Tag: plastic ban

  • ಆ. 11ರಿಂದ ಕಾಶಿ ವಿಶ್ವನಾಥ ಧಾಮ ಪ್ಲಾಸ್ಟಿಕ್ ಮುಕ್ತ

    ಆ. 11ರಿಂದ ಕಾಶಿ ವಿಶ್ವನಾಥ ಧಾಮ ಪ್ಲಾಸ್ಟಿಕ್ ಮುಕ್ತ

    – ವಾರಾಣಸಿಯಲ್ಲಿ ಪರಿಸರ ಸಂರಕ್ಷಣೆಗೆ ಮಹತ್ವದ ಕ್ರಮ

    ಲಕ್ನೋ: ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಆಗಸ್ಟ್ 11 ರಿಂದ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ (Shri Kashi Vishwanath Temple) ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು (Plastic Ban) ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮಂದಿರದ ಆಡಳಿತ ಮಂಡಳಿ ಘೋಷಿಸಿದೆ.

    ಈ ನಿರ್ಧಾರವನ್ನು ಧಾಮದ ಪಾವಿತ್ರ‍್ಯತೆ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ. ಆಡಳಿತ ಮಂಡಳಿಯು ಧಾಮದ ಒಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಪ್ರದರ್ಶಿಸಿದೆ. ಈ ಪೋಸ್ಟರ್‌ಗಳಲ್ಲಿ, ಆಗಸ್ಟ್ 11 ರಿಂದ ಯಾವುದೇ ರೀತಿಯ ಪ್ಲಾಸ್ಟಿಕ್ ಪಾತ್ರೆಗಳೊಂದಿಗೆ ಮಂದಿರಕ್ಕೆ ಪ್ರವೇಶಿಸಲು ಅನುಮತಿಯಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ರೀತಿಯಾಗಿ ಭಕ್ತರಿಗೆ ಧಾಮದ ಪಾವಿತ್ರ‍್ಯತೆ, ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣವನ್ನು ಕಾಪಾಡಲು ಸಹಕರಿಸುವಂತೆ ವಿನಂತಿಸಿಕೊಂಡಿದೆ. ಇದನ್ನೂ ಓದಿ: ಮುಡಾ ಹಗರಣ ನಿವೃತ್ತ ನ್ಯಾ. ಪಿ.ಎನ್.ದೇಸಾಯಿ ಆಯೋಗದ ವರದಿ ಸಲ್ಲಿಕೆ

    ಮಂದಿರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್ ಮಿಶ್ರಾ ಮಾತನಾಡಿ, ಕಾಶಿ ವಿಶ್ವನಾಥ ಧಾಮ ಕೇವಲ ಆಧ್ಯಾತ್ಮಿಕ ಕೇಂದ್ರವಾಗಿರದೆ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಮಾದರಿಯಾಗಬೇಕು. ಈ ಉಪಕ್ರಮವು ಪವಿತ್ರ ವಾತಾವರಣವನ್ನು ಹೊಂದಿರುವ ಧಾಮವನ್ನು ಮಾಲಿನ್ಯ ಮುಕ್ತವಾಗಿರಿಸುವ ಗುರಿಯನ್ನು ಹೊಂದಿದೆ. ಸಾವನ್ ತಿಂಗಳಿನ ಮೊದಲ ಸೋಮವಾರದಿಂದ ಭಕ್ತರಿಗೆ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಇತರ ಕಾಣಿಕೆಗಳು ಹಾಗೂ ಪಾಸ್ಟಿಕ್ ಬಾಟಲಿಗಳಲ್ಲಿ ತರದಂತೆ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯವರ ಅಧಿಕಾರ ದುರ್ಬಳಕೆ ಬಗ್ಗೆ ಜನರಿಗೆ ಹೇಳಲು ರಾಹುಲ್ ಗಾಂಧಿ ಪ್ರತಿಭಟನೆ: ಡಿಕೆ ಶಿವಕುಮಾರ್

    ಈ ನಿಷೇಧದಿಂದ ಭಕ್ತರು ಶಿವಲಿಂಗಕ್ಕೆ ಜಲಾರ್ಪಣೆ ಮಾಡಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಲು ಸಾಧ್ಯವಿಲ್ಲ. ಬದಲಿಗೆ, ಲೋಹದ ಪಾತ್ರೆಗಳು ಅಥವಾ ಇತರ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲು ಸೂಚಿಸಲಾಗಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ವಾರಾಣಸಿ ಮಹಾನಗರ ಪಾಲಿಕೆ, ಹಲವಾರು ಎನ್‌ಜಿಒಗಳು ಮತ್ತು ಸ್ಥಳೀಯ ಸ್ವಯಂಸೇವಕರು ಸಹಕಾರ ನೀಡುತ್ತಿದ್ದಾರೆ. ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ಕೇಸ್‌ನಿಂದ ನನ್ನ ಜೀವನವೇ ಹಾಳಾಯ್ತು: ಪ್ರಜ್ಞಾ ಠಾಕೂರ್

    2024ರ ಡಿಸೆಂಬರ್‌ನಲ್ಲಿ ನಡೆದ ಮಂದಿರದ ಟ್ರಸ್ಟ್ನ ಸಭೆಯಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್‌ನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಆದರೆ, ಹಾಲು, ಹೂವು-ಹಾರಗಳನ್ನು ತರಲು ಭಕ್ತರು ಪ್ಲಾಸ್ಟಿಕ್ ಚೀಲ ಹಾಗೂ ಬಾಟಲಿಗಳನ್ನು ಬಳಸುತ್ತಿದ್ದರು. ಈಗ ಈ ನಿಷೇಧವನ್ನು ಆಗಸ್ಟ್ 11ರಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಮಂದಿರದ ಆಡಳಿತ ಮಂಡಳಿಯು ತಿಳಿಸಿದೆ.

