Tag: Pigeons

  • ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಂತರ ರೂ.ಮೌಲ್ಯದ ಆಸ್ತಿ!- ಕಾರಣವೇನು ಗೊತ್ತಾ?

    ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಂತರ ರೂ.ಮೌಲ್ಯದ ಆಸ್ತಿ!- ಕಾರಣವೇನು ಗೊತ್ತಾ?

    ರಾಜಸ್ಥಾನ: ಮಾನವರು ಆಸ್ತಿ ಮಾಡುವುದನ್ನು ನಾವು ಕೇಳಿದ್ದೇವೆ, ಆದರೆ ಪ್ರಾಣಿ ಪಕ್ಷಿಗಳ ಹೆಸರಿನಲ್ಲೂ ಆಸ್ತಿ ಮಾಡಿರುವುದನ್ನು ಕೇಳಿದ್ದೀರ. ರಾಜಸ್ಥಾನದ ನಾಗ್ಪುರ ಜಿಲ್ಲೆಯ ಜಸನಗರ್ ಊರಿನಲ್ಲಿರುವ ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ.

    ಪಾರಿವಾಳಗಳ ಹೆಸರಿನಲ್ಲಿ 27 ಅಂಗಡಿಗಳು, 126 ದೊಡ್ಡ ಭೂಮಿ, ಬ್ಯಾಂಕ್‍ನಲ್ಲಿ 30 ಲಕ್ಷ ರೂ ಹಣ ಸೇರಿದಂತೆ ಪಾರಿವಾಳಗಳ ಹೆಸರಿನಲ್ಲಿ 470 ಹಸುಗಳಿರುವ ಒಂದು ಗೋಶಾಲೆಯನ್ನೂ ನಡೆಸಲಾಗುತ್ತಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಡಿಜಿಟಲ್ ರ‍್ಯಾಲಿಗಳಿಗೆ ಬಿಜೆಪಿ ಸಂಪೂರ್ಣ ತಯಾರಿ ನಡೆಸಿದೆ: ಅಜಯ್ ಭಟ್

    40 ವರ್ಷಗಳ ಹಿಂದೆ ಗುರು ಮುರುಧರ್ ಕೇಸರಿ ಎನ್ನುವ ಗುರುವಿನಿಂದ ಪ್ರೇರಣೆ ಪಡೆದ ಮಾಜಿ ಸರಪಂಚ್ ರಾಮದಿನ್ ಚೋಟಿಯಾ ಕಬುವಾನ್ ಎನ್ನುವ ಟ್ರಸ್ಟ್ ಪಾರಿವಾಳಗಳ ರಕ್ಷಣೆಗಾಗಿ ಸ್ಥಾಪಿಸಿದರು. ಈ ಮೂಲಕ ಪಾರಿವಾಗಳಿಗೆ ಪ್ರತಿದಿನ ನೀರು ಮತ್ತು ಆಹಾರ ಧಾನ್ಯಗಳ ಪೂರೈಕೆ ಮಾಡಲಾಗಿತ್ತದೆ. ಟ್ರಸ್ಟ್ ಮೂಲಕ 27 ಅಂಗಡಿಗಳನ್ನು ನಿರ್ಮಿಸಿ ಅದರಿಂದ ಬಂದ ಆದಾಯದ ಮೂಲಕ ಪಾರಿವಾಳಗಳಿಗೆ 3 ಚೀಲ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಇದನ್ನೂ ಓದಿ: ಹಿಮದಿಂದ ಆವೃತವಾದ ಫೋಟೋ ಶೇರ್ ಮಾಡಿ ‘ಭೂಮಿಯ ಮೇಲಿನ ಸ್ವರ್ಗ’ ಎಂದ ರೈಲ್ವೇ ಸಚಿವ

    ಪಾರಿವಾಳಗಳ ಬಳಿ ಇದೆ ಲಕ್ಷಾಂತರ ರೂಪಾಯಿ: 3 ಚೀಲ ಭತ್ತವನ್ನು 4 ಸಾವಿರ ರೂ ಖರ್ಚಿನಲ್ಲಿ ಪಾರಿವಾಳಗಳಿಗೆ ನೀಡಲಾಗುತ್ತದೆ ಇನ್ನು 470 ಹಸುಗಳಿರುವ ಗೋಶಾಲೆಗೂ ಆಹಾರ ಪೂರೈಸಲಾಗುತ್ತದೆ.  ಟ್ರಸ್ಟ್‌ಗೆ ಅಂಗಡಿಗಳ ಬಾಡಿಗೆಯಿಂದ ತಿಂಗಳಿಗೆ 80 ಸಾವಿರ ರೂ. ಆದಾಯ ಬರುತ್ತದೆ. ಅಲ್ಲದೆ 126 ಬಿಘಾ ಭೂಮಿ ಸ್ಥಿರಾಸ್ತಿಯಾಗಿದೆ. ಎಲ್ಲ ಖರ್ಚಿನ ಬಳಿಕ ಪಾರಿವಾಳಗಳ ರಕ್ಷಣೆಗೆ ಉಳಿಸಿರುವ ಹಣ ಈಗ ಒಟ್ಟು 30 ಲಕ್ಷ ರೂ ಆಗಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್

