಜುಲೈ 12ಕ್ಕೆ ಚಾಮರಾಜಪೇಟೆ ಬಂದ್ – ಬೆಂಬಲ ನೀಡಲು ಮುಸ್ಲಿಂ ವ್ಯಾಪಾರಿಗಳು ನಿರಾಕರಣೆ

    ಈದ್ಗಾ ಮೈದಾನ ಬಿಬಿಎಂಪಿಗೆ ಸೇರಬೇಕೋ ಅಥವಾ ವಕ್ಫ್ ಬೋರ್ಡ್‌ಗೆ ಸೇರಬೇಕೋ ಎಂಬ ಗೊಂದಲ ಇನ್ನೂ ಬಗೆಹರಿಯದ ನಡುವೆಯೇ ಇದೀಗ ಸ್ಥಳೀಯರು ಮರು ನಾಮಕರಣಕ್ಕೆ ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಕಳಸ, ಹೊರನಾಡು ಸಂಪರ್ಕ ಕಡಿತ – ಬೆಳ್ತಂಗಡಿ ಶಾಲಾ, ಕಾಲೇಜುಗಳಿಗೆ ರಜೆ

    ಈದ್ಗಾ ಆಟದ ಮೈದಾನದ ಉಳಿವಿಗಾಗಿ ಚಾಮರಾಜಪೇಟೆಯ ಒಕ್ಕೂಟ ಹಾಗೂ 50ಕ್ಕೂ ಹೆಚ್ಚು ಸಂಘಟನೆಗಳು ಸೇರಿ ಜುಲೈ 12ರಂದು ಬಂದ್‌ಗೆ ಕರೆ ನೀಡಿದೆ. ಜುಲೈ 12ರಂದು ಚಾಮರಾಜಪೇಟೆಯನ್ನು ಸಂಪೂರ್ಣ ಬಂದ್ ಮಾಡಲು ಕ್ಷೇತ್ರದ ಜನ ನಿರ್ಧರಿಸಿದ್ದಾರೆ. ಮನೆ-ಮನೆಗೆ ಭಿತ್ತಿಪತ್ರಗಳನ್ನು ಹಂಚಲು ತೀರ್ಮಾನಿಸಿ ಈದ್ಗಾ ಆಟದ ಮೈದಾನವಾಗಿಯೇ ಉಳಿಯಬೇಕೆಂದು ಸ್ಥಳೀಯರು ನಿರ್ಧಾರಕ್ಕೆ ಬಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ ಕಳೆದುಕೊಂಡವರು ಕರೆ ಮಾಡಿ- ಆಟದ ಮೈದಾನದಲ್ಲಿ ವಿಭಿನ್ನ ಬೋರ್ಡ್

    ಸರ ಕಳೆದುಕೊಂಡವರು ಕರೆ ಮಾಡಿ- ಆಟದ ಮೈದಾನದಲ್ಲಿ ವಿಭಿನ್ನ ಬೋರ್ಡ್

    ಚಿಕ್ಕಮಗಳೂರು: ನಿಮ್ಮ ಸರ ನನ್ನ ಬಳಿ ಇದೆ. ಸರ ನಿಮ್ಮದೇ ಆಗಿದ್ದರೆ ಕಳೆದುಕೊಂಡವರು ನನಗೆ ಕರೆ ಮಾಡಿ ಎಂದು ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸರ ಸಿಕ್ಕವರು ಹಾಕಿರುವ ವಿಭಿನ್ನ ನಾಮಫಲಕ ಜನಮೆಚ್ಚುಗೆ ಪಾತ್ರವಾಗಿದೆ.

    ಚಿಕ್ಕಮಗಳೂರು ತಾಲೂಕಿನ ಬೊಗಸೆ ಗ್ರಾಮದ ವಿನೋದ್ ಎಂಬವರಿಗೆ ಇದೇ ಫೆಬ್ರವರಿ 6ರಂದು ನಗರದ ಆಟದ ಮೈದಾನದಲ್ಲಿ ಸುಮಾರು 11 ಗ್ರಾಂ ಚಿನ್ನದ ಸರ ಸಿಕ್ಕಿತ್ತು. ಸರ ಸಿಕ್ಕಿದ ದಿನವೇ ಆಟದ ಮೈದಾನದ ಸುತ್ತ ಹಾಗೂ ಬೋಳರಾಮೇಶ್ವರ ದೇವಾಲಯದ ಅಕ್ಕಪಕ್ಕ ಸೇರಿ ಸುಮಾರು 15 ಕಡೆ ಚಿನ್ನದ ಸರ ಸಿಕ್ಕಿದೆ. ಕಳೆದುಕೊಂಡವರು ಕರೆ ಮಾಡಿ ಎಂದು ಬೋರ್ಡ್ ಹಾಕಿದ್ದರು.

    ಏಳು ದಿನಗಳ ಬಳಿಕ ಬೋರ್ಡ್ ನೋಡಿ ಸರ ಕಳೆದುಕೊಂಡ ಪೊಲೀಸರ ಹೆಂಡತಿ ವಿನೋದ್ ಅವರಿಗೆ ಕರೆ ಮಾಡಿ ಅದು ನನ್ನ ಸರ ಎಂದು ಹೇಳಿದ್ದಾರೆ. ಅವರಿಂದ ಸ್ಪಷ್ಟನೆ ಪಡೆಯಲು ಹಲವು ರೀತಿಯ ಪ್ರಶ್ನೆಗಳನ್ನೂ ಕೇಳಿದ್ದಾರೆ. ಎಷ್ಟು ಗ್ರಾಂ ಇತ್ತು, ಮಾರ್ಕ್ ಎಲ್ಲಿತ್ತು ಎಂದು ಪ್ರಶ್ನೆ ಕೇಳಿದ್ದಾರೆ. ಸರ ಕಳೆದುಕೊಂಡ ಪೊಲೀಸರ ಹೆಂಡತಿ ಎಲ್ಲಾ ಮಾಹಿತಿ ನೀಡಿದ್ದಾರೆ. ಜೊತೆಗೆ ಸರ ಖರೀದಿ ಮಾಡಿದ ಬಗ್ಗೆ ಎಲ್ಲಾ ದಾಖಲೆಗಳನ್ನೂ ಕೊಡುವುದಾಗಿ ಹೇಳಿದ್ದಾರೆ. ಆಗ ಸರ ಅವರದ್ದೇ ಎಂದು ಕನ್ಫರ್ಮ್ ಆದ ಹಿನ್ನೆಲೆ ಅವರಿಗೆ ಸರವನ್ನ ಹಿಂದಿರುಗಿಸಲು ವಿನೋದ್ ಮುಂದಾಗಿದ್ದಾರೆ.

    ಸಿಕ್ಕ ಚಿನ್ನದ ಸರವನ್ನ ಅವರಿಗೆ ಹಿಂದಿರುಗಿಸಲು ವಿನೋದ್ ಮಾಡಿದ ರೀತಿಯ ಜನ ಕೂಡ ಶ್ಲಾಘನೆ ವ್ಯಕ್ತಪಡಿಸಿ, ಯುವಕ ವಿನೋದ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸರ ಕಳೆದುಕೊಂಡವರು ಕೂಡ ವಿನೋದ್‍ಗೆ ಅಭಿನಂದನೆ ಸಲ್ಲಿಸಿದ್ದಾರೆ.