Tag: play store

  • 1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ

    1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ

    ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ವಿಧಿಸಿದ 1,337 ಕೋಟಿ ರೂ. ದಂಡದ ಪೈಕಿ ಶೇ.10 ರಷ್ಟು ಮೊತ್ತವನ್ನು ಠೇವಣಿ ಇಡುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (NCALT) ಗೂಗಲ್‌ಗೆ ನಿರ್ದೇಶಿಸಿದೆ.

    ಸಿಸಿಐ ಆದೇಶವನ್ನು ಪ್ರಶ್ನಿಸಿ ಗೂಗಲ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಎನ್‌ಸಿಎಲ್‌ಟಿ,  2022ರ ಅಕ್ಟೋಬರ್‌ನಲ್ಲಿ  ಸಿಸಿಐ ನೀಡಿದ ಆದೇಶಕ್ಕೆ ಯಾವುದೇ ತಡೆ ನೀಡುವುದಿಲ್ಲ. ಗೂಗಲ್‌(Google) ಶೇ.10 ರಷ್ಟು ದಂಡವನ್ನು ಪಾವತಿಸಬೇಕು ಎಂದು ಸೂಚಿಸಿ  ಮುಂದಿನ ವಿಚಾರಣೆಯನ್ನು ಫೆ.13 ರಂದು ನಡೆಸುವುದಾಗಿ ತಿಳಿಸಿದೆ.

    ಗೂಗಲ್‌ ಕಂಪನಿಯ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಸಿಂಗ್ವಿ, ಯುರೋಪಿಯನ್‌ ಆಯೋಗ ನೀಡಿದ ಆದೇಶವನ್ನು ಕಾಪಿ ಪೇಸ್ಟ್‌ ಮಾಡಿ ಸಿಸಿಐ ಆದೇಶ ಪ್ರಕಟಿಸಿದೆ ಎಂದು ವಾದಿಸಿದರು. ಆಂಡ್ರಾಯ್ಡ್‌ ಮೊಬೈಲ್ ಸಾಧನ ತಯಾರಕರ ಮೇಲೆ ಕಾನೂನುಬಾಹಿರ ನಿರ್ಬಂಧಗಳನ್ನು ವಿಧಿಸಿದ ಆರೋಪಕ್ಕಾಗಿ ಯುರೋಪಿಯನ್‌ ಆಯೋಗ ಗೂಗಲ್‌ ಮೇಲೇ 4.1 ಶತಕೋಟಿ ಯುರೋಗಳಷ್ಟು ದಂಡ ವಿಧಿಸಿತ್ತು. ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

    ಸಿಸಿಐ ದಂಡ ಹಾಕಿದ್ದು ಯಾಕೆ?
    ಆಂಡ್ರಾಯ್ಡ್‌ ಪ್ಲೇಸ್ಟೋರ್‌ಗೆ(Android Play Store) ಸಂಬಂಧಿಸಿದ ನೀತಿಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಿಸಿಐ ಗೂಗಲ್‌ ದಂಡ ವಿಧಿಸಿತ್ತು.

    ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಆ್ಯಪ್‌ ಸಿಗಬೇಕಾದರೆ ಅದು ‘ಪ್ಲೇ ಸ್ಟೋರ್‌’ನಲ್ಲಿ ಇರಬೇಕಾಗುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕೆಲವು ಉಚಿತವಾಗಿ ಲಭ್ಯವಾದರೆ ಇನ್ನು ಕೆಲವು ಹಣ ಕೊಟ್ಟು ಖರೀದಿಸಬೇಕಾಗುತ್ತದೆ.

