Tag: player

  • ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ

    ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ

    ಕಾಬೂಲ್: ಅಘ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಜನ ಭಯಗೊಂಡು ದೇಶ ತೊರೆಯಲು ಸಿಕ್ಕ ಸಿಕ್ಕ ವಿಮಾನ ಹತ್ತಲು ಪ್ರಾರಂಭಿಸಿದ್ದರು. ಈ ವೇಳೆ ಅಮೆರಿಕಾಗೆ ತೆರಳಲುತ್ತಿದ್ದ ವಿಮಾನ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ವಿಮಾನದ ಮೇಲಿಂದ ಮೂವರು ಬಿದ್ದಿದ್ದರು. ಇದೀಗ ಅವರ ಗುರುತು ಪತ್ತೆಯಾಗಿದ್ದು, ಮೂವರಲ್ಲಿ ಓರ್ವ ಅಘ್ಘಾನ್‍ನ ಯುವ ಫುಟ್‍ಬಾಲ್ ಆಟಗಾರ ಎಂದು ವರದಿಯಾಗಿದೆ.

    ಆಗಸ್ಟ್ 16ರಂದು ಅಘ್ಘಾನಿಸ್ತಾನದ ಜನರು ವಿಮಾನ ನಿಲ್ದಾಣಗಳತ್ತ ಆಗಮಿಸಿ ವಿಮಾನಗಳನ್ನೇರಿ ದೇಶ ತೊರೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವಿಮಾನದಿಂದ ಮೂವರು ಕೆಳಗೆ ಬಿದ್ದಿರುವ ಬಗ್ಗೆ ವರದಿಯಾಗಿತ್ತು. ಆ ಮೂವರಲ್ಲಿ ಒಬ್ಬರು ಶಫೀವುಲ್ಲಾ ಮತ್ತೊಬ್ಬರು ಫಿದಾ ಮೊಹಮ್ಮದ್ ಎಂದು ಗುರುತು ಪತ್ತೆಯಾಗಿತ್ತು. ಬಳಿಕ ಇದೀಗ ಇನ್ನೊಬ್ಬರ ಗುರುತು ಕೂಡ ಪತ್ತೆಯಾಗಿದ್ದು ಅವರನ್ನು ಅಘ್ಘಾನಿಸ್ತಾನದ ಯುವ ಫುಟ್‍ಬಾಲ್ ಆಟಗಾರ ಝಾಕಿ ಅನ್ವಾರಿ ಎಂದು ಗುರುತಿಸಲಾಗಿದೆ.

    ಈ ಬಗ್ಗೆ ಅಘ್ಘಾನಿಸ್ತಾನದ ರಾಷ್ಟ್ರೀಯ ಫುಟ್‍ಬಾಲ್ ತಂಡ ಯುವ ಆಟಗಾರರಾದ ಝಾಕಿ ಅನ್ವಾರಿ ಅವರ ಸಾವಿನ ಬಗ್ಗೆ ದೃಢಪಡಿಸಿ ಸಂತಾಪ ಸೂಚಿಸಿದೆ. ಇದನ್ನೂ ಓದಿ: “ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”

    ಅಮೆರಿಕಾದ ಪ್ಲೇನ್ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ಮೇಲಿಂದ ಇಬ್ಬರು ಬೀಳುವ ಭಯಾನಕ ದೃಶ್ಯ ಮೊಬೈಲ್ ಗಳಲ್ಲಿ ಸೆರೆಯಾಗಿತ್ತು. ಅಂದು ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆಯಾಗಿದೆ.

    ವಲಿ ಸಾಲೆಕ್ ಎಂಬವರ ಮನೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಎರಡು ಗಂಟೆ ನಂತ್ರ ವಿಶ್ರಾಂತಿ ಪಡೆಯುತ್ತಿದ್ದೆ. ಆಗ ಮೇಲಿನಿಂದ ಏನೋ ಬಿದ್ದಂತೆ ಆಯ್ತು. ನಾವು ಟೈರ್ ಸ್ಫೋಟಗೊಂಡು ಮನೆಯ ಮೇಲೆ ಬಂದಿದೆಯಾ ಅಂತ ನೋಡಲು ಹೋದೆ. ನನ್ನೊಂದಿಗೆ ಮಗಳು ಮತ್ತು ಪತ್ನಿ ಸಹ ಬಂದರು. ಮೇಲೆ ನೋಡಿದ್ರೆ ಇಬ್ಬರ ಶವಗಳು ಎರಡು ತುಂಡಾಗಿದ್ದವು. ಈ ಭೀಕರ ದೃಶ್ಯ ಕಂಡ ಪತ್ನಿ ಮತ್ತು ಮಗಳು ಮೂರ್ಛೆ ಹೋದರು ಎಂದು ವಲಿ ಹೇಳ್ತಾರೆ.  ಇದನ್ನೂ ಓದಿ: ಅಘ್ಘಾನ್ ಕ್ರಿಕೆಟ್ ಮಂಡಳಿ ವಶಕ್ಕೆ ತಾಲಿಬಾನ್ ಕಸರತ್ತು

