Tag: pistol

  • Bengaluru | ಅಕ್ರಮವಾಗಿ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ಬಂಧನ

    Bengaluru | ಅಕ್ರಮವಾಗಿ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ಬಂಧನ

    ಬೆಂಗಳೂರು: ಅಕ್ರಮವಾಗಿ ನಾಡ ಪಿಸ್ತೂಲ್ (Countrymade Pistol) ತಂದು ಮಾರಾಟ ಮಾಡುತ್ತಿದ್ದ ರೌಡಿಶೀಟರ್‌ನನ್ನು ಬೆಂಗಳೂರಿನಲ್ಲಿ (Bengaluru) ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ.

    ಕೆಜಿ ಹಳ್ಳಿ ರೌಡಿಶೀಟರ್ ಸಮೀರ್ ಬಂಧಿತ ಆರೋಪಿ. ಸಮೀರ್ ದೆಹಲಿಯಿಂದ ಕಡಿಮೆ ಬೆಲೆಗೆ ಪಿಸ್ತೂಲ್ ತಂದು ಬೆಂಗಳೂರಿನಲ್ಲಿ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದ. ಅಲ್ಲದೇ ರೌಡಿಶೀಟರ್‌ಗಳಿಗೂ ಪಿಸ್ತೂಲ್ ಮಾರಾಟ ಮಾಡುತ್ತಿದ್ದ. ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿ ಸಮೀರ್‌ನನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಶೆಲ್‌ ದಾಳಿಗೆ ಒಳಗಾಗಿದ್ದ ಪೂಂಚ್‌ ಗುರುದ್ವಾರಕ್ಕೆ ರಾಹುಲ್‌ ಗಾಂಧಿ ಭೇಟಿ

    ಬಂಧಿತ ಆರೋಪಿಯಿಂದ 2 ನಾಡ ಪಿಸ್ತೂಲ್‌ನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಆರೋಪಿಗೆ ಪಿಸ್ತೂಲ್ ಹೇಗೆ ಸಿಕ್ಕಿತು ಎಂಬುದರ ತನಿಖೆಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: 2025ರ UG-CET ಫಲಿತಾಂಶ ಪ್ರಕಟ – 2,75,677 ವಿದ್ಯಾರ್ಥಿಗಳಿಗೆ ರ‍್ಯಾಂಕ್‌

  • ಪಿಸ್ತೂಲ್ ಪರಿಶೀಲನೆ ವೇಳೆ ಮಿಸ್ ಫೈರಿಂಗ್- ಪೇದೆ ಕಾಲಿಗೆ ಗುಂಡೇಟು

    ಪಿಸ್ತೂಲ್ ಪರಿಶೀಲನೆ ವೇಳೆ ಮಿಸ್ ಫೈರಿಂಗ್- ಪೇದೆ ಕಾಲಿಗೆ ಗುಂಡೇಟು

    ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆ ಪೊಲೀಸ್ ಠಾಣೆಗೆ ಪಿಸ್ತೂಲ್ ಜಮೆ ಮಾಡಿದ್ರು. ಆದರೆ ಪಿಸ್ತೂಲ್ ಠಾಣೆಗೆ ತಂದು ಕೊಟ್ಟ ವ್ಯಕ್ತಿ ಮಾಡಿದ ಎಡವಟ್ಟಿನಿಂದ ಠಾಣೆಯಲ್ಲೇ ದುರ್ಘಟನೆಯೊಂದು ನಡೆದು ಹೋಗಿದೆ.

    ಬೊಮ್ಮನಹಳ್ಳಿ ವ್ಯಾಪ್ತಿಯ ಬೇಗೂರು ಪೊಲೀಸ್ ಠಾಣೆಗೆ (Beguru Police Station)  ಮುಕುಂದ ರೆಡ್ಡಿ ಎಂಬವರು ಪಿಸ್ತೂಲ್ ತಂದು ಜಮಾ ಮಾಡಿದರು. ಪೊಲೀಸ್ ಕಾನ್ಸ್ ಟೇಬಲ್ ಪಿಸ್ತೂಲು ಪರಿಶೀಲನೆ ವೇಳೆ ಟ್ರಿಗರ್ ಒತ್ತಿದ್ದಾರೆ. ಈ ವೇಳೆ ಏಕಾಏಕಿ ಮಿಸ್ ಫೈರ್ ಆಗಿ, ಮತ್ತೊಬ್ಬ ಪೊಲೀಸ್ ಪೇದೆ ಅಂಬುದಾಸ್ ಕಾಲಿಗೆ ಗುಂಡೇಟು ತಗುಲಿದೆ. ಗಾಯಾಳುವನ್ನು ಅಪೊಲೋ ಆಸ್ಪತ್ರೆಗೆ ದಾಖಸಲಾಗಿದೆ.

    ಈ ಘಟನೆಯಿಂದ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಬಂದ ಎಫ್‍ಎಸ್‍ಎಲ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಬೇಗೂರು ಪೊಲೀಸ್ ಠಾಣೆಯ ಮೇಲಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಪೊಲೀಸ್ ಠಾಣೆಗಳಿಗೆ ಬಂದುಕು ಅಥವಾ ಪಿಸ್ತೂಲ್‍ಗಳನ್ನು ಸೆರೆಂಡರ್ ಮಾಡುವ ಮುನ್ನ ಎಚ್ಚರವಹಿಸಬೇಕಾಗಿದೆ.

