Tag: Pig

  • ಹಂದಿ ಹಿಡಿಯಲು ಬಳಸುವ ಸಿಡಿಮದ್ದು ಸ್ಫೋಟ: ಬಾಲಕನ ಎರಡು ಬೆರಳು ಕಟ್

    ಹಂದಿ ಹಿಡಿಯಲು ಬಳಸುವ ಸಿಡಿಮದ್ದು ಸ್ಫೋಟ: ಬಾಲಕನ ಎರಡು ಬೆರಳು ಕಟ್

    ಬಾಗಲಕೋಟೆ: ಹಂದಿ ಹಿಡಿಯಲು ಬಳಸುವ ಸಿಡಿಮದ್ದು ಸ್ಫೋಟಗೊಂಡು ಬಾಲಕನೊಬ್ಬನ ಎಡಗೈನ ಎರಡು ಕೈ ಬೆರಳು ಕಟ್ ಆಗಿರುವ ಘಟನೆ ಬಾಗಲಕೋಟೆ ತಾಲೂಕಿನ ದೇವನಾಳ ಗ್ರಾಮದಲ್ಲಿ ನಡೆದಿದೆ.

    9ನೇ ತರಗತಿ ವಿದ್ಯಾರ್ಥಿಯಾಗಿರುವ ಮೋಹನದಾಸ್ ಸಾಬಣ್ಣ ಹಳಮನಿಯ ಎರಡು ಕೈ ಬೆರಳು ತುಂಡಾಗಿದೆ. ಮೂಲತಃ ಬೀಳಗಿ ತಾಲೂಕಿನ ಸೊಕನಾದಗಿ ಗ್ರಾಮದವನಾದ ಮೋಹನ್ ದಾಸ್, ಕುರಿ ಮೇಯಿಸಲು ದೇವನಾಳ ಗ್ರಾಮದ ಕಡೆಗೆ ತೆರಳಿದ್ದನು. ಈ ವೇಳೆ ಹಂದಿ ಉಪಟಳ ತಗ್ಗಿಸಲು ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಹೊಲದಲ್ಲಿ ಸಿಡಿಮದ್ದನ್ನ ತಂದು ಇಟ್ಟಿದ್ದರು.

    ಕುರಿ ಮೇಯಿಸಲು ಹೋದ ಬಾಲಕ ಸಿಡಿಮದ್ದನ್ನು ಹಿಡಿದಾಗ ಸ್ಫೋಟಗೊಂಡು ಎಡಗೈನ ಎರಡು ಬೆರಳು ಕಟ್ ಆಗಿವೆ. ವಿಷಯ ತಿಳಿದ ಗ್ರಾಮಸ್ಥರು, ಗಾಯಗೊಂಡ ಬಾಲಕನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯಕ್ಕೆ ಚಿಕಿತ್ಸೆಗೆ ಸ್ಪಂದಿಸಿರುವ ಬಾಲಕ ಮೋಹನ ದಾಸ್ ಚೇತರಿಸಿಕೊಳ್ಳುತ್ತಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಂದಿ ಮಾಲೀಕರಿಗೆ ಶಾಕ್ ಕೊಡಲು ಮುಂದಾದ ಪಾಲಿಕೆ..!

    ಹಂದಿ ಮಾಲೀಕರಿಗೆ ಶಾಕ್ ಕೊಡಲು ಮುಂದಾದ ಪಾಲಿಕೆ..!

    ದಾವಣಗೆರೆ: ಜಿಲ್ಲೆಯನ್ನು ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ನಾಲ್ಕೂವರೆ ವರ್ಷವಾದ್ರೂ ಇಲ್ಲಿ ಸ್ಮಾರ್ಟ್ ಎಂಬ ಪದಕ್ಕೆ ಅರ್ಥವಿಲ್ಲದಂತಾಗಿದೆ. ಸ್ಮಾರ್ಟ್ ಸಿಟಿ ಬದಲಾಗಿ ಕೊಂಪೆಯಾಗಿ ಸಿಟಿಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಡಿವಾಣ ಹಾಕಲು ಮಹಾನಗರ ಪಾಲಿಕೆ ಆಪರೇಷನ್ ವರಾಹ ಆರಂಭಿಸಿದ್ದು, ಹಂದಿ ಮಾಲೀಕರಿಗೆ ಶಾಕ್ ಕೊಡಲು ಮುಂದಾಗಿದೆ.

    ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಟ್ಟು ನಾಲ್ಕೂವರೆ ವರ್ಷ ಕಳೆದ್ರೂ ನಗರದಲ್ಲಿ ಹಂದಿಗಳು ತುಂಬಿ ತುಳುಕುತ್ತಿವೆ. ಅಷ್ಟೇ ಅಲ್ಲದೆ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರಿಂದ ಮಹಾನಗರ ಪಾಲಿಕೆ ಆಯುಕ್ತರು ಹಂದಿಗಳನ್ನು ಹಿಡಿದು ಸ್ಥಳಾಂತರಿಸುವಂತೆ ಮಾಲೀಕರಿಗೆ ಆರೇಳು ಬಾರಿ ನೋಟಿಸ್ ನೀಡಿದ್ರು. ಆದ್ರೆ, ಮಾಲೀಕರು ತಲೆಕೆಡಿಸಿಕೊಳ್ಳದೇ ಇದ್ದಾಗ ಹಂದಿ ಸೆರೆ ಕಾರ್ಯಾಚರಣೆ ಆರಂಭಿಸಿದ್ದಾರೆ. ತಮಿಳುನಾಡಿನ ತಂಡ ಈಗಾಗಲೇ ಹಂದಿ ಹಿಡಿದು ಸ್ಥಳಾಂತರ ಮಾಡ್ತಿದೆ ಅಂತ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ತಿಳಿಸಿದ್ದಾರೆ.

    ಹಂದಿ ಮಾಲೀಕರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳು ಹಂದಿಗಳನ್ನ ಮಾರಿ ಹಣ ಲೂಟಿ ಹೊಡೀತಿದ್ದಾರೆ ಅಂತಾ ಪರಿಸರ ಪ್ರೇಮಿಯಾಗಿರುವ ಗಿರೀಶ್ ಎಸ್ ದೇವರಮನಿ ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಉದ್ದೇಶದಿಂದ ಆಪರೇಷನ್ ವರಾಹ ಜೋರಾಗಿ ನಡೀತಿದ್ದು, ಭಯದಿಂದಿದ್ದ ಓಡಾಡುತ್ತಿದ್ದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆ ಅಂಗಳದಲ್ಲಿ ಆಟವಾಡ್ತಿದ್ದ ಮಗುವಿನ ಮೇಲೆ ಹಂದಿ ದಾಳಿ!

    ಮನೆ ಅಂಗಳದಲ್ಲಿ ಆಟವಾಡ್ತಿದ್ದ ಮಗುವಿನ ಮೇಲೆ ಹಂದಿ ದಾಳಿ!

    ಕೊಪ್ಪಳ: ಮನೆ ಅಂಗಳದಲ್ಲಿ ಆಟವಾಡುವ ಸಮಯದಲ್ಲಿ ಮಗುವಿನ ಮೇಲೆ ಹಂದಿ ದಾಳಿ ಮಾಡಿರುವ ಘಟನೆ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದಿದೆ.

    ಕೊಪ್ಪಳದ ಗಂಗಾವತಿಯ ಬನ್ನಿ ಗಿಡದ ಕ್ಯಾಂಪ್‍ನಲ್ಲಿ ಈ ಘಟನೆ ಸಂಭವಿಸಿದ್ದು, 2 ವರ್ಷದ ರಿಹಾನ್ ಎಂಬ ಮಗು ಮನೆಯ ಹೊರಗಡೆ ಆಟವಾಡುತ್ತಿದ್ದಾಗ ಹಂದಿ ದಾಳಿ ಮಾಡಿ ಮಗುವನ್ನು ತೀವ್ರ ಗಾಯಗೊಳಿಸಿದೆ. ಕೂಡಲೇ ಹಂದಿಯಿಂದ ಮಗುವನ್ನು ಬಿಡಿಸಿದ ಸ್ಥಳೀಯರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಹಂದಿ ಈ ರೀತಿ ದಾಳಿ ಮಾಡುತ್ತಿರೋದು ಇದೆ ಮೊದಲಲ್ಲ, ಸಾಕಷ್ಟು ಬಾರಿ ಇಂತಹ ಘಟನೆ ನೆಡೆದಿವೆ. ಈ ಕುರಿತು ಹಲವು ಬಾರಿ ಗಂಗಾವತಿ ನಗರಸಭೆ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕ್ಯಾರೇ ಅಂದಿಲ್ಲಾ. ಇವಾಗ ಆರಿಸಿ ಬಂದಿರುವ ಹೊಸ ಕೌನ್ಸಲರ್ ಆದರೂ ಈ ಕಡೆ ಗಮನ ಹರಿಸಿ ಹಂದಿ ದಾಳಿಯಿಂದ ಮುಕ್ತಿ ಕೊಡಿಸಿ ಎಂದು ಜನರು ಆಕ್ರೋಶವನ್ನು ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಲ್‍ಮ್ಯಾನ್ ಮರ್ಮಾಂಗವನ್ನು ಕಚ್ಚಿದ ಬಿಡಾಡಿ ಹಂದಿ

