ಲಕ್ನೋ: ಉತ್ತರಪ್ರದೇಶದ ಫತೇಪುರ್ ವ್ಯಕ್ತಿಯೊಬ್ಬರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಕಾನ್ಪುರದ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 10 ದಿನಗಳಿಂದಲೂ ಈತ ತಲೆನೋವು, ಕೆಮ್ಮು, ನೆಗಡಿ, ಜ್ವರ ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದನು. ತಪಾಸಣೆಗೆ ಒಳಪಡಿಸಿದಾಗ ಆಫ್ರಿಕನ್ ಹಂದಿಜ್ವರ ಇರುವುದು ಪತ್ತೆಯಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ (CMO) ಅಲೋಕ್ ರಂಜನ್ ತಿಳಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ
ಅಸ್ಸಾಂನಲ್ಲಿ ಹಂದಿಗಳಲ್ಲಿ ಪತ್ತೆಯಾಗಿತ್ತು: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿತ್ತು. ಅಲ್ಲದೆ ಆಫ್ರಿಕನ್ ಹಂದಿಜ್ವರ ಪತ್ತೆಯಾದ ಆ ಪ್ರದೇಶದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿತ್ತು. ಜೊತೆಗೆ ವ್ಯಾಪ್ತಿ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿ ಕೊಂದ ಹಂದಿಗಳನ್ನು ಹೂಳಲಾಗಿತ್ತು ಎಂದು ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ ತಿಳಿಸಿದ್ದರು.
Live Tv
[brid partner=56869869 player=32851 video=960834 autoplay=true]
ದಿಸ್ಪುರ್: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ (ASF) ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ, ಇಲ್ಲಿನ ಹಂದಿಯೊಂದರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಆ ಪ್ರದೇಶದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ. ಜೊತೆಗೆ ವ್ಯಾಪ್ತಿ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿದ್ದು ಕೊಂದ ಹಂದಿಗಳನ್ನು ಹೂಳಲಾಗಿದೆ. ಅದೇ ಸಮಯದಲ್ಲಿ, ನಾವು ಇಡೀ ಪ್ರದೇಶವನ್ನು ಸ್ಯಾನಿಟೈಸ್ ಮಾಡಿ, ಏಕಕಾಲದಲ್ಲಿ ಶುಚಿಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಆಫ್ರಿಕನ್ ಹಂದಿ ಜ್ವರವು ಹಂದಿಗಳಿಗೆ ಮಾರಣಾಂತಿಕ ಅಷ್ಟೇ, ಹೆಚ್ಚು ಸಾಂಕ್ರಾಮಿಕವಾಗಿದ್ದರೂ ಮನುಷ್ಯರಿಗೆ ಸೋಂಕು ಹರಡುವುದಿಲ್ಲ. ಹೀಗಾಗಿ ಆತಂಕಕೊಳ್ಳಕಾಗಬಾರದೆಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ
ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2020 ರಿಂದ 2022ರ ಜುಲೈ 11ರ ವರೆಗೆ ರಾಜ್ಯದಲ್ಲಿ ಸುಮಾರು 40,159 ಹಂದಿಗಳು ಜ್ವರದಿಂದ ಸಾವನ್ನಪ್ಪಿವೆ. 1,181 ಹಂದಿಗಳನ್ನು ಕೊಲ್ಲಲಾಗಿದೆ ಎಂದಿದ್ದಾರೆ.
ಎಲ್ಲೆಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ?
ಅಸ್ಸಾಂ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಾ, ಉತ್ತರಾಖಂಡ ಹಾಗೂ ಬಿಹಾರ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಸರ್ಕಾರವು ಆಫ್ರಿಕನ್ ಹಂದಿ ಜ್ವರದ ಕ್ರಿಯಾ ಯೋಜನೆ ರೂಪಿಸಿದ್ದು, ಇದನ್ನು ಎಲ್ಲಾ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಅನುಸರಿಸಬೇಕು, ಆರೋಗ್ಯ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಬೇಕು. ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಜ್ವರ ಅಥವಾ ಜ್ವರದಿಂದ ಸಾವನ್ನಪ್ಪಿದ ಪ್ರಕರಣಗಳ ಬಗ್ಗೆ ನಿಗಾ ವಹಿಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
Live Tv
[brid partner=56869869 player=32851 video=960834 autoplay=true]
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಎಚ್ ಕ್ಯಾಂಪ್-3 ರಲ್ಲಿ ಸುಮಾರು 4 ಲಕ್ಷ 50 ಸಾವಿರ ರೂ. ಬೆಲೆಬಾಳುವ ಹಂದಿ ಕಳ್ಳತನ ಮಾಡಿದ್ದ ಖದೀಮರು ಕೊನೆಗೂ ಸೆರೆಸಿಕ್ಕಿದ್ದಾರೆ.