    ಪ್ಲೇಸ್ಟೋರ್‌ನಲ್ಲಿ ಪಾವತಿ ಮಾಡಿದ ಆಪ್‌ಗಳಿಗಾಗಿ ಗೂಗಲ್ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಆದರೆ ಇದು ಕಾನೂನು ಸಮ್ಮತವಲ್ಲದ ನಡವಳಿಕೆ ಎಂದು ಸಿಸಿಐಯಲ್ಲಿ ಹಲವು ದೂರು ದಾಖಲಾಗಿತ್ತು

    ಹಣ ನೀಡಿ ಖರೀದಿಸಬೇಕಿರುವ ಆ್ಯಪ್‌ಗಳು ಆ್ಯಪ್‌ ಸ್ಟೋರ್‌ನಲ್ಲಿ ಇರಬೇಕಾದರೆ ಆ್ಯಪ್‌ ಡೆವಲರ್‌ಗಳು ಗೂಗಲ್‌ ಪ್ಲೇ ಬಿಲ್ಲಿಂಗ್ ವ್ಯವಸ್ಥೆಯ ಭಾಗವಾಗಿರಲೇಬೇಕು ಎಂಬ ನಿಯಮ ನ್ಯಾಯಯುತವಲ್ಲ. ಈ ಎಲ್ಲಾ ಅನ್ಯಾಯದ ವ್ಯಾಪಾರದ ಅಭ್ಯಾಸಗಳನ್ನು ನಿಲ್ಲಿಸಬೇಕು. ಆ್ಯಪ್ ಖರೀದಿ ಪ್ರಕ್ರಿಯೆಗೆ ಬೇರೆ ಬಿಲ್ಲಿಂಗ್ ಸೇವೆಗಳನ್ನು ಬಳಸಲು ಆ್ಯಪ್‌ ಡೆವಲಪರ್‌ಗಳಿಗೆ ಅವಕಾಶ ನೀಡಬೇಕು ಸಿಸಿಐ ಸೂಚಿಸಿತ್ತು.

    ಪ್ಲೇ ಸ್ಟೋರ್, ಗೂಗಲ್ ಸರ್ಚ್, ಗೂಗಲ್ ಕ್ರೋಮ್, ಯೂಟ್ಯೂಬ್‌ನಂತಹ ಗೂಗಲ್ ಅಭಿವೃದ್ಧಿ ಪಡಿಸಿದ ವಿವಿಧ ಅಪ್ಲಿಕೇಶನ್‌ಗಳನ್ನು ಸಿಸಿಐ ಪರಿಶೀಲನೆ ನಡೆಸಿತ್ತು. ಪರಿಶೀಲನೆಯ ಮೌಲ್ಯಮಾಪನದ ಆಧಾರದ ಮೇಲೆ ಎಲ್ಲಾ ಸಂಬಂಧಿತ ಮಾರುಕಟ್ಟೆಗಳಲ್ಲಿ ಗೂಗಲ್‌ ಪ್ರಬಲವಾಗಿದೆ ಎಂದು ಸಿಸಿಐ ಹೇಳಿತ್ತು.

    ಈ ಹಿಂದೆ ಆನ್‍ಲೈನ್ ಜಾಹಿರಾತುಗಳ ಪ್ರದರ್ಶನಕ್ಕೆ ತನ್ನ ಮಾರುಕಟ್ಟೆಯನ್ನು ದುರುಪಯೋಗ ಪಡಿಸಿದ್ದಕ್ಕೆ ಗೂಗಲ್ ಕಂಪನಿ ಮೇಲೆ ಫ್ರಾನ್ಸ್ ಸ್ಪರ್ಧಾ ನಿಯಂತ್ರಕವು 220 ದಶಲಕ್ಷ ಯೂರೋ(ಅಂದಾಜು 1948 ಕೋಟಿ ರೂ.) ದಂಡವನ್ನು ವಿಧಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಭಾರತ ವಿರೋಧಿ, ಪ್ರತ್ಯೇಕತಾವಾದದ ಆ್ಯಪ್ ತೆಗೆದು ಹಾಕಿದ ಗೂಗಲ್

    ಭಾರತ ವಿರೋಧಿ, ಪ್ರತ್ಯೇಕತಾವಾದದ ಆ್ಯಪ್ ತೆಗೆದು ಹಾಕಿದ ಗೂಗಲ್

    ನವದೆಹಲಿ: ಭಾರತ ವಿರೋಧಿ ಹಾಗೂ ಪ್ರತ್ಯೇಕತಾವಾದದ ಕುರಿತ ‘2020 ಸಿಖ್ ರೆಫೆರೆಂಡಮ್’ ಎಂಬ ಆ್ಯಪ್‍ನ್ನು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.

