Tag: Pipeline

  • ಗದಗ| ನೀರಿನ ಪೈಪ್‌ಲೈನ್ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

    ಗದಗ| ನೀರಿನ ಪೈಪ್‌ಲೈನ್ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

    ಗದಗ: ಜಿಲ್ಲೆಯಲ್ಲಿ ಅವಳಿ ನಗರದ 24 x 7 ಪೈಪ್‌ಲೈನ್ (Pipeline) ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕರನೋರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡ ಘಟನೆ ನಗರದ ಕೋರ್ಟ್ ಸರ್ಕಲ್ ಬಳಿ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡಿದ್ದ ಕಾರ್ಮಿಕ ನಜೀರ್ ಸಾಬ್ (44) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮತ್ತೋರ್ವ ಕಾರ್ಮಿಕ ಮಂಜುನಾಥ್ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ದೆಹಲಿಯ CRPF ಶಾಲೆ ಬಳಿ ಭಾರೀ ಸ್ಫೋಟ

    ನಗರದ ಕೋರ್ಟ್ ಸರ್ಕಲ್ ಬಳಿ ಗ್ಯಾಸ್ ಪೈಪ್‌ಲೈನ್ ದುರಸ್ತಿ ವೇಳೆ, ಗದಗ-ಬೆಟಗೇರಿ ಅವಳಿ ನಗರದ 24 x 7 ಪೈಪ್‌ಲೈನ್ ಹಾನಿ ಆಗಿತ್ತು. ಶನಿವಾರ ರಾತ್ರಿ ಆ ನೀರಿನ ಪೈಪ್ ದುರಸ್ತಿ ಮಾಡಲು ಈ ಇಬ್ಬರು ಕಾರ್ಮಿಕರು ಮುಂದಾಗಿದ್ದರು. ಏಕಾಏಕಿ ಭೂಮಿ ಕುಸಿತದಿಂದಾಗಿ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಸ್ಥಳೀಯರ ಕಾರ್ಯಾಚರಣೆ ಮೂಲಕ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ನಜೀರಸಾಬ್ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಮಂಗಳೂರು| ಮನೆಯೊಳಗೆ ಏಕಾಏಕಿ ನುಗ್ಗಿದ ಚಿರತೆ

    ಈ ಘಟನೆಗೆ ನಗರಸಭೆ ಅಧಿಕಾರಿಗಳು, ನಗರಸಭೆ ಇಂಜಿನಿಯರ್ ಬಂಡಿವಡ್ಡರ್ ಹಾಗೂ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಂಪನಿ ಕಾರಣ ಎಂಬುದು ಮೃತನ ಕುಟುಂಬಸ್ಥರ ಆರೋಪವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆದಷ್ಟು ಬೇಗ ಡಿಕೆಶಿ ಸಿಎಂ ಆಗಲಿದ್ದಾರೆ- ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಸ್ಫೋಟಕ ಹೇಳಿಕೆ

  • ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ

    ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ

    ನವದೆಹಲಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಯೂನಿಟ್‍ಗೆ 2.63 ರೂ. ರಷ್ಟು ಹೆಚ್ಚಿಸಲಾಗಿದೆ.

    ರಾಷ್ಟ್ರ ರಾಜಧಾನಿ ಮತ್ತು ಅಕ್ಕಪಕ್ಕದ ನಗರಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಬಿಡಲಾಗುತ್ತೆ. ಈ ಹಿನ್ನೆಲೆ ಪೈಪ್‍ಲೈನ್ ಅಡುಗೆ ಅನಿಲಗಳ ಬೆಲೆಯನ್ನು ಆಗಾಗ ಹೆಚ್ಚಿಸಲಾಗುವುದು.  ಜುಲೈ 26 ರಂದು ಪೈಪ್‍ಲೈನ್ ಅಡುಗೆ ಅನಿಲ ಪರಿಷ್ಕರಿಸಿ ಪ್ರತಿ ಸ್ಟಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 2.1 ರೂ. ಹೆಚ್ಚಿಸಲಾಗಿತ್ತು. ಆದರೆ ಬೆಲೆ ಹೆಚ್ಚಿಸಿ 2 ವಾರವೂ ಇನ್ನೂ ಕಳೆದಿಲ್ಲ. ಈಗಾಗಲೇ ಮತ್ತೆ 2.63 ರೂ. ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ: ಕಾರಜೋಳ 

    ಈ ಕುರಿತು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್(IGL) ಟ್ವೀಟ್ ಮಾಡಿದ್ದು, ಈ ಹಿಂದೆ ಪೈಪ್‍ಲೈನ್ ಅಡುಗೆ ಅನಿಲ ರೂ. 47.96 ರಷ್ಟಿತ್ತು. ಆದರೆ ದೆಹಲಿಯಲ್ಲಿ ಪೈಪ್ ಮೂಲಕ ಅಡುಗೆ ಅನಿಲದ ಬೆಲೆ ಈಗ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ ರೂ 50.59 ಆಗಲಿದೆ. ಈ ಹೆಚ್ಚಳವು ‘ಇನ್‍ಪುಟ್ ಗ್ಯಾಸ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