  • ರೆಸ್ಟೋರೆಂಟಲ್ಲಿ ಕೈ ತೊಳೆದು ಬರುವಷ್ಟರಲ್ಲಿ ಪಿಎಸ್‌ಐ ಪಿಸ್ತೂಲ್ ಮಂಗಮಾಯ!

    ರೆಸ್ಟೋರೆಂಟಲ್ಲಿ ಕೈ ತೊಳೆದು ಬರುವಷ್ಟರಲ್ಲಿ ಪಿಎಸ್‌ಐ ಪಿಸ್ತೂಲ್ ಮಂಗಮಾಯ!

    ಚಿತ್ರದುರ್ಗ: ಊಟ ಮುಗಿಸಿ ಕೈ ತೊಳೆದು ಬರುವಷ್ಟರಲ್ಲಿ ಪಿಎಸ್‌ಐ (PSI) ಒಬ್ಬರ ಪಿಸ್ತೂಲ್ (Pistol) ನಾಪತ್ತೆಯಾಗಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

    ನಾಪತ್ತೆ ಪ್ರಕರಣವೊಂದರ ತನಿಖೆಗಾಗಿ ಗುರುವಾರ ಕರ್ತವ್ಯದ ಮೇಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿದ್ದ ಕೆಆರ್ ಪುರಂ ಠಾಣೆ ಪಿಎಸ್‌ಐ ಕಲ್ಲಪ್ಪ ಅವರು ಚನ್ನಗಿರಿ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದ ಬಳಿಯ ರೆಸ್ಟೋರೆಂಟ್‌ಗೆ ಊಟಕ್ಕೆಂದು ತೆರಳಿದ್ದರು.

    ಕಲ್ಲಪ್ಪ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ, ಕೈ ತೊಳೆದು ಬರುವಷ್ಟರಲ್ಲಿ ಟೇಬಲ್ ಮೇಲಿಟ್ಟಿದ್ದ ಪಿಸ್ತೂಲ್ ಹಾಗೂ ಬ್ಯಾಗ್ ಒಂದು ನಾಪತ್ತೆಯಾಗಿದೆ. ಆ ಬ್ಯಾಂಗ್‌ನಲ್ಲಿ ರಿವಾಲ್ವರ್‌ಗೆ ಬಳಸುವ 10 ಜೀವಂತ ಗುಂಡುಗಳು ಸೇರಿದಂತೆ ಪ್ರಮುಖ ವಸ್ತುಗಳು ಸಹ ಇದ್ದವು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಬಳಿಕ ಪಿಎಸ್‌ಐ ಕಲ್ಲಪ್ಪ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: 900 ಭ್ರೂಣಗಳ ಹತ್ಯೆ ಆರೋಪಕ್ಕೆ ಅಂಜಿ ವಿಷದ ಚುಚ್ಚುಮದ್ದು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡ್ರಾ ವೈದ್ಯ?

    ಬಳಿಕ ಚಿತ್ರದುರ್ಗ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿದ್ದ ಸಿಸಿಟಿವಿ ಪರಿಶೀಲಿಸಿ, ರಿವಾಲ್ವರ್ ಕದ್ದ ಕಳ್ಳರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕನ ಅಪಹರಿಸಿ, ಬಂದೂಕಿನಿಂದ ಬೆದರಿಸಿ ಮಗಳೊಂದಿಗೆ ಮದುವೆ ಮಾಡಿಸಿದ ಕಿಡ್ನ್ಯಾಪರ್

  • ನವಜೋಡಿ ಸೇರಿ ಐವರು ಸಂಬಂಧಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ

    ನವಜೋಡಿ ಸೇರಿ ಐವರು ಸಂಬಂಧಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ

    ಲಕ್ನೋ: ಕೊಡಲಿ (Axe) ಬಳಸಿ ವ್ಯಕ್ತಿಯೋರ್ವ ತನ್ನ ಐವರು ಸಂಬಂಧಿಗಳನ್ನು ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ (Uttar Prdesh) ಮೈನ್‌ಪುರಿ (Mainpuri) ಜಿಲ್ಲೆಯಲ್ಲಿ ನಡೆದಿದೆ.

    ಗೋಕುಲಪುರ (Gokulpur) ಅರ್ಸರಾ ಹಳ್ಳಿಯಲ್ಲಿ ಮುಂಜಾನೆ ಸುಮಾರು 4:30ಯಿಂದ 5 ಗಂಟೆಯ ಒಳಗಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶಿವವೀರ್ ಯಾದವ್ (30) ಎಂಬಾತ ತನ್ನ ಇಬ್ಬರು ತಮ್ಮಂದಿರಾದ ಬುಲ್ಲನ್ ಯಾದವ್ (25) ಮತ್ತು ಸೋನು ಯಾದವ್ (21) ಎಂಬವರನ್ನು ಕೊಡಲಿಯಿಂದ ಹತ್ಯೆ ಮಾಡಿದ್ದಾನೆ. ಅಲ್ಲದೇ ಸೋನು ಯಾದವ್‌ನ ಹೆಂಡತಿ ಸೋನಿಯನ್ನೂ (20) ಕೊಲೆ ಮಾಡಿದ್ದು, ಬಳಿಕ ಬಾಮೈದುನ ಸೌರಭ್ (23) ಮತ್ತು ಆತನ ಸ್ನೇಹಿತ ದೀಪಕ್ (20) ಎಂಬವರನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವೈದ್ಯ ಲೋಕಕ್ಕೇ ಶಾಕ್ – 36 ವರ್ಷಗಳ ಕಾಲ ಪ್ರೆಗ್ನೆಂಟ್ ಆಗಿದ್ದ ಈ ವ್ಯಕ್ತಿ!