    ಈ ದೇಶ ವಿರೋಧಿ ಹಾಗೂ ಪ್ರತ್ಯೇಕತಾ ವಾದದ ಕುರಿತ ಆ್ಯಪ್‍ನ್ನು ತೆಗೆದು ಹಾಕುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿ ಮಾಡಿದ್ದರು. ಸಿಎಂ ಮನವಿಯನ್ನು ಪರಿಗಣಿಸಿದ ಗೂಗಲ್ ತನ್ನ ಪ್ಲೇ ಸ್ಟೋರಿನಿಂದ 2020 ಸಿಖ್ ರೆಫೆರೆಂಡಮ್(2020 ಸಿಖ್ ಜನಾಭಿಪ್ರಾಯ ಸಂಗ್ರಹ) ಆ್ಯಪ್‍ನ್ನು ತೆಗೆದು ಹಾಕಿದೆ. ಈ ಕುರಿತು ಪಂಜಾಬ್‍ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಭಾರತದ ಮೊಬೈಲ್ ಬಳಕೆದಾರರಿಗೆ ಈ ಆ್ಯಪ್ ಇನ್ನು ಮುಂದೆ ಲಭ್ಯವಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

    ಈ ಕುರಿತು ಗೂಗಲ್ ಗೆ ಮನವರಿಕೆ ಮಾಡುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ICETEC ರಚಿಸಿರುವ ಈ ಆ್ಯಪ್ ಬಿಡುಗಡೆಯಿಂದ ಉಂಟಾಗಿರುವ ಬೆದರಿಕೆಯನ್ನು ನಿಭಾಯಿಸಲು ಕೇಂದ್ರದ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅಮರಿಂದರ್ ಸಿಂಗ್ ಆದೇಶಿಸಿದ್ದರು.

    ಈ ಆ್ಯಪ್ ಮೂಲಕ ಪಂಜಾಬ್ ಜನಾಭಿಪ್ರಾಯ 2020 ಖಲಿಸ್ತಾನ್ ಎಂಬ ಹೆಸರಲ್ಲಿ ಮತ ಸಂಗ್ರಹಿಸಲಾಗುತ್ತಿತ್ತು. ನೋಂದಾಯಿಸಿಕೊಳ್ಳುವಂತೆ ಆ್ಯಪ್ ಸಾರ್ವಜನಿಕರಿಗೆ ಸೂಚಿಸಿತ್ತು. ಅಲ್ಲದೆ ಎಸ್2ಖಲಿಸ್ತಾನ್ ಎಂಬ ವೆಬ್‍ಸೈಟನ್ನು ಸಹ ಇದೇ ಉದ್ದೇಶಕ್ಕಾಗಿ ಪ್ರಾರಂಭಿಸಲಾಗಿತ್ತು.

    ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದುಹಾಕಲು ಹಾಗೂ ಭಾರತದಲ್ಲಿ ವೆಬ್‍ಸೈಟ್ ಬಳಕೆಯನ್ನು ನಿರ್ಬಂಧಿಸಲು ಪಂಜಾಬ್‍ನ ತನಿಖಾ ದಳ ಹಾಗೂ ಸೈಬರ್ ಅಪರಾಧ ವಿಭಾಗವು ಪ್ರಯತ್ನ ನಡೆಸಿತ್ತು. ಈ ಹಿನ್ನೆಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3)ಬಿ ಅಡಿಯಲ್ಲಿ ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದು ಹಾಕುವಂತೆ ನ.8ರಂದು ಗೂಗಲ್‍ಗೆ ಸೂಚಿಸಲಾಗಿತ್ತು ಎಂದು ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.

  • ಮಾಹಿತಿ ಸೋರಿಕೆ- ಪ್ಲೇ ಸ್ಟೋರ್‌ನಿಂದ 7 ಆಪ್‍ಗಳನ್ನು ತೆಗೆದು ಹಾಕಿದ ಗೂಗಲ್

    ಮಾಹಿತಿ ಸೋರಿಕೆ- ಪ್ಲೇ ಸ್ಟೋರ್‌ನಿಂದ 7 ಆಪ್‍ಗಳನ್ನು ತೆಗೆದು ಹಾಕಿದ ಗೂಗಲ್

    ನವದೆಹಲಿ: ಆಪ್ ಮೂಲಕ ಬಳಕೆದಾರರನ್ನು ಟ್ರಾಕ್ ಹಾಗೂ ಅವರ ಮಾಹಿತಿ ಸೋರಿಕೆ ಮಾಡುತ್ತಿದ್ದ 7 ಆಪ್‍ಗಳನ್ನು ಗೋಗಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.

