Tag: pia bajpiee

  • ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್ ನಟಿ ಸಹೋದರ ಕೊರೊನಾಗೆ ಬಲಿ

    ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್ ನಟಿ ಸಹೋದರ ಕೊರೊನಾಗೆ ಬಲಿ

    ಮುಂಬೈ: ಹಿಂದಿ ಚಿತ್ರರಂಗದ ಖ್ಯಾತ ನಟಿ ಪಿಯಾ ಬಾಜೆಪೇಯ್ ಅವರ ಸಹೋದರ ಕೊರೊನಾ ವೈರಸ್‍ನಿಂದ ಮೃತಪಟ್ಟಿದ್ದಾರೆ. ಈ ವಿಷಯವನ್ನು ಸ್ವತಃ ಪಿಯಾ ಸೋಶಿಯಲ್ ಮೀಡಿಯಾ ಮೂಲಕವಾಗಿ ಖಚಿತ ಪಡಿಸಿದ್ದಾರೆ.

    ಸಹೋದರನಿಗೆ ಕೊರೊನಾ ಪಾಸಿಟಿವ್ ಆಗಿದ್ದು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ತುರ್ತಾಗಿ ನನಗೆ ಸಹಾಯ ಬೇಕಿದೆ. ನನ್ನ ಸಹೋದರ ಸಾಯುತ್ತಿದ್ದಾನೆ. ಉತ್ತರ ಪ್ರದೇಶದ ಫಾರುಕಾಬಾದ್‍ನಲ್ಲಿ ಒಂದು ಬೆಡ್ ಮತ್ತು ವೆಂಟಿಲೇಟರ್ ಬೇಕಾಗಿದೆ. ನಾವು ಕಷ್ಟದಲ್ಲಿದ್ದೇವೆ. ಯಾರಾದರೂ ಸಹಾಯ ಮಾಡಿ ಪ್ಲೀಸ್ ಎಂದು ಪಿಯಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡು ಸಹಾಯಕ್ಕಾಗಿ ಅಂಗಲಾಚಿ ಇಂದು ಟ್ವೀಟ್ ಮಾಡಿದ್ದರು.

     

    ಈ ಟ್ವೀಟ್ ಮಾಡಿದ ಕೇವಲ ಮೂರು ಗಂಟೆಗಳ ಬಳಿಕ ಪಿಯಾ ಸಹೋದರ ಇಹಲೋಕ ತ್ಯಜಿಸಿದ್ದರು. ನನ್ನ ಸಹೋದರ ಇನ್ನಿಲ್ಲ ಎಂದು ಮತ್ತೆ ಟ್ವೀಟ್ ಮಾಡುವ ಮೂಲಕವಾಗಿ ದುಃಖವನ್ನು ತೋಡಿಕೊಂಡಿದ್ದಾರೆ. ಸಹೋದರನನ್ನು ಕಳೆದುಕೊಂಡಿರುವ ಪಿಯಾಗೆ ನೆಟ್ಟಿಗರು ಸಂತಾಪ ಸೂಚಿಸಿದ್ದಾರೆ. ಇತ್ತೀಚೆಗೆ ಅನೆಕ ಸೆಲೆಬ್ರಿಟಿಗಳು ಕೊರೊನಾಗೆ ಬಲಿಯಾಗುತ್ತಿದ್ದಾರೆ.