ಸಿಂಧನೂರು ಪೋಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ ಎಚ್ ಕ್ಯಾಂಪ್ 3 ರಲ್ಲಿ 2020 ಡಿಸೆಂಬರ್ 19 ರಂದು ಬಿಜನ್ ಮಂಡಲ್ ಎಂಬವರ ಜಮೀನಿನಲ್ಲಿ ಇದ್ದ 60 ಹಂದಿಗಳನ್ನ ಎರಡು ಬುಲೆರೋ ವಾಹನಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು.
ದೂರು ದಾಖಲಿಸಿಕೊಂಡು ಪ್ರಕರಣ ಕೈಗೆತ್ತಿಕೊಂಡ ಸಿಂಧನೂರು ಗ್ರಾಮೀಣ ಠಾಣೆ ಪೋಲೀಸರು, ಇದೀಗ ಏಳು ಜನ ಕಳ್ಳರನ್ನ ಬಂಧಿಸಿದ್ದಾರೆ. ಅಂಬಣ್ಣ, ಮಂಜ, ಯಲ್ಲಪ್ಪ, ಹನುಮಂತ, ಹನುಮೇಶ, ದುರಗಪ್ಪ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಹಂದಿ ಹಿಡಿಯುವ ಬಲೆಗಳು, ಟಾರ್ಚ್, ಬಡಿಗೆಗಳು ಸೇರಿದಂತೆ ಒಟ್ಟು 14 ಲಕ್ಷದ 52 ಸಾವಿರ ಬೆಲೆ ಬಾಳುವ ಸ್ವತ್ತನ್ನ ವಶಪಡಿಸಿಕೊಳ್ಳಲಾಗಿದೆ.
– ಹಂದಿಯಿಂದ ಮಾನವನಿಗೆ ಹರಡುತ್ತದೆ ವೈರಸ್ – ನಿಯಂತ್ರಿಸದಿದ್ದರೆ ಕೋವಿಡ್-19ಗಿಂತಲೂ ಅಪಾಯಕಾರಿ
ಬೀಜಿಂಗ್: ಈಗಾಗಲೇ ಜಗತ್ತನ್ನೇ ಲಾಕ್‌ಡೌನ್ ಮಾಡಿ ಸಮಸ್ಯೆ ಸೃಷ್ಟಿಸುತ್ತಿರುವ ಕೊರೊನಾ ವೈರಸ್ ಮಧ್ಯೆ ಈಗ ಚೀನಾದಲ್ಲಿ ಮತ್ತೊಂದು ವೈರಸ್ ಸೃಷ್ಟಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು. ಸಾಕಾಣಿಕಾ ಕೇಂದ್ರದಲ್ಲಿರುವ ಹಂದಿಗಳಲ್ಲಿ ಜ್ವರದ ವೈರಸ್ ಇರುವುದು ಪತ್ತೆಯಾಗಿದೆ. ಈ ಜ್ವರದ ವೈರಸ್ ಹಂದಿಗಳಿಂದ ಮನುಷ್ಯನಿಗೆ ಬಳಿಕ ಮನುಷ್ಯನಿಂದ ಮನುಷ್ಯನಿಗೆ ಹರಡುವ ಎಲ್ಲ ಲಕ್ಷಣಗಳು ಇವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಸಂಶೋಧಕರು, ಈ ಹಂದಿ ಜ್ವರವನ್ನು ನಿಯಂತ್ರಿಸದೇ ಇದ್ದರೆ ಕೋವಿಡ್ 19ನಂತೆ ಮತ್ತೊಂದು ಸಾಂಕ್ರಮಿಕ ರೋಗವಾಗುವ ಅಥವಾ ಇದಕ್ಕಿಂತಲೂ ಭೀಕರ ಪರಿಣಾಮ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಸಂಶೋಧಕರಾದ ಜಾರ್ಜ್ ಗಾವೋ ಮತ್ತು ಜಿನ್ಹುವಾ ಲಿಯು ನೇತೃತ್ವದ ತಂಡ 2011 ರಿಂದ 2018ರವರೆಗೆ 10 ಪ್ರಾಂತ್ಯಗಳ ಹಂದಿಗಳಿಂದ 179 ವೈರಸ್‌ಗಳನ್ನು ಪತ್ತೆ ಹಚ್ಚಿದ್ದರು.
