Tag: play

  • ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವು

    ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವು

    ಹಾಸನ: ಜೋಕಾಲಿ ಆಟವಾಡುವ ಸಂದರ್ಭದಲ್ಲಿ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

    ಮನೋಜ್ (8), ಮೃತಪಟ್ಟ ಬಾಲಕನಾಗಿದ್ದು, ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಈತ ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಇದನ್ನೂ ಓದಿ:  ಮೊಬೈಲ್ ನುಂಗಿ 4 ದಿನ ಹೊಟ್ಟೆಯಲ್ಲಿಟ್ಟುಕೊಂಡ

    ಮಗುವಿನ  ಪೋಷಕರು ಕೃಷಿ ಕಾರ್ಯಕ್ಕೆಂದು ಮಗುವನ್ನು ಮನೆಯಲ್ಲಿ ಬಿಟ್ಟು ತೆರಳಿದ್ದರು. ಈ ವೇಳೆ ಮನೆಯಲ್ಲಿ ಕಟ್ಟಿದ ಜೋಕಾಲಿಯಲ್ಲಿ ಮಗು ಆಟವಾಡುವ ಸಂದರ್ಭದಲ್ಲಿ, ಕುತ್ತಿಗೆಗೆ ಹಗ್ಗ ಸಿಲುಕಿಕೊಂಕೊಂಡಿದೆ. ಮನೋಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಾಣವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಆಟದ ವೇಳೆ ಜಗಳ – 4ರ ಪೋರನ ಕತ್ತು ಸೀಳಿದ 7ರ ಬಾಲಕ

    ಆಟದ ವೇಳೆ ಜಗಳ – 4ರ ಪೋರನ ಕತ್ತು ಸೀಳಿದ 7ರ ಬಾಲಕ

    ಬರೇಲಿ: ಆಟ ಆಡುವ ವೇಳೆ ನಡೆದ ಜಗಳದಲ್ಲಿ 7 ವರ್ಷದ ಬಾಲಕನೊಬ್ಬ 4 ವರ್ಷದ ಬಾಲಕ ಕತ್ತನ್ನು ಸೀಳಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಇಬ್ಬರು ಸಂಬಂಧಿಕರಾಗಿದ್ದು ಮಕ್ಕಳ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಇಬ್ಬರು ಮನೆಯ ಹೊರಗಡೆ ಆಟ ಆಡುತ್ತಿದ್ದಾಗ ಜಗಳ ನಡೆದಿದೆ.

    ಸಿಟ್ಟಾದ 7 ವರ್ಷದ ಬಾಲಕ ಮನೆಗೆ ತೆರಳಿ ಚಾಕು ತಂದು ಇರಿದಿದ್ದಾನೆ. ಬಾಲಕನ ಕಿರುಚಾಟ ಕೇಳಿ ಅಲ್ಲಿದ್ದವರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯವರು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.

    ಸಂತ್ರಸ್ತ ಬಾಲಕನ ತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ನಂತರ ಕುಟುಂಬದ ಸದಸ್ಯರ ಮಾತುಕತೆಯ ಬಳಿಕ ದೂರನ್ನು ಹಿಂಪಡೆಯಲಾಗಿದೆ.

    ಹಿರಿಯ ಸಹೋದರ ತಪ್ಪಾಗಿ ಕಿರಿಯ ಸಹೋದರನ ಮೇಲೆ ಚಾಕು ಇರಿದಿದ್ದಾನೆ. ಈ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಎರಡು ಕುಟುಂಬಗಳ ಸದಸ್ಯರು ಪೊಲೀಸರಲ್ಲಿ ತಿಳಿಸಿದ್ದಾರೆ.

  • ‘ಸ್ವಲ್ಪ ಹೊತ್ತು ನನ್ನೊಂದಿಗೆ ಆಡು’- ಮಕ್ಕಳೊಂದಿಗೆ ಆಟವಾಡಲು ಬಂದ ಬಾಲಕಿಯ ರೇಪ್

    ‘ಸ್ವಲ್ಪ ಹೊತ್ತು ನನ್ನೊಂದಿಗೆ ಆಡು’- ಮಕ್ಕಳೊಂದಿಗೆ ಆಟವಾಡಲು ಬಂದ ಬಾಲಕಿಯ ರೇಪ್

    ಅಹಮದಾಬಾದ್: ತನ್ನ ಮಕ್ಕಳೊಂದಿಗೆ ಆಟವಾಡಲು ಬಂದ ಪುಟ್ಟ ಬಾಲಕಿಯ ಮೇಲೆ 40 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಹೀನಾಯ ಘಟನೆಯೊಂದು ಅಹಮದಾಬಾದ್‍ನಲ್ಲಿ ನಡೆದಿದೆ.

