Tag: Plantation

  • ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು ಸಸ್ಯಕಾಶಿ – ಡಿಕೆಶಿಗೆ ಪ್ರಸ್ತಾವನೆ ಸಲ್ಲಿಕೆ

    ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು ಸಸ್ಯಕಾಶಿ – ಡಿಕೆಶಿಗೆ ಪ್ರಸ್ತಾವನೆ ಸಲ್ಲಿಕೆ

    ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು‌ (Brand Bengaluru) ಹೆಸರಲ್ಲಿ ಬಿಬಿಎಂಪಿ (BBMP) ಪಾಲಿಕೆ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ನಗರದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಸಸ್ಯಕಾಶಿ ತಲೆ ಎತ್ತಲಿದೆ.

    ಗಾರ್ಡನ್ ಸಿಟಿಯಲ್ಲಿ ಸುಮಾರು 150 ಎಕರೆ ವಿಸ್ತೀರ್ಣದ ಸಸ್ಯತೋಟ (Plantation) ನಿರ್ಮಿಸಲು ಬಿಬಿಎಂಪಿ ಪ್ಲಾನ್ ಮಾಡಿದೆ. ಈಗಾಗಲೇ ಸಸ್ಯಕಾಶಿ ನಿರ್ಮಾಣಕ್ಕೆ ಅರಣ್ಯ ಇಲಾಖೆ (Forest Department) ಬ್ಲೂ ಪ್ರಿಂಟ್ (Blue Print) ರೆಡಿ ಮಾಡಿದೆ. ಬೆಂಗಳೂರಿನ ಹೊರಭಾಗದಲ್ಲಿ ಸಸ್ಯಕಾಶಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಯಲಹಂಕ (Yelahanka) ಬಳಿ ಬಿಬಿಎಂಪಿ 150 ಎಕರೆ ಜಾಗ ಗುರುತಿಸಿದ್ದು, ವಿಭಿನ್ನ, ವಿಶಿಷ್ಟ ರೀತಿಯಲ್ಲಿ ಸಸ್ಯಕಾಶಿ ನಿರ್ಮಾಣವಾಗಲಿದೆ. ಇದನ್ನೂ ಓದಿ: ಉಡುಪಿಯಲ್ಲಿ ನಾಲ್ವರ ಕೊಂದ ಕೇಸ್- ಸರ್ಕಾರದ ಮುಂದೆ ಬೇಡಿಕೆ ಇಟ್ಟ ಕುಟುಂಬ

    ಸಸ್ಯಕಾಶಿಯಲ್ಲಿ ವಿವಿಧ ಬಗ್ಗೆಯ ಮರಗಳು, ಔಷಧೀಯ ಅಂಶವುಳ್ಳ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಲಾಲ್ ಬಾಗ್, ಕಬ್ಬನ್ ಪಾರ್ಕ್‌ಗಿಂತ ವಿನೂತನವಾಗಿ ಸಸ್ಯಕಾಶಿ ನಿರ್ಮಾಣವಾಗಲಿದೆ. ಈ ಕುರಿತು ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಕೆ ಶಿವಕುಮಾರ್ ಅವರಿಂದ ಅನುಮತಿ ಸಿಕ್ಕ ಕೂಡಲೇ ಸಸ್ಯಕಾಶಿ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗುತ್ತದೆ. ಇದನ್ನೂ ಓದಿ: ಮೈಸೂರಿಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿವೇಕಾನಂದ ವರ್ಗಾವಣೆ – ಯತೀಂದ್ರ ಪ್ರಸ್ತಾಪಿಸಿದ್ದ ವಿವೇಕಾನಂದ ಇವರೇನಾ?

  • ಕಾಫಿ ತೋಟದಲ್ಲಿ ಕಾಡಾನೆಗಳ ಕಾಳಗ – ಫಸಲಿಗೆ ಬಂದಿದ್ದ ಕಾಫಿ, ಮೆಣಸು ನಾಶ

    ಕಾಫಿ ತೋಟದಲ್ಲಿ ಕಾಡಾನೆಗಳ ಕಾಳಗ – ಫಸಲಿಗೆ ಬಂದಿದ್ದ ಕಾಫಿ, ಮೆಣಸು ನಾಶ

    ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಕಾಡಾನೆಗಳ ಕಾಳಗಕ್ಕೆ ಭಾರಿ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಡರಾತ್ರಿ ಡಿಸೋಜ ಎಂಬುವವರ ಕಾಫಿ ತೋಟದಲ್ಲಿ ಎರಡು ಸಲಗಗಳ ನಡುವೆ ಕಾದಾಟ ನಡೆದಿದ್ದು, ಫಸಲಿಗೆ ಬಂದಿದ್ದ ಕಾಫಿ, ಮೆಣಸಿನ ಗಿಡಗಳು, ಬೈನೆ ಮರಗಳು ನೆಲಸಮವಾಗಿವೆ. ಬೆಳೆ ನಷ್ಟದಿಂದ ತೋಟದ ಮಾಲೀಕರು ಕಂಗಾಲಾಗಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಡಿಸೋಜ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪತ್ನಿ ಜೊತೆ ಲಂಡನ್‍ನಲ್ಲಿ ಗೋ ಪೂಜೆ ಮಾಡಿದ ರಿಷಿ ಸುನಾಕ್

    ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕಾಫಿ ತೋಟದ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಶಕಗಳ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಲೆನಾಡು ಭಾಗದ ಜನ ಹಿಡಿಶಾಪ ಹಾಕಿದ್ದಾರೆ. ಕಳೆದ ಕೆಲದಿನಗಳಿಂದ ಪ್ರತಿದಿನ ಜಿಲ್ಲೆಯ ಜನರು ಆನೆಗಳ ಉಪಟಳದಿಂದ ಬೇಸತ್ತು ಹೋಗಿದ್ದಾರೆ. ಇದನ್ನೂ ಓದಿ: ಅನಾರೋಗ್ಯದಿಂದ ಪತ್ನಿ ಸಾವು – ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಸಿಸಿಟಿವಿ ಕ್ಯಾಮೆರಾ ಹೊಡೆದು ಮಹಿಳೆಯಿಂದ ಕಳ್ಳತನಕ್ಕೆ ಯತ್ನ

    ಸಿಸಿಟಿವಿ ಕ್ಯಾಮೆರಾ ಹೊಡೆದು ಮಹಿಳೆಯಿಂದ ಕಳ್ಳತನಕ್ಕೆ ಯತ್ನ

    ಮಂಡ್ಯ: ಮಹಿಳೆಯೊಬ್ಬಳು ತೋಟದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ನಾಶ ಮಾಡಿ ಕಳ್ಳತನ ಮಾಡಲು ಮುಂದಾಗಿದ್ದ ಘಟನೆ ಮಂಡ್ಯ ಜಿಲ್ಲೆಯ  ಕೆಆರ್‌ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ಜರುಗಿದೆ. ಇದನ್ನೂ ಓದಿ:  ಅ.7ಕ್ಕೆ ಚಾಮರಾಜನಗರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮನ

    Woman CCTV Camera

    ಬಂಡಿಹೊಳೆ ಗ್ರಾಮದ ರೈತ ಕೆ.ರಾಮೇಗೌಡ ಅವರು ತಮ್ಮ ತೋಟದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಶುಕ್ರವಾರ ತೋಟಕ್ಕೆ ಬಂದ ಮಹಿಳೆಯೊಬ್ಬಳು ಸಿಸಿಟಿವಿ ಕ್ಯಾಮೆರಾವನ್ನು ಕೋಲಿನಿಂದ ಹೊಡೆದು ಹಾಕಿರುವ ದೃಶ್ಯ ಅದೇ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳತನಕ್ಕೆ ಬಂದಿರುವ ಮಹಿಳೆ ಸಿಸಿಟಿವಿ ಕ್ಯಾಮೆರಾವನ್ನು ಹೊಡೆದು ಹಾಕಿ ಕಳ್ಳತನ ಮಾಡಿಕೊಂಡು ಹೋಗಿದ್ದಾಳೆ ಎಂದು ಕೂಡ ಆರೋಪಿಸಲಾಗಿದೆ. ಇದನ್ನೂ ಓದಿ:ಕೈ ಸನ್ನೆ ಮಾಡಿ ಕರೆದೊಯ್ದೊಳು- ಹಲ್ಲೆ ಮಾಡಿ ಹಣ ದೋಚಿದ್ರು

    ಸಿಸಿಟಿವಿ ಕ್ಯಾಮೆರಾವನ್ನು ಹೊಡೆದು ಹಾಕಿರುವ ಮಹಿಳೆ ಬಂಡಿಹೊಳೆ ಗ್ರಾಮದ ರಶ್ಮಿ ಎಂದು ಗುರುತಿಸಲಾಗಿದ್ದು, ಈ ಕುರಿತು ರಾಮೇಗೌಡರು ಕೆಆರ್‍ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಸದ್ಯ ಸಿಸಿಟಿವಿ ಕ್ಯಾಮೆರಾದಲ್ಲಿನ ದೃಶ್ಯದ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 14 ಕಾಡಾನೆಗಳ ದಾಳಿ- ನೂರಾರು ಎಕರೆ ಕಾಫಿ, ಅಡಿಕೆ, ಬಾಳೆ ಧ್ವಂಸ

    14 ಕಾಡಾನೆಗಳ ದಾಳಿ- ನೂರಾರು ಎಕರೆ ಕಾಫಿ, ಅಡಿಕೆ, ಬಾಳೆ ಧ್ವಂಸ

    – 3 ಬಾರಿ ಕರೆ ಮಾಡಿದರೂ ಅಧಿಕಾರಿಗಳು ಬರಲೇ ಇಲ್ಲ

    ಚಿಕ್ಕಮಗಳೂರು: ಒಂದಲ್ಲ, ಎರಡಲ್ಲ ಮರಿಗಳು ಸೇರಿದಂತೆ ಬರೋಬ್ಬರಿ 13 ರಿಂದ 14 ಕಾಡಾನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟು ದಾಂದಲೆ ನಡೆಸಿ ನೂರಾರು ಎಕರೆ ಬೆಳೆಯನ್ನ ನಾಶ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರ್‌ಬೈಲ್ ಗ್ರಾಮದಲ್ಲಿ ನಡೆದಿದೆ.