    ಸ್ಥಳೀಯರ ಸಹಾಯದಿಂದ ಎರಡೂ ಶವಗಳನ್ನು ಸಮೀಪದ ಮಸೀದಿ ಬಳಿ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ಇಬ್ಬರ ಜೇಬುಗಳನ್ನ ಪರಿಶೀಲಿಸಿದಾಗ ಅವರ ಗುರುತು ಪತ್ತೆಯಾಯ್ತು. ಒಬ್ಬರು ಶಫೀವುಲ್ಲಾ, ಮತ್ತೊಬ್ಬರು ಫಿದಾ ಮೊಹಮ್ಮದ್. ಶಫೀವುಲ್ಲಾ ದಾಖಲೆ ಆತ ವೈದ್ಯ ಅಂತ ಗೊತ್ತಾಯ್ತು. ಇಬ್ಬರ 30 ವರ್ಷದೊಳಗಿನ ಯುವಕರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

  • ಬಿಸಿಸಿಐ ಆಟಗಾರರ ಒಪ್ಪಂದದ ಪಟ್ಟಿಯಿಂದ ಧೋನಿ ಔಟ್

    ಬಿಸಿಸಿಐ ಆಟಗಾರರ ಒಪ್ಪಂದದ ಪಟ್ಟಿಯಿಂದ ಧೋನಿ ಔಟ್

    – ಈ ವರ್ಷ ಕೇವಲ 27 ಆಟಗಾರರಿಗೆ ಅವಕಾಶ
    – ವೃದ್ಧಿಮಾನ್ ಸಹಾ, ಕೆ.ಎಲ್.ರಾಹುಲ್‍ಗೆ ಬಡ್ತಿ
    – 6 ಜನ ಹೊಸಬರು, ಎ+ ನಲ್ಲಿ ಮೂವರು ಮಾತ್ರ

    ಮುಂಬೈ: ಬಿಸಿಸಿಐ ತನ್ನ ಒಪ್ಪಂದದ ಆಟಗಾರರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಪಟ್ಟಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈ ಬಿಡಲಾಗಿದೆ.

    ಕಳೆದ ವರ್ಷ ಎ ಗ್ರೇಡ್‍ನಲ್ಲಿದ್ದ ಧೋನಿ ಅವರು ಯಾವುದೇ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬಿಸಿಸಿಐ ಪ್ರಸ್ತುತ 27 ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಉನ್ನತ ದರ್ಜೆಯ ‘ಎ ಪ್ಲಸ್’ ನೀಡಲಾಗಿದೆ. ಈ ಮೂವರೂ ಆಟಗಾರರು ಕಳೆದ ವರ್ಷವೂ ಇದೇ ದರ್ಜೆಯಲ್ಲಿದ್ದರು. ಧೋನಿ ಅಷ್ಟೇ ಅಲ್ಲದೆ ದಿನೇಶ್ ಕಾರ್ತಿಕ್, ಅಂಬಟಿ ರಾಯುಡು ಮತ್ತು ಖಲೀಲ್ ಅಹ್ಮದ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.

    ಬಿಸಿಸಿಐ ಮೂಲಗಳ ಪ್ರಕಾರ, ಎಂ.ಎಸ್.ಧೋನಿ 2019ರ ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿ ಬಳಿಕ ಯಾವುದೇ ಟಿ20, ಏಕದಿನ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಅವರನ್ನು ಒಪ್ಪಂದದ ಪಟ್ಟಿಯಿಂದ ಹೊರಗಿಡುವ ಬಗ್ಗೆ ಮಂಡಳಿಯು ಈಗಾಗಲೇ ಮಾಹಿತಿ ನೀಡಿತ್ತು ಎಂದು ವರದಿಯಾಗಿದೆ.

    ಧೋನಿಯನ್ನು ಕೈಬಿಟ್ಟಿದ್ಯಾಕೆ?
    ಮಂಡಳಿಯ ಒಪ್ಪಂದಕ್ಕೆ ಸೇರಲು ಒಬ್ಬ ಆಟಗಾರ ನಿಗದಿತ ಋತುವಿನಲ್ಲಿ ಕನಿಷ್ಠ 3 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗುತ್ತದೆ. ಆದರೆ ಧೋನಿ 9 ಜುಲೈ 2019ರಂದು ಏಕದಿನ ವಿಶ್ವಕಪ್‍ನಲ್ಲಿ ಆಡಿದ ಸೆಮಿಫೈನಲ್ ಪಂದ್ಯದ ನಂತರ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಲಿಲ್ಲ.

    ಧೋನಿ ಇದೇ ವರ್ಷ ಒಪ್ಪಂದಕ್ಕೆ ಮರಳಬಹುದೇ?
    ಬಿಸಿಸಿಐ ಅಧಿಕಾರಿಯ ಪ್ರಕಾರ, ಎಂ.ಎಸ್.ಧೋನಿ ಅವರನ್ನು ಈ ವರ್ಷ ಯಾವುದೇ ಸಮಯದಲ್ಲಿ ಟಿ20 ತಂಡದಲ್ಲಿ ಸೇರಿಸಿಕೊಂಡರೆ ಅವರನ್ನು ಮತ್ತೆ ಒಪ್ಪಂದಕ್ಕೆ ಸೇರಿಸಿಕೊಳ್ಳಬಹುದು. ಅವರು ಪ್ರಸ್ತುತ ಗುತ್ತಿಗೆ ಪಟ್ಟಿಯಲ್ಲಿಲ್ಲ. ಆದರೆ ಇನ್ನೂ ಏಷ್ಯಾ ಕಪ್ ಟಿ20 ಆಗಿಲ್ಲ. ಎಂ.ಎಸ್.ಧೋನಿ ಅಗತ್ಯ ಸಂಖ್ಯೆಯ ಪಂದ್ಯಗಳನ್ನು ಆಡಿದರೆ ನೇರವಾಗಿ ಒಪ್ಪಂದಕ್ಕೆ ಸೇರುತ್ತಾರೆ.