    ಬಾಲಕಿಯ ಮನೆ ಆರೋಪಿ ಮನೆಯ ಪಕ್ಕದಲ್ಲಿಯೇ ಇದೆ. ಹೀಗಾಗಿ ಬಾಲಕಿ ಆರೋಪಿಯ ಮಕ್ಕಳ ಜೊತೆ ಆಟವಾಡಲೆಂದು ಭಾನುವಾರ ತೆರಳಿದ್ದಾಳೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡಿರುವ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆರೋಪಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಇಬ್ಬರು ಮಕ್ಕಳೊಂದಿಗೆ ಆಟವಾಡಲು ಬಾಲಕಿ ಆಗಾಗ್ಗೆ ಆರೋಪಿ ಮನೆಗೆ ಬರುತ್ತಿದ್ದಳು. ಭಾನುವಾರವೂ ಬಾಲಕಿ ತನ್ನ ಗೆಳೆಯರೊಂದಿಗೆ ಆಟವಾಡಲೆಂದು ಆರೋಪಿ ಮನೆಗೆ ತೆರಳಿದ್ದಾಳೆ. ಈ ಸಂದರ್ಭವನ್ನೇ ಉಪಯೋಗಿಸಿಕೊಂಡ ಆರೋಪಿ, ತನ್ನಿಬ್ಬರು ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕಿಯನ್ನು ಕರೆದು ‘ಸ್ವಲ್ಪ ಹೊತ್ತು ನನ್ನೊಂದಿಗೆ ಆಟವಾಡು’ ಎಂದು ಹೇಳಿ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಸೋಲ ಹೈಕೋರ್ಟ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಯಾರಿಗೂ ತಿಳಿಯಬಾರದೆಂದು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆಯಿಂದ ಭಯದಿಂದಲೇ ಬಂದ ಬಾಲಕಿ, ತನ್ನ ತಾಯಿ ಬಳಿ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾಳೆ. ಕೂಡಲೇ ಗಾಬರಿಯಾದ ಬಾಲಕಿ ತಾಯಿ, ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಆರೋಪಿ ವಿರುದ್ಧ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಆತನನ್ನು ಟ್ರೇಸ್ ಮಾಡಲು ಕೂಡ ಸಾಧ್ಯವಿಲ್ಲ. ಯಾಕಂದರೆ ಆತ ತನ್ನ ಮೊಬೈಲನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಆತನ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ.

  • ಜನಕ ರಾಜನ ಪಾತ್ರದಲ್ಲಿ ಮಿಂಚಿದ ಕೇಂದ್ರ ಸಚಿವ: ವಿಡಿಯೋ ನೋಡಿ

    ಜನಕ ರಾಜನ ಪಾತ್ರದಲ್ಲಿ ಮಿಂಚಿದ ಕೇಂದ್ರ ಸಚಿವ: ವಿಡಿಯೋ ನೋಡಿ

    ನವದೆಹಲಿ: ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ನಾಟಕವೊಂದರಲ್ಲಿ ಫುಲ್ ಮಿಂಚಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಸಚಿವರ ಕಾಲೆಳೆದಿದ್ದಾರೆ.

    ದೆಹಲಿಯಲ್ಲಿ ಶುಕ್ರವಾರ ಲವ-ಕುಶ ರಾಮ ಲೀಲಾ ನಾಟಕ ಪ್ರದರ್ಶವಾಯಿತು. ಇದರಲ್ಲಿ ಡಾ.ಹರ್ಷವರ್ಧನ್ ಅವರು ಜನಕ ರಾಜನ ಪಾತ್ರ ನಿರ್ವಹಸಿದ್ದಾರೆ. ಸಿಂಹಾಸದ ಮೇಲೆ ಕುಳಿತು, ಸ್ವಯಂ ವರಕ್ಕೆ ಸಚಿವರು (ಜನಕ ರಾಜ) ಆಹ್ವಾನ ನೀಡುವ ಸನ್ನಿವೇಷದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇದನ್ನು ನೋಡಿದ ಕೆಲ ನೆಟ್ಟಿಗರು ಉತ್ತಮ ಅಭಿನಯ ಎಂದು ಪ್ರಶಂಸೆ ವ್ಯಕ್ತಪಡಿಸಿದರೆ, ಕೆಲವರು ವ್ಯಂಗ್ಯವಾಡಿದ್ದಾರೆ. ನೀವು ಜನಕ ರಾಜನಾದರೆ ಬಿಹಾರದ ಬಿಜೆಪಿ ಮುಖಂಡ ಮನೋಜ್ ತಿವಾರಿ ಅವರು ರಾವಣ ಎಂದು ಕಾಲೆಳೆದಿದ್ದಾರೆ.

