Tag: platform

  • ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ

    ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ

    – ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಭಾನುವಾರ ದೇಶಕ್ಕೆ ಸಮರ್ಪಣೆ
    – ರಿಮೋಟ್ ಮೂಲಕ ನರೇಂದ್ರ ಮೋದಿ ಚಾಲನೆ

    ಹುಬ್ಬಳಿ: ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ (Shree Siddharoodha Swamiji Railway Station) ಗಿನ್ನಿಸ್ ದಾಖಲೆ (Guinness World Records) ಬರೆದಿದ್ದು, ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ (Railway Platform) ಭಾನುವಾರ ದೇಶಕ್ಕೆ ಸಮರ್ಪಣೆಯಾಗಲಿದೆ. ಧಾರವಾಡದಲ್ಲಿ ನಡೆಯುವ ಐಐಟಿ ಉದ್ಘಾಟನೆ ವೇದಿಕೆ ಕಾರ್ಯಕ್ರಮದಲ್ಲಿ ರಿಮೋಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ಲಾಟ್‌ಫಾರಂಗೆ ಚಾಲನೆ ನೀಡಲಿದ್ದಾರೆ.

     

    ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆಗೊಂಡಿರುವ ಅತಿ ಉದ್ದದ ಪ್ಲಾಟ್‌ಫಾರಂ ಇದಾಗಿದ್ದು, 1,507 ಮೀಟರ್ ಉದ್ದವನ್ನೊಳಗೊಂಡಿದೆ. ಇಷ್ಟು ದಿನ 4 ಪ್ಲಾಟ್‌ಫಾರಂ ಹೊಂದಿದ್ದ ಹುಬ್ಬಳಿ ರೈಲ್ವೆ ನಿಲ್ದಾಣದಲ್ಲಿ ಈಗ ಮತ್ತೆರಡು ಪ್ಲಾಟ್‌ಫಾರಂ ಆರಂಭವಾಗುತ್ತಿದ್ದು, ಒಟ್ಟು 8 ಪ್ಲಾಟ್‌ಫಾರಂಗಳು ಈಗ ಪ್ರಯಾಣಿಕರಿಗೆ ಲಭ್ಯವಿದೆ. ಇದಕ್ಕೂ ಮುನ್ನ ಉತ್ತರ ಪ್ರದೇಶದ ಗೋರಖ್‌ಪುರ್ ರೈಲ್ವೆ ನಿಲ್ದಾಣ ಅತಿ ಉದ್ದದ ಪ್ಲಾಟ್‌ಫಾರಂ ಹೊಂದಿತ್ತು. ಇದನ್ನೂ ಓದಿ: ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಆಗಮನ – ಮಂಡ್ಯ, ಧಾರವಾಡದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

    ಇದೀಗ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರಂ ಹೊಂದಿದ ಹೆಗ್ಗಳಿಕೆಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿ ಪಡೆಯುತ್ತಿದೆ. ನೈರುತ್ವ ರೈಲ್ವೆ ವಲಯದಿಂದ ಈ ಅತಿ ದೊಡ್ಡ ಪ್ಲಾಟ್‌ಫಾರಂ ಸ್ಥಾಪನೆ ಮಾಡಲಾಗಿದೆ. ಇದರ ಜೊತೆಗೆ 2 ಎಲೆಕ್ಟ್ರಿಕಲ್ ಇಂಜಿನ್ ಟ್ರೈನ್, ಮೇಲ್ದರ್ಜೆಗೇರಿದ ಹಳಿ ಸೇರಿದಂತೆ 552 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಕ್ಷಣಗಣನೆ; ಕನ್ನಡದಲ್ಲೇ ಟ್ವೀಟ್‌ ಮಾಡಿ ಮೋದಿ ಬಣ್ಣನೆ

    
    
  • ಬೆಂಗಳೂರಿನ ಐದು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ

    ಬೆಂಗಳೂರಿನ ಐದು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ

    ಬೆಂಗಳೂರು: ನೈರುತ್ಯ ರೈಲ್ವೆ ನಗರದ ಐದು ರೈಲು ನಿಲ್ದಾಣಗಳಲ್ಲಿ(Bengaluru Railway Stations) ಪ್ಲಾಟ್‌ಫಾರ್ಮ್ ಟಿಕೆಟ್(Platform Ticket) ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ.

