Tag: pigeon

  • ಪಾರಿವಾಳ ವಿಚಾರ ಕೊಲೆಯಲ್ಲಿ ಅಂತ್ಯ

    ಪಾರಿವಾಳ ವಿಚಾರ ಕೊಲೆಯಲ್ಲಿ ಅಂತ್ಯ

    ಮೈಸೂರು: ಪಾರಿವಾಳ ವಿಚಾರದಲ್ಲಿ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಕೆ.ಆರ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣದಕೇರಿಯಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಗೋವಿಂದರಾಜ್ ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬದ ರಾತ್ರಿಯಂದು ಉಲ್ಲಾಸ್ ಎಂಬಾತನ 38 ಪಾರಿವಾಳಗಳು ಕಳ್ಳತನವಾಗಿತ್ತು. ಉಲ್ಲಾಸ್ ಕೊಲೆಯಾದ ಗೋವಿಂದರಾಜು ಪುತ್ರ. ಇವರ ಎದುರು ಮನೆಯಲ್ಲಿದ್ದ ವಿನಾಯಕ್, ಪ್ರಮೋದ್‍ನಾಯಕ್, ಜಯಶಂಕರ್, ಮನೋಜ್‍ನಾಯಕ್, ವಿಜಯ್ ಪಾರಿವಾಳ ಕದ್ದಿದ್ದಾರೆಂದು ಆರೋಪಿಸಲಾಗಿತ್ತು. ನಿನ್ನೆ ವಿನಾಯಕ್ ಮನೆಯಲ್ಲಿ ಪಾರಿವಾಳಗಳಿರಬಹುದೆಂದು ಪರಿಶೀಲನೆ ಮಾಡಲು ಉಲ್ಲಾಸ್ ಸ್ನೇಹಿತ ಪ್ರಮೋದ್ ತೆರಳಿದ್ದ. ಈ ವೇಳೆ ಪ್ರಮೋದ್ ಮೇಲೆ ವಿನಾಯಕ್, ಜಯಶಂಕರ್, ಪ್ರಮೋದ್‍ನಾಯಕ್, ಮನೋಜ್‍ನಾಯಕ್ ಹಲ್ಲೆ ಮಾಡಿದ್ದರು. ಇದನ್ನೂ ಓದಿ: ಸ್ನೇಹಿತನಿಗೆ ಇಕ್ಕಳದಿಂದ ಹೊಡೆದು, ಮೆಟ್ಟಿಲಿನಿಂದ ತಳ್ಳಿ ಕೊಂದ

    ಪ್ರಮೋದ್ ಮೇಲೆ ಹಲ್ಲೆ ನಡೆಸಿದ್ದನ್ನು ಉಲ್ಲಾಸ್ ತಂದೆ ಕೊಲೆಯಾದ ಗೋವಿಂದರಾಜು ಪ್ರಶ್ನಿಸಿದ್ದಾರೆ. ನಂತರ ಗೋವಿಂದರಾಜು ಮನೆ ಬಳಿ ಬಂದ ನಾಲ್ವರು, ಗೋವಿಂದರಾಜು ಮತ್ತು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಗೋವಿಂದರಾಜುರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೆ ಗೋವಿಂದರಾಜು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸ್ನಾನದ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‍ಮೇಲ್ ಮಾಡುತ್ತಾ ಅತ್ತಿಗೆಯನ್ನೇ ರೇಪ್ ಮಾಡ್ದ!

    ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಸಂಬಂಧ ಆರೋಪಿಗಳಾದ ಮನೋಜ್‍ನಾಯಕ್ ಹಾಗೂ ಜಯಶಂಕರ್‌ನನ್ನು ಬಂಧಿಸಲಾಗಿದ್ದು ವಿನಾಯಕ್, ಪ್ರಮೋದ್‍ನಾಯಕ್ ಇಬ್ಬರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