    ದೆಹಲಿಗೆ ಹೊಂದಿಕೊಂಡಿರುವ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‍ನಲ್ಲಿ ಪಿಎನ್‍ಜಿಗೆ ಪ್ರತಿ ಎಸ್‍ಸಿಎಂಗೆ 50.46 ರೂ. ವೆಚ್ಚವಾಗಲಿದೆ. ಆದರೆ ಗುರುಗ್ರಾಮದಲ್ಲಿ ಪ್ರತಿ ಎಸ್‍ಸಿಎಂಗೆ 48.79 ರೂ. ಹರಿಯಾಣದ ಕರ್ನಾಲ್ ಮತ್ತು ರೇವಾರಿಯಲ್ಲಿ ಪ್ರತಿ ಎಸ್‍ಸಿಎಂಗೆ 49.40 ರೂ ಮತ್ತು ಮುಜಫರ್‍ನಗರ, ಮೀರತ್ ಮತ್ತು ಶಾಮ್ಲಿಯಲ್ಲಿ ಪಿಎನ್‍ಜಿ ಪ್ರತಿ ಎಸ್‍ಸಿಎಂಗೆ 53.97 ರೂ. ಉತ್ತರ ಪ್ರದೇಶದ ಕಾನ್ಪುರ ಮತ್ತು ಫತೇಪುರ್‌ನಲ್ಲಿ ಗ್ಯಾಸ್‍ಗೆ 53.10 ರೂ. ಹೆಚ್ಚಿಸಲಾಗಿದೆ. ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರಗಳು ಭಿನ್ನವಾಗಿರುತ್ತವೆ. ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ – ಮಾರ್ಗರೇಟ್ ಆಳ್ವಾಗೆ TRS ಬೆಂಬಲ

    ಈ ಹಿಂದೆ ಆಗಸ್ಟ್ 3 ರಂದು ಮುಂಬೈನಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್‍ಜಿ) ಬೆಲೆಯನ್ನು ಪ್ರತಿ ಯೂನಿಟ್‍ಗೆ 4 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ನಗರದ ಅನಿಲ ಕಂಪನಿಗಳಿಗೆ ಪೂರೈಕೆಯಾಗುವ ನೈಸರ್ಗಿಕ ಅನಿಲದ ಬೆಲೆಯಲ್ಲಿ ಶೇ.18ರಷ್ಟು ಏರಿಕೆ ಮಾಡುವುದಾಗಿ ಉಂIಐ ಪ್ರಕಟಿಸಿದೆ. ಈ ಘೋಷಣೆಯೊಂದಿಗೆ, ದೇಶದ ಇತರ ನಗರಗಳಲ್ಲಿ ಸಿಎನ್‍ಜಿ ಮತ್ತು ಪಿಎನ್‍ಜಿ ಬೆಲೆಗಳು ಹೆಚ್ಚಾಗಲು ಪ್ರಾರಂಭಿಸಿವೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರಂಜಿಯಂತೆ ಚಿಮ್ಮುತ್ತಿರೋ ನೀರು

    ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರಂಜಿಯಂತೆ ಚಿಮ್ಮುತ್ತಿರೋ ನೀರು

    ದಾವಣಗೆರೆ: ಹರಿಹರ-ದಾವಣಗೆರೆ ಮಾರ್ಗ ಮಧ್ಯೆ 22 ಕೆರೆ ಏತ ನೀರಾವರಿ ಯೋಜನೆ ಪೈಪ್‍ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗುತ್ತಿದೆ.

    ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಪೈಪ್‍ಲೈನ್ ಒಡೆದಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈಗಲೇ ಪೈಪ್‍ಲೈನ್ ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿದೆ.

    ಏತ ನೀರಾವರಿ ಯೋಜನೆ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ಇದೇ ಜೂನ್ 22 ರಂದು ಈ ಯೋಜನೆ ಆರಂಭವಾಗಿತ್ತು. ಆದರೆ ನಾಲ್ಕು ದಿನಗಳಲ್ಲಿ ಪೈಪ್ ಲೈನ್ ಹಾಳಾಗಿದೆ. ಈ ಮೂಲಕ ಹತ್ತು ವರ್ಷದ ಯೋಜನೆಗೆ ವಿಘ್ನಗಳು ತಪ್ಪದಂತಾಗಿದೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಜಗಳೂರು ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಆ ರಸ್ತೆಯಲ್ಲಿ ಹೋಗುತ್ತಿರುವ ಸವಾರರು ನೀರು ಚಿಮ್ಮುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ರಸ್ತೆಯ ಪಕ್ಕದಲ್ಲಿಯೇ ನೀರು ಕಾರಂಜಿಯಂತೆ ಚಿಮ್ಮುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

