Tag: pisthol

  • ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದ ಬಿಜೆಪಿ ಮುಖಂಡನ ಮೇಲೆ ಪ್ರಕರಣ ದಾಖಲು

    ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದ ಬಿಜೆಪಿ ಮುಖಂಡನ ಮೇಲೆ ಪ್ರಕರಣ ದಾಖಲು

    ಧಾರವಾಡ: ಅಂಗಡಿ ಇಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಾಗ ಬಿಜೆಪಿ ಮುಖಂಡನೋರ್ವ ಪಿಸ್ತೂಲ್ ತೆಗೆದು ಗುಂಡು ಹಾರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ ಘಟನೆ ಧಾರವಾಡ ಜಿಲ್ಲೆಯ ಹೊಸ ತೇಗೂರ ಗ್ರಾಮದಲ್ಲಿ ನಡೆದಿತ್ತು.

    ಸದ್ಯ ಆ ಬಿಜೆಪಿ ಮುಖಂಡನ ಮೇಲೆ ಪ್ರಕರಣ ದಾಖಲಾಗಿದೆ. ನಾಗಪ್ಪ ಗಾಣಿಗೇರ ಎಂಬ ಬಿಜೆಪಿ ಮುಖಂಡನೇ ಪಿಸ್ತೂಲ್ ತೆಗೆದು ಗುಂಡು ಹಾರಿಸಲು ಮುಂದಾಗಿದ್ದ. ಮಲ್ಲಿಕ ಎಂಬವನು ಸರ್ಕಾರಿ ಜಾಗದಲ್ಲಿ ಎಗ್‍ರೈಸ್ ಅಂಗಡಿ ಇಡಲು ಮುಂದಾದಾಗ, ಬಿಜೆಪಿ ಮುಖಂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಈ ವಿಚಾರವಾಗಿ ಮಲ್ಲಿಕ ಪರ ನಾಗಪ್ಪನಿಗೆ ಮಾತನಾಡಲು ಬಂದಿದ್ದ ಮಡಿವಾಳೆಪ್ಪನಿಗೆ, ನಾಗಪ್ಪ ಪಿಸ್ತೂಲ್ ತೊರಿಸಿದ್ದ. ಈ ಪ್ರಕರಣ ನಡೆದ ನಂತರ ಮಡಿವಾಳೆಪ್ಪ ಗರಗ ಪೊಲೀಸ್ ಠಾಣೆಗೆ ದೂರನ್ನ ನೀಡಿದ್ದ. ನಾಗಪ್ಪ ನನಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್ ನಿಂದ ಹೊಡೆಯಲು ಯತ್ನ ನಡೆದಿದೆ ಎಂದು ದೂರು ಕೊಟ್ಟಿದ್ದನು. ಇದನ್ನೂ ಓದಿ: ಇಟಲಿಯ ತಾಯಿ, ಭಾರತದ ತಂದೆ – ರಾಹುಲ್ ಗಾಂಧಿ ವಿರುದ್ಧ ಅನಿಲ್ ವಿಜ್ ಕಿಡಿ

    ಪ್ರಕರಣಕ್ಕೆ ಸಂಬಂಧಿಸಿ ಗರಗ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ನಾಗಪ್ಪನ ಮೇಲೆ ಪ್ರಕರಣ ದಾಖಲಿಸಿಕೊಂಡು ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಾಗಪ್ಪನಿಗೆ ಹಿಂದಿನ ಯಾವುದೇ ಕ್ರಿಮಿನಲ್ ರೆಕಾರ್ಡ್ ಇಲ್ಲದ ಕಾರಣ ತನಿಖೆ ನಡೆಸುತ್ತಿದ್ದು, ತನಿಖೆ ನಂತರ ಬಂಧಿಸುವದಾದರೆ ಬಂಧಿಸುತ್ತೆವೆ ಎಂದು ಎಸ್‍ಪಿ ಕೃಷ್ಣಕಾಂತ ಹೇಳಿದ್ದಾರೆ. ಇನ್ನು ವಶಕ್ಕೆ ಪಡೆದ ಪಿಸ್ತೂಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

  • ಆಟೋ ಚಾಲಕನ ತಲೆಗೆ ಗನ್ ಇಟ್ಟ ಮಹಿಳೆ!

