Tag: pictures

  • ತಮ್ಮದೆ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ ನೀಡಿದ ಚಿತ್ರಕಲಾ ವಿದ್ಯಾರ್ಥಿಗಳು

    ತಮ್ಮದೆ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ ನೀಡಿದ ಚಿತ್ರಕಲಾ ವಿದ್ಯಾರ್ಥಿಗಳು

    ಚಿತ್ರದುರ್ಗ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಹಿರಿಯೂರು ತಾಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಎಂಬಂತೆ ಬೀಗುತ್ತಿದೆ. ಶಿಕ್ಷಣ ಸೌಲಭ್ಯ, ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಂತೆ ಎಲ್ಲಾ ಆಯಾಮದಲ್ಲಿ ಶಾಲೆ ಪೈಪೋಟಿ ನೀಡುತ್ತಿದ್ದು, ಈಗ ತನ್ನ ವಿಶೇಷ ಆಕರ್ಷಕ ಸೊಬಗಿನಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

    ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಗೆ ಸುಮಾರು 50 ಜನ ಚಿತ್ರಕಲಾ ವಿದ್ಯಾರ್ಥಿಗಳು ಬೆಂಗಳೂರಿನಿಂದ ಇಂದು ಆಗಮಿಸಿದ್ದು ಬಣ್ಣದ ಮೆರೆಗು ನೀಡಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯು ಇಲ್ಲಿಯವರಿಗೂ ಸುಮಾರು 150 ಸರ್ಕಾರಿ ಶಾಲೆಗೆ ಬಣ್ಣದ ಮೆರಗು ನೀಡಿದೆ. ಈಗ 151ನೇ ಸರ್ಕಾರಿ ಶಾಲೆಯಾಗಿ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ತಂಡ ಭೇಟಿ ನೀಡಿದೆ.

    ಸುಮಾರು 50 ಜನ ಚಿತ್ರಕಲಾ ವಿದ್ಯಾರ್ಥಿಗಳು ಬಂದಿದ್ದು, ಶಾಲೆಯ ಗೊಡೆಯ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸುವ ಮೂಲಕ ಶಾಲೆಗೆ ಮೆರಗು ನೀಡಿದ್ದಾರೆ. ಎಲ್‍ಕೆಜಿ, ಯುಕೆಜಿ ತರಗತಿಯಿಂದ ಏಳನೇ ತರಗತಿಯ ಮಕ್ಕಳಿಗೆ ಹೂವು, ತರಕಾರಿ, ಹಣ್ಣು, ಆಟಿಕೆ ವಸ್ತುಗಳು, ಪ್ರಾಣಿ-ಪಕ್ಷಿ, ನದಿ ಸರೋವರ, ಬೆಟ್ಟಗುಡ್ಡಗಳ ಚಿತ್ರವನ್ನು ಚಿತ್ರಕಲಾ ವಿದ್ಯಾರ್ಥಿಗಳು ಬಿಡಿಸಿದ್ದಾರೆ. ಚಿತ್ರದುರ್ಗದ ಕೋಟೆ, ಗಾಂಧಿಜೀ, ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಹೀಗೆ ಅನೇಕ ಶ್ರೇಷ್ಠ ಸಾಧಕ ಭಾವಚಿತ್ರವನ್ನು ಎಂಟನೇ ತರಗತಿಯಿಂದ 10ನೇ ತರಗತಿಯ ಕೊಠಡಿಯಲ್ಲಿ ಬಿಡಿಸಲಾಗಿದೆ.

    ಈ ಚಿತ್ರಕಲಾ ವಿದ್ಯಾರ್ಥಿಗಳು ಬೆಂಗಳೂರು ಯೂನಿವರ್ಸಿಟಿ, ಚಿತ್ರಕಲಾ ಪರಿಷತ್, ಕಲಾಮಂದಿರ ಬೆಂಗಳೂರು, ದಾವಣಗೆರೆ ವಿದ್ಯಾರ್ಥಿಗಳು ಬಂದಿದ್ದಾರೆ. ಇವರು ಬೇರೆ ಬೇರೆ ಕಡೆ ವಿದ್ಯಾಭ್ಯಾಸ ಮಾಡಿ ಬಂದಿದ್ದು, ಈಗಾಗಲೇ ಹಾಸನ ಬೆಂಗಳೂರು ದಾವಣಗೆರೆ ಮೈಸೂರು ರಾಜ್ಯದ ವಿವಿಧ ಕಡೆ ಶಾಲೆಗಳಿಗೆ ಭೇಟಿ ಕೊಟ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಯಾವುದೇ ಹಣವನ್ನು ಪಡೆಯುದೇ ಅವರ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗಳಿಗೆ ಮಾತ್ರ ನಾವು ಈ ರೀತಿಯಾದ ಚಿತ್ರಗಳನ್ನು ಬರೆಯುತ್ತಿರುವುದಾಗಿ ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.