  • ಜಮೀನಿನಲ್ಲಿ ಪೈಪ್‍ಲೈನ್ ಗುಂಡಿ ತೆಗೆಸಲು ಹೋಗಿದ್ದ ಯುವಕ ಸಾವು

    ಜಮೀನಿನಲ್ಲಿ ಪೈಪ್‍ಲೈನ್ ಗುಂಡಿ ತೆಗೆಸಲು ಹೋಗಿದ್ದ ಯುವಕ ಸಾವು

    ಮಂಡ್ಯ: ಜಮೀನಿನಲ್ಲಿ ಪೈಪ್ ಲೈನ್ ಗುಂಡಿ ತೆಗೆಸುವ ವೇಳೆ ಮಣ್ಣು ಕುಸಿದು ಯುವಕ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಲ್ಲೇನಹಳ್ಳಿ ಗ್ರಾಮ ಹನುಮಂತು ಅವರ ಮಗ ಪವನ್(24) ಮೃತ ದುರ್ದೈವಿ. ಪವನ್ ತಮ್ಮ ಜಮೀನಿನಲ್ಲಿ ಪೈಪ್ ಲೈನ್ ಗುಂಡಿ ತೆಗೆಸಲು ಹೋಗಿದ್ದನು. ಈ ವೇಳೆ ಪೈಪ್ ಲೈನ್ ತೆಗೆಯುತ್ತಿದ್ದ ಗುಂಡಿ ಪಕ್ಕ ಮಣ್ಣು ಕುಸಿದಿದೆ. ಆಗ ಗುಂಡಿ ಹತ್ತಿರ ನಿಂತಿದ್ದ ಪವನ್ ಗುಂಡಿ ಒಳಗೆ ಜಾರಿ ಬಿದ್ದಿದ್ದು, ಆತನ ಮೇಲೆ ಮತ್ತೆ ಮಣ್ಣು ಕುಸಿದಿದೆ.

    ಈ ವೇಳೆ ಸ್ಥಳದಲ್ಲಿ ಇದ್ದವರು ಮಣ್ಣನ್ನು ಮೇಲೆ ಎತ್ತಿ ಪವನ್‍ನನ್ನು ಹೊರಗೆ ತೆಗೆದು ತಕ್ಷಣ ಆತನನ್ನು ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಪರಿಶೀಲನೆ ಮಾಡಿದಾಗ ಪವನ್ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೀರಿನ ಪೈಪ್ ಲೈನ್ ಒಡೆದು ಗಾಳಿಯಲ್ಲಿ ಹಾರಿದ 1.5 ಟನ್ ತೂಕದ ಬೋಲೆರೋ- ವಿಡಿಯೋ ವೈರಲ್

    ನೀರಿನ ಪೈಪ್ ಲೈನ್ ಒಡೆದು ಗಾಳಿಯಲ್ಲಿ ಹಾರಿದ 1.5 ಟನ್ ತೂಕದ ಬೋಲೆರೋ- ವಿಡಿಯೋ ವೈರಲ್

    ಮುಂಬೈ: ಸಾಮಾನ್ಯವಾಗಿ ಭಾರೀ ಮಳೆಯಾದ ಸಂದರ್ಭದಲ್ಲಿ ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆಗಳನ್ನು ನಾವು ನೋಡಿದ್ದೆವೆ. ಆದರೆ ಮುಂಬೈನ ಬೋರಿವಲಿ ಎಂಬ ಪ್ರದೇಶದಲ್ಲಿ ನೀರಿನ ಪೈಪ್ ಒಡೆದ ರಭಸಕ್ಕೆ ಬೋಲೆರೋ ವಾಹನವೊಂದು ಗಾಳಿಯಲ್ಲಿ ಹಾರಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಮುಂಬೈನ ಬೋರಿವಲಿ ಮತ್ತು ಕಂಡಿವಾಲಿ ನಡುವೆ ನೀರು ಪೂರೈಸುವ ಪೈಪ್ ಲೈನ್ ಒಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪೈಪ್ ಒಡೆದು ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಕಾರಣ ಹಲವು ವಾಹನಗಳು ನೀರಿನಲ್ಲಿ ಸಿಲುಕ್ಕಿದ್ದವು. ಈ ವೇಳೆ ಸುಮಾರು 1.5 ಟನ್ ತೂಕದ ಮಹಿಂದ್ರಾ ಬೋಲೆರೊ ವಾಹನವು ನೀರಿನ ರಭಸಕ್ಕೆ ಮೇಲೆ ಹಾರಿ ಜಖಂಗೊಂಡಿದೆ. ಘಟನೆ ವೇಳೆ ವಾಹನದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಘಟನೆ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬೈ ನೀರು ಪೂರೈಕೆ ಮಂಡಳಿ ಯಾವ ರೀತಿ ಕಾರ್ಯನಿವಹಿಸುತ್ತಿದೆ ಎಂಬುವುದಕ್ಕೆ ಸ್ಪಷ್ಟ ಉದಾಹಣೆ ಎಂದು ಕಿಡಿಕಾರಿದ್ದಾರೆ. ನೀರಿನ ಸಂಪರ್ಕ ವ್ಯವಸ್ಥೆ ಸರಿಯಾದ ರೀತಿ ನಿರ್ವಹಣೆ ಮಾಡದೆ ಇರುವುದರಿಂದ ಭಾರೀ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದ್ದಾರೆ.