Tag: piriyapattana

  • ಫೈನಾನ್ಸ್‌ ಕಿರುಕುಳಕ್ಕೆ ಮತ್ತೊಂದು ಬಲಿ – ವಿಷ ತೆಗೆದುಕೊಂಡ ಕೂಲಿ ಕಾರ್ಮಿಕ ಆತ್ಮಹತ್ಯೆ

    ಫೈನಾನ್ಸ್‌ ಕಿರುಕುಳಕ್ಕೆ ಮತ್ತೊಂದು ಬಲಿ – ವಿಷ ತೆಗೆದುಕೊಂಡ ಕೂಲಿ ಕಾರ್ಮಿಕ ಆತ್ಮಹತ್ಯೆ

    ಮೈಸೂರು: ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಲು ಕಸರತ್ತು ನಡೆಸಿದೆ. ಇದ್ರ ನಡುವೆಯೂ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಇಂದು ಕೂಡ ಒಬ್ಬರು ಬಲಿ ಆಗಿದ್ದಾರೆ.

    6 ಲಕ್ಷ ಸಾಲ ಮಾಡಿದ್ದ ಪಿರಿಯಾಪಟ್ಟಣದ ಬೆಟ್ಟದಪುರದ ಕೂಲಿಕಾರ್ಮಿಕ ಸುಬ್ರಹ್ಮಣ್ಯ, ಕಿರುಕುಳ ತಾಳದೇ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ.ಇದನ್ನೂ ಓದಿ: ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ – 64,93500 ರೂ. ಸಂಗ್ರಹ

    ಸಕಾಲಕ್ಕೆ ಸಾಲ ಕಟ್ಟದ ಸುಬ್ರಹ್ಮಣ್ಯ ಮನೆ ಮೇಲೆ ಸಾಲದ ವಿವರವನ್ನು ಫೈನಾನ್ಸ್ ಸಿಬ್ಬಂದಿ ಬರೆದಿದ್ದರು. ಅತ್ತ, ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತ ಮಹಿಳೆಯರು ಮೂರು ದಿನ ಸ್ಮಶಾನದಲ್ಲಿ ಕಾಲ ಕಳೆದ ಘಟನೆ ರಾಯಚೂರಿನ ಹಟ್ಟಿಯಲ್ಲಿ ನಡೆದಿದೆ.

    ಇನ್ನು, ಬೆಂಗಳೂರಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಚಾಮರಾಜನಗರದ 7ನೇ ತರಗತಿ ಬಾಲಕನೊಬ್ಬ, 3 ಲಕ್ಷ ಸಾಲ ಪಡೆದ ಅಪ್ಪ ಅಮ್ಮನಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಕಿರುಕುಳ ಕೊಡ್ತಿದ್ದಾರೆ. ಕಿಡ್ನಿ ಮಾರಿ, ಸಾಲ ಕಟ್ತೀನಿ. ಇದಕ್ಕೆ ಸರ್ಕಾರ ಅನುಮತಿ ಕೊಡ್ಬೇಕು ಎಂದು ಕೋರಿದ್ದಾರೆ. ಇದನ್ನು ಕೇಳಿ ಸಚಿವ ಮಹದೇವಪ್ಪ ಶಾಕ್ ಆಗಿ, ಮೈಕ್ರೋ ಫೈನಾನ್ಸ್‌ವರು ಹೇಗೆ ಟಾರ್ಚರ್ ಕೊಡ್ತಿದ್ದಾರೆ ಅನ್ನೋದು ಅರ್ಥವಾಗ್ತಿದೆ ಎಂದಿದ್ದಾರೆ.ಇದನ್ನೂ ಓದಿ: ಅಸ್ತಿ ವಿಸರ್ಜನೆಯಿಂದ ಕಾವೇರಿ ನದಿ ಮಲಿನ – ವೈಜ್ಞಾನಿಕವಾಗಿ ಅಸ್ತಿ ಬಿಡಲು ಯೋಜನೆ ರೂಪಿಸುವಂತೆ ಕೋರ್ಟ್ ನಿರ್ದೇಶನ