    ಕೆಲವು ಶಾಲೆಗಳಿಗೆ ಅಲ್ಲಿನ ಗ್ರಾಮಸ್ಥರು ಸಹ ಬಣ್ಣದ ವ್ಯವಸ್ಥೆ ಮಾಡಿರುತ್ತಾರೆ. ಅದರ ಜೊತೆಗೆ ನಾವು ಕೂಡ ಒಂದಿಷ್ಟು ಹಣವನ್ನು ಹಾಕಿ ಬಣ್ಣವನ್ನ ತೆಗೆದುಕೊಂಡು ಚಿತ್ರವನ್ನು ಬಿಡಿಸುತ್ತೇವೆ. ನಾವು ಓದಿದ ಸೇವೆಗೋಸ್ಕರ ಹೀಗೊಂದು ಸರ್ಕಾರಿ ಶಾಲೆಗಳಲ್ಲಿ ಚಿತ್ರ ಬರೆಯುತ್ತಿದ್ದೇವೆ. ಸಮಾಜಕ್ಕೆ ಸಂದೇಶವನ್ನು ಕೊಡುವಂತ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬಾಗಿಲು ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಶ್ರಮಿಸುತ್ತಿದ್ದೇವೆ ಎಂದು ಚಿತ್ರಕಲಾ ವಿದ್ಯಾರ್ಥಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರು ಹಾಗೂ ಸರ್ಕಾರಿ ಶಾಲೆ ಶಿಕ್ಷಕರು ಫುಲ್ ಫಿದಾ ಆಗಿದ್ದಾರೆ.

  • ಬಲೂನ್‍ಗಿಂತ ಮುದ್ದಾದ ಮಗು ಜೊತೆ ವೀಕೆಂಡ್ ಕಳೆದ ನುಸ್ರತ್ ಜಹಾನ್

    ಬಲೂನ್‍ಗಿಂತ ಮುದ್ದಾದ ಮಗು ಜೊತೆ ವೀಕೆಂಡ್ ಕಳೆದ ನುಸ್ರತ್ ಜಹಾನ್

    ಕೋಲ್ಕತ್ತಾ: ಜನಪ್ರಿಯ ನಟಿ, ಸಂಸದೆ ನುಸ್ರತ್ ಜಹಾನ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುತ್ತಾರೆ. ತಮ್ಮ ಪತಿ ಜೊತೆಗಿರುವ ಫೋಟೊಗಳನ್ನು ಹೆಚ್ಚು ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದ ನುಸ್ರತ್ ಜಹಾನ್, ಈ ಬಾರಿ ಬಲೂನು ಮಾರುವ ಚಿಕ್ಕ ಹುಡುಗನ ಫೋಟೋ ಹಾಕುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಮಗುವಿನೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ನುಸ್ರತ್ ಇನ್‍ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು ಒಂದೂವರೆ ವರ್ಷದ ಮಗು ರಸ್ತೆ ಬದಿಯಲ್ಲಿ ಬಲೂನು ಮಾರುತ್ತಿರುವ ಕುರಿತು ಗಮನ ಹರಿಸಿದ್ದಾರೆ. ಈ ವಿಶೇಷ ವ್ಯಕ್ತಿ ನನ್ನ ವಾರಾಂತ್ಯವನ್ನು ಸುಂದರವಾಗಿಸಿದ್ದಾನೆ. ಒಂದೂವರೆ ವರ್ಷದ ಈ ಪುಟ್ಟ ಮಗು ರಸ್ತೆ ಬದಿಯಲ್ಲಿ ಬಲೂನು ಮಾರುತ್ತದೆ. ಬಲೂನ್ ಗಳಿಗಿಂತ ಮಗು ಕ್ಯೂಟ್ ಮತ್ತು ಕಲರ್ ಫುಲ್ ಆಗಿದ್ದಾನೆ ಎಂದು ಬರೆದು ಲವ್ ಫಾರ್ ಆಲ್ ಹಾಗೂ ಲವ್ ಇಸ್ ದಿ ಓನ್ಲಿ ಲಾಂಗ್ವೇಜ್ ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