    ಸದ್ಯ ಆಗಸ್ಟ್ 9ರ ವರೆಗೆ ಭಕ್ತಾಧಿಗಳು ಧಾಮಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ತರದಂತೆ ತಡೆಯಲು ಪ್ರಯತ್ನಿಸಲಾಗುವುದು. ಆಗಸ್ಟ್ 10ರಿಂದ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳು ಅಂದರೆ ಹಾಲಿನ ಬಾಟಲಿ ಅಥವಾ ಹೂವು-ಹಾರಗಳ ಪ್ಲಾಸ್ಟಿಕ್ ಬುಟ್ಟಿಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

  • ಚಿಕ್ಕಬಳ್ಳಾಪುರ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಪಣ: ಪ್ರದೀಪ್ ಈಶ್ವರ್

    ಚಿಕ್ಕಬಳ್ಳಾಪುರ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಪಣ: ಪ್ರದೀಪ್ ಈಶ್ವರ್

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಪಣ ತೊಡಲಾಗಿದೆ. ಕಾನೂನು ಮೀರಿ ಯಾರೇ ನಡೆದುಕೊಂಡರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಪುರ (Chikkaballapura) ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಪ್ರದೀಪ್ ಈಶ್ವರ್ (Pradeep‌ Eshwar) ಎಚ್ಚರಿಕೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ತಾಲೂಕು ಕಚೇರಿಯಲ್ಲಿ ನೂತನ ಶಾಸಕರ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಪ್ರತಿದಿನ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ನಮಸ್ತೆ ಚಿಕ್ಕಾಬಳ್ಳಾಪುರ ಕಾರ್ಯಕ್ರಮ ಮಾಡುತ್ತಿದ್ದೇನೆ. ಇನ್ನೂ ಜನರಿಗೆ ಹತ್ತಿರವಾಗುವ ಸಲುವಾಗಿ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಶಾಸಕರ ಕಚೇರಿಯಲ್ಲಿ ಸಹ ಜನರ ಸಮಸ್ಯೆ ಆಲಿಸುತ್ತೇನೆ ಎಂದರು. ಇದನ್ನೂ ಓದಿ: ಕಾವೇರಿ ನಿವಾಸವನ್ನು ತೊರೆದ ಯಡಿಯೂರಪ್ಪ- ಸಿಎಂಗಳಿಗೆ ಇದು ಅದೃಷ್ಟದ ಮನೆ ಯಾಕೆ?

    ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗುತ್ತೇನೆ. ಅಲ್ಲದೇ ವಾರಕ್ಕೆ ಒಂದು ಅಥವಾ ಎರಡು ದಿನ ಪಂಚಾಯಿತಿ ಕಟ್ಟೆಯಲ್ಲಿ ಜನತಾ ದರ್ಶನ ಇಡುತ್ತೇನೆ. ನಾನು ಎಲ್ಲರನ್ನೂ ಕಾಪಾಡಿಕೊಳ್ಳುತ್ತೇನೆ. ನಗರದಲ್ಲಿ ನನ್ನದು ಸೇರಿದಂತೆ ಯಾವುದೇ ಫ್ಲೆಕ್ಸ್ಗಳು ಇರಬಾರದು. ಸರ್ಕಾರಿ ಶಾಲಾ ಕಾಲೇಜುಗಳನ್ನು ಉತ್ತಮ ರಕ್ಷಣೆಯೊಂದಿಗೆ ನಡೆಸುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ ಸೆಲ್ಯೂಟ್, ಒದೆನೂ ಸಿಗುತ್ತೆ, ಗುಂಡು ಹಾರಿಸೋದು ಇರುತ್ತೆ: ಜಿ ಪರಮೇಶ್ವರ್

    ಪ್ಲಾಸ್ಟಿಕ್ (Plastic) ಅನ್ನು ಮೊದಲು ಬ್ಯಾನ್ ಮಾಡಿರುವುದು ಕರ್ನಾಟಕ. ಆದರೆ ಅದನ್ನು ಸರಿಯಾಗಿ ಜಾರಿಗೊಳಿಸಿಲ್ಲ. ರಾಜಾರೋಷವಾಗಿ ಪ್ಲಾಸ್ಟಿಕ್ ಅನ್ನು ಬಳಸುತ್ತಿದ್ದಾರೆ. ದಯವಿಟ್ಟು ಯಾರೂ ಪ್ಲಾಸ್ಟಿಕ್ ಬಳಕೆ ಮಾಡಬೇಡಿ. ಯಾರೋ 10% ವರ್ತಕರು ಮಾಡುವ ಕೆಲಸಕ್ಕೆ ಉಳಿದ 90% ವರ್ತಕರಿಗೆ ಕೆಟ್ಟ ಹೆಸರು ಬರುತ್ತಿದೆ. ಒಂದು ಸಲ ಎಚ್ಚರಿಕೆ ಕೊಡುತ್ತೇವೆ. ಪದೇ ಪದೇ ಅದೇ ತಪ್ಪನ್ನು ಮಾಡಿದರೆ ದೂರು ದಾಖಲಿಸಿ ಶಿಕ್ಷೆ ನೀಡಲಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದರು. ಇದನ್ನೂ ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣ- ಪುರುಷರಿಗೆ ಟೆನ್ಶನ್ ಶುರು!

  • ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ – ಮಾರಾಟ ಮಾಡಿದ್ರೆ ದುಬಾರಿ ದಂಡ

    ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ – ಮಾರಾಟ ಮಾಡಿದ್ರೆ ದುಬಾರಿ ದಂಡ

    ಬೆಂಗಳೂರು: ದೇಶದಲ್ಲಿ ನಾಳೆಯಿಂದ ಹೊಸ ಶಕೆ ಆರಂಭವಾಗಲಿದೆ. ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ ಆಗಲಿವೆ.

    ಕೇಂದ್ರ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ)  ಅಧ್ಯಕ್ಷ ತಿಮ್ಮಯ್ಯ ಸುದ್ದಿಗೋಷ್ಠಿ ನಡೆಸಿ, ಏಕ ಬಳಕೆ ಪ್ಲಾಸ್ಟಿಕ್ ಬ್ಯಾನ್ ಆಗ್ತಿರುವ ಬಗ್ಗೆ ಮಾಹಿತಿ ನೀಡಿದರು. ನಾಳೆಯಿಂದ ಪ್ಲಾಸ್ಟಿಕ್ ಕಡ್ಡಿ ಹೊಂದಿರುವ ಇಯರ್ ಬಡ್ಸ್, ಬಲೂನ್‍ನ ಪ್ಲಾಸ್ಟಿಕ್ ಕಡ್ಡಿ, ಐಸ್‍ಕ್ರೀಂ-ಕ್ಯಾಂಡಿ ಸ್ಟಿಕ್, ಪ್ಲಾಸ್ಟಿಕ್ ಪ್ಲೇಟ್ಸ್, ಕಪ್ಸ್, ಗ್ಲಾಸ್, ಸ್ಪೂನ್, ಪ್ಲಾಸ್ಟಿಕ್ ಚಾಕು ಎಲ್ಲಾ ಬ್ಯಾನ್ ಆಗಲಿವೆ. ಇದನ್ನೂ ಓದಿ: ಬಿಜೆಪಿ `ಮಹಾ’ ಮಾಸ್ಟರ್ ಪ್ಲಾನ್ – ಅಂದು ಅಟೋ ಡ್ರೈವರ್‌ ಇಂದು ಚೀಫ್‌ ಮಿನಿಸ್ಟರ್‌