    ಕಾರ್‌ಬೈಲ್ ಹಾಗೂ ಸುತ್ತಲಿನ ನೂರಾರು ಎಕರೆಯಲ್ಲಿದ್ದ ಕಾಫಿ-ಮೆಣಸು-ಅಡಿಕೆ ಹಾಗೂ ಬಾಳೆ ನಾಶವಾಗಿದೆ. ಅಷ್ಟು ದೊಡ್ಡ ಆನೆಗಳ ಗುಂಪು ದಾಳಿ ಮಾಡುವುದಿರಲಿ, ತೋಟದಲ್ಲಿ ಸುಮ್ಮನೆ ನಡೆದು ಹೋದರೂ ಬೆಳೆ ಸಂಪೂರ್ಣ ನಾಶವಾಗುತ್ತದೆ. ಕಾರ್‌ಬೈಲ್ ಹಾಗೂ ಸುತ್ತಲಿನ ಪುಟ್ಟರಾಜು, ಪ್ರಕಾಶ್, ಸೋಮೇಗೌಡ, ಭಾಗ್ಯಮ್ಮ ಹಾಗೂ ಪ್ರಹ್ಲಾದ್ ಗೌಡ ಸೇರಿದಂತೆ ಹತ್ತಾರು ಜನರ ತೋಟಗಳ ಪರಿಸ್ಥಿತಿ ಇದೇ ಆಗಿದೆ.

    ಆನೆಗಳ ದಾಳಿಯಿಂದ ತೋಟದ ಸ್ಥಿತಿ ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮೂರ್ನಾಲ್ಕು ಬಾರಿ ಕರೆ ಮಾಡಿದ್ದು, ಯಾರೂ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೂರ್ನಾಲ್ಕು ಬಾರಿ ಕರೆ ಮಾಡಿದ್ದೇವೆ. ಬರುತ್ತೇವೆಂದು ಅಧಿಕಾರಿಗಳು ಬಂದಿಲ್ಲ. ಸರ್ಕಾರ ರೈತರು ಹಾಗೂ ರೈತರ ಸಮಸ್ಯೆಗಳತ್ತ ಗಮನ ಹರಿಸಬೇಕು. ಕೂಡಲೇ ಅರಣ್ಯ ಇಲಾಖೆ ಆನೆಗಳನ್ನ ಕಾಡಿಗಟ್ಟಿ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗಿಡದಲ್ಲೇ ಕೊಳೆಯುತ್ತಿದೆ ಕಾಫಿ – ಆತಂಕದಲ್ಲಿ ಬೆಳೆಗಾರರು

    ಮಲೆನಾಡಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಕೆಲ ವರ್ಷಗಳ ಹಿಂದೆ ಮೂಡಿಗೆರೆ ತಾಲೂಕಿನ ಸಾರಾಗೋಡು, ಕುಂದೂರು, ಗೌಡಹಳ್ಳಿ ಸೇರಿದಂತೆ ಕೆಲಭಾಗದಲ್ಲಿ ಆನೆ ಹಾವಳಿ ಯತೇಚ್ಛವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಗ್ರಾಮಗಳು ಸೇರಿದಂತೆ ತಾಲೂಕಿನ ಬಹುತೇಕ ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದೆ. ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಪ್ಪಿಸಬೇಕು. ವರ್ಷಕ್ಕೆ ಒಂದೆರಡು ಬಾರಿ ದಾಳಿಯಾದರೆ ಹೇಗೋ ಸುಧಾರಿಸಿಕೊಳ್ಳಬಹುದು. ತಿಂಗಳಿಗೆ ಮೂರ್ನಾಲ್ಕು ಬಾರಿ ತೋಟಗಳಿಗೆ ಲಗ್ಗೆ ಇಟ್ಟಿರೆ ಬೆಳೆ ಉಳಿಯೋದಾದರೂ ಹೇಗೆ? ನಾವು ಬದುಕೋದಾದರೂ ಹೇಗೆ ಎಂದು ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಶ್ನಿಸಿ, ಆನೆ ಹಾವಳಿ ತಪ್ಪಿಸುವಂತೆ ಆಗ್ರಹಿಸಿದ್ದಾರೆ.

  • ರೈತನಾದ ಕ್ರೇಜಿ ಕ್ವೀನ್ ಪುತ್ರ – ಮಗನ ಕಾರ್ಯ ಕಂಡು ನಟಿ ರಕ್ಷಿತಾ ಹೇಳಿದ್ದೇನು ಗೊತ್ತಾ?

    ರೈತನಾದ ಕ್ರೇಜಿ ಕ್ವೀನ್ ಪುತ್ರ – ಮಗನ ಕಾರ್ಯ ಕಂಡು ನಟಿ ರಕ್ಷಿತಾ ಹೇಳಿದ್ದೇನು ಗೊತ್ತಾ?