ಈ ಅಪಾಯಕಾರಿ ವೈರಸ್‌ಗೆ ಜಿ4ಇಎ ಎಂದು ಹೆಸರನ್ನು ಇರಿಸಲಾಗಿದೆ. 2016ರಲ್ಲಿ 46 ವರ್ಷದ ವ್ಯಕ್ತಿಯಲ್ಲಿ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿದ್ದರೆ ನಂತರ 2019ರಲ್ಲಿ 9 ವರ್ಷದ ಬಾಲಕನಲ್ಲಿ ವೈರಸ್ ಕಂಡು ಬಂದಿದೆ.
ಈ ಇಬ್ಬರು ರೋಗಿಗಳು ಹಂದಿ ಸಾಕಾಣಿಕೆ ಮಾಡುವ ನೆರೆಹೊರೆಯವರನ್ನು ಹೊಂದಿದ್ದರು. ಇಬ್ಬರಲ್ಲಿ ರೋಗ ನಿರೋಧಕ ಶಕ್ತಿ ಇಲ್ಲದ ಕಾರಣ ವೈರಸ್ ಹರಡಿರಬಹುದು. ಈ ರೀತಿಯಾಗಿ ಸೃಷ್ಟಿಯಾಗುವ ವೈರಸ್‌ಗೆ ಸದ್ಯಕ್ಕೆ ಯಾವುದೇ ಔಷಧಿ ಇಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಜ್ವರ, ಸೀನುವುದು, ಕೆಮ್ಮು, ಕಫ ಈ ಸಾಮಾನ್ಯ ಲಕ್ಷಣಗಳು ಇದರಲ್ಲೂ ಇದೆ. 2016ರ ನಂತರ ಅತಿ ಹೆಚ್ಚು ಸಂಖ್ಯೆ ವೈರಸ್ ಪತ್ತೆಯಾಗಿದೆ. 15 ಹಂದಿ ಸಾಕಾಣಿಕಾ ಕೇಂದ್ರದಲ್ಲಿರುವ 30 ಸಾವಿರ ಹಂದಿಗಳ ಮೂಗಿನಿಂದ ಸ್ವಾಬ್‌ಗಳನ್ನು ತೆಗೆದು ಅಧ್ಯಯನ ಮಾಡಲಾಗಿದೆ. ಶೇ. 10.4 ರಷ್ಟು ಜನ ಮಾತ್ರ ಈ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ(ಆಂಟಿಬಾಡಿಸ್) ಹೊಂದಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಈ ವೈರಸ್‌ಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಹಂದಿ ಸಾಕಾಣಿಕೆ ಸಾಕಾಣಿಕೆಯನ್ನು ಏಷ್ಯಾದಲ್ಲಿ ಹೆಚ್ಚಿನ ಕಡೆಗಳಲ್ಲಿ ಮಾಡಲಾಗುತ್ತಿದೆ. ಅದರಲ್ಲೂ ವಿಶ್ವದ ಅರ್ಧಕ್ಕೂ ಹೆಚ್ಚು ಹಂದಿ ಸಾಕಾಣಿಕಾ ಕೇಂದ್ರ ಚೀನಾದಲ್ಲಿದೆ. ನೈರ್ಮಲ್ಯ ಕಡಿಮೆಯಾಗಿರವುದರ ಜೊತೆಗೆ ಹಂದಿಗಳಿಗೆ ನೀಡುವ ಆಹಾರದಲ್ಲಿ ಬದಲಾವಣೆಯಾಗಿದೆ. ವಿಶೇಷವಾಗಿ ಸ್ಟೀರಾಯ್ಡ್‌ಗಳನ್ನು ನೀಡುವುದಿಂದ ದೇಹದಲ್ಲಿ ಬದಲಾವಣೆಯಾಗಿ ಈ ವೈರಸ್‌ಗಳು ಸೃಷ್ಟಿಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಹಂದಿ ಸಾಕಾಣಿಕಾ ಕೇಂದ್ರದಲ್ಲಿ ನೈರ್ಮಲ್ಯವನ್ನು ಕಾಪಾಡುವುದು ಮತ್ತು ಹಂದಿ ಸಾಕಾಣಿಕಾ ಕೇಂದ್ರದಲ್ಲಿ ಕೆಲಸ ಮಾಡುವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಈಗಲೇ ನಿಗಾ ಇಡದೇ ಇದ್ದರೆ ಭವಿಷ್ಯದಲ್ಲಿ ಜಾಗತಿಕವಾಗಿ ಈ ರೀತಿಯ ವೈರಸ್ ಹರಡಬಹುದು ಎಂದು ಸಂಶೋಧಕರು ಅಭಿಪ್ರಾಯ ತಿಳಿಸಿದ್ದಾರೆ. ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಜರ್ನಲ್‌ನಲ್ಲಿ ಚೀನಾ ಸಂಶೋಧಕರ ಅಧ್ಯಯನ ವರದಿ ಪ್ರಕಟವಾಗಿದೆ.