    ಈ ನಿಷೇಧಿತ ಪ್ಲಾಸ್ಟಿಕ್ ಬಳಸಿದ್ರೆ, ಮಾರಾಟ ಮಾಡಿದ್ರೆ ದಂಡ ವಿಧಿಸಲಾಗುತ್ತದೆ. ಉತ್ಪಾದಕರಿಗೆ 5 ರಿಂದ 20 ಸಾವಿರ ರೂಪಾಯಿವರೆಗೂ ದಂಡ, ಮಾರಾಟಗಾರರಿಗೆ 200 ರೂಪಾಯಿಯಿಂದ 1 ಸಾವಿರ ರೂಪಾಯಿವರೆಗೂ ದಂಡ ಬೀಳಲಿದೆ. ಜೊತೆಗೆ ಎಲ್ಲಾ ವಸ್ತುಗಳು ಸೀಜ್ ಆಗಲಿವೆ. ಕೆಎಸ್‍ಪಿಸಿಬಿ ಜುಲೈ 1 ರಿಂದ ನಿಷೇಧಿತ ವಸ್ತುಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿದ್ದು, ಅವರು ಪ್ಲಾಸ್ಟಿಕ್‍ಗೆ ಪರ್ಯಾಯಗಳನ್ನು ಒದಗಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಮಿಶ್ರಗೊಬ್ಬರ ಚೀಲಗಳು ಮತ್ತು ಬಟ್ಟೆ ಚೀಲಗಳ ಪೂರೈಕೆಗೆ ಮಂಡಳಿಯು ಈಗಾಗಲೇ ಅನುಮೋದನೆ ನೀಡಿದೆ. ನಿಷೇಧ ಆದೇಶವು ಕಟ್ಟುನಿಟ್ಟಾಗಿ ಜಾರಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಅಧಿಕಾರವನ್ನು ನೀಡಿದೆ. ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಮಂಗಳವಾರ ಮಾರ್ಷಲ್‍ಗಳೊಂದಿಗೆ ಸಭೆ ನಡೆಸಲಾಯಿತು. ಮಾರ್ಷಲ್‍ಗಳಿಗೆ ತರಬೇತಿ ನೀಡಿ ಯಾವ ಕ್ರಮ ಕೈಗೊಳ್ಳಬೇಕು, ಯಾವ ಕಾಯ್ದೆ ಮತ್ತು ಷರತ್ತಿನ ಅನ್ವಯ ದಂಡವನ್ನು ವಿಧಿಸಬೇಕು ಮತ್ತು ಯಾವ ಕಾಯ್ದೆಯ ಅಡಿಯಲ್ಲಿ ಉತ್ಪಾದನೆ ಮತ್ತು ಚಿಲ್ಲರೆ ಘಟಕಗಳನ್ನು ಮುಚ್ಚಬೇಕು ಎಂದು ತಿಳಿಸಲಾಯಿತು ಎಂದರು. ಇದನ್ನೂ ಓದಿ: ಬ್ಯಾಕ್ಟೀರಿಯಾ ಪತ್ತೆ- ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತ

    ಮಹಾರಾಷ್ಟ್ರ ಮತ್ತು ಅಹಮದಾಬಾದ್‍ನ ಎರಡು ಏಜೆನ್ಸಿಗಳಿಗೆ ಮಿಶ್ರಗೊಬ್ಬರ ಪ್ಲಾಸ್ಟಿಕ್ ಪೂರೈಕೆಗೆ ಅನುಮೋದನೆ ನೀಡಲಾಗಿದೆ. ಅಂತೆಯೇ ಈ ಏಜೆನ್ಸಿಗಳು ಸಿಪಿಸಿಬಿ ಮತ್ತು ಪ್ಲಾಸ್ಟಿಕ್ ಯುನಿಟ್ ಆಫ್ ಇಂಡಿಯಾದಿಂದ ಅನುಮತಿಯನ್ನು ಪಡೆದಿವೆ. ಈ ವಿಶೇಷ ಬ್ಯಾಗ್‍ಗಳು ಬಾರ್ ಕೋಡ್‍ಗಳೊಂದಿಗೆ ಬರಲಿದ್ದು, ಸ್ಕ್ಯಾನ್ ಮಾಡಿದಾಗ ಉತ್ಪಾದನಾ ಘಟಕ ಮತ್ತು ಪೂರೈಕೆದಾರರ ಸಂಪೂರ್ಣ ವಿವರಗಳನ್ನು ನೀಡುತ್ತದೆ. ಈ ಏಜೆನ್ಸಿಗಳನ್ನು ಕರ್ನಾಟಕದಲ್ಲಿಯೂ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

    2016ರ ನಂತರ ನಿಷೇಧ ಜಾರಿಯಾದ ಬಳಿಕ ಹಲವು ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಿ ಮುಚ್ಚಲಾಗಿದೆ. ಅದಾಗ್ಯೂ ಪ್ಲಾಸ್ಟಿಕ್ ಬಳಕೆಯಾಗುತ್ತಲೇ ಇದ್ದು, ಇದು ಮಾರಾಟಗಾರರು, ತಿನಿಸುಗಳು, ಹಣ್ಣು ಮತ್ತು ತರಕಾರಿ ಮಾರಾಟಗಾರರು ಮತ್ತು ಅಂಗಡಿಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಹಂತಹಂತವಾಗಿ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಬೇಕಾಗಿದೆ. ಸದ್ಯಕ್ಕೆ ನಂದಿನಿ ಹಾಲಿನ ಕವರ್‌ಗೆ ನಿಷೇಧ ವಿಧಿಸಿಲ್ಲ. ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಹಲವು ರೀತಿಯಲ್ಲಿ ಜಾಗೃತಿ ಮೂಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಪ್ಲಾನ್ ಮಾಡಿದೆ ಎಂದು ಸ್ಪಷ್ಟಪಡಿಸಿದರು.

