Tag: pillow

  • ಬೆನ್ನು ನೋವಿನ ಸಮಸ್ಯೆ – ಆರೋಪಿ ದರ್ಶನ್‌ಗೆ ಬಂತು ಮೆಡಿಕಲ್ ಬೆಡ್, ದಿಂಬು

    ಬೆನ್ನು ನೋವಿನ ಸಮಸ್ಯೆ – ಆರೋಪಿ ದರ್ಶನ್‌ಗೆ ಬಂತು ಮೆಡಿಕಲ್ ಬೆಡ್, ದಿಂಬು

    ಬಳ್ಳಾರಿ: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ  ಆರೋಪಿ ದರ್ಶನ್‌ಗೆ (Darshan) ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್ (Medical Bed) ಹಾಗೂ ದಿಂಬನ್ನು ಒದಗಿಸಲಾಗಿದೆ.

     

    ಮಂಗಳವಾರ ಮೆಡಿಕಲ್ ವರದಿ ಬಂದ ಬಳಿಕ ಜೈಲಾಧಿಕಾರಿ ಈ ಕುರಿತು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದರು. ಈ ಹಿನ್ನೆಲೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಇಂದು (ಬುಧವಾರ) ದರ್ಶನ್‌ಗೆ ಬೆಡ್ ಮತ್ತು ದಿಂಬನ್ನು ನೀಡಲಾಗಿದೆ. ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಬೆಡ್ ಮತ್ತು ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಇಂದು ಅಂಬುಲೆನ್ಸ್ ಮೂಲಕ ಬೆಡ್ ಮತ್ತು ದಿಂಬನ್ನು ರವಾನಿಸಲಾಗಿದೆ. ಇದನ್ನೂ ಓದಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ 500 ಕೋಟಿ ಪಾವತಿಸಿಲ್ಲ : ಈಶ್ವರ್ ಖಂಡ್ರೆ

    ಇನ್ನು ಜೈಲು ಸಿಬ್ಬಂದಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ತಪಾಸಣೆ ಮಾಡಿ ಹೈ ಸೆಕ್ಯೂರಿಟಿ ಸೆಲ್ ಒಳಗೆ ಬಿಟ್ಟಿದ್ದಾರೆ. ವೈದ್ಯರ ಮೆಡಿಕಲ್ ರಿಪೋರ್ಟ್ ಆಧರಿಸಿ ಜೈಲು ಅಧಿಕಾರಿಗಳು ಆರೋಪಿ ದರ್ಶನ್‌ಗೆ ಮೆಡಿಕಲ್ ಬೆಡ್, ಚೇರ್ ಹಾಗೂ ದಿಂಬನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: 2025-26ರ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ – ಎಷ್ಟು ಏರಿಕೆಯಾಗಿದೆ?

  • ಕೊನೆ ಕ್ಷಣದಲ್ಲಿ ಟ್ರಿಪ್‍ಗೆ ಕೈಕೊಟ್ಟ ಪತ್ನಿ- ಪಿಲ್ಲೊ ಜೊತೆ ಹೊರಟ ಪತಿ

    ಕೊನೆ ಕ್ಷಣದಲ್ಲಿ ಟ್ರಿಪ್‍ಗೆ ಕೈಕೊಟ್ಟ ಪತ್ನಿ- ಪಿಲ್ಲೊ ಜೊತೆ ಹೊರಟ ಪತಿ

    ಮನಿಲಾ: ಸಾಮಾನ್ಯವಾಗಿ ಸ್ನೇಹಿತರೋ, ಸಂಬಂಧಿಕರೋ ಅಥವಾ ಸೋಲೋ ಟ್ರೀಪ್‍ಗಳನ್ನು ಮಾಡಿರೋದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಪತ್ನಿ ಬದಲಿಗೆ ತನ್ನ ಹೆಂಡತಿಯ ಚಿತ್ರವಿರುವ ದಿಂಬಿನ ಜೊತೆ ರಜೆಯ ಮಜಾವನ್ನು ಕಳೆಯಲು ಪ್ರವಾಸ ಕೈಗೊಂಡಿದ್ದಾನೆ.

    ಹೌದು.. ಈ ವ್ಯಕ್ತಿ ಫಿಲಿಪೈನ್ಸ್ ನಿವಾಸಿಯಾಗಿದ್ದಾನೆ. ಈತನ ಹೆಸರು ರೇಮಂಡ್ ಟ್ಯಾನ್ ಫಾರ್ಟುನಾಡೋ. ಈತ ಹಾಗೂ ಈತನ ಪತ್ನಿ ಜೊವಾನ್ನಾಳ ಇಬ್ಬರು ರಜೆಯಲ್ಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದರು. ಅದರಂತೆ ಎಲ್ಲಾ ರೀತಿಯ ತಯಾರಿಯನ್ನು ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಜೊವಾನ್ನಾಳಗೆ ಕೆಲಸ ಬಂದಿದ್ದರಿಂದ ಆಕೆ ಕೊನೆ ಕ್ಷಣದಲ್ಲಿ ಪ್ರವಾಸವನ್ನು ರದ್ದು ಪಡಿಸಿದ್ದಳು.

    ಇದರಿಂದಾಗಿ ಫಾರ್ಟುನಾಡೋಗೆ ಒಬ್ಬನೇ ಪ್ರವಾಸಕ್ಕೆ ಹೋಗುವ ಪರಿಸ್ಥಿತಿ ಬಂತು. ಆದರೆ ಆತ ತನ್ನ ಪತ್ನಿಯೊಂದಿಗೆ ಸಮಯ ಕಳೆಯಲು ಬಯಸಿದ್ದ. ಇದರಿಂದಾಗಿ ಆತ ಟ್ರಿಪ್‍ಗೆ ಹೋಗುವಾಗ ತನ್ನ ಜೊತೆ ಪತ್ನಿ ಬದಲಿಗೆ ಆಕೆಯ ಫೋಟೋವಿರುವ ಪಿಲ್ಲೊವನ್ನು ತೆಗೆದುಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್

    ತಾನು ಹೋದ ಸ್ಥಳದಲ್ಲೆಲ್ಲಾ ಆ ಪಲ್ಲೊ ಜೊತೆಗೆ ಫೋಟೋವನ್ನು ಹಾಕಿದ್ದಾನೆ. ಅಷ್ಟೇ ಅಲ್ಲದೇ ವಿಮಾನದಲ್ಲಿ ಆ ಪಿಲ್ಲೊಗೆಂದೇ ಪ್ರತ್ಯೇಕ ಸೀಟ್‍ನ್ನು ಕಾಯ್ದಿರಿಸಿದ್ದ. ಅಷ್ಟೇ ಅಲ್ಲದೇ ಆ ಪಿಲ್ಲೊವೊಂದಿಗೆ ಕೋವಿಡ್ ನಿಯಮವನ್ನು ಅನುಸರಿಸಿದ್ದಾನೆ. ಫಾರ್ಟುನಾಡೋ ಶಾಪಿಂಗ್ ಮಾಡುವಾಗ, ಡಾಯಿಂಗ್ ಮಾಡುವಾಗ ಅಷ್ಟೇ ಅಲ್ಲದೇ ತಿಂಡಿ ತಿನ್ನುವಾಗಲೂ ಆ ಪಿಲ್ಲೊವನ್ನು ತೆಗೆದುಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಸಂಚಾರ ದಟ್ಟಣೆ ತಡೆಗೆ ಟ್ರಾಫಿಕ್ ಡೈವರ್ಟ್- ವರ್ಕೌಟ್ ಆಗ್ತಿಲ್ಲ ಅಂತಿದ್ದಾರೆ ಸವಾರರು!

    Live Tv
    [brid partner=56869869 player=32851 video=960834 autoplay=true]

  • ಹುಟ್ಟಿದ ಮಗು ಹೆಣ್ಣಾಯ್ತು ಅಂತ ವಾಷಿಂಗ್ ಮೆಷಿನ್ ಗೆ ತುರುಕಿ ಕೊಲೆಗೈದ್ಳು!

    ಹುಟ್ಟಿದ ಮಗು ಹೆಣ್ಣಾಯ್ತು ಅಂತ ವಾಷಿಂಗ್ ಮೆಷಿನ್ ಗೆ ತುರುಕಿ ಕೊಲೆಗೈದ್ಳು!

    ಗಾಜಿಯಾಬಾದ್: ಗಂಡು ಮಗುವಿನ ಆಸೆ ಹೊಂದಿದ್ದ 22 ವರ್ಷದ ಮಹಿಳೆಯೊಬ್ಬರಿಗೆ ಹುಟ್ಟಿದ್ದು ಹೆಣ್ಣು ಮಗು. ಇದರಿಂದ ಬೇಸತ್ತ ಮಹಿಳೆ ಆ ಮಗುವನ್ನು ತನ್ನ ಕೈಯ್ಯಾರೇ ಕ್ರೂರವಾಗಿ ಕೊಲೆಗೈದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಗಾಜಿಯಾಬಾದ್ ನ ಪಟ್ಲ ನಗರದಲ್ಲಿ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಮೂರು ತಿಂಗಳ ಹಿಂದೆ ಆರತಿ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಗಂಡು ಮಗುವಿನ ಆಸೆ ಹೊಂದಿದ್ದ ಆರತಿಗೆ ಹೆಣ್ಣು ಮಗುವಾಗಿದ್ದರಿಂದ ನಿರಾಶೆಗೊಂಡು, ಆಕೆಯ ಮೇಲೆಯೇ ಆಕೆಗೆ ಸಿಟ್ಟು ಬಂದಿದ್ದರಿಂದ ಈ ಕೃತ್ಯ ಎಸಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ತೋಮರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಹೀಗೆ ತನ್ನ ಮೇಲೆಯೇ ಸಿಟ್ಟುಗೊಂಡಿದ್ದ ಆಕೆ ಹೆಣ್ಣು ಮಗುವನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅಂತೆಯೇ ಭಾನುವಾರ ಮಗುವನ್ನು ದಿಂಬಿನಿಂದ ಮುಚ್ಚಿ ಬಳಿಕ ವಾಷಿಂಗ್ ಮೆಷಿನ್ ಗೆ ತುರುಕಿದ್ದಾಳೆ. ನಂತ್ರ ತನ್ನ ಮಗುವನ್ನು ಯಾರೋ ಅಪಹರಣ ಮಾಡಿದ್ದಾರೆ ಅಂತ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಆರತಿಯನ್ನು ಪ್ರಶ್ನಿಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಅಂತ ಅವರು ವಿವರಿಸಿದ್ದಾರೆ.

    ಗಂಡು ಮಗು ಬೇಕು ಅಂತಾ ನಾವು ಆಕೆಗೆ ಕಿರುಕುಳ ಅಥವಾ ಬೆದರಿಕೆ ಹಾಕಿಲ್ಲ. ಬೇಕುಂತಲೇ ಮುದ್ದಾದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾಳೆ ಅಂತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.