Tag: pistol

  • ಗೌರಿ ಲಂಕೇಶ್ ಹತ್ಯೆ ತನಿಖೆ ಈಗ ಎಲ್ಲಿಯವರೆಗೆ ಬಂದಿದೆ?

    ಗೌರಿ ಲಂಕೇಶ್ ಹತ್ಯೆ ತನಿಖೆ ಈಗ ಎಲ್ಲಿಯವರೆಗೆ ಬಂದಿದೆ?

    ಬೆಂಗಳೂರು: ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಡೆಸುತ್ತಿರುವ ವಿಶೇಷ ತನಿಖಾ ದಳದ(ಎಸ್‍ಐಟಿ) ಪೊಲೀಸರು ಈಗ ಕರ್ನಾಟಕದ ಎಲ್ಲಾ ಜೈಲುಗಳಲ್ಲಿ ಇರುವ ಸುಪಾರಿ ಹಂತಕರ ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

    ಉತ್ತರ ಕರ್ನಾಟಕ ಜೈಲುಗಳು ಸೇರಿದಂತೆ, ಉಡುಪಿ, ಬಿಜಾಪುರ, ಮಂಗಳೂರು, ಬೆಂಗಳೂರು ಜೈಲುಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಗೌರಿ ಅವರ ಹತ್ಯೆಗೆ ನಾಡ ಪಿಸ್ತೂಲು ಬಳಕೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು, ನಾಡಾ ಪಿಸ್ತೂಲು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ ನಾಡಾ ಪಿಸ್ತೂಲು ಮಧ್ಯಪ್ರದೇಶದಿಂದ ಪೂರೈಕೆಯಾಗಿರುವ ಕುರಿತು ಅನುಮಾನ ಮೂಡಿದ್ದು, ಕರ್ನಾಟಕದ ಬೇರೆಂದು ಗ್ಯಾಂಗ್ ಪಿಸ್ತೂಲು ರವಾನೆ ಮಾಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಈ ಮದ್ಯೆ ಉಡುಪಿಯ ಜಿಲ್ಲಾ ಕಾರಾಗೃಹಕ್ಕೆ ತನಿಖಾ ತಂಡ ಭೇಟಿ ನೀಡಿದ್ದು, ಯಾವುದೇ ಮಾಹಿತಿ ಲಭಿಸದೆ ಹಿಂದಿರುಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುತ್ತಮುತ್ತ ಚಾಲ್ತಿಯಲ್ಲಿರುವ ರೌಡಿ ಶೀಟರ್‍ಗಳ ಬಗ್ಗೆಯು ವಿಚಾರಣೆಯನ್ನು ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ

    ಪ್ರಕರಣದ ಕುರಿತು ಮತ್ತಷ್ಟು ಸುಳಿವುಗಳನ್ನು ಪಡೆಯುವ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಮತ್ತೆ ಕಾಟ್ರೇಜ್‍ಗಳ ಮರು ಪರೀಕ್ಷೆಯನ್ನು ನಡೆಸುತ್ತಿದೆ.

  • ತಿರುಮಲದಲ್ಲಿ ವ್ಯಕ್ತಿಯಿಂದ ಪಿಸ್ತೂಲ್, 14 ಬುಲೆಟ್ ವಶ

    ತಿರುಮಲದಲ್ಲಿ ವ್ಯಕ್ತಿಯಿಂದ ಪಿಸ್ತೂಲ್, 14 ಬುಲೆಟ್ ವಶ

    ತಿರುಮಲ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿದ್ದ ಪಿಸ್ತೂಲ್ ಹಾಗೂ 14 ಬುಲೆಟ್‍ಗಳನ್ನ ವಶಪಡಿಸಿಕೊಳ್ಳಲಾಗಿದೆ.

    ಇಲ್ಲಿನ ಅಲಿಪಿರಿ ಚೆಕ್‍ಪೋಸ್ಟ್ ಬಳಿ ತಪಾಸಣೆ ವೇಳೆ ಪುಣೆ ಮೂಲದ ವ್ಯಕ್ತಿ ಕಾರಿನಲ್ಲಿ ಪಿಸ್ತೂಲ್ ಹಾಗೂ ಬುಲೆಟ್ ಅಡಗಿಸಿಟ್ಟಿದ್ದು ಪತ್ತೆಯಾಗಿದೆ. ಚೆಕ್‍ಪೋಸ್ಟ್ ನ ಸೆಕ್ಯೂರಿಟಿ ಗಾರ್ಡ್‍ಗಳು ಪಿಸ್ತೂಲ್ ಹಾಗೂ ಬುಲೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ತಿರುಪತಿ ವೆಂಕಟೇಶ್ವರ ಸನ್ನಿಧಿಯ ಪ್ರವೇಶ ದ್ವಾರದ ಬಳಿ ಈ ಚೆಕ್‍ಪೋಸ್ಟ್ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

    ದೇವಾಲಯದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.