    ಹೊಸ ಮುಖಗಳು?:
    ಮಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್, ನವದೀಪ್ ಸೈನಿ, ದೀಪಕ್ ಚಹರ್, ಶಾರ್ದುಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಮೊದಲ ಬಾರಿಗೆ ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಮಾಯಾಂಕ್‍ಗೆ ಗ್ರೇಡ್ ಬಿ ಸ್ಥಾನ ಸಿಕ್ಕಿದೆ. ಉಳಿದ ಆಟಗಾರರು ಗ್ರೇಡ್ ಸಿ ಪಡೆದುಕೊಂಡಿದ್ದಾರೆ.

    ಎಷ್ಟು ಆಟಗಾರರಿಗೆ ಬಡ್ತಿ?
    ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ವೃದ್ಧಿಮಾನ್ ಸಹಾ ಅವರಿಗೆ ಬಿಸಿಸಿಐ ಬಡ್ತಿ ನೀಡಿದೆ. ರಾಹುಲ್ ಕಳೆದ ವರ್ಷ ಬಿ ಗ್ರೇಡ್‍ನಲ್ಲಿದ್ದರು. ಈ ಬಾರಿ ಅವರನ್ನು ಎ ಗ್ರೇಡ್‍ಗೆ ಸೇರಿಸಲಾಗಿದೆ. ಸಿ ಗ್ರೇಡ್‍ನಲ್ಲಿದ್ದ ಸಹಾ ಈ ಬಾರಿ ಬಿ ಗ್ರೇಡ್ ಪಡೆದುಕೊಂಡಿದ್ದಾರೆ.

    ಎ+ ಗ್ರೇಡ್: 7 ಕೋಟಿ ರೂ. ಒಪ್ಪಂದದ ಎ+ ಗ್ರೇಡ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ.

    ಎ ಗ್ರೇಡ್, 5 ಕೋಟಿ ರೂ,:
    ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಚತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ರಿಷಭ್ ಪಂತ್ ಹಾಗೂ ಮಾಯಾಂಕ್ ಅಗರ್ವಾಲ್.

    ಬಿ ಗ್ರೇಡ್ 3 ಕೋಟಿ ರೂ,:
    ರಿದ್ಧಿಮಾನ್ ಸಹಾ, ಉಮೇಶ್ ಯಾದವ್, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ ಹಾಗೂ ಮಾಯಾಂಕ್ ಅಗರ್ವಾಲ್.

    ಸಿ ಗ್ರೇಡ್ 1 ಕೋಟಿ ರೂ:
    ಒಟ್ಟು 8 ಆಟಗಾರರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಈ ಪೈಕಿ 5 ಆಟಗಾರರು ಹೊಸಬರಾಗಿದ್ದಾರೆ. ಕೇದಾರ ಜಾಧವ್, ನವದೀಪ್ ಸೈನಿ, ದೀಪರ್ ಚಹರ್, ಮನೀಶ್ ಪಾಂಡೆ, ಹನುಮ ವಿಹಾರಿ, ಶಾರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್ ಹಾಗೂ ವಾಷಿಂಗ್ಟನ್ ಸುಂದರ್.