    ಇನ್‍ಸ್ಟಾಗ್ರಾಂ ನಲ್ಲಿ ಈ ಪೋಸ್ಟ್ ಹಾಕುತ್ತಿದ್ದಂತೆ ಹಲವರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಬಹುತೇಕರು ಹಾರ್ಟ್ ಎಮೋಜಿ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೊಬ್ಬರು ಕಮೆಂಟ್ ಮಾಡಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ನಿಮ್ಮ ಮುಖದಂತೆ ನಿಮ್ಮ ಹೃದಯ ಸಹ ಸುಂದರ ಎಂದು ಬರೆದಿದ್ದಾರೆ.

    ನುಸ್ರತ್ ಜಹಾನ್ ಅವರು ಕೋಲ್ಕತ್ತಾ ಮೂಲಕ ಉದ್ಯಮಿ ನಿಖಿಲ್ ಜೈನ್ ಅವರನ್ನು ಜೂನ್ 19ರಂದು ವಿವಾಹವಾಗಿದ್ದಾರೆ. ತೃಣಮೂಲ ಕಾಂಗ್ರೆಸ್ಸಿನ ಸಂಸದೆಯಾಗಿ ಜೂನ್ 25ರಂದು ಪ್ರಮಾಣವಚನ ಸ್ವೀಕರಿಸಿದ ನಂತರ ನುಸ್ರತ್ ಹೆಚ್ಚು ಸುದ್ದಿಯಲ್ಲಿದ್ದಾರೆ.

    ನುಸ್ರತ್ ಜಹಾನ್ ಅವರು ಸಂಸತ್‍ನಲ್ಲಿ ಪ್ರಮಾಣ ಸ್ವೀಕರಿಸುವಾಗ ಹಣೆಗೆ ಕುಂಕುಮವಿಟ್ಟು, ಬಳೆ ಹಾಕಿಕೊಂಡಿದ್ದರು. ಇದಕ್ಕಾಗಿ ಹೆಚ್ಚು ಜನ ಟ್ರೋಲ್ ಮಾಡಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿದ್ದ ನುಸ್ರತ್, ನಾನು ಆಂತರ್ಯದ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ತಿರುಗೆಟು ನೀಡಿದ್ದರು.

     

    View this post on Instagram

     

    Navami Nites with @nikhiljain09 ????#firstdurgapuja

    A post shared by Nusrat (@nusratchirps) on

    ಇದಾದ ನಂತರ ತಮ್ಮ ಪತಿ ಹಾಗೂ ಕುಟುಂಬಸ್ಥರೊಂದಿಗೆ ತೆರಳಿ ದುರ್ಗಾ ಪೂಜೆಯನ್ನು ನೆರವೇರಿಸುವ ಮೂಲಕ ಹೆಚ್ಚು ಸುದ್ದಿಯಾಗಿದ್ದರು. ದುರ್ಗಾ ಪೂಜೆಯ ಪೆಂಡಾಲಿಗೆ ಭೇಟಿ ನೀಡಿದ್ದಕ್ಕಾಗಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಾವುದಕ್ಕೂ ನುಸ್ರತ್ ಅವರು ಸೊಪ್ಪು ಹಾಕದೆ, ತಕ್ಕ ಉತ್ತರ ನೀಡಿದ್ದರು.