    – ನನಗೆ ಅವನ ಮೇಲೆ ಹೆಮ್ಮೆಯಾಗುತ್ತಿದೆ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ನಟಿ ರಕ್ಷಿತಾ ಸಿನಿಮಾ ರಂಗದಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸದ್ಯ ರಕ್ಷಿತಾರವರು ತಮ್ಮ ಮಗನ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಹೌದು ಹಿರಿತೆರೆಯಿಂದ ದೂರ ಸರಿದಿದ್ದರು, ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಸದ್ದು ಮಾಡುತ್ತಿರುವ ನಟಿ ರಕ್ಷಿತಾ, ತಮ್ಮ ಪ್ರೀತಿಯ ಪುತ್ರ ಸೂರ್ಯ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಸೂರ್ಯ ತೋಟದಲ್ಲಿ ರೈತರಂತೆ ಕೃಷಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿಯೇ ಕಾಲಕಳೆಯುತ್ತಿರುವ ಅನೇಕ ಮಕ್ಕಳು ತಮ್ಮ ತಂದೆ ಹಾಗೂ ತಾಯಿಗೆ ಸಹಾಯ ಮಾಡುತ್ತಿದ್ದಾರೆ. ಸದ್ಯ ಅದರಂತೆ ರಕ್ಷಿತಾರವರ ಪುತ್ರ ಕೂಡ ಬೆಳೆ ಕಟಾವು ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

    ಸದ್ಯ ಈ ವೀಡಿಯೋ ಜೊತೆಗೆ ರಕ್ಷಿತಾರವರು ನನಗೆ ಅವನ ಮೇಲೆ ಬಹಳ ಹೆಮ್ಮೆಯಾಗುತ್ತಿದೆ. ನನ್ನ ಪುಟ್ಟ ರೈತ. ಅವನು ತೊಟದಲ್ಲಿ ಕೆಲಸ ಮಾಡುವುದನ್ನು ಕಲಿಯುತ್ತಿರುವುದು ನನಗೆ ಬಹಳ ಸಂತೋಷವಾಗಿದೆ. ಇದು ಭಾನುವಾರ ಸೂರ್ಯ ನಮ್ಮ ತೋಟದಲ್ಲಿ ಕೆಲಸ ಮಾಡಿದ್ದಾನೆ. ಇದು ನನಗೆ ಬಹಳ ಖುಷಿಯಾಗಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ನಿರ್ದೇಶಕ ಪ್ರೇಮ್ ಮೂಲತಃ ರೈತಾಪಿ ಕುಟುಂಬದಿಂದ ಬಂದಿದ್ದು, ಮಂಡ್ಯ ಜಿಲ್ಲೆಯವರಾಗಿದ್ದಾರೆ. ಸದ್ಯ ಪ್ರೇಮ್ ಸಿನಿಮಾ ನಿರ್ದೇಶನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ರಕ್ಷಿತಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಖಂಡಿತ ನಿಮ್ಮನ್ನು ಒಮ್ಮೆ ಭೇಟಿ ಆಗ್ತೀನಿ: ಅಭಿಮಾನಿಗೆ ರಶ್ಮಿಕಾ ಸಂದೇಶ

     

    View this post on Instagram

     

    A post shared by Rakshitha???? (@rakshitha__official)

  • ನಟ ಸಂಚಾರಿ ವಿಜಯ್ ಅಗಲಿ 3 ದಿನ – ಕ್ರಿಯಾವಿಧಿ ನೆರವೇರಿಸಿದ ಕುಟುಂಬಸ್ಥರು

    ನಟ ಸಂಚಾರಿ ವಿಜಯ್ ಅಗಲಿ 3 ದಿನ – ಕ್ರಿಯಾವಿಧಿ ನೆರವೇರಿಸಿದ ಕುಟುಂಬಸ್ಥರು

    ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಮೂರು ದಿನಗಳ ಹಿಂದೆ ಸಾವನ್ನಪ್ಪಿದ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಮಾಧಿಗೆ ಇಂದು ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಮರಣದ ನಂತರದ ಕ್ರಿಯಾವಿಧಿಗಳನ್ನ ನೆರವೇರಿಸಿದ್ದಾರೆ.

    ವಿಜಯ್ ಸಾವನ್ನಪ್ಪಿ ಇಂದಿಗೆ ಮೂರು ದಿನವಾದ ಹಿನ್ನೆಲೆ ಹಿಂದೂ ಸಂಪ್ರದಾಯದ ವೀರಶೈವ ಪದ್ಧತಿಯಂತೆ ಅವರ ಸಮಾಧಿಗೆ ಹಾಲು-ತುಪ್ಪ ಬಿಟ್ಟಿದ್ದಾರೆ. ವಿಜಯ್ ಸಹೋದರರು, ಕುಟುಂಬಸ್ಥರು, ವಿಜಯ್ ಆಪ್ತಮಿತ್ರ ರಘು ಹಾಗೂ ಸ್ನೇಹಿತರೊಡಗೂಡಿ ಸಮಾಧಿ ಸ್ಥಳಕ್ಕೆ ತೆರಳಿ, ಪೂಜೆ ಸಲ್ಲಿಸಿ ಹಾಲು-ತುಪ್ಪ ಎರೆದಿದ್ದಾರೆ. ಇದೇ ವೇಳೆ, ಸ್ಥಳೀಯರು, ವಿಜಯ್ ಅಭಿಮಾನಿಗಳೂ ದುಃಖ ತಪ್ತರಾಗಿ ಸಮಾಧಿ ಸ್ಥಳದಲ್ಲಿ ನೆರೆದಿದ್ದರು. ವಿಜಯ್ ಅಣ್ಣನ ಚಿಕ್ಕ-ಚಿಕ್ಕ ಮಕ್ಕಳು ಕಣ್ಣೀರಾಕುತ್ತಲೇ ಚಿಕ್ಕಪ್ಪನ ಸಮಾಧಿಗೆ ಹಾಲು-ತುಪ್ಪ ಎರೆದ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸುವಂತಿತ್ತು. ಇದನ್ನೂ ಓದಿ: ಮತ್ತೆ ಹುಟ್ಟಿ ಬಾ ಗೆಳೆಯ ಎಂದ ಸ್ಯಾಂಡಲ್‍ವುಡ್