    ವಾಲ್‍ಮ್ಯಾನ್ ಮರ್ಮಾಂಗವನ್ನು ಕಚ್ಚಿದ ಬಿಡಾಡಿ ಹಂದಿ

    ದಾವಣಗೆರೆ: ವಾಲ್ ಮ್ಯಾನ್ ಮೇಲೆ ಬಿಡಾಡಿ ಹಂದಿ ದಾಳಿ ಮಾಡಿ ಆತನ ಮರ್ಮಾಂಗವನ್ನು ಕಚ್ಚಿದ ಘಟನೆ ದಾವಣಗೆರೆ ನಗರದ ಜಾಲಿ ನಗರದಲ್ಲಿ ನಡೆದಿದೆ.

    ಎಚ್.ಎನ್ ಮಂಜುನಾಥ್ ಗಂಭೀರ ಗಾಯಗೊಂಡ ವಾಲ್ ಮ್ಯಾನ್. ಜಾಲಿನಗರಕ್ಕೆ ನೀರು ಬಿಡುಲು ವಾಲ್ ತಿರುಗಿಸಲು ಹೋದಾಗ ಈ ಘಟನೆ ನಡೆದಿದೆ. ಬಿಡಾಡಿ ಹಂದಿ ದಾಳಿ ಮಾಡುವಾಗ ಮಂಜುನಾಥ್ ತೊಡೆಯ ಭಾಗ ಮತ್ತು ಮರ್ಮಾಂಗವನ್ನು ಕಚ್ಚಿದೆ.

    ಸದ್ಯ ಗಾಯಗೊಂಡ ಮಂಜುನಾಥ್‍ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ದಿನೇ ದಿನೇ ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 3 ವರ್ಷದ ಮಗು ಮೇಲೆ ಹಂದಿ ದಾಳಿ!

    3 ವರ್ಷದ ಮಗು ಮೇಲೆ ಹಂದಿ ದಾಳಿ!

    ಬಾಗಲಕೋಟೆ: ಹಂದಿಯೊಂದು ಮನೆಯ ಹತ್ತಿರ ಆಟವಾಡುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿರುವ ಘಟನೆ ನಗರದ ಊಟಿ ಸಾಬನ್ನವರ್ ಓಣಿಯಲ್ಲಿ ನಡೆದಿದೆ.

    ಚಂದ್ರ ವಾಲೀಕಾರ್(3) ದಾಳಿಗೊಳಗಾದ ಮಗುವಾಗಿದೆ. ಬುಧವಾರ ನಗರದ ಊಟಿ ಸಾಬನ್ನವರ ಓಣಿಯ ಮನೆಯ ಹತ್ತಿರ ಮಗು ಆಟವಾಡುತ್ತಿದ್ದಾಗ ಏಕಾಏಕಿ ಹಂದಿಗಳ ಹಿಂಡು ದಾಳಿ ನಡೆಸಿವೆ. ದಾಳಿ ವೇಳೆ ಮಗುವಿನ ಕಣ್ಣಿನ ಭಾಗ ಸೇರಿದಂತೆ ಮುಖ ಹಾಗೂ ಕೈಕಾಲುಗಳನ್ನು ಕಚ್ಚಿ ಗಾಯಗೊಳಿಸಿವೆ.

    ಇದನ್ನು ಕಂಡ ಸ್ಥಳೀಯರು ಹಂದಿಗಳ ಹಿಂಡನ್ನು ಓಡಿಸಿ, ಮಗುವನ್ನು ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಗುವಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.

    ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ನಗರಸಭೆಯವರು ಈ ಕುರಿತು ಸೂಕ್ತ ಕ್ರಮ ಕೈಗೊಂಡು ನಗರದಿಂದ ಹೊರಕ್ಕೆ ಹಾಕಬೇಕೆಂದು ಆಗ್ರಹಿಸಿದ್ದಾರೆ.