    Live Tv

  • ತಿರುಮಲದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್

    ತಿರುಮಲದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್

    ತಿರುಪತಿ: ವೆಂಕಟೇಶ್ವರನ ಸನ್ನಿಧಾನದ ಪರಿಸರದಲ್ಲಿ ಹಸಿರು ಸಂರಕ್ಷಣೆ ಭಾಗವಾಗಿ ತಿರುಪತಿ ತಿರುಮಲ ದೇವಾಲಯ(ಟಿಟಿಡಿ) ಬುಧವಾರದಿಂದ ಸಂಪೂರ್ಣ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸಲು ನಿರ್ಧರಿಸಿದೆ.

    ಪ್ಲಾಸ್ಟಿಕ್ ನಿಷೇಧದ ಕುರಿತಾಗಿ ಟಿಟಿಡಿ ಆಸ್ಥಾನದ ಮಂಟಪದಲ್ಲಿ ತಿರುಮಲ ಪ್ರದೇಶದಲ್ಲಿರುವ ಅಂಗಡಿ, ಹೋಟೆಲ್ ಮಾಲೀಕರೊಂದಿಗೆ ಸಭೆಯನ್ನು ಆಯೋಜಿಸಿ, ನಿರ್ಧಾರವನ್ನು ಕೈಗೊಂಡಿದೆ. ಇದನ್ನೂ ಓದಿ: ಲೆಕ್ಕಕ್ಕೆ ಸಿಗದಷ್ಟು ಹಣ ಬೆಂಗಳೂರಿನಿಂದ ದೆಹಲಿಗೆ ಅಕ್ರಮವಾಗಿ ವರ್ಗಾವಣೆ- ಡಿಕೆಶಿ ವಿರುದ್ಧ ಇಡಿ ಆರೋಪ

    ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಟಿಡಿ ಎಸ್ಟೇಟ್ ವಿಭಾಗದ ಒಎಸ್‌ಡಿ ಮಲ್ಲಿಕಾರ್ಜುನ್, ದೇವಾಲಯದ ಪರಿಸರದಲ್ಲಿ ಪ್ಲಾಸ್ಟಿಕ್ ಬಾಟಲಿ, ಬ್ಯಾಗ್, ಕ್ಯಾರಿ ಬ್ಯಾಗ್, ಕವರ್, ಶಾಂಪೂ ಬಾಟಲಿಗಳು ಹೀಗೆ ಹಲವು ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುವುದು. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಂಗಡಿ ಮಾಲೀಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

    ವ್ಯಾಪಾರಿಗಳು ಇನ್ನು ಮುಂದೆ ಪ್ಲಾಸ್ಟಿಕ್ ಕವರ್ ಬದಲಿಗೆ ಜೈವಿಕ ವಿಘಟನೆಗೊಳ್ಳುವ ಅಥವಾ ಪೇಪರ್ ಕವರ್‌ಗಳನ್ನು ಬಳಸಬೇಕು. ಇದನ್ನು ಎಲ್ಲಾ ಹೋಟೆಲ್ ಹಾಗೂ ಮಠ ಸಂಘಟಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆಯ ಟೆನ್ಶನ್ ಮಧ್ಯೆಯೇ ಸಿದ್ದರಾಮಯ್ಯ ಶಾಪಿಂಗ್

    ತಿರುಮಲಕ್ಕೆ ಬರುವ ಎಲ್ಲಾ ವಾಹನಗಳು ಹಾಗೂ ಜನರನ್ನು ಇನ್ನು ಮುಂದೆ ತಿರುಪತಿಯ ಚೆಕ್‌ಪೋಸ್ಟ್ನಲ್ಲಿ ಸಂಪೂರ್ಣವಾಗಿ ಪರಿಶೀಲಿಸಲಾಗುವುದು. ಅಂಗಡಿ ಹಾಗೂ ಹೋಟೆಲ್‌ಗಳಲ್ಲಿ ಎಸ್ಟೇಟ್ ಹಾಗೂ ಆರೋಗ್ಯಾಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸುತ್ತಾರೆ. ಈ ವೇಳೆ ಯಾವುದೇ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದಲ್ಲಿ, ಅದನ್ನು ವಶಪಡಿಸಿಕೊಳ್ಳಲಾಗುವುದು ಎಂದರು.

  • ಜನವರಿಯಿಂದ ಹಡಗುಗಳಲ್ಲೂ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ – ಉಲ್ಲಂಘಿಸಿದ್ರೆ ಜೈಲು

    ಜನವರಿಯಿಂದ ಹಡಗುಗಳಲ್ಲೂ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ – ಉಲ್ಲಂಘಿಸಿದ್ರೆ ಜೈಲು

    ನವದೆಹಲಿ: ಜನವರಿ 1ರಿಂದ ಭಾರತದ ಎಲ್ಲ ಹಡಗುಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಿದ್ದು, ಈ ಕುರಿತು ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ ಎಲ್ಲ ಬಂದರುಗಳಿಗೆ ಸೂಚನೆ ನೀಡಿದೆ.

    ಒಂದು ಬಾರಿ ಬಳಸುವ ಐಸ್ ಕ್ರೀಂ ಕಪ್, ಇತರೆ ಪ್ಲಾಸ್ಟಿಕ್ ಕಪ್‌ಗಳು, ಮೈಕ್ರೋವೇವ್ ಡಿಶಸ್ ಹಾಗೂ ಆಲೂಗಡ್ಡೆ ಚಿಪ್ಸ್ನ ಕವರ್‌ಗಳು ಸೇರಿದಂತೆ ಎಲ್ಲ ರೀತಿಯ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ. ಏಕ ಬಳಕೆ ಪ್ಲಾಸ್ಟಿಕ್‌ನಿಂದ ಭಾರತವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ‘ಮೊದಲ ದಿಟ್ಟ ಹೆಜ್ಜೆಯನ್ನಿಡಬೇಕು’ ಎಂದು ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಭಾರತೀಯ ಹಡಗುಗಳಲ್ಲಿ ಹೆಚ್ಚಿನ ಸಂಖ್ಯೆಯ ಏಕ ಬಳಕೆ ಪ್ಲಸ್ಟಿಕ್‌ಗಳನ್ನು ನಿಷೇಧಿಸಲಾಗುವುದು. ಮಾತ್ರವಲ್ಲದೆ, ಭಾರತೀಯ ನೀರಿನಲ್ಲಿ ಸಂಚರಿಸುವಾಗ ವಿದೇಶಿ ಹಡಗುಗಳಲ್ಲಿಯೂ ಸಹ ಪ್ಲಾಸ್ಟಿಕ್ ನಿಷೇಧಿಸಲಾಗುವುದು.