  • ಆಟದ ಮಧ್ಯೆಯೇ ಹಾಲುಣಿಸಿ ತಾಯಿ ಪ್ರೇಮ ಮೆರೆದ ಆಟಗಾರ್ತಿ- ನೆಟ್ಟಿಗರಿಂದ ಮೆಚ್ಚುಗೆ

    ಆಟದ ಮಧ್ಯೆಯೇ ಹಾಲುಣಿಸಿ ತಾಯಿ ಪ್ರೇಮ ಮೆರೆದ ಆಟಗಾರ್ತಿ- ನೆಟ್ಟಿಗರಿಂದ ಮೆಚ್ಚುಗೆ

    ಐಜಾಲ್: ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುತ್ತಿದ್ದರೂ, ಇದರ ಮಧ್ಯೆಯೇ ಬ್ರೇಕ್ ತೆಗೆದುಕೊಂಡು ವಾಲಿಬಾಲ್ ಆಟಗಾರ್ತಿಯೊಬ್ಬರು ತನ್ನ ಮಗುವಿಗೆ ಹಾಲು ಕುಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಿಜೋರಾಂನ ಮ್ಯಾಸ್ಕಾಟ್‍ನಲ್ಲಿ ಈ ಘಟನೆ ನಡೆದಿದ್ದು, ನಿಂಗ್ಲುನ್ ಹಂಘಲ್ ಎಂಬ ಫೇಸ್ಬುಕ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೂಲವಾಗಿ ಇದನ್ನು ಲಿಂಡಾ ಚಕ್ಚುವಾಕ್ ಎಂಬವರು ಪೋಸ್ಟ್ ಮಾಡಿದ್ದಾರೆ. ಟುಕುಮ್ ಮಾವಿಲಿಬಾಲ್ ತಂಡದ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಅವರು ಈ ವಿಡಿಯೋದಲ್ಲಿ ತನ್ನ ಮಗುವಿಗೆ ಎದೆಹಾಲು ಕುಡಿಸುತ್ತಿದ್ದಾರೆ. ಹಂಘಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ಲಾಲ್ವೆಂಟ್ಲುವಾಂಗಿ ಅವರು ವಾಲಿಬಾಲ್ ಆಟವಾಡುತ್ತಿದ್ದರು. ಆಗ ಚಿಕ್ಕ ವಿರಾಮ ತೆಗೆದುಕೊಂಡು ಪ್ಲೇಯರ್ಸ್ ಕ್ಯಾಂಪ್ ಬಳಿ 7 ತಿಂಗಳ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದರು ಎಂದು ಹೊಗಳಿದ್ದಾರೆ.

    ಪೋಸ್ಟ್ ನ ಮಾಹಿತಿ ಪ್ರಕಾರ 2019ರ ಮಿಜೋರಾಂ ರಾಜ್ಯ ಮಟ್ಟದ ಆಟಗಳು ಮ್ಯಾಸ್ಕಾಟ್‍ನಲ್ಲಿ ನಡೆಯುತ್ತಿದ್ದವು. ಈ ವೇಳೆ ಲಾಲ್ವೆಂಟ್ಲುವಾಂಗಿ ಅವರು ತಮ್ಮ ಮಗುವಿಗೆ ಹಾಲು ಕುಡಿಸಿದ್ದಾರೆ. ಅಲ್ಲದೆ ಇದಕ್ಕೆ ಪ್ರೋತ್ಸಾಹ ನೀಡಲು ಮೀಜೊರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಅವರು ಲಾಲ್ವೆಂಟ್ಲುವಾಂಗಿ ಅವರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಿದರು ಎಂದು ಫೇಸ್ಬುಕ್ ಪೋಸ್ಟಿನಲ್ಲಿ ಬರೆಯಲಾಗಿದೆ.

    ಈ ಪೋಸ್ಟಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಾಲ್ವೆಂಟ್ಲುವಾಂಗಿ ಅವರು ಕ್ರೀಡಾಪಟುವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ತಾಯಿಯಾಗಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದರೆ. ಇನ್ನೊಬ್ಬ ಬಳಕೆದಾರರು ತಾಯಿ ಎಂದರೆ ತಾಯಿ, ಸದಾ ಮಕ್ಕಳ ಸೇವೆಯಲ್ಲಿಯೇ ತೊಡಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಅಂತಾರಾಷ್ಟ್ರೀಯ ಚೆಸ್ ಪ್ರತಿಭೆಗೆ ಬೇಕಿದೆ ನೆರವು

    ಅಂತಾರಾಷ್ಟ್ರೀಯ ಚೆಸ್ ಪ್ರತಿಭೆಗೆ ಬೇಕಿದೆ ನೆರವು

    ಶಿವಮೊಗ್ಗ: ಚೆಸ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ 9 ವರ್ಷದಿಂದ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ ಅಂಧ ಚೆಸ್ ಆಟಗಾರನಿಗೆ ಸರಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಕೀರ್ತಿ ಬೆಳಗಿಸಿದ ಈ ಆಟಗಾರನ ಗುರುತಿಸುವ ಪ್ರಯತ್ನ ಸಹ ನಡೆದಿಲ್ಲ.

    ರಾಜ್ಯದ ಕ್ರೀಡಾ ಸಚಿವರ ತವರು ಶಿವಮೊಗ್ಗ ಜಿಲ್ಲೆಯ ಪ್ರತಿಭೆ, ಅಂತರರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ ಕಿಶನ್ ಗಂಗೊಳ್ಳಿ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಕೀಡಾಪಟು. ಶಿವಮೊಗ್ಗದ ವಿನೋಬ ನಗರ ನಿವಾಸಿಯಾಗಿರುವ ಕಿಶನ್, ಹುಟ್ಟಿನಿಂದಲೇ ಶೇ.75% ಭಾಗ ದೃಷ್ಟಿ ಸಮಸ್ಯೆ ಹೊಂದಿದ್ದಾರೆ. ಆದರೂ ಛಲ ಬಿಡದೆ ಜೀವನದಲ್ಲಿ ಏನಾದರೂ ಸಾಧಿಸಬೇಕು, ತಾಯ್ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂಬ ಕಾರಣದಿಂದ ಕಿಶನ್ ಚೆಸ್ ಕಲಿತಿದ್ದಾರೆ.

    ಚೆಸ್ ಕಲಿತು ಕೇವಲ ಜಿಲ್ಲೆ ಹಾಗೂ ರಾಜ್ಯಕ್ಕಷ್ಟೇ ಸೀಮಿತವಾಗದೇ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಹತ್ತು ಹಲವು ಪ್ರಶಸ್ತಿ, ಚಿನ್ನದ ಪದಕ ಗಳಿಸಿದ್ದಾರೆ. ಇಷ್ಟೆಲ್ಲಾ ಪ್ರತಿಭೆ ಇದ್ದರೂ ರಾಜ್ಯ ಸರಕಾರದಿಂದ ಸಿಗಬೇಕಾದ ಮನ್ನಣೆ, ಅವಕಾಶ, ಸಹಾಯ ಮಾತ್ರ ಇದುವರೆಗೂ ಕಿಶನ್ ಅವರಿಗೆ ಲಭಿಸಿಲ್ಲ.