– ಬಾವಲಿಗಳ ಬಗ್ಗೆ ವುಹಾನ್‍ನಲ್ಲಿ ಅಧ್ಯಯನ – ಹಂದಿಗಳಿಗೆ ವೈರಸ್ ಚುಚ್ಚಿ ವೆಟ್ ಮಾರುಕಟ್ಟೆಗೆ ಮಾರಾಟ – ಈ ಅಧ್ಯಯನಕ್ಕೆ ಅಮೆರಿಕದಿಂದ ಹಣ
ಲಂಡನ್: ಕೊರೊನಾ ವೈರಸ್ ಮೂಲ ಯಾವುದು ಎನ್ನುವ ಪ್ರಶ್ನೆಗೆ ಇಲ್ಲಿಯವರೆಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ ಈಗ ಚೀನಾ ಮತ್ತು ಅಮೆರಿಕ ಸಂಶೋಧನೆಯಿಂದ ಕೊರೊನಾ ‘ಸೋರಿಕೆ’ಯಾಗಿದೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಹೌದು. ಇಲ್ಲಿಯವರಿಗೆ ಪ್ರಾಣಿಗಳ ಮಾಂಸ ಮಾರಾಟ ಮಾಡುತ್ತಿದ್ದ ವುಹಾನ್ ವೆಟ್ ಮಾರುಕಟ್ಟೆಯಿಂದ ಮನುಷ್ಯನಿಗೆ ಕೊರೊನಾ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈಗ ವುಹಾನ್ ವೈರಾಲಜಿ ಲ್ಯಾಬ್ ನಿಂದ ಬಾವಲಿಗಳ ಜೀನ್ ತೆಗೆದು ಸಂಶೋಧನೆ ನಡೆಸಲಾಗುತ್ತಿತ್ತು. ಈ ಸಂಶೋಧನೆಗೆ ಅಮೆರಿಕ ಹಣ ನೀಡುತ್ತಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ.
ಸೋಂಕು ಹರಡಿದ್ದು ಹೇಗೆ?
ವುಹಾನ್ ಲ್ಯಾಬ್ ವಿಜ್ಞಾನಿಗಳು 1 ಸಾವಿರ ಕಿ. ಮೀ ದೂರದಲ್ಲಿರುವ ಯುನಾನ್ ಗುಹೆಯಿಂದ ಬಾವಲಿಗಳನ್ನು ಹಿಡಿದು ಅಧ್ಯಯನಕ್ಕಾಗಿ ಸ್ವಾಬ್ ಸಂಗ್ರಹಿಸಿ ಹೊಸ ರೀತಿಯ ವೈರಸ್ ಸಂಶೋಧನೆ ನಡೆಸುತ್ತಿದ್ದರು. ಈ ವೇಳೆ ಪತ್ತೆಯಾದ ವೈರಸ್ಸನ್ನು ಹಂದಿಗಳಿಗೆ ಚುಚ್ಚಿ ಯಾವ ರೀತಿ ಸೋಂಕು ತಗಲುತ್ತದೆ ಎಂದು ಪರೀಕ್ಷಿಸಿದ್ದಾರೆ.
ಈ ಅಧ್ಯಯನದ ಬಳಿಕ ಪ್ರಯೋಗಕ್ಕೆ ಬಳಸಲಾದ ಬಾವಲಿ ಮತ್ತು ಹಂದಿಗಳನ್ನು 10 ಕಿ.ಮೀ ದೂರದ ವೆಟ್ ಮಾರುಕಟ್ಟೆಗೆ ಮಾರಾಟ ಮಾಡಿದ್ದರಿಂದ ವೈರಸ್ ಹರಡಿದೆ. ಚೀನಾದ ಈ ಪ್ರಯೋಗಗಳಿಗೆ ಅಮೆರಿಕ ಸುಮಾರು 3.7 ದಶಲಕ್ಷ ಡಾಲರ್(28 ಕೋಟಿ ರೂ.) ಸಹಾಯ ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.