    ಆಟೋ ಚಾಲಕನ ತಲೆಗೆ ಗನ್ ಇಟ್ಟ ಮಹಿಳೆ!

    ಗುರುಗಾಂವ್: 34 ವರ್ಷದ ಮಹಿಳೆಯೊಬ್ಬರು ಆಟೋ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸಪ್ನಾ ಹಾಗೂ ಆಕೆಯ ಪತಿ ಭುರೇಯನ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?:
    ಬುಧವಾರ ಗುರುಗಾಂವ್ ರಸ್ತೆ ಪಕ್ಕದಲ್ಲಿ ವಾಹನ ಪಾರ್ಕಿಂಗ್ ಮಾಡೋ ವಿಚಾರದಲ್ಲಿ ಮಹಿಳೆ ಹಾಗೂ ಆಟೋ ರಿಕ್ಷಾ ಚಾಲಕನಿಗೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ಮಹಿಳೆಯ ಪತಿ ತನಗೆ ಹೊಡೆದಿದ್ದಾನೆ ಅಂತ ಚಾಲಕ ಆರೋಪಿಸಿದ್ದಾರೆ.

    ಭವಾನಿ ಎನ್ಕ್ಲೇವ್ ಎಂಬ ಪ್ರದೇಶದಲ್ಲಿ ಬೆಳಗ್ಗೆ ನಡೆದ ಈ ಘಟನೆಯನ್ನು ಅಲ್ಲೇ ಇದ್ದ ಸ್ಥಳೀಯರು ಗಮನಿಸಿದ್ದಾರೆ. ಅಲ್ಲದೇ ಕೆಲವರು ಇದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಪೊಲೀಸರಿಗೆ ಈ ದೃಶ್ಯವನ್ನು ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಪ್ನಾ ಹಾಗೂ ಆಕೆಯ ಪತಿ ಭುರೇಯನ್ನು ಬಂಧಿಸಿ, ಸೆಕ್ಟರ್ 9 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಇವರೊಂದಿಗೆ ಹಲ್ಲೆ ನಡೆಸಲು ಇನ್ನೋರ್ವ ವ್ಯಕ್ತಿ ಕೂಡ ಇದ್ದಿದ್ದು, ಆತ ಪೊಲೀಸರು ಬರುತ್ತಿದ್ದಂತೆಯೇ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಹಾಗೆಯೇ ತಲೆಮರೆಸಿಕೊಂಡಿರೋ ಆರೋಪಿಯನ್ನು ಕೂಡ ಶೀಘ್ರವೇ ಬಂಧಿಸುವುದಾಗಿ ಎಸಿಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

    ಆಟೋ ರಿಕ್ಷಾ ಚಾಲಕನನ್ನು ಸುನೀಲ್ ಎಂದು ಗುರುತಿಸಲಾಗಿದ್ದು, ಇವರು ರಸ್ತೆ ಪಕ್ಕದಲ್ಲಿ ತನ್ನ ಆಟೋವನ್ನು ಪಾರ್ಕ್ ಮಾಡಿದ್ದರು. ಈ ವೇಳೆ ಅಲ್ಲಿಗೆ ಬಂದ ಸಪ್ನಾ ವಾಹನ ಅಲ್ಲಿಂದ ತೆಗೆಯುವಂತೆ ಸೂಚಿಸಿದ್ದಾರೆ. ಆದ್ರೆ ಸಪ್ನಾ ಮಾತನ್ನು ಸುನೀಲ್ ಕಡೆಗಣಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಮಹಿಳೆ ಸುನೀಲ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಸುನೀಲ್ ಪಕ್ಕದಲ್ಲೇ ಆಟೋ ನಿಲ್ಲಿಸಿ ಜಗಳವಾಡಿದ್ದಾನೆ. ಹೀಗಾಗಿ ಇಬ್ಬರು ಕೈಕೈ ಮಿಲಾಯಿಸಿಕೊಂಡಿದ್ದಾರೆ ಅಂತ ಕುಮಾರ್ ತಿಳಿಸಿದ್ದಾರೆ.

