Tag: plant

  • ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡ, ಮರ ಬೆಳೆಸೋದು ಕಡ್ಡಾಯ – ಆರೋಗ್ಯ ಇಲಾಖೆ ಆದೇಶ

    ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡ, ಮರ ಬೆಳೆಸೋದು ಕಡ್ಡಾಯ – ಆರೋಗ್ಯ ಇಲಾಖೆ ಆದೇಶ

    ಬೆಂಗಳೂರು: ಇನ್ಮುಂದೆ ಪ್ರತಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡ, ಮರಗಳನ್ನ ಬೆಳೆಸಿ ನಿರ್ವಹಣೆ ಮಾಡುವುದನ್ನ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ (Health Department) ಆದೇಶ ಹೊರಡಿಸಿದೆ.

    ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆರೋಗ್ಯ ಸಂಸ್ಥೆಗಳ ಆವರಣದಲ್ಲಿ ಉತ್ತಮ ಗಾಳಿ ನೀಡುವಂತಹ ಹಾಗೂ ಔಷಧೀಯ ಗಿಡ/ಮರಗಳನ್ನ (Plant Or Tree) ಬೆಳೆಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಇದನ್ನೂ ಓದಿ: T20 WorldCup-2024 ಟೂರ್ನಿಯ ದಿನಾಂಕ ಬಹಿರಂಗ – USA, ವಿಂಡೀಸ್‌ ಆತಿಥ್ಯ

    ಹವಾಮಾನ ಬದಲಾವಣೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ತಪ್ಪಿಸಲು ಆರೋಗ್ಯ ಇಲಾಖೆ ಹೊಸ ಕ್ರಮ ತೆಗೆದುಕೊಂಡಿದೆ. ʻಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯʼ ಎಂಬ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಗಿಡ/ಮರಗಳನ್ನ ಕಡ್ಡಾಯವಾಗಿ ಬೆಳೆಸುವಂತೆ ಹೇಳಿದೆ.

    ಗಿಡಗಳನ್ನ ನೆಡುವುದರಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಆವರಣದಲ್ಲಿ ಹಸಿರು ವಾತಾವರಣ ನಿರ್ಮಾಣ ಆಗುತ್ತದೆ. ಜೊತೆಗೆ ಮಳೆಯ ನೀರನ್ನು ಭೂಮಿ ಹೀರಿಕೊಳ್ಳುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಹಾಗಾಗಿ ನೆಟ್ಟ ಗಿಡಗಳನ್ನ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆಯೂ ಎಚ್ಚರಿಸಿದೆ. ಇದನ್ನೂ ಓದಿ: ಇಬ್ಬರೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸೋಣ.. ಯಾರಿಗೆ ಎಷ್ಟು ವೋಟು ಬರುತ್ತೆ ನೋಡೋಣ – ಪ್ರದೀಪ್ ಈಶ್ವರ್‌ಗೆ ಸುಧಾಕರ್ ಸವಾಲು

    ಜುಲೈ ತಿಂಗಳ ಒಳಗಡೆ ಕಡ್ಡಾಯವಾಗಿ ಆಸ್ಫತ್ರೆ ಆವರಣದಲ್ಲಿ ಗಡಿ ನೆಡುವ ಚಟುವಟಿಕೆ ಮುಗಿಸುವಂತೆ ತಾಕೀತು ಮಾಡಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುದ್ಧ ಗಾಳಿ ಸಿಗುವ ಹಾಗೆ ಗಿಡ-ಮರಗಳಿರುವಂತೆ ನೋಡಿಕೊಳ್ಳಬೇಕು ಅಂತಾ ತಾಕೀತು ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಿಡ ನೆಡುವುದರ ಜೊತೆಗೆ ಸಂರಕ್ಷಿಸಿ: ರಾಜ್ಯಪಾಲರ ಕರೆ

    ಗಿಡ ನೆಡುವುದರ ಜೊತೆಗೆ ಸಂರಕ್ಷಿಸಿ: ರಾಜ್ಯಪಾಲರ ಕರೆ

    ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಭೂಮಿ ಮೇಲಿನ ತಾಪಮಾನ ಹೆಚ್ಚಾಗುತ್ತಿದ್ದು, ನೈಸರ್ಗಿಕ ಸಂಪನ್ಮೂಲದ ಮೇಲೆ ಇದು ಪರಿಣಾಮ ಬೀರುತ್ತಿದೆ. ಹಾಗಾಗಿ, ಪ್ರತಿಯೊಬ್ಬರು ಮರ ಮತ್ತು ಜಲ ಸಂರಕ್ಷಣೆಗೆ ಮುಂದಾಗುವ ಮೂಲಕ ಪರಿಸರ ಕಾಪಾಡಿಕೊಳ್ಳಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

    ನಗರದ ಗೊಟ್ಟಿಗೆರೆಯಲ್ಲಿ ಮಂಗಳವಾರ ಬ್ರಹ್ಮಕುಮಾರೀಸ್ ವತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಸುವರ್ಣ ಭಾರತದತ್ತ ಹೆಜ್ಜೆಯಾಗಿ ಬ್ರಹ್ಮಕುಮಾರಿಯರ ರಾಷ್ಟ್ರೀಯ ಕಲ್ಪತರು ಯೋಜನೆಗೆ ಚಾಲನೆ ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಸ್ಥಿರ ಕೃಷಿ, ನೀರಿನ ಸಂಸ್ಕರಣೆ, ಮರ ನೆಡುವಿಕೆ, ಸರಳ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವುದು ಸೇರಿದಂತೆ ಬ್ರಹ್ಮಕುಮಾರಿ ಅವರ ‘ಕಲ್ಪತರು’ ಎಂಬ ಪ್ರಮುಖ ಮರ ನೆಡುವ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಇದು ವ್ಯಕ್ತಿಗಳು ತಮ್ಮ ಪರಿಸರದ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದರು. ಇದನ್ನೂ ಓದಿ: ಕಡೇ ಕ್ಷಣದ ಬದಲಾವಣೆ ಮಧ್ಯೆ ಟಿಕೆಟ್ ಘೋಷಣೆ – ಹೈಡ್ರಾಮಾ ಮೂಲಕ ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ 

    ಗಿಡಗಳನ್ನು ನೆಡುವುದರ ಜೊತೆಗೆ ಸಂರಕ್ಷಣೆ ಮಾಡಬೇಕು. ಅಲ್ಲದೇ ಪ್ರತಿಯೊಬ್ಬರು ನೀರಿನ ಮಹತ್ವವನ್ನು ಅರಿತು ಹಿತಮಿತವಾಗಿ ಬಳಸಬೇಕು. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.

    ಬ್ರಹ್ಮ ಕುಮಾರೀಸ್ ವಿಶ್ವಾದ್ಯಂತ ಆಧ್ಯಾತ್ಮಿಕ ಸಂಸ್ಥೆಯಾಗಿದ್ದು, ವೈಯಕ್ತಿಕ ರೂಪಾಂತರ ಮತ್ತು ವಿಶ್ವ ನವೀಕರಣಕ್ಕೆ ಮೀಸಲಾಗಿದೆ. ಇವರ ನಿಜವಾದ ಬದ್ಧತೆಯು ಭೌತಿಕದಿಂದ ಆಧ್ಯಾತ್ಮಿಕವಾಗಿ ತನ್ನ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ಮಾಡಲು ವ್ಯಕ್ತಿಯನ್ನು ಪ್ರೇರೇಪಿಸುತ್ತದೆ. ಪ್ರತಿ ಆತ್ಮವು ಶಾಂತಿ ಮತ್ತು ವೈಯಕ್ತಿಕ ಘನತೆಯ ಆಳವಾದ ಸಾಮೂಹಿಕ ಪ್ರಜ್ಞೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

    ಬ್ರಹ್ಮ ಕುಮಾರೀಸ್ ವರ್ಲ್ಡ್ ಸ್ಪಿರಿಚ್ಯುಯಲ್ ಯೂನಿವರ್ಸಿಟಿ ಒಂದು ಸಾಮಾಜಿಕ-ಆಧ್ಯಾತ್ಮಿಕ ಮತ್ತು ಅಂತರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದೆ. ಶಾಂತಿ ಮತ್ತು ಜಾಗತಿಕ ಸಾಮರಸ್ಯವನ್ನು ಉತ್ತೇಜಿಸಲು ಹಲವಾರು ಯೋಜನೆಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯೊಂದಿಗೆ ಕೆಲಸ ಮಾಡುತ್ತಿದೆ. ಬ್ರಹ್ಮಾಕುಮಾರಿಯರು ಮೌಂಟ್ ಅಬುನಲ್ಲಿರುವ ತಮ್ಮ ಅಂತರಾಷ್ಟ್ರೀಯ ಪ್ರಧಾನ ಕಛೇರಿಯ ಮೂಲಕ ಮತ್ತು 136ಕ್ಕೂ ಹೆಚ್ಚು ದೇಶಗಳಲ್ಲಿನ ಶಾಖೆಗಳ ಮೂಲಕ ಜೀವನದ ಪ್ರತಿಯೊಂದು ಸಂಭವನೀಯ ಕ್ಷೇತ್ರಗಳಲ್ಲಿ 8 ದಶಕಗಳಿಂದ ಮಾನವಕುಲಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

    ಬ್ರಹ್ಮಾಕುಮಾರೀಸ್ ಮಹಿಳೆಯರಿಂದ ನಡೆಸಲ್ಪಡುವ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸಂಸ್ಥಾಪಕರಾದ ಪ್ರಜಾಪಿತ ಬ್ರಹ್ಮ ಬಾಬಾ ಅವರು ಮೊದಲಿನಿಂದಲೂ ತಾಯಂದಿರು ಮತ್ತು ಸಹೋದರಿಯರನ್ನು ಮುಂಚೂಣಿಯಲ್ಲಿರಿಸಲು ನಿರ್ಧರಿಸಿದರು. ಇದರಿಂದಾಗಿ ಬ್ರಹ್ಮಕುಮಾರಿಯರು ವಿಶ್ವದ ಇತರ ಎಲ್ಲ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅತಿಹೆಚ್ಚು ಟಿವಿ ನೋಡುವವರಿಗೆ 16% ಹೃದಯ ಕಾಯಿಲೆ ಬರುವ ಸಾಧ್ಯತೆ: ತಜ್ಞರು 

    ಬ್ರಹ್ಮಕುಮಾರಿಯವರ ಧೈರ್ಯ, ಕ್ಷಮಿಸುವ ಸಾಮರ್ಥ್ಯ ಮತ್ತು ಏಕತೆಗೆ ಅವರ ಆಳವಾದ ಬದ್ಧತೆಯನ್ನು ಸತತವಾಗಿ ಸಾಬೀತುಪಡಿಸಿದೆ. ಬ್ರಹ್ಮಬಾಬಾ ಕಲಿಸಿದ ಜೀವನ ಕೌಶಲ್ಯಗಳು ಸಮಯದ ಪರೀಕ್ಷೆಯಾಗಿ ನಿಂತಿವೆ. ಅವರು ಮುಂಚೂಣಿಯಲ್ಲಿಟ್ಟ ಯುವ ಸಹೋದರಿಯರು ಈಗ ತಮ್ಮ 80-90 ವರ್ಷಗಳಲ್ಲಿ ಶಾಂತಿ, ಪ್ರೀತಿ ಮತ್ತು ಜ್ಞಾನದ ಜ್ಯೋತಿಯಾಗಿ ಮುನ್ನಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.

    ರಾಜಯೋಗಿನಿ, ಬ್ರಹ್ಮಕುಮಾರಿಗಳ ಜಂಟಿ ಮುಖ್ಯಸ್ಥ ಡಾ.ನಿರ್ಮಲಾ, ಮೌಂಟ್ ಅಬುವಿನ ಬ್ರಹ್ಮಕುಮಾರಿಗಳ ಕಾರ್ಯನಿರ್ವಾಹಕ ಕಾರ್ಯದರ್ಶಿ ರಾಜಯೋಗಿ ಡಾ. ಮೃತ್ಯುಂಜಯ್, ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜಯೋಗಿನಿ ಬ್ರಹ್ಮಕುಮಾರಿ ಅಂಬಿಕಾ ಅವರು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

  • ಒಂದೇ ಗಿಡದಲ್ಲಿ 1,200 ಟೊಮೆಟೋ ಬೆಳೆದು ಗಿನ್ನಿಸ್ ದಾಖಲೆ ಮಾಡಿದ

    ಒಂದೇ ಗಿಡದಲ್ಲಿ 1,200 ಟೊಮೆಟೋ ಬೆಳೆದು ಗಿನ್ನಿಸ್ ದಾಖಲೆ ಮಾಡಿದ

    ವಾಷಿಂಗ್ಟನ್: ಕೆಲವು ಹವ್ಯಾಸಗಳು ನಮ್ಮನ್ನು ಹಾಳು ಮಾಡುತ್ತವೆ ಕೆಲವು ಜೀವನ ಕಟ್ಟಿಕೊಡುತ್ತವೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಇಲ್ಲೊಬ್ಬ ವ್ಯಕ್ತಿ ಹವ್ಯಾಸ ಮತ್ತು ಸಂತೋಷಕ್ಕಾಗಿ ಕೃಷಿಯನ್ನು ಮಾಡಿ ಗಿನ್ನಿಸ್ ದಾಖಲೆಗೆ (World Record) ಪಾತ್ರನಾಗಿದ್ದಾನೆ.

    ಒಂದೇ ಗಿಡದಲ್ಲಿ 1,200 ಟೊಮೆಟೋ ಹಣ್ಣುಗಳನ್ನು ಬೆಳೆಸಿ ವ್ಯಕ್ತಿಯೊಬ್ಬ ಗಿನ್ನಿಸ್ ದಾಖಲೆ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ 2 ವರ್ಷಗಳ ಬಳಿಕ ಒಂದೇ ದಿನ 3 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್

    ಯುಕೆಯ ನಿವಾಸಿ ಡೌಗ್ಲಾಶ್ ಸ್ಮಿತ್ ಮನೆಯ ಟೆರೇಸ್ ಮೇಲೆ ಟೊಮೆಟೋ ಗಿಡವನ್ನು ನೆಟ್ಟು ಒಂದೆ ಗಿಡದಿಂದ 2021ರಲ್ಲಿ 839 ಟೊಮೆಟೋ ಹಣ್ಣುಗಳನ್ನು ಬೆಳೆಸಿ ದಾಖಲೆ ನಿರ್ಮಿಸಿದ್ದರು. ಇದೀಗ ಅದೇ ವ್ಯಕ್ತಿ ಒಂದೇ ಕಾಂಡದ ಗಿಡದಿಂದ 1,269 ಟೊಮೆಟೋ ಹಣ್ಣುಗಳನ್ನು ಬೆಳೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಸ್ಮಿತ್ ಈ ಹಿಂದೆ ಮನೆಯ ಹಿತ್ತಲಿನಲ್ಲಿ 21 ಅಡಿ ಎತ್ತರದ ಸೂರ್ಯಕಾಂತಿ ಗಿಡವನ್ನು ಬೆಳೆದು ದಾಖಲೆ ನಿರ್ಮಿಸಿದ್ದರು. ಇದೀಗ ಒಂದೇ ಗಿಡದಲ್ಲಿ 1269 ಟೊಮೆಟೋ ಹಣ್ಣುಗಳನ್ನು ಬೆಳೆದು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

    2021ರ ಸೆಪ್ಟೆಂಬರ್‌ನಲ್ಲಿ  ಟೊಮೆಟೋವನ್ನು ನೆಟ್ಟು ಬೆಳೆಸಲು ಆರಂಭಿಸಿದ್ದರು. ಇದೀಗ 1,200ಕ್ಕೂ ಹೆಚ್ಚು ಟೊಮೆಟೊ ಹಣ್ಣುಗಳನ್ನು ಬೆಳೆಸಿದ್ದಾರೆ. 2022 ಮಾರ್ಚ್ 9 ರಂದು ಗಿನ್ನಿಸ್ ವಲ್ಡ್ ರೆಕಾರ್ಡ್ ಅಧಿಕೃತವಾಗಿ ಹೊಸ ದಾಖಲೆ ನಿರ್ಮಿಸಿರುವುದರ ಕುರಿತು ಖಚಿತಪಡಿಸಿದೆ. ಸ್ಮಿತ್ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

  • ವೃಕ್ಷ ಪಾಲಕರಾದ ವಿದ್ಯಾರ್ಥಿಗಳು- ಹಸಿರಾಯ್ತು ಶಾಲಾ ಆವರಣ

    ವೃಕ್ಷ ಪಾಲಕರಾದ ವಿದ್ಯಾರ್ಥಿಗಳು- ಹಸಿರಾಯ್ತು ಶಾಲಾ ಆವರಣ

    ಕೊಪ್ಪಳ: ನರೇಗಾ ಯೋಜನೆಯಡಿ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗೆ ಕಂಪೌಂಡ್ ನಿರ್ಮಿಸಲಾಗಿದ್ದು, ಅರಣ್ಯ ಇಲಾಖೆಯ ಸಹಯೋಗದಲ್ಲಿ ಸುತ್ತಲೂ 150ಕ್ಕೂ ಹೆಚ್ಚು ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದೆ.

    ಖುದ್ದು ಶಾಲೆಯ ವಿದ್ಯಾರ್ಥಿಗಳಿಂದಲೇ ಗಿಡಗಳನ್ನು ನೆಡುವ ಮೂಲಕ ಅವರಿಗೆ ಗಿಡಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದಲೇ ಒಂದು ಗಿಡವನ್ನು ಇಬ್ಬರು ನಿರ್ವಹಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಗಿಡಗಳಿಗೆ, ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರ ನಾಯಕರು, ವಿಜ್ಞಾನಿಗಳು, ಕವಿಗಳ ಹೆಸರುಗಳನ್ನು ಇಟ್ಟುಕೊಂಡು ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನ ಗ್ರಾಮೀಣ ಭಾಗದ ಮಕ್ಕಳಿಗೆ ವಿಚಿತ್ರ ಕಾಯಿಲೆ- ಪೋಷಕರಲ್ಲಿ ಅತಂಕ

    ಇಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು. ಜೊತೆಗೆ ಗಿಡಗಳ ಪೋಷಣೆಯನ್ನು ಮಾಡುವಂತೆ ತಿಳಿಸಿದರು.

  • ನಂದಿ ಬೆಟ್ಟದ ಬಳಿ ನಮ್ಮ ನಂದಿ-ಹಸಿರು ಬೆಂಗಳೂರು ಅಭಿಯಾನಕ್ಕೆ ಸದ್ಗುರು ಚಾಲನೆ

    ನಂದಿ ಬೆಟ್ಟದ ಬಳಿ ನಮ್ಮ ನಂದಿ-ಹಸಿರು ಬೆಂಗಳೂರು ಅಭಿಯಾನಕ್ಕೆ ಸದ್ಗುರು ಚಾಲನೆ

    ಚಿಕ್ಕಬಳ್ಳಾಪುರ: ನಮ್ಮ ನಂದಿ-ಹಸಿರು ಬೆಂಗಳೂರು ಗಿಡ ನೆಡುವ ಅಭಿಯಾನಕ್ಕೆ ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಚಾಲನೆ ನೀಡಿದರು.

    ನಂದಿಬೆಟ್ಟ ಸೇರಿದಂತೆ ಸುತ್ತಲಿನ ಬೆಟ್ಡಗುಡ್ಡಗಳಲ್ಲಿ ಗಿಡ ನೆಟ್ಟು ಹಸೀರೀಕರಣ ಮಾಡುವ ಸದುದ್ದೇಶದಿಂದ ನಂದಿಬೆಟ್ಟದ ತಪ್ಪಲಲ್ಲಿ ಗಿಡ ನೆಡುವ ಅಭಿಯಾನಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದರು. ಬೆಳ್ಳಂ ಬೆಳಗ್ಗೆ ನಂದಿಬೆಟ್ಟದ ತಪ್ಪಲಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಸದ್ಗುರುಗಳು ಚಾಲನೆ ನೀಡಿದರು. ಸ್ವಯಂ ಸೇವಕರು ಬಿಂದಿಗೆ ಮೂಲಕ ಬೆಟ್ಟಕ್ಕೆ ನೀರು ಹೊತ್ತು ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. ಇದನ್ನೂ ಓದಿ: 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ

    ಕೇವಲ ಸಂಘ, ಸಂಸ್ಥೆಗಳು ಹಾಗೂ ಸರ್ಕಾರಿ ಅಧಿಕಾರಿಗಳಿಂದ ಯಾವುದೇ ಕಾರ್ಯಕ್ರಮ ಯಶಸ್ವಿ ಆಗುವುದಿಲ್ಲ. ನಾಗರಿಕರು ಹಾಗೂ ಯುವಕರ ಸಹಕಾರವೂ ಅಗತ್ಯ. ಹೀಗಾಗಿ ಯುವಜನತೆ ಈ ಪರಿಸರ ಸ್ನೇಹಿ ನಂದಿ ಮಾಡಲು ಸಾಥ್ ಕೊಡಬೇಕು ಎಂದು ಸದ್ಗುರುಗಳು ಮನವಿ ಮಾಡಿದರು.

    ಚಿಕ್ಕಬಳ್ಳಾಪುರದ ಬಳಿ ಲೀಡರ್ ಶಿಪ್ ಆಕಾಡೆಮಿ ಹಾಗೂ ವಸತಿ ಶಾಲೆ, ಯೋಗ ಸೆಂಟರ್ ಬರಲಿದೆ. ಚಿಕ್ಕಂದಿನಲ್ಲಿ ಚಿಕ್ಕಬಳ್ಳಾಪುರದ ಕಡೆ ಬಹಳ ಸಮಯ ಇರುತ್ತಿದ್ದೆವು. ಆದರೆ ಮತ್ತೆ ಈಗ ಚಿಕ್ಕಬಳ್ಳಾಪುರದ ಕಡೆ ಬರುತ್ತೇವೆಂದು ಅಂದುಕೊಂಡಿರಲಿಲ್ಲ ಎಂದು ನೆನಪುಗಳನ್ನು ಮೆಲುಕು ಹಾಕಿದರು.

    ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಎಸ್‍ಪಿ ಮಿಥುನ್ ಕುಮಾರ್ ಹಾಗೂ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಅರಸಲನ್ ಸೇರಿದಂತೆ ಈಶಾ ಫೌಂಡೇಶನ್ ನ ನೂರಾರು ಸ್ವಯಂ ಸೇವಕರು ಭಾಗಿಯಾಗಿದ್ದರು.

  • ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ ನಟ ಮಹೇಶ್ ಬಾಬು

    ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ ನಟ ಮಹೇಶ್ ಬಾಬು

    ಹೈದರಾಬಾದ್: ಟಾಲಿವುಡ್ ನಟ ಮಹೇಶ್ ಬಾಬು ಅಭಿಮಾನಿಗಳ ಬಳಿ ವಿಶೇಷ ಬೇಡಿಕೆಯನ್ನು ಇಟ್ಟು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

     

    View this post on Instagram

     

    A post shared by Mahesh Babu (@urstrulymahesh)

    ತೆಲುಗು ನಟ ಮಹೆಶ್ ಬಾಬು ತಮ್ಮ ಹುಟ್ಟುಹಬ್ಬವನ್ನು ಗ್ರೀನ್ ಇಂಡಿಯಾ ಭಾಗವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಅವರು ಒಂದು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

    ಇದೇ ಆಗಸ್ಟ್ 9ರಂದು ತಮ್ಮ 46ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನು ಬರೆದಿರುವ ಅವರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಪ್ರತೀ ಅಭಿಮಾನಿಯೂ ಮೂರು ಗಿಡಗಳನ್ನು ನೆಟ್ಟು, ಗ್ರೀನ್ ಇಂಡಿಯಾ ಚಾಲೆಂಜ್‍ನ ಭಾಗವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಎಂದು ಮಹೇಶ್ ಬಾಬು ಕೋರಿಕೊಂಡಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ನಿಮ್ಮೆಲ್ಲರ ಹಾರೈಕೆ, ಅಭಿಮಾನಕ್ಕೆ ನಾನೆಂದಿಗೂ ಆಭಾರಿ. ಈ ಬಾರಿ ನೀವು ಮೂರು ಗಿಡಗಳನ್ನು ನೆಟ್ಟು, ಹುಟ್ಟುಹಬ್ಬವನ್ನು ಆಚರಿಸಿ ಎಂದು ಹೇಳಿದ್ದಾರೆ.

     

    View this post on Instagram

     

    A post shared by Mahesh Babu (@urstrulymahesh)

  • ಮನೆಯಲ್ಲಿ ದೇವರ ಕೋಣೆ ಚಿಕ್ಕದಾದರೂ ಮನೆಗೊಂದು ಗಿಡ ಬೆಳೆಸಿ: ಗವಿ ಶ್ರೀ

    ಮನೆಯಲ್ಲಿ ದೇವರ ಕೋಣೆ ಚಿಕ್ಕದಾದರೂ ಮನೆಗೊಂದು ಗಿಡ ಬೆಳೆಸಿ: ಗವಿ ಶ್ರೀ

    ಕೊಪ್ಪಳ: ಮನೆಯಲ್ಲಿ ದೇವರ ಕೋಣೆ ಚಿಕ್ಕದಾದರೂ ಪರವಾಗಿಲ್ಲ, ಆದರೆ ಮನೆಗೊಂದು ಗಿಡ ಬೆಳೆಸಿ ಎಂದು ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ನಗರದ ಭಾಗ್ಯನಗರ ಪಟ್ಟಣ ಪಂಚಾಯತ ಆವರಣದಲ್ಲಿ ಗವಿಮಠ, ಪಟ್ಟಣ ಪಂಚಾಯತಿ ಭಾಗ್ಯನಗರ ಆಶ್ರಯದಲ್ಲಿ ಏರ್ಪಡಿಸಿದ್ದ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು, ನೀರೆರೆದು ಆಶೀರ್ವಚನ ನೀಡಿದರು. ಮನೆಯಲ್ಲಿನ ದೇವರ ಕೋಣೆ ಚಿಕ್ಕದಾದರೂ ತೊಂದರೆ ಇಲ್ಲ. ಆದರೆ ಮನೆಗೊಂದು ಸಸಿ ನೆಟ್ಟು, ಬೆಳೆಸಬೇಕು. ಮರ ದೇವರು ಕೊಟ್ಟ ವರ ಎಂದು ಭಾವಿಸಬೇಕು ಎಂದರು.

    ಊರಿನಲ್ಲಿ ವಿಶಾಲವಾದ ರಸ್ತೆಗಳಿವೆ ಭಾಗ್ಯನಗರ ಚಂಡೀಗಢದಂತೆ ಕಾಣುತ್ತದೆ. ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಿದರೆ ಊರು ಇನ್ನೂ ಸುಂದರವಾಗಿ ಕಾಣುತ್ತದೆ. ವರ್ಷಕ್ಕೊಮ್ಮೆ ಕೇವಲ ಸಸಿಗಳನ್ನು ನೆಡುವುದಷ್ಟೇ ಅಲ್ಲ, ಅವುಗಳನ್ನು ಪಾಲನೆ ಮಾಡಬೇಕು. ಈಗ ಗಿಡ ನೆಟ್ಟು ಫೋಟೊ ತೆಗೆಸಿಕೊಂಡು, ಬಳಿಕ ಅದನ್ನು ತಿರುಗಿ ಸಹ ನೋಡುವುದಿಲ್ಲ. ಹೀಗೆ ಗಿಡ ನೆಟ್ಟರೆ ಏನೂ ಪ್ರಯೋಜನವಿಲ್ಲ. ನೆಟ್ಟ ಗಿಡಗಳನ್ನು ಬೆಳೆಸಬೇಕು, ಈ ಮೂಲಕ ನಿಸರ್ಗಕ್ಕೆ ಕಾಣಿಕೆ ನೀಡಬೇಕು ಎಂದು ಶ್ರೀಗಳು ಕಿವಿ ಮಾತು ಹೇಳಿದರು.

    ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೆರೆಗಳ ಅಭಿವೃದ್ಧಿ ಕಾರ್ಯ, ನೀರು ನಿಲ್ಲಿಸುವ ಕಾರ್ಯ, ಅಂತರ್ಜಲ ಹೆಚ್ಚಿಸುವುದು, ಗಿಡಗಳನ್ನು ನೆಡುವುದು, ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಕ್ರಾಂತಿಗಳು ನಡೆಯುತ್ತಿವೆ. ಈಗ ಸಸ್ಯಕಾಶಿಯನ್ನಾಗಿಸುವ ಸಸ್ಯಕಾಂತ್ರಿಯೂ ಹೆಮ್ಮರವಾಗಿ ವೃಕ್ಷಕ್ರಾಂತಿಯಾಗಲಿದೆ ಇದರಲ್ಲಿ ನಾವೆಲ್ಲಾ ಪಾಲ್ಗೊಂಡಿದ್ದೇವೆ ಎಂಬುದೇ ಹೆಮ್ಮೆಯ ಸಂಗತಿ. ನಾವೆಲ್ಲರೂ ಬರಿ ಸುಮ್ಮನೆ ಗಿಡಗಳನ್ನು ನೆಟ್ಟು ಹೋದರೆ ಉಪಯೋಗವಿಲ್ಲ, ಅವುಗಳನ್ನು ಸಂರಕ್ಷಣೆ ಮಾಡುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಕೇವಲ ನಗರ ಪ್ರದೇಶದಲ್ಲಿ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಗಿಡಗಳನ್ನು ಬೆಳಸುವುದನ್ನು ಪೂಜ್ಯರ ನೇತೃತ್ವದಲ್ಲಿ ಮಾಡೋಣ ಎಂದು ಹೇಳಿದರು.