    ಈ ಪಟ್ಟಿಯಲ್ಲಿ ಚೀಲಗಳು, ಟ್ರೇ, ಪ್ಲಾಸ್ಟಿಕ್ ಪಾತ್ರೆ, ಫುಡ್ ಪ್ಯಾಕೇಜಿಂಗ್ ಫಿಲ್ಮ್, ಹಾಲಿನ ಬಾಟಲಿಗಳು, ಫ್ರೀಜರ್ ಚೀಲಗಳು, ಶ್ಯಾಂಪೂ ಬಾಟಲಿಗಳು, ಐಸ್ ಕ್ರೀಮ್ ಬಾಕ್ಸ್, ನೀರು ಹಾಗೂ ಇತರೆ ಪಾನೀಯ ಬಾಟಲಿಗಳು ಸೇರಿದಂತೆ ವಿವಿಧ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.

    ತಪಾಸಣೆ ಹಾಗೂ ಲೆಕ್ಕಪರಿಶೋಧನೆ ವೇಳೆ ಯಾವುದೇ ಭಾರತೀಯ ಹಡಗಿನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡುವುದಿಲ್ಲ. ಪ್ಲಾಸ್ಟಿಕ್ ಬಳಸದ ಕುರಿತು ಹಾಗೂ ಸಂಗ್ರಹಿಸದ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದನ್ನು ಪಾಲಿಸದೆ ಪದೇ ಪದೆ ಅಪರಾಧ ಎಸಗಿದಲ್ಲಿ ಅಂತಹವರನ್ನು ಬಂಧಿಸುವಂತೆ ಸೂಚಿಸಲಾಗಿದೆ.

    ಭಾರತೀಯ ಸಮುದ್ರದಲ್ಲಿ ಪ್ರವೇಶಿಸುವ ವಿದೇಶಿ ಹಡುಗುಗಳು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಬೇಕು. ಒಂದು ಬಾರಿ ಬಳಸುವ ಪ್ಲಾಸ್ಟಿಕ್ ವಸ್ತುಗಳು ಕಂಡು ಬಂದಲ್ಲಿ ಅಂತಹ ವಸ್ತುಗಳನ್ನು ಭಾರತೀಯ ಬಂದರುಗಳ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

    ಏಕ ಬಳಕೆಯ ಪ್ಲಾಸ್ಟಿಕ್ ಅಂಶ ಮಣ್ಣು, ನದಿ ಅಥವಾ ಯಾವುದೇ ಜಲಮೂಲಗಳನ್ನು ಸೇರಿದರೆ ಸರಿಪಡಿಸಲಾಗದಷ್ಟು ಕಲುಷಿತಗೊಳ್ಳುತ್ತದೆ. ಇಂಟರ್‌ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್(ಐಎಂಒ) ಸಾಗರದ ಕಸವು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದೆ. ಈ ರೀತಿ ಮುಂದುವರಿದರೆ 2050ರ ವೇಳೆಗೆ ಸಾಗರದಲ್ಲಿನ ಪ್ಲಾಸ್ಟಿಕ್ ಪ್ರಮಾಣವು ಅಲ್ಲಿನ ಮೀನುಗಳನ್ನು ಮೀರಿಸುತ್ತದೆ ಎಂದು ಕೆಲವು ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ.

  • ಕಂಡ ಕಂಡಲ್ಲಿ ದಾಳಿ ನಡೆಸಿ ದಂಡ ಹಾಕೋ ಬಿಬಿಎಂಪಿಯಲ್ಲೇ ಹೆಚ್ಚಿದೆ ಪ್ಲಾಸ್ಟಿಕ್ ಬಳಕೆ

    ಕಂಡ ಕಂಡಲ್ಲಿ ದಾಳಿ ನಡೆಸಿ ದಂಡ ಹಾಕೋ ಬಿಬಿಎಂಪಿಯಲ್ಲೇ ಹೆಚ್ಚಿದೆ ಪ್ಲಾಸ್ಟಿಕ್ ಬಳಕೆ

    ಬೆಂಗಳೂರು: ನಿಯಮ ರೂಪಿಸಿದವರೇ ನಿಯಮವನ್ನು ಗಾಳಿಗೆ ತೂರಿದ್ದು, ಊರಿಗೇ ನ್ಯಾಯ ಹೇಳುವ ಹಾಗೂ ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸುವ ಬಿಬಿಎಂಪಿಯಲ್ಲೇ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

    ಸಿಲಿಕಾನ್ ಸಿಟಿಯಾದ್ಯಂತ ಒಂದು ಬಾರಿ ಬಳಸುವ ಪ್ಲಾಸ್ಟಿಕ್‍ನ್ನು ಬಿಬಿಎಂಪಿ ನಿಷೇಧ ಮಾಡಿದೆ. ಆದರೆ ಈ ನಿಯಮ ಇಂದಿರಾ ಕ್ಯಾಂಟೀನಿಗೆ ಮಾತ್ರ ಅನ್ವಯವಾಗುವುದಿಲ್ಲ. ಪೌರ ಕಾರ್ಮಿಕರಿಗೆ ನೀಡುವ ಇಂದಿರಾ ಕ್ಯಾಂಟೀನ್ ಆಹಾರದ ಬಾಕ್ಸ್ ಗೆ ಪ್ಲಾಸ್ಟಿಕ್ ಕವರ್ ಬಳಸಲಾಗುತ್ತಿದೆ. ಅಲ್ಲದೆ, ಇಂದಿರಾ ಕ್ಯಾಂಟೀನ್ ವಿವಿಧ ಕೆಲಸಗಳಲ್ಲಿಯೂ ಸಹ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಇದನ್ನು ಕಂಡ ಸಾರ್ವಜನಿಕರು ಪ್ಲಾಸ್ಟಿಕ್ ನಿಷೇಧ ಜನ ಸಾಮಾನ್ಯರಿಗೆ ಮಾತ್ರವೇ ಬಿಬಿಎಂಪಿಗೆ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.

