Tag: Plastic Sheet

  • ಕೋವಿಡ್-19ನಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಬೈಕ್‍ಗೆ ಮಾಡಿದ್ದೇನು ಗೊತ್ತಾ?

    ಕೋವಿಡ್-19ನಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಬೈಕ್‍ಗೆ ಮಾಡಿದ್ದೇನು ಗೊತ್ತಾ?

    ಕೊರೊನಾ ವೈರಸ್ ಎರಡನೇ ಅಲೆ ವಿರುದ್ಧ ದೇಶವು ಹೋರಾಡುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ರೋಗದಿಂದ ಪಾರಾಗಲು ತಮ್ಮದೇ ಆದ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಸದ್ಯ ವ್ಯಕ್ತಿಯೊರ್ವ ಕೋವಿಡ್‍ನಿಂದ ತನ್ನನ್ನು ರಕ್ಷಿಸಿಕೊಳ್ಳಲು ಟಾರ್ಪಲ್ ಮಾದರಿ ವೈಟ್ ಶೀಟ್‍ನನ್ನು ಬೈಕ್ ಸುತ್ತ ಹೊದಿಸಿರುವ(ಬಬಲ್ ಸೇವೆ) ವೀಡಿಯೋವೊಂದು ಸೋಶಿಯಲ್ ಮೀಡಿದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಬಬಲ್ ಬೈಕ್ ಓಡಿಸುತ್ತಿರುವುದನ್ನು ಕಾಣಬಹುದಾಗಿದೆ. ವ್ಯಕ್ತಿಯು ಬೈಕ್‍ನಲ್ಲಿ ಕಬ್ಬಿಣದ ರಾಡ್‍ಗಳನ್ನು ಬೈಕ್ ಸುತ್ತಾ ಫಿಟ್ ಮಾಡಿದ್ದು, ಅದರ ಸುತ್ತಾ ಬಿಳಿ ಪ್ಲಾಸ್ಟಿಕ್ ಶೀಟ್‍ನನ್ನು ಟಾರ್ಪಲ್ ಮಾದರಿ ಹೊದಿಸಿದ್ದಾನೆ.

    ಸದ್ಯ ಈ ವೀಡಿಯೋ ಸೋಶಿಯಕ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ ಹಾಗೂ ಹಲವಾರು ಕಮೆಂಟ್‍ಗಳು ಹರಿದು ಬರುತ್ತಿದೆ. ಇದನ್ನು ಓದಿ: ಕೊರೊನಾ ಪರೀಕ್ಷೆಗೆ ಬಂದ ವೈದ್ಯಕೀಯ ತಂಡದ ಮೇಲೆ ಗ್ರಾಮಸ್ಥರಿಂದ ಹಲ್ಲೆಗೆ ಯತ್ನ