  • ಕರೆದಾಕ್ಷಣ ನೈಟ್ ಡ್ಯೂಟಿಗೆ ಬರದ್ದಕ್ಕೆ ಶಾಸಕನಿಂದ ದೂರು- ವೈದ್ಯೆ ವೀಣಾಸಿಂಗ್ ಸ್ಪಷ್ಟನೆ

    ಕರೆದಾಕ್ಷಣ ನೈಟ್ ಡ್ಯೂಟಿಗೆ ಬರದ್ದಕ್ಕೆ ಶಾಸಕನಿಂದ ದೂರು- ವೈದ್ಯೆ ವೀಣಾಸಿಂಗ್ ಸ್ಪಷ್ಟನೆ

    ಬೆಂಗಳೂರು/ಮೈಸೂರು: ಕರೆದಾಕ್ಷಣ ಮನೆಗೆ ಚಿಕಿತ್ಸೆ ನೀಡಲು ಬಂದಿಲ್ಲವೆಂದು ಆರೋಪಿಸಿ ವೈದ್ಯೆ ಡಾ. ವೀಣಾಸಿಂಗ್ ವಿರುದ್ಧ ಜೆಡಿಎಸ್ ಶಾಸಕ ಕೆ. ಮಹದೇವ್ ದೂರು ದಾಖಲಿಸಿದ್ದಾರೆ. ವೈದ್ಯೆ ಡಾ. ವೀಣಾ ಸಿಂಗ್ ಅವರು ನಡೆದ ಘಟನೆಯ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಸೆಪ್ಟೆಂಬರ್ 18 ರಂದು ನಾನು ತುರ್ತು ನಿಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸುಮಾರು 100 ಹಾಸಿಗೆಗಳಿರುವ ಆಸ್ಪತ್ರೆಯಲ್ಲಿ ನಾನೊಬ್ಬಳೇ ಅಂದು ಹಾಜರಾಗಿದ್ದೆ. ಇದೇ ದಿನ ಸಂಜೆ 5.30ಕ್ಕೆ ಹೆರಿಗೆ ರೋಗಿಯೊಬ್ಬರು ದಾಖಲಾಗಿದ್ದರು. ಅಲ್ಲದೇ 8.45ರ ಸುಮಾರಿಗೆ ಅಪಘಾತದಿಂದ ಗಾಯಗೊಂಡು ಮೂವರಿಗೆ ಚಿಕಿತ್ಸೆ ನೀಡುತ್ತಿದ್ದೆ.

    ಇದೇ ಸಮಯದಲ್ಲಿ ಹೆರಿಗೆಗೆ ಆಗಮಿಸಿದ್ದ ರೋಗಿಯೊಬ್ಬರಿಗೆ ನೋವು ಕಾಣಿಸಿಕೊಂಡಿತ್ತು. ನಾನು ಅವರಿಗೆ ಹೆರಿಗೆ ಕೊಠಡಿಯಲ್ಲಿ ಚಿಕಿತ್ಸೆ ನೀಡುತ್ತಿದ್ದೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಗಿರಿಜಾ ಎಂಬವರು ಬಂದು, ಎಂಎಲ್‍ಎ ಅವರಿಗೆ ಹುಷಾರಿಲ್ಲ ಎಂದು ಆಟೋ ಚಾಲಕರೊಬ್ಬರು ಬಂದಿದ್ದಾರೆ ಎಂದು ಹೇಳಿದರು. ಕೂಡಲೇ ನಾನು ಅವರ ಬಳಿ ಹೋಗಿ ವಿಚಾರಿಸಿದಾಗ, ಆಟೋ ಚಾಲಕ ಶಾಸಕರಿಗೆ ಹುಷಾರಿಲ್ಲ ಬೇಗ ನನ್ನ ಜೊತೆ ಬನ್ನಿ ಎಂದು ಹೇಳಿದರು.