    ಉದ್ದೇಶವೇನು?: ಊರಿನ ಜನ ಪಾರಿವಾಳಗಳ ರಕ್ಷಣೆಗೆ ಬಹಿರಂಗವಾಗಿಯೇ ದಾನ ಮಾಡುತ್ತಿದ್ದಾರೆ. ಅದೆಲ್ಲ ಹಣವನ್ನು ಪಾರಿವಾಳಗಳಿಗೆ ನೀರಿನ ಕೊರತೆಯಾಗದಂತೆ ಮಾಡಲು ನಿರ್ಮಿಸಿದ ಅಂಗಡಿಗಳಿಗೆ ವಿನಿಯೋಗಿಸಲಾಗಿದೆ. ಇಂದು ಈ ಅಂಗಡಿಗಳಿಂದ ತಿಂಗಳಿಗೆ 9 ಲಕ್ಷ ರೂ ಆದಾಯ ಬರುತ್ತದೆ. ಈ ಹಣದಿಂದ ಪಾರಿವಾಳಗಳ ರಕ್ಷಣೆ ಮಾಡಲಾಗುತ್ತಿದೆ.

  • ಸೋಲದೇವನಹಳ್ಳಿ ಮಗು ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 15 ವರ್ಷದ ಬಾಲಕನ ಬಂಧನ

    ಸೋಲದೇವನಹಳ್ಳಿ ಮಗು ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 15 ವರ್ಷದ ಬಾಲಕನ ಬಂಧನ

    ಬೆಂಗಳೂರು: ಗುರುವಾರದಂದು ಸೋಲದೇವನಹಳ್ಳಿ ನಡೆದಿದ್ದ 2 ವರ್ಷದ ಮಗು ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.

    ಸೋಲದೇವನಹಳ್ಳಿಯ ನಿವಾಸಿ ಬಸವರಾಜು ಮತ್ತು ವೆಂಕಮ್ಮ ದಂಪತಿಯ ಮಗನಾದ ಎರಡು ವರ್ಷದ ವೆಂಕಟೇಶ್ ನನ್ನು ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಲೆ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಪಕ್ಕದ ಮನೆಯ ಈರಣ್ಣ ಹಾಗೂ ಬಸವರಾಜು ಕುಟುಂಬಕ್ಕೆ ನಾಯಿಗೆ ಹಾಲು ಹಾಕುವ ಬಟ್ಟಲಿನ ವಿಚಾರಕ್ಕೆ ಜಗಳವಾಗಿತ್ತು. ಜಗಳವಾದ ಬಳಿಕ ಈರಣ್ಣನೇ ಮಗುವನ್ನು ಕೊಲೆ ಮಾಡಿದ್ದಾನೆ ಎಂದು ವೆಂಕಟೇಶ್ ಪೋಷಕರು ಆರೋಪಿಸಿದ್ದರು.

    ಆದ್ರೆ ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಈರಣ್ಣನ ಮಗನಾದ 15 ವರ್ಷದ ಬಾಲಕನಿಂದ ವೆಂಕಟೇಶ್ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿ ಬಾಲಕ ನಾಲ್ಕೈದು ವರ್ಷಗಳಿಂದ ಮನೆಯಲ್ಲಿ ಪಾರಿವಾಳ ಸಾಕುತ್ತಿದ್ದ. ಕೊಲೆಯಾದ ಮಗು ವೆಂಕಟೇಶ್ ಕೀಟಲೆ ಮಾಡಿ ಆ ಪಾರಿವಾಳವನ್ನೆಲ್ಲಾ ಪಂಜರದಿಂದ ತೆಗೆದು ಹಾರಲು ಬಿಡುತ್ತಿದ್ದ. ಇದ್ರಿಂದ ಆರೋಪಿಗೆ ವೆಂಕಟೇಶನ ಮೇಲೆ ಕೋಪ ಇತ್ತು. ಮೊನ್ನೆಯೂ ಕೂಡ ಮೃತ ವೆಂಕಟೇಶ್ ಪಾರಿವಾಳ ಹಾರಲು ಬಿಟ್ಟಿದ್ದ. ಆ ಪಾರಿವಾಳ ನೀಲಗಿರಿ ತೋಪಿಗೆ ಹೋಗಿತ್ತು. ಅದನ್ನು ಹಿಡಿಯಲು ಹೋದ ಆರೋಪಿ ಜೊತೆ ವೆಂಕಟೇಶ್ ಕೀಟಲೆ ಮಾಡಿದ್ದರಿಂದ ಪಾರಿವಾಳವನ್ನು ಸಾಯಿಸ್ತೀಯಾ ಅಂತ ಕಾಲಿನಿಂದ ತುಳಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಬಾಲಕನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಈರಣ್ಣ ಮತ್ತು ಬಸವರಾಜು ಕುಟುಂಬಗಳ ನಡುವೆ ಜಗಳ ನಡೆದಿತ್ತು. ನಂತರ ಮಧ್ಯಾಹ್ನ 3 ಗಂಟೆಗೆ ವೆಂಕಟೇಶ್ ನಾಪತ್ತೆಯಾಗಿದ್ದ. ಸಂಜೆ 5 ಗಂಟೆ ವೇಳೆ ಮನೆಯಿಂದ ಸುಮಾರು 3 ಕಿಮೀ ದೂರದಲ್ಲಿರುವ ನೀಲಗಿರಿ ತೋಪಿನಲ್ಲಿ ಕಂದಮ್ಮನ ಶವ ಪತ್ತೆಯಾಗಿತ್ತು.

    ಮಧ್ಯಾಹ್ನ ಈರಣ್ಣನೇ ಮಗುವನ್ನು ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಘಟನೆ ಬಳಿಕ ಈರಣ್ಣ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದರು. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.