    2018 ರಲ್ಲಿ ಜಕಾರ್ತಾದಲ್ಲಿ ನಡೆದ ಮೂರನೇ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿರುವ ಕಿಶನ್ ಅವರಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಸನ್ಮಾನ ಮಾಡಿದ್ದರು. ಆದರೆ ರಾಜ್ಯ ಸರಕಾರ ಮಾತ್ರ ಈ ಪ್ರತಿಭೆಯನ್ನು ಗುರುತಿಸಿಲ್ಲ. ಭವಿಷ್ಯದಲ್ಲಿ ವಿಶ್ವ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಬೇಕು ಎಂಬ ಕನಸು ಹೊತ್ತಿರುವ ಕಿಶನ್ ಕುಟುಂಬ ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

    ಈ ಕುರಿತು ಮಾತನಾಡಿರುವ ಕಿಶನ್ ಅವರ ತಾಯಿ ತನ್ನ ಮಗನಿಗೆ ಚೆಸ್ ತರಬೇತಿ ಕೊಡಿಸಲು ಬಡ್ಡಿ ಸಾಲ ಮಾಡಿ, ಮನೆಯಲ್ಲಿದ್ದ ಅಲ್ಪ ಸ್ವಲ್ಪ ಚಿನ್ನವನ್ನು ಗಿರವಿಯಿಟ್ಟು ತರಬೇತಿ ಕೊಡಿಸುತ್ತಿದ್ದೇವೆ. ಮುಂದೆ ಉನ್ನತ ತರಬೇತಿ ಪಡೆಯಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಸಂಘ ಸಂಸ್ಥೆಗಳು, ಸರಕಾರ ಪ್ರತಿಭೆಯನ್ನು ಗುರುತಿಸಿ ಸಹಾಯ ಮಾಡಬೇಕಿದೆ ಎಂದು ಮನವಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಪತಾಕೆ ಹಾರಿಸಿಸಲು ಸಿದ್ಧವಾಗುತ್ತಿರುವ ಕಿಶನ್ ಅವರನ್ನು ಗುರುತಿಸಿ ಕ್ರೀಡಾ ಸಚಿವ ಈಶ್ವರಪ್ಪ ನೆರವಿಗೆ ಧವಿಸಬೇಕು ಎಂಬುವುದು ನಮ್ಮ ಆಶಯವಾಗಿದೆ.

  • ಡ್ರೆಸ್ಸಿಂಗ್ ರೂಮ್ ಗ್ಲಾಸ್ ಒಡೆದ ಪಾಕಿಸ್ತಾನ ಆಟಗಾರ!

    ಡ್ರೆಸ್ಸಿಂಗ್ ರೂಮ್ ಗ್ಲಾಸ್ ಒಡೆದ ಪಾಕಿಸ್ತಾನ ಆಟಗಾರ!

    ಕರಾಚಿ: ಪಾಕಿಸ್ತಾನ ಬ್ಯಾಟ್ಸ್ ಮನ್ ಫವಾದ್ ಆಲಂ ವಿರುದ್ಧ ಡ್ರೆಸ್ಸಿಂಗ್ ರೂಮ್ ಗಾಜು ಒಡೆದ ಆರೋಪ ಕೇಳಿ ಬಂದಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.

    ಪಾಕ್ ಕೋಲ್ನೆ ಕ್ರಿಕೆಟ್ ಕ್ಲಬ್ ವಿರುದ್ಧ ನಡೆದ ಪಂದ್ಯದ ವೇಳೆ 32 ವರ್ಷದ ಆಲಂ ಸೂಕ್ತ ಸಮಯದಲ್ಲಿ ಮೈದಾನಕ್ಕೆ ಬಾರದೆ ತಡಮಾಡಿದ್ದರು. ಈ ವೇಳೆ ಫೀಲ್ಡ್ ಅಂಪೈರ್ ಟೈಮ್ ಔಟ್ ಎಂದು ತೀರ್ಮಾನ ನೀಡಿದ್ದರು. ಈ ವೇಳೆ ಡ್ರೆಸ್ಸಿಂಗ್ ರೂಮ್ ನಲ್ಲಿದ್ದ ಆಲಂ ಕಿಟಕಿ ಗಾಜು ಒಡೆದು ತಮ್ಮ ಕೋಪ ಪ್ರದರ್ಶನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಡ್ರೆಸಿಂಗ್ ರೂಮ್ ಗ್ಲಾಸ್ ಒಡೆದ ಕುರಿತು ಮೈದಾನದಲ್ಲಿದ್ದ ಕೆಲ ವಿಕ್ಷಕರು ಫೋಟೋ ಸಮೇತ ಟ್ವೀಟ್ ಮಾಡಿ ಆರೋಪ ಮಾಡಿದ್ದರು. ಇದಾದ ಬಳಿಕ ಘಟನೆಯ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಲಂ ಡ್ರೆಸ್ಸಿಂಗ್ ರೂಮ್ ಗಾಜು ಒಡೆಯಲು ತಾನು ಕಾರಣನಲ್ಲ. ಇದನ್ನು ಅಂಪೈರ್ ಕೂಡ ಸ್ಪಷ್ಟಪಡಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

