Tag: Phython

  • ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ 10 ಅಡಿ ಹೆಬ್ಬಾವು ಕಂಡು ಶಾಕ್

    ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ 10 ಅಡಿ ಹೆಬ್ಬಾವು ಕಂಡು ಶಾಕ್

    ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರು 10 ಅಡಿ ಹೆಬ್ಬಾವು ಕಂಡು ಶಾಕ್ ಆದ ಘಟನೆ ಕೃಷ್ಣಗಿರಿ ಜಿಲ್ಲೆಯ ಸುಲಗಿರಿಯಲ್ಲಿ ನಡೆದಿದೆ.

    ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಸುಲಗಿರಿಯಲ್ಲಿ ಇರುವ ಕಿರಾಣಿ ಅಂಗಡಿಯ ಗೋಡೌನ್ ನಲ್ಲಿ ಹೆಬ್ಬಾವು ಅವಿತು ಕುಳಿತಿತ್ತು. ಸಿಬ್ಬಂದಿ ಅಂಗಡಿಯಲ್ಲಿ ಮೂಟೆ ತೆಗೆದುಕೊಳ್ಳಲು ಹೋದಾಗ ಹೆಬ್ಬಾವು ಪ್ರತ್ಯಕ್ಷವಾಗಿದೆ.

    ಸುಮಾರು 10 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಸ್ಥಳೀಯರು ಗಾಬರಿಗೊಂಡರು. ಬಳಿಕ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ರಕ್ಷಿಸಿದ್ದಾರೆ.

    ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ಹೆಬ್ಬಾವು ರಕ್ಷಿಸಿದ್ದಾರೆ. ಹೆಬ್ಬಾವನ್ನು ರಕ್ಷಿಸಿದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಹೆಬ್ಬಾವನ್ನು ರಕ್ಷಿಸುವಾಗ ಸ್ಥಳೀಯರು ಅದನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

  • ಹೆಬ್