  • ಅನುಮಾನಾಸ್ಪದ ಸಾಧನ ಹೊಂದಿದ್ದ ಪಾರಿವಾಳ ಪತ್ತೆ

    ಅನುಮಾನಾಸ್ಪದ ಸಾಧನ ಹೊಂದಿದ್ದ ಪಾರಿವಾಳ ಪತ್ತೆ

    ಪೋರಬಂದರ್‌: ಕಾಲುಗಳಲ್ಲಿ ಅನುಮಾನಾಸ್ಪದವಾದ ಸಾಧನ ಹೊಂದಿದ್ದ ಎರಡು ಪಾರಿವಾಳಗಳನ್ನು ಇಲ್ಲಿನ ದೋಣಿ ಮಾಲೀಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪಾರಿವಾಳಗಳು ತಮ್ಮ ಕಾಲುಗಳಲ್ಲಿ ಉಂಗುರದ ಆಕಾರದ ಸಣ್ಣ ಸಾಧನವನ್ನು ಹೊಂದಿದ್ದವು ಎಂದು ತಿಳಿದುಬಂದಿದೆ. ಡಿಸೆಂಬರ್ 5 ರಂದು ಈ ಪಾರಿವಾಳಗಳು ಮೀನುಗಾರಿಕಾ ದೋಣಿಯಲ್ಲಿ ಬಂದು ಕುಳಿತಿವೆ. ಈ ದೋಣಿಯು ಶನಿವಾರ ಪೋರಬಂದರ್‌ ತಲುಪಿದೆ. ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ

    ದೋಣಿ ಮಾಲೀಕರು ನಮಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ನಂತರ ಸಾಧನವನ್ನು ಪಕ್ಷಿಗಳ ಕಾಲಿನಿಂದ ತೆಗೆದುಹಾಕಲಾಗುವುದು. ಆ ನಂತರ ಪರೀಕ್ಷೆಗಾಗಿ ಸಾಧನವನ್ನು ಗಾಂಧಿನಗರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಸ್ಮಿತ್ ಗೋಹಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪನಂತೆ ನಾನೂ ವಾಯುಪಡೆ ಸೇರ್ತೀನಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪುತ್ರಿ ಆಸೆ

  • ಪಾರಿವಾಳ ಹಿಡಿಯಲು ಹೋಗಿ ನಾಲ್ಕನೇ ಮಹಡಿಯಿಂದ ಬಿದ್ದು ಯುವಕ ಸಾವು

    ಪಾರಿವಾಳ ಹಿಡಿಯಲು ಹೋಗಿ ನಾಲ್ಕನೇ ಮಹಡಿಯಿಂದ ಬಿದ್ದು ಯುವಕ ಸಾವು

    ಬೆಂಗಳೂರು: ಯುವಕನೊಬ್ಬ ರಾತ್ರಿ ವೇಳೆ ಅಪಾರ್ಟ್ ಮೆಂಟ್ ಮೇಲೆ ಪಾರಿವಾಳ ಹಿಡಿಯಲು ಹೋಗಿ, ಕಾಲು ಜಾರಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವವನ್ನಪ್ಪಿರುವ ಘಟನೆ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಉಮರ್ ಫಾರೂಕ್(19) ಪ್ರಾಣ ಕಳೆದುಕೊಂಡ ಯುವಕ. ವಿದ್ಯಾರ್ಥಿಯಾಗಿದ್ದ ಉಮರ್ ಕೊರೊನಾ ಬಿಕ್ಕಟ್ಟಿನಿಂದ ಭೂಪಸಂದ್ರದ ಮನೆಯಲ್ಲೇ ಉಳಿದುಕೊಂಡಿದ್ದ. ಮನೆ ಬಳಿ ಪಾರಿವಾಳ ಸಾಕುವ ವಿಪರೀತ ಹುಚ್ಚು ಬೆಳೆಸಿಕೊಂಡಿದ್ದ. ಮನೆ ಹತ್ತಿರದ ಅಪಾರ್ಟ್ ಮೆಂಟ್ ಬಳಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪಾರಿವಾಳ ಬರುತ್ತಿದ್ದವು. ಇದನ್ನು ಮನಗಂಡು ಹೇಗಾದರೂ ಮಾಡಿ ಪಾರಿವಾಳ ಹಿಡಿಯುವ ಹಪಾಹಪಿಗೆ ಉಮರ್ ಮುಂದಾಗಿದ್ದ.

    ನಿನ್ನೆ ರಾತ್ರಿ ಸ್ನೇಹಿತರಿಗೆ ಪಾರಿವಾಳ ಹಿಡಿದುಕೊಂಡು ಬರುವುದಾಗಿ ಹೇಳಿ ಅಪಾರ್ಟ್ ಮೆಂಟ್ ಪಕ್ಕದಲ್ಲಿರುವ ಬೃಂದಾವನ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಹತ್ತಿದ್ದಾನೆ. ಅಲ್ಲಿಂದ ಪಕ್ಕದಲ್ಲಿರುವ ಅಪಾರ್ಟ್ ಮೆಂಟ್ ಗೆ ಹತ್ತುವಾಗ ಕಾಲು ಜಾರಿ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪಾಕ್‍ನಿಂದ ಬಂದ ಪಾರಿವಾಳ- ಎಫ್‍ಐಆರ್ ದಾಖಲಿಸಲು ಒತ್ತಾಯ!