  • ಆನೆಯನ್ನು ಹೋಲುವ ಮರಿಗೆ ಜನ್ಮ ನೀಡಿದ ಹಂದಿ!

    ಆನೆಯನ್ನು ಹೋಲುವ ಮರಿಗೆ ಜನ್ಮ ನೀಡಿದ ಹಂದಿ!

    ಮಡಿಕೇರಿ: ಈ ಸೃಷ್ಟಿ ತನ್ನೊಡಲಲ್ಲಿ ಅದ್ಯಾವ ವಿಚಿತ್ರವನ್ನು ಅಡಗಿಸಿಟ್ಟುಕೊಂಡಿದೆಯೋ ಗೊತ್ತಿಲ್ಲ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕಾಲೋನಿಯೊಂದರಲ್ಲಿ ಸಾಕಿದ ಹಂದಿಯೊಂದು ಆನೆಯನ್ನು ಹೋಲುವ ಮರಿಗೆ ಜನ್ಮ ನೀಡುವ ಮೂಲಕ ಆಶ್ಚರ್ಯ ಸೃಷ್ಟಿಸಿದೆ.

    ಕಾಲೋನಿ ನಿವಾಸಿ ಕುಳ್ಳ ಎಂಬವರ ಮನೆಯ ಹಂದಿ ಈ ವಿಚಿತ್ರ ಪ್ರಾಣಿಗೆ ಜನ್ಮ ನೀಡಿದೆ. ಮರಿ ಜನ್ಮ ಪಡೆಯುತ್ತಿದಂತೆ ಮೃತಪಟ್ಟಿದ್ದು ಕಿವಿ, ಸೊಂಡಿಲುಗಳಿದ್ದು ಮುಖದ ಭಾಗ ಆನೆಯನ್ನು ಹೋಲುತ್ತಿತ್ತು.

    ಹಂದಿ 12 ಮರಿಗಳಿಗೆ ಜನ್ಮ ನೀಡಿದ್ದು ಒಂದು ಮರಿ ಈ ರೀತಿ ಜನ್ಮ ಪಡೆದಿದ್ದು ಮೃತಪಟ್ಟಿದೆ.

  • ಹೊಸ ಆದಾಯದ ಮೂಲ ಕಂಡುಕೊಂಡ ಬಿಬಿಎಂಪಿ- ಹಂದಿ ಹಿಡಿಯಲು ಗುತ್ತಿಗೆ ನೀಡಿ 5 ಸಾವಿರ ರೂ. ಲಾಭ

    ಹೊಸ ಆದಾಯದ ಮೂಲ ಕಂಡುಕೊಂಡ ಬಿಬಿಎಂಪಿ- ಹಂದಿ ಹಿಡಿಯಲು ಗುತ್ತಿಗೆ ನೀಡಿ 5 ಸಾವಿರ ರೂ. ಲಾಭ

    ಬೆಂಗಳೂರು: ಆಸ್ತಿ ತೆರಿಗೆ, ಸರ್ಕಾರಗಳಿಂದ ಬರುವ ಅನುದಾನ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಮೂಲಕ ಸಾವಿರಾರು ಕೋಟಿ ಆದಾಯ ಗಳಿಸಿರುವ ಬಿಬಿಎಂಪಿಗೆ ಇದೀಗ ಹೊಸದೊಂದು ಆದಾಯದ ಮೂಲ ಸೇರ್ಪಡೆಗೊಂಡಿದೆ. ಅದೇ ಹಂದಿ ಮಾಂಸ ಮಾರಾಟ.

    ಹೌದು. ಹಂದಿ ಮಾಂಸ ಮಾರಾಟದ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಐದು ಸಾವಿರ ರೂಪಾಯಿ ಆದಾಯ ಬಂದಿದೆಯಂತೆ. ಬೆಂಗಳೂರಿನಲ್ಲಿರೋ ಇಲಿ ಹಿಡಿಯೋಕೆ, ನಾಯಿ ಹಿಡಿಯೋಕೆ ಕೋಟಿ ಕೋಟಿ ಖರ್ಚು ಮಾಡಿ ಬಿಬಿಎಂಪಿ ಹಣವನ್ನು ನಷ್ಟ ಮಾಡೋ ಅಧಿಕಾರಿಗಳು, ಇದೀಗ ಬೆಂಗಳೂರಿನಲ್ಲಿರೋ ಬಿಡಾಡಿ ಹಂದಿಗಳನ್ನು ಹಿಡಿಯೋ ಮೂಲಕ ಬಿಬಿಎಂಪಿಗೆ ಮತ್ತೊಂದು ಆದಾಯ ಮೂಲ ಹುಡುಕಿದ್ದಾರೆ.