    ಕಂಡ ಕಂಡಲ್ಲಿ ದಾಳಿ ಮಾಡಿ ಪ್ಲಾಸ್ಟಿಕ್ ಬಳಸುತ್ತಿರುವ ವರ್ತಕರಿಗೆ ದಂಡ ವಿಧಿಸಿ, ಪ್ಲಾಸ್ಟಿಕ್ ಪರಿಕರಗಳನ್ನು ಬಿಬಿಎಂಪಿ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಆದರೆ ಇನ್ನೊಂದೆಡೆ ತಾವೇ ರಾಜಾರೋಷವಾಗಿ ಪ್ಲಾಸ್ಟಿಕ್ ಕವರ್ ಗಳನ್ನು ಬಳಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‍ನಿಂದ ಪೌರ ಕಾರ್ಮಿಕರಿಗೆ ಪ್ರತಿನಿತ್ಯ ಬಾಕ್ಸ್ ಗಳಲ್ಲಿ ಊಟ ಕಳುಹಿಸುತ್ತಾರೆ. ಈ ಬಾಕ್ಸ್ ಗಳನ್ನು ಮುಚ್ಚಲು ಮುಚ್ಚಳಗಳನ್ನು ಬಳಸುವ ಬದಲು, ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೌರ ಕಾರ್ಮಿಕರು ಇಂದಿರಾ ಕ್ಯಾಂಟೀನ್ ಊಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ನಮಗೆ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಊಟದಲ್ಲಿ ರುಚಿಯಿಲ್ಲ, ಅದನ್ನು ತಿನ್ನಲು ಆಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಜೊತೆಗೆ ಅಕ್ಟೋಬರ್ 1ರಿಂದ ಇಂದಿರಾ ಕ್ಯಾಂಟೀನ್ ಊಟಕ್ಕೆ ಬ್ರೇಕ್ ಹಾಕಲು ಪೌರ ಕಾರ್ಮಿಕರ ಗುತ್ತಿಗೆದಾರರು ಮುಂದಾಗಿದ್ದಾರೆ. ಆ ಊಟದಲ್ಲಿ ಏನೂ ರುಚಿಯೇ ಇರಲ್ಲ, ಸಂಬಾರ್ ನೀರಿನಂತಿರುತ್ತದೆ. ಅದನ್ನು ನಾವು ತಿನ್ನುವುದೇ ಇಲ್ಲ ಮನೆಯಿಂದ ಊಟ ತರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಪ್ಲಾಸ್ಟಿಕ್ ಬಳಸಿದ್ದಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಪ್ಲಾಸ್ಟಿಕ್ ಬಳಸಿದ್ದಕ್ಕೆ ತಪ್ಪು ಒಪ್ಪಿಕೊಂಡು ಮೇಯರ್ ಕ್ಷಮೆಯಾಚಿಸಿದ್ದರು. ಅಲ್ಲದೆ, ದಂಡ ಪಾವತಿಸುವುದಾಗಿಯೂ ಸಹ ತಿಳಿಸಿದ್ದರು. ಇಷ್ಟಾದರೂ ಸಹ ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಕುರಿತು ಎಚ್ಚೆತ್ತುಕೊಂಡಿಲ್ಲ.

  • ವಿವಿಐಪಿಗಳಿಗೆ ಹೋಗಿಲ್ಲ ಪ್ಲಾಸ್ಟಿಕ್ ಮೇಲಿನ ವ್ಯಾಮೋಹ

    ವಿವಿಐಪಿಗಳಿಗೆ ಹೋಗಿಲ್ಲ ಪ್ಲಾಸ್ಟಿಕ್ ಮೇಲಿನ ವ್ಯಾಮೋಹ

    ಬೆಂಗಳೂರು: ಪರಿಸರ ಮಾಲಿನ್ಯದ ಕಾರಣಕ್ಕೆ ಪ್ಲಾಸ್ಟಿಕ್ ಬಳಸಬಾರದು,ಬ್ಯಾನ್ ಆಗಿದೆ. ಹೀಗಾಗಿಯೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸುಧಾಕರ್ ಮಾಲ್‍ಗಳಿಗೆ ಹೋಗಿ ದಾಳಿ ಮಾಡಿದ್ದರು. ಇತ್ತ ಮೇಯರ್ ಗಂಗಾಂಬಿಕೆ ಅವರು ಪ್ಲಾಸ್ಟಿಕ್ ಬಳಸಿದೆ ಎಂದು ಫೈನ್ ಕೂಡ ಕಟ್ಟಿದ್ದರು. ಇದೀಗ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಪ್ಲಾಸ್ಟಿಕ್ ಬಳಕೆ ಮಾಡಿರುವುದು ಬಯಲಾಗಿದೆ.

    ರಿಯಾಲಿಟಿ ಚೆಕ್ 1
    ಸ್ಥಳ- ಶಕ್ತಿ ಸೌಧ
    ವಿಧಾನಸೌಧದಲ್ಲಿ ಪ್ಲಾಸ್ಟಿಕ್ ಕಾರುಬಾರು ಜೋರಾಗಿದೆ. ಇಲ್ಲಿ ಸಿಬ್ಬಂದಿ, ವಿಧಾನಸೌಧ ವಿಸಿಟರ್ಸ್‍ಗಳು ಪ್ಲಾಸ್ಟಿಕ್ ಹಿಡಿದು ನಿರಾಯಾಸವಾಗಿ ಹೋಗಿ ಬರುತ್ತಾರೆ. ಹೀಗಾಗಿ ಶಕ್ತಿ ಶೌಧಕ್ಕೆ ಪ್ಲಾಸ್ಟಿಕ್ ಬ್ಯಾನ್ ನಿಯಮ ಅನ್ವಯಿಸುವುದಿಲ್ವಾ ಅನ್ನೋ ಪ್ರಶ್ನೆ ಎದ್ದಿದೆ.

    ಸ್ಥಳ – ಶಾಸಕರ ಭವನ
    ಶಾಸಕರ ಭವನಕ್ಕೆ ಬಂದು ಹೋಗುವವರು ತ್ಯಾಜ್ಯ ಹಾಕಲು ಬಕೆಟ್ ಇದೆ. ಆದರೂ ಪ್ಲಾಸ್ಟಿಕ್ ದರ್ಬಾರ್ ಜೋರಾಗಿದೆ. ಭವನಕ್ಕೆ ಬಂದು ಹೋಗುವವರಂತೂ ಪ್ಲಾಸ್ಟಿಕ್ ತಂದು ಹಾಕಿ ಹೋಗುತ್ತಾರೆ.

    ಸ್ಥಳ: ಎಂಎಸ್ ಬಿಲ್ಡಿಂಗ್
    ಪ್ಲಾಸ್ಟಿಕ್ ನಿಷೇಧ ಜಾರಿಗೆ ತರುವುದು ಅಧಿಕಾರಿಗಳ ಕೈಯಲ್ಲೇ ಇರುತ್ತದೆ. ಹೀಗಿರುವಾಗ ಅಧಿಕಾರಿಗಳೇ ತುಂಬಿರುವ ಎಂ.ಎಸ್ ಬಿಲ್ಡಿಂಗ್ ಸಹ ಪ್ಲಾಸ್ಟಿಕ್ ನಿಂದ ಮುಕ್ತವಾಗಿಲ್ಲ.