    ಪಾಕ್‍ನಿಂದ ಬಂದ ಪಾರಿವಾಳ- ಎಫ್‍ಐಆರ್ ದಾಖಲಿಸಲು ಒತ್ತಾಯ!

    ಇಸ್ಲಾಮಾಬಾದ್: ಪಾಕಿಸ್ತಾನದಿಂದ ಹಾರಿಬಂದ ಪಾರಿವಾಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಗಡಿ ಭದ್ರತಾ ಪಡೆ ಒತ್ತಾಯ ಮಾಡುತ್ತಿದೆ.

    ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಒಳನುಸುಳವವರನ್ನು ಹಿಡಿದು ಪ್ರಕರಣ ದಾಖಲಿಸುವುದು ಬಿಎಸ್‍ಎಫ್ ಕೆಲಸ. ಆದರೆ ಈ ಬಾರಿ ಗಡಿ ಭದ್ರತಾ ಪಡೆ ಪಾರಿವಾಳ ಪಾಕಿಸ್ತಾನದಿಂದ ಭಾರತದೊಳಗೆ ಹಾರಿ ಬಂದಿದೆ. ಪಾರಿವಾಳದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಎಫ್‍ಐಆರ್ ದಾಖಲಿಸುವಂತೆ ಬಿಎಸ್‍ಎಫ್ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪಂಜಾಬ್ ಪೊಲೀಸ್ ಇಲಾಖೆಯ ಅಭಿಪ್ರಾಯ ಕೋರಿದ್ದಾರೆ.

    ರೊರಾವಾಲಾ ಪೋಸ್ಟ್‌ನಲ್ಲಿರುವ ಗಡಿ ಭದ್ರತಾ ಪಡೆಯ ಜವಾನನ ಭುಜದ ಮೇಲೆ ಶಂಕಿತ ಪಾರಿವಾಳವೊಂದು ತಾನೇ ತಾನಾಗಿ ಬಂದು ಕೂತಿದೆ. ಈ ಪಾರಿವಾಳದ ಕಾಲಿನಲ್ಲಿ ಸಣ್ಣ ಪೇಪರ್ ತುಂಡನ್ನು ಕಟ್ಟಲಾಗಿತ್ತು. ಈ ಪೇಪರ್ ನಲ್ಲಿ ಕೆಲ ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಈ ಪಾರಿವಾಳ ಗಡಿಯುದ್ದಕ್ಕೂ ಹಾರಾಟ ನಡೆಸಿತ್ತು. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಎಸ್‍ಎಫ್ ಸಿಬ್ಬಂದಿ ಲಿಖಿತ ಬೇಡಿಕೆಯೊಂದಿಗೆ ಪಕ್ಷಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಬಿಎಸ್‍ಎಫ್ ಪಾರಿವಾಳದ ವಿರುದ್ಧ ಎಫ್‍ಐಆರ್ ನೋಂದಾಯಿಸಲು ಒತ್ತಾಯಿಸಲಾಗಿದೆ. ಪಾರಿವಾಳವು ಪಕ್ಷಿಯಾಗಿರುವುದರಿಂದ ಅದರ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ಎಂದು ನಾನು ಭಾವಿಸುವುದಿಲ್ಲ. ಆದರೆ ಅವರ ಅಭಿಪ್ರಾಯಕ್ಕಾಗಿ ನಾವು ಈ ವಿಷಯವನ್ನು ನಮ್ಮ ಕಾನೂನು ತಜ್ಞರಿಗೆ ಹಸ್ತಾಂತರಿಸಿದ್ದೇವೆ. ಪಾರಿವಾಳದ ಕಾಲಿಗೆ ಟ್ಯಾಗ್ ಮಾಡಲಾದ ಸಂಖ್ಯೆಯನ್ನು ವಿಶ್ಲೇಷಿಸಲಾಗುತ್ತಿದ್ದು, ಗೂಢಚರ್ಯೆ ಯತ್ನಗಳನ್ನು ಶಂಕಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಪಾರಿವಾಳಗಳನ್ನು ಸೆರೆಹಿಡಿಯಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಹಿಯಾ ಹೇಳಿದ್ದಾರೆ.