  • ಪ್ರಧಾನಿ ಮೋದಿಯ ಅಪರೂಪದ 3,000 ಚಿತ್ರಗಳ ಸಂಗ್ರಾಹಾಲಯ

    ಪ್ರಧಾನಿ ಮೋದಿಯ ಅಪರೂಪದ 3,000 ಚಿತ್ರಗಳ ಸಂಗ್ರಾಹಾಲಯ

    -ಯಕ್ಷಗಾನ, ಕ್ರಿಕೆಟ್ ಆಟಗಾರ, ಕಾರ್ಟೂನ್ ಚಿತ್ರದಲ್ಲಿ ಮೋದಿ ಮಿಂಚಿಂಗ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಲಾವಿದರೊಬ್ಬರು ಮೋದಿಯ ಅಪರೂಪದ ಹಾಗೂ ಬಗೆ ಬಗೆಯ 3000 ಚಿತ್ರಗಳನ್ನು ಸಂಗ್ರಹಿಸಿದ ಅಭಿಮಾನ ಮೆರೆದಿದ್ದಾರೆ.

    ಯಲ್ಲಾಪುರ ತಾಲೂಕಿನ ಕಲಾವಿದರಾಗಿರುವ ಜಾಲಿಮನೆ ವೆಂಕಣ್ಣ ಅವರು ಚಿಕ್ಕ ವಯಸ್ಸಿನಿಂದಲೇ ಕಲೆ ಬಗ್ಗೆ ಒಲವು ಹೊಂದಿದ್ದು, ಕಲಾಕೃತಿ ರಚನೆ ಸಂಗ್ರಹಣೆ ಮಾಡುವುದೇ ಹವ್ಯಾಸವಾಗಿದೆ. ಮೋದಿ ಮೇಲಿನ ಇವರ ಅಭಿಮಾನದಿಂದ ಕಳೆದ ಎಂಟು ತಿಂಗಳಿಂದ ಮೋದಿ ಅವರ ಭಾವ ಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುವ ಕೆಲಸ ಮಾಡ್ತಿದ್ದಾರೆ. ಮೋದಿಯವರನ್ನು ನೇರವಾಗಿ ನೋಡದಿದ್ದರೂ ಅವರ ಕಾರ್ಯ ಸಾಧನೆಯನ್ನು ನೋಡಿ ವೆಂಕಣ್ಣ ಅವರು ಅಭಿಮಾನಿಯಾಗಿದ್ದಾರೆ.

    ಮೋದಿ ಮೇಲಿನ ಅಭಿಮಾನಕ್ಕೆ ವೆಂಕಣ್ಣ ಪ್ರಧಾನಿಯ ಪ್ರತಿಯೊಂದು ಪೋಟೋಗಳನ್ನು ಸಂಗ್ರಹಿಸಿ ಮನೆಯನ್ನೇ ಮೋದಿ ಭಾವಚಿತ್ರಗಳ ಕಲಾ ಸಂಗ್ರಹಾಲಯವನ್ನಾಗಿಸಿ ಅಭಿಮಾನ ಮೆರೆದಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾಗುವ ಮೋದಿ ಭಾವಚಿತ್ರದಿಂದ ಹಿಡಿದು ಮಲೆನಾಡ ಕಲೆ ಯಕ್ಷಗಾನ, ಕ್ರಿಕೆಟ್ ಆಟಗಾರ, ಕಾರ್ಟೂನ್ ಸೇರಿದಂತೆ ಹಲವು ರೂಪದಲ್ಲಿ ಮೋದಿಯನ್ನು ಅವರು ಚಿತ್ರಿಸುವ ಕೆಲಸ ಮಾಡಿದ್ದಾರೆ. ಮೋದಿಯ ಬಾಲ್ಯದ ಚಿತ್ರಗಳಿಂದ ಹಿಡಿದು ನಾನಾ ವೇಷದಲ್ಲಿ ಕಂಗೊಳಿಸುವ ಬಗೆ, ಬಗೆ ಬಂಗಿಯ ಚಿತ್ರಗಳನ್ನ ಅವರು ಸಂಗ್ರಹಿಸಿದ್ದಾರೆ.

