Tag: Plastic Pipe

  • ಪ್ಲಾಸ್ಟಿಕ್ ಪೈಪ್ ಸಂಗ್ರಹಿಸಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ

    ಪ್ಲಾಸ್ಟಿಕ್ ಪೈಪ್ ಸಂಗ್ರಹಿಸಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ

    – ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ಪೈಪ್‍ಗಳು ಬೆಂಕಿಗಾಹುತಿ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ನಿಂದ ಬಾಗಿಲು ಮುಚ್ಚಿದ್ದ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಇದರಿಂದ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ಪೈಪ್‍ಗಳು ಬೆಂಕಿಗಾಹುತಿಯಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಾದವರದ ನೈಸ್ ರಸ್ತೆಯ ಸಮೀಪದ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಅಗ್ನಿ ಅವಘಡ ಉಂಟಾಗಿದೆ ಎನ್ನಲಾಗಿದೆ.

    ಪ್ಲಾಸ್ಟಿಕ್ ಪೈಪ್‍ಗಳಿದ್ದ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಬೆಂಕಿ ಗಂಟೆಗಟ್ಟಲೆ ಧಗಧಗಿಸಿದೆ. ಸ್ಥಳಕ್ಕೆ ಬಂದ ಎರಡು ಅಗ್ನಿಶಾಮಕ ವಾಹನದಿಂದ ಬೆಂಕಿನಂದಿಸುವ ಕಾರ್ಯ ನಡೆದಿದೆ. ಆದರೆ ಪ್ಲಾಸ್ಟಿಕ್ ಹಾಗೂ ಬಿಸಿಲು ಹೆಚ್ಚಾಗಿದ್ದ ಕಾರಣ ಅಗ್ನಿಶಾಮಕ ಸಿಬ್ಬಂದಿ ಬೆಂಕಿನಂದಿಸಲು ಹರಸಾಹಸ ಪಟ್ಟಿದ್ದರು.

    ಲಾಕ್‍ಡೌನ್ ಆದೇಶದಿಂದ ಮನೆಯಲ್ಲಿದ್ದ ಜನರು ಗೋದಾಮಿಗೆ ಬೆಂಕಿ ಬಿದ್ದಿರುವ ವಿಚಾರ ಕೇಳಿ ಕೊರೊನಾ ಆತಂಕ ಹಾಗೂ ಸಾಮಾಜಿಕ ಅಂತರವನ್ನೂ ಮರೆತು ನೂರಾರು ಜನರು ಗುಂಪುಗೂಡಿದ್ದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.