    ಜನರಿಗೆ ತೊಂದರೆ ಕೊಡುವ ಬಿಡಾಡಿ ಹಂದಿಗಳನ್ನು ಹಿಡಿಯಲು ಬಿಬಿಎಂಪಿ ಗುತ್ತಿಗೆ ನೀಡಿತ್ತು. ಅದರಂತೆ ಈ ವರ್ಷದಲ್ಲಿ 36 ಹಂದಿಗಳನ್ನು ಹಿಡಿಯಲಾಗಿದೆ. ಆ ಎಲ್ಲ ಹಂದಿಗಳ ತೂಕ 460 ಕೆ.ಜಿ.ಗಳಾಗಿದ್ದು, ಪ್ರತಿ ಕೆ.ಜಿ.ಗೆ 45 ರೂ.ಗಳಂತೆ ಮಾರಾಟ ಮಾಡಲಾಗಿದೆ. ಹಂದಿ ಮಾರಾಟದಿಂದಾಗಿ ಬಿಬಿಎಂಪಿಗೆ 23,000 ರೂ. ಆದಾಯ ಬಂದಿದೆ. ಅದರಲ್ಲಿ ಹಂದಿ ಹಿಡಿದಿದಕ್ಕಾಗಿ ಪ್ರತಿ ಹಂದಿಗೆ 500 ರೂ.ಗಳಂತೆ ಗುತ್ತಿಗೆದಾರರಿಗೆ 18 ಸಾವಿರ ರೂ.ಗಳನ್ನು ಪಾವತಿಸಲಾಗಿದೆ. ಅದರಿಂದಾಗಿ ಬಿಬಿಎಂಪಿಗೆ 5 ಸಾವಿರ ರೂ. ಉಳಿದಿರೋದಾಗಿ ಅಧಿಕಾರಿಗಳು ಲೆಕ್ಕ ನೀಡಿದ್ದಾರೆ.

    2017-18ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳವರೆಗೆ ಹಂದಿಗಳ ಕಾಟಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ಬಂದಿದ್ದ 36 ದೂರುಗಳು ಪೈಕಿ 15 ದೂರುಗಳನ್ನ ಅಟೆಂಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

  • ರೈತನ ಮೇಲೆ ಕಾಡು ಹಂದಿಯ ಭಯಾನಕ ಅಟ್ಯಾಕ್: ವಿಡಿಯೋ ವೈರಲ್

    ರೈತನ ಮೇಲೆ ಕಾಡು ಹಂದಿಯ ಭಯಾನಕ ಅಟ್ಯಾಕ್: ವಿಡಿಯೋ ವೈರಲ್

    ಕಲಬುರಗಿ: ಜಿಲ್ಲೆಯಲ್ಲಿ ಕಾಡು ಹಂದಿಯೊಂದು ರೈತನ ಮೇಲೆ ಭಯಾನಕವಾಗಿ ಅಟ್ಯಾಕ್ ಮಾಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚಿಂಚೋಳಿ ತಾಲೂಕಿನ ಸಿರೋಳಿ ತಾಂಡಾದಲ್ಲಿ ಈ ಘಟನೆ ಒಂದು ವರ್ಷದ ಹಿಂದೆ ನಡೆದಿದೆ. ತಾರಾಸಿಂಗ್ ಎಂಬ ರೈತ ಸುಮಾರು 10 ರಿಂದ 15 ನಿಮಿಷ ಕಾಡು ಹಂದಿಯೊಂದಿಗೆ ಸೆಣಿಸಿದ್ದಾರೆ. ರೈತ ಸಹಾಯಕ್ಕಾಗಿ ಅಂಗಲಾಚಿದ್ದರು ಯಾರು ಮುಂದೆ ಬಂದಿರಲಿಲ್ಲ. ಆದರೆ ರೈತನನ್ನು ಅಲ್ಲಿರುವ ಶ್ವಾನಗಳ ಗುಂಪು ರಕ್ಷಣೆ ಮಾಡಿದೆ.

    ಈ ದೃಶ್ಯವನ್ನು ಪಕ್ಕದ ಜಮೀನಿನಲ್ಲಿದ್ದ ರೈತರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    https://www.youtube.com/watch?v=fpq3b7wCTWk