Tag: Pitrupaksha

  • ಪಿತೃಪಕ್ಷದಂದು ಧರ್ಮ ಸಂಕಟ – ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಅನುಮತಿ ನೀಡುವಂತೆ ಮನವಿ

    ಪಿತೃಪಕ್ಷದಂದು ಧರ್ಮ ಸಂಕಟ – ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಅನುಮತಿ ನೀಡುವಂತೆ ಮನವಿ

    – ಮಾಂಸ ಮಾರಾಟಕ್ಕೆ ಅವಕಾಶ ಕೋರಿ ಸಿಎಂಗೆ ಸಂಘಟನೆಗಳ ಮನವಿ

    ಬೆಂಗಳೂರು: ಈ ಬಾರಿ ಪಿತೃಪಕ್ಷ (Pitrupaksha) ಮಾಡಿ ಎಡೆ ಇಡುವವರಿಗೆ ಧರ್ಮ ಸಂಕಟ ಎದುರಾಗಿದೆ. ಗಾಂಧಿ ಜಯಂತಿ (Gandhi Jayanthi) ಮತ್ತು ಮಹಾಲಯ ಅಮಾವಾಸ್ಯೆ (Mahalaya Amavasya) ಒಂದೇ ದಿನ ಬಂದಿದೆ. ಗಾಂಧಿಜಯಂತಿ ದಿನ ಮಾಂಸ ಮಾರಾಟ (Meat Sale) ನಿಷೇಧ ಇರಲಿದೆ. ಹೀಗಾಗಿ ಮಹಾಲಯ ಅಮಾವಾಸ್ಯೆ ಇರುವುದರಿಂದ ಪಿತೃಪಕ್ಷ ಮಾಡೋರಿಗೆ ಮಾಂಸದ ಕೊರತೆ ಎದುರಾಗಲಿದೆ.

    ಮಾಂಸ ಮಾರಾಟ ನಿಷೇಧ ಮಾಡಿದರೆ ಮಾಂಸ ಸಿಗಲ್ಲ. ಅದಕ್ಕಾಗಿ ಗಾಂಧಿ ಜಯಂತಿ ದಿನ ಮಾಂಸ ಮಾರಾಟಕ್ಕೆ ಅವಕಾಶ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಘಟನೆಗಳು, ಸಮಿತಿಗಳು ಮನವಿ ಮಾಡಿಕೊಂಡಿದೆ. ಈ ಸಂಬಂಧ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ವಿ.ವಿ ಸತ್ಯನಾರಾಯಣ ಹಾಗೂ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕಯ ಅಧ್ಯಕ್ಷ ಬಿ.ಎಂ ಶಿವಕುಮಾರ್ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಕಾಕತಾಳಿಯವಾಗಿ ಒಂದೇ ದಿನ ಎರಡು ಆಚರಣೆ ಬಂದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಪಿತೃಪಕ್ಷ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರ ಸಲ್ಲಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಪಟಾಕಿ ಬ್ಯಾನ್‌ ಯಾಕೆ?

    ಹಳ್ಳಿಗಳ ಕಡೆ ಏನಾಗಲಿದೆಯೋ ಗೊತ್ತಿಲ್ಲ. ಹಲವು ಮಂದಿ ಮಾಂಸಾಹಾರವನ್ನು ಸಿದ್ಧಪಡಿಸಿ ತಮ್ಮ ಹಿರಿಯರಿಗೆ ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಈ ಹಿನ್ನೆಲೆ ಬೆಂಗಳೂರಿನಂತಹ ಸಿಟಿಗಳಲ್ಲಿ ಮಾಂಸ ಮಾರಾಟ ನಿಷೇಧ ಆದರೆ ಸಮಸ್ಯೆ ಆಗುತ್ತೆ. ತಲಾತಲಾಂತರದಿಂದ ಪಿತೃಪಕ್ಷದ ದಿನ ಎಡೆ ಇಟ್ಟುಕೊಂಡು ಬರುತ್ತಿದ್ದೇವೆ. ಈ ಬಾರಿಯು ಸಂಪ್ರದಾಯ ಪಾಲಿಸಬೇಕು. ಮಾಂಸ ಮಾರಾಟಕ್ಕೆ ಅವಕಾಶ ಕೊಡಿ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿ ಓಡಿದ್ರು!

  • ಕೆಟ್ಟು ಹೋದ ಸರ್ವರ್‌ಗೆ ಪಿಂಡ ಇಟ್ಟ ಹೋರಾಟಗಾರ

    ಕೆಟ್ಟು ಹೋದ ಸರ್ವರ್‌ಗೆ ಪಿಂಡ ಇಟ್ಟ ಹೋರಾಟಗಾರ

    ಕೋಲಾರ: ಜಿಲ್ಲೆಯ ಬಹುತೇಕ ಸರ್ಕಾರಿ ಕಛೇರಿಗಳಲ್ಲಿ (Government Office) ಸರ್ವರ್ ಸಮಸ್ಯೆ (Server Down) ಎದುರಾಗಿ ಸಾರ್ವಜನಿಕರು ಇನ್ನಿಲ್ಲದ ಕಷ್ಟಪಡುತ್ತಿರುವುದನ್ನು ಗಮನಿಸಿದ ಹೋರಾಟಗಾರರೊಬ್ಬರು ಪಿಂಡ ಪ್ರದಾನ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