    ಇಷ್ಟು ಮಾತ್ರವಲ್ಲದೇ ಆರೋಪಿ ತನ್ನ ಹೆಂಡತಿ ಡಾಲಿ (24) ಮತ್ತು ಭರ್ತನ ಜಿಲ್ಲೆಯ ನಾಗ್ಲ ರಾಮ್‌ಲಾಲ್ ಪೊಲೀಸ್ ಠಾಣೆಯ ಇಟವಾದಲ್ಲಿ ವಾಸಿಸುತ್ತಿದ್ದ ತಾಯಿಯ ಸಂಬಂಧಿಯಾದ ಸುಷ್ಮಾ (35) ಎಂಬವರನ್ನು ಗಾಯಗೊಳಿಸಿದ್ದಾನೆ. ಬಳಿಕ ದೇಶೀಯವಾಗಿ ತಯಾರಿಸಿದ ಪಿಸ್ತೂಲ್ (Pistol) ಒಂದರ ಸಹಾಯದಿಂದ ತನ್ನನ್ನು ತಾನು ಶೂಟ್ (Shoot) ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಕೋವಿನ್ ಪೋರ್ಟಲ್ ಡೇಟಾ ಲೀಕ್ ಪ್ರಕರಣ – ಅಪ್ರಾಪ್ತ ಸೇರಿ ಇಬ್ಬರ ಬಂಧನ

    ಗೋಕುಲಪುರ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಆರೋಪಿಯ ಸಹೋದರ ಸೋನು ಯಾದವ್ ಮತ್ತು ಆತನ ಹೆಂಡತಿ ಸೋನಿ ಘಟನೆಯ ಹಿಂದಿನ ದಿನವಷ್ಟೇ ಮದುವೆಯಾಗಿದ್ದರು. ವಿವಾಹದ (Marriage) ನಂತರ ನವಜೋಡಿ ತಮ್ಮ ಮನೆಗೆ ಬಂದ ಬಳಿಕ ಹತ್ಯೆ ಮಾಡಲಾಗಿದೆ. ನವಜೋಡಿಗಳ ಕೊಲೆಯ ಬಳಿಕ ಬಾಮೈದುನ ಮತ್ತು ಆತನ ಸ್ನೇಹಿತನನ್ನು ಹತ್ಯೆ ಮಾಡಲಾಗಿದೆ ಎಂದು ಮೈನ್‌ಪುರಿ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಲಿಂಗ ಬದಲಾವಣೆ ನೆಪದಲ್ಲಿ ತಂತ್ರಿಯಿಂದ ಸಲಿಂಗಕಾಮಿ ಮಹಿಳೆ ಹತ್ಯೆ

    ಆರೋಪಿಯ ಈ ಕೃತ್ಯಕ್ಕೆ ಯಾವುದೇ ನಿಖರ ಕಾರಣಗಳು ತಿಳಿದುಬಂದಿಲ್ಲ. ಘಟನೆಯಲ್ಲಿ ಹತ್ಯೆಯಾದ ಸಂಬಂಧಿಗಳ ಮೃತದೇಹವನ್ನು ಮೈನ್‌ಪುರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡ ಆರೋಪಿಯ ಹೆಂಡತಿ ಡಾಲಿ ಮತ್ತು ಸಂಬಂಧಿ ಸುಷ್ಮಾ ಅವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅನಾಥ ಬಾಲಕಿ ಮೇಲೆ ಆಶ್ರಮದಲ್ಲೇ ತಿಂಗಳುಗಳಿಂದ ಅತ್ಯಾಚಾರ – ಆಂಧ್ರದ ಸ್ವಾಮೀಜಿ ಅರೆಸ್ಟ್

  • ಐವರು ಮಾವೋವಾದಿಗಳು ಶರಣು – 30 ದಶಕಗಳ ಬಳಿಕ ನಕ್ಸಲ್ ಮುಕ್ತಗೊಂಡ ಕೌಲೇಶ್ವರಿ ವಲಯ

    ಐವರು ಮಾವೋವಾದಿಗಳು ಶರಣು – 30 ದಶಕಗಳ ಬಳಿಕ ನಕ್ಸಲ್ ಮುಕ್ತಗೊಂಡ ಕೌಲೇಶ್ವರಿ ವಲಯ

    ರಾಂಚಿ: ಐವರು ಮಾವೋವಾದಿಗಳು (Maoists) ಭದ್ರತಾ ಪಡೆಗಳ ಮುಂದೆ ಶರಣಾದ ಪ್ರಕರಣ ಜಾರ್ಖಡ್‍ನಲ್ಲಿ (Jharkhand) ನಡೆದಿದೆ. ಇದರಿಂದಾಗಿ 30 ವರ್ಷಗಳ ಕಾಲ ನಕ್ಸಲರ ಕಪಿಮುಷ್ಠಿಯಲ್ಲಿ ನಲುಗಿದ್ದ ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಕೌಲೇಶ್ವರಿ (Kauleshwari) ವಲಯ ಮುಕ್ತಗೊಂಡಂತಾಗಿದೆ.

