ಮೈಸೂರು: ಬಾತ್‌ರೂಂನಲ್ಲಿ (Bathroom) ಗ್ಯಾಸ್ ಗೀಸರ್ (Gas Geyser) ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಅಕ್ಕ-ತಂಗಿ (Sisters) ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆ ಪಿರಿಯಾಪಟ್ಟಣ (Piriyapatna) ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.
ಗುಲ್ಫರ್ಮ್ ತಾಜ್ (23), ಸಿಮ್ರಾನ್ ತಾಜ್ (20) ಮೃತ ದುರ್ದೈವಿಗಳು. ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ (Carbon Monoxide) ಸೋರಿಕೆಯಾಗಿ ಘಟನೆ ಸಂಭವಿಸಿದೆ. ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಬಾತ್‌ರೂಂಗೆ ಹೋದಾಗ ಘಟನೆ ನಡೆದಿದೆ. ಬಹಳ ಹೊತ್ತು ಕಳೆದರು ಬಾತ್‌ರೂಂನಿಂದ ಅಕ್ಕ, ತಂಗಿ ಹೊರಬಾರದ ಹಿನ್ನೆಲೆ ತಂದೆ ಅಲ್ತಾಫ್ ಅನುಮಾನಗೊಂಡು ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆದಿಲ್ಲ. ಈ ವೇಳೆ ಬಾಗಿಲು ಒಡೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರೋದು ಗೊತ್ತಾಗಿದೆ. ಇದನ್ನೂ ಓದಿ: ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ರಸ್ತೆಗೆ ಬಿದ್ದ ಟೆಕ್ಕಿ – ಲಾರಿ ಹರಿದು ದುರ್ಮರಣ
ತಕ್ಷಣವೇ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟುಹೊತ್ತಿಗಾಗಲೇ ಇಬ್ಬರೂ ಮೃತಪಟ್ಟಿದ್ದರು. ಕೋಣೆಯಲ್ಲಿ ಕಿಟಕಿ ಇರದ ಹಿನ್ನೆಲೆ ಉಸಿರುಗಟ್ಟಿದೆ ಎನ್ನಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

















