Tag: plates

  • ತಟ್ಟೆಗಾಗಿ ಮುಗಿಬಿದ್ದ ಮತದಾರರು

    ತಟ್ಟೆಗಾಗಿ ಮುಗಿಬಿದ್ದ ಮತದಾರರು

    ಮೈಸೂರು: ತಟ್ಟೆಗಾಗಿ ಮತದಾರರು ಮುಗಿಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಇಂದು ಮೈಸೂರಿನ ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕಿನ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಇತ್ತು. ಅಭ್ಯರ್ಥಿಗಳು ತಮ್ಮ ಚುನಾವಣಾ ಗುರುತುಗಳನ್ನೇ ಉಡುಗೊರೆಯಾಗಿ ಹಂಚಿದ್ದಾರೆ.

    ಮತದಾರರನ್ನು ಸೆಳೆಯಲು ಬಹಿರಂಗವಾಗಿ ರಸ್ತೆಯಲ್ಲೇ ತಟ್ಟೆ, ಬಲ್ಪ್, ಕಾಯಿ ಹಂಚಿಕೆ ಮಾಡಿದ್ದಾರೆ. ಮೈಸೂರು ವಸ್ತುಪ್ರದರ್ಶನದ ಆವರಣದ ಒಳಗೆ ಮತದಾನ ನಡೆಯುತ್ತಿದೆ. ಹೀಗಾಗಿ ಹೊರಗಡೆ ಅಭ್ಯರ್ಥಿಗಳು ಮತದಾರರಿಗೆ ರಾಜರೋಷವಾಗಿ ಉಡುಗೊರೆ ಹಂಚಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಂದ ಮತದಾರರು ಉಡುಗೊರೆ ಪಡೆದು ಮತ ಹಾಕಲು ಹೋಗಿದ್ದಾರೆ.

    ನಡು ರಸ್ತೆಯಲ್ಲೇ ಈ ಚುನಾವಣಾ ಅಕ್ರಮಗಳು ನಡೆಯುತ್ತಿದ್ದು, ಬ್ಯಾಂಕ್ ಚುನಾವಣೆ ಅಂತ ಯಾರೂ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ.

  • ಊಟದ ತಟ್ಟೆಯನ್ನು ಚರಂಡಿ ನೀರಲ್ಲಿ ತೊಳೆದ ವಿದ್ಯಾರ್ಥಿಗಳು

    ಊಟದ ತಟ್ಟೆಯನ್ನು ಚರಂಡಿ ನೀರಲ್ಲಿ ತೊಳೆದ ವಿದ್ಯಾರ್ಥಿಗಳು

    ಭೋಪಾಲ್: ಮಧ್ಯ ಪ್ರದೇಶದ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಚರಂಡಿ ನೀರಿನಲ್ಲಿ ತಟ್ಟೆ ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಹಿಂದೆ ಮಧ್ಯ ಪ್ರದೇಶದ ಶಾಲಾ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆ ಮಾಡುವುದಕ್ಕೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದೇ ಬೆನ್ನಲ್ಲಿ ಮಕ್ಕಳು ತಟ್ಟೆಯನ್ನು ಚರಂಡಿ ನೀರಿನಲ್ಲಿ ತೊಳೆದಿರುವ ಪ್ರಕರಣ ಬಾರೀ ಚರ್ಚೆಗೆ ಗ್ರಾಸವಾಗಿದೆ.

    ರಾಜ್ಯದ ಸಾಗರ್ ಜಿಲ್ಲೆಯ ಮಾಕ್ರೋನಿಯಾ ಪ್ರದೇಶದಲ್ಲಿ ಈ ನಡೆದಿದೆ. ವಿದ್ಯಾರ್ಥಿಗಳ ಕೈಯಲ್ಲಿ ಕೆಲಸ ಮಾಡಿಸಿ ನಿಯಮವನ್ನು ಉಲ್ಲಂಘಿಸಲಾಗಿದೆ. ಮಕ್ಕಳಿಗೆ ಬಿಸಿಯೂಟವನ್ನು ಪೂರೈಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳೇ ಊಟದ ಬಳಿಕ ಮಕ್ಕಳ ತಟ್ಟೆಗಳನ್ನು ತೊಳೆಯುವುದು, ಉಳಿದ ಎಲ್ಲಾ ನೈರ್ಮಲ್ಯ ಕ್ರಮಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆದರೆ ಈ ನಿಯಮವನ್ನು ಶಾಲೆ ನಿರ್ಲಕ್ಷಿಸಿದೆ.

    ಮಕ್ಕಳು ಚರಂಡಿ ನೀರಿನಲ್ಲಿ ತಟ್ಟೆ ತೊಳೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಚ್.ಪಿ. ಕುರ್ಮಿ ಎಚ್ಚೆತ್ತುಕೊಂಡಿದ್ದು, ಈ ಘಟನೆ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಂಪೂರ್ಣ ಮಾಹಿತಿ ನೀಡುವಂತೆ ಆದೇಶ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಖಾಡ್ವಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಶಾಲಾ ಶೌಚಾಲಯಗಳನ್ನು ಸ್ವಚ್ಛಗೊಳಿಸಿರುವ ಘಟನೆ ನಡೆದಿತ್ತು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ 5 ಅಂಕ ಹೆಚ್ಚು ಕೊಡುವುದಾಗಿ ಹೇಳಿ ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳ ಕೈಯಲ್ಲಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಓರ್ವ ವಿದ್ಯಾರ್ಥಿ ಹೇಳಿದ್ದನು. ಆದರೆ ಈ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ಮಾತನಾಡಿ, ಮಕ್ಕಳು ಅವರ ಶಾಲೆ ಕೆಲಸ ಮಾಡಿದರೆ ತಪ್ಪಿಲ್ಲ. ಆದರೆ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಬಲವಂತವಾಗಿ ಕೆಲಸ ಮಾಡಿಸುವುದು ತಪ್ಪು ಎಂದು ಹೇಳಿದ್ದರು.