    ಈ ಆಪ್ ಗಳನ್ನು ಆಂಟಿ ವೈರಸ್ ಕಂಪನಿ ಅವಸ್ತ್ ವರದಿ ಮಾಡಿದ್ದು, ಈ ಸ್ಟಾಕರ್ ವೇರ್ ಆಪ್ ಗಳಿಂದ ಬಳಕೆದಾರರನ್ನು ಟ್ರ್ಯಾಕ್ ಮಾಡಲಾಗುತ್ತಿತ್ತು ಎಂದು ಕಂಪನಿ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಈ ಅಪ್ಲಿಕೇಶನ್‍ಗಳ ಮೂಲಕ ಟ್ರ್ಯಾಕ್ ಮಾಡುವುದು ಮಾತ್ರವಲ್ಲದೆ, ಲೊಕೇಶನ್ ಡಾಟಾ, ಕಾಂಟ್ಯಾಕ್ಟ್ಸ್, ಕಾಲ್ ಲಾಗ್ಸ್ ಹಾಗೂ ಎಸ್‍ಎಂಎಸ್ ಮಾಹಿತಿಗಳನ್ನು ಕದಿಯುತ್ತಿದ್ದವು. ಇವು ರಷ್ಯನ್ ಅಭಿವೃದ್ಧಿಪಡಿಸಿರುವ ಆಪ್‍ಗಳಾಗಿವೆ ಎಂದು ಅವಸ್ತ್ ತಿಳಿಸಿದೆ.

    ಈ ಎಲ್ಲ ಆಪ್‍ಗಳನ್ನು ಗೂಗಲ್ ತೆಗೆದು ಹಾಕಿದ್ದು ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಮೊಬೈಲ್‍ನಲ್ಲಿದೆಯೇ ಪರಿಶೀಲಿಸಿಕೊಳ್ಳಿ. ಇದ್ದಲ್ಲಿ ಕೂಡಲೇ ತೆಗೆದುಹಾಕಿ ಎಂದು ಗೂಗ್ಲ್ ಸೂಚಿಸಿದೆ. ಈ ಆಪ್‍ಗಳನ್ನು 1.30 ಲಕ್ಷ ಬಾರಿ ಇನ್‍ಸ್ಟಾಲ್ ಮಾಡಲಾಗಿದ್ದು, ಇದೀಗ ಸ್ನೂಪ್‍ಗಳ ಮೂಲಕ ಆ ಆಪ್‍ಗಳನ್ನು ಡೌನ್‍ಲೋಡ್ ಮಾಡಬಹುದಾಗಿದ್ದು, ಕೇವಲ ಉದ್ದೇಶಿತ ಮೊಬೈಲ್‍ಗಳಲ್ಲಿ ಮಾತ್ರ ಬಳಸಬಹುದಾಗಿದೆ.