    ಆದರೆ ಆಸ್ಪತ್ರೆಯಲ್ಲಿ ಹೆರಿಗೆ ರೋಗಿ ಹಾಗೂ ಅಪಘಾತದಿಂದ ಗಾಯಗೊಂಡಿದ್ದವರಿಗೆ ನಾನು ಚಿಕಿತ್ಸೆ ನೀಡುತ್ತಿದ್ದೆ. ಹೀಗಾಗಿ ಶಾಸಕರ ಆರೋಗ್ಯ ತಪಾಸಣೆಗೆ ಹೋಗಲು ನಾನು ಕೂಡಲೇ ನಮ್ಮ ಮೆಡಿಕಲ್ ಆಫೀಸರ್ ಗೆ ಕರೆ ಮಾಡಿ ವಿಚಾರಿಸಿದೆ. ಅವರು ಆಟೋ ಚಾಲಕನೊಂದಿಗೆ ಮಾತನಾಡಲು ಫೋನ್ ಕೊಡಿ ಎಂದು ಹೇಳಿದರು. ಆದರೆ ಆರೋಗ್ಯಾಧಿಕಾರಿಯ ಜೊತೆ ಮಾತನಾಡಲು ಆಟೋ ಚಾಲಕ ನಿರ್ಲಕ್ಷ್ಯಿಸಿ, ಶಾಸಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿನಿ ಎಂದು ತರಾತುರಿಯಲ್ಲಿ ಹೊರಟು ಹೋದರು. ಇದನ್ನೂ ಓದಿ: ಕರೆದಾಕ್ಷಣ `ನೈಟ್ ಡ್ಯೂಟಿ’ಗೆ ಬಾರದ ವೈದ್ಯೆ ವಿರುದ್ಧ ಜೆಡಿಎಸ್ ಶಾಸಕ ದೂರು!

    ಶಾಸಕರಿಗೆ ಹುಷಾರಿಲ್ಲ ಅವರು ಆಸ್ಪತ್ರೆಗೆ ಬರುತ್ತಾರೆಂದು ತಿಳಿದು, ನಾನು ಹಾಗೂ ಆಸ್ಪತ್ರೆಯ ಸಿಬ್ಬಂದಿ ಐಸಿಯು ಅನ್ನು ಸಿದ್ಧಪಡಿಸಿಕೊಂಡು ಅವರಿಗಾಗಿ ಕಾಯುತ್ತಿದ್ದೆವು. ಆದರೆ ಆಟೋ ಚಾಲಕ ಶಾಸಕ ಅನಾರೋಗ್ಯದ ತೀವ್ರತೆಯ ಬಗ್ಗೆ ನನಗೆ ನಿಖರವಾದ ಯಾವುದೇ ಮಾಹಿತಿ ನೀಡಿರಲಿಲ್ಲ. ಇದಾದ ನಂತರ ಸೆಪ್ಟೆಂಬರ್ 19 ರಂದು ಸ್ಥಳೀಯ ಪತ್ರಿಕೆಗಳಲ್ಲಿ ಶಾಸಕರ ಆರೋಗ್ಯ ವಿಚಾರಿಸದ ವೈದ್ಯೆ ಎಂದು ಪ್ರಕಟಿಸಿದ್ದಾಗ, ನನಗೆ ಶಾಸಕರ ಆರೋಗ್ಯದ ತೀವ್ರತೆಯ ಬಗ್ಗೆ ಅರಿವಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್ ಶಾಸಕನೊಂದಿಗೆ ಕಿರಿಕ್- ಡಾ.ವೀಣಾಸಿಂಗ್ ಪಿರಿಯಾಪಟ್ಟಣದಿಂದ ಎತ್ತಂಗಡಿ?