    ಮೋದಿಯ ಚಿತ್ರ ಎಲ್ಲೇ ಕಂಡರೂ ತಂದು ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ರಟ್ಟಿನಲ್ಲಿ ಲ್ಯಾಮಿನೇಷನ್ ಮಾಡಿ ಇಡುತ್ತಿದ್ದಾರೆ. ಹೀಗೆ ಬರೋಬ್ಬರಿ 3000 ಕ್ಕೂ ಹೆಚ್ಚು ಸಂಗ್ರಹಿಸಿದ್ದು, ಇವುಗಳನ್ನು ತಮ್ಮ ಮನೆಯ ತುಂಬಾ ನೀಟಾಗಿ ಜೋಡಣೆ ಮಾಡಿ ಮೋದಿ ಭಾವಚಿತ್ರಗಳನ್ನು ಮನೆಗೆ ಬರುವವರಿಗೆಲ್ಲ ತೋರಿಸಿ ಮೋದಿಯ ಜೀವನ ಹಾಗೂ ಸಾಧನೆಗಳನ್ನು ತಿಳಿಸುವ ಕೆಲಸ ಮಾಡ್ತಿದ್ದಾರೆ. ಅಲ್ಲದೇ ಸಂಬಂಧಿಕರ ಮದುವೆ, ಮುಂಜಿಗಳಂದು ಅಶ್ವಥ ಎಲೆ ಮೇಲೆ ಮೋದಿ ಚಿತ್ರ ಬಿಡಿಸಿ ಉಡುಗರೆ ನೀಡಿ ಅಭಿಮಾನ ತೋರುತ್ತಿದ್ದಾರೆ.

    ಅಶ್ವಥ ಮರಕ್ಕೆ ಧಾರ್ಮಿಕವಾದ ಮಹತ್ವವಿದೆ ತ್ರಿಮೂರ್ತಿಗಳ ಸಂಗಮ ಅಶ್ವಥ ಎಲೆ. ಸನ್ಯಾಸಿಯಾದ ಮೋದಿಯನ್ನ ನೋಡಿದಾಗ ದೇಶಾಭಿನ ಜಾಗೃತ ಆಗುತ್ತೆ. ಈ ಹಿನ್ನೆಲೆಯಲ್ಲಿ ಮೋದಿಯನ್ನ ಅಶ್ವಥ ಎಲೆಯಲ್ಲಿ ಸಂಗ್ರಹಿಸುವ ಮನಸ್ಸು ಬಂತು ಎಂದು ಕಲಾವಿದ ವೆಂಕಣ್ಣ ಹೇಳಿದ್ದಾರೆ.

    ಇನ್ನು  ಮೋದಿಯ ವಿಶೇಷ ಚಿತ್ರಗಳ ಸಂಗ್ರಹ ನೋಡಲು ಸುತ್ತ ಮುತ್ತಲಿನ ಜನರೂ ಮುಗಿಬೀಳುತ್ತಿದ್ದಾರೆ, ಮೋದಿ ಚಿತ್ರ ಸಂಗ್ರಹ ನೋಡಿ ಖುಷಿಪಡುವ ಜನರು ವೆಂಕಣ್ಣ ಅವರು ಮೋದಿ ಬಗ್ಗೆ ಇಟ್ಟಿರುವ ಅಪಾರ ಭಕ್ತಿ, ಪ್ರೀತಿಯನ್ನು ಮೆಚ್ಚಿದ್ದಾರೆ.

  • ಜಿಂಕೆಮರಿಯನ್ನ ಬೇಟೆಯಾಡದೆ ಅದರ ಆರೈಕೆಯಲ್ಲಿ ತೊಡಗಿತು ಸಿಂಹಿಣಿ- ಇಲ್ಲಿದೆ ಕಾರಣ

    ಜಿಂಕೆಮರಿಯನ್ನ ಬೇಟೆಯಾಡದೆ ಅದರ ಆರೈಕೆಯಲ್ಲಿ ತೊಡಗಿತು ಸಿಂಹಿಣಿ- ಇಲ್ಲಿದೆ ಕಾರಣ

    ವಿಂಡ್‍ಹೋಕ್: ಸಾಮಾನ್ಯವಾಗಿ ಈ ಫೋಟೋಗಳನ್ನ ನೋಡಿದಾಗ ಸಿಂಹಿಣಿ ಜಿಂಕೆಯನ್ನ ಬೇಟೆಯಾಡಲು ಹಿಡಿದುಕೊಂಡಿದೆ ಎಂದು ಅನ್ನಿಸಬಹುದು. ಆದ್ರೆ ಇದರ ಹಿಂದೆ ಒಂದು ಮನಮುಟ್ಟುವ ಕಥೆಯಿದೆ.

