Tag: pit bull

  • ಕಾಳಿಂಗ ಸರ್ಪದೊಂದಿಗೆ ಕಾದಾಟ – ಮನೆ ಮಾಲೀಕರ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ

    ಕಾಳಿಂಗ ಸರ್ಪದೊಂದಿಗೆ ಕಾದಾಟ – ಮನೆ ಮಾಲೀಕರ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ

    ಹಾಸನ: ಮನೆ ಮಾಲೀಕರು ಹಾಗೂ ಕೆಲಸಗಾರರ ಜೀವ ಉಳಿಸಲು ತನ್ನ ಪ್ರಾಣವನ್ನೇ ಪಣಕಿಟ್ಟು ಶ್ವಾನವೊಂದು ಕಾಳಿಂಗ ಸರ್ಪವನ್ನು ಕೊಂದು, ಕೊನೆಯುಸಿರೆಳೆದಿರುವ ಮನಕಲುಕುವ ಘಟನೆ ಹಾಸನ (Hassan) ತಾಲೂಕಿನ ಕಟ್ಟಾಯ (Kattaya) ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶಮಂತ್ ಎಂಬುವವರು ತಮ್ಮ ತೋಟದಲ್ಲಿ ಪಿಟ್‌ಬುಲ್ ಹಾಗೂ ಡಾಬರ್‌ಮನ್ ಜಾತಿಯ ನಾಯಿಗಳನ್ನು ಸಾಕಿದ್ದರು. ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಬಿಳಿ ಬಣ್ಣದ ಸುಮಾರು ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯ ಕಡೆಗೆ ಬಂದಿದೆ.ಇದನ್ನು ಓದಿ: ‘ಕಿಸ್ಸಿಕ್’ ಬೆಡಗಿಗೆ ಬೇಡಿಕೆ- ಬಹುಭಾಷೆಗಳಲ್ಲಿ ಶ್ರೀಲೀಲಾ ಬ್ಯುಸಿ

    ಮನೆಯ ಮುಂದೆ ಮಕ್ಕಳು ಆಟವಾಡುತ್ತಿದ್ದಾಗ ಬಂದ ಹಾವು ತೆಂಗಿನ ಗರಿಯ ಕೆಳಗೆ ಹೋಗಿದೆ. ಇದನ್ನು ಕಂಡ ಪಿಟ್‌ಬುಲ್ ಹಾಗೂ ಡಾಬರ್‌ಮನ್ ನಾಯಿಗಳು ಗರಿಯ ಕೆಳಗಿದ್ದ ಹಾವನ್ನು ಎಳೆದು ಅದರೊಂದಿಗೆ ಸೆಣಸಾಡಿದೆ.

    ಈ ವೇಳೆ ಪಿಟ್‌ಬುಲ್ ನಾಯಿಯ ಮುಖಕ್ಕೆ ಹಾವು ಕಚ್ಚಿದ್ದು, ಆದರೂ ಹಾವಿನೊಂದಿಗೆ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಕಾದಾಟ ನಡೆಸಿದೆ. ಸರ್ಪವನ್ನು ಹತ್ತು ಪೀಸ್ ಮಾಡಿ ಕೊಂದು ತಾನು ಪ್ರಾಣಬಿಟ್ಟಿದೆ. ಶ್ವಾನಗಳು ಹಾಗೂ ಹಾವಿನ ನಡುವಿನ ಸೆಣಸಾಟ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಭೀಮಾ ಹೆಸರಿನ ಪಿಟ್‌ಬುಲ್ ಶ್ವಾನ ಹಲವೆಡೆ ನಡೆದಿದ್ದ ಡಾಗ್ ಶೋನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿತ್ತು. ನೆಚ್ಚಿನ ಸಾಕು ನಾಯಿ ಕಳೆದುಕೊಂಡ ಶಮಂತ್ ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.ಇದನ್ನು ಓದಿ: ಬಾಹ್ಯಾಕಾಶದಲ್ಲಿ ವಿಶ್ವದಾಖಲೆ ನಿರ್ಮಿಸಿ ಭೂಮಿಗೆ ಮರಳಿದ ಸುನಿತಾ