    ಶರಣಾದ ಮಾವೋವಾದಿಗಳನ್ನು ಕಮಾಂಡರ್ ಅಮರ್‌ಜಿತ್ ಯಾದವ್, ಶಾಹದೇವ್ ಯಾದವ್, ನಿರು ಯಾದವ್, ಸಂತೋಷ್ ಭುನಿಯನ್ ಹಾಗೂ ಅಶೋಕ್ ಬೈಗಾ ಎಂದು ಗುರುತಿಸಲಾಗಿದೆ. ಇದರಲ್ಲಿ ಅಮರ್‍ಜಿತ್ ಯಾದವ್ ಸುಳಿವಿಗೆ 10 ಲಕ್ಷ ರೂ. ಹಾಗೂ ಶಾಹದೇವ್ ಸುಳಿವಿಗೆ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಅಪ್ರಾಪ್ತರು ಸೇರಿ ನಾಲ್ವರು ಮಾವೋವಾದಿಗಳು ಅರೆಸ್ಟ್

    ಈ ಐವರು ಮಾವೋವಾದಿಗಳು ಜಾರ್ಖಂಡ್ ಮತ್ತು ಬಿಹಾರದ‌ (Bihar) ವಿವಿಧ ಜಿಲ್ಲೆಗಳಲ್ಲಿನ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಅಮರ್‌ಜಿತ್ 81 ಪ್ರಕರಣಗಳಲ್ಲಿ, ಶಾಹದೇವ್ 53 ಪ್ರಕರಣಗಳಲ್ಲಿ, ನಿರು 60 ಪ್ರಕರಣಗಳಲ್ಲಿ, ಸಂತೋಷ್ 27 ಪ್ರಕರಣಗಳಲ್ಲಿ ಮತ್ತು ಅಶೋಕ್ ಎರಡು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಕಾರ್ಯಾಚರಣೆಯ ಮಹಾನಿರೀಕ್ಷಕ (Inspector General of Police) ಅಮೋಲ್ ವಿ ಹೋಮ್ಕರ್ ಹೇಳಿದ್ದಾರೆ.

    ಕಳೆದ 30 ವರ್ಷಗಳಿಂದ ಸಿಪಿಐ ಮಾವೋವಾದಿಗಳ ಭದ್ರಕೋಟೆಯಾಗಿರುವ ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಕೌಲೇಶ್ವರಿ ಉಪವಲಯದಲ್ಲಿ ನಕ್ಸಲರು ಸಕ್ರಿಯರಾಗಿದ್ದರು. ಒಂದು ವರ್ಷದಿಂದ ಭದ್ರತಾ ಪಡೆಗಳು ಇವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿತ್ತು. ಇಂದಿನ ಶರಣಾಗತಿಯಿಂದ ಕೌಲೇಶ್ವರಿ ಉಪವಲಯವನ್ನು ನಿಷೇಧಿತ ಸಂಘಟನೆಯ ಮುಷ್ಠಿಯಿಂದ ಬಿಡಿಸಿದಂತೆ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಶರಣಾಗತರು ನೀಡಿದ ಮಾಹಿತಿಯಿಂದ ಎರಡು ಎಕೆ-56 ರೈಫಲ್‍ಗಳು, ಒಂದು ಎಸ್‍ಎಲ್‍ಆರ್ ರೈಫಲ್, ಒಂದು ಐಎನ್‍ಎಸ್‍ಎಎಸ್ ರೈಫಲ್, ಎರಡು 303 ರೈಫಲ್‍ಗಳು, ಒಂದು ಯುಎಸ್ ನಿರ್ಮಿತ ರೈಫಲ್, ಒಂದು ಏರ್ ಗನ್, ಎರಡು ದೇಶಿ ನಿರ್ಮಿತ ರೈಫಲ್‍ಗಳು, ಒಂದು ಪಿಸ್ತೂಲ್ (Pistol)‌ ಮತ್ತು 1,855 ಕ್ಯಾಲಿಬರ್‌ಗಳು ಮತ್ತು ಇತರ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರ ತಲೆಗೆ ಒಟ್ಟು 11 ಲಕ್ಷ ಘೋಷಣೆಯಾಗಿದ್ದ ನಕ್ಸಲರ ಎನ್‍ಕೌಂಟರ್

  • ಪಬ್‍ಜಿಗೆ ಬ್ರೇಕ್ ಹಾಕಿದ್ದ ತಾಯಿಯ ಕೊಲೆ – ಅಪ್ರಾಪ್ತ ಆರೋಪಿಗೆ ಜಾಮೀನು

    ಪಬ್‍ಜಿಗೆ ಬ್ರೇಕ್ ಹಾಕಿದ್ದ ತಾಯಿಯ ಕೊಲೆ – ಅಪ್ರಾಪ್ತ ಆರೋಪಿಗೆ ಜಾಮೀನು

    ಲಕ್ನೋ: ತನ್ನ ತಂದೆಯ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್ (Pistol) ಬಳಸಿ ತಾಯಿಯನ್ನು ಕೊಂದಿದ್ದ ಅಪ್ರಾಪ್ತ ಆರೋಪಿಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಇತ್ತೀಚೆಗೆ ಜಾಮೀನು (Bail) ಮಂಜೂರು ಮಾಡಿದೆ.