    ಕ್ರಿಕೆಟಿಗ ಆಲಂ ಪಾಕ್ ನ ಕ್ಲಿಥೆರೊಗ್ ಕ್ರಿಕೆಟ್ ಕ್ಲಬ್ ಭಾಗವಹಿಸುತ್ತಿದ್ದು, ತಂಡದ ವೃತ್ತಿಪರ ಕ್ರಿಕೆಟ್ ಆಗಿ ಗುರುತಿಸಿ ಕೊಂಡಿದ್ದರು. 2017 ರಲ್ಲಿ ನಡೆದ ಟೂರ್ನಿಯ ವೇಳೆಯೂ ಉತ್ತಮ ಪ್ರದರ್ಶನ ನೀಡಿದ್ದರು.

    ಘಟನೆಯ ಬಳಿಕ ಪ್ರತಿಕ್ರಿಯೆ ನೀಡಿರುವ ಪಾಕ್ ಆಯ್ಕೆ ಸಮಿತಿ ಮುಖ್ಯಸ್ಥರು, ರಾಷ್ಟ್ರೀಯ ತಂಡಕ್ಕೆ ಆಲಂ ಗಿಂತಲೂ 25 ವರ್ಷದ ಯುವ ಆಟಗಾರ ಉಸ್ಮಾನ್ ಸಲಾಹದ್ದೀನ್ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಪಂದ್ಯಗಳಿಗೆ ಉತ್ತಮ ಆಯ್ಕೆ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಉಸ್ಮಾನ್ ಟೆಸ್ಟ್ ಕ್ಯಾಪ್ ಧರಿಸಿದ್ದರು. ಆದರೆ ಈ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು.

  • ಕಾಮನ್‍ವೆಲ್ತ್ ಗೇಮ್ಸ್ : ಜನರ ಮುಂದೆ ಬಾಸ್ಕೆಟ್ ಬಾಲ್ ಆಟಗಾರನಿಂದ ಗೆಳತಿಗೆ ಪ್ರಪೋಸ್- ವಿಡಿಯೋ

    ಕಾಮನ್‍ವೆಲ್ತ್ ಗೇಮ್ಸ್ : ಜನರ ಮುಂದೆ ಬಾಸ್ಕೆಟ್ ಬಾಲ್ ಆಟಗಾರನಿಂದ ಗೆಳತಿಗೆ ಪ್ರಪೋಸ್- ವಿಡಿಯೋ

    ಗೋಲ್ಡ್ ಕೋಸ್ಟ್: ಇಂಗ್ಲೆಂಡ್ ಬಾಸ್ಕೆಟ್ ಬಾಲ್ ಆಟಗಾರ ಜಾಮೆಲ್ ಆಂಡರ್ಸನ್ ಭಾನುವಾರ ನಡೆದ ಕಾಮನ್‍ವೆಲ್ತ್ ಗೇಮ್ಸ್ ವೇಳೆ ಬಾಸ್ಕೆಟ್ ಬಾಲ್ ಕೋರ್ಟ್‍ನಲ್ಲೇ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾರೆ.

    ಭಾನುವಾರ ನಡೆದ ಪಂದ್ಯದಲ್ಲಿ ಕ್ಯಾಮೇರೋನ್ ವಿರುದ್ಧ ಇಂಗ್ಲೇಡ್ 81-54 ಅಂತರದಲ್ಲಿ ಜಯಗಳಿಸಿತ್ತು. ತಮ್ಮ ಜಯವನ್ನು ಸಂಭ್ರಮಿಸುತ್ತಿರುವಾಗಲೇ ಆಂಡರ್ಸನ್ ತನ್ನ ಟೀಂ ಜೊತೆ ಸೇರಿಕೊಂಡು ತನ್ನ ಪ್ರೇಯಸಿ ಜಾರ್ಜಿಯಾ ಜೋನ್ಸ್ ಗೆ ಸರ್ಪ್ರೈಸ್ ನೀಡಿ ಪ್ರಪೋಸ್ ಮಾಡಿದ್ದಾರೆ.

    ಆಂಡರ್ಸನ್ ಸ್ಪೇನ್‍ನ ಪಾಲಿಡೆಪೋರ್ಟಿವೊ ಲಾ ರೊಡಾಗಾಗಿ ಬಾಸ್ಕೆಟ್ ಬಾಲ್ ಆಡುತ್ತಿದ್ದು, ಜೋನ್ಸ್ ಬ್ರಿಟಿಷ್‍ನ ಮ್ಯಾಂಚೆಸ್ಟರ್ ಮಿಸ್ಟಿಕ್ಸ್ ಮಹಿಳಾ ಬಾಸ್ಕೆಟ್ ಬಾಲ್ ಲೀಗ್ ಗಾಗಿ ಆಟವಾಡುತ್ತಾರೆ.