    ಜೂನ್ 13ರಂದು ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೂರು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ್ದ ಸಂಚಾರಿ ವಿಜಯ್, ಜೂನ್ 15ರಂದು ಉಸಿರು ಚೆಲ್ಲಿದರು. ನಂತರ ಕುಪ್ಪೂರು ಶ್ರೀಗಳ ನೇತೃತ್ವದಲ್ಲಿ ಪಂಚನಹಳ್ಳಿಯಲ್ಲಿ ಅವರ ಸ್ನೇಹಿತನ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆದಿತ್ತು. ವಿಜಯ್ ಚಿಕ್ಕಂದಿನಿಂದಲೇ ನಟನೆ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರು. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡಿದ್ದ ವಿಜಯ್, ಕೆಲಸ ಮಾಡುತ್ತಲೇ ಓದು ಮುಗಿಸಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್

    ಅತಿಥಿ ಉಪನ್ಯಾಸಕರಾಗಿ ಪಾಠವನ್ನು ಹೇಳಿಕೊಡುತ್ತಿದ್ದರು. ಕಲಾವಿದ ಕುಟುಂಬದ ಗೀಳು ಹೋಗದ ಕಾರಣ ರಂಗಭೂಮಿ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ್ದರು. ನಾನು ಅವನಲ್ಲ ಅವಳು ಸಿನಿಮಾದಲ್ಲಿ ನಟಿಸುವ ಮೂಲಕ ರಾಷ್ಟ್ರಪತಿ ಪಡೆದು ಸ್ಯಾಂಡಲ್‍ವುಡ್ ನಿಬ್ಬೆರಗಾಗುವಂತೆ ಮಾಡಿದ್ದರು. ದುರಾದೃಷ್ಟವಶತ್, ಬೆಂಗಳೂರಲ್ಲಿ ನಡೆದ ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೂರು ದಿನಗಳ ಕಾಲ ಜೀವನ್ಮರದ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದ್ದರು. ಅಂಗಾಂಗ ದಾನ ಮಾಡುವ ಮೂಲಕ ಸಮಾಜದ ಕಣ್ಣಿಗೆ ಸಾವಲ್ಲೂ ಸಾರ್ಥಕತೆ ಮೆರೆದ ಆದರ್ಶ ನಟನಾಗಿ ಉಳಿದರು. ಸಂಚಾರಿ ವಿಜಯ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಜಿಲ್ಲೆಯ ಕಡೂರಿನ ತಾಲೂಕಿನ ಪಂಚನಹಳ್ಳಿಯಲ್ಲಿ ವಿಜಯ್ ಆಪ್ತಮಿತ್ರ ರಘು ಅವರ ತೋಟದಲ್ಲಿ ವೀರಶೈವ ಸಂಪ್ರದಾಯದಂತೆ ಕುಪ್ಪೂರು ಶ್ರೀಗಳು ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿತ್ತು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?

  • ತೋಟಕ್ಕೆ ನೀರು ಹಾಯಿಸಲು ಹೋದ ರೈತನ ಬರ್ಬರ ಕೊಲೆ

    ತೋಟಕ್ಕೆ ನೀರು ಹಾಯಿಸಲು ಹೋದ ರೈತನ ಬರ್ಬರ ಕೊಲೆ

    ಚಿಕ್ಕಬಳ್ಳಾಪುರ: ತೋಟಕ್ಕೆ ನೀರು ಹಾಯಿಸಲು ಹೋದ ರೈತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರೈತ ಶ್ರೀನಿವಾಸ್(65) ಕೊಲೆಯಾದವರು. ಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ಇಟ್ಟುಕೊಂಡಿರುವ ಇಳಿವಯಸ್ಸಿನ ಶ್ರೀನಿವಾಸ್, ಕಳೆದ ರಾತ್ರಿ ತೋಟದಲ್ಲಿ ಬೆಳೆಗೆ ನೀರು ಹಾಯಿಸಲು ಹೋದಾಗ ಯಾರೋ ಕೊಲೆ ಮಾಡಿದ್ದಾರೆ.

    65 ವರ್ಷದ ಶ್ರೀನಿವಾಸ್, ದಶಕದ ಹಿಂದೆಯೇ ಪತ್ನಿಯನ್ನು ಕಳೆದುಕೊಂಡಿದ್ದ. ಇದರ ಮಧ್ಯೆ ಹದಿಹರೆಯದ ಮಹಿಳೆಯ ಜೊತೆ ಅಕ್ರಮ ಸಂಬಂಧವೂ ಇತ್ತು ಎಂಬ ಮಾತುಗಳು ಕೇಳಿಬಂದಿವೆ. ಹಣದ ವ್ಯವಹಾರಗಳೂ ಇದ್ದವು, ಆದರೆ ಕೊಲೆ ಮಾಡುವಷ್ಟು ದ್ವೇಷ ಕಟ್ಟಿಕೊಂಡಿರಲಿಲ್ಲ. ಕಳೆದ ರಾತ್ರಿ ಶ್ರೀನಿವಾಸ್ ಮನೆಗೆ ಬರಲಿಲ್ಲ ಎಂದು ಬೆಳಗ್ಗೆ ತೋಟದ ಕಡೆ ಹೋಗಿ ನೋಡಿದರೆ ಶ್ರೀನಿವಾಸ್ ಕೊಲೆಯಾಗಿ ಬಿದ್ದಿರೋದು ಕಂಡು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ಜಾಡು ಹಿಡಿದ್ದಾರೆ.

  • ಮಂಡ್ಯ ಜಿಲ್ಲೆಯಲ್ಲಿ ಆತಂಕ ಹುಟ್ಟಿಸುವ ನಿಗೂಢ ದೃಶ್ಯ – ಸಿಸಿಟಿವಿಯಲ್ಲಿ ಸೆರೆ

    ಮಂಡ್ಯ ಜಿಲ್ಲೆಯಲ್ಲಿ ಆತಂಕ ಹುಟ್ಟಿಸುವ ನಿಗೂಢ ದೃಶ್ಯ – ಸಿಸಿಟಿವಿಯಲ್ಲಿ ಸೆರೆ

    ಮಂಡ್ಯ: ಭೂಮಿಯ ಮೇಲೆ ಆತ್ಮಗಳು ಸಂಚಾರ ಮಾಡುತ್ತವೆ ಎಂದು ಕೆಲವರು ಹೇಳುತ್ತಾರೆ. ಇಲ್ಲ ಎನ್ನುವ ತರ್ಕಗಳು ಇಂದಿಗೂ ಸಹ ವೈಜ್ಞಾನಿಕವಾಗಿ ಹಾಗೂ ಧಾರ್ಮಿಕವಾಗಿ ನಡೆಯುತ್ತಿವೆ. ಇದರ ಮಧ್ಯೆ ಸಕ್ಕರೆ ನಾಡು ಮಂಡ್ಯದಲ್ಲಿ ಆತ್ಮ ಸಂಚಾರದ್ದು ಎನ್ನಲಾದ ದೃಶ್ಯವೊಂದು ಸಿಸಿಟಿವಿಯಲ್ಲಿ ಗೋಚರವಾಗಿದೆ. ಇದನ್ನು ನೋಡಿ ಇದೀಗ ಜನರಲ್ಲಿ ಆತಂಕ ಮನೆ ಮಾಡಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗವಿನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಇಂತಹದ್ದೆ ಒಂದು ನಿಗೂಢವಾದ ದೃಶ್ಯ ಕಾಣಿಸಿಕೊಂಡಿದ್ದು, ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ನಗುವಿನಹಳ್ಳಿ ಗ್ರಾಮದ ಗೋಪಾಲ್ ಎಂಬವರ ತೋಟದ ಮನೆಯಲ್ಲಿ ಜನವರಿ 31 ರಂದು ಇದ್ದಕ್ಕಿದ್ದ ಹಾಗೆ ಕಪ್ಪು ನೆರಳೊಂದು ಸಂಚಾರ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಕಂಡ ಜನರೆಲ್ಲಾ ಇದು ಆತ್ಮ ಸಂಚಾರ ಮಾಡುವ ದೃಶ್ಯ ಎಂದು ಹೇಳುತ್ತಿದ್ದಾರೆ.

    ಗೋಪಾಲ್ ಅವರ ತೋಟದ ಮನೆ ನಗುವಿನಹಳ್ಳಿ ಗ್ರಾಮದ ಹೊರ ಭಾಗದಲ್ಲಿದ್ದು, ಪಕ್ಕದಲ್ಲಿಯೇ ಒಂದು ಹಳ್ಳ ಹರಿಯುತ್ತಿದೆ. ಅಲ್ಲದೇ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಸಹ ಇದೆ. ಇಲ್ಲಿ ಹಲವು ವರ್ಷಗಳ ಹಿಂದೆ ಮಹಿಳೆ ಹಾಗೂ ಯುವಕ ಅಪಘಾತದಿಂದ ಮೃತಪಟ್ಟಿದ್ದರು. ಜೊತೆಗೆ ಓರ್ವ ಕುಡಿದ ಮತ್ತಿನಲ್ಲಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆಗಳು ಈಗ ಕಂಡಿರುವ ದೃಶ್ಯಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಗೋಪಾಲ್ ಅವರು ಕಳ್ಳರ ಭಯದಿಂದ ಸಿಸಿಟಿವಿ ಕ್ಯಾಮೆರಾವನ್ನು ತಮ್ಮ ತೋಟದ ಮನೆಯಲ್ಲಿ ಹಾಕಿಸಿದ್ದರು. ಇದೀಗ ಅದೇ ಸಿಸಿಟಿವಿಯಲ್ಲಿ ಕಳ್ಳರ ಬದಲಿಗೆ ಆತಂಕ ಹುಟ್ಟಿಸುವ ದೃಶ್ಯವೊಂದು ಸೆರೆಯಾಗಿರುವುದನ್ನು ನೋಡಿ ಗ್ರಾಮಸ್ಥರಲ್ಲಿ ಒಂದಷ್ಟು ಆತಂಕ ಹುಟ್ಟಿದೆ.

  • ತೋಟದ ಮನೆಗೆ ನುಗ್ಗಿ ದರೋಡೆಗೆ ಯತ್ನ: ಅರ್ಧ ಗಂಟೆ ಕಾದಾಟ ನಡೆಸಿ ಕಳ್ಳನ ಹಿಡಿದ ಮಾಲೀಕ

    ತೋಟದ ಮನೆಗೆ ನುಗ್ಗಿ ದರೋಡೆಗೆ ಯತ್ನ: ಅರ್ಧ ಗಂಟೆ ಕಾದಾಟ ನಡೆಸಿ ಕಳ್ಳನ ಹಿಡಿದ ಮಾಲೀಕ

    ಚಾಮರಾಜನಗರ: ತೋಟದ ಮನೆಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿದ್ದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿಯಲ್ಲಿ ಘಟನೆ ನಡೆದಿದ್ದು, ಬಂಧಿತ ದರೋಡೆಕೋರರನ್ನು ಗುಂಡ್ಲುಪೇಟೆ ತಾಲೂಕು ಕೋಡಹಳ್ಳಿಯ ಸಿದ್ದ, ಪ್ರದೀಪ ಹಾಗೂ ರವಿ ಎಂದು ಗುರುತಿಸಲಾಗಿದೆ.

    ಹೊಂಗಳ್ಳಿ ಹೊರವಲಯಲದಲ್ಲಿ ಕೇರಳ ಮೂಲದ ಪ್ರದೀಪ್ ಅವರು ತೋಟ ಗುತ್ತಿಗೆ ಪಡೆದು ತೋಟದ ಮನೆಯಲ್ಲೇ ವಾಸವಿದ್ದಾರೆ. ತಡ ರಾತ್ರಿ ತೋಟದ ಮನೆಗೆ ನುಗ್ಗಿದ ಮೂವರು ದರೋಡೆಕೋರರ ತಂಡ ಮಾಲೀಕ ಪ್ರದೀಪ್ ಮೇಲೆ ಖಾರದಪುಡಿ ಎರಚಿ ರಾಡ್ ನಿಂದ ಹಲ್ಲೆ ನಡೆಸಿದೆ. ಈ ವೇಳೆ ಮಾಲೀಕ ಪ್ರದೀಪ್ ಸಹ ಪ್ರತಿ ದಾಳಿ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಹೊಡೆದಾಟ ನಡೆದಿದೆ. ಇದೇ ಸಂದರ್ಭದಲ್ಲಿ ಮನೆಯ ಒಳಗಿನಿಂದ ಕಬ್ಬಿಣದ ರಾಡ್ ತಂದ ಪ್ರದೀಪ್ ದರೋಡೆಕೋರರ ಮೇಲೆ ಬೀಸಿದ ಪರಿಣಾಮ ಓರ್ವ ದರೋಡೆಕೋರ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.

    ಉಳಿದಿಬ್ಬರು ದರೋಡೆಕೋರರು ಪ್ರದೀಪ್ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಪತ್ನಿ ಕುತ್ತಿಗೆಯಲ್ಲಿದ್ದ 40 ಗ್ರಾಂ. ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ತಕ್ಷಣ ಪ್ರದೀಪ್ ಗ್ರಾಮಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಧಾವಿಸಿದ ಗ್ರಾಮಸ್ಥರು ಕುಸಿದುಬಿದ್ದು, ಗಾಯಗೊಂಡಿದ್ದ ದರೋಡೆಕೋರನ ಕೈಕಾಲು ಕಟ್ಟಿ ಗುಂಡ್ಲುಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಧಾವಿಸಿದ ಗುಂಡ್ಲುಪೇಟೆ ಪೊಲೀಸರು ಕುಸಿದುಬಿದ್ದಿದ್ದ, ಗ್ರಾಮಸ್ಥರು ಹಿಡಿದಿಟ್ಟಿದ್ದ ದರೋಡೆಕೋರನನ್ನು ಬಂಧಿಸಿ ಕರೆದೊಯ್ದು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತ ನೀಡಿದ ಸುಳಿವಿನ ಮೇರೆಗೆ ಸರ್ಕಲ್ ಇನ್‍ಸ್ಪೆಕ್ಟರ್ ಮಹದೇವಸ್ವಾಮಿ, ಎಸ್‍ಐ ರಾಜೇಂದ್ರ ನೇತೃತ್ವದಲ್ಲಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಉಳಿದ ಇಬ್ಬರು ದರೋಡೆಕೋರರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ತೋಟದ ಮಾಲೀಕ ಪ್ರದೀಪ್ ನನ್ನು ಚಿಕಿತ್ಸೆಗಾಗಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 55 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆಗೆ ಡಿಕೆಶಿ ಚಾಲನೆ

    55 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆಗೆ ಡಿಕೆಶಿ ಚಾಲನೆ

    ಕೋಲಾರ: ಜಿಲ್ಲೆಯ ಮಾಲೂರಲ್ಲಿ 55 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಅಲ್ಲದೆ ರೈತರ ತೋಟಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ, ಧೈರ್ಯ ತುಂಬಿದರು.