    ಆರೋಪಿಯು ಅಪ್ರಾಪ್ತನಾಗಿದ್ದು, ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ ಎಂದು ಪರಿಗಣಿಸಿದ ನ್ಯಾಯಮೂರ್ತಿ ಪ್ರಕಾಶ್ ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ಆರೋಪಿಗೆ ಜಾಮೀನು ನೀಡಿದೆ. ಇದನ್ನೂ ಓದಿ: ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

    ಈಗ ಇರುವ ಯಾವ ಸಾಕ್ಷಿಗಳೂ ಸೂಕ್ತವಾಗಿಲ್ಲ. ಪ್ರಕರಣದಲ್ಲಿ ಆರೋಪಿಯ ಅಜ್ಜಿ ದೂರು ದಾಖಲಿಸಿದ್ದು, ಅವರು ಪ್ರತ್ಯಕ್ಷ ಸಾಕ್ಷಿಯಲ್ಲ. ಇನ್ನುಳಿದ ಸಾಕ್ಷಿಗಳು ಪ್ರತ್ಯಕ್ಷ ಸಾಕ್ಷಿಗಳಾಗಿಲ್ಲ. ಕೇವಲ ಆರೋಪಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ಆರೋಪಿಗೆ ಘಟನೆ ನಡೆದಾಗ 16 ವರ್ಷ. ಇದು ಬಾಲ ನ್ಯಾಯ ಮಂಡಳಿಯ ದೋಷಾರೋಪ ಪಟ್ಟಿಯಲ್ಲಿಯೂ ಸ್ಪಷ್ಟವಾಗಿದೆ. ಇದರಿಂದಾಗಿ ಆತನನ್ನು ಅಪ್ರಾಪ್ತ ಎಂದು ಪರಿಗಣಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

    ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಆತನ ಮೇಲೆ ಕೊಲೆ ಆರೋಪ ಹೊರಿಸಿ ಆತನನ್ನು ಬಂಧಿಸಲಾಗಿತ್ತು. ಆರೋಪಿ ಜಾಮೀನಿಗಾಗಿ ಜಿಲ್ಲಾ ನ್ಯಾಯಲಯದ ಮೊರೆ ಹೋಗಿದ್ದ. ಆದರೆ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಆರೋಪಿ, ಲಕ್ನೋದ (Lucknow) ಪೋಕ್ಸೊ ನ್ಯಾಯಾಲಯದ (POCSO Court) ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (Additional District & Sessions Court) ತೀರ್ಪಿನ ವಿರುದ್ಧ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.

    ಏನಾಗಿತ್ತು?
    ಜೂನ್ 2022 ರಲ್ಲಿ ಪಬ್‍ಜಿ ಆಡುವುದನ್ನು ತಡೆದ ಕಾರಣಕ್ಕಾಗಿ ಆರೋಪಿ ತಾಯಿಯನ್ನು ಕೊಲೆಗೈದಿದ್ದ ಎಂದು ಆರೋಪಿಸಲಾಗಿತ್ತು. ಘಟನೆ ನಡೆದ ಎರಡು ದಿನಗಳ ನಂತರ ಮೃತರ ಶವ ಪತ್ತೆಯಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

    ಆರೋಪಿಯು ನೈತಿಕ, ದೈಹಿಕ ಅಥವಾ ಮಾನಸಿಕ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ ಹಾಗೂ ಅಪರಾಧ ಕೃತ್ಯದಲ್ಲಿ ತೊಡಗುವುದಿಲ್ಲ ಎಂದು ಮನವರಿಕೆಯಾದ ನಂತರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

    ಜಾಮೀನು ನೀಡುವ ಸಂದರ್ಭದಲ್ಲಿ ಆರೋಪಿಯು ಜೂನ್ 8, 2022 ರಿಂದ ಬಾಲಾಪರಾಧಿಗಳ ರಕ್ಷಣಾ ಗೃಹದಲ್ಲಿದ್ದಾನೆ (Child Protection Home). ಅವನ ತಂದೆ ತನ್ನ ಮಗನ ಮೇಲೆ ನಿಗಾ ಇಡುತ್ತಾರೆ ಎಂಬ ಅಂಶವನ್ನು ಸಹ ನ್ಯಾಯಾಲಯ ಉಲ್ಲೇಖಿಸಿದೆ. ಇದನ್ನೂ ಓದಿ: ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆರು ತಿಂಗಳ ಅಗತ್ಯವಿಲ್ಲ – ಸುಪ್ರೀಂ ತೀರ್ಪು

  • ಪಿಸ್ತೂಲಿನಿಂದ ಆಕಸ್ಮಿಕ ಹಾರಿದ ಗುಂಡು: ಆಸ್ಪತ್ರೆಯಲ್ಲಿ ನಟ ರವಿರಾಜ್

    ಪಿಸ್ತೂಲಿನಿಂದ ಆಕಸ್ಮಿಕ ಹಾರಿದ ಗುಂಡು: ಆಸ್ಪತ್ರೆಯಲ್ಲಿ ನಟ ರವಿರಾಜ್

    ನಸಿನ ರಾಣಿ ಮಾಲಾಶ್ರೀ ನಾಯಕಿಯಾಗಿ ನಟಿಸಿರುವ ‘ರಾಜಾ ಕೆಂಪು ರೋಜ’ (Raja Kempu Roja) ಸಿನಿಮಾದ ನಟಿಸಿರುವ ರವಿರಾಜ್ ಗೆ ಗುಂಡು ತಗುಲಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಮನೆಯಲ್ಲಿದ್ದ ಪಿಸ್ತೂಲ್ (Pistol) ಅನ್ನು ನವೀಕರಣಕ್ಕಾಗಿ ಸ್ವಚ್ಚಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ (Gundu) ರವಿರಾಜ್ (Raviraj) ಅವರಿಗೆ ತಲೆಗೆ ಗಾಯವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ದಾವಣಗೆರೆ (Davangere) ಮೂಲದ ರವಿರಾಜ್ ಚಿನ್ನದ ವ್ಯಾಪಾರಿ ಕೂಡ ಆಗಿದ್ದಾರೆ. ಹಾಗಾಗಿ ಪರವಾಣಿಗೆ ಸಹಿತ ಪಿಸ್ತೂಲ್ ಹೊಂದಿದ್ದಾರೆ. ಎಂಸಿಸಿ ಬಿ ಬ್ಲಾಕ್ ನಿವಾಸಿ ಆಗಿರುವ ಅವರು ಬುಧವಾರ ಸಂಜೆ ಪಿಸ್ತೂಲಿನ ಲೈಸೆನ್ಸ್ ನವೀಕರಣಕ್ಕೆ ಹೋಗಬೇಕಿತ್ತು. ಹಾಗಾಗಿ ಅದನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಟ್ರಿಗರ್ ಒತ್ತಿದ ಪರಿಣಾಮ ಗುಂಡು ಸಿಡಿದಿದೆ. ಹಣೆಯ ಭಾಗಕ್ಕೆ ಗುಂಡು ಹೊಕ್ಕಿದೆ. ಕೂಡಲೇ ಅವರನ್ನು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನೂ ಓದಿ: ‘ಆಸ್ಕರ್’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೀಪಿಕಾ ಪಡುಕೋಣೆ ನಿರೂಪಕಿ

    ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಲ್. ಸುಬ್ಬರಾವ್ ನೇತೃತ್ವದ ತಂಡವು ತುರ್ತು ಚಿಕಿತ್ಸೆ ನಡೆಸಿ, ಯಶಸ್ಸಿಯಾಗಿ ಗುಂಡು ಹೊರತಗೆಯಲಾಗಿದೆ. ತಲೆಬುರುಡೆಯ ಮೂಳೆಯಲ್ಲಿ ಗುಂಡು ಹೊಕ್ಕಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ರವಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿನಿಮಾ ರಂಗದಲ್ಲಿ ರವಿರಾಜ್ ಎಂದೇ ಗುರುತಿಸಿಕೊಂಡಿದ್ದ ಅವರು ದಾವಣಗೆರೆ ಜನತೆಗೆ ಮಂಜುನಾಥ ರೇವಣ್ಕರ್ (Manjunath Revankar) ಎಂದು ಪರಿಚಿತರು.

    ಸಿನಿಮಾ ರಂಗದಲ್ಲಿ ನಟರಾಗಿ, ನಾಯಕ ನಟರಾಗಿ ನಂತರ ಒಂದು ಸಿನಿಮಾವನ್ನೂ ನಿರ್ಮಾಣ ಮಾಡಿದ್ದಾರೆ. ಆನಂತರ ಸಿನಿಮಾ ರಂಗದಿಂದ ದೂರವಾಗಿ ತಮ್ಮ ವೃತ್ತಿಯಲ್ಲೇ ಮುಂದುವರೆದಿದ್ದರು. ಸಿನಿಮಾ ರಂಗದಿಂದ ದೂರವಾಗಿದ್ದರೂ, ಸಿನಿಮಾಗಳಿಂದ ಅವರು ದೂರವಾಗಿರಲಿಲ್ಲ. ಆಗಾಗ್ಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದರು.

  • ಮೂವರು ಹಿಜ್ಬುಲ್ ಉಗ್ರರು ಅರೆಸ್ಟ್

    ಮೂವರು ಹಿಜ್ಬುಲ್ ಉಗ್ರರು ಅರೆಸ್ಟ್

    ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ (Kashmir) ಪೊಲೀಸರು ಕಾರ್ಯಾಚರಣೆ ನಡೆಸಿ ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನಲ್ಲಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ (Hizb-ul-Mujahideen) ಭಯೋತ್ಪಾದಕರನ್ನು ಬಂಧಿಸಿದ್ದಾರೆ.

    ಬಂಧಿತರಿಂದ ಒಂದು ಪಿಸ್ತೂಲ್ (Pistol), ಎರಡು ಮ್ಯಾಗ್‍ಜಿನ್ ಹಾಗೂ 13 ಸುತ್ತಿನ ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: `ಸಾಕಪ್ಪ ಸಾಕು, ಕಿವಿ ಮೇಲೆ ಹೂ’; ಬಜೆಟ್ ಬಗ್ಗೆ ಕಾಂಗ್ರೆಸ್ ವ್ಯಂಗ್ಯ – ಪೋಸ್ಟರ್ ಅಂಟಿಸಿ ಅಭಿಯಾನ

    ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿರುವ ನಿರ್ದಿಷ್ಟ ಮಾಹಿತಿ ಮೇರೆಗೆ ಹತಿಪೋರ್, ಬೆಹಿಬಾಗ್ ಮತ್ತು ಕುಲ್ಗಾಮ್ ಠಾಣೆಯ ಪೊಲೀಸರು ಕಾರ್ಯಾಚರಣೆ ಕೈಗೊಂಡು, ದಾದರ್‍ಕೊಟ್‍ನ ಅಲಂಗಂಜ್ ಕ್ರಾಸಿಂಗ್‍ನಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿ ಕಾದಿದ್ದರು.

     ಪ್ರಾಥಮಿಕ ತನಿಖೆಯಿಂದ ಆರೋಪಿಗಳು ಭಯೋತ್ಪಾದಕ ಸಂಘಟನೆಯೊಂದಿಗೆ ಕೈಜೋಡಿಸಿ ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಎಫ್‍ಐಆರ್ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆ ಉಸಿರೆಳೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಟಿಪ್ಪು, ಭಯೋತ್ಪಾದನೆ, ಎಸ್‍ಡಿಪಿಐ ಆಕ್ಸಿಜನ್ ಆಗ್ತಿದೆ: ಯುಟಿ ಖಾದರ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೊಲೀಸ್ ಠಾಣೆಯಲ್ಲೇ ಕಳ್ಳತನ – ಯೂನಿಫಾರ್ಮ್, ಪಿಸ್ತೂಲ್ ಜೊತೆಗೆ ಕಿರಾತಕರು ಜೂಟ್

    ಪೊಲೀಸ್ ಠಾಣೆಯಲ್ಲೇ ಕಳ್ಳತನ – ಯೂನಿಫಾರ್ಮ್, ಪಿಸ್ತೂಲ್ ಜೊತೆಗೆ ಕಿರಾತಕರು ಜೂಟ್

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ಪೊಲೀಸ್ ಠಾಣೆಯಿಂದಲೇ ಸರ್ಕಾರಿ ಪಿಸ್ತೂಲ್ ಮತ್ತು ಸಮವಸ್ತ್ರವನ್ನು ಕಳ್ಳರು ಪರಾರಿಯಾಗಿದ್ದಾರೆ.

    ನ್ಯೂ ಆಜಾದ್ ನಗರದ (Azad Nagar) ಬಿದ್ನು (Bidhnu) ಅವರ ಹೊರಠಾಣೆಯಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಪಿ ತೇಜ್ ಸ್ವರೂಪ್ ಸಿಂಗ್ ಅವರು ಔಟ್ ಪೋಸ್ಟ್ ಇನ್ ಚಾರ್ಜ್ ಸುಧಾಕರ್ ಪಾಂಡೆ ಅವರನ್ನು ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ದೇಗುಲದಲ್ಲಿ ತಪ್ತಮುದ್ರಾಧಾರಣೆಗೆ ಬ್ರೇಕ್ – ಸತ್ಯನಾರಾಯಣ ಪೂಜೆ, ಶನಿಕಥೆಗೆ ಅಡ್ಡಿ

    ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಈ ಕುರಿತಂತೆ ಮಾಹಿತಿ ದೊರೆತ ಮೇರೆಗೆ ಎಸ್‍ಪಿ, ವಿಧಿವಿಜ್ಞಾನ ತಂಡ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಡ್‌ಶೀಟ್ ಮೇಲೆ ಕಲೆಗಳಿರುತ್ತಿತ್ತು- ಶ್ರೀಗಳ ಬೆಡ್‌ರೂಂ ರಸಹ್ಯ ಬಯಲು

    ನ್ಯೂ ಆಜಾದ್ ನಗರ ಚೌಕಿಯ ಪೋಸ್ಟ್‌ ಇನ್ ಚಾರ್ಜ್ ಆಗಿ ಸಬ್ ಇನ್ಸ್‌ಪೆಕ್ಟರ್ ಸುಧಾಕರ್ ಪಾಂಡೆ ಅವರನ್ನು ನೇಮಿಸಲಾಗಿದೆ. ಬುಧವಾರ ತಡರಾತ್ರಿ ಕಳ್ಳರು ಠಾಣೆಯಲ್ಲಿದ್ದ ಪೆಟ್ಟಿಗೆಯನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳತನವಾಗಿರುವ ವಿಷಯ ಉನ್ನತ ಅಧಿಕಾರಿಗಳಿಗೆ ತಿಳಿದಾಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ. ತರಾತುರಿಯಲ್ಲಿ ಐಜಿ ರೇಂಜ್, ಎಸ್‍ಪಿ ಔಟರ್ ಸೇರಿದಂತೆ ಸರ್ಕಲ್ ಫೋರ್ಸ್ ಸ್ಥಳಕ್ಕೆ ಧಾವಿಸಿದರು. ನಂತರ ತಕ್ಷಣವೇ ವಿಧಿವಿಜ್ಞಾನ ತಂಡವನ್ನು ಸ್ಥಳಕ್ಕೆ ಕರೆಸಲಾಯಿತು. ಸುಧಾಕರ್ ಪಾಂಡೇ ಅವರ ನಿರ್ಲಕ್ಷ್ಯವೇ ಈ ಕಳ್ಳತನಕ್ಕೆ ಕಾರಣ ಎಂದು ಇದೀಗ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

    ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‍ಪಿ ತೇಜ್ ಸ್ವರೂಪ್ ಸಿಂಗ್ ಅವರು, ಪೊಲೀಸ್ ಠಾಣೆಯಲ್ಲಿಯೇ ಈ ಘಟನೆ ನಡೆದಿದ್ದು, ಸರ್ಕಾರಿ ಪಿಸ್ತೂಲ್ ಮತ್ತು 10 ಕಾಟ್ರಿಡ್ಜ್‌ಗಳು ಕಾಣೆಯಾಗಿದೆ. ಈ ವೇಳೆ ಎಸ್‍ಐ ಔಟ್‍ಪೋಸ್ಟ್‌ನಲ್ಲಿದ್ದರು. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರನ್ನು ಹಿಡಿಯಲು ಐದು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಳ್ಳ-ಪೊಲೀಸ್ ಆಟವಾಡುತ್ತಾ ನೆರೆ ಮನೆಯ ಬಾಲಕನನ್ನು ಕೊಂದ ಬಿಜೆಪಿ ಮುಖಂಡನ ಮಗ

    ಕಳ್ಳ-ಪೊಲೀಸ್ ಆಟವಾಡುತ್ತಾ ನೆರೆ ಮನೆಯ ಬಾಲಕನನ್ನು ಕೊಂದ ಬಿಜೆಪಿ ಮುಖಂಡನ ಮಗ

    ಲಕ್ನೋ: ಬಿಜೆಪಿ ಮುಖಂಡರೊಬ್ಬರ ಮಗ ತನ್ನ ನೆರೆ ಮನೆಯವರ ಜೊತೆ ತಮ್ಮ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾಗ ಗುಂಡು ತಗುಲಿ 10 ವಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ ಕರಾರಿಯಲ್ಲಿ ನಡೆದಿದೆ.

    ಕಣ್ಣಾಮುಚ್ಚಾಲೆ ಆಟದಲ್ಲಿ ಲೋಡೆಡ್ ಗನ್ ಬಳಸಿದ 11 ವರ್ಷದ ಬಾಲಕ, ಹತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಂದಿದ್ದು, ಆಕಸ್ಮಿಕವಾಗಿ ಈ ಘಟನೆ ಸಂಭವಿಸಿದೆ ಎಂದು ಬಾಲಕನ ಕುಟುಂಬ ಹೇಳುತ್ತಿದೆ. ಶನಿವಾರ ಸಂಜೆ ಕರಾರಿ ಪೊಲೀಸ್ ವೃತ್ತದಲ್ಲಿ ಈ ಘಟನೆ ನಡೆದಿದೆ. ಆರೋಪಿ ಬಾಲಕ ಸ್ಥಳೀಯ ರಾಜಕಾರಣಿಯೊಬ್ಬರ ಮಗ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಮ್ಮ ಸರ್ಕಾರ ಸಮರ್ಥವಾಗಿದೆ, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುತ್ತೇವೆ: ಸಿ.ಪಿ.ಯೋಗೇಶ್ವರ್ 

    ಕೌಶಾಂಬಿ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ಪಿ.ಹೇಮರಾಜ್ ಮೀನಾ ಈ ಕುರಿತು ಮಾಹಿತಿ ಕೊಟ್ಟಿದ್ದು, ಘಟನೆ ನಡೆದ ಮನೆ ರಾಜಕೀಯ ಪಕ್ಷದ ಪದಾಧಿಕಾರಿಗೆ ಸೇರಿದ್ದು, ಆತ ಆರೋಪಿ ಬಾಲಕನ ತಂದೆಯಾಗಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಪಿಸ್ತೂಲ್ ಹೊಂದಿದ್ದ ತಂದೆಯ ಮಗ, ನೆರೆಮನೆಯ 10 ವರ್ಷದ ಬಾಲಕ ಮತ್ತು ಒಂಬತ್ತು ವರ್ಷದ ಬಾಲಕ ಸೇರಿದಂತೆ ಮೂವರು ಮಕ್ಕಳು ಇದ್ದರು. ಮೂವರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದರು ಎಂದು ವಿವರಿಸಿದರು.

    ಈ ನಡುವೆ ಗುಂಡಿನ ಸದ್ದು ಕೇಳಿ ಬಂದಿದೆ. ಅದಕ್ಕೆ ಅಕ್ಕಪಕ್ಕದವರು ಒಳಗೆ ಓಡಿ ಬಂದು ನೋಡಿದಾಗ 10 ವರ್ಷದ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಗುಂಡು ಹಾರಿಸಿದ ಬಾಲಕ ಜೋರಾಗಿ ಅಳುತ್ತಿರುವುದು ಕಂಡುಬಂದಿದೆ. ಮೂರನೇ ಮಗು ಹಾಸಿಗೆಯ ಕೆಳಗೆ ಅಡಗಿಕೊಂಡಿತ್ತು ಎಂದು ಹೇಳಿದರು. ಇದನ್ನೂ ಓದಿ: ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ: ಹೆಚ್‍ಡಿಕೆ ಕಿಡಿ

    ಬಾಲಕ ಕಬೋರ್ಡ್‍ನಿಂದ ಪಿಸ್ತೂಲ್ ತೆಗೆದು ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಕೂಡ ಭೇಟಿ ನೀಡಿದ್ದು, ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು. ಘಟನೆ ನಡೆದಾಗ ಆರೋಪಿಗಳ ಪೋಷಕರು ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿದರು.

    ಮೂವರೂ ಹುಡುಗರು ಸ್ನೇಹಿತರಾಗಿದ್ದರು. ಯಾವಾಗಲೂ ಒಟ್ಟಿಗೆ ಆಟವಾಡುತ್ತಿದ್ದರು ಎಂದು ನೆರೆಮನೆಯವರು ನಮಗೆ ಮಾಹಿತಿ ಕೊಟ್ಟಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]