    ಬಿಜೆಪಿ ಒಂದು ನಾಟಕದ ಕಂಪೆನಿ, ಎಲ್ಲರೂ ನಾಟಕಕಾರರೇ ಎಂದು ಬರೆದು ಸುಬ್ರಮಣ್ಯಂ ಎಂಬವರು ರೀ ಟ್ವೀಟ್ ಮಾಡಿ, ಲೇವಡಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾತ್ರಿ ಮನೆ ಮುಂದೆ ಶಟಲ್ ಆಡಿದ್ದಕ್ಕೆ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು!

    ರಾತ್ರಿ ಮನೆ ಮುಂದೆ ಶಟಲ್ ಆಡಿದ್ದಕ್ಕೆ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು!

    ತುಮಕೂರು: ಕ್ಷುಲ್ಲಕ ಕಾರಣಕ್ಕೆ ರಾತ್ರಿವೇಳೆ ಮನೆ ಮುಂದೆ ಶಟಲ್ ಕಾಕ್ ಆಡುತ್ತಿದ್ದ ವ್ಯಕ್ತಿಯ ಮೇಲೆ ಮನಸೋ ಇಚ್ಛೆ ಥಳಿಸಿದ ಆರೋಪ ಜಿಲ್ಲೆಯ ಹುಲಿಯೂರು ದುರ್ಗದ ಪೊಲೀಸರ ಮೇಲೆ ಬಂದಿದೆ.

    40 ವರ್ಷದ ಪದ್ಮನಾಭ ಅವರು ತನ್ನ ಮನೆ ಮುಂದೆ ಶಟಲ್ ಆಡುತ್ತಿದ್ದರು. ಆಟ ನಿಲ್ಲಿಸಿ ಮನೆಯೊಳಗೆ ಹೋಗುವಂತೆ ಪೊಲೀಸರು ಗದರಿದ್ದಾರೆ. ತನ್ನ ಮನೆ ಎದುರಲ್ಲೇ ಆಟವಾಡುತ್ತಿದ್ದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ ಎಂದು ಪದ್ಮನಾಭ, ಇದೇ ವೇಳೆ ಪೊಲೀಸರ ಮಾತಿಗೆ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ಕೋಪಗೊಂಡ ಎ.ಎಸ್.ಐ ನಾರಾಯಣಸ್ವಾಮಿ, ಹಾಗೂ ಪೇದೆ ರಂಗಸ್ವಾಮಿ, ಪದ್ಮನಾಭನ ಮನೆಗೆ ನುಗ್ಗಿ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಪೃಷ್ಠ ಭಾಗದಲ್ಲಿ ಬಾಸುಂಡೆ ಬರುವಂತೆ ಲಾಠಿ ಏಟು ಕೊಟ್ಟಿದ್ದಾರೆ. ಮೈ ತುಂಬಾ ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪದ್ಮನಾಭ ವಿರುದ್ಧ ಕರ್ತವ್ಯಕ್ಕೆ ಅಡ್ಡಿಯಡಿ ಪ್ರಕರಣ ದಾಖಲಿಸಿ ಕುಣಿಗಲ್ ಜೆಎಂಎಫ್ ಸಿ ಕಿರಿಯ ಶ್ರೇಣಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಪದ್ಮನಾಭ ಅವರನ್ನು ನ್ಯಾಯಾಂಗ ಬಂಧನದಲ್ಲಿಟ್ಟು ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸಂಜೆ ಆಟವಾಡ್ತಿದ್ದ ನಾಲ್ವರು ಬಾಲಕರು ನಾಪತ್ತೆ- ಪೋಷಕರಲ್ಲಿ ಆತಂಕ

    ಸಂಜೆ ಆಟವಾಡ್ತಿದ್ದ ನಾಲ್ವರು ಬಾಲಕರು ನಾಪತ್ತೆ- ಪೋಷಕರಲ್ಲಿ ಆತಂಕ

    ಬೆಂಗಳೂರು: ಸಂಜೆ ಆಟ ಆಡ್ತಿದ್ದ ನಾಲ್ವರು ಶಾಲಾ ಮಕ್ಕಳು ಇದ್ದಕ್ಕಿದ್ದಂತೆ ಕಾಣೆಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನ ಮಂಚನಹಳ್ಳಿಯಲ್ಲಿ ನಡೆದಿದೆ.

    12 ವರ್ಷದ ಚಂದನ್, ವಿಕಾಸ್, ನಂದನ್ ಮತ್ತು 14 ವರ್ಷದ ಕಾರ್ತಿಕ್ ನಾಪತ್ತೆಯಾದ ಬಾಲಕರು. ಆನೇಕಲ್, ಅತ್ತಿಬೆಲೆ, ಬೆಂಗಳೂರು ಸೇರಿ ಎಲ್ಲೆಡೆ ಮಕ್ಕಳಿಗಾಗಿ ಹುಡುಕಾಟ ನಡೆಸಲಾಗ್ತಿದೆ.

    ಸಂಜೆ 5 ಗಂಟೆವರೆಗೂ ಗ್ರಾಮದಲ್ಲೇ ಬಾಲಕರು ಆಟವಾಡುತ್ತಿದ್ದರು. ಇತ್ತೀಚೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಆತಂಕಗೊಂಡ ಪಾಲಕರು ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ.

    ಸದ್ಯ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಆಟವಾಡಲೆಂದು ಕರೆದುಕೊಂಡು ಹೋಗಿ 8 ತಿಂಗ್ಳ ಕಂದಮ್ಮನ ಮೇಲೆ ರೇಪ್!

    ಆಟವಾಡಲೆಂದು ಕರೆದುಕೊಂಡು ಹೋಗಿ 8 ತಿಂಗ್ಳ ಕಂದಮ್ಮನ ಮೇಲೆ ರೇಪ್!

    ಜೈಪುರ: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದಕ್ಕೆ ಕೇಂದ್ರ ಅಸ್ತು ಅಂದರೂ ದೇಶದಲ್ಲಿ ರೇಪ್ ಪ್ರಕರಣಗಳ ಸಂಖ್ಯೆ ಕಡಿಮೆಯಗುವಂತೆ ಕಾಣುತ್ತಿಲ್ಲ. ಇಂತದ್ದೇ ಘಟನೆಯೊಂದು ಇದೀಗ ರಾಜಸ್ಥಾನದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

    ಎಂಟು ತಿಂಗಳ ಮುಗ್ಧ ಕಂದಮ್ಮನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಹೀನಾಯ ಘಟನೆ ರಾಜಸ್ಥಾನದ ಅಲ್ವಾರ್ ಜೆಲ್ಲೆಯ ಹರ್ಸಾನ ಗ್ರಾಮದಲ್ಲಿ ನಡೆದಿದೆ. ಮೊದಲೇ ಪ್ಲಾನ್ ಮಾಡಿದ್ದ ಕಾಮುಕ ಆಕೆಯನ್ನು ಆಟವಾಡಲು ಬಾ ಅಂತ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಅಪ್ರಾಪ್ತ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ – ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಅಸ್ತು

    ನೆರೆ ಮನೆಯ ವ್ಯಕ್ತಿಯೇ ಈ ಕೃತ್ಯ ಎಸಗಿದ್ದು, ಬುಧವಾರ ಬಾಲಕಿಯಿದ್ದ ಮನೆಗೆ ಬಂದ ಕಾಮುಕ ಆಟವಾಡೋಣ ಬಾ ಅಂತ ಅಲ್ಲಿಂದ ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ರಾತ್ರಿ ಬಾಲಕಿ ಅಸ್ವಸ್ಥಗೊಂಡಿರುವುದನ್ನು ಪೋಷಕರು ಗಮನಿಸಿದ್ದಾರೆ. ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

  • ಆಟವಾಡುತ್ತಿದ್ದ ಮಕ್ಕಳ ಮೇಲೆ ಅಪಾಯಕಾರಿ ದ್ರಾವಣ ಎರಚಿದ ಬಾಲಕ!

    ಆಟವಾಡುತ್ತಿದ್ದ ಮಕ್ಕಳ ಮೇಲೆ ಅಪಾಯಕಾರಿ ದ್ರಾವಣ ಎರಚಿದ ಬಾಲಕ!

    ತುಮಕೂರು: ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಅಪರಿಚಿತ ಬಾಲಕನೋರ್ವ ಅಪಾಯಕಾರಿ ದ್ರಾವಣ ಎರಚಿ ಪರಾರಿಯಾದ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.

    ಘಟನೆಯಲ್ಲಿ ಸಹೋದರರಾದ 11 ವರ್ಷದ ದರ್ಶನ್ ಹಾಗೂ 4 ವರ್ಷದ ವಿನಯ್ ಗಾಯಗೊಂಡಿದ್ದಾರೆ. ತಿಪಟೂರು ನಗರದ ಕೆ.ಆರ್.ಬಡಾವಣೆಯ ಬಯಲು ರಂಗಮಂದಿರದಲ್ಲಿ ಇಬ್ಬರು ಸಹೋದರರು ಆಡುತ್ತಿದ್ದಾಗ ಸುಮಾರು 14 ವರ್ಷದ ಬಾಲಕನೋರ್ವ ಬಂದು ಇಲ್ಲಿ ಆಟವಾಡಬೇಡಿ ಎಂದು ಗದರಿಸಿ ಜಗಳ ಮಾಡಿದ್ದಾನೆ ಎನ್ನಲಾಗಿದೆ.

    ಬಳಿಕ ಕೈಯಲ್ಲಿದ್ದ ದ್ರಾವಣ ಇಬ್ಬರ ಮುಖಕ್ಕೆ ಎರಚಿ ಪರಾರಿಯಾಗಿದ್ದಾನೆ. ಕಳೆದ 15 ದಿನದ ಹಿಂದೆ ಇದೇ ಅಪರಿಚಿತ ಬಾಲಕ ಈ ಸಹೋದರರ ನಡುವೆ ಜಗಳ ಮಾಡಿದ್ದ ಎನ್ನಲಾಗಿದೆ. ಅದರ ಸೇಡು ತೀರಿಸಿಕೊಳ್ಳಲು ಇಂದು ಬಾಟಲಿಯಲ್ಲಿ ಅಪಾಯಕಾರಿ ದ್ರಾವಣ ತಂದು ಎರಚಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

    ಘಟನೆಯ ಪರಿಣಾಮ ಮಕ್ಕಳ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಆ ದ್ರಾವಣವನ್ನು ಟಾಯ್ಲೆಟ್ ಕ್ಲೀನರ್ ಎಂದು ಶಂಕಿಸಲಾಗಿದ್ದು, ಪರಿಶೀಲನೆ ನಡೆದಿದೆ.

    ತಿಪಟೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

    ನವದೆಹಲಿ: ಮನೆಯ ಹೊರಗಡೆ ಆಟವಾಡುತ್ತಿದ್ದ 2 ವರ್ಷದ ಕಂದಮ್ಮ ಏಕಾಏಕಿ ಕಾಣೆಯಾಗಿ, ಬಳಿಕ ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆಯಾಗಿರೋ ಘಟನೆ ಚರೋಲಿಯ ದಿಘಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಸುಭಾಷ್ ಗೌರವ್ ತಿವಾರಿ ಎಂದು ಗುರುತಿಸಲಾಗಿದೆ. ಮೃತ ಮಗುವಿನ ತಂದೆ ಗೌರವ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆಯಷ್ಟೇ ಉತ್ತರಪ್ರದೇಶದಿಂದ ಪುಣೆಗೆ ಬಂದಿದ್ದರು. ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಹಾಗೂ ಆತನ ಭವಿಷ್ಯದ ದೃಷ್ಟಿಯಿಂದ ನಾವು ಇಲ್ಲಿಗೆ ಬಂದಿದ್ದೆವು ಅಂತ ಗೌರವ್ ದುಃಖ ತೋಡಿಕೊಂಡರು.

    ಕಳೆದ ಭಾನುವಾರ ಮಧ್ಯಾಹ್ನ ತಾಯಿ ಮಗುವಿಗೆ ಊಟ ಮಾಡಿಸುತ್ತಿದ್ದರು. ಈ ಮಧ್ಯೆ ಗ್ಯಾಸ್ ಆಫ್ ಮಾಡಲೆಂದು ಮನೆಯೊಳಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮಗ ಅಲ್ಲಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮಗನಿಗಾಗಿ ಎಲ್ಲಾ ಕಡೆ ಹುಡುಕಾಡಿದರು. ಮಗ ಎಲ್ಲೂ ಕಾಣಿಸದಿದ್ದಾಗ ಕಿಡ್ನಾಪ್ ಆಗಿರಬಹುದೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪೋಷಕರ ದೂರಿನಂತೆ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಮುಚ್ಚಳ ತೆಗೆದು ನೋಡಿದ್ದಾರೆ. ಈ ವೇಳೆ ಕಂದಮ್ಮನ ಶವ ನೀರಿನಲ್ಲಿ ತೇಲುತ್ತಿರುವುದು ಬೆಳಕಿಗೆ ಬಂದಿದೆ. ಮಗುವಿನ ತಲೆಯ ಮೇಲೆ ಗಾಯಗಳಿದ್ದಿದ್ದರಿಂದ ಆತ ಟ್ಯಾಂಕಿನೊಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯ ಈ ಕುರಿತು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.