    ಸಿಂಹಿಣಿ ಜಿಂಕೆಮರಿಯ ತಲೆಯನ್ನ ನೆಕ್ಕುತ್ತಾ, ಅದನ್ನ ಆರೈಕೆ ಮಾಡುತ್ತಾ ಮರಿಯ ರಕ್ಷಣೆಗೆ ನಿಂತಿರೋದನ್ನ ಫೋಟೋಗಳಲ್ಲಿ ಕಾಣಬಹುದು. ನೈಋತ್ಯ ಆಫ್ರಿಕಾದ ನಮೀಬಿಯಾದ ಇಟೋಶಾ ಪ್ಯಾನ್ ಗೇಮ್ ರಿಸರ್ವ್ ನಲ್ಲಿ ಈ ದೃಶ್ಯವನ್ನು ಕಂಡು ಅಮೆರಿಕದ ಫೋಟೋಗ್ರಾಫರ್ ಗೋರ್ಡನ್ ಡೊನೋವ್ಯಾನ್ ಆಶ್ಚರ್ಯಚಕಿತರಾಗಿದ್ರು. ಡೊನೋವ್ಯಾನ್ ಸಿಂಹಿಣಿ ಹಾಗೂ ಜಿಂಕೆಮರಿ ನಡುವಿನ ಈ ಅಪೂರೂಪದ ಬಾಂಧವ್ಯವನ್ನ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

    ವಿರೋಧಿ ತಂಡದ ಸಿಂಹವೊಂದು ಸಿಂಹಗಳ ಗುಂಪನ್ನ ಆಕ್ರಮಿಸಿಕೊಂಡ ಬಳಿಕ ಸಿಂಹಿಣಿಯ ಎರಡು ಗಂಡು ಮರಿಗಳನ್ನ ಕೊಂದುಹಾಕಿತ್ತು. ಇದರಿಂದ ದುಃಖದಲ್ಲಿದ್ದ ಸಿಂಹಿಣಿ, ಜಿಂಕೆ ಮರಿಯನ್ನ ತನ್ನ ಮರಿಯಂತೆಯೇ ಆರೈಕೆ ಮಾಡ್ತಿದೆ ಅಂತ ಗೋರ್ಡನ್ ಅವರಿಗೆ ಇಲ್ಲಿನ ಗೈಡ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಜಿಂಕೆಗಳು ಸಿಂಹಗಳಿಗೆ ಆಹಾರ. ಆದ್ರೆ ದುಃಖದಲ್ಲಿರುವ ಸಿಂಹಿಣಿ ಜಿಂಕೆಮರಿಯನ್ನ ಕೊಲ್ಲೋ ಬದಲು ಅದನ್ನ ದತ್ತು ಪಡೆದು ಆರೈಕೆ ಮಾಡ್ತಿದೆ.

    ಇದೊಂದು ವಿಚಿತ್ರ ಆದರೂ ಆಶ್ಚರ್ಯಕರ ದೃಶ್ಯವಾಗಿತ್ತು. ಸಿಂಹಿಣಿ ಜಿಂಕೆಮರಿಯನ್ನ ಕೊಂದುಬಿಡುತ್ತದೆ ಎಂದು ನಾನು ಕಾಯುತ್ತಿದ್ದೆ, ಆದ್ರೆ ಅದು ಆಗಲೇ ಇಲ್ಲ. ಸಿಂಹಿಣಿ ಬಂದು ಜಿಂಕೆಮರಿಯ ತಲೆಯನ್ನ ಸವರಲು ಶುರು ಮಾಡಿತು. ಪ್ರಕೃತಿಯ ನಿಗೂಢವೇ ಇಂಥದ್ದು. ಮುಂದೆ ಏನಾಗುತ್ತದೆ ಎಂದು ತಿಳಿಯಲು ಸಾಧ್ಯವಾಗಲ್ಲ ಎಂದು ಗೋರ್ಡನ್ ಹೇಳಿದ್ದಾರೆ.

    ಗೋರ್ಡನ್ ಈ ದೃಶ್ಯವನ್ನ ಸುಮಾರು 2 ಗಂಟೆಗಳ ಕಾಲ ವೀಕ್ಷಿಸಿದ್ದಾಗಿ ಹೇಳಿದ್ದಾರೆ.