    ಹೇಗೆ ಮಾಹಿತಿ ಕದಿಯುತ್ತಾರೆ
    ಆಪ್ ಇನ್‍ಸ್ಟಾಲ್ ಮಾಡಿಕೊಂಡ ತಕ್ಷಣ ಇ-ಮೇಲ್ ಅಡ್ರೆಸ್ ಹಾಗೂ ಪಾಸ್‍ವರ್ಡ್‍ಗಳನ್ನು ಕೇಳುತ್ತದೆ. ನೀವು ಲಾಗಿನ್ ಆಗುತ್ತಿದ್ದಂತೆ ನಿಮ್ಮ ಮೊಬೈಲ್‍ಗೆ ಬೇಹುಕಾರಿಕೆ ಅಪ್ಲಿಕೇಶನ್‍ನ್ನು ಕಳುಹಿಸಲಾಗುತ್ತದೆ. ಆದರೆ, ಈ ಅಪ್ಲಿಕೇಷನ್ ಐಕಾನ್ ಇಲ್ಲದಿರುವುದರಿಂದ ನಮಗೆ ಅಪ್ಲಿಕೇಷನ್ ಇನ್ಸ್‍ಟಾಲ್ ಆಗಿರುವ ಕುರಿತು ತಿಳಿಯುವುದಿಲ್ಲ. ಅಂದರೆ, ಇನ್ಸ್‍ಟಾಲ್ ಮಾಡಿದ ನಂತರ ಆ ಸಾಫ್ಟ್‍ವೇರ್ ನಿಮ್ಮ ಮೊಬೈಲ್‍ನಲ್ಲಿ ಇರುವ ಕುರಿತು ತಿಳಿಯುವುದಿಲ್ಲ. ಅದು ನಿಮ್ಮ ಮೊಬೈಲ್ ಹೊಕ್ಕ ನಂತರ ನಿಮ್ಮ ಎಲ್ಲ ಮಾಹಿತಿಯನ್ನು ಬೇರೆಲ್ಲೋ ಕೂತು ಕದಿಯುತ್ತಾರೆ.

    ಹೀಗೆ ಪತ್ತೆ ಹಚ್ಚಿ, ಅನ್‍ಇನ್ಸ್ಟಾಲ್ ಮಾಡಿ
    ನಿಮ್ಮ ಮೊಬೈಲ್‍ನಲ್ಲಿ ಸೆಟಿಂಗ್‍ನಲ್ಲಿರುವ ಆಪ್ ಸೆಟಿಂಗ್‍ನ್ನು ಕ್ಲಿಕ್ ಮಾಡಿ, ನಂತರ ಆಪ್ಸ್ ಆಂಡ್ ನೋಟಿಫಿಕೇಶನ್ ಕ್ಲಿಕ್ ಮಾಡಿ. ಈ ಸೆಕ್ಷನ್‍ಗೆ ವಿವಿಧ ಮೊಬೈಲ್‍ಗಳಲ್ಲಿ ಬೇರೆ ರೀತಿಯ ಹೆಸರುಗಳಿರುತ್ತವೆ. ಆದರೆ, ಸೆಟಿಂಗ್‍ನಲ್ಲಿ ನಿಮಗೆ ಎಲ್ಲಿ ನೋಟಿಫಿಕೇಷನ್ ಬರುತ್ತವೆಯೋ ಅದನ್ನು ನೀವು ಸಹಜವಾಗಿ ನಿಮ್ಮ ಮೊಬೈಲ್‍ನಲ್ಲಿ ಪತ್ತೆ ಹಚ್ಚಬಹುದು. ನಂತರ ಆ ಆಪ್‍ನ್ನು ನೀವು ಅನ್‍ಇನ್ಸ್ಟಾಲ್ ಮಾಡಬಹುದಾಗಿದೆ.

  • ಕಾಂಗ್ರೆಸ್ ಆ್ಯಪ್ ಆಯ್ತು, ಈಗ ಸಿದ್ದರಾಮಯ್ಯ ಆ್ಯಪ್ ಪ್ಲೇ ಸ್ಟೋರ್ ನಿಂದ ಡಿಲೀಟ್!

    ಕಾಂಗ್ರೆಸ್ ಆ್ಯಪ್ ಆಯ್ತು, ಈಗ ಸಿದ್ದರಾಮಯ್ಯ ಆ್ಯಪ್ ಪ್ಲೇ ಸ್ಟೋರ್ ನಿಂದ ಡಿಲೀಟ್!

    ಬೆಂಗಳೂರು: ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಕಾಂಗ್ರೆಸ್ ಆ್ಯಪ್ ಡಿಲೀಟ್ ಆದ ಬಳಿಕ ಈಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆ್ಯಪ್ ಡಿಲೀಟ್ ಆಗಿದೆ.