    ಜಗಳ ತಾರಕಕ್ಕೇರಿ ಸಪ್ನಾ ತನ್ನ ಹಣೆಗೆ ಪಿಸ್ತೂಲ್ ಇಟ್ಟು ಗುಂಡಿನ ದಾಳಿ ನಡೆಸಲು ಮುಂದಾದ್ರು. ಈ ವೇಳೆ ಎಚ್ಚೆತ್ತುಕೊಂಡು ಮಹಿಳೆ ಕೈಯಿಂದ ಪಿಸ್ತೂಲನ್ನು ದೂಡಿ ಆಗುವ ಅನಾಹುತದಿಂದ ಪಾರಾದೆ ಅಂತ ಚಾಲಕ ಸುನೀಲ್ ನಡೆದ ಘಟನೆಯನ್ನು ವಿವರಿಸಿದ್ದಾರೆ.

  • ಕುಖ್ಯಾತ ರೌಡಿ ಯಶವಂತನ ಮೇಲೆ ಪೊಲೀಸ್ ಫೈರಿಂಗ್-ಅಕ್ರಮ ಪಿಸ್ತೂಲ್ ಮಾರಾಟ ಜಾಲ ಬೆಳಕಿಗೆ

    ಕುಖ್ಯಾತ ರೌಡಿ ಯಶವಂತನ ಮೇಲೆ ಪೊಲೀಸ್ ಫೈರಿಂಗ್-ಅಕ್ರಮ ಪಿಸ್ತೂಲ್ ಮಾರಾಟ ಜಾಲ ಬೆಳಕಿಗೆ

    ಕಲಬುರಗಿ: ಜಿಲ್ಲೆಯ ಕುಖ್ಯಾತ ರೌಡಿ ಯಶವಂತನ ಮೇಲೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

    ಕಲಬುರಗಿಯಲ್ಲಿ ಕೆಇಬಿ ಕಾಂಟ್ರಾಕ್ಟರ್ ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ರೌಡಿ ಯಶವಂತ, ಕಳೆದ 2 ತಿಂಗಳಿಂದ ತಲೆ ಮರೆಸಿಕೊಂಡು ಓಡಾಡ್ತಿದ್ದ. ಜೊತೆಗೆ ಅಕ್ರಮ ಪಿಸ್ತೂಲ್ ಮಾರಾಟ ದಂಧೆಯಲ್ಲೂ ತೊಡಗಿದ್ದ ಎನ್ನಲಾಗಿದೆ.

    ಈ ಹಿನ್ನೆಲೆಯ ಯಶವಂತ ಕಲಬುರಗಿ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ರು. ಈ ವೇಳೆ ಪೊಲೀಸರ ಬ್ಯಾರಿಕೇಡ್ ಮೇಲೆ ವಾಹನ ನುಗ್ಗಿಸಿ ಮುನ್ನುಗ್ಗುವ ದುಸ್ಸಾಹಸ ಮಾಡಿದ. ಈ ಹಂತದಲ್ಲಿ ಪ್ರಾಣ ರಕ್ಷಣೆಯ ಸಲುವಾಗಿ ಪೊಲೀಸರು ಮೊದಲು ಕಾರ್ ಟೈರ್‍ಗೆ ಗುಂಡು ಹಾರಿಸಿದ್ರು.

    ಆಗ ಕಾರ್‍ನಿಂದ ಕೆಳಗಿಳಿದ ರೌಡಿ ಯಶವಂತ ಪೊಲೀಸರತ್ತ ತಿರುಗಿಬಿದ್ದ. ಕೂಡಲೇ ಪೊಲೀಸರು ಯಶವಂತನ ಕಾಲಿಗೆ 2 ಸುತ್ತು ಗುಂಡು ಹಾರಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮೀಣ ಠಾಣೆಯ ಇಬ್ಬರು ಪಿಎಸ್‍ಐಗಳಿಗೂ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.