  • ಕಲ್ಲಿನಿಂದ ಹೊಡೆದು ಪಕ್ಕದ್ಮನೆಯ 11 ಪಾರಿವಾಳವನ್ನ ಕೊಂದ ಯುವಕ

    ಕಲ್ಲಿನಿಂದ ಹೊಡೆದು ಪಕ್ಕದ್ಮನೆಯ 11 ಪಾರಿವಾಳವನ್ನ ಕೊಂದ ಯುವಕ

    – ಉಗಳಬೇಡ ಅಂದಿದ್ದಕ್ಕೆ ಪ್ರತೀಕಾರ

    ಲಕ್ನೋ: ಉಗಳಬೇಡ ಎಂದಿದ್ದಕ್ಕೆ ಯುವಕನೊಬ್ಬ ನೆರೆಹೊರೆಯವರಿಗೆ ಸೇರಿದ 11 ಪಾರಿವಾಳಗಳನ್ನು ಸಾಯಿಸಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಭಾಗಪತ್‍ನಲ್ಲಿ ನಡೆದಿದೆ.

    ರಾಹುಲ್ ಸಿಂಗ್ 11 ಪಾರಿವಾಳಗಳನ್ನು ಕೊಂದಿರುವ ಯುವಕ. ಈತನ ತನ್ನ ಪಕ್ಕದ ಮನೆಯ ನಿವಾಸಿ ಧರಂಪಾಲ್ ಸಿಂಗ್ ಮನೆಯ ಛಾವಣಿಯ ಮೇಲೆ ಹೋಗಿದ್ದಾನೆ. ಅಲ್ಲಿ ಪಂಜರದಲ್ಲಿದ್ದ ಹನ್ನೊಂದು ಪಾರಿವಾಳಗಳಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಪರಿಣಾಮ 11 ಪಾರಿವಾಳಗಳು ಸಾವನ್ನಪ್ಪಿವೆ.

    ಇತ್ತ ಧರಂಪಾಲ್ ಸಿಂಗ್ ಸತ್ತ ಪಾರಿವಾಳಗಳ ವಿಡಿಯೋವನ್ನು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಆರೋಪಿ ರಾಹುಲ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆರೋಪಿ ರಾಹುಲ್ ಸಿಂಗ್ ಪರಾರಿಯಾಗಿದ್ದಾನೆ.

    ರಾಹುಲ್ ಮನೆಯ ಮುಂದೆ ಉಗುಳುತ್ತಲೇ ಇರುತ್ತಿದ್ದನು. ಹೀಗಾಗಿ ನಾನು ಮನೆಯ ಮುಂದೆ ಉಗುಳಬೇಡ ಎಂದಿದ್ದೆ. ಅಲ್ಲದೇ ಕೊರೊನಾ ವೈರಸ್ ದಿನಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ ಎಂದು ಯುವಕನಿಗೆ ಹೇಳಿದ್ದೆ ಎಂದು ಧರಂಪಾಲ್ ಸಿಂಗ್ ತಿಳಿಸಿದ್ದಾರೆ.

    ರಾಹುಲ್ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಧರಂಪಾಲ್ ಸಿಂಗ್ ಒಡೆತನದ ಪಾರಿವಾಳಗಳನ್ನು ಕೊಂದಿದ್ದಾನೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದೇವೆ. ಶೀಘ್ರದಲ್ಲೇ ನಾವು ಯುವಕನನ್ನು ಬಂಧಿಸುತ್ತೇವೆ ಎಂದು ಅಧಿಕಾರಿ ಓಂಪಾಲ್ ಸಿಂಗ್ ಹೇಳಿದ್ದಾರೆ.

  • ನಿತ್ಯ ನೂರಾರು ಪಾರಿವಾಳಗಳಿಗೆ ನೀರು, ಆಹಾರ ನೀಡ್ತಿದ್ದಾರೆ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

    ನಿತ್ಯ ನೂರಾರು ಪಾರಿವಾಳಗಳಿಗೆ ನೀರು, ಆಹಾರ ನೀಡ್ತಿದ್ದಾರೆ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

    ಚಿಕ್ಕೋಡಿ(ಬೆಳಗಾವಿ): ಮಳೆಗಾಲ ಸಂದರ್ಭದಲ್ಲಿ ಪಕ್ಷಿಗಳಿಗೆ ಆಹಾರ ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿರುತ್ತೆ. ಇಂಥ ಸಂದರ್ಭದಲ್ಲಿ ನೂರಾರು ಪಾರಿವಾಳಗಳಿಗೆ ಕಾಳು ನೀಡುವ ಕೆಲಸವನ್ನ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾಡುತ್ತಿದ್ದಾರೆ.

    ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಶ್ರೀಗಳು ಬಂದರೆ ಅವರ ಸುತ್ತ ನೂರಾರು ಪಾರಿವಾಳಗಳು ಜಮಾವಣೆಗೊಳ್ಳುತ್ತವೆ. ಆ ಪಾರಿವಾಳಗಳಿಗೆ ಸ್ವಾಮಿಜಿ ಜೋಳ ಹಾಗೂ ಅಕ್ಕಿ ಕಾಳುಗಳನ್ನ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಆಹಾರ-ಹನಿ ನೀರು ಸಿಗದೆ ಪಕ್ಷಿಗಳು ಅಲೆದಾಡುವ ಮೂಕವೇದನೆ ಗಮನಿಸಿ ಸ್ವಾಮೀಜಿ ನಿತ್ಯ ಪಾರಿಜಾತ-ಗುಬ್ಬಿಗಳಿಗೆ ಅಕ್ಕಿಕಾಳು ಹಾಗೂ ನೀರಿನ ತೊಟ್ಟಿ ನಿರ್ಮಿಸಿ ಮೆರೆಯುತ್ತಿದ್ದಾರೆ.

    ನಿತ್ಯ ಆಹಾರ ಅರಸಿ ಬರುವ ನೂರಾರು ಪಾರಿವಾಳ ಹಾಗೂ ಗುಬ್ಬಿಗಳಿಗೆ ಆಹಾರ ಹಾಗೂ ನೀರಿಗಾಗಿಯೇ ಸ್ವಂತ ನೆಲೆಯೊಂದು ನಿರ್ಮಿಸಿಕೊಟ್ಟಿದ್ದಾರೆ. ಪ್ರತಿ ದಿನ ಎರಡು ಬಾರಿ ಅಕ್ಕಿಕಾಳು ಹಾಗೂ ಇನ್ನಿತರ ಧಾನ್ಯಗಳನ್ನು ತಾವೇ ಸ್ವತಃ ಪಕ್ಷಿ ನೀಡಿ ಪಕ್ಷಿಗಳ ಚಿಲಿಪಿಲಿ ಸದ್ದಿನಲ್ಲಿ ಸಂತೋಷ ಕಂಡುಕೊಳ್ಳುತ್ತಿದ್ದಾರೆ.

    ಪಕ್ಷಿಗಳಿಗೆ ತುತ್ತು ಅನ್ನ, ಕಾಳುಕಡ್ಡಿ, ನೀರು ಕೊಡುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಸ್ವಾಮೀಜಿ ಕಳೆದ 25 ವರ್ಷಗಳಿಂದಲೂ ಮಠ ಮೇಲ್ಛಾವಣಿಯಲ್ಲಿ ಧಾನ್ಯಗಳನ್ನು ಹಾಕುತ್ತಾರೆ. ಕೆಳಭಾಗದಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ಸ್ವಾಮೀಜಿ ನಿತ್ಯದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಮಠದಲ್ಲಿರುವ ಅವರ ಶಿಷ್ಯದಿಂದಿರು ಈ ಕಾರ್ಯ ಮಾಡುತ್ತಾರೆ. ನಿತ್ಯ ಕೆಲಸದ ಒತ್ತಡದ ಮಧ್ಯೆಯೂ ನೂರಾರು ಪಕ್ಷಿಗಳಿಗೆ ಪಾತ್ರೆಗಳಲ್ಲಿ ನೀರು ಇಟ್ಟು, ಕಾಳು ಹಾಕಿದ್ದಾಗಲೇ ತಾವು ಉಪಹಾರ, ಊಟ ಮಾಡುವುದು ಎಂದು ಸ್ವಾಮೀಜಿ ಅಭಿಮಾನದಿಂದ ಹೇಳುತ್ತಾರೆ.