    ಸಿದ್ದರಾಮಯ್ಯನವರ ಅಪ್ಲಿಕೇಶನ್ ಎನ್‍ಕ್ರಿಪ್ಟ್ ಆಗಿಲ್ಲ. ಸಿದ್ದರಾಮಯ್ಯನವರ ಅಪ್ಲಿಕೇಶನ್ ಸರ್ಕಾರವೇ ಸಿದ್ಧಪಡಿಸಿದರೂ citizenoutreachapp.in ಹೆಸರಿನ ಕಂಪೆನಿಗೆ ಹೋಗುತ್ತದೆ. ಸರ್ಕಾರವೇ ಸಿದ್ಧಪಡಿಸಿದ ಆ್ಯಪ್ ಡೇಟಾ ಖಾಸಗಿ ಕಂಪೆನಿಗೆ ಹೇಗೆ ನೀಡುತ್ತೀರಿ ಎಂದು ಶ್ರೀಹರ್ಷ ಪೆರ್ಲ ಅವರು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ವ್ಯಾಪಕ ಪ್ರತಿಕ್ರಿಯೆ ಬಂದಿತ್ತು. ಸಿದ್ದರಾಮಯ್ಯನವರ ಆ್ಯಪ್‍ನಲ್ಲಿ ಭದ್ರತಾ ಲೋಪದ ಸುದ್ದಿ ಪ್ರಕಟವಾಗುತ್ತಿದ್ದಂತೆ ಈಗ ಆಂಡ್ರಾಯ್ಡ್ ಪ್ಲೇ ಸ್ಟೋರಿನಿಂದ ಈ ಅಪ್ಲಿಕೇಶನ್ ಡಿಲೀಟ್ ಮಾಡಲಾಗಿದೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ನಮೋ ಅಪ್ಲಿಕೇಶನ್ ನಲ್ಲಿ ಭದ್ರತಾ ಲೋಪವಿದ್ದು ಅಮೆರಿಕದ ಕಂಪೆನಿಗೆ ಡೇಟಾವನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದರು. ಈ ಆರೋಪ ಮಾಡಿದ ಬಳಿಕ ಕಾಂಗ್ರೆಸ್ ಆ್ಯಪ್‍ನಲ್ಲೂ ಭದ್ರತಾ ಲೋಪ ಕಂಡುಬಂದಿತ್ತು. ಬಳಿಕ ಕಾಂಗ್ರೆಸ್ ತನ್ನ ಆ್ಯಪ್ ಡಿಲೀಟ್ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ #DeleteNaMoApp ಅಭಿಯಾನ- ದಿಢೀರ್ ಏರಿಕೆ ಆಯ್ತು ಮೋದಿ ಆ್ಯಪ್ ಡೌನ್‍ಲೋಡ್ ಸಂಖ್ಯೆ

  • ಭಾರತೀಯರ ಇಷ್ಟದ ಯುಸಿ ಬ್ರೌಸರ್ ಗೂಗಲ್ ಪ್ಲೇ ಸ್ಟೋರ್ ನಿಂದ ಕಿಕ್ ಔಟ್

    ಭಾರತೀಯರ ಇಷ್ಟದ ಯುಸಿ ಬ್ರೌಸರ್ ಗೂಗಲ್ ಪ್ಲೇ ಸ್ಟೋರ್ ನಿಂದ ಕಿಕ್ ಔಟ್

    ನವದೆಹಲಿ: ಭಾರತೀಯ ಆಂಡ್ರಾಯ್ಡ್ ಗ್ರಾಹಕರು ಸರ್ಚ್ ಮಾಡಲು ಬಳಸುತ್ತಿದ್ದ ಯುಸಿ ಬ್ರೌಸರ್ ಅಪ್ಲಿಕೇಶನನ್ನು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಕಿತ್ತು ಹಾಕಿದೆ.

    ಯುಸಿ ಬ್ರೌಸರ್ ತೆಗೆದು ಹಾಕಿದ್ದರೂ ಯುಸಿ ಬ್ರೌಸರ್ ಮಿನಿ ಮತ್ತು ಯುಸಿ ನ್ಯೂಸ್ ಅಪ್ಲಿಕೇಶನ್ ಗಳು ಈಗಲೂ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.