    ಇದಾದ ಕೂಡಲೇ ಅದೇ ದಿನ ಸಂಜೆ ನಮ್ಮ ಹಿರಿಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳೊಂದಿಗೆ ಶಾಸಕರ ಮನೆಗೆ ಹೋಗಿ ನಡೆದ ಅಚಾತುರ್ಯದ ಬಗ್ಗೆ ವಿವರಿಸಿದೆವು. ಅಲ್ಲದೇ ಆಸ್ಪತ್ರೆಯಲ್ಲಿನ ರೋಗಿಗಳ ಬಗ್ಗೆಯೂ ಮಾಹಿತಿ ನೀಡಿದೆವು. ಆದರೆ ಶಾಸಕರು ನಮ್ಮ ಮಾತನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ, ಅಲ್ಲದೇ ಅವರು ಈ ಬಗ್ಗೆ ನನ್ನ ವಿರುದ್ಧ ದೂರನ್ನು ನೀಡಿದ್ದಾರೆ. ಪುನಃ ನಾನು ಅವರನ್ನು ಭೇಟಿ ಮಾಡಿದಾಗ ಅವರು ದಾಖಲಿಸಿರುವ ದೂರನ್ನು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ಹೇಳಿದರೇ ಹೊರತು, ಕ್ಷಮಾಪಣಾ ಪತ್ರ ನೀಡುವಂತೆ ಹೇಳಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=LsbzC-2HiOA

     

  • ರೋಹಿಣಿ ಸಿಂಧೂರಿ ವಿಚಾರವನ್ನು ಕೇಳಿದ್ದಕ್ಕೆ ಹಾದಿಬೀದಿಯಲ್ಲಿ ಚರ್ಚೆ ಮಾಡೋಕ್ಕಾಗಲ್ಲ ಎಂದ ಸಿಎಂ

    ರೋಹಿಣಿ ಸಿಂಧೂರಿ ವಿಚಾರವನ್ನು ಕೇಳಿದ್ದಕ್ಕೆ ಹಾದಿಬೀದಿಯಲ್ಲಿ ಚರ್ಚೆ ಮಾಡೋಕ್ಕಾಗಲ್ಲ ಎಂದ ಸಿಎಂ

    ಮೈಸೂರು: ಆಡಳಿತಾತ್ಮಕ ವಿಚಾರವನ್ನ ಬೀದಿಯಲ್ಲಿ ನಿಂತು ಮಾತನಾಡೋಲ್ಲ ಎಂದು ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

    ನಗರದ ಪಿರಿಯಾಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರವು ಮಾಡಿಸುತ್ತೇವೆ. ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರಿಂದ ನಮಗೆ ಮುಜುಗರ ಆಗಿಲ್ಲ. ಇದರಲ್ಲಿ ಮುಜುಗರ ಆಗುವ ಪ್ರಶ್ನೆಯೂ ಇಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ

    ಬಿಜೆಪಿ, ಜೆಡಿಎಸ್ ಮೋದಿ ಎಲ್ಲರಿಗೂ ನಾನೇ ಟಾರ್ಗೆಟ್ ಆಗಿದ್ದೇನೆ. ಚುನಾವಣೆ ವೇಳೆ ದೇವೇಗೌಡರು ಬಂದು ಅಳ್ತಾರೆ ಅವರ ಮಾತು ಕೇಳಬೇಡಿ. ಕುಮಾರಸ್ವಾಮಿ ಬಂದು ಏನೇನೋ ಹೇಳ್ತಾರೆ ಅವರ ಮಾತು ನಂಬಬೇಡಿ. ಯಡಿಯೂರಪ್ಪ, ಶೋಭ ಕರಂದ್ಲಾಜೆ, ಅಮಿತ್ ಶಾ ಇವರೆಲ್ಲರಿಗೂ ನಾನೆ ಟಾರ್ಗೆಟ್ ಆಗಿದ್ದೀನಿ. ಹೀಗಾಗಿ ನೀವು ನನ್ನ ಕೈ ಹಿಡಿಯಬೇಕು. ಚುನಾವಣೆಯಲ್ಲಿ ನನ್ನ ಜೊತೆ ಇರಬೇಕು ಎಂದು ತಿಳಿಸಿದ್ದಾರೆ.