    ಗುಬ್ಬಿ, ಪಾರಿವಾಳ ಸೇರಿದಂತೆ ಇನ್ನಿತರ ಪಕ್ಷಿಗಳಿಗೆ ಶ್ರೀಮಠವೇ ನೆಲೆಯಾಗಿಬಿಟ್ಟಿದ್ದು, ಇದಲ್ಲದೇ ಸುಮಾರು ನೂರು ಎಕರೆ ಶ್ರೀಮಠದ ಜಮೀನಿನಲ್ಲಿ ಗೋಶಾಲೆ ನಿರ್ಮಿಸಿ ಕಸಾಯಿಖಾನೆ ಸೇರುವ ನೂರಾರು ಗೋವುಗಳನ್ನು ಸಾಕಿ ಸಲಹುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನ ಸ್ವಾಮಿಜಿ ಮೆರೆದಿದ್ದಾರೆ.

  • ಜೂಜಿನ ಪಾರಿವಾಳಕ್ಕೆ ಕಿರಿಕ್- ಚರಂಡಿಯಲ್ಲಿ ಕೆಡವಿ ಯುವಕನ ಮೇಲೆ ಹಲ್ಲೆ

    ಜೂಜಿನ ಪಾರಿವಾಳಕ್ಕೆ ಕಿರಿಕ್- ಚರಂಡಿಯಲ್ಲಿ ಕೆಡವಿ ಯುವಕನ ಮೇಲೆ ಹಲ್ಲೆ

    ದಾವಣಗೆರೆ: ಜೂಜಿನ ಪಾರಿವಾಳ ವಿಚಾರಕ್ಕೆ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.

    ಶ್ರೀನಿವಾಸ್ ನಗರದ ನಿವಾಸಿ ನಟರಾಜ್ (30) ಹಲ್ಲೆಗೊಳಗಾದ ಯುವಕ. ಭಾರತ್ ಕಾಲೋನಿಯ ಸಂತೋಷ್ ಹಾಗೂ ಅವನ ಗೆಳೆಯರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಟರಾಜ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನಟರಾಜ್ ಪಾರಿವಾಳಗಳನ್ನು ಸಾಕಿ ಅವುಗಳಿಗೆ ತರಬೇತಿ ನೀಡಿ ಜೂಜಿಗೆ ಬಿಡುತ್ತಿದ್ದ. ಹೀಗಾಗಿ ಸಂತೋಷ್ ಹಾಗೂ ಆತನ ಗೆಳೆಯರು ಮದ್ಯ ಮತ್ತಿನಲ್ಲಿ ಪಾರಿವಾಳವನ್ನು ಖರೀದಿಸಲು ಇಂದು ನಟರಾಜ್ ಮನೆಗೆ ಬಂದಿದ್ದರು. ಆದರೆ ನಟರಾಜ್ ಪಾರಿವಾಳ ಮಾರಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಸಂತೋಷ್ ಗಲಾಟೆ ಆರಂಭಿಸಿದ್ದ. ಬಳಿಕ ನಟರಾಜ್‍ನನ್ನು ಚರಂಡಿಯಲ್ಲಿ ಕೂರಿಸಿ ಮನಬಂದಂತೆ ಥಳಿಸಿದ್ದಾರೆ.

    ಸ್ಥಳೀಯರು ಹಾಗೂ ನಟರಾಜ್ ಕುಟುಂಬಸ್ಥರು ಬಿಡಿಸಲು ಬಂದರೂ ಸಂತೋಷ್ ಹಾಗೂ ಆತನ ಸ್ನೇಹಿತರು ನಟರಾಜ್‍ಗೆ ಚಾಕು ಇರಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಯುವಕರು ತಮ್ಮ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಕೆಟಿಜೆ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಮೆಜೆಸ್ಟಿಕ್‍ನಲ್ಲಿ ಪಾರಿವಾಳಗಳ ವಿಹಾರ – ವಿಡಿಯೋ ನೋಡಿ

    ಮೆಜೆಸ್ಟಿಕ್‍ನಲ್ಲಿ ಪಾರಿವಾಳಗಳ ವಿಹಾರ – ವಿಡಿಯೋ ನೋಡಿ

    ಬೆಂಗಳೂರು: ಕೊರೊನಾ ವೈರೆಸ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸಂಪೂರ್ಣವಾಗಿ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಪರಿವಾಳಗಳು ಆರಾಮಾಗಿ ವಿಹಾರಿಸುತ್ತಿವೆ.