    ಸ್ಥಳ: ಪಾಲಿಕೆ
    ಪ್ಲಾಸ್ಟಿಕ್ ವಿರುದ್ಧ ಸಮರ ಸಾರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆವರಣದಲ್ಲಿಯೇ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದು ರಿಯಾಲಿಟ್ ಚೆಕ್ ವೇಳೆ ಬೆಳಕಿಗೆ ಬಂದಿದೆ. ಹೀಗಿರುವಾಗ ತಾವೇ ಪ್ಲಾಸ್ಟಿಕ್ ಬಳಕೆ ಮಾಡಿ ಇನ್ನೊಬ್ಬರಿಗೆ ಫೈನ್ ಹಾಕುವುದು ಎಷ್ಟು ಸರಿ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

    ಸ್ಥಳ – ಸಚಿವರ ಕಚೇರಿಗಳು
    ಅಧಿಕಾರಿಗಳಷ್ಟೇ ಅಲ್ಲ ಸಚಿವರು ಕೂಡ ಪ್ಲಾಸ್ಟಿಕ್ ಬಳಕೆ ಮಾಡಿರುವುದು ಕಂಡುಬಂದಿದೆ. ಜಗದೀಶ್ ಶೆಟ್ಟರ್, ಸಿ.ಟಿ ರವಿ, ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಬಸವರಾಜ್ ಬೊಮ್ಮಾಯಿ ಕಚೇರಿಗಳು ಕೂಡ ಪ್ಲಾಸ್ಟಿಕ್ ಮಯವಾಗಿವೆ.

    ಬಿಜೆಪಿ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ನೂತನ ಸಚಿವರು ಕಚೇರಿಗಳ ಪೂಜೆ ಮಾಡಿದರು. ಈ ವೇಳೆ ಪ್ಲಾಸ್ಟಿಕ್ ಗಳನ್ನು ಬಳಕೆ ಮಾಡಲಾಗಿತ್ತು. ಮಾಜಿ ಸಿಎಂ, ಸಚಿವ ಜಗದೀಶ್ ಶೆಟ್ಟರ್ ತಮ್ಮ ಕಚೇರಿ ಪೂಜೆ ಮಾಡಿದ್ದರು. ಆಗ ಬರೀ ಪ್ಲಾಸ್ಟಿಕ್ ನದ್ದೇ ದರ್ಬಾರ್ ಕಾಣಿಸಿತ್ತು. ಗನ್ ಮ್ಯಾನ್, ಡ್ರೈವರ್, ಹಿಂಬಾಲಕರು ಅಲ್ಲದೆ ಕೆಲ ಅಧಿಕಾರಿಗಳು ಹೂಗುಚ್ಛ ನೀಡುವಾಗ ಬರೀ ಪ್ಲಾಸ್ಟಿಕ್ ತುಂಬಿಕೊಂಡಿತ್ತು. ಪ್ಲಾಸ್ಟಿಕ್ ಬೊಕ್ಕೆ ಪಡೆದ ಶೆಟ್ಟರ್‍ಗೆ ಫೈನ್ ಹಾಕ್ತಿರಾ ಅಥವಾ ಕೊಟ್ಟವರಿಗೆ ಫೈನ್ ಹಾಕ್ತಿರಾ ಅನ್ನೋ ಪ್ರಶ್ನೆ ಇದೀಗ ಎದ್ದಿದೆ.

    ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಕಚೇರಿ ಮತ್ತು ಬಸವರಾಜ್ ಬೊಮ್ಮಾಯಿ ಕಚೇರಿಗಳ ಮುಂದೆಯೇ ಹೂವಿನ ಬೊಕ್ಕೆ ರೂಪದಲ್ಲಿ ಪ್ಲಾಸ್ಟಿಕ್‍ಗಳು ರಾಶಿ ರಾಶಿ ಬಿದ್ದಿರುತ್ತವೆ. ಸಿಟಿ ರವಿ ಕಚೇರಿಯಲ್ಲೂ ಪ್ಲಾಸ್ಟಿಕ್ ಬಳಕೆಯಾಗಿದ್ದು, ಪ್ಲಾಸ್ಟಿಕ್ ಮುಕ್ತ ಮಾಡಬೇಕೆಂಬ ಪಾಲಿಕೆ ಕನಸು ಕನಸಾಗಿಯೇ ಇರುತ್ತಾ ಅನ್ನೋ ಅನುಮಾನ ಮೂಡಿದೆ.

  • ಪ್ಲಾಸ್ಟಿಕ್ ಬಳಕೆ ನಿಷೇಧ ಆದೇಶಕ್ಕೆ ಕುಮಾರಸ್ವಾಮಿ ಫಂಕ್ಷನ್‍ನಲ್ಲೇ ಬೆಲೆ ಇಲ್ಲ!

    ಪ್ಲಾಸ್ಟಿಕ್ ಬಳಕೆ ನಿಷೇಧ ಆದೇಶಕ್ಕೆ ಕುಮಾರಸ್ವಾಮಿ ಫಂಕ್ಷನ್‍ನಲ್ಲೇ ಬೆಲೆ ಇಲ್ಲ!

    ಬೆಂಗಳೂರು: ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿ, ಸರ್ಕಾರಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಸಬಾರದು. ಕಡ್ಡಾಯವಾಗಿ ಸ್ಟೀಲ್ ಲೋಟದಲ್ಲೇ ನೀರು ಕೊಡಬೇಕು ಹೀಗೊಂದು ಆದೇಶವಾಗಿ ಎರಡು ತಿಂಗಳು ಕಳೆದಿದೆ.