2011 ರಿಂದ 2015ರ ಅಕ್ಟೋಬರ್ ವರೆಗೆ ಈ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಮೂರು ದಿನಗಳ ಹಂದಿಗಳ ಮೇಲೆ ಚುಚ್ಚಿ ಪ್ರಯೋಗ ನಡೆಸಲಾಗಿದೆ. ಪ್ರಯೋಗದ ಫಲಿತಾಂಶವನ್ನು 2017 ರಲ್ಲಿ “ಸಾರ್ಸ್ ಸಂಬಂಧಿಸಿದ ಕೊರೊನಾ ವೈರಸ್ಸಿನ ಮೂಲ ಪತ್ತೆ” ಪ್ರಬಂಧದಲ್ಲಿ ವಿವರಿಸಲಾಗಿದೆ.
ವಿಶೇಷ ಏನೆಂದರೆ ಕಳೆದ ವಾರ ವುಹಾನ್ ನಗರದಲ್ಲಿರುವ ಪ್ರಸಿದ್ಧ ವೈದ್ಯರೊಬ್ಬರು ವೆಟ್ ಮಾರುಕಟ್ಟೆಯಿಂದ ವೈರಸ್ ಹರಡಿದೆ ಎಂಬ ವಾದವನ್ನು ತಿರಸ್ಕರಿಸಿದ್ದರು. ವುಹಾನ್ ನಲ್ಲಿ ಪತ್ತೆಯಾದ ಮೊದಲ 41 ಕೊರೊನಾ ಸೋಂಕಿತರ ಜೊತೆ ವೆಟ್ ಮಾರುಕಟ್ಟೆಗೆ ಸಂಬಂಧವಿಲ್ಲದ 10 ಮಂದಿಯೂ ಇದ್ದರು. ವೆಟ್ ಮಾರುಕಟ್ಟೆಯೇ ಮೂಲ ಎಂದ ಮೇಲೆ ಎಲ್ಲರೂ ಇಲ್ಲಿಯವರೇ ಆಗಬೇಕಿತ್ತು. ಉಳಿದ 10 ಮಂದಿ ಬೇರೆಯವರು ಆಗಿದ್ದ ಕಾರಣ ವೈರಸ್ ಮೂಲ ವೆಟ್ ಮಾರುಕಟ್ಟೆ ಅಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್’
ಚೀನಾದ ಪ್ರಯೋಗಾಲಯಗಳಿಗೆ ಅಮೆರಿಕ ಹಣ ನೀಡುವುದರ ಕುರಿತು ಅಮೆರಿಕದ ಸೆನೆಟ್ ಸದಸ್ಯರು ಕಿಡಿಕಾಡಿದ್ದಾರೆ. ರಿಪಬ್ಲಿಕನ್ ಪಕ್ಷದ ನಾಯಕ ಮ್ಯಾಟ್ ಗೇಟ್ಜ್ ಪ್ರತಿಕ್ರಿಯಿಸಿ, ಪ್ರಾಣಿಗಳ ಮೇಲೆ ನಡೆಯುತ್ತಿರುವ ಈ ಅಪಾಯಕಾರಿ ಕ್ರೂರ ಪ್ರಯೋಗಕ್ಕೆ ಅಮೆರಿಕ ಹಣ ನೀಡುತ್ತಿದೆ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಯೋಗಗಳಿಗೆ ಹಣ ನೀಡುವುದು ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಚೀನಾ ಡೈಲಿ 2018ರಲ್ಲಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಏಷ್ಯದ ಅತಿ ದೊಡ್ಡ ವೈರಸ್ ಬ್ಯಾಂಕಿನ ಚಿತ್ರವನ್ನು ವೀಕ್ಷಿಸಿ, ಮಧ್ಯ ಚೀನಾ ಹುಬೆ ಪ್ರಾಂತ್ಯದಲ್ಲಿರುವ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಕೇಂದ್ರದಲ್ಲಿ 1,500 ವಿವಿಧ ವೈರಸ್ ಗಳನ್ನು ರಕ್ಷಿಸಲಾಗಿದೆ ಎಂದು ಚೀನಾ ಡೈಲಿ 2018ರ ಮೇ 29 ಬೆಳಗ್ಗೆ 5:45 ಕ್ಕೆ ಟ್ವೀಟ್ ಮಾಡಿತ್ತು. ಕಳೆದ ತಿಂಗಳವರೆಗೆ ಈ ಟ್ವೀಟ್ ಇತ್ತು. ಆದರೆ ಈಗ ಈ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. ಇದನ್ನೂ ಓದಿ: 76 ದಿನಗಳ ಲಾಕ್‍ಡೌನ್ ತೆರವು – ವುಹಾನ್‌ನಲ್ಲಿ ಲೈಟ್ ಶೋ, ಪ್ರಜೆಗಳ ಆನಂದ ಭಾಷ್ಪ
ಚೀನಾವೇ ಸೃಷ್ಟಿಸಿದ ವೈರಸ್?