    ಹೌದು..ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸದಾ ಸಾವಿರಾರು ಜನರು ಓಡಾಡುತ್ತಿದ್ದರು. ಜೊತೆಗೆ ಬೈಕ್, ಕಾರ್, ಬಸ್ ಎಂದು ರಸ್ತೆಗಳು ಯಾವಾಗಲೂ ಜಾಮ್ ಆಗಿರುತ್ತಿತ್ತು. ಆದರೆ ಕೊರೊನಾ ಭೀತಿಯಿಂದ ಪ್ರಧಾನಿ ಮೋದಿ ಅವರು 21 ದಿನ ಲಾಕ್‍ಡೌನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಇಂದು ಸಂಪೂರ್ಣ ಸ್ತಬ್ಧವಾಗಿದೆ.

    ಆದ್ದರಿಂದ ಮೆಜೆಸ್ಟಿಕ್‍ನಲ್ಲಿ ಪಾರಿವಾಳಗಳು ವಿಹಾರಿಸುತ್ತಿವೆ. ಪಾರಿವಾಳಗಳು ವಿಹಾರಿಸುಷ್ಟೂ ಮೆಜೆಸ್ಟಿಕ್‍ನಲ್ಲಿ ಪ್ರಶಾಂತತೆ ಇದೆ. ಈ ಮೂಲಕ ಜನರ ಬದಲಿಗೆ ಪಾರಿವಾಳಗಳು ರಸ್ತೆಗಿಳಿದಿವೆ. ವಿರಳ ಸಂಖ್ಯೆಯಲ್ಲಿ ಆಟೋ ಮತ್ತು ಬೈಕ್ ಮೆಜೆಸ್ಟಿಕ್‍ನಲ್ಲಿ ಓಡಾಡುತ್ತಿವೆ.

    ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಬುಧವಾರ 51 ಇದ್ದ ಕೊರೊನಾ ಪ್ರಕರಣ ಗುರುವಾರ ದಿಢೀರನೇ 55ಕ್ಕೆ ಏರಿಕೆಯಾಗಿದೆ. ಕಳೆದ ಒಂದೇ ದಿನ ನಾಲ್ಕು ಪಾಸಿಟಿವ್ ಪ್ರಕರಣಗಳ ಪತ್ತೆಯಾಗಿವೆ. ಇದನ್ನ ಗಮನಿಸಿದರೆ ದೇಶದಲ್ಲಿ ಕೊರೊನಾ 3ನೇ ಹಂತಕ್ಕೆ ಕಾಲಿಟ್ಟಿದ್ಯಾ ಎಂಬ ಅನುಮಾನ ಮೂಡಲು ಶುರುವಾಗಿದೆ.

  • KSRTC ಇನ್ಸ್‌ಪೆಕ್ಟರ್‌ನಿಂದ ಪಾರಿವಾಳಗಳಿಗೆ 900 ರೂ. ದಂಡ

    KSRTC ಇನ್ಸ್‌ಪೆಕ್ಟರ್‌ನಿಂದ ಪಾರಿವಾಳಗಳಿಗೆ 900 ರೂ. ದಂಡ

    ಬೆಂಗಳೂರು: ಕೋಳಿಗಳಿಗೆ ಟಿಕೆಟ್ ತೆಗೆದುಕೊಂಡಿಲ್ಲ ಎಂದು ಪ್ರಯಾಣಿಕನೊಬ್ಬನಿಗೆ 100 ರೂ. ದಂಡ ಹಾಕಿದ್ದ ಕೆಎಸ್‍ಆರ್ ಟಿಸಿ ಈ ಬಾರಿ ಪಾರಿವಾಳಗಳಿಗೆ 900 ರೂ. ದಂಡ ಪ್ರಯೋಗ ಮಾಡಿದೆ.

    ಲಿಂಗಸೂರುನಿಂದ ರಾಯಚೂರುಗೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬರು, ಒಂದ್ ಬಾಕ್ಸ್ ನಲ್ಲಿ ಪಾರಿವಾಳಗಳನ್ನು ಹಿಡಿದುಕೊಂಡಿದ್ದರು. ಆದರೆ ಆ ವ್ಯಕ್ತಿ ಪಾರಿವಾಳಗಳಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ.

    ಈ ವೇಳೆ ಚೆಕ್ಕಿಂಗ್ ಮಾಡಲು ಬಂದ ಇನ್ಸ್ ಪೆಕ್ಟರ್ ಒಂದ್ ಬಾಕ್ಸ್ ಪಾರಿವಾಳಗಳಿಗೆ ಭರ್ತಿ 900 ರೂ. ಫೈನ್ ಹಾಕಿದ್ದಾರೆ. ಈ ಹಿಂದೆ ಕೋಳಿಗೆ ಟಿಕೆಟ್ ತೆಗೆದುಕೊಂಡಿದ್ದಕ್ಕೆ ವ್ಯಕ್ತಿಯೊಬ್ಬರು ಸೀಟಿನಲ್ಲಿಯೇ ಕೋಳಿಯನ್ನು ಕುಳ್ಳಿರಿಸಿದ್ದರು.