    ರಾಜ್ಯದಲ್ಲಿ ಪ್ಲಾಸ್ಟಿಕ್ ಮಿತಿಮೀರಿದ ಬಳಕೆಯಿಂದ ಪರಿಸರದ ಮೇಲೆ ಹಾನಿಯಾಗುತ್ತಿರೋದ್ರಿಂದ ಸರ್ಕಾರಿ ಕಚೇರಿ, ಸಮಾರಂಭದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದೇ ಸ್ಟೀಲ್ ನ್ನೇ ಕಡ್ಡಾಯವಾಗಿ ಬಳಕೆ ಮಾಡಿ ಜಾಗೃತಿ ಮೂಡಿಸಬೇಕು ಅಂತಾ ಆದೇಶ ಪ್ರತಿಯಲ್ಲಿದೆ. ಆದ್ರೇ ಬೇರೆಯವರಿಗೆ ಜಾಗೃತಿ ಮೂಡಿಸೋದು ಪಕ್ಕಕ್ಕಿರಲಿ. ಸ್ವತಃ ಸರ್ಕಾರಿ ಅಧಿಕಾರಿಗಳೇ ಪಾಲನೆ ಮಾಡ್ತಿಲ್ಲ. ಇದನ್ನೂ ಓದಿ: ಪ್ಲಾಸ್ಟಿಕ್ ವಿರುದ್ಧ ಮತ್ತೆ ಬಿಬಿಎಂಪಿ ಸಮರ – ಹೋಟೆಲ್, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸಿದರೆ ಲೈಸೆನ್ಸ್ ರದ್ದು

    ಸಿಎಂ ಕಾರ್ಯಕ್ರಮ ಸೇರಿದಂತೆ , ಸರ್ಕಾರಿ ಕಚೇರಿಯಲ್ಲಿ ಪ್ಲಾಸ್ಟಿಕ್ ಬಾಟಲ್‍ನದ್ದೇ ಕಾರುಬಾರು. ಈ ಮೂಲಕ ಪ್ಲಾಸ್ಟಿಕ್ ನಿಷೇಧಕ್ಕಾಗಿ ಸರ್ಕಾರದ ಕಾನೂನನ್ನು ಸರ್ಕಾರವೇ ಉಲ್ಲಂಘನೆ ಮಾಡುತ್ತಿರುವುದು ವಿಷಾದನೀಯ ವಿಚಾರವಾಗಿದೆ.

  • ಜುಲೈ 15 ರಿಂದ ಉತ್ತರ ಪ್ರದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ : ಯೋಗಿ ಆದಿತ್ಯನಾಥ್

    ಜುಲೈ 15 ರಿಂದ ಉತ್ತರ ಪ್ರದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ : ಯೋಗಿ ಆದಿತ್ಯನಾಥ್

    ಲಕ್ನೋ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಮೇಲೆ ನಿಷೇಧ ವಿಧಿಸಿದ ಬೆನ್ನಲ್ಲೇ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಹ ರಾಜ್ಯದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡುವುದಾಗಿ ತಿಳಿಸಿದ್ದಾರೆ.

    ಈ ಕುರಿತು ಶುಕ್ರವಾರ ಮಾಹಿತಿ ನೀಡಿದ ಸಿಎಂ ಯೋಗಿ ಆದಿತ್ಯನಾಥ್, ಪ್ಲಾಸ್ಟಿಕ್ ಬ್ಯಾನ್ ಮಾಡುವ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಜನರಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಿರಲು ನಾನು ಮನವಿ ಮಾಡುತ್ತಿದ್ದು, ಕಪ್, ಗ್ಲಾಸ್, ಪಾಲಿಥಿನ್ ವಸ್ತುಗಳನ್ನು ಬಳಕೆ ಮಾಡುವುದರಿಂದ ದೂರ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಜೂನ್ 15 ರಿಂದ ಹೊಸ ನಿಯಮಗಳು ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಮಹಾರಾಷ್ಟ್ರ ಸರ್ಕಾರ ಜೂನ್ 23 ರಂದು ಪ್ಲಾಸ್ಟಿಕ್ ಬ್ಯಾನ್ ಮಾಡುವ ಐತಿಹಾಸಿಕ ನಿರ್ಣಯವನ್ನು ಘೋಷಿಸಿತ್ತು. ಆದರೆ ಬಳಿಕ ಉದ್ಯಮಿಗಳ ಒತ್ತಡಕ್ಕೆ ಮಣಿದ ಸರ್ಕಾರ ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಪ್ಯಾಕಿಂಗ್ ನಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲು 3 ತಿಂಗಳ ಅವಧಿಯನ್ನು ನೀಡಿತ್ತು.

    ಪ್ರಧಾನಿ ಮೋದಿ ಅವರು 2022 ರ ವೇಳೆ ದೇಶವನ್ನು ಒಮ್ಮೆ ಬಳಸಿ ಬೀಸಾಡುವ ಪ್ಲಾಸ್ಟಿಕ್ ಬಳಕೆ ಮುಕ್ತ ರಾಷ್ಟ್ರವಾಗಿ ಮಾಡುವ ಗುರಿಯನ್ನು ಹೊಂದಿದ್ದು, ಇದರ ಹಿನ್ನೆಲೆಯಲ್ಲಿ ಸಾಧ್ಯ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗುತ್ತಿದೆ.

  • ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸೇರಿದೆಯಾ? ಪೂನಂ Just asking

    ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸೇರಿದೆಯಾ? ಪೂನಂ Just asking

    ಮುಂಬೈ: ಸದಾ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗುವ ಮಾಡೆಲ್, ನಟಿ ಪೂನಂ ಪಾಂಡೆ ಸದ್ಯ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಪ್ಲಾಸ್ಟಿಕ್ ಬ್ಯಾನ್ ನಲ್ಲಿ ಕಾಂಡೋಮ್ ಕೂಡ ಸೇರಿದೆಯಾ ಎಂದು ಪ್ರಶ್ನಿಸಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ಮಾಡಿರುವ ನಟಿ ಪೂನಂ ಪಾಂಡೆ ಪ್ಲಾಸ್ಟಿಕ್ ನಿಷೇಧದಲ್ಲಿ ಕಾಂಡೋಮ್ ಸಹ ಸೇರಿದೆಯಾ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಮಹಾರಾಷ್ಟ್ರದ ಪ್ಲಾಸ್ಟಿಕ್ ನಿಷೇಧದ ಕುರಿತಂತೆ ಪೂನಂ ಪಾಂಡೆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಹಿಂದೆಯೂ ಮಹಾರಾಷ್ಟ್ರ ಸರ್ಕಾರದ ಪ್ಲಾಸ್ಟಿಕ್ ಬ್ಯಾನ್ ಕುರಿತು ಟ್ವೀಟ್ ಮಾಡಿದ್ದ ಪೂನಂ, ಪ್ಲಾಸ್ಟಿಕ ನಿಷೇಧವಾಗಿದೆ, ಯಾರು ಯಾರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರೋ ಅವರೆಲ್ಲಾ ರಸ್ತೆಯಲ್ಲಿ ತಿರುಗಾಡಬೇಡಿ ಎಂದು ಟ್ವೀಟ್ ಮಾಡಿದ್ದರು.