    ಚೀನಾದ ಅಲಿಬಾಬಾ ಕಂಪೆನಿ ಅಭಿವೃದ್ಧಿ ಪಡಿಸಿರುವ ಯುಸಿ ಬ್ರೌಸರ್ ಆ್ಯಪನ್ನು ಒಟ್ಟು 5 ಕೋಟಿಗೂ ಅಧಿಕ ಜನ ಡೌನ್ ಲೋಡ್ ಮಾಡಿದ್ದು, ಕಳೆದ ಒಂದೇ ತಿಂಗಳಿನಲ್ಲಿ 1 ಕೋಟಿ ಜನ ಡೌನ್ ಲೋಡ್ ಮಾಡಿದ್ದರು. ಆದರೆ ಇದಕ್ಕಿದ್ದಂತೆ ಗೂಗಲ್ ಯುಸಿ ಬ್ರೌಸರ್ ಅನ್ನು ಪ್ಲೇ ಸ್ಟೋರ್ ನಿಂದ ಕಿತ್ತು ಹಾಕಿದ್ದು ಯಾಕೆ ಎನ್ನುವುದಕ್ಕೆ ನಿಜವಾದ ಕಾರಣ ತಿಳಿದು ಬಂದಿಲ್ಲ.

    ಯುಸಿ ಬ್ರೌಸರ್ ನಲ್ಲಿ ಕೆಲಸ ಮಾಡುತ್ತಿರುವ ಮೈಕ್ ರೋಸ್ ಎಂಬವರು ಈ ಬಗ್ಗೆ ಟ್ವೀಟ್ ಮಾಡಿದ್ದು, 30 ದಿನಗಳಲ್ಲಿ ತಪ್ಪು ಪ್ರಚಾರ ಮಾಡಿ ಡೌನ್ ಲೋಡ್ ಹೆಚ್ಚಳ ಮಾಡಿದೆ ಎನ್ನುವ ಆರೋಪಕ್ಕೆ ಪ್ಲೇ ಸ್ಟೋರ್ ತಾತ್ಕಾಲಿಕವಾಗಿ ಆ್ಯಪನ್ನು ತೆಗೆದು ಹಾಕಿದೆ. ಈ ವಿಚಾರದ ಬಗ್ಗೆ ನಾವು ಗೂಗಲ್ ಕಂಪೆನಿಯನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಆಗಸ್ಟ್ ತಿಂಗಳಿನಲ್ಲಿ ಯುಸಿ ಬ್ರೌಸರ್ ಭಾರತೀಯ ಗ್ರಾಹಕರ ಡೇಟಾವನ್ನು ಚೀನಾದಲ್ಲಿ ಸರ್ವರ್ ಕಳುಹಿಸುತ್ತಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ  ಪ್ರಕಟವಾಗಿತ್ತು. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದಲ್ಲಿ ಚೀನಾದ ಬ್ರೌಸರ್ ಅನ್ನು ನಿಷೇಧಿಸಲಾಗುವುದು ಎಂದು ಭಾರತ ಸರ್ಕಾರ ಹೇಳಿತ್ತು.

    ಡೇಟಾ ಸಂಸ್ಥೆ ಸ್ಟೇಟ್‍ಕೌಂಟರ್ ಪ್ರಕಾರ, ಭಾರತದಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಗಿಂತಲೂ ಯುಸಿ ಬ್ರೌಸರ್ ಹೆಚ್ಚು ಪ್ರಸಿದ್ಧವಾಗಿದೆ. ಶೇ.60 ರಷ್ಟು ಭಾರತೀಯ ಬಳಕೆದಾರರು ಯುಸಿ ಬ್ರೌಸರ್ ಬಳಸುತ್ತಿದ್ದಾರೆ ಎಂದು ಹೇಳಿತ್ತು.

    ಪ್ಲೇಸ್ಟೋರ್ ನಿಂದ ಡಿಲೀಟ್ ಆಗಿದ್ದರೂ ಆ್ಯಪ್ ಬೇಕಿದ್ದಲ್ಲಿ ಆಂಡ್ರಾಯ್ಡ್ ಗ್ರಾಹಕರು ಯುಸಿ ಬ್ರೌಸರ್ ಸೈಟಿಗೆ ಹೋಗಿ ಡೌನ್ ಲೋಡ್ ಮಾಡಬಹುದಾಗಿದೆ.