ಕೊರೋನಾ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಗಮನಿಸಿ ಈಗ ಚೀನಾವೇ ಈ ವೈರಸ್ ಸೃಷ್ಟಿ ಮಾಡಿತೇ ಎನ್ನುವ ಶಂಕೆ ಎದ್ದಿದೆ. ವೈರಸ್ ಅಧ್ಯಯನ ಮಾಡಲೆಂದೇ ವುಹಾನ್ ನಗರದಲ್ಲಿ ಚೀನಾ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಎಂಬ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗ ಕೊರೋನಾ ವೈರಸ್ ಸೃಷ್ಟಿಯಾದ ಕೇಂದ್ರ ಸ್ಥಳ ವುಹಾನ್ ಆಗಿದೆ. ವುಹಾನ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪೀಡಿತರಾಗಿದ್ದರು. ಭಾರತದಲ್ಲಿ ಮೊದಲು ಕೇರಳದ ಮೂರು ಮಂದಿ ವಿದ್ಯಾರ್ಥಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಈ ಮೂವರು ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರು ಎನ್ನುವುದು ವಿಶೇಷ.
ವೈರಾಲಜಿ ಸಂಸ್ಥೆಯಲ್ಲಿ ಏನು ಪ್ರಯೋಗ ಕೈಗೊಳ್ಳಲಾಗುತ್ತದೆ ಎನ್ನುವುದು ಈಗಲೂ ರಹಸ್ಯವಾಗಿದೆ. ಯುದ್ಧದ ಮೂಲಕ ದೇಶಗಳ ಜೊತೆ ಹೋರಾಡುವುದು ಇಂದು ಬಹಳ ಕಷ್ಟ. ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ತಯಾರು ಮಾಡುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಸಾರ್ಸ್ ಆರಂಭದಲ್ಲಿ ಕಂಡು ಬಂದಿದ್ದು ಇದೇ ವುಹಾನ್ ನಲ್ಲಿ. 2002ರಲ್ಲಿ ಕಾಣಿಸಿಕೊಂಡಾಗ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತ್ತು. ಆದರೆ ವಿದೇಶಗಳಿಗೆ ಹರಡಿದಾಗ ಕೊನೆಗೆ ಸತ್ಯವನ್ನು ಒಪ್ಪಿಕೊಂಡಿತ್ತು. ಈಗಲೂ ಕೆಲ ವಿಜ್ಞಾನಿಗಳು ಇದು ಯಾವುದೋ ಪ್ರಾಣಿಯಿಂದ, ಪಕ್ಷಿಯಿಂದ ಕೊರೋನಾ ವೈರಸ್ ಸೃಷ್ಟಿಯಾಗಿಲ್ಲ. ಜೈವಿಕ ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾಗ ಹೇಗೋ ಸೋರಿಕೆಯಾಗಿ ಈಗ ಜಗತ್ತಿಗೆ ಹರಡುತ್ತಿದೆ ಎಂದು ವಾದವನ್ನು ಮುಂದಿಡುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕದ ಮಿಲಿಟರಿ ವುಹಾನ್‍ನಲ್ಲಿ ಕೊರೊನಾ ವೈರಸ್ ತಂದಿರಬಹುದು – ಚೀನಾ
ವುಹಾನ್ ವಿಶೇಷತೆ ಏನು?
ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ. ಇದನ್ನೂ ಓದಿ: ವುಹಾನ್‍ನಲ್ಲಿ ಕೊರೊನಾ ತಡೆಗಟ್ಟಲು ಬೆಂಗ್ಳೂರಿನ ಕಂಪನಿಯ ಸಹಾಯ ಪಡೆದ ಚೀನಾ