     

  • ಪಿಟ್ ಬುಲ್ ದಾಳಿಗೊಳಗಾದ ಮಹಿಳೆ ತಲೆ, ಕೈ, ಕಾಲಿಗೆ 50 ಹೊಲಿಗೆ

    ಪಿಟ್ ಬುಲ್ ದಾಳಿಗೊಳಗಾದ ಮಹಿಳೆ ತಲೆ, ಕೈ, ಕಾಲಿಗೆ 50 ಹೊಲಿಗೆ

    ಚಂಡೀಗಢ: ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ಪಿಟ್ ಬುಲ್ (Pit Bull) ನಾಯಿಯೊಂದು ದಾಳಿ ಮಾಡಿದ್ದು, ಇದೀಗ ಮಹಿಳೆಯ ಕಾಲು, ಕೈ ಮತ್ತು ತಲೆಗೆ 50 ಹೊಲಿಗೆ ಹಾಕಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಹರಿಯಾಣದ (Hariyana) ರೇವಾರಿಯ (Rewari) ಬಲಿಯಾರ್ ಖುರ್ದ್ (Baliar Khurd) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡ ಇಬ್ಬರು ಮಕ್ಕಳನ್ನು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.  ಇದನ್ನೂ ಓದಿ: ಹಾಸನ ಭೀಕರ ಅಪಘಾತ ಪ್ರಕರಣ – ಎಸ್ಕೇಪ್ ಆಗಿದ್ದ ಹಾಲಿನ ಟ್ಯಾಂಕರ್ ಚಾಲಕ ಪೊಲೀಸರ ವಶಕ್ಕೆ

    ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಗ್ರಾಮದ ಮಾಜಿ ಸರಪಂಚ್ ಮತ್ತು ಮಹಿಳೆಯ ಪತಿ, ಶುಕ್ರವಾರ ಮನೆಗೆ ಪತ್ನಿಯೊಂದಿಗೆ ಬಂದಾಗ ಸಾಕಿದ್ದ ನಾಯಿ ನನ್ನ ಪತ್ನಿ ಮೇಲೆ ದಾಳಿ ನಡೆಸಿದೆ ಮತ್ತು ಇಬ್ಬರು ಮಕ್ಕಳ ಮೇಲೂ ದಾಳಿ ನಡೆಸಿದೆ. ಈ ವೇಳೆ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ನಾಯಿಯಿಂದ ನನ್ನ ಪತ್ನಿ ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ.

    ಹಲವಾರು ಬಾರಿ ಕೋಲಿನಿಂದ ನಾಯಿಯನ್ನು ಹೊಡೆದರೂ ಅದು ತನ್ನ ದಾಳಿಯನ್ನು ನಿಲ್ಲಿಸಲಿಲ್ಲ. ಕೊನೆಗೆ ನಾಯಿಯಿಂದ ನನ್ನ ಪತ್ನಿ ಮತ್ತು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಕಾಶ್ಮೀರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ಸ್ಥಗಿತ

    Live Tv
    [brid partner=56869869 player=32851 video=960834 autoplay=true]

  • ಸಾಕಿದ ನಾಯಿಯಿಂದಲ್ಲೆ ಮೃತಪಟ್ಟ 82 ವರ್ಷದ ವೃದ್ಧೆ

    ಸಾಕಿದ ನಾಯಿಯಿಂದಲ್ಲೆ ಮೃತಪಟ್ಟ 82 ವರ್ಷದ ವೃದ್ಧೆ

    ಲಕ್ನೋ: ನಗರದ ಖೈಸರ್‍ಬಾಗ್ ಪ್ರದೇಶದಲ್ಲಿ 82 ವರ್ಷದ ವೃದ್ಧೆಯೊಬ್ಬಳನ್ನು ಸಾಕುನಾಯಿಯೇ ಕಚ್ಚಿ ಕೊಂದಿದೆ.

