Tag: pigmy collection

  • 5 ಲಕ್ಷ ಹಣ ಸ್ವಂತಕ್ಕೆ ಬಳಸಿರೋ ಆರೋಪ – ಮನನೊಂದು ಪಿಗ್ಮಿ ಕಲೆಕ್ಷನ್ ಏಜೆಂಟ್ ಆತ್ಮಹತ್ಯೆ

    5 ಲಕ್ಷ ಹಣ ಸ್ವಂತಕ್ಕೆ ಬಳಸಿರೋ ಆರೋಪ – ಮನನೊಂದು ಪಿಗ್ಮಿ ಕಲೆಕ್ಷನ್ ಏಜೆಂಟ್ ಆತ್ಮಹತ್ಯೆ

    – ಹಣ ಕಟ್ಟುವಂತೆ ಪಟ್ಟು ಹಿಡಿದಿದ್ದ ಫೈನಾನ್ಸ್ ಮಾಲೀಕರು

    ಯಾದಗಿರಿ: ಫೈನಾನ್ಸ್‌ನಲ್ಲಿ ಪಿಗ್ಮಿ ಕಲೆಕ್ಷನ್ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವ ಆರೋಪ ಮಾಡಿದ್ದಕ್ಕೆ ಮನನೊಂದು ಹಣ ಕಲೆಕ್ಷನ್ ಮಾಡುತ್ತಿದ್ದ ಏಜೆಂಟ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ನಗರದ ರಂಗಂಪೇಟ ಬಡಾವಣೆಯಲ್ಲಿ ನಡೆದಿದೆ.

    ಮೃತನನ್ನು ಮಲ್ಲಿಕಾರ್ಜುನ (40) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಕಾವು ಜೋರು; ವಿಜಯೇಂದ್ರ-ಯತ್ನಾಳ್ ಮಧ್ಯೆ ಸವಾಲ್ ಪ್ರತಿ ಸವಾಲ್

    ಕಳೆದ ಕೆಲ ವರ್ಷಗಳಿಂದ ಸುರಪುರದ ಮಹಾಲಕ್ಷ್ಮಿ ಫೈನಾನ್ಸ್‌ನಲ್ಲಿ ಮಲ್ಲಿಕಾರ್ಜುನ ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದರು. ಈ ವೇಳೆ ಪಿಗ್ಮಿ ಹಣದಲ್ಲಿ 5 ಲಕ್ಷ ರೂ. ವ್ಯತ್ಯಾಸ ಕಂಡುಬಂದಿದ್ದು, ಫೈನಾನ್ಸ್ ಮಾಲೀಕರು ಹಣ ಕಟ್ಟದೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಿದ್ದಾರೆ. ಜೊತೆಗೆ 5 ಲಕ್ಷ ರೂ. ಹಣವನ್ನು ಮೃತ ಮಲ್ಲಿಕಾರ್ಜುನಗೆ ಕಟ್ಟುವಂತೆ ತಿಳಿಸಿದ್ದಾರೆ. ಇದಕ್ಕೆ ಮನನೊಂದ ಮಲ್ಲಿಕಾರ್ಜುನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸುರುಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಮತ್ತೆ ಕ್ರಿಕೆಟ್‌ಗೆ ಮರಳ್ತಿದ್ದಾರೆ ಎಬಿ ಡಿವಿಲಿಯರ್ಸ್ – ಯಾವ ತಂಡದ ಕ್ಯಾಪ್ಟನ್ ಆಗ್ತಿದ್ದಾರೆ ಎಬಿಡಿ?

  • ಚೀಟಿ ಹೆಸರಲ್ಲಿ ಕೋಟ್ಯಂತರ ರೂ. ದೋಖಾ – ಕಚೇರಿ ಮುಚ್ಚಿಕೊಂಡು ವಂಚಕ ಪರಾರಿ

    ಚೀಟಿ ಹೆಸರಲ್ಲಿ ಕೋಟ್ಯಂತರ ರೂ. ದೋಖಾ – ಕಚೇರಿ ಮುಚ್ಚಿಕೊಂಡು ವಂಚಕ ಪರಾರಿ

    ಶಿವಮೊಗ್ಗ: ಮೋಸ ಹೋಗುವ ಜನ ಇರುವವರೆಗೆ ಮೋಸ ಮಾಡೋ ಜನ ಇದ್ದೇ ಇರುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಶಿವಮೊಗ್ಗದಲ್ಲಿ ಚೀಟಿ ಹೆಸರಿನಲ್ಲಿ ವಂಚಕನೋರ್ವ ಕೋಟ್ಯಂತರ ರೂ. ಹಣ ದೋಚಿಕೊಂಡು ಜನರಿಗೆ ಪಂಗನಾಮ ಹಾಕಿದ್ದಾನೆ.

    ನಗರದ ಬಿ.ಎಚ್ ರಸ್ತೆಯಲ್ಲಿ ತುಂಗಾ ಪತ್ತಿನ ಸಹಕಾರ ಸಂಘದ ಹೆಸರಿನಲ್ಲಿ ಅದರ ಸಂಸ್ಥಾಪಕ ಶಂಕರ್ ನಾಗ್ ನೂರಾರು ಮಂದಿಯಿಂದ ಚೀಟಿ ಹಾಗು ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದನು. ಈತನನ್ನು ನಂಬಿ ನೂರಾರು ಮಂದಿ ಅಮಾಯಕರು, ಬಡ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಕಷ್ಟಪಟ್ಟು ದುಡಿದಿದ್ದ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಇದೀಗ ಹಣ ವಸೂಲಿ ಮಾಡಿಕೊಂಡ ಶಂಕರ್ ನಾಗ್ ಕಳೆದೊಂದು ವಾರದಿಂದ ಕಚೇರಿಯ ಬಾಗಿಲು ಮುಚ್ಚಿಕೊಂಡು ಎಸ್ಕೇಪ್ ಆಗಿದ್ದಾನೆ.

    ಸುಮಾರು 4 ಕೋಟಿಗೂ ಅಧಿಕ ಹಣದೊಂದಿಗೆ ಜಾಗ ಖಾಲಿ ಮಾಡಿದ್ದಾನೆ. ಶಂಕರ್ ನಾಗ್ ಬಳಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ನೂರಾರು ಮಂದಿ ಆತಂಕಕ್ಕೊಳಗಾಗಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತಮ್ಮ ಹಣದೊಂದಿಗೆ ನಾಪತ್ತೆಯಾಗಿರುವ ಶಂಕರ್ ನಾಗ್‍ನನ್ನು ಪತ್ತೆ ಹಚ್ಚಿ, ಹಣವನ್ನು ವಾಪಸ್ ಕೊಡಿಸುವಂತೆ ಪೊಲೀಸರಲ್ಲಿ ಹಣಹೂಡಿದವರು ಮನವಿ ಮಾಡಿಕೊಂಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.