    ಮೋದಿಯಂತಹ ಸುಳ್ಳಗಾರ ಇನ್ನೊಬ್ಬರಿಲ್ಲ. 60 ವರ್ಷದಲ್ಲಿ ಇಂತಹ ಸುಳ್ಳು ಹೇಳುವ ಪ್ರಧಾನಿ ದೇಶಕ್ಕೆ ಸಿಕ್ಕಿರಲಿಲ್ಲ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಲೆವೆಲ್‍ಗೆ ಮೋದಿ ಇಳಿದಿದ್ದಾರೆ. ಮೋದಿ ಡೀಲ್ ಮಾಡಿಕೊಂಡಿದ್ದಾರೆ. ಹೀಗಾಗಿ ನೀರವ್ ಮೋದಿ, ಮಲ್ಯ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಮೋದಿ ಕುಮ್ಮಕ್ಕಿನಿಂದ ಇವರು ದೇಶ ಬಿಟ್ಟಿದ್ದಾರೆ ಎಂದಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

    ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಸಂಬಂಧ ಮಾತನಾಡಿದ ಅವರು, ಸಂಪುಟದಲ್ಲಿ ವಿಚಾರ ಚರ್ಚೆಗೆ ಬಂತು. ಸಮಯದ ಅಭಾವದಿಂದ ಚರ್ಚೆ ಮುಗಿದಿಲ್ಲ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಸಂಪುಟದಲ್ಲಿ ಇಲ್ಲ. ಎಲ್ಲರು ಚರ್ಚೆಗೆ ಮಾಡಿದ್ರು. ಆದರೆ ಇನ್ನಷ್ಟು ಚರ್ಚೆಗೆ ಸಮಯ ಇರಲಿಲ್ಲ. ಹಾಗಾಗಿ ಲಿಂಗಾಯತ ಧರ್ಮದ ವಿಚಾರವನ್ನ ಮುಂದೂಡಿದ್ದೇವೆ ಅಂದ್ರು.

    ನಾಡಧ್ವಜವೇ ಬೇರೆ, ಕನ್ನಡ ಬಾವುಟವೇ ಬೇರೆ. ಕನ್ನಡ ಧ್ವಜ ಬಳಸುವಂತೆ ನಾಡಧ್ವಜ ಬಳಸುವಂತಿಲ್ಲ. ನಾಡ ಧ್ವಜಕ್ಕೆ ರಾಷ್ಟ್ರಧ್ವಜದಂತೆ ನೀತಿ ನಿಯಮ ಇರಲಿವೆ. ಹೋರಾಟಗಾರರು ಎಂದಿನಂತೆ ಕನ್ನಡ ಧ್ವಜ ಬಳಸಬಹುದು. ಆದ್ರೆ ನಾಡಧ್ವಜ ಬಳಕೆಯನ್ನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ರಾಜ್ಯೋತ್ಸವದಲ್ಲಿ ಬಳಸಬೇಕು. ಈ ಬಗ್ಗೆ ಕೇಂದ್ರ ಒಪ್ಪಿಗೆ ಕೊಟ್ಟ ಮೇಲೆ ಎಲ್ಲಾ ನೀತಿ ನಿಯಮ ಜಾರಿಯಾಗಲಿದೆ. ನಾಡಧ್ವಜಕ್ಕೆ ವಾಟಾಳ್ ನಾಗರಾಜ್ ಬಿಟ್ಟು ಇನ್ಯಾರ ವಿರೋಧವು ಇಲ್ಲ. ಎಲ್ಲರು ನಾಡಧ್ವಜವನ್ನ ಒಪ್ಪಿದ್ದಾರೆ ಅಂತ ಸಿಎಂ ತಿಳಿಸಿದ್ರು.