  • ಆಕ್ಸಿಜನ್ ಚಾಲೆಂಜ್ ಅಭಿಯಾನ- ಸಾವಿರ ಸಸಿ ನೆಡಲು ಧಾರವಾಡ ಎಬಿವಿಪಿ ಸಂಕಲ್ಪ

    ಆಕ್ಸಿಜನ್ ಚಾಲೆಂಜ್ ಅಭಿಯಾನ- ಸಾವಿರ ಸಸಿ ನೆಡಲು ಧಾರವಾಡ ಎಬಿವಿಪಿ ಸಂಕಲ್ಪ

    ಧಾರವಾಡ: ಎಬಿವಿಪಿ ಧಾರವಾಡ ಶಾಖೆಯ ವತಿಯಿಂದ ‘ಆಕ್ಸಿಜನ್ ಚಾಲೆಂಜ್’ ಅಭಿಯಾನ ಇಡೀ ಕರ್ನಾಟಕದಾದ್ಯಂತ ನಡೆಯುತ್ತಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಸುಮಾರು 1 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ನಾಳೆ ಎಬಿವಿಪಿಯಿಂದ ಒಂದೇ ದಿನ 1 ಸಾವಿರ ಸಸಿಗಳನ್ನು ನೆಡಲು ಧಾರವಾಡ ಎಬಿವಿಪಿ ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪರಿಸರ ಸಂರಕ್ಷಣೆಗಾಗಿ ಕಳೆದ ಹಲವು ವರ್ಷಗಳಿಂದ ವಿನೂತನ ಅಭಿಯಾನ, ಯೋಜನೆ ಹಾಗೂ ಕಾರ್ಯಕ್ರಮಗಳಿಂದ ಪರಿಸರ ಜಾಗೃತಿ ಹಾಗೂ ಸಸಿಗಳನ್ನ ನೆಡುವುದು ಅಷ್ಟೆ ಅಲ್ಲದೆ, ಅವುಗಳನ್ನ ಪಾಲನೆ ಪೋಷಣೆ ಮಾಡುವಂತಹ ಮಹತ್ತರ ಕೆಲಸವನ್ನು ಮಾಡುತ್ತಿದೆ.

    ಕೊರೊನಾ ಮಹಾಮಾರಿಯ ಈ ವಿಷಮ ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯ ಸುತ್ತಲಿನ ಪರಿಸರದಲ್ಲಿ ಗಿಡ ಮರಗಳನ್ನ ನೆಟ್ಟು ಪಾಲನೆ ಪೋಷಣೆ ಮಾಡಿ, ಸಮಾಜಕ್ಕೂ ಹಾಗೂ ಮುಂದಿನ ಪಿಳಿಗೆಗೂ ಅನುಕೂಲವಾಗುವ ರೀತಿಯಲ್ಲಿ ಸುಂದರ ಪರಿಸರವನ್ನು ನಿರ್ಮಾಣ ಮಾಡಬೇಕು ಎಂದು ಎಬಿವಿಪಿ ಸಂಘಟನೆ ಕರೆ ಕೊಟ್ಟಿದೆ.

  • ವಿಶ್ವ ಪರಿಸರ ದಿನದಂದು ಗಾಂಜಾ ಗಿಡ ನೆಟ್ಟ ಪುಂಡರು

    ವಿಶ್ವ ಪರಿಸರ ದಿನದಂದು ಗಾಂಜಾ ಗಿಡ ನೆಟ್ಟ ಪುಂಡರು

    ತಿರುವನಂತಪುರಂ: ವಿಶ್ವ ಪರಿಸರ ದಿನದಂದು ಎಲ್ಲರೂ ಕೂಡ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಸಿ ನೆಡುವ ಮೂಲಕ ಆಚರಿಸಿರುವುದನ್ನು ನೋಡಿದ್ದೇವೆ. ಆದರೆ ಕೇರಳದಲ್ಲೊಂದು ಪುಂಡರ ಗುಂಪು ಗಾಂಜಾಗಿಡವನ್ನು ನೆಟ್ಟು ಪರಿಸರ ದಿನ ಆಚರಿಸಿ ಸುದ್ದಿಯಾಗಿದೆ.

    ಕೇರಳದ ಕೊಲ್ಲಂ ಜಿಲ್ಲೆಯ ಕಂಡಚಿರಾ ಎಂಬ ಗ್ರಾಮದಲ್ಲಿ ಜೂನ್ 5 ಪರಿಸರದಿನದಂದು ಪುಂಡರ ಗುಂಪು ತಮ್ಮ ಬೀದಿಯಲ್ಲಿ ಗಾಂಜಾ ಗಿಡಗಳನ್ನು ನೆಟ್ಟು, ನಾವು ಇಷ್ಟಪಡುವ ಗಿಡ ಇದಾಗಿರುವ ಕಾರಣ ಅದನ್ನೇ ನೆಟ್ಟಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಅದರ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೀನು ಸಾಗಾಟದ ಲಾರಿಯಲ್ಲಿ 200 ಕೆಜಿ ಗಾಂಜಾ ಸಾಗಾಟ

    ಈ ಕುರಿತು ತಿಳಿಯುತ್ತಿದ್ದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಸುಮಾರು 60 ಸೆಂ.ಮೀನಷ್ಟು ಉದ್ದದ ಹಲವು ಗಾಂಜಾ ಗಿಡಗಳನ್ನು ಬೆಳೆಸಿರುವುದು ಕಂಡುಬಂದಿದೆ. ಕೂಡಲೇ ಎಲ್ಲಾ ಗಿಡಗಳನ್ನು ಅಧಿಕಾರಿಗಳು ಕಿತ್ತಿದ್ದಾರೆ. ಯುವಕರ ಗುಂಪೊಂದು ಗಾಂಜಾ ವ್ಯಸನದ ಗೀಳಿನಿಂದ ಈ ರೀತಿ ಕೃತ್ಯವೆಸಗಿದ್ದು, ಪರಿಸರದಿನದ ಅಂಗವಾಗಿ ರಸ್ತೆ ಬದಿಯಲ್ಲಿ ಗಾಂಜಾ ಗಿಡಗಳನ್ನು ನೆಟ್ಟು ಫೋಟೋ ತೆಗೆದುಕೊಂಡಿದ್ದಾರೆ. ಇದುವರೆಗೂ ಆ ಯುವಕರು ಪತ್ತೆಯಾಗಿಲ್ಲ. ಎಂದು ಕೊಲ್ಲಂ ಅಬಕಾರಿ ಸ್ಪೇಷಲ್ ಸ್ವ್ಯಾಡ್ ನ ಸರ್ಕಲ್ ಇನ್ಸ್‍ಪೆಕ್ಟರ್ ನೌಷಾದ್ ಅವರು ಮಾಹಿತಿ ನೀಡಿದ್ದಾರೆ.

    ಇಲ್ಲಿನ ಮಂಗಾದ್ ಬೈಪಸ್ ಪ್ರದೇಶದಲ್ಲೂ ಗಾಂಜಾ ಗಿಡ ನೆಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಯಾವುದೇ ಗಿಡ ಪತ್ತೆಯಾಗಿಲ್ಲ. ಆ ಸಂಬಂಧ ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ತಿಳಿಸಿದರು. ಈ ಹಿಂದೆ ಮನ್ನರ್ಕಡ್ ಅಬಕಾರಿ ವಲಯದ ಅಧಿಕಾರಿಗಳು ದಾಳಿ ನಡೆಸಿ ಕಾಡಿನಲ್ಲಿ ಬೆಳೆದಿದ್ದ 120 ಗಾಂಜಾ ಗಿಡಗಳನ್ನು ನಾಶಪಡಿಸಿದ್ದರು.

  • ಗಿಡ ಕಿತ್ತಳು ಎಂದು ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟರು

    ಗಿಡ ಕಿತ್ತಳು ಎಂದು ಸೀಮೆಎಣ್ಣೆ ಸುರಿದು ಬೆಂಕಿ ಇಟ್ಟರು

    ಪಾಟ್ನಾ: ಆಟವಾಡುತ್ತಿದ್ದ ಬಾಲಕಿ ಮನೆಯಂಗಳದಲ್ಲಿದ್ದ ಗಿಡವನ್ನು ಕಿತ್ತುಳು ಎಂದು ಸಿಟ್ಟಿಗೆದ್ದ ಒಂದು ಕುಟುಂಬ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಬಿಹಾರದ ಬೇಗುಸರಾಯ್‍ನಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಬಾಲಕಿ 12 ವರ್ಷದವಳಾಗಿದ್ದಾಳೆ. ಸಿಖಂದರ್ ಯಾದವ್ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಈತ ಸಿವರಾಣ ಗ್ರಾಮದ ನಿವಾಸಿಯಾಗಿದ್ದಾನೆ.

    12 ವರ್ಷದ ಬಾಲಕಿ ಸಿಖಂದರ್ ಯಾದವ್ ಎನ್ನುವರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಆಕೆ ತಿಳಿಯದೆ ಮನೆಯ ಅಂಗಳದಲ್ಲಿದ್ದ ಒಂದು ಗಿಡವನ್ನು ಕಿತ್ತಿದ್ದಾಳೆ. ಇದನ್ನು ಗಮನಿಸಿದ ಸಿಖಂದರ್ ಮತ್ತು ಆತನ ಪತ್ನಿ, ಮಗಳು ಸೇರಿ ಬಾಲಕಿಗೆ ಹೊಡೆದು ಹಿಂಸೆ ಮಾಡಿದ್ದಾರೆ.

    ಬಾಲಕಿ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಸಿಖಂದರ್ ಯಾದವ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಬೇಗುಸರಾಯ್ ಪೊಲೀಸ್ ವರಿಷ್ಠಾಧಿಕಾರಿ ನಿಶಿತ್ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.