    ಸದ್ಯ ಕೆಎಸ್‍ಆರ್ ಟಿಸಿಯ ಈ ನಡೆ ಈಗ ಸಾರ್ವಜನಿಕರಲ್ಲಿ ನಗುವಿನ ಜೊತೆ ಸಿಟ್ಟು ಕೂಡ ತರಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪಾರಿವಾಳಗಳಿಗೆ ಆಶ್ರಯತಾಣವಾದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ!

    ಪಾರಿವಾಳಗಳಿಗೆ ಆಶ್ರಯತಾಣವಾದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ!

    ಚಿಕ್ಕಬಳ್ಳಾಪುರ: ವಿಧಾನಸೌಧವನ್ನೇ ಮೀರಿಸುವ ಹಾಗೆ ಸುಂದರವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ ನಿರ್ಮಾಣವಾಗಿದೆ. ಭವನದ ಒಳಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರೆ, ಭವನದ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಪಾರಿವಾಳಗಳು ಬೀಡುಬಿಟ್ಟಿವೆ.

    ಸಿಬ್ಬಂದಿ ಬಂದು ಕಚೇರಿ ತೆರೆಯುತ್ತಿದ್ದಂತೆ ಹಾರಿಬಂದು ಭವನದ ಮೇಲೆ ಸದ್ದು ಮಾಡುತ್ತವೆ. ಭವನದ ಮೇಲೆ ಇರುವ ರಾಷ್ಟ್ರಲಾಂಛನದಿಂದ ಹಿಡಿದು ಗೋಪುರಗಳ ಮೇಲೆ ಹೂವು ಪೋಣಿಸಿ ಹಾರ ಹಾಕಿದಂತೆ ಸಾಲಾಗಿ ಕುಳಿತು ಮನ ಸೆಳೆಯುತ್ತಿವೆ ಎಂದು ಸ್ಥಳೀಯ ಚಂದ್ರಶೇಖರ್ ಹೇಳಿದ್ದಾರೆ.

    ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿರುವ ಪಾರಿವಾಳಗಳನ್ನು ಯಾರೂ ಸಾಕಿಲ್ಲ. ಕಚೇರಿಗಳಲ್ಲಿ ಅವರು ಬಂದಿಲ್ಲ ಇವರು ಬಂದಿಲ್ಲ ಎಂದು ಬೇಸರದಿಂದ ಕಾಲ ಕಳೆಯುವ ಸಾರ್ವಜನಿಕರು ಪಾರಿವಾಳಗಳ ಚಿತ್ತಾರದ ಹಾರಾಟ-ಗೂಯ್ ಗುಟ್ಟುವ ಸದ್ದನ್ನ ನೋಡಿ ಬೇಸರ ಕಳೆಯುತ್ತಾರೆ. ಮತ್ತೊಂದೆಡೆ ಮುಗಿಲೆತ್ತರದ ಕಟ್ಟಡಗಳ ಮೇಲೆ ಯಾರ ಕಿರಿಕಿರಿಯೂ ಇಲ್ಲದೆ ಇರುವುದರಿಂದ ಸ್ವಚ್ಛಂದ ಸ್ವತಂತ್ರವಾಗಿ ಆಶ್ರಯಿಸುತ್ತವೆ ಎಂದು ಪಶುವೈಧ್ಯ ಡಾ.ಜ್ಞಾನೇಶ್ ತಿಳಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ, ಪಾರಿವಾಳಗಳು ನಗರ ಪ್ರದೇಶಗಳಿಂದ ಕಾಣೆಯಾಗುತ್ತಿವೆ. ಆದರೆ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮೇಲೆ ಪಾರಿವಾಳಗಳ ಪರಿವಾರವೇ ಬಿಡಾರ ಹೂಡಿದ್ದು, ಭವನದ ಮೇಲೆ ಬಾನಾಡಿ ಪಾರಿವಾಳಗಳ ಕಲರವ ನೋಡುಗರ ಮನಸೂರೆಗೊಂಡಿದೆ.