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕಂಟೋನ್ಮೆಂಟ್, ಯಶವಂತಪುರ, ಕೃಷ್ಣರಾಜಪುರ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣಗಳಲ್ಲಿ 10 ರೂ. ಇದ್ದ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು 20 ರೂ.ಕ್ಕೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ದಸರಾ, ದೀಪಾವಳಿಗೆ ಬೆಂಗಳೂರಿನಿಂದ ವಿಶೇಷ ರೈಲು – ಎಲ್ಲೆಲ್ಲಿಗೆ ಒಮ್ಮೆ ನೋಡಿ

    ದಸರಾ ಹಬ್ಬ(Dasara) ಮತ್ತು ರಜಾ ದಿನಗಳಲ್ಲಿ ಜನದಟ್ಟಣೆ ತಪ್ಪಿಸಲು ಮತ್ತು ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್ ಗಳಲ್ಲಿ ಓಡಾಟಕ್ಕೆ ಅನುಕೂಲಕ್ಕೆ ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರೈಲ್ವೆ ಹಳಿಗೆ ಬಿದ್ದರೂ ವ್ಯಕ್ತಿ ಪವಾಡಸದೃಶ  ಪಾರು

    ರೈಲ್ವೆ ಹಳಿಗೆ ಬಿದ್ದರೂ ವ್ಯಕ್ತಿ ಪವಾಡಸದೃಶ ಪಾರು

    ಲಕ್ನೋ: ರೈಲ್ವೆ ಹಳಿಗೆ ವ್ಯಕ್ತಿಯೋರ್ವ ಬಿದ್ದ ವೇಳೆ ರೈಲು ಆತನ ಮೇಲೆ ಹಾದು ಹೋದರೂ ಪವಾಡಸದೃಶವಾಗಿ ಒಂದು ಸಣ್ಣ ಗಾಯ ಕೂಡ ಇಲ್ಲದೇ ಪ್ರಾಣಾಪಾಯದಿಂದ ಬದುಕಿಬಂದಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಉತ್ತರ ಪ್ರದೇಶದ ಇಟಾವಾದಲ್ಲಿರುವ ಭರ್ತನ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪ್ಲಾಟ್‍ಫಾರ್ಮ್‍ನಲ್ಲಿ ನಿಂತಿದ್ದ ಪ್ರಯಾಣಿಕರೊಬ್ಬರು ಈ ವೀಡಿಯೋವನ್ನು ತಮ್ಮ ಸೆರೆಹಿಡಿದಿದ್ದಾರೆ. ವೀಡಿಯೋದಲ್ಲಿ ರೈಲು ಹೋಗುತ್ತಿದ್ದ ವೇಳೆ ಹಲವಾರು ಮಂದಿ ನಿಂತುಕೊಂಡು ನೋಡುತ್ತಿರುತ್ತಾರೆ. ಸುಮಾರು ಒಂದು ನಿಮಿಷದಚರೆಗೂ ರೈಲು ವ್ಯಕ್ತಿ ಮೇಲೆ ಹಾದು ಹೋಗುತ್ತದೆ. ಆದರೆ ಆತನ ಮೇಲೆ ರೈಲು ಹರಿದು ಹೋಗುವುದು ಕಾಣಿಸುವುದಿಲ್ಲ. ಪ್ಲಾಟ್‍ಫಾರ್ಮ್‍ಗೆ ವಿರುದ್ಧವಾಗಿ ಟ್ರ್ಯಾಕ್‍ನ ಮೂಲೆಯಲ್ಲಿ ವ್ಯಕ್ತಿ ಇರುವುದುವುದು ಕೂಡ ಕಾಣಿಸುವುದಿಲ್ಲ. ಆದರೆ, ರೈಲು ಚಲಿಸದಂತೆ ಜನರು ಕೂಗಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ದಿನೇಶ್ ಗುಂಡೂರಾವ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ನಾಪತ್ತೆ – ಪ್ರಕರಣ ದಾಖಲು

    ರೈಲು ನಿಲ್ದಾಣದಿಂದ ಹೊರಟ ನಂತರ ವ್ಯಕ್ತಿ ಎದ್ದು ತನ್ನ ಕೈ ಮುಗಿಯುತ್ತಾ ತನ್ನನ್ನು ಜೀವಂತವಾಗಿರಿಸಿದ ದೇವರಿಗೆ ಧನ್ಯವಾದ ಹೇಳುತ್ತಾನೆ. ಈ ವೇಳೆ ಫ್ಲಾಟ್‍ಫಾರ್ಮ್‍ನಲ್ಲಿ ನಿಂತಿದ್ದ ಜನರು ಕಕ್ಕಾಬಿಕ್ಕಿಯಾಗಿ ಆಶ್ಚರ್ಯದಿಂದ ನೋಡುತ್ತಾ ನಿಟ್ಟಿಸಿರು ಬಿಟ್ಟು ಮುಣದೆ ಸಾಗಿದರು. ಇದೇ ವೇಳೆ ರೈಲ್ವೆ ಹಳಿಯ ಮೂಲೆಯಲ್ಲಿ ಬಿದ್ದಿದ್ದ ಸೂಟ್‍ಕೇಸ್ ಹಾಗೂ ಚೀಲವನ್ನು ತೆಗೆದುಕೊಂಡು ವ್ಯಕ್ತಿ ಹೊರುತ್ತಾನೆ. ಸದಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸಾವಿತ್ರಿಬಾಯಿ ಫುಲೆ ಪಠ್ಯ ಕೈ ಬಿಟ್ಟಿಲ್ಲ – ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಕಾಂಗ್ರೆಸ್ಸಿಗರ ದಿನಚರಿಯಾಗಿದೆ: ಬಿ.ಸಿ ನಾಗೇಶ್

    Live Tv
    [brid partner=56869869 player=32851 video=960834 autoplay=true]

  • 10 ರೂ.ಯಿಂದ 50 ರೂಪಾಯಿ ಆಯ್ತು ಪ್ಲಾಟ್‍ಫಾರಂ ಟಿಕೆಟ್

    10 ರೂ.ಯಿಂದ 50 ರೂಪಾಯಿ ಆಯ್ತು ಪ್ಲಾಟ್‍ಫಾರಂ ಟಿಕೆಟ್

    – ರೈಲ್ವೇ ನಿಲ್ದಾಣದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಕ್ರಮ

    ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾದ ಹಿನ್ನೆಲೆ ಮುಂಬೈ ಮಹಾನಗರ ವಿಭಾಗ ಕೆಲವು ನಿರ್ಧಾರಗಳನ್ನ ತೆಗೆದುಕೊಂಡಿದೆ. ನಗರದ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಟ್‍ಫಾರಂ ಟಿಕೆಟ್ ದರವನ್ನು 10 ರೂ. ಯಿಂದ 50 ರೂ.ವರೆಗೆ ಏರಿಕೆ ಮಾಡಲಾಗಿದೆ.

    ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಲೋಕಮಾನ್ಯ ತಿಲಕ್ ಟರ್ಮಿನಸ್, ಥಾಣೆ, ಕಲ್ಯಾಣ್, ಪನ್ವೇಲ್ ಮತ್ತು ಭಿವಂಡಿ ನಿಲ್ದಾಣಗಳಲ್ಲಿ ಹೊಸ ದರ ಅನ್ವಯಾಗಲಿದೆ. ಜೂನ್ 15ರವರೆಗೆ ಈ ಹೊಸ ದರ ಇರಲಿದೆ ಎಂದು ಮಧ್ಯೆ ರೈಲ್ವೇಯ ಜನಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಹೇಳಿದ್ದಾರೆ.

    ಕೆಲ ದಿನಗಳ ಹಿಂದೆ ರೈಲ್ವೇ ಸಚಿವಾಲಯ ಸಹ ಅಲ್ಪದೂರದ ಪ್ರಯಾಣಿಕರ ನಿಯಂತ್ರಣಕ್ಕಾಗಿ ದರ ಏರಿಕೆಯ ಮೊರೆ ಹೋಗಿದೆ. ಲೋಕಲ್ ಪ್ಯಾಸೆಂಜರ್ ರೈಲುಗಳ ಅಲ್ಪದೂರದ ಟಿಕೆಟ್ ದರ ಸಹ ಹೆಚ್ಚಿಸಲಾಗಿದೆ.

    ಸೋಮವಾರ 6,397 ಹೊಸ ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು, 78,825 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ 30 ಸೋಂಕಿತರು ಮಹಾಮಾರಿಗೆ ಪ್ರಾಣ ಕಳೆದುಕೊಂಡಿದ್ದು, ಇದುವರೆಗೂ 52,184 ಜನರು ಸಾವನ್ನಪ್ಪಿದ್ದಾರೆ.

  • ಅಂಗಡಿಗಳಿಗೆ ಗೂಡ್ಸ್ ರೈಲು ಡಿಕ್ಕಿ – ಕಾಂಪೌಂಡ್ ಛಿದ್ರ, 10 ಅಡಿ ದೂರ ಸರಿದ ಬುಕ್‍ಸ್ಟಾಲ್

    ಅಂಗಡಿಗಳಿಗೆ ಗೂಡ್ಸ್ ರೈಲು ಡಿಕ್ಕಿ – ಕಾಂಪೌಂಡ್ ಛಿದ್ರ, 10 ಅಡಿ ದೂರ ಸರಿದ ಬುಕ್‍ಸ್ಟಾಲ್

    ಯಾದಗಿರಿ: ಗೂಡ್ಸ್ ರೈಲೊಂದು ಹಳಿ ಬಿಟ್ಟು ಪ್ಲಾಟ್‍ಫಾರ್ಮ್ ಮೇಲೆ ಬಂದ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲು ಗುದ್ದಿದ ರಭಸಕ್ಕೆ ನಿಲ್ದಾಣದ ಕಾಂಪೌಂಡ್ ಛಿದ್ರ ಛಿದ್ರವಾಗಿದ್ದು, ಅಂಗಡಿ ಹಾಗೂ ಬುಕ್ ಸ್ಟಾಲ್‍ಗೆ ಹಾನಿಯಾಗಿದೆ.

    ರೈಲಿನಿಂದ ಗೂಡ್ಸ್ ಖಾಲಿ ಮಾಡುವಾಗ ಈ ಘಟನೆ ನಡೆದಿದೆ. ಲೊಕೋ ಪೈಲಟ್ ರೈಲನ್ನು ರಿವರ್ಸ್ ತರುತ್ತಿದ್ದಾಗ ರೈಲು ಹಳಿ ದಾಟಿ ಪ್ಲಾಟ್‍ಫಾರ್ಮ್ ಮೇಲೆ ಬಂದಿದೆ. ಹಿಂಬದಿಯಿಂದ ನಿಲ್ದಾಣದ ಕಾಂಪೌಂಡ್‍ಗೆ ಡಿಕ್ಕಿ ಹೊಡೆದು, ಬಳಿಕ ಪ್ಲಾಟ್‍ಫಾರ್ಮ್ ಮೇಲಿದ್ದ ಬುಕ್ ಸ್ಟಾಲ್‍ಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಕಾಂಪೌಂಡ್ ಒಡೆದು ಬಿದ್ದಿದ್ದು, ಇದ್ದ ಸ್ಥಳದಿಂದ ಸುಮಾರು 10 ಅಡಿ ದೂರಕ್ಕೆ ಬುಕ್ ಸ್ಟಾಲ್ ಅನ್ನು ರೈಲು ತಳ್ಳಿದೆ.

    ಅದೃಷ್ಟವಶಾತ್ ಘಟನೆ ವೇಳೆ ಅಂಗಡಿಯಲ್ಲಿ ಯಾರು ಇರಲಿಲ್ಲ. ಹಾಗೂ ಪ್ರಯಾಣಿಕರು ಕೂಡ ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಸಿಗ್ನಲ್ ಹಾಗೂ ಸ್ಟಾಪ್ ಪಾಯಿಂಟ್ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮಂಡ್ಯದಲ್ಲಿ ಸೃಷ್ಟಿಯಾಯ್ತು ಒಂದೇ ಬಾರಿ ಐನೂರು ಜನ ನಿಲ್ಲಬಹುದಾದ ತೇಲುವ ವೇದಿಕೆ!

    ಮಂಡ್ಯದಲ್ಲಿ ಸೃಷ್ಟಿಯಾಯ್ತು ಒಂದೇ ಬಾರಿ ಐನೂರು ಜನ ನಿಲ್ಲಬಹುದಾದ ತೇಲುವ ವೇದಿಕೆ!

    ಮಂಡ್ಯ: ಪ್ರಸಿದ್ಧ ಪ್ರವಾಸಿ ತಾಣ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಕೆರೆ ತೊಣ್ಣೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ತೊಣ್ಣೂರು ಕೆರೆ ಉತ್ಸವ ನಡೆಯಲಿದ್ದು, ಉತ್ಸವಕ್ಕಾಗಿ ಕೆರೆಯ ನಡುವೆ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.

    ಇಂದು ಸಂಜೆ ಏಳು ಗಂಟೆ ಸುಮಾರಿಗೆ ತೊಣ್ಣೂರು ಕೆರೆ ಉತ್ಸವವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್.ಪುಟ್ಟರಾಜು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಕೆರೆಯ ಸುತ್ತಮುತ್ತ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

    ಕೆರೆಯ ಸಮೀಪವೇ ಇರುವ ಬೆಟ್ಟಗುಡ್ಡಗಳೂ ಕೂಡ ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿವೆ. ಕೆರೆಯ ನಡುವೆ ಹಾಕಿರುವ ವೇದಿಕೆಯಲ್ಲಿ ಏಕಕಾಲಕ್ಕೆ ಐನೂರು ಜನ ಕುಳಿತುಕೊಳ್ಳಬಹುದಾಗಿದೆ. ಮೊದಲು ಕೆರೆಗೆ ಗಂಗಾಪೂಜೆ ಸಲ್ಲಿಸಲಾಗುತ್ತದೆ.

    ಮೂರು ದಿನಗಳ ಕಾಲ ಕನ್ನಡದ ಪ್ರಖ್ಯಾತ ಗಾಯಕರು, ಸಿನೆಮಾ ನಟ, ನಟಿಯರು, ಜಾನಪದ ಕಲಾವಿದರು ಕೆರೆಯ ನಡುವೆ ನಿರ್ಮಿಸಿರುವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವುದರ ಮೂಲಕ, ಕಲಾ ರಸಿಕರ ಮನ ತಣಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕಾಗಿ ಪ್ರವಾಸಿ ತಾಣ ತೊಣ್ಣೂರು ಕೆರೆ ಸರ್ವ ಅಲಂಕೃತವಾಗಿದ್ದು, ಹೊಸ ಲೋಕವೇ ಧರೆಗಿಳಿದಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ-ವಿಡಿಯೋ ನೋಡಿ

    ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ-ವಿಡಿಯೋ ನೋಡಿ

    ಮುಂಬೈ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಸ್ಲಿಪ್ ಆಗಿ ರೈಲಿನ ಅಡಿಗೆ ಸಿಲುಕುತ್ತಿದ್ದ ಮಧ್ಯ ವಯಸ್ಸಿನ ಮಹಿಳೆಯನ್ನು ಪ್ಲಾಟ್ ಫಾರಂ ನಲ್ಲಿದ್ದ ಕೆಲ ಪ್ರಯಾಣಿಕರು ರಕ್ಷಿಸಿದ್ದಾರೆ.

    ಈ ಘಟನೆಯು ಬೆಳಗ್ಗೆ ಸುಮಾರು 11:45ಕ್ಕೆ ಮುಂಬೈ ನಗರದ ಕುರ್ಲಾ ನಿಲ್ದಾಣದ ಪ್ಲಾಟ್ ಫಾರಂ 1 ರಲ್ಲಿ ನಡೆದಿದೆ.