    ಆಂಡರ್ಸನ್ ಜಾರ್ಜಿಯಾ ಅವರನ್ನು ಪ್ರಪೋಸ್ ಮಾಡುವ ವಿಡಿಯೋವನ್ನು ಇಂಗ್ಲೆಂಡ್ ತಂಡ ಬಿಡುಗಡೆ ಮಾಡಿದೆ. ಆ ವಿಡಿಯೋದಲ್ಲಿ ಇಂಗ್ಲೆಂಡ್ ತಂಡ ವೃತ್ತಾಕಾರದಲ್ಲಿ ನಿಂತುಕೊಂಡು ತಮ್ಮ ಜಯವನ್ನು ಸಂಭ್ರಮಿಸುತ್ತಿದ್ದರು. ತಕ್ಷಣ ಅವರೆಲ್ಲ ಹಿಂದೆ ಬಂದು ನಿಂತುಕೊಂಡಾಗ ಆಂಡರ್ಸನ್ ಮೊಣಕಾಲೂರಿ ಜಾರ್ಜಿಯಾರಿಗೆ ಪ್ರಮೋಸ್ ಮಾಡಿದ್ದಾರೆ.

    ನನ್ನ ತಂಡದ ಸದಸ್ಯರು ಇದರಲ್ಲಿ ಭಾಗಿಯಾಗಿ ಇಷ್ಟು ಅದ್ಭುತ ರೀತಿಯಲ್ಲಿ ಪ್ಲಾನ್ ಮಾಡಿದ್ದರು. ಹಾಗಾಗಿ ಎಲ್ಲವೂ ಸರಿಯಾಗಿ ನೆರವೇರಿತ್ತು. ಈ ವಿಚಾರ ನನ್ನ ಮನಸ್ಸಿನಲ್ಲಿತ್ತು ಹಾಗಾಗಿ ನನಗೆ ಬಾಸ್ಕೆಟ್ ಬಾಲ್ ಆಡಲು ಸುಲಭವಾಯಿತು ಎಂದು ಆಂಡರ್ಸನ್ ತಿಳಿಸಿದ್ದಾರೆ.

    ನನಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನನ್ನ ಫೋಟೋ ತೆಗೆದುಕೊಳ್ಳುವುದಾಗಿ ಹೇಳಿ ನನ್ನನ್ನು ಅಲ್ಲಿ ನಿಲ್ಲಿಸಿದ್ದರು. ನಂತರ ಅಲ್ಲಿ ನಡೆದಿದ್ದನು ನೋಡಿ ನನಗೇ ಶಾಕ್ ಆಗಿದೆ ಎಂದು ಜಾರ್ಜಿಯಾ ಹೇಳಿದ್ದಾರೆ. ಈ ಒಂದು ಅವಕಾಶಕ್ಕಾಗಿ ನಾವು ತುಂಬ ಪರಿಶ್ರಮಪಟ್ಟಿದ್ದೇವೆ. ಬಾಸ್ಕೆಟ್ ಬಾಲ್ ನಮ್ಮ ಸಂಬಂಧದ ಒಂದು ಭಾಗವಾಗಿದೆ. ಹಾಗಾಗಿ ನಾನು ಈ ರೀತಿ ಮಾಡಿದೆ ಎಂದು ಆಂಡರ್ಸನ್ ತಿಳಿಸಿದ್ದಾರೆ.

    ಕೋರ್ಟ್ ನಲ್ಲಿ ಜಾರ್ಜಿಯಾರನ್ನು ಪ್ರಪೋಸ್ ಮಾಡುವ ಮೊದಲು ಆಂಡರ್ಸನ್, ಜಾರ್ಜಿಯಾ ಅವರ ತಂದೆ ಜೇಫ್ ಹತ್ತಿರ ಆರ್ಶೀವಾದ ಪಡೆದಿದ್ದಾರೆ. ಜೇಫ್ ಇಂಗ್ಲೆಂಡ್ ಅಂತರಾಷ್ಟ್ರೀಯಾ ಹಾಗೂ ಮ್ಯಾಂಚೆಸ್ಟರ್ ಮಿಸ್ಟಿಕ್ಸ್ ನ ಮಾಜಿ ಕೋಚ್ ಆಗಿದ್ದಾರೆ.

    https://www.youtube.com/watch?v=odhDkFN-hZg

  • ನವಜೀವನಕ್ಕೆ ಕಾಲಿಟ್ಟ ಭಾರತ ಹಾಕಿ ತಂಡದ ಉಪನಾಯಕ ಎಸ್.ವಿ ಸುನೀಲ್

    ನವಜೀವನಕ್ಕೆ ಕಾಲಿಟ್ಟ ಭಾರತ ಹಾಕಿ ತಂಡದ ಉಪನಾಯಕ ಎಸ್.ವಿ ಸುನೀಲ್

    ಮಂಗಳೂರು: ಭಾರತ ಹಾಕಿ ತಂಡದ ಫಾರ್ವರ್ಡ್ ಪ್ಲೇಯರ್ ಆಟಗಾರ, ಒಲಿಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ಕೊಡಗಿನ ಎಸ್.ವಿ. ಸುನೀಲ್ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

    ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಸುನೀಲ್, ಮಂಗಳೂರು ಮೂಲದ ನಿಶಾರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಿಶಾ ಕೊಂಚಾಡಿ ಗ್ರಾಮದ ತಾರನಾಥ-ಸುನಿತಾ ದಂಪತಿಯ ಪುತ್ರಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