    ಮಂಗಳವಾರ ಬೆಳಗ್ಗೆ ಸುಶೀಲಾ ತ್ರಿಪಾಠಿ(82) ಅವರು ತಮ್ಮ ಮನೆಯ ಟೆರೆಸ್ ಮೇಲೆ ಇದ್ದರು. ಈ ವೇಳೆ ಅಲ್ಲೇ ಇದ್ದ ಪಿಟ್ ಬುಲ್ ತಳಿಯ ನಾಯಿ ಆಕೆ ಮೇಲೆ ದಾಳಿ ಮಾಡಲು ಪ್ರಾರಂಭ ಮಾಡಿದೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಸುಶೀಲಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

    ನಡೆದಿದ್ದೇನು?
    ಖೈಸರ್‍ಬಾಗ್‍ನ ಸಹಾಯಕ ಪೊಲೀಸ್ ಕಮಿಷನರ್ ಯೋಗೇಶ್ ಕುಮಾರ್ ಅವರು ಈ ಕುರಿತು ಮಾತನಾಡಿದ್ದು, ನಿವೃತ್ತ ಶಾಲಾ ಶಿಕ್ಷಕಿ ಸುಶೀಲಾ ತ್ರಿಪಾಠಿ(82) ತನ್ನ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದರು. ಅವರ ಮೇಲೆ ದಾಳಿ ಮಾಡಿದ ಪಿಟ್ ಬುಲ್ ಸೇರಿದಂತೆ ಇವರ ಮನೆಯಲ್ಲಿ ಎರಡು ಸಾಕು ನಾಯಿಗಳಿದ್ದವು. ಸುಶೀಲಾ ಅವರು ಮಂಗಳವಾರ ಬೆಳಗ್ಗೆ ತನ್ನ ಮನೆಯ ಟೆರೆಸ್ ಮೇಲೆ ಇದ್ದಾಗ ಪಿಟ್ ಬುಲ್ ಅವರ ಮೇಲೆ ದಾಳಿ ಮಾಡಿದೆ. ಈ ವೇಳೆ ಅವರ ಮನೆಯಲ್ಲಿ ಯಾರು ಇಲ್ಲದ ಕಾರಣ ಅಲ್ಲೇ ಬಿದ್ದಿದ್ದಾರೆ. ಮನೆಗೆ ಬಂದ ಕೆಲಸದವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಶೀಲಾ ಅವರನ್ನು ನೋಡಿ ಅವರ ಮಗನಿಗೆ ತಿಳಿಸಿದ್ದಾರೆ. ಇದನ್ನೂ ಓದಿ:  ಸಾವಿನಲ್ಲೂ ಒಂದಾದ ವೃದ್ಧ ದಂಪತಿ – ಪತಿ ಸಾವಿನ ಸುದ್ದಿ ಕೇಳಿ ಪತ್ನಿ ಸಾವು

    ನಂತರ ಸುಶೀಲಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ವೈದ್ಯರು ಅವರು ಸ್ಥಳದಲ್ಲೇ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.

    82-year-old woman mauled to death by her pet Pitbull dog - The English Post - Breaking News, Politics, Entertainment, Sports

    ಎಲ್‍ಎಂಸಿಯ ಪಶುವೈದ್ಯಾಧಿಕಾರಿ ಡಾ.ಅಭಿನವ್ ವರ್ಮಾ ಅವರು ಈ ಕುರಿತು ಮಾತನಾಡಿದ್ದು, ನಮ್ಮ ತಂಡವು ಪಿಟ್ ಬುಲ್ ನಾಯಿಯನ್ನು ಸಾಕುಪ್ರಾಣಿಯಾಗಿ ಸಾಕಲು ಕುಟುಂಬಕ್ಕೆ ಪರವಾನಗಿ ಇದೆಯೇ ಎಂದು ಪರಿಶೀಲಿಸಲು ಮನೆಗೆ ಹೋಗಿದೆ. ಆದರೆ ಮನೆಗೆ ಬೀಗ ಹಾಕಿದ್ದರಿಂದ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

    ನಾಯಿ ಎಲ್ಲಿದೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ನಾಯಿ ಕುರಿತು ವಿಚಾರಣೆ ಮಾಡಲು ನಾವು ಅವರ ಮಗನನ್ನು ಸಂಪರ್ಕ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]