    ಮಹಿಳೆ ತಮ್ಮ ಮಗನ ಜೊತೆ ಬಂದಿದ್ದರು. ಚಲಿಸುತ್ತಿದ್ದ ರೈಲಲ್ಲಿ ಮೊದಲಿಗೆ ಮಗನನ್ನು ಬೋಗಿಗೆ ಹತ್ತಿಸಿದ್ದಾರೆ. ನಂತರ ತಾವು ಸಹ ಹತ್ತಲು ಹೋದಾಗ ಆಯ ತಪ್ಪಿ ರೈಲಿನ ಮೆಟ್ಟಿಲಿಗೂ ಪ್ಲಾಟ್ ಫಾರಂಗೂ ನಡುವೆ ಇರುವ ಗ್ಯಾಪ್ ಗೆ ಜಾರಿದ್ದಾರೆ. ಇದನ್ನೂ ಓದಿ:ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

    ಮಹಿಳೆ ಜಾರಿ ರೈಲಿನಡಿ ಸಿಲುಕುವಷ್ಟರಲ್ಲಿಯೇ ಪ್ಲಾಟ್ ಫಾರಂನಲ್ಲಿದ್ದ ಕೆಲವರು ರಕ್ಷಣೆ ಮಾಡಿದ್ದಾರೆ. ಈ ಎಲ್ಲ ದೃಶ್ಯಗಳು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲಿನಲ್ಲಿ ಹತ್ತಿದ್ದ ಮಹಿಳೆಯ ಮಗನನ್ನು ಆರ್ ಪಿಎಫ್ ಪೊಲೀಸರು ತಾಯಿಯೊಂದಿಗೆ ಸೇರಿಸಿದ್ದಾರೆ.

     

  • ರೈಲಿನ ಎಂಜಿನ್ ತಾಗಿ ಪ್ಲಾಟ್‍ಫಾರ್ಮ್ ಪುಡಿಪುಡಿ

    ರೈಲಿನ ಎಂಜಿನ್ ತಾಗಿ ಪ್ಲಾಟ್‍ಫಾರ್ಮ್ ಪುಡಿಪುಡಿ

    ಕಲಬುರಗಿ: ರೈಲ್ವೇ ಎಂಜಿನ್ ಪ್ಲಾಟ್‍ಫಾರ್ಮ್ ಗೋಡೆಗೆ ತಗುಲಿ ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಇಂದು ಮುಂಜಾನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಸೊಲ್ಲಾಪುರದಿಂದ ವಾಡಿ ಮಾರ್ಗವಾಗಿ ಗುಂತಕಲ್ ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್ ಪ್ಲಾಟ್‍ಫಾರ್ಮ ಗೋಡೆಗೆ ತಗುಲಿದೆ. ಹೀಗಾಗಿ ಗೋಡೆ ಕಲ್ಲುಗಳು ಹಳಿ ಮೇಲೆ ಬಂದು ಬಿದ್ದಿವೆ. ಜೊತೆಗೆ ದೊಡ್ಡ ಸದ್ದು ಕೂಡಾ ಬಂದಿದೆ. ಹೀಗಾಗಿ ಕೆಲ ಪ್ರಯಾಣಿಕರು ಆತಂಕಗೊಂಡು ಬೋಗಿಯಿಂದ ಜಿಗದಿದ್ದಾರೆ.

    ಪ್ಲಾಟ್‍ಫಾರ್ಮ್ ಗೋಡೆಯ ಹೊರಚಾಚಿಕೊಂಡ ಕಲ್ಲು ಎಂಜಿನ್ ಗೆ ತಗುಲಿದೆ. ವಾಡಿ ಪ್ಲಾಟ್‍ಫಾರ್ಮ್ ಹಳೆಯದಾಗಿದ್ದು, ಹೊಸ ಮಾದರಿಯ ರೈಲು ಎಂಜಿನ್ ಇಂದು ಬಂದಿದ್ದರಿಂದ ಈ ಘಟನೆ ನಡೆದಿದೆ ಅಂತ ಹೇಳಲಾಗಿದೆ. ಘಟನೆ ನಂತರ ಪ್ಲಾಟ್‍ಫಾರ್ಮ್ ಸರಿಗೊಳಿಸಿ ರೈಲು ಹೋಗಲು ಗ್ಯಾಂಗ್ ಮನ್ ಗಳು ಅವಕಾಶ ಮಾಡಿಕೊಟ್ಟಿದ್ದಾರೆ.

  • ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಮುಂಬೈ: ಮಹಿಳೆಯೊಬ್ಬರು ಸೋಮವಾರ ರಾತ್ರಿ ನಗರದ ದಾದರ್ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

    26 ವರ್ಷದ ಸಲ್ಮಾ ಶೇಖ್ ಮಗುವಿಗೆ ಜನ್ಮ ನೀಡಿದ ತಾಯಿ. ರೈಲು ಸಿಎಸ್‍ಟಿ ರೈಲ್ವೆ ನಿಲ್ದಾಣದಿಂದ ದಾದರ್ ಮಾರ್ಗವಾಗಿ ಕಲ್ಯಾಣ್ ಗೆ ತೆರಳುತ್ತಿತ್ತು. ರೈಲು ದಾದರ್ ನಿಲ್ದಾಣದ ಮೂರನೇ ಪ್ಲಾಟ್‍ಫಾರಂ ಗೆ ಆಗಮಿಸಿದಾಗ ಸಲ್ಮಾ ಅವರು ಮಗುವಿಗೆ ಜನ್ಮ ನೀಡಿದ್ದಾರೆ.

    ಕೂಡಲೇ ಮಗು ಮತ್ತು ತಾಯಿಯನ್ನು ಸಮೀಪದ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸಲ್ಮಾ ಅವರನ್ನು ಮೊದಲಿಗೆ ನಿಲ್ದಾಣದಲ್ಲಿರುವ `ಒನ್ ರೂಪಿ ಕ್ಲಿನಿಕ್’ಗೆ ದಾಖಲಿಸಲಾಗಿತ್ತು. ಈ ಕ್ಲಿನಿಕ್ ನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ತುರ್ತು ಸಂದರ್ಭಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ.

  • ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ಗೆ ಕಾರು ನುಗ್ಗಿಸಿದ ಮಾಜಿ ಅಂಡರ್ 19 ಆಟಗಾರ

    ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ಗೆ ಕಾರು ನುಗ್ಗಿಸಿದ ಮಾಜಿ ಅಂಡರ್ 19 ಆಟಗಾರ

    ಮುಂಬೈ: ಕುಡಿದ ಮತ್ತಿನಲ್ಲಿ ಯುವಕನೊಬ್ಬ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರ್ಮ್‍ಗೆ ಕಾರು ನುಗ್ಗಿಸಿದ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

    ಇಂದು ಬೆಳಿಗ್ಗೆ 25 ವರ್ಷದ ಯುವಕ ಹರ್ಮೀತ್ ಸಿಂಗ್ ಅಂಧೇರಿ ರೈಲ್ವೆ ವಿಲ್ದಾಣಕ್ಕೆ ಕಾರು ನುಗಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇಂದು ಬೆಳಿಗ್ಗೆ 7.15ರ ವೇಳೆಗೆ ನಿಲ್ದಾಣದಲ್ಲಿ ಪ್ರಯಾಣಿಕರು ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಹರ್ಮೀತ್ ಸಿಂಗ್ ತನ್ನ ಹೂಂಡೇ ಕಾರನ್ನ ಪ್ಲಾಟ್‍ಫಾರ್ಮ್ ನಂಬರ್ 1ಕ್ಕೆ ನುಗ್ಗಿಸಿದ್ದಾನೆ. ವೇಗವಾಗಿ ಕಾರು ಬಂದಿದ್ದನ್ನು ನೋಡಿ ಜನ ಗಾಬರಿಗೊಂಡಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಗಲಾಟೆ ಕೂಡ ನಡೆದಿದೆ.

    ಸದ್ಯಕ್ಕೆ ಮುಂಬೈ ಪೊಲೀಸರು ಹರ್ಮೀತ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹರ್ಮೀತ್‍ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

    ಹರ್ಮೀತ್ ಅಂಡರ್ 19 ಕ್ರಿಕೆಟ್ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.