    ವಿಶ್ವಕರ್ಮ ಸಮುದಾಯದ ಪದ್ಧತಿಯಂತೆ ಮದುವೆ ಕಾರ್ಯಕ್ರಮ ನಡೆದಿದ್ದು, ಸೀಮಿತ ಸಂಖ್ಯೆಯಲ್ಲಿ ಬಂಧು-ಮಿತ್ರರು, ಸ್ನೇಹಿತರು ಹಾಗೂ ಹಾಕಿ ತಂಡದ ಐವರು ಮಿತ್ರರು ಪಾಲ್ಗೊಂಡಿದ್ದರು. ಸೋಮವಾರ ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಆರತಕ್ಷತೆ ನಡೆಯಲಿದ್ದು, ಸ್ನೇಹಿತರು, ಭಾರತ ಹಾಕಿ ತಂಡದ ಆಟಗಾರರು, ಮಾಜಿ ಆಟಗಾರರಾದ ಅರ್ಜುನ್ ಹಾಲಪ್ಪ, ಧನರಾಜ್ ಪಿಳೈ, ಎ.ಬಿ.ಸುಬ್ಬಯ್ಯ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ.

    ಸುಮಾರು ಎರಡೂವರೆ ಸಾವಿರ ಮಂದಿಗೆ ಆರತಕ್ಷತೆಗೆ ಆಮಂತ್ರಣ ನೀಡಲಾಗಿದ್ದು, ಎಲ್ಲಾ ಸಿದ್ಧತೆ ಮಾಡಲಾಗಿದೆ. ಮಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಸ್ನೇಹಿತರು ಸುನೀಲ್ ಅವರಿಗೆ ಅಚ್ಚರಿ ನೀಡಿ ಸ್ಟೇಜ್ ನಲ್ಲಿ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ.

  • ಸಿಂಹದ ತಲೆ ಸವರಲು ಹೋದ ಆಟಗಾರ: ಮುಂದೇ ಏನಾಯ್ತು ವಿಡಿಯೋ ನೋಡಿ

    ಸಿಂಹದ ತಲೆ ಸವರಲು ಹೋದ ಆಟಗಾರ: ಮುಂದೇ ಏನಾಯ್ತು ವಿಡಿಯೋ ನೋಡಿ

    ಜೋಹಾನ್ಸ್ ಬರ್ಗ್: ನೀವು ಪ್ರಾಣಿ ಪ್ರಿಯರಾಗಿದ್ದು, ಅವುಗಳನ್ನು ಪ್ರೀತಿಯಿಂದ ಮುಟ್ಟಲು ಹೋದರೆ ಹುಷಾರಾಗಿರಿ. ವ್ಯಕ್ತಿಯೊಬ್ಬರು ಪ್ರೀತಿಯಿಂದ ಸಿಂಹದ ತಲೆ ಸವರಲು ಹೋಗಿ ಈಗ ಕಚ್ಚಿಸಿಕೊಂಡು ಎರಡು ಹೊಲಿಗೆಯನ್ನು ಹಾಕಿಸಿಕೊಂಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

    ವೆಲ್ಷಿ ರಗ್ಬಿ ಆಟಗಾರ ಸ್ಕಾಟ್ ಬಾಲ್ಡ್ವಿನ್ ಮತ್ತು ಅವರ ತಂಡ ವೆಲ್ಟೆವ್ರೆಡೆನ್ ಗೇಮ್ ಲಾಡ್ಜ್ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಸಿಂಹಗಳನ್ನು ನೋಡುತ್ತಾ ತಲೆ ಸವರುತ್ತಾ ಖುಷಿ ಪಡುತ್ತಿದ್ದರು. ಆದರೆ ತಲೆ ಸವರಲು ಹೋದ ಸ್ಕಾಟ್ ಬಾಲ್ಡ್ವಿನ್‍ನ ಕೈಯನ್ನು ಸಿಂಹ ಬಾಯಿಯಲ್ಲಿ ಹಿಡಿದು ಕೊಂಡಿದೆ. ಸಿಂಹ ಹಿಡಿದುಕೊಂಡ ಪರಿಣಾಮ ನೋವು ತಾಳಲಾಗದೆ ಕಿರುಚಾಡಿ ಕೈ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೊನೆಗೂ ಸಿಂಹದ ಬಾಯಿಂದ ಕೈಯನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಎರಡು ಹೊಲಿಗೆ ಹಾಕಿದ್ದಾರೆ.

    ಈ ಅವಘಡದಿಂದ ಅವರು ಹಾಗೂ ಅವರ ತಂಡ ಇನ್ನೊಮ್ಮೆ ಯಾವುದೇ ಕಾರಣಕ್ಕೂ ಪ್ರಾಣಿಗಳ ಹತ್ತಿರ ಹೋಗಬಾದರು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಾಕಿದ್ದು, ಸ್ಕಾಟ್ ಮತ್ತು ಅವರ ತಂಡಕ್ಕೆ ಎಚ್ಚರಿಕೆ ನೀಡಲಾಗಿದೆ.

    https://twitter.com/AndyGoode10/status/913879469798166528