    ಸಂಕಷ್ಟದಲ್ಲಿರುವ ರೈತರ ತೋಟಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಕೇಳುವುದರ ಜೊತೆಗೆ ಅವರು ಬೆಳೆದಿರುವ ತರಕಾರಿ ಖರೀದಿ ಮಾಡಿ ಜನರಿಗೆ ಹಂಚಲು ಕಾಂಗ್ರೆಸ್ ಮುಂದಾಗಿದೆ. ಎಲೆಕೋಸು, ಕ್ಯಾರೆಟ್, ಟೊಮ್ಯಾಟೋ, ಕ್ಯಾಪ್ಸಿಕಂ ತೋಟಗಳಿಗೆ ಡಿಕೆಶಿ ಭೇಟಿ ನೀಡಿದರು. ಅಲ್ಲದೆ ಜನರಿಗೆ ವಿತರಿಸಲು ಸಿದ್ಧವಾಗಿರುವ ಗೋಧಿ ಹಿಟ್ಟು ಹಾಗೂ ತರಕಾರಿಗಳನ್ನು ಪರಿಶೀಲಿಸಿದು.

    ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ಕೋಲಾರಕ್ಕೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಮಾಲೂರು ಶಾಸಕ ನಂಜೇಗೌಡರ ನಿವಾಸದಲ್ಲಿ ಆರತಿ ಎತ್ತಿ ಸ್ವಾಗತ ಮಾಡಲಾಯಿತು. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸಕ ನಂಜೇಗೌಡ ತಮ್ಮ ಕ್ಷೇತ್ರದ ಸುಮಾರು 55 ಸಾವಿರ ಕುಟುಂಬಗಳಿಗೆ ಗೋಧಿ ಹಿಟ್ಟು, ಅಡುಗೆ ಎಣ್ಣೆ ಹಾಗೂ ತರಕಾರಿಗಳನ್ನು ವಿತರಣೆ ಮಾಡುತ್ತಿದ್ದು, ವಿತರಣೆ ಕಾರ್ಯಕ್ಕೆ ಡಿಕೆಶಿ ಚಾಲನೆ ನೀಡಿದರು. ಈ ವೇಳೆ ಮಾಜಿ ಸಚಿವ ಕೃಷ್ಣಬೈರೇಗೌಡ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಸಾಥ್ ನೀಡಿದರು.

    ಈ ವೇಳೆ ಮಾತನಾಡಿದ ಡಿಕೆಶಿ, ಸರ್ಕಾರ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಏನೆಲ್ಲಾ ನಡೆಯುತ್ತಿದೆ ಎಂಬುದರ ಕುರಿತು ದಾಖಲೆ ಕಲೆ ಹಾಕುತ್ತಿದ್ದೇವೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಪೇಪರ್ ನಲ್ಲಿ ಹೇಳಿದಂತೆ ಕೆಲಸ ನಡೆಯುತ್ತಿಲ್ಲ. ಅಲ್ಲದೆ ಕೋಮು ಸೌಹರ್ದ ಹದಗೆಡುತ್ತಿದೆ ಇದನ್ನು ಯಡಿಯೂರಪ್ಪನವರು ಬರೀ ಮಾತಿನಲ್ಲಿ ಹೇಳಿದ್ದಾರೆ ಇದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.

    ಸರ್ಕಾರ ಕೊರೊನಾ ಸಂಕಷ್ಟದ ಸ್ಥಿತಿಯಲ್ಲಿ ಮೊದಲು ರೈತರ ತರಕಾರಿಗಳನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು. ಸಿಎಂ ಯಡಿಯೂರಪ್ಪ ವಿಧಾನಸಭೆಯಲ್ಲಿ ರೈತರ ಪರವಾಗಿದ್ದೇವೆ ಎಂದು ಹೇಳಿದಂತೆ ನಡೆದುಕೊಳ್ಳಬೇಕು. ಬೂತ್ ಮಟ್ಟದ ಕಾಂಗ್ರೇಸ್ ಮುಖಂಡರು ಸರ್ಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳು ಜನರಿಗೆ ಸಿಗುತ್ತಿದೆಯಾ ಎನ್ನುವುದನ್ನು ಗಮನಿಸಲು ಸೂಚಿಸಿದ್ದೇನೆ ಎಂದರು.

    ಇದೇ ವೇಳೆ ಮಾಲೂರು ತಾಲೂಕಿನ ಬಾಳಿಗಾನಹಳ್ಳಿ, ರಾಜೇನಹಳ್ಳಿ, ಓಬೇನಹಳ್ಳಿ, ಸೇರಿದಂತೆ ವಿವಿಧ ರೈತರ ತೋಟಗಳಿಗೆ ಭೇಟಿ ನೀಡಿ ರೈತರ ಜೊತೆ ಮಾತನಾಡಿದರು. ಎಲೆ ಕೋಸು, ಕ್ಯಾರೆಟ್, ಟೊಮ್ಯಾಟೋ, ಕ್ಯಾಪ್ಸಿಕಂ ತೋಟಗಳಲ್ಲಿ ಡಿ.ಕೆ.ಶಿವಕುಮಾರ್ ಒಂದು ಸುತ್ತು ಹಾಕಿದರು.