    ಇಂದು ಪಿತೃಪಕ್ಷವಾದ ಹಿನ್ನೆಲೆ ನೊಂದ ಹೋರಾಟಗಾರ ಸರ್ವರ್‌ಗಳಿಗೆ ಪಿಂಡ ಪ್ರದಾನ ಮಾಡಿ ಗಮನ ಸೆಳೆದಿದ್ದಾರೆ. ಪಿತೃಪಕ್ಷದ ಹಿನ್ನೆಲೆ ಸರ್ಕಾರಿ ಮಾಲೀಕತ್ವದ ಸರ್ವರ್‌ಗಳಿಗೆ ಪಿಂಡ ಪ್ರದಾನ ಮಾಡಿದ ಸಾಮಾಜಿಕ ಹೋರಾಟಗಾರನ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಕೋಲಾರದ (Kolar) ಬಂಗಾರಪೇಟೆ ತಾಲೂಕಿನ ಕರಪನಹಳ್ಳಿ ನಿವಾಸಿ ಪ್ರಸನ್ನ ಕುಮಾರ್ ಹೀಗೆ ಪಡಿತರ, ಆಧಾರ್, ಪಹಣಿ, ಮುಟೇಷನ್, ಬ್ಯಾಂಕ್ ಕಾರ್ಯಗಳಿಗೆ ಅಡ್ಡಿಯಾಗಿರುವ ಸರ್ವರ್‌ಗೆ ಪಿಂಡ ಬಿಟ್ಟು, ವಿನೂತನ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಅಂತರ್ಜಾಲ ಮತ್ತು ಸರ್ವರ್‌ಗಳಿಗೆ ಎಡೆ ಇಟ್ಟು ಶ್ಲೋಕಗಳನ್ನು ಹೇಳಿ ಪಿತೃಪಕ್ಷ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಸರ್ವರ್‌ಗಳು ಸತ್ತು ಹೋಗಿವೆ, ಅದಕ್ಕಾಗಿ ಇಂದು ಪಿತೃಪಕ್ಷದ ಹಿನ್ನೆಲೆ, ಪಿಂಡ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹುಡುಗಿಯನ್ನು ದಪ್ಪ, ಪುಷ್ಠಿಯಾಗಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು – ದೇವರಿಗೆ ಪತ್ರ ಬರೆದ ಭಕ್ತ

    ನನ್ನ ಬಳಿ ರೇಷನ್ ಕಾರ್ಡ್ ಇದೆ, ಆದ್ರೆ ಸರ್ವರ್ ಸತ್ತು ಹೋಗಿದೆ. ಮೊಬೈಲ್‌ಗೆ ಆಧಾರ್ ಲಿಂಕ್ ಮಾಡಬೇಕು, ಸರ್ವರ್ ಸತ್ತು ಹೋಗಿದೆ. ನಮ್ಮ ತಾತ ಮುತ್ತಾತ ತಂದೆಯವರ ಸಂಪಾದನೆಯ ಆಸ್ತಿ ಮ್ಯೂಟೇಷನ್ ತೆಗೋಬೇಕು, ಸರ್ವರ್ ಸತ್ತು ಹೋಗಿದೆ. ಹೀಗೆ ಯಾವುದೇ ದಾಖಲೆ ಪಡೆಯಲಾಗದೇ ಸಾರ್ವಜನಿಕರು ಪರದಾಡುವಂತಾಗಿದೆ. ಅದಕ್ಕಾಗಿ ಸತ್ತು ಹೋದ ಸರ್ವರ್‌ಗೆ ಪಿಂಡ ಪ್ರದಾನ ಮಾಡುತ್ತಿದ್ದೇನೆ ಎಂದು ಹೇಳಿ ವಿಭಿನ್ನವಾಗಿ ಸರ್ವರ್ ಸಮಸ್ಯೆ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ನಾನು Law ಓದಿದ್ದೀನಿ, ಬೊಮ್ಮಾಯಿ ಲಾ ಓದಿಲ್ಲ – ಕಾನೂನು ಕ್ರಮ ತಗೊಂಡ್ರೆ ನಾವ್ ಸುಮ್ನೆ ಇರ್ತೀವಾ?: ಸಿದ್ದರಾಮಯ್ಯ

    ಹಿಂದೆ ಕಿತ್ತುಹೋಗಿದ್ದ ಡಾಂಬರ್ ರಸ್ತೆಗೆ ಎಳ್ಳು ನೀರು ಬಿಟ್ಟು ಪ್ರತಿಭಟಿಸಿದ್ದ ಕನ್ನಡಪರ ಹೋರಾಟಗಾರರೂ ಆಗಿರುವ ಪ್ರಸನ್ನ ಕುಮಾರ್ ಅವರ ಹೋರಾಟ ಹಾಗೂ ಪಿಂಡ ಪ್ರದಾನ ಜಿಲ್ಲೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]