Tag: Pilots

  • Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    – ಪ್ರಾಥಮಿಕ ತನಿಖಾ ವರದಿಯ ಕೆಲ ಅಂಶಗಳಿಗೆ ಸುಪ್ರೀಂ ಕೋರ್ಟ್ ಆಕ್ಷೇಪ
    – ಕೇಂದ್ರ ಮತ್ತು ಡಿಜಿಸಿಎ ಪ್ರತಿಕ್ರಿಯೆ ಕೇಳಿದ ಕೋರ್ಟ್

    ನವದೆಹಲಿ: ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ (Air India Plane Crash)ದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿದ ಪ್ರಾಥಮಿಕ ವರದಿಯ ಕೆಲವು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

    ದುರಂತದ ಬಗ್ಗೆ ಸ್ವತಂತ್ರ, ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ಜುಲೈ 12 ರಂದು ಬಿಡುಗಡೆಯಾದ AAIB ಪ್ರಾಥಮಿಕ ವರದಿಯು ಪೈಲಟ್‌ಗಳ (Pilots) ಕಡೆಯಿಂದ ಲೋಪಗಳನ್ನು ಸೂಚಿಸಿದೆ ಎಂಬುದನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಗಮನಿಸಿತು. ಈ ಅಂಶಗಳು ದುರದೃಷ್ಟಕರ, ಬೇಜವಾಬ್ದಾರಿ ಎಂದ ಪೀಠ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿತು.

    ಈ ವರದಿಯ ಉಲ್ಲೇಖಗಳನ್ನು ಪ್ರಶ್ನಿಸಿ ವಿಮಾನಯಾನ ಸುರಕ್ಷತೆ ಎನ್‌ಜಿಒ ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್, ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿತ್ತು. ಇಂಧನ-ಸ್ವಿಚ್ ದೋಷಗಳು ಮತ್ತು ವಿದ್ಯುತ್ ದೋಷಗಳಂತಹ ವ್ಯವಸ್ಥಿತ ವೈಪರೀತ್ಯಗಳನ್ನು ಕಡಿಮೆ ಮಾಡಿ, ಪೈಲಟ್ ದೋಷದ ನಿರೂಪಣೆ ಮಾಡಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಟೀಕಿಸಲಾಗಿತ್ತು. ಅಂತಾರಾಷ್ಟ್ರೀಯ ಪೈಲಟ್‌ ಒಕ್ಕೂಟ ಕೂಡ ಪ್ರಾಥಮಿಕ ತನಿಖಾ ವರದಿಯನ್ನು ಪ್ರಶ್ನಿಸಿತ್ತು.

    ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ದಿನಗಳು ಕಳೆದಿದೆ. ಆದರೆ ಇದುವರೆಗೂ ಕೇವಲ ಪ್ರಾಥಮಿಕ ವರದಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಲ್ಲದೇ ವರದಿಯಲ್ಲಿ ಯಾವುದೇ ಅಪಘಾತಕ್ಕೆ ನಿಖರ ಕಾರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಉಲ್ಲೇಖ ಇರದಿರುವುದರಿಂದ, ಬೋಯಿಂಗ್ ವಿಮಾನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಇಂದು ಅಪಾಯದಲ್ಲಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    ಅಪಘಾತದ ತನಿಖೆಗಾಗಿ ರಚಿಸಲಾದ ಐವರು ಸದಸ್ಯರ ತಂಡವು, ವಾಯುಯಾನ ನಿಯಂತ್ರಕ ಡಿಜಿಸಿಎಯ ಮೂವರು ಸದಸ್ಯರನ್ನು ಹೊಂದಿದ್ದು, ಗಂಭೀರ ಹಿತಾಸಕ್ತಿ ಸಂಘರ್ಷವನ್ನು ಸೃಷ್ಟಿಸುತ್ತದೆ. ಅಪಘಾತಕ್ಕೆ ಯಾವ ಸಂಸ್ಥೆಯನ್ನು ಪ್ರಶ್ನಿಸಲಾಗುತ್ತಿದೆಯೋ ಅದೇ ಸಂಸ್ಥೆಯ ಸದಸ್ಯರು ಹೇಗೆ ತನಿಖೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದರಲ್ಲದೇ ಅಪಘಾತದ ನಿಜವಾದ ಕಾರಣ ಸ್ಪಷ್ಟಪಡಿಸಲು ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ನಿಂದ ಡೇಟಾವನ್ನು ಪಡೆಯಲು ಭೂಷಣ್ ಕೋರಿದರು.

    ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, ಅರ್ಜಿದಾರರ ವಾದ ಪುರಸ್ಕರಿಸಿತಾದರೂ, ಪ್ರಾಥಮಿಕ ತನಿಖೆಯ ಎಲ್ಲಾ ವರದಿಗಳನ್ನು ಸಾರ್ವಜನಿಕಗೊಳಿಸಿವುರಿಂದ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿತು. ಆದ್ರೆ ಅಪಘಾತಕ್ಕೆ ಪೈಲಟ್‌ ದೋಷ ನಿರೂಪಣೆಯನ್ನು ದ್ವಿಸದಸ್ಯ ಪೀಠ ದುರದೃಷ್ಟಕರ ಎಂದು ಬಣ್ಣಿಸಿತು.

    ಅಲ್ಲದೇ ಕೆಲವು ಮಾಹಿತಿಯನ್ನು ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಗಮನಿಸಿದ ಪೀಠವು ಡಿಜಿಸಿಎ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿಗೊಳಿಸಲು ಸೂಚನೆ ನೀಡಿತು. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

  • ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    ನವದೆಹಲಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ (Arts) ಮತ್ತು ವಾಣಿಜ್ಯ (Commerce) ವಿಷಯವನ್ನು ಓದಿದವರೂ ವಾಣಿಜ್ಯ ಪೈಲಟ್‌ (Pilots) ಆಗಬಹುದು.

    ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ವಾಣಿಜ್ಯ ಪೈಲಟ್ ಪರವಾನಗಿ (CPL) ತರಬೇತಿಗಾಗಿ ವಿದ್ಯಾರ್ಥಿ 12ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕೆಂಬ ಷರತ್ತನ್ನು ತೆಗೆಯಲು ಮುಂದಾಗಿದೆ ಎಂದು ವರದಿಯಾಗಿದೆ.

    1990ರ ದಶಕದ ಮಧ್ಯದಿಂದ ಭಾರತದಲ್ಲಿ ಪೈಲಟ್‌ ಆಗಲು ವಿಜ್ಞಾನ ಮತ್ತು ಗಣಿತ ಓದಿರಬೇಕೆಂಬ ನಿಯಮ ತರಲಾಗಿತ್ತು. ಇದಕ್ಕೂ ಮೊದಲು 10ನೇ ತರಗತಿ ಉತ್ತೀರ್ಣ (ಮೆಟ್ರಿಕ್) ಮಾತ್ರ ಶೈಕ್ಷಣಿಕ ಅವಶ್ಯಕತೆಯಾಗಿತ್ತು. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ಈಗ ವೈದ್ಯಕೀಯ ಫಿಟ್‌ನೆಸ್ ಮಾನದಂಡದ ಜೊತೆ ಯಾವುದೇ ಮಾಧ್ಯಮದಲ್ಲಿ 12ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪೈಲಟ್‌ ತರಬೇತಿ ಪಡೆಯಲು ಅವಕಾಶ ನೀಡಲು ಡಿಜಿಸಿಎ ಮುಂದಾಗುತ್ತಿದೆ.

    ಒಮ್ಮೆ ಅಂತಿಮಗೊಳಿಸಿದ ನಂತರ ಈ ಶಿಫಾರಸನ್ನು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಸಚಿವಾಲಯ ಅನುಮೋದಿಸಿದಾಗ CPL ತರಬೇತಿಯು ಎಲ್ಲಾ ಸ್ಟ್ರೀಮ್‌ಗಳಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಮುಕ್ತವಾಗಿರುತ್ತದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜಿಪಿಎಸ್ ಆಧಾರಿತ ಟೋಲ್ ಬಗ್ಗೆ ನಿರ್ಧಾರ ಕೈಗೊಂಡಿಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

    ಅಲೈಯನ್ಸ್ ಏರ್‌ ಮತ್ತು ಇಂಡಿಗೋದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಪೈಲಟ್ ಕ್ಯಾಪ್ಟನ್‌ ಶಕ್ತಿ ಲುಂಬಾ ಪ್ರತಿಕ್ರಿಯಿಸಿ, ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಸಿಪಿಎಲ್ ತರಬೇತಿಗೆ ಅರ್ಹತಾ ಮಾನದಂಡವಾಗಿ 12ನೇ ತರಗತಿ ಮಟ್ಟದಲ್ಲಿ ಭೌತಶಾಸ್ತ್ರ ಮತ್ತು ಗಣಿತದ ಅವಶ್ಯಕತೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

    ಹಲವರು ಮಂದಿ ಈ ನಿಯಮವನ್ನು ಪ್ರಶ್ನಿಸಿದ್ದಾರೆ. ನೀವು ಶ್ರೀಮಂತರಾಗಿದ್ದರೆ ಮತ್ತು ನಿಮ್ಮದೇ ಸ್ವಂತ ವಿಮಾನವನ್ನು ಹಾರಿಸಲು ಬಯಸಿದರೆ ಈ ನಿಯಮಗಳು ಅನ್ವಯವಾಗುವುದಿಲ್ಲ. ಹೀಗಾಗಿ ಗಣಿತ ಮತ್ತು ಭೌತಶಾಸ್ತ್ರ ಕಡ್ಡಾಯ ಮಾಡಿದ್ದು ಯಾಕೆ ಎಂದು ಕೇಳಿದ್ದಾರೆ. ಇದನ್ನೂ ಓದಿ: ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

    ವಾಣಿಜ್ಯ ಪೈಲಟ್‌ ಪ್ರಮಾಣಪತ್ರ ಪಡೆಯಲು ಭಾರತದಿಂದ ಹಲವು ಮಂದಿ ವಿದೇಶಕ್ಕೆ ತರಬೇತಿ ಪಡೆಯಲು ಹೋಗುತ್ತಿರುವ ಬೆನ್ನಲ್ಲೇ DGCA ನಿಯಮ ಬದಲಾವಣೆಗೆ ಮುಂದಾಗಿದೆ.

  • ಪರ್ಫ್ಯೂಮ್‌ನಲ್ಲಿ ‘ಎಣ್ಣೆ’ ಘಾಟು; ಭಾರತೀಯ ವಿಮಾನಗಳ ಪೈಲಟ್‌, ಗಗನಸಖಿಯರಿಗೆ ಪರ್ಫ್ಯೂಮ್ ಬ್ಯಾನ್?

    ಪರ್ಫ್ಯೂಮ್‌ನಲ್ಲಿ ‘ಎಣ್ಣೆ’ ಘಾಟು; ಭಾರತೀಯ ವಿಮಾನಗಳ ಪೈಲಟ್‌, ಗಗನಸಖಿಯರಿಗೆ ಪರ್ಫ್ಯೂಮ್ ಬ್ಯಾನ್?

    ಫ್ಯಾಷನ್ ಯುಗದಲ್ಲಿ ಪರ್ಫ್ಯೂಮ್ (ಸುಗಂಧ ದ್ರವ್ಯ) ಜನ ಜೀವನದ ಭಾಗವಾಗಿ ಹೋಗಿದೆ. ದಿಲ್ಲಿಯಿಂದ ಹಳ್ಳಿವರೆಗೂ ಪರ್ಫ್ಯೂಮ್ (Perfume Ban) ಹಾಕಿಕೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ. ಪರ್ಫ್ಯೂಮ್ ಎಂದರೆ ಎಲ್ಲರಿಗೂ ಗೊತ್ತು. ಆದರೆ ಅದನ್ನು ತಯಾರಿಸಲು ಯಾವ್ಯಾವ ಪದಾರ್ಥಗಳನ್ನು ಉಪಯೋಗಿಸುತ್ತಾರೆ ಎಂಬುದು ಎಷ್ಟೋ ಮಂದಿಗೆ ತಿಳಿದಿರುವುದೇ ಇಲ್ಲ. ಪರ್ಫ್ಯೂಮ್ ತಯಾರಿಸಲು ಬಳಸುವ ಪದಾರ್ಥಗಳ ಬಗ್ಗೆ ಹೇಳಿದರೆ ಕೆಲವರಿಗೆ ಶಾಕ್ ಕೂಡ ಆಗಬಹುದು. ಶಾಕ್ ಆಗುವುದಕ್ಕೆ ಪೂರಕ ಎನ್ನುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪ್ರಸ್ತಾಪವೊಂದನ್ನು ಪ್ರಕಟಿಸಿದೆ.

    ಎಷ್ಟೋ ಜನಕ್ಕೆ ಆಲ್ಕೋಹಾಲ್ ಎಂದರೆ ಸಾಕು ದೂರ ಓಡುತ್ತಾರೆ. ಅಂತಹ ಆಲ್ಕೋಹಾಲ್‌ನ್ನು ಪರ್ಫ್ಯೂಮ್ ತಯಾರಿಸಲು ಬಳಸುತ್ತಾರೆ ಎಂದರೆ ಶಾಕ್ ಆಗಿಬಿಡುತ್ತಾರೆ. ಇದು ಅಚ್ಚರಿ ಎನಿಸಿದರೂ ನಿಜ. ಅಂತಹ ಆಲ್ಕೋಹಾಲ್ ಅಂಶವಿರುವ ಸುಗಂಧ ದ್ರವ್ಯವನ್ನು ಪೈಲಟ್‌ಗಳು, ವಿಮಾನಗಳ ಸಿಬ್ಬಂದಿ ಬಳಸುವಂತಿಲ್ಲ ಎಂದು ನಿಯಮ ರೂಪಿಸಲು ಡಿಜಿಸಿಎ ಮುಂದಾಗಿದೆ. ಈಗಾಗಲೇ ಪೈಲಟ್‌ಗಳು (Pilots), ವಿಮಾನಗಳಿಗೆ ಸಿಬ್ಬಂದಿ ಪರ್ಫ್ಯೂಮ್ ಬ್ಯಾನ್ ಮಾಡಲು ಪ್ರಸ್ತಾಪ ಇಟ್ಟಿದೆ. ಇದನ್ನೂ ಓದಿ: PublicTV Explainer: ಚಂದ್ರ, ಸೂರ್ಯಯಾನ ಆಯ್ತು.. ಈಗ ಶುಕ್ರನ ಮೇಲೆ ಇಸ್ರೋ ಕಣ್ಣು – ಶುಕ್ರಯಾನ ಯಾವಾಗ?

    ಪೈಲಟ್‌ಗಳು, ವಿಮಾನ ಸಿಬ್ಬಂದಿಗೆ ಪರ್ಫ್ಯೂಮ್ ಬ್ಯಾನ್?
    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪೈಲಟ್‌ಗಳಿಗೆ ಸುಗಂಧ ದ್ರವ್ಯಗಳ ಬಳಕೆಯನ್ನು ನಿಷೇಧಿಸುವ ಹೊಸ ಕಾನೂನನ್ನು ತರಲು ಯೋಜಿಸಿದೆ. ಕಾನೂನು ವಾಯುಯಾನ ನಿಯಂತ್ರಕರ ಕಟ್ಟುನಿಟ್ಟಾದ ಆಲ್ಕೋಹಾಲ್ ನಿಯಮಗಳಿಗೆ ಇದು ಸಂಬಂಧಿಸಿದ್ದಾಗಿದೆ. ಸುರಕ್ಷತಾ ನಿಯಮಗಳಿಗೆ ಸಂಬಂಧಿಸಿದಂತೆ ವಿಮಾನ ನಿಯಮ, 1937 ರ ನಿಬಂಧನೆಗಳ ಅಡಿಯಲ್ಲಿ ನೀಡಲಾದ ನಾಗರಿಕ ವಿಮಾನಯಾನ ಅಗತ್ಯತೆಗಳನ್ನು (ಸಿಎಆರ್) ತಿದ್ದುಪಡಿ ಮಾಡುವ ಕುರಿತು ಮಧ್ಯಸ್ಥಗಾರರು ಸಲಹೆ ನೀಡುವಂತೆ ವಾಯುಯಾನ ನಿಯಂತ್ರಕರು ಕರೆ ನೀಡಿದ್ದಾರೆ.

    ಬ್ಯಾನ್‌ಗೆ ಡಿಜಿಸಿಎ ಯೋಜಿಸಿದ್ದು ಯಾಕೆ?
    ಭಾರತದ ವಾಯುಯಾನ ನಿಯಂತ್ರಕ ಇತ್ತೀಚೆಗೆ ಮದ್ಯ ಸೇವನೆಯ ಬಗ್ಗೆ ತನ್ನ ನಿಯಮಗಳನ್ನು ನವೀಕರಿಸಲು ಪ್ರಸ್ತಾಪಿಸಿದೆ. ಡಿಜಿಸಿಎ ಈಗಾಗಲೇ ಮೌತ್‌ವಾಶ್‌ನಂತಹ ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ನಿಷೇಧಿಸಿದೆ. ಅದು ಉಸಿರಾಟದ ವಿಶ್ಲೇಷಣೆಯ ಪರೀಕ್ಷೆ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನಿಷೇಧ ವಿಧಿಸಲಾಗಿದೆ ಎಂದು ವರದಿಗಳಾಗಿವೆ.

    ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇತ್ತೀಚೆಗೆ ತನ್ನ ವೈದ್ಯಕೀಯ ಪರೀಕ್ಷೆಯ ವಿಧಾನದಲ್ಲಿ ಬದಲಾವಣೆ ಪ್ರಸ್ತಾಪಿಸಿದೆ. ಇದು ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಆಲ್ಕೋಹಾಲ್ ಸೇವನೆಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಸಿಬ್ಬಂದಿ ಅಥವಾ ಪೈಲಟ್‌ಗಳು ಆಲ್ಕೋಹಾಲ್ ಹೊಂದಿರುವ ಯಾವುದೇ ಔಷಧ, ಸುಗಂಧ ದ್ರವ್ಯ, ಡೆಂಟಲ್ ಉತ್ಪನ್ನಗಳನ್ನು ಬಳಸಬಾರದು ಎಂದು ಡಿಜಿಸಿಎ ಪ್ರಸ್ತಾವನೆಯಲ್ಲಿ ತಿಳಿಸಿದೆ. ಒಂದೊಮ್ಮೆ ಬಳಸಿದಲ್ಲಿ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಅಂತ ಬರಬಹುದು. ಮತ್ತು ಈ ವಸ್ತುಗಳ ಬಳಸುವ ಉದ್ಯೋಗಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಬಹುದು ಎಂದು ಹೇಳಿದೆ. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

    ಯಾವುದೇ ಪೈಲಟ್‌ಗಳು, ಗಗನಸಖಿಯರು, ಸಿಬ್ಬಂದಿ ಯಾವುದೇ ಔಷಧ ಸೇವಿಸಬಾರದು, ಮೌತ್‌ವಾಶ್/ಟೂತ್ ಜೆಲ್/ಸುಗಂಧ ದ್ರವ್ಯ ಅಥವಾ ಆಲ್ಕೋಹಾಲ್‌ಯುಕ್ತ ಅಂಶವನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಬಳಸಬಾರದು. ಒಂದು ವೇಳೆ ಬಳಸಿದ್ದಲ್ಲಿ, ಟೆಸ್ಟ್ ವೇಳೆ ನೀವು ಕುಡಿದಿದ್ದೀರಿ ಎಂದು ಸಿಗ್ನಲ್ ತಪ್ಪಾಗಿ ಬರಬಹುದು. ಅಂತಹ ಪೈಲಟ್, ಸಿಬ್ಬಂದಿ ವಿಮಾನದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವುದಿಲ್ಲ. ಯಾವುದೇ ಸಿಬ್ಬಂದಿ ಸದಸ್ಯರು ಫ್ಲೈಯಿಂಗ್ ನಿಯೋಜನೆಯನ್ನು ಕೈಗೊಳ್ಳುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಪ್ರಸ್ತಾವಿತ ಶಾಸನವು ಹೇಳಿದೆ.

    ಅಸ್ಪಷ್ಟ ಪ್ರಸ್ತಾವನೆ
    ಪರ್ಫ್ಯೂಮ್ ನಿಷೇಧಕ್ಕೆ ಸಂಬಂಧಿಸಿದ ಡಿಜಿಸಿಎ ಪ್ರಸ್ತಾವನೆಯು ಅಸ್ಪಷ್ಟವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಅಂಶವಿರುವ ಸುಗಂಧ ದ್ರವ್ಯವನ್ನು ಪೈಲಟ್ ಅಥವಾ ಸಿಬ್ಬಂದಿ ಬಳಸಿದರೆ, ಆಗಲೂ ಉಸಿರಾಟ ವಿಶ್ಲೇಷಣೆಯ ಪರೀಕ್ಷೆಯಲ್ಲಿ ತಪ್ಪಾಗಿ ಪಾಸಿಟಿವ್ ಅಂತ ಸಿಗ್ನಲ್ ಬರುತ್ತದೆಯೇ ಎಂಬುದಕ್ಕೆ ಸ್ಪಷ್ಟನೆ ಇಲ್ಲ. ಜೊತೆಗೆ ಡಿಜಿಸಿಎ ನಿಯಮಗಳು ಭಾರತಕ್ಕೆ ಬರುವ ವಿದೇಶಿ ವಿಮಾನಗಳ ಪೈಲಟ್‌ಗಳು, ಗಗನಸಖಿಯರು, ಸಿಬ್ಬಂದಿಗೂ ಅನ್ವಯವಾಗುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: PublicTV Explainer: ಲ್ಯಾಬ್‌ನಲ್ಲಿ DNA ಇಟ್ರೆ ಸಾಕು ನಿಮ್ಗೆ ಸಿಗುತ್ತೆ ಚಿಕನ್‌, ಮಟನ್‌, ಬೀಫ್‌, ಫೋರ್ಕ್‌ ಮಾಂಸ!

    ಪೈಲಟ್‌ಗಳಿಗೆ ಭಾರತದಲ್ಲಿರುವ ಕಾನೂನುಗಳೇನು?
    ವಿಮಾನಯಾನ ಸಿಬ್ಬಂದಿಗೆ ಭಾರತವು ತುಂಬಾ ಕಟ್ಟುನಿಟ್ಟಾದ ಆಲ್ಕೋಹಾಲ್ ನಿಯಮಗಳನ್ನು ಅಳವಡಿಸಿದೆ. ನಾಗರಿಕ ವಿಮಾನಯಾನ ಅಗತ್ಯತೆಗಳ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ವಿಮಾನ ಸಿಬ್ಬಂದಿ ಸದಸ್ಯರು ಮತ್ತು ಕ್ಯಾಬಿನ್ ಸಿಬ್ಬಂದಿ, ಭಾರತದಿಂದ ಕಾರ್ಯಾಚರಣೆ ಆರಂಭಿಸುವ ವಿಮಾನಗಳು ಮೊದಲ ನಿರ್ಗಮನ ವಿಮಾನ ನಿಲ್ದಾಣದಲ್ಲಿ ಉಸಿರಾಟ ವಿಶ್ಲೇಷಣೆಯ ಪರೀಕ್ಷೆಗೆ ಒಳಪಡುತ್ತಾರೆ.

    ಆಲ್ಕೋಹಾಲ್ ಸೇವಿಸಿದ್ರೆ ಪರವಾನಗಿ ಅಮಾನತು
    ಆಲ್ಕೋಹಾಲ್ ಸೇವನೆಯ ಸಣ್ಣ ಕುರುಹು ಕೂಡ ಪಾಸಿಟಿವ್ ಫಲಿತಾಂಶವೆಂದು ಪರಿಗಣಿಸಲಾಗುತ್ತದೆ. ಆಗ ತಕ್ಷಣ ಮೂರು ತಿಂಗಳವರೆಗೆ ಪರವಾನಗಿ ಅಮಾನತು ಮಾಡಲಾಗುತ್ತದೆ. ಎಲ್ಲಾ ಆಪರೇಟರ್‌ಗಳು ಉಸಿರಾಟದ ವಿಶ್ಲೇಷಕದ ಪರೀಕ್ಷೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತವೆ. ರೆಕಾರ್ಡಿಂಗ್‌ಗಳನ್ನು ಆರು ತಿಂಗಳವರೆಗೆ ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ನಿಯಮಗಳು ಹೇಳುತ್ತವೆ. ಯಾವುದೇ ಸಿಬ್ಬಂದಿ ಆಲ್ಕೋಹಾಲ್ ಸೇವಿಸುವುದೇ ಆದರೆ, ಸೇವನೆಯಾದ 12 ಗಂಟೆಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಬಹುದು ಎಂಬ ನಿಯಮವಿದೆ.

    ಕಳೆದ ವರ್ಷ ಎಷ್ಟು ಲೈಸನ್ಸ್ ಅಮಾನತಾಗಿತ್ತು?
    2022 ರಲ್ಲಿ 41 ಪೈಲಟ್‌ಗಳು ಮತ್ತು 116 ಕ್ಯಾಬಿನ್ ಸಿಬ್ಬಂದಿ ಮದ್ಯಪಾನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ಅವರ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. 2021 ರಲ್ಲಿ 19 ಪೈಲಟ್‌ಗಳು ಮದ್ಯಪಾನ ಪರೀಕ್ಷೆಯಲ್ಲಿ ಪಾಸಿಟಿವ್‌ಗೆ ಒಳಗಾಗಿದ್ದರು. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?

    ಮೊದಲ ಬಾರಿಗೆ ಆಲ್ಕೋಹಾಲ್ ಪರೀಕ್ಷೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ಪೈಲಟ್‌ಗಳಿಗೆ ಮೂರು ತಿಂಗಳವರೆಗೆ ಕರ್ತವ್ಯಕ್ಕೆ ಹಾಜರಾಗುವುದನ್ನು ನಿರ್ಬಂಧಿಸಲಾಗುತ್ತದೆ. ಆದರೆ ಎರಡನೇ ಬಾರಿ ಅಪರಾಧ ಮಾಡಿದರೆ ಮೂರು ವರ್ಷಗಳ ವರೆಗೆ ನಿರ್ಬಂಧಿಸಲಾಗುತ್ತದೆ. ಪೈಲಟ್ ಮೂರನೇ ಬಾರಿ ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಪರವಾನಗಿಯನ್ನು ಶಾಶ್ವತವಾಗಿ ರದ್ದು ಮಾಡಲಾಗುತ್ತದೆ.

    ‘ಎಣ್ಣೆ’ ಮತ್ತು ತಂದ ಕುತ್ತು
    ವಿಮಾನಯಾನ ಉದ್ಯಮದಲ್ಲಿ ಪೈಲಟ್‌ಗಳ ಕುಡಿತದ ಪ್ರಕರಣಗಳು ಆಗಾಗ ವರದಿಯಾಗುವುದುಂಟು. 2018 ರಲ್ಲಿ ವಿಮಾನ ಟೇಕಾಫ್ ಆಗುವ ಸಂದರ್ಭದಲ್ಲಿ ನಡೆಸಿದ ಉಸಿರಾಟದ ಪರೀಕ್ಷೆಯಲ್ಲಿ ಜಪಾನ್ ಏರ್‌ಲೈನ್ಸ್‌ನ ಪೈಲಟ್ ಕಟ್ಸುತೋಶಿ ಜಿತ್ಸುಕಾವಾ ಅವರ ರಕ್ತದ ಆಲ್ಕೋಹಾಲ್ ಮಟ್ಟವು ಕಾನೂನು ಮಿತಿಗಿಂತ ಒಂಬತ್ತು ಪಟ್ಟು ಹೆಚ್ಚಾಗಿತ್ತು. ಈ ಕಾರಣಕ್ಕೆ ಅವರಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಲ್ಲದೇ ಅಮೆರಿಕದಲ್ಲಿ ಇದೇ ರೀತಿ ಗೇಬ್ರಿಯಲ್ ಲೈಲ್ ಸ್ಕ್ರೋಡರ್ ಎಂಬ ಪೈಲಟ್‌ರನ್ನು ಮದ್ಯದ ಅಮಲಿನಲ್ಲಿದ್ದಾರೆ ಎಂದು ಶಂಕಿಸಿ ಟೇಕಾಫ್‌ಗೂ ಮುನ್ನ ವಿಮಾನದಿಂದ ಕೆಳಗಿಳಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏರ್‌ ರೇಸಿಂಗ್‌ ಸ್ಪರ್ಧೆ ವೇಳೆ 2 ವಿಮಾನಗಳು ಡಿಕ್ಕಿ – ಇಬ್ಬರು ಪೈಲಟ್‌ಗಳು ಸಾವು

    ಏರ್‌ ರೇಸಿಂಗ್‌ ಸ್ಪರ್ಧೆ ವೇಳೆ 2 ವಿಮಾನಗಳು ಡಿಕ್ಕಿ – ಇಬ್ಬರು ಪೈಲಟ್‌ಗಳು ಸಾವು

    ವಾಷಿಂಗ್ಟನ್: ಏರ್ ರೇಸಿಂಗ್ ಸ್ಪರ್ಧೆಯ ವೇಳೆ 2 ವಿಮಾನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ರೆನೊ ಅಧಿಕಾರಿಗಳು ತಿಳಿಸಿದ್ದಾರೆ. ರೆನೋದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್ ಏರ್ ರೇಸ್‌ನ (Reno Air Races) ಕೊನೆಯ ದಿನದಂದು ದುರಂತ ಸಂಭವಿಸಿದೆ.

    ಮೃತ ಪೈಲಟ್‌ಗಳನ್ನು ನಿಕ್ ಮ್ಯಾಸಿ ಮತ್ತು ಕ್ರಿಸ್ ರಶಿಂಗ್ ಎಂದು ಗುರುತಿಸಿದೆ. T-6 ಗೋಲ್ಡ್ ರೇಸ್‌ನ ಅಂತ್ಯದ ವೇಳೆಗೆ ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ ಎಂದು ರೆನೊ ಏರ್ ರೇಸಿಂಗ್ ಅಸೋಸಿಯೇಷನ್ ತಿಳಿಸಿದೆ. ಇದನ್ನೂ ಓದಿ: ಯುಎಸ್‌ F-35 ಫೈಟರ್‌ ಜೆಟ್‌ ನಾಪತ್ತೆ

    ಸುರಕ್ಷತೆಯು RARA ದ ಪ್ರಮುಖ ಕಾಳಜಿಯಾಗಿದೆ. ಸಾಧ್ಯವಾದಷ್ಟು ಸುರಕ್ಷಿತವಾದ ಈವೆಂಟ್ ಅನ್ನು ಆಯೋಜಿಸಲು ನಾವು ವರ್ಷಪೂರ್ತಿ ಕೆಲಸ ಮಾಡುತ್ತೇವೆ. ಹೀಗಿದ್ದೂ ದುರಂತವಾಗಿರುವುದು ವಿಷಾದನೀಯ ಎಂದು ಅಸೋಸಿಯೇಷನ್‌ ತಿಳಿಸಿದೆ. NTSB, FAA ಮತ್ತು ಸ್ಥಳೀಯ ಅಧಿಕಾರಿಗಳು ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

    ಕಳೆದ ವರ್ಷವೂ ವಿಮಾನ ಅಪಘಾತದಲ್ಲಿ ಪೈಲಟ್ ಒಬ್ಬರು ತನ್ನ ಪ್ರಾಣ ಕಳೆದುಕೊಂಡಿದ್ದರು. ಸುರಕ್ಷತಾ ದೃಷ್ಟಿಯಿಂದ ಈವೆಂಟ್ ನಿಲ್ಲಿಸಲು ರೆನೋ-ತಾಹೋ ಏರ್‌ಪೋರ್ಟ್ ಅಥಾರಿಟಿಯ ನಿರ್ದೇಶಕರ ಮಂಡಳಿಯು ತಿಂಗಳ ಹಿಂದೆ ನಿರ್ಧರಿಸಿತ್ತು. ಆದರೆ 60ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಬಾರಿ ಏರ್ ಶೋ ನಡೆಸಲು ಉದ್ದೇಶಿಸಲಾಗಿತ್ತು. ಇದನ್ನೂ ಓದಿ: ಮೀನು ತಿಂದು ದೇಹದ ಅಂಗಾಂಗ ಕಳೆದುಕೊಂಡ ಮಹಿಳೆ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ- ಇಬ್ಬರು ಪೈಲಟ್‌ ಸೇರಿ 6 ಮಂದಿ ದುರ್ಮರಣ

    ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ- ಇಬ್ಬರು ಪೈಲಟ್‌ ಸೇರಿ 6 ಮಂದಿ ದುರ್ಮರಣ

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ಕೇದಾರನಾಥ ಬಳಿ ಹೆಲಿಕಾಪ್ಟರ್ (Helicopter) ಪತನಗೊಂಡಿದ್ದು, ಈ ವೇಳೆ ಇಬ್ಬರು ಪೈಲಟ್‌ (Pilot), 4 ಯಾತ್ರಾರ್ಥಿಗಳು (Pilgrims) ಸೇರಿದಂತೆ 6 ಮಂದಿ ದುರ್ಮರಣಕ್ಕಿಡಾಗಿದ್ದಾರೆ.

    ಕೇದಾರನಾಥದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಗರುಡ ಚಟ್ಟಿಯಲ್ಲಿ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ಯಾತ್ರಿಕರನ್ನು ಗುಪ್ತಕಾಶಿ ಫಟಾದಿಂದ ಕೇದಾರನಾಥಕ್ಕೆ ಕರೆದೊಯ್ಯುತ್ತಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್‍ಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.

    ಹವಾಮಾನ ವೈಪರಿತ್ಯದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಹೆಚ್ಚು ಸಾವು ನೋವುಗಳಾಗಿದ್ದು, ರಕ್ಷಣಾ ಕಾರ್ಯಕ್ಕಾಗಿ ಆಡಳಿತ ತಂಡವು ಸ್ಥಳಕ್ಕೆ ತೆರಳಿದೆ. ಇದುವರೆಗೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಮುಂಬೈ: ಸ್ಪೈಸ್ ಜೆಟ್ (SpiceJet) ಏರ್‌ಲೈನ್ (AirLine) ಇಂದು ಏಕಾ ಏಕಿ ತನ್ನ 80 ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ದೀರ್ಘ ರಜೆಯಲ್ಲಿರುವಂತೆ (Leave Without Pay) ಸೂಚಿಸಿದೆ.

    ಸ್ಪೈಸ್‌ಜೆಟ್ ಹೆಚ್ಚಿನ ಸಂಖ್ಯೆಯ ಪೈಲಟ್‌ಗಳನ್ನು (Pilots) ಹೊಂದಿದ್ದು, ನಿರ್ವಹಣಾ ವೆಚ್ಚ ಸರಿದೂಗಿಸಲು ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುಗ್ರಾಮದಲ್ಲಿರುವ ಪ್ರಧಾನ ಕಚೇರಿಯ ವಿಮಾನಯಾನ (AirLine) ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ಬೋಯಿಂಗ್-737 ವಿಭಾಗದ 40 ಪೈಲಟ್‌ಗಳು ಹಾಗೂ ಕ್ಯೂ-400 ವಿಭಾಗದ 40 ಪೈಲಟ್‌ಗಳು (Pilots) ಸೇರಿ ಒಟ್ಟು 80 ಪೈಲಟ್‌ಗಳನ್ನು ಧೀರ್ಘ ರಜೆ ಮೇಲೆ ಮನೆಗೆ ತೆರಳುವಂತೆ ಸೂಚಿಸಿದೆ. ಡಿಸೆಂಬರ್‌ನಲ್ಲಿ 7 ಹೊಸ ಬೋಯಿಂಗ್ 737 ಮ್ಯಾಕ್ಸ್ ಅನ್ನು ಸೇರಿಸಲು ಏರ್‌ಲೈನ್ ಮುಂದಾಗಿದ್ದು, ಹೊಸ ಮಾರ್ಗದ ಹಾರಾಟ ಶುರು ಮಾಡಿದರೆ ಈ ಪೈಲಟ್‌ಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: BJP ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ- ಮೆಹಬೂಬಾ ಮುಫ್ತಿ ಆಕ್ಷೇಪ

    2021ರ ಆರಂಭದಲ್ಲಿ ಸ್ಪೈಸ್ ಜೆಟ್ (Spice Jet) 95 ವಿಮಾನಗಳನ್ನು ಹೊಂದಿತ್ತು. ಆದರೆ ಈಗ 50 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ವಿಮಾನಗಳನ್ನು ಲೀಸ್‌ಗೆ ನೀಡಿದೆ. ಇನ್ನೂ ಕೆಲವು ನಿರ್ವಹಣಾ ಸಮಸ್ಯೆಯಿಂದ ಹಾರಾಟ ನಡೆಸುತ್ತಿಲ್ಲ. ಜೊತೆಗೆ ಸಂಸ್ಥೆಯು ಆರ್ಥಿಕತೆಯ (Economy Problem) ಒತ್ತಡದಲ್ಲಿದೆ. ಹೆಚ್ಚಿನ ಪೈಲಟ್‌ಗಳನ್ನು ಇರಿಸಿಕೊಂಡು ಸಂಸ್ಥೆ ನಷ್ಟದಲ್ಲಿ ಮುನ್ನಡೆಸುವುದಲ್ಲಿ ಯಾವುದೇ ಅರ್ಥವಿಲ್ಲ ಎಂದು ಈ ನಿರ್ಧಾರ ಕೈಗೊಂಡಿದೆ. ಹೊಸ ವಿಮಾನಗಳು ಆಗಮಿಸಿದ ನಂತರ ಪೈಲಟ್‌ಗಳನ್ನು ಮತ್ತೆ ಕರೆಸಲಾಗುವುದು ಎಂದು ಸ್ಪೈಸ್ ಜೆಟ್ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ

    MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ

    ನವದೆಹಲಿ: MIG-21 ತರಬೇತಿ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ನಿನ್ನೆ ನಡೆದ ಅಪಘಾತದಿಂದ ಮೃತಪಟ್ಟಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಮಿಗ್-21 ವಿಮಾನಗಳನ್ನು `ಹಾರುವ ಶವಪೆಟ್ಟಿಗೆ’ ಎಂದು ಕರೆದಿದ್ದಾರೆ. ಈ ವಿಮಾನವನ್ನು ಸೇವೆಯಿಂದ ತೆಗೆದು ಹಾಕೋದು ಯಾವಾಗ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ  ಓದಿ: ಭಾರತೀಯ ವಾಯುಪಡೆಯ ವಿಮಾನ ಪತನ – ಇಬ್ಬರು ಪೈಲಟ್ ದುರ್ಮರಣ

    ಗುರುವಾರ ರಾತ್ರಿ ನಡೆದ ಘಟನೆಯಿಂದ ಇಡೀ ದೇಶ ಬೆಚ್ಚಿಬಿದ್ದಿದೆ ಹಾಗೂ ದುಃಖಿತವಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಮಿಗ್-21 ವಿಮಾನಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ವಿಮಾನವು ಇಲ್ಲಿಯ ವರೆಗೆ 200 ಪೈಲೆಟ್‌ಗಳನ್ನು ಬಲಿ ಪಡೆದಿವೆ. ಈ ಹಾರುವ ಶವಪೆಟ್ಟಿಗೆಯನ್ನು ನಮ್ಮ ವಾಯುಪಡೆಯಿಂದ ಯಾವಾಗ ತೆಗೆದುಹಾಕಲಾಗುತ್ತದೆ? ಸಂಸತ್ತು ಯೋಚಿಸಬೇಕು, ನಾವು ನಮ್ಮ ಮಕ್ಕಳಿಗಾದರೆ ಈ ವಿಮಾನವನ್ನು ಹಾರಿಸಲು ಬಿಡುತ್ತೇವೆಯೇ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇದನ್ನೂ  ಓದಿ: ರಾಷ್ಟ್ರಪತ್ನಿ ಹೇಳಿಕೆ ವಿವಾದ – ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್

    ಏನಿದು ಘಟನೆ?
    ನಿನ್ನೆ ರಾಜಾಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ವಿಮಾನ ಪತನಗೊಂಡು ವಿಂಗ್ ಕಮಾಂಡರ್ ಎಂ.ರಾಣಾ ಮತ್ತು ಫೈಟ್ ಲೆಫ್ಟಿನೆಂಟ್ ಅದ್ವಿತೀಯ ಬಾಲ್ ಮೃತಪಟ್ಟಿದ್ದಾರೆ. ಜಿಲ್ಲೆಯ ಬೇಟೂದಲ್ಲಿನ ಭೀಮಡಾ ಗ್ರಾಮದ ಬಳಿ ಅಪಘಾತಕ್ಕೀಡಾಗಿ, ಅಲ್ಲಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು. ಅಲ್ಲಿನ ಸ್ಥಿತಿಗತಿಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ವಾಯುಪಡೆಯ ವಿಮಾನ ಪತನ – ಇಬ್ಬರು ಪೈಲಟ್ ದುರ್ಮರಣ

    ಭಾರತೀಯ ವಾಯುಪಡೆಯ ವಿಮಾನ ಪತನ – ಇಬ್ಬರು ಪೈಲಟ್ ದುರ್ಮರಣ

    ಜೈಪುರ: ರಾಜಾಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.

    ಇದು IAFನ ಮಿಗ್-21 ವಿಮಾನವಾಗಿದ್ದು, ಜಿಲ್ಲೆಯ ಬೇಟೂದಲ್ಲಿನ ಭೀಮಡಾ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ. ಬಾರ್ಮರ್ ಜಿಲ್ಲೆಯ ಗ್ರಾಮದಲ್ಲಿ ಅಲ್ಲಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಲೋಕ್ ಬಂಡು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ

    ಸದ್ಯ ವಿಮಾನ ಪತನಗೊಂಡಿರುವ ಬಗ್ಗೆ ಐಎಎಫ್‌ನಿಂದ ಯಾವುದೇ ಅಧಿಕೃತ ಮಾಹಿತಿಗಳೂ ಲಭ್ಯವಾಗಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥರೊಂದಿಗೆ ಮಾತನಾಡಿ ಅಪಘಾತದ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ಐಎಎಫ್ ಮುಖ್ಯಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಹಮ್ಮದ್ ಫಾಜಿಲ್ ಬರ್ಬರ ಹತ್ಯೆ- ಮಂಗಳೂರಿನ ಬಜ್ಬೆ, ಪಣಂಬೂರು, ಸುರತ್ಕಲ್, ಮುಲ್ಕಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

    ಐಎಫ್‌ಎಸ್ 1963ರಲ್ಲಿ `MiG-21‘ ಅನ್ನು ಪಡೆದುಕೊಂಡಿತು. ಇದು ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಸೋವಿಯತ್ ಮೂಲದ ಸೂಪರ್‌ಸಾನಿಕ್ ಫೈಟರ್‌ಗಳ 874 ರೂಪಾಂತರಗಳನ್ನು ಹಂತಹಂತವಾಗಿ ಸೇರಿಸಿತು. ಆದರೆ ಕಳೆದ 6 ದಶಕಗಳಲ್ಲಿ ನಡೆದ 400ಕ್ಕೂ ಹೆಚ್ಚು `MiG-21‘ನ ಅಪಘಾತಗಳಲ್ಲಿ 200 ಪೈಲಟ್‌ಗಳು ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದಕ್ಷಿಣ ಕೊರಿಯಾ ವಾಯುಪಡೆಯ 2 ತರಬೇತಿ ವಿಮಾನಗಳು ಡಿಕ್ಕಿ- ಮೂವರು ಪೈಲಟ್‌ಗಳು ಸಾವು

    ದಕ್ಷಿಣ ಕೊರಿಯಾ ವಾಯುಪಡೆಯ 2 ತರಬೇತಿ ವಿಮಾನಗಳು ಡಿಕ್ಕಿ- ಮೂವರು ಪೈಲಟ್‌ಗಳು ಸಾವು

    ಸಿಯೋಲ್: ದಕ್ಷಿಣ ಕೊರಿಯಾದ ವಾಯುಪಡೆಯ ಎರಡು ತರಬೇತಿ ವಿಮಾನಗಳು ಶುಕ್ರವಾರ ಹಾರಾಟ ನಡೆಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿಯಾಗಿವೆ. ಅಪಘಾತದಲ್ಲಿ ಮೂವರು ಪೈಲಟ್‌ಗಳು ಸಾವಿಗೀಡಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

    ಆಗ್ನೇಯ ನಗರದ ಸಚೆನ್‌ನಲ್ಲಿ ಮಧ್ಯಾಹ್ನ 1:35 ಕ್ಕೆ (0435 GMT) KT-1 ವಿಮಾನಗಳ ನೆಲೆಯ ಬಳಿ ದುರಂತ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಹಾಗೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಾಯುಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

    ದುರಂತದಲ್ಲಿ ಮೂವರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಒಬ್ಬರು ಪೈಲಟ್‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳನ್ನು ಮಾಹಿತಿ ನೀಡಿದ್ದಾರೆ.

    30 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಅಪಘಾತದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಯುದ್ಧದ ನಡುವೆಯೇ ದೆಹಲಿಗೆ ಬಂದಿಳಿದ ರಷ್ಯಾ ವಿದೇಶಾಂಗ ಸಚಿವ

  • ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಕಿಕಿ ಡ್ಯಾನ್ಸ್: ವಿಡಿಯೋ ವೈರಲ್

    ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಕಿಕಿ ಡ್ಯಾನ್ಸ್: ವಿಡಿಯೋ ವೈರಲ್

    ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಪೈಲೆಟ್ ಇಬ್ಬರು ಕಿಕಿ ಚಾಲೆಂಜ್‍ಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಲೆಜಾಂದ್ರ ಹಾಗೂ ಆಕೆಯ ಸಹ ಚಾಲಕಿ ಇಬ್ಬರು ವಿಮಾನದಿಂದ ಇಳಿದು ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. ವಿಡಿಯೋದಲ್ಲಿ ಪೈಲೆಟ್ ಇಬ್ಬರು ಚಲಿಸುತ್ತಿರುವ ವಿಮಾನದಿಂದ ಇಳಿದು ‘ಮೈ ಫೀಲಿಂಗ್ಸ್’ ಹಾಡಿಗೆ ಡ್ಯಾನ್ಸ್ ಮಾಡಿ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ.

    ಈ ವಿಡಿಯೋದಲ್ಲಿ ಮೊದಲು ಇಬ್ಬರು ಪೈಲೆಟ್ ಕಾಕ್‍ಪಿಟ್‍ನಲ್ಲಿ ಕುಳಿತಿರುತ್ತಾರೆ. ನಂತರ ವಿಮಾನದ ಸ್ಪೀಡ್ ಲೀವರ್ ಕಂಟ್ರೋಲ್ ಮಾಡಿ ವಿಮಾನವನ್ನು ಚಲಿಸುವ ಹಾಗೇ ಮಾಡಿದ್ದಾರೆ. ನಂತರ ಇಬ್ಬರು ವಿಮಾನದಿಂದ ಬೇಗ ಕೆಳಗೆ ಇಳಿದು ಇಂಗ್ಲೀಷ್ ಹಾಡಿಗೆ ಡ್ಯಾನ್ಸ್ ಮಾಡಲು ಶುರು ಮಾಡಿಡಿದ್ದಾರೆ.

    ಸದ್ಯ ಮಹಿಳಾ ಪೈಲೆಟ್ ಇಬ್ಬರು ಕಿಕಿ ಚಾಲೆಂಜ್ ಸ್ವೀಕರಿಸಿ ವಿಮಾನದ ಹೊರಗೆ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ 25 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಏನಿದು ಕಿಕಿ ಚಾಲೆಂಜ್ ?
    ಟ್ರಾಫಿಕ್ ಮಧ್ಯೆ ಚಲಿಸುವ ವಾಹನದಿಂದ ಜಿಗಿದು ಹಾಲಿವುಡ್ ಗಾಯಕ ಡ್ರೇಕ್ ನ “ಇನ್ ಮೈ ಫೀಲಿಂಗ್ಸ್” ಹಾಡು ಹೇಳಿಕೊಂಡು ವಾಹನದ ವೇಗಕ್ಕೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಬೇಕು. ಮತ್ತೆ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು. ಈ ಅಪಾಯಕಾರಿ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿತ್ತು.

    ವಿಶ್ವದಲ್ಲಿರುವ ಎಲ್ಲ ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ನಟಿ ಆದಾ ಶರ್ಮಾ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲದೇ ಕನ್ನಡದಲ್ಲಿ ಬಿಗ್ ಬಾಸ್ ನಿವೇದಿತಾ ಗೌಡ ಮೊದಲ ಬಾರಿಗೆ ಕಿಕಿ ಚಾಲೆಂಜ್ ಸ್ವೀಕರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv