Tag: pilgrimage

  • ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಭಕ್ತರು ಸಜೀವ ದಹನ!

    ತೀರ್ಥಯಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್‌ ಬೆಂಕಿಗಾಹುತಿ – 9 ಮಂದಿ ಭಕ್ತರು ಸಜೀವ ದಹನ!

    ಚಂಡಿಗಢ: ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇನಲ್ಲಿ (Kundali Manesar Palwal Expressway) ನಡೆದ ಭೀಕರ ಅಗ್ನಿ ಅವಘಡದಲ್ಲಿ 9 ಮಂದಿ ಭಕ್ತರು ಸಜೀವ ದಹನವಾಗಿರುವ ಘಟನೆ ಶನಿವಾರ (ಇಂದು) ನಸುಕಿನ ಜಾವದಲ್ಲಿ ನಡೆದಿದೆ.

    9 ಮಂದಿ ಭಕ್ತರು ಸಜೀವ ದಹನ ಹೊಂದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಕ್ಕೆ ತೀರ್ಥಯಾತ್ರೆಯಿಂದ (Pilgrimage) ಕೈಗೊಂಡು ಹಿಂದಿರುಗುತ್ತಿದ್ದಾಗ ನುಹ್‌ ಪ್ರದೇಶದ ಬಳಿ ಬಸ್‌ನಲ್ಲಿ ಬೆಂಕಿ (Bus Fire) ಕಾಣಿಸಿಕೊಂಡು ಭಕ್ತರು ಸುಟ್ಟು ಕರಕಲಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಪಂಜಾಬ್‌ ಮೂಲದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

    ನಾವು 10 ದಿನಗಳ ಕಾಲ ಪವಿತ್ರ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡಿದ್ದು, ಅದಕ್ಕಾಗಿ ಬಾಡಿಗೆ ಬಸ್‌ ಪಡೆದಿದ್ದವು. ಶನಿವಾರ ನಸುಕಿನ ಜಾವ 1.30ರ ಸುಮಾರಿಗೆ ಮನೆಗೆ ಮರಳುತ್ತಿದ್ದ ವೇಳೆ ಬಸ್‌ನ ಹಿಂಭಾಗದಲ್ಲಿ ಬೆಂಕಿಯ ಕಿಡಿ ಹತ್ತಿಕೊಂಡಿರುವುದು ಗಮನಿಸಿ ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸಿದ್ದೆವು. ಆದರೆ ಅಷ್ಟರಲ್ಲಿ ಅವಘಡ ಸಂಭವಿಸಿತು ಎಂದು ಬದುಕುಳಿದವರು ತಿಳಿಸಿದ್ದಾರೆ.

    ಹೆಚ್ಚುತ್ತಿರುವ ಬೆಂಕಿಯನ್ನು ನೋಡಿದ ಬೈಕ್ ಸವಾರನೊಬ್ಬ ಬಸ್ ಅನ್ನು ಹಿಂಬಾಲಿಸಿ ನಿಲ್ಲಿಸಲು ಚಾಲಕನಿಗೆ ಎಚ್ಚರಿಕೆ ನೀಡಿದ್ದ. ಬಳಿಕ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಬಸ್‌ನ ಮುಂಭಾಗದಲ್ಲಿದ್ದ ಹಲವರನ್ನು ರಕ್ಷಿಸಲಾಯಿತು. ಬೆಂಕಿ ಕಾಣಿಸಿಕೊಳ್ಳಲಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೇ ವೇಳೆ ಬಸ್ ಸಂಪೂರ್ಣ ಸುಟ್ಟು ಕರಕಲಾದ 3 ಗಂಟೆಗಳ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಿಮಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸ್ವಾತಿ ಆರೋಪ ಸುಳ್ಳು – ಮಲಿವಾಲ್‌ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ: ಸಚಿವೆ ಅತಿಶಿ ತಿರುಗೇಟು!

  • ಮೈಸೂರಿನ ಆಧುನಿಕ ಶ್ರವಣ ಕುಮಾರ – ಹಳೆ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ 4 ದೇಶ ಸುತ್ತಿದ

    ಮೈಸೂರಿನ ಆಧುನಿಕ ಶ್ರವಣ ಕುಮಾರ – ಹಳೆ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ 4 ದೇಶ ಸುತ್ತಿದ

    – ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ತೀರ್ಥಯಾತ್ರೆ

    ಕಾರವಾರ: ರಾಮಾಯಣ ಕಾಲದಲ್ಲಿ ಪುತ್ರ ಭಕ್ತಿಗೆ ಹೆಸರಾದವನು ಶ್ರವಣ ಕುಮಾರ. ಇದೀಗ ಮೈಸೂರಿನ ಈ ಕೃಷ್ಣಕುಮಾರ್ ತನ್ನ ತಾಯಿಯನ್ನು ಭಾರತದಾದ್ಯಂತ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿ, ವಿದೇಶಗಳನ್ನೂ ತೋರಿಸಿ ಇದೀಗ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾದ ಗೋಕರ್ಣದ ಕಡೆ ಹೊರಟಿದ್ದಾರೆ. ಈ ಮೂಲಕ ಆಧುನಿಕ ಶ್ರವಣ ಕುಮಾರ (Shravan Kumar) ಎನಿಸಿಕೊಂಡಿದ್ದಾರೆ.

    ಹೌದು ಮೈಸೂರಿನ (Mysuru) ಕೃಷ್ಣಕುಮಾರ್ ತಮ್ಮ ಹಳೆಯ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ (Scooter) ವಯೋವೃದ್ಧ ತಾಯಿ ಚೂಡಾಲಮ್ಮ (73) ಅವರನ್ನು ಕರೆದುಕೊಂಡು ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿದ್ದಾರೆ. ಮಾತ್ರವಲ್ಲದೆ 4 ದೇಶಗಳನ್ನು ಕೂಡ ತೋರಿಸಿಕೊಂಡು ಬಂದಿದ್ದಾರೆ. ಇದೀಗ ಬೆಳಗಾವಿ ಮೂಲಕ ಗೋವಾಗೆ ಆಗಮಿಸಿ ನಂತರ ಅಲ್ಲಿಂದ ಕಾರವಾರ, ಗೋಕರ್ಣ ಮಾರ್ಗವಾಗಿ ಸಾಗುತ್ತಿದ್ದಾರೆ.

    ಭೂತಾನ್, ಮೈನ್ಮಾರ್, ನೇಪಾಳ ಮಾತ್ರವಲ್ಲದೆ ಭಾರತದ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೂ ಇದೇ ಹಳೆ ಸ್ಕೂಟರ್‌ನಲ್ಲಿ ಕೃಷ್ಣಕುಮಾರ್ ತಮ್ಮ ವೃದ್ಧ ತಾಯಿಯನ್ನು ಕೂರಿಸಿಕೊಂಡು ಎಲ್ಲ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಬ್ರಹ್ಮಚಾರಿಯಾಗಿಯೇ ಉಳಿದುಕೊಂಡು ಕೃಷ್ಣಕುಮಾರ್ ತಮ್ಮ ತಾಯಿಗೆ ದೇಶವನ್ನು ಸುತ್ತಿಸುವ ಸಂಕಲ್ಪ ಮಾಡಿದ್ದರು.

    ಬಜಾಜ್ ಚೇತಕ್ ಸ್ಕೂಟರ್ ಅನ್ನು ಕೃಷ್ಣಕುಮಾರ್ ಅವರಿಗೆ ತಮ್ಮ ತಂದೆ ಕೊಡಿಸಿದ್ದರು. ಈ ಸ್ಕೂಟರ್ ಅನ್ನು ತಮ್ಮ ತಂದೆ ಎಂದು ಭಾವಿಸಿಕೊಂಡು ಅದರಲ್ಲಿಯೇ ತಾಯಿಯನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸ್ಕೂಟರ್‌ನಲ್ಲಿಯೇ ತಾಯಿಯನ್ನು ಕೂರಿಸಿಕೊಂಡು ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಇದನ್ನೂ ಓದಿ: ನಟ ಜಗ್ಗೇಶ್ ಪತ್ನಿ ಪೂಜೆ ಮಾಡಿ ಇಟ್ಟಿದ್ದ ಪೆಂಡೆಂಟ್ ಕೊಟ್ಟಿದ್ದಾರೆ: ಅಧಿಕಾರಿಗಳು

    ಈ ಕುರಿತು ಮಾತನಾಡಿದ ಅವರು, ಇದು ಮಾತೃ ಸೇವಾ ಸಂಕಲ್ಪ ಯಾತ್ರೆ. ನಮ್ಮ ಮನೆಯಲ್ಲಿ 10 ಜನ ಇದ್ದರು. ನಮ್ಮ ತಾಯಿ ಇಷ್ಟು ವರ್ಷಗಳು ಕುಟುಂಬ ಸಲಹುವುದರಲ್ಲೇ ಕಾಲ ಕಳೆದರು. ಹೀಗಾಗಿ ಅವರು ಮನೆಯಿಂದ ಎಲ್ಲಿಯೂ ಹೊರಗೆ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. 2015 ರಲ್ಲಿ ನಮ್ಮ ತಂದೆಯವರು ವಿಧಿವಶರಾದರು. ನಂತರ ನಾನು ಕಾರ್ಪೊರೇಟ್ ಟೀಂ ಲೀಡರ್ ನೌಕರಿಗೆ ರಾಜೀನಾಮೆ ನೀಡಿ 2018ರ ಜನವರಿ 16 ರಿಂದ ಮೈಸೂರಿನಿಂದ ಯಾತ್ರೆ ಆರಂಭಿಸಿದ್ದೇನೆ. ಇದುವರೆಗೂ ಸ್ಕೂಟರ್‌ನಲ್ಲಿಯೇ 78,162 ಕಿ.ಮೀ ಸುತ್ತಿ ತಾಯಿಯನ್ನು ಕರೆದುಕೊಂಡು ಇಡೀ ಭಾರತ ದರ್ಶನ ಮಾಡಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೌರಾಷ್ಟ್ರದಿಂದ ಪರಶುರಾಮ ಕುಂಡದವರೆಗೆ ಹಾಗೂ ಇತರ 3 ದೇಶಗಳನ್ನು ಕೂಡ ಇದೇ ಸ್ಕೂಟರ್‌ನಲ್ಲಿ ಸುತ್ತಿ ಬಂದಿದ್ದೇವೆ. ಇದೀಗ ಗೋವಾಕ್ಕೆ ಬಂದು ತಲುಪಿದ್ದೇವೆ. ಗೋವಾದಲ್ಲಿ ಎಲ್ಲ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳನ್ನು ತಾಯಿಗೆ ದರ್ಶನ ಮಾಡಿಸಿಕೊಂಡು ನಂತರ ಕರ್ನಾಟಕದ ಅಂಕೋಲಾ, ಗೋಕರ್ಣ, ಉಡುಪಿ, ಮಂಗಳೂರು ಮಾರ್ಗವಾಗಿ ಎಲ್ಲ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ಬಳಿಕ ಮೈಸೂರಿಗೆ ತೆರಳುವ ಸಂಕಲ್ಪ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

    ಒಟ್ಟಿನಲ್ಲಿ ತಂದೆ-ತಾಯಿಯನ್ನು ಬೀದಿಯಲ್ಲಿ ಅನಾಥ ಮಾಡುವ ಮಕ್ಕಳೇ ಹೆಚ್ಚಿರುವಾಗ ರಾಮಾಯಣ ಕಾಲದ ಶ್ರವಣ ಕುಮಾರನಂತೆ ಈ ಆಧುನಿಕ ಶ್ರವಣ ಕುಮಾರ ತಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದು ತೀರ್ಥ ಕ್ಷೇತ್ರ ದರ್ಶನ ಮಾಡಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಇದನ್ನೂ ಓದಿ: ಅಪರಾಧಗಳಲ್ಲಿ ಯಾರೇ ಭಾಗಿಯಾದರೂ ಕಾನೂನು ಕ್ರಮ: ಹುಲಿ ಉಗುರು ವಿವಾದ ಬಗ್ಗೆ ಈಶ್ವರ್ ಖಂಡ್ರೆ ಮಾತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ. 15ರವರೆಗೆ ಟಿಕೆಟ್ ಬುಕ್ ಆಗಿದ್ದವರಿಗೆ ಮಾತ್ರ ತಿರುಪತಿ ದರ್ಶನ

    ಆ. 15ರವರೆಗೆ ಟಿಕೆಟ್ ಬುಕ್ ಆಗಿದ್ದವರಿಗೆ ಮಾತ್ರ ತಿರುಪತಿ ದರ್ಶನ

    ಅಮರಾವತಿ: ನಾಳೆಯಿಂದ ಆಗಸ್ಟ್ 15ರವರೆಗೆ ಸಾಲು ಸಾಲು ರಜೆ ಇರುವುದರಿಂದ ತಿರುಪತಿಗೆ ಹೋಗಲು ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಅವಕಾಶವಿದೆ ಎಂದು ಟಿಟಿಡಿ ತಿಳಿಸಿದೆ.

     ಶ್ರಾವಣಮಾಸ ಹಾಗೂ ನಾಳೆಯಿಂದ ಆಗಸ್ಟ್ 15ರವರೆಗೆ ಹಲವು ರಾಜ್ಯಗಳಲ್ಲಿ ಸತತ ರಜೆಗಳು ಇವೆ. ಹೀಗಾಗಿ ತಿರುಪತಿ ತಿರುಮಲಕ್ಕೆ ಅಧಿಕ ಸಂಖ್ಯೆ ಭಕ್ತರು ಬರುವ ನಿರೀಕ್ಷೆ ಇದೆ. ಹೀಗಾಗಿ ಭಕ್ತರು ಯಾವುದೇ ಸಿದ್ಧತೆ, ಯೋಜನೆಗಳು ಇಲ್ಲದೇ ಈ 5 ದಿನ ತಿರುಪತಿಗೆ ಬರಬೇಡಿ ಎಂದು ಟಿಟಿಡಿ ಮನವಿ ಮಾಡಿದೆ.

    ಮೊದಲೇ ದರ್ಶನದ ಟಿಕೆಟ್ ಬುಕ್ ಆಗಿದ್ದರೇ, ಇರಲು ವಸತಿ ಸೌಲಭ್ಯವನ್ನು ಮಾಡಿಕೊಂಡಿದ್ದರೇ ಮಾತ್ರ ಬನ್ನಿ. ಇಲ್ಲ ಅಂದರೆ ಬಂದು ಕಷ್ಟ ಪಡಬೇಡಿ. ಚಿಕ್ಕಮಕ್ಕಳು, ವೃದ್ಧರು, ವಿಶೇಷ ಚೇತನರು ತಿರುಮಲ ಯಾತ್ರೆಯನ್ನು ಮುಂದೂಡಿ ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಯವರ ಸಾಧನೆ ಕಾಂಗ್ರೆಸ್‌ಗೆ ಅಜೀರ್ಣ: ಸಿ.ಸಿ ಪಾಟೀಲ್

    ರಷ್ ಜಾಸ್ತಿ ಇದ್ದಲ್ಲಿ ಭಕ್ತರಿಗೆ, ನಿಗದಿತ ಸಮಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಸರತಿ ಸಾಲಿನಲ್ಲಿ, ಕಂಪಾರ್ಟ್‍ಮೆಂಟ್‍ಗಳಲ್ಲಿ ತುಂಬಾ ಹೊತ್ತು ಕಾಯಬೇಕಾಗುತ್ತದೆ ಎಂದು ಟಿಟಿಡಿ ಎಚ್ಚರಿಸಿದೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಬಸ್ ವ್ಯವಸ್ಥೆ ಮಾಡಿದ್ದನ್ನು ಒಪ್ಪಿಕೊಂಡ ಶಾಸಕ ಶಿವಲಿಂಗೇಗೌಡ

    Live Tv
    [brid partner=56869869 player=32851 video=960834 autoplay=true]

  • ಅಮರನಾಥ ಯಾತ್ರೆಗೆ ಎರಡೇ ದಿನ:  ಯಾತ್ರಾರ್ಥಿಗಳಿಗೆ ಆಧಾರ್, ಸರ್ಕಾರಿ ಗುರುತಿನ ಚೀಟಿ ಕಡ್ಡಾಯ

    ಅಮರನಾಥ ಯಾತ್ರೆಗೆ ಎರಡೇ ದಿನ: ಯಾತ್ರಾರ್ಥಿಗಳಿಗೆ ಆಧಾರ್, ಸರ್ಕಾರಿ ಗುರುತಿನ ಚೀಟಿ ಕಡ್ಡಾಯ

    ಶ್ರೀನಗರ: ಅಮರನಾಥ ಯಾತ್ರೆ ಪ್ರಾರಂಭವಾಗಲು ಕೇವಲ ಎರಡು ದಿನಗಳು ಬಾಕಿಯಿದ್ದು, ದೇಗುಲಕ್ಕೆ ಭೇಟಿ ನೀಡಲು ಯೋಜಿಸುವ ಯಾತ್ರಾರ್ಥಿಗಳಿಗೆ ಹೊಸ ಸೂಚನೆಯನ್ನು ಹೊರಡಿಸಲಾಗಿದೆ.

    ಅಮರನಾಥ ದೇವಸ್ಥಾನದ ಆಡಳಿತ ಮಂಡಳಿಯು, ಈ ವರ್ಷ ಎಲ್ಲ ಅಮರನಾಥ ಯಾತ್ರಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಯಾವುದೇ ಬಯೋಮೆಟ್ರಿಕ್ ಪರಿಶೀಲಿಸಿದ ಸರ್ಕಾರಿ ಗುರುತಿನ ಚೀಟಿಯೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಬೇಕು. ಯಾತ್ರೆಗೆ ಬರಲು ಸಾಧ್ಯವಾಗದ ಭಕ್ತರಿಗೆ ಆನ್‍ಲೈನ್‍ನಲ್ಲಿ ದರ್ಶನ, ಪೂಜೆ, ಹವನ ಮತ್ತು ಪ್ರಸಾದ ಸೌಲಭ್ಯವನ್ನು ಪಡಲಾಗುವುದು ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು

    ಯಾತ್ರೆ ಯಾವಾಗ?
    ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಅಮರನಾಥ ಯಾತ್ರೆಯು ಜೂನ್ 30 ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್‍ನ 48-ಕಿಮೀ ನುನ್ವಾನ್ ಮತ್ತು ಮಧ್ಯ ಕಾಶ್ಮೀರದ ಗಂಡರ್‍ಬಾಲ್‍ನ 14-ಕಿಮೀ ಬಾಲ್ಟಾಲ್‍ನಿಂದ ಎರಡು ಮಾರ್ಗಗಳಿಂದ ಪ್ರಾರಂಭವಾಗುತ್ತದೆ. ಆಗಸ್ಟ್ 11ರವರೆಗೆ ಯಾತ್ರಿಕರು ಯಾತ್ರೆ ಮಾಡಬಹುದು.

    ಬಿಗಿ ಭದ್ರತೆ
    ಜಮ್ಮು ಮತ್ತು ಕಾಶ್ಮೀರ ಆಡಳಿತವು ಪವಿತ್ರ ಗುಹೆಗೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಭಾರೀ ಭದ್ರತೆಯನ್ನು ಒದಗಿಸುವ ಮೂಲಕ ಉಗ್ರರ ದಾಳಿಯನ್ನು ತಪ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಮಂಡಳಿಯು ವ್ಯವಸ್ಥೆ ಮಾಡುತ್ತಿದ್ದು, ಭೌತಿಕವಾಗಿ ಯಾತ್ರೆ ಕೈಗೊಳ್ಳಲು ಸಾಧ್ಯವಾಗದವರಿಗೆ ಆನ್‍ಲೈನ್ ದರ್ಶನದ ವ್ಯವಸ್ಥೆಯನ್ನೂ ಮಾಡಿದೆ.

    ಆರೋಗ್ಯ ತಪಾಸಣೆ ಕೇಂದ್ರ
    ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಇಲಾಖೆಯು ಯಾತ್ರಾರ್ಥಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. 109 ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಸಹ ಇದೆ. ಪ್ರಾಥಮಿಕ ಚಿಕಿತ್ಸೆಯ ಸಾಮಾಗ್ರಿಗಳನ್ನು ಯಾತ್ರೆ ಮಾರ್ಗ ಮಧ್ಯೆ ಇಡಲಾಗಿದೆ. ಇದನ್ನೂ ಓದಿ: 2 ವರ್ಷದ ನಂತರ ಆರಂಭವಾಗಲಿದೆ ಅಮರನಾಥ ಯಾತ್ರೆ – ಸೈನಿಕರಿಗೆ ಹೈಟೆಕ್ ಗ್ಯಾಜೆಟ್ ವಿತರಣೆ

    ಶೌಚಾಲಯದ ವ್ಯವಸ್ಥೆ
    ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಾತನಾಡಿದ್ದು, ಈ ವರ್ಷದ ವಿಶೇಷ ಗಮನವು ಸ್ವಚ್ಛತೆಯ ಮೇಲೆ ಮಂಡಳಿಯು ‘ಸ್ವಚ್ಛ ಅಮರನಾಥ ಯಾತ್ರೆ’ಗಾಗಿ ಗುರಿಯನ್ನು ಹೊಂದಿದೆ. ನಾವು ಎಲ್ಲ ಮಾರ್ಗಗಳಲ್ಲಿ ಶೌಚಾಲಯಗಳನ್ನು ಒದಗಿಸಿದ್ದೇವೆ. ಒಟ್ಟಾರೆ ಸ್ವಚ್ಛತೆಯ ಬಗ್ಗೆ ನಾವು ತುಂಬಾ ಗಮನ ಕೊಡುತ್ತಿದ್ದೇವೆ. ಸ್ವಚ್ಛ ಭಾರತ ಕೇವಲ ಘೋಷಣೆಯಾಗಿರದೇ ಪ್ರಧಾನಮಂತ್ರಿ ಘೋಷಿಸಿದ ಬದ್ಧತೆಯಾಗಿದೆ ಎಂದು ಹೇಳಿದರು.

    Live Tv

  • ಚಾರ್ ಧಾಮ್ ಯಾತ್ರೆ – ಇಲ್ಲಿಯವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು

    ಚಾರ್ ಧಾಮ್ ಯಾತ್ರೆ – ಇಲ್ಲಿಯವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು

    ಡೆಹ್ರಾಡೂನ್: ಮೇ 3 ರಂದು ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ಪ್ರಾರಂಭವಾದಾಗಿನಿಂದ ದೇಗುಲಗಳಿಗೆ ಹೋಗುವ ಮಾರ್ಗದಲ್ಲಿ ಇಲ್ಲಿವರೆಗೆ 48 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅವುಗಳಲ್ಲಿ 46 ಜನರು ಹೃದಯಾಘಾತ ಹಾಗೂ ಇತರ ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಧಿಕ ರಕ್ತದೊತ್ತಡ, ಹೃದಯಾಘಾತಗಳಿಂದ ಹೆಚ್ಚಿನ ಚಾರ್‌ಧಾಮ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಉತ್ತರಾಖಂಡ ಸರ್ಕಾರ ಈ ಹಿಂದೆಯೇ ಯಾತ್ರಾರ್ಥಿಗಳಿಗೆ ಚಾರಣವನ್ನು ಪ್ರಾರಂಭಿಸುವುದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸೂಚಿಸಿತ್ತು. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

    ಹೆಚ್ಚುತ್ತಿರುವ ಯಾತ್ರಾರ್ಥಿಗಳ ಸಾವಿನ ಹಿನ್ನೆಲೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಯಾತ್ರಾರ್ಥಿಗಳಿಗೆ ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ, ಬಳಿಕವೇ ತೀರ್ಥಯಾತ್ರೆಗೆ ತೆರಳುವಂತೆ ಮನವಿ ಮಾಡಿದ್ದರು. ಚಾರ್ ಧಾಮ್ ಯಾತ್ರಾ ಸ್ಥಳದಲ್ಲಿ ಅಗತ್ಯ ವಸ್ತುಗಳ ಸೀಮಿತ ವ್ಯವಸ್ಥೆಗಳಿರುವುದರಿಂದ, ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡೇ ಪ್ರಯಾಣವನ್ನು ಪ್ರಾರಂಭಿಸಬೇಕಾಗಿ ಸೂಚನೆ ನೀಡಿದ್ದಾರೆ.

    ಶುಕ್ರವಾರ ಉತ್ತರಾಖಂಡ ಸರ್ಕಾರ ಚಾರ್ ಧಾಮ್ ಯಾತ್ರೆಯ ಆಫ್‌ಲೈನ್ ನೋಂದಣಿ ಅವಧಿಯನ್ನು ಒಂದು ತಿಂಗಳಿಂದ ಒಂದು ವಾರಕ್ಕೆ ಕಡಿತಗೊಳಿಸಿದೆ. ಪ್ರಯಾಣದ ಮಾರ್ಗಗಳಲ್ಲಿ ಸುಮಾರು 20 ಸ್ಥಳಗಳಲ್ಲಿ ನೋಂದಣಿ ಮಾಡಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ. ಇದನ್ನೂ ಓದಿ: ಬಕಲ್‌ ಹಾಕದೇ ISI ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿದರೆ 2 ಸಾವಿರ ದಂಡ – ಚೆಕ್‌ ಮಾಡೋದು ಹೇಗೆ?

    2 ವರ್ಷಗಳ ಕಾಲ ಕೋವಿಡ್-19 ಕಾರಣದಿಂದಾಗಿ ಚಾರ್ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಪೂರ್ಣ ಪ್ರಮಾಣದಲ್ಲಿ ಯಾತ್ರೆ ಪ್ರಾರಂಭವಾಗಿರುವುದರಿಂದ ಯಾತ್ರಿಕರ ಸಂಖ್ಯೆಯೂ ಹೆಚ್ಚಾಗಿದೆ.

    ಅಕ್ಷಯ ತೃತೀಯ ಹಿನ್ನೆಲೆ ಮೇ 3ರಂದು ಗಂಗೋತ್ರಿ ಹಾಗೂ ಯಮುನೋತ್ರಿ ಪೋರ್ಟಲ್‌ಗಳನ್ನು ತೆರೆಯಲಾಗಿದೆ. ಮೇ 6ರಂದು ಕೇದಾರನಾಥ ಹಾಗೂ ಮೇ 8ರಂದು ಬದರಿನಾಥ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ.

  • ಪತ್ನಿ ಜೊತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ

    ಪತ್ನಿ ಜೊತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ

    ಬೆಂಗಳೂರು: ಉತ್ತರಾಖಂಡದ ಜಗತ್ಪ್ರಸಿದ್ಧ ಕೇದಾರನಾಥ ದೇಗುಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಡಿಕೆ ಶಿವಕುಮಾರ್ ಈ ತಿಂಗಳಿನಲ್ಲಿ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಮೇ 13, 14, 15 ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತಕರ ಸಭೆಯಲ್ಲಿ ಡಿಕೆಶಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಪಕ್ಷದ ಕಾರ್ಯಕ್ರಮ ಮುಗಿದ ಬಳಿಕ ಡಿಕೆಶಿ ಉತ್ತರಾಖಂಡದಲ್ಲಿರುವ ಪವಿತ್ರ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಬದರೀನಾಥ, ಹರಿದ್ವಾರಕ್ಕೆ ಡಿಕೆ ಶಿವಕುಮಾರ್ ತೆರಳಲಿದ್ದು, ಎರಡು ದಿನ ಪ್ರವಾಸ ಕೈಗೊಂಡ ಬಳಿಕ ಅವರು ಕರ್ನಾಟಕಕ್ಕೆ ಮರಳಲಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

  • ಶಬರಿಮಲೆಗೆ ಪ್ರತಿದಿನ 25 ಸಾವಿರ ಭಕ್ತರ ದರ್ಶನಕ್ಕೆ ಅವಕಾಶ

    ಶಬರಿಮಲೆಗೆ ಪ್ರತಿದಿನ 25 ಸಾವಿರ ಭಕ್ತರ ದರ್ಶನಕ್ಕೆ ಅವಕಾಶ

    ತಿರುವನಂತಪುರ: ಕೊರೊನಾ ನಡುವೆ ಶಬರಿಮಲೆಯ ಅಯ್ಯಪ್ಪ ಸನ್ನಿಧಿಯಲ್ಲಿ ನಡೆಯುವ ಈ ಬಾರಿಯ ಮಂಡಲ ಮಕರವಿಳಕ್ಕು ಉತ್ಸವಕ್ಕೆ ಪ್ರತಿದಿನ ಕೇವಲ 25 ಸಾವಿರ ಭಕ್ತರು ದರ್ಶನ ಪಡೆಯಲು ಅವಕಾಶ ನೀಡಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.

    ಶಬರಿಮಲೆ ಅಯ್ಯಪ್ಪ ಭಕ್ತರ ದರ್ಶನಕ್ಕೆ ಅವಕಾಶ ಕೊಡುವ ಬಗ್ಗೆ ಕೇರಳ ಸರ್ಕಾರದ ಉತ್ನತ ಮಟ್ಟದ ಸಭೆಯ ಬಳಿಕ ಪಿಣರಾಯಿ ವಿಜಯನ್ ನಿರ್ಧಾರ ಪ್ರಕಟಿಸಿದ್ದು, ಸದ್ಯದ ಮಟ್ಟಿಗೆ 25 ಸಾವಿರ ಮಂದಿಗೆ ಒಂದು ದಿನದಲ್ಲಿ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಹೆಚ್ಚಿನ ಭಕ್ತರಿಗೆ ಅವಕಾಶ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್


    ಈ ಬಾರಿ ಅಯ್ಯಪ್ಪ ದರ್ಶನಕ್ಕೆ ತೆರಳುವ ಭಕ್ತರಿಗೆ ಕೆಲವು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. 10 ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಭಕ್ತರಿಗೆ ಅವಕಾಶ ನೀಡಲಾಗಿದೆ. ಭಕ್ತರು ಆನ್‍ಲೈನ್ ‘ವರ್ಚುವಲ್ ಕ್ಯೂ’ ವ್ಯವಸ್ಥೆಯ ಮೂಲಕ ಮುಂಗಡವಾಗಿ ಕಾಯ್ದಿರಿಸಿ ಭಕ್ತರಿಗೆ ಪ್ರತಿದಿನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕೋವಿಡ್-19 ಲಸಿಕೆ ಪಡೆದುಕೊಂಡಿರುವ ಅಥವಾ ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕು. ಈ ಬಾರಿ ಭಕ್ತರು ಏರುಮಲೆ ಮತ್ತು ಪುಲ್ಮೇಡು ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಹೋಗಲು ಅನುಮತಿ ನಿರಾಕರಿಸಲಾಗಿದೆ. ಪಂಪಾ ನದಿಯಲ್ಲಿ ಸ್ನಾನ ಮಾಡಲು ಭಕ್ತರಿಗೆ ಅವಕಾಶವಿದ್ದು, ಕೋವಿಡ್-19 ನಿರ್ಬಂಧಗಳಿಂದಾಗಿ ಶಬರಿಮಲೆಯ ಸನ್ನಿಧಾನದಲ್ಲಿ ಯಾತ್ರಾರ್ಥಿಗಳಿಗೆ ಉಳಿಯಲು ಅವಕಾಶವಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

  • ಸ್ಕೂಟರಿನಲ್ಲಿ ತಾಯಿಗೆ ತೀರ್ಥ ಕ್ಷೇತ್ರ ದರ್ಶನ – 56 ಸಾವಿರ ಕಿ.ಮೀ. ಪೂರ್ಣ

    ಸ್ಕೂಟರಿನಲ್ಲಿ ತಾಯಿಗೆ ತೀರ್ಥ ಕ್ಷೇತ್ರ ದರ್ಶನ – 56 ಸಾವಿರ ಕಿ.ಮೀ. ಪೂರ್ಣ

    ಮೈಸೂರು: ಪುರಾಣದಲ್ಲಿನ ಶ್ರವಣಕುಮಾರನ ರೀತಿ ಜಿಲ್ಲೆಯಲ್ಲಿ ಮಗನೊಬ್ಬ ತನ್ನ ತಾಯಿಯನ್ನು ಬಜಾಜ್ ಸ್ಕೂಟರಿನಲ್ಲೇ ಕರೆದುಕೊಂಡು ಹೋಗಿ ದೇಶದ ತೀರ್ಥ ಕ್ಷೇತ್ರದ ದರ್ಶನ ಮಾಡಿಸಿದ್ದಾರೆ. ಈ ಮೂಲಕ ಪೋಷಕರನ್ನು ನಿರ್ಲಕ್ಷ್ಯ ಮಾಡಲು ಮಕ್ಕಳಿಗೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಕಲಿಯುಗದ ಶ್ರವಣಕುಮಾರ- ಸ್ಕೂಟರ್​ನಲ್ಲಿ ತಾಯಿಗೆ ತೀರ್ಥಯಾತ್ರೆ

    ಮೈಸೂರಿನ ಹಳ್ಳಿ ಬೋಗಾದಿಯ ನಿವಾಸಿ ಕೃಷ್ಣಕುಮಾರ್ ತನ್ನ ಹೆತ್ತ ತಾಯಿಯನ್ನು ಬಜಾಜ್ ಸ್ಕೂಟರಿನಲ್ಲಿ ದೇಶ ಪರ್ಯಟನೆ ಮಾಡಿಸಿದ್ದಾರೆ. ಕೃಷ್ಣಕುಮಾರ್ ಬೇಲೂರು ಹಳೇಬೀಡನ್ನೂ ನೋಡದ ತಾಯಿಗೆ ದೇಶದ ಪರಿಚಯ ಮಾಡಿಸಿ ಅವರ ಇಚ್ಛೆಯನ್ನ ಪೂರೈಸಿದ್ದಾರೆ.

    40 ವರ್ಷ ವಯಸ್ಸಿನ ಕೃಷ್ಣಕುಮಾರ್ ಬೆಂಗಳೂರಿನ ಕಾರ್ಪೊರೇಟ್ ಸಂಸ್ಥೆಯೊಂದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 5 ವರ್ಷಗಳ ಹಿಂದೆ ತಂದೆಯನ್ನ ಕಳೆದುಕೊಂಡ ಇವರು ತಾಯಿಯ ಜವಾಬ್ದಾರಿ ಹೊತ್ತಿದ್ದರು. ಇವರು 70 ವರ್ಷದ ತಾಯಿಗೆ ದೇಶದ ತೀರ್ಥ ಕ್ಷೇತ್ರಗಳ ತೋರಿಸುವ ಸಂಕಲ್ಪ ಮಾಡಿದ್ದರು. ಅದರಂತೆಯೇ ಮಾತೃ ಸೇವಾ ಸಂಕಲ್ಪ ಯಾತ್ರೆ ಶುರು ಮಾಡಿದ್ದು, ತಂದೆ ಕೊಡಿಸಿದ ಬಜಾಜ್ ಸ್ಕೂಟರ್‌ನಲ್ಲೇ ತಾಯಿಯ ಜೊತೆ 2018ರ ಜನವರಿ 16ರಂದು ಯಾತ್ರೆ ಆರಂಭಿಸಿದರು.

    ಎರಡು 9 ತಿಂಗಳ ಕಾಲ ಯಾತ್ರೆ ನಡೆಸಿದ್ದಾರೆ. ಚಾಮುಂಡಿ ಬೆಟ್ಟದಿಂದ ಶುರುವಾದ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದೆ. ಒಟ್ಟು 56,522 ಕಿಲೋಮೀಟರ್ ಪ್ರಯಾಣ ಮುಗಿಸಿದ ತಾಯಿ ಮಗ ಜೋಡಿ ಇಂದು ಮೈಸೂರಿಗೆ ವಾಪಸ್ ಬಂದಿದ್ದಾರೆ.

    ತಾಯಿ ಚೂಡಾರತ್ನ ಅವರಿಗೆ ಈಗ 70 ವರ್ಷ. 70ರ ಇಳಿ ವಯಸ್ಸಿನಲ್ಲಿ ಸ್ಕೂಟರಿನಲ್ಲಿ ಯಾತ್ರೆ ಕೈಗೊಳ್ಳುವುದು ಸುಲಭದ ಮಾತಲ್ಲ. ಆದರೆ ಮಗನ ಮೇಲೆ ಭರವಸೆ ಇಟ್ಟು ಯಾತ್ರೆ ಮಾಡಿದ್ದಾರೆ. ದೇಶದ ಪ್ರತಿಯೊಂದು ಧಾರ್ಮಿಕ ಸ್ಥಳಗಳನ್ನೂ ನೋಡಿ ಬಂದಿದ್ದಾರೆ.

  • ಉತ್ತರಾಖಂಡ ತೀರ್ಥ ಯಾತ್ರೆ – ದೇವರ ಪ್ರಸಾದ ತಿಂದವರು ಈಗ ಕ್ವಾರಂಟೈನ್‍!

    ಉತ್ತರಾಖಂಡ ತೀರ್ಥ ಯಾತ್ರೆ – ದೇವರ ಪ್ರಸಾದ ತಿಂದವರು ಈಗ ಕ್ವಾರಂಟೈನ್‍!

    ಬಳ್ಳಾರಿ: ಜಿಲ್ಲೆಯ ಉತ್ತರಾಖಂಡ ತೀರ್ಥ ಯಾತ್ರೆಗೆ ತೆರಳಿದ್ದ 18 ಮಂದಿ ಪೈಕಿ ಒಬ್ಬರಿಗೆ ಮಾತ್ರ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಆ ಒಂದು ಪಾಸಿಟಿವ್ ಪ್ರಕರಣವು ಈಗ ಹೊಸದೊಂದು ತಿರುವು ಪಡೆದುಕೊಂಡಿದೆ.

    ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದ ವ್ಯಕ್ತಿಯ ಪತ್ನಿ ತೀರ್ಥಯಾತ್ರೆಯಿಂದ ತಂದಂತಹ ದೇವರ ಪ್ರಸಾದವನ್ನ ಹಂಚಿದ್ದಾರೆ. ಆಕೆ ಸುಮಾರು 91 ಮಂದಿಗೆ ಪ್ರಸಾದ ಹಂಚಿದ್ದಾರೆ. ಹೀಗಾಗಿ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ್ದ 57 ಮಂದಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದ 34 ಮಂದಿಯನ್ನ ಜಿಲ್ಲಾಡಳಿತ ಪತ್ತೆಹಚ್ಚಿ ಕ್ವಾರಂಟೈನ್‍ನಲ್ಲಿಡಲಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿ ಜಾಗೃತಿ ನಗರದಲ್ಲಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ತೀರ್ಥಯಾತ್ರೆ ಪ್ರಸಾದ ತಿಂದವರೆಲ್ಲರೂ ಕೂಡ ಕ್ವಾರಂಟೈನ್‍ನಲ್ಲಿದ್ದಾರೆ. ಉತ್ತರಾಖಂಡ ರಾಜ್ಯದ ಪ್ರವಾಸಕ್ಕೆ ಹೋಗಿದ್ದ 18 ಮಂದಿಯ ಪೈಕಿ 14 ಮಂದಿ ಬಳ್ಳಾರಿ ನಗರದ ನಿವಾಸಿಗಳಾಗಿದ್ದರು. 4 ಮಂದಿ ನೆರೆಯ ಆಂಧ್ರ ಪ್ರದೇಶದ ಕಣೇಕಲ್ ಮೂಲದವರಾಗಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಬಳ್ಳಾರಿಗೆ ಆಗಮಿಸಿದ್ದ ಈ ಪ್ರವಾಸಿಗರು ಸೋಂಕಿತರ ಸಂಪರ್ಕದಲ್ಲಿದ್ದ ಮಹಿಳೆಯಿಂದ ಪ್ರಸಾದ ಸ್ವೀಕರಿಸಿದ್ದರು.

    ಬಳ್ಳಾರಿ 14 ಮಂದಿ ಉತ್ತರಾಖಂಡ ಚಾರ್ ಧಾಮ್ ಪ್ರವಾಸ ಮಾಡಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವ ವೇಳೆ ಲಾಕ್‍ಡೌನ್ ಆಗಿತ್ತು. ಹೀಗಾಗಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಉತ್ತರಾಖಂಡನ ಲುಡುಕಿ ಎಂಬಲ್ಲಿ ಹೋಟೆಲ್‍ವೊಂದರಲ್ಲಿ ಆಶ್ರಯ ಪಡೆದಿದ್ದರು. ಚಾರ್ ಧಾಮ್ ಪ್ರವಾಸ ಮುಗಿಸಿ ಬಂದ ಹಿನ್ನೆಲೆಯಲ್ಲಿ ಮಹಿಳೆ ಅಕ್ಕ ಪಕ್ಕದ ಮನೆಯವರಿಗೆ ಪ್ರಸಾದ ಹಂಚಿದ್ದರು. ಇದೀಗ ಸೋಂಕಿತನ ಪತ್ನಿ ಹಂಚಿದ್ದ ಪ್ರಸಾದ ತಿಂದ ಒಟ್ಟು 34 ಮಂದಿ ಕ್ವಾರೆಂಟೈನ್‍ನಲ್ಲಿದ್ದಾರೆ.

    ಮುಂಜಾಗ್ರತಾ ಕ್ರಮವಾಗಿ ಸೆಕೆಂಡರಿ ಕಾಂಟ್ಯಾಕ್ಟ್ ಎಂದು ಪರಿಗಣಿಸಿ 34 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ. ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ್ದ 57 ಮಂದಿ ಕೂಡ ಕ್ವಾರೆಂಟೈನ್‍ನಲ್ಲಿದ್ದಾರೆ. ಅದೃಷ್ಟವಶಾತ್ ಪ್ರಸಾದ ಹಂಚಿದ್ದ ಸೋಂಕಿತನ ಪತ್ನಿಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

  • ಕಲಿಯುಗದ ಶ್ರವಣಕುಮಾರ- ಸ್ಕೂಟರ್​ನಲ್ಲಿ ತಾಯಿಗೆ ತೀರ್ಥಯಾತ್ರೆ

    ಕಲಿಯುಗದ ಶ್ರವಣಕುಮಾರ- ಸ್ಕೂಟರ್​ನಲ್ಲಿ ತಾಯಿಗೆ ತೀರ್ಥಯಾತ್ರೆ

    ಬೆಂಗಳೂರು: ಪುತ್ರನೋರ್ವ ತನ್ನ ತಾಯಿಯನ್ನು ಹಳೆ ಸ್ಕೂಟರ್ ನಲ್ಲಿ ಕರೆದುಕೊಂಡು ತೀರ್ಥಯಾತ್ರೆಯನ್ನು ಮಾಡಿಸುತ್ತಿದ್ದಾರೆ. ಮೈಸೂರು ನಿವಾಸಿಯಾಗಿರುವ ಕೃಷ್ಣ ಕುಮಾರ್ ತಮ್ಮ ತಾಯಿ ರತ್ನಮ್ಮ ಜೊತೆ ತೀರ್ಥಯಾತ್ರೆ ಮಾಡುತ್ತಾ ಇದೀಗ ಛತ್ತೀಸ್ ಗಢದ ದಂತೇವಾಡ ತಲುಪಿದ್ದಾರೆ.

    ಕೃಷ್ಣ ಕುಮಾರ್ ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ರತ್ಮಮ್ಮನವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ಮಾತು ಕೊಟ್ಟಿದ್ದರು.

    ತಾಯಿಗೆ ನೀಡಿದ ಮಾತಿನಂತೆ ತಂದೆಯ ನಲವತ್ತು ವರ್ಷದ ಹಳೆಯ ಸ್ಕೂಟರ್ ಮೇಲೆ ಅಮ್ಮನ ಜೊತೆ ಕೃಷ್ಣ ಕುಮಾರ್ ತೀರ್ಥಯಾತ್ರೆ ಆರಂಭಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಮಾಹಾರಾಷ್ಟ್ರ, ಗೋವಾ, ಪುದುಚೇರಿ ಬಳಿಕ ಇದೀಗ ದಂತೇವಾಡದ ತಲುಪಿದ್ದು, ದಂತೇಶ್ವರಿ ದೇವರ ದರ್ಶನ ಪಡೆಯಲಿದ್ದಾರೆ.

    ತಂದೆ-ತಾಯಿ ಸೇವೆಯಲ್ಲಿ ತೊಡಗಿಕೊಂಡಿರುವ ಕೃಷ್ಣಕುಮಾರ್ ಗೆ ಮದುವೆ ಆಗಿಲ್ಲ. ತಂದೆಯ ನಿಧನದ ಬಳಿಕ ತಾಯಿಯೇ ಕೃಷ್ಣ ಕುಮಾರ್ ಅವರ ದೊಡ್ಡ ಆಸ್ತಿಯಾಗಿದ್ದಾರೆ. ತೀರ್ಥಯಾತ್ರೆಯನ್ನ ಬಸ್ ಅಥವಾ ಬೇರೆ ವಾಹನದ ಮೂಲಕ ಕೈಗೊಳ್ಳಬಹುದಿತ್ತು ಎಂದು ಕೇಳಿದ್ರೆ, ಸ್ಕೂಟರ್ ನಮ್ಮ ಜೊತೆಯಲ್ಲಿದ್ದರೆ ತಂದೆಯೊಂದಿಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನಿಸುತ್ತದೆ ಎಂದು ಕೃಷ್ಣ ಕುಮಾರ್ ಹೇಳುತ್ತಾರೆ.

    ತಾಯಿಯ ಸೇವೆ ಮಾಡುವುದರಲ್ಲಿಯೇ ನನಗೆ ಖುಷಿ ಹಾಗೂ ತೃಪ್ತಿ ಸಿಗುತ್ತದೆ. ಸ್ಕೂಟರ್ ಜೊತೆ ತಂದೆಯ ನೆನಪುಗಳು ಬೆಸೆದುಕೊಂಡಿವೆ. ಒಂದು ಸ್ಟೆಪ್ನಿ ಜೊತೆ ಪ್ರಯಾಣ ಮಾಡುತ್ತಿದ್ದು, ಇದೂವರೆಗೂ ಎರಡು ಬಾರಿ ಮಾತ್ರ ಮಾರ್ಗ ಮಧ್ಯೆ ಸ್ಕೂಟರ್ ಪಂಚರ್ ಆಗಿದೆ. ಹೋದ ಸ್ಥಳಗಳಲ್ಲಿ ಒಳ್ಳೆಯ ಜನರು ಸಿಗುತ್ತಿದ್ದು, ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೃಷ್ಣ ಕುಮಾರ್ ತಿಳಿಸಿದರು.

    ಮಗ ನನಗಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೃಷ್ಣ ಕುಮಾರನನೇ ನನಗೆ ಮಗ ಮತ್ತು ಮಗಳಾಗಿ ನೋಡಿಕೊಳ್ಳುತ್ತಿದ್ದಾನೆ. ಪ್ರಯಾಣದಲ್ಲಿ ಇದೂವರೆಗೂ ಯಾವುದೇ ತೊಂದರೆ ಆಗಿಲ್ಲ. ಇಂತಹ ಮಗನನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ತಾಯಿ ರತ್ನಮ್ಮ ಪುತ್ರನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.