ಬೆಂಗಳೂರು: ಕಾವೇರಿ ನಿವಾಸದಲ್ಲಿ ಜನರ ಸಮಸ್ಯೆ ಆಲಿಸಿ ಅರ್ಜಿ ಸ್ವೀಕರಿಸುವ ವೇಳೆ ಸಿಎಂ ಸಿದ್ದರಾಮಯ್ಯ (Siddaramaiah) ಕೈಗೆ ಗುಂಡು ಪಿನ್ (Pin) ಚುಚ್ಚಿ ಗಾಯವಾಗಿದ್ದು, ಗಾಯವಾಗಿದ್ದ ಜಾಗಕ್ಕೆ ಕರ್ಚಿಫ್ ಸುತ್ತಿಕೊಂಡು ಸಿದ್ದರಾಮಯ್ಯ ಸಭೆಗೆ ತೆರಳಿದ್ದಾರೆ.
ತಕ್ಷಣವೇ ಆಗಮಿಸಿದ ವೈದ್ಯರು ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಸಿಎಂಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಆಯುಕ್ತರ ನೇಮಕ ಸಂಬಂಧ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯುತ್ತಿದೆ. ಇದನ್ನೂ ಓದಿ: ಒನ್ ವೇ ನಲ್ಲಿ ಬಂದು ಕಿರಿಕ್ – ಸವಾರನಿಗೆ ಏಟು ನೀಡಿ ಪಾಠ ಕಲಿಸಿದ ಯೋಧ
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಮುಚ್ಚುಳ ಕ್ಯಾಂಪ್‌ನ ಬಾಲಕ ಶಿವಕುಮಾರ್ (13) ಶಾಲೆಯಲ್ಲಿ ಆಟವಾಡುವಾಗ ಸೂಚನಾ ಫಲಕದ ಗುಂಡುಸೂಜಿಯನ್ನು (Pin) ಆಕಸ್ಮಿಕವಾಗಿ ನುಂಗಿದ್ದ. ಗುಂಡುಸೂಜಿ ಬಲ ಶ್ವಾಸಕೋಶದೊಳಗಡೆ ಸೇರಿತ್ತು. ಇದೀಗ ಬ್ರಾಂಕೋಸ್ಕೋಪ್ ಮೂಲಕ ಗುಂಡುಸೂಜಿಯನ್ನು ಹೊರತೆಗೆಯುವಲ್ಲಿ ರಿಮ್ಸ್ (RIMS) ವೈದ್ಯರು (Doctor) ಯಶಸ್ವಿಯಾಗಿದ್ದಾರೆ.
ಚಿಕಿತ್ಸೆಗಾಗಿ ಬಾಲಕನನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ಬಾಲಕನ ಶ್ವಾಸಕೋಶಕ್ಕೆ ಕ್ಷ-ಕಿರಣವನ್ನು ಮಾಡಿಸಿದಾಗ ಬಲ ಶ್ವಾಸಕೋಶದಲ್ಲಿ ಸೂಚನಾ ಫಲಕದ ಗುಂಡುಸೂಜಿ ಇರುವುದು ಖಚಿತಪಡಿಸಿಕೊಂಡು ಬ್ರಾಂಕೋಸ್ಕೋಪ್ ಮೂಲಕ ಗುಂಡು ಸೂಜಿಯನ್ನು ಹೊರತೆಗೆಯಲಾಗಿದ್ದು, ಅಪರೂಪದ ಪ್ರಕರಣದಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದ್ದಕ್ಕೆ ವೈದ್ಯರಿಗೆ ಬಾಲಕನ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭೋಪಾಲ್ ಅನಿಲ ದುರಂತಕ್ಕೆ 39 ವರ್ಷ – ಇನ್ನೂ ಮಾಸಿಲ್ಲ 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಕಹಿ ನೆನಪು
ಶಸ್ತ್ರಚಿಕಿತ್ಸೆ ತಂಡದಲ್ಲಿ ಇಎನ್‌ಟಿ ನುರಿತ ತಜ್ಞ ವೈದ್ಯ ಡಾ. ಅರವಿಂದ್ ಸಂಗವಿ, ನುರಿತ ಅರವಳಿಕೆ ತಜ್ಞ ವೈದ್ಯ ಡಾ.ಕಿರಣ್ ನಾಯಕ್, ಡಾ.ಮಲ್ಲಿಕಾರ್ಜುನ್ ಕೆ ಪಾಟೀಲ್, ಡಾ. ಸಿಂಧು ಪಿಜಿ, ಡಾ. ಇಂದುಮಣಿ, ನರ್ಸಿಂಗ್ ಅಧಿಕಾರಿ ಅಮರೇಶ್ ಸಕ್ರಿ, ಓಟಿ ತಂತ್ರಜ್ಞರಾದ ಲಿಂಗರಾಜ್, ಸುಮನ್ ಕ್ಲ್ಯಾರಿ, ನಾರಾಯಣ, ಶಂಕರ ಸೇರಿದಂತೆ ಇನ್ನಿತರರು ಇದ್ದರು. ಇದನ್ನೂ ಓದಿ: ಮಾತಾ ಅಲ್ಲದೇ ಚಾಮುಂಡೇಶ್ವರಿ ಆಸ್ಪತ್ರೆಯಲ್ಲೂ ನಡೀತಿತ್ತು ಭ್ರೂಣ ದಂಧೆ- ಹೆಡ್‌ನರ್ಸ್ ಉಷಾರಾಣಿ ಬಂಧನ
ಕಲಬುರಗಿ: ಊಟ ಮಾಡುವಾಗ ಪಿನ್ ನುಂಗಿದ್ದ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸ್ವಪ್ನಾ (8) ಮೃತ ಬಾಲಕಿ. ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಮೃತ ಸ್ವಪ್ನಾ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಯ್ಯಾಳ್ ಗ್ರಾಮದ ನಿವಾಸಿಯಾಗಿದ್ದು, ಇದೇ ತಿಂಗಳು 22 ರಂದು ಮನೆಯಲ್ಲಿ ಊಟ ಮಾಡುವಾಗ ತಿಳಿಯದೆ ಊಟದಲ್ಲಿ ಬಂದಿದ್ದ ಪಿನ್ ನುಂಗಿದ್ದಳು.
ಈ ಬಗ್ಗೆ ಬಾಲಕಿ ಕೂಡಲೇ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಅವರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಅಲ್ಲಿ ಬಾಲಕಿಗೆ ಆಪರೇಷನ್ ಮಾಡಿ ಪಿನ್ ತೆಗೆದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ಆಕೆ ಮೃತಪಟ್ಟಿದ್ದಾಳೆ.
ಈ ಕುರಿತು ಕುರಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಪುರ್: ಊಟ ಮಾಡ್ಬೇಕಾದ್ರೆ ಅನ್ನ ಗಂಟಲಲ್ಲಿ ಸಿಕ್ಕಿಕೊಂಡ್ರೆ ಜೀವ ಹೋದಂಗೆ ಆಗುತ್ತೆ. ಅಂಥದ್ರಲ್ಲಿ ಗಂಟಲಲ್ಲಿ ಗುಂಡುಸೂಜಿ ಸಿಕ್ಕಾಕ್ಕೊಂಡ್ರೆ ಏನಾಗ್ಬೇಡ. ಆದ್ರೆ ಬರೋಬ್ಬರಿ 40 ಗುಂಡುಸೂಜಿಗಳು ರಾಜಸ್ಥಾನದ ವ್ಯಕ್ತಿಯೊಬ್ಬರ ಗಂಟಲಲ್ಲೇ ಇತ್ತು ಅಂದ್ರೆ ನೀವು ನಂಬಲೇಬೇಕು.
ಹೌದು. ರಾಜಸ್ಥಾನ ಮೂಲದ ರೈಲ್ವೆ ನೌಕರರಾದ 56 ವರ್ಷದ ಬದ್ರಿಲಾಲ್ ಮೀನಾ ಎಂಬ ವ್ಯಕ್ತಿ ಫೆಬ್ರವರಿ ತಿಂಗಳಲ್ಲಿ ಕಾಲುಬೆರಳಿನ ಸೋಂಕಿನಿಂದ ಆಸ್ಪತ್ರೆಗೆ ತೆರಳಿದ್ದರು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ನಂತರ ನನ್ನ ಕಾಯಿಲೆ ಗುಣವಾಯಿತು ಅಂದುಕೊಂಡಿದ್ರು. ಆದ್ರೆ ಏಪ್ರಿಲ್‍ನಲ್ಲಿ ವೈದ್ಯರು ಬದ್ರಿಲಾಲ್ ಅವರ ಎಕ್ಸ್ ರೇ ತೆಗೆದಾಗ ದೊಡ್ಡ ಶಾಕ್ ಕಾದಿತ್ತು. ಬದ್ರಿಲಾಲ್ ಅವರ ದೇಹಲ್ಲಿ ಒಟ್ಟು 75 ಪಿನ್(ಗುಂಡುಸೂಜಿ) ಗಳಿರುವುದು ಪತ್ತೆಯಾಗಿತ್ತು. ಆದ್ರೆ ಈ ಪಿನ್‍ಗಳು ಹೇಗೆ ಅವರ ದೇಹದೊಳಗೆ ಹೊಕ್ಕಿದೆ ಎಂಬುವುದು ಮಾತ್ರ ತಿಳಿದಿಲ್ಲ.
ಈ ಬಗ್ಗೆ ಆತಂಕಗೊಂಡ ಬದ್ರಿಲಾಲ್ ಕುಟುಂಬ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದರು. ರೈಲ್ವೆ ಸಿಬ್ಬಂದಿಯಾಗಿರೋದ್ರಿಂದ ಕೊನೆಗೆ ಬದ್ರಿಲಾಲ್ ಅವರಿಗೆ ಮುಂಬೈ ರೈಲ್ವೇ ಆಸ್ಪತ್ರೆಗೆ ಗೊತ್ತು ಮಾಡಿದ್ರು. ಅಂತೆಯೇ ಏಪ್ರಿಲ್ 24 ರಂದು ಮುಂಬೈನಲ್ಲಿರೋ ಜಗಜೀವನ್ ರಾಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮತ್ತೆ ಎಕ್ಸ್ ರೇ ತೆಗೆಸಿದ್ರು. ಈ ವೇಳೆ ಬದ್ರಿಲಾಲ್ ಅವರ ಗಂಟಲಲ್ಲಿ 40, ಬಲಗಾಲಿನಲ್ಲಿ 25, ಎರಡೂ ಕೈಗಳಲ್ಲಿ 2, ಹೀಗೆ ದೇಹದೊಳಗೆ ಒಟ್ಟು 75 ಗುಂಡು ಸೂಜಿಗಳಿರುವುದು ಬೆಳಕಿಗೆ ಬಂದಿತ್ತು.
ಬದ್ರಿಲಾಲ್ ಅವರು ಕಾಲಿನಲ್ಲಿ ನೋವಿರುವ ಬಗ್ಗೆ 4 ತಿಂಗಳಿನಿಂದ ಹೇಳುತ್ತಿದ್ದರು. ನಂತರ ರಾಜಸ್ಥಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾದ ದೇಹದಲ್ಲಿ ಗುಂಡುಸೂಜಿಗಳಿರುವ ಬಗ್ಗೆ ಗೊತ್ತಾಯಿತು. ಚಿತ್ರಗಳನ್ನ ನೋಡಿ ನಮಗೆ ಭಯವಾಯ್ತು. ಪಿನ್‍ಗಳು ಹೇಗೆ ಅವರ ದೇಹದೊಳಗೆ ಹೋದವು ಎಂಬುದು ಗೊತ್ತಿಲ್ಲ. ನಾವು ಅವರನ್ನ ಹಲವು ಬಾರಿ ಈ ಬಗ್ಗೆ ಕೇಳಿದೆವು. ಆದ್ರೆ ಅವರಿಗೆ ಅದರ ನೆನಪಿಲ್ಲ ಎಂದು ಬದ್ರಿಲಾಲ್ ಅವರ ಮಗ ರಾಜೇಂದ್ರ ಹೇಳಿದ್ದಾರೆ.
ವೈದ್ಯರು ಏನು ಹೇಳಿದ್ರು?: ಅಚ್ಚರಿಯೆಂಬಂತೆ ಬದ್ರಿಲಾಲ್ ಅವರ ದೇಹದೊಳಗಿರುವ ಗುಂಡುಸೂಜಿಗಳಿಂದ ಅವರಿಗೆ ಯಾವುದೇ ಅಪಾಯವಾಗಿಲ್ಲ. ಜಾಗೃತ ಮನಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಇಷ್ಟೊಂದು ಪಿನ್‍ಗಳನ್ನ ನುಂಗುವುದು ಸಾಧ್ಯವೇ ಇಲ್ಲ. ಪಿನ್ ಹೊರತೆಗೆಯಲು ಆಪರೇಷನ್ ಮಾಡಬೇಕು. ಆದ್ರೆ ಇವರಿಗೆ ಸಕ್ಕರೆ ಕಾಯಿಲೆ ಇರೋದ್ರಿಂದ ಮತ್ತೊಂದು ಆಪರೇಷನ್ ಮಾಡೋದು ಸ್ವಲ್ಪ ಕಷ್ಟವಾಗಬಹುದು. ಇವರ ದೇಹದ ಸ್ಥಿತಿ ಬಗ್ಗೆ ನಿರ್ದಿಷ್ಟವಾಗಿ ತಿಳಿಯಲು ಇಎನ್‍ಟಿ ಪರೀಕ್ಷೆಗಾಗಿ ನಾಯರ್ ಆಸ್ಪತ್ರೆಗೆ ಕಳಿಸಿದ್ದೇವೆ. ಮುಂದಿನ ಚಿಕಿತ್ಸೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಜಗಜೀವನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಅಲ್ಲದೇ ಕಳೆದ 5 ದಿನಗಳಿಂದ ಅಪ್ಪನ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದೇವೆ. ಆದ್ರೆ ಅವರ ಚಿಕಿತ್ಸೆಗೆ ವೈದ್ಯರು ಇನ್ನೂ ನಿರ್ದಿಷ್ಟವಾಗಿ ಯೋಜನೆ ಮಾಡಿಲ್ಲ. ಎರಡು ದಿನಗಳ ಹಿಂದೆ ನನ್ನ ತಂದೆ ಮಾತನಾಡುತ್ತಿದ್ರು. ಈಗ ಗಂಟಲು ನೋವಿನಿಂದ ಆಹಾರ ಸೇವನೆ, ನೀರು ಕುಡಿಯುವುದು ಕೂಡ ನಿಲ್ಲಿಸಿದ್ದಾರೆ. ಉಸಿರಾಟಕ್ಕೂ ಕಷ್ಟಪಡುತ್ತಿದ್ದಾರೆ ಅಂತಾ ರಾಜೇಂದ್ರ ಆರೋಪಿಸಿದ್ದಾರೆ.
ಮುಂಬೈ: 28 ವರ್ಷದ ಮಹಿಳೆಯೊಬ್ಬರು ಆಕಸ್ಮಿಕವಾಗಿ 5.2 ಸೆಂಟಿಮೀಟರ್ ಉದ್ದದ ಪಿನ್ ನುಂಗಿದ್ದು, ಇದೀಗ ವೈದ್ಯರು ಅದನ್ನು ಹೊರತೆಗೆಯುವ ಮೂಲಕ ಮಹಿಳೆಯನ್ನು ರಕ್ಷಿಸಿದ್ದಾರೆ.
ದುಪಟ್ಟ(ವೇಲ್) ಕಟ್ಟಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪಿನ್ ಅಥವಾ ಗುಂಡು ಸೂಜಿಯನ್ನು ಮಹಿಳೆ ಬಾಯಿಯಲ್ಲಿ ಇಟ್ಟುಕೊಂಡಿದ್ದರು. ಇದು ಬಾಯೊಳಗೆ ಹೋಗಿ ಸಣ್ಣ ಕರುಳಿನಲ್ಲಿ ಸಿಲುಕಿಕೊಂಡಿದೆ.
ಪಿನ್ ನುಂಗಿದ ತಕ್ಷಣ ಆಕೆಗೆ ಯಾವುದೇ ನೋವಿನ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದ್ರೆ 6 ಗಂಟೆಯ ಬಳಿಕ ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಕೊಂಡೊಯ್ಯಲಾಗಿದೆ.
ವೈದ್ಯರಾದ ಡಾ. ಚೋಕ್ಸಿ ಮಹಿಳೆ ನುಂಗಿದ್ದ ಪಿನ್ ಹೊರತೆಗೆಯಲು ಅಪ್ಪರ್ ಗ್ಯಾಸ್ಟ್ರೋ ಇಂಟಸ್ಟೈನಲ್ ಎಂಡೋಸ್ಕೋಪಿ(ಮೇಲಿನ ಜೀಣಾಂಗವ್ಯೂಹದ ಎಂಡೋಸ್ಕೋಪಿ) ಮಾಡಿದ್ದರು. ಒಂದು ವೇಳೆ ಪಿನ್ ನೈಸರ್ಗಿಕವಾಗಿ ಹೊರಬರಲಿ ಎಂದು ಕಾದಿದ್ದರೆ ಕರುಳಿನಲ್ಲಿ ರಂಧ್ರ ಉಂಟಾಗಿ ತೊಂದರೆಯಾಗುವ ಸಂಭವವಿತ್ತು.
ಎಂಡೋಸ್ಕೋಪಿ ಮಾಡಿದಾಗ ಮಹಿಳೆ ನುಂಗಿದ್ದ ಪಿನ್ ಮತ್ತಷ್ಟು ಆಳಕ್ಕೆ ಹೋಗಿರುವುದು ತಿಳಿಯಿತು. ಹೀಗಾಗಿ ಸಿಂಗಲ್ ಬಲೂನ್ ಎಂಟೆರೋಸ್ಕೋಪ್ ಎಂಬ ಆಧುನಿಕ ಹಾಗೂ ವಿಶೇಷ ಸಾಧನದ ಮೂಲಕ ವೈದ್ಯರು ಪಿನ್ ಹೊರತೆಗೆದಿದ್ದಾರೆ.
ಇದೀಗ ಮಹಿಳೆ ಆರೋಗ್ಯವಾಗಿದ್ದು, ಆಹಾರ ಸೇವಿಸುತ್ತಿದ್ದಾರೆ ಅಂತಾ ವೈದ್ಯರು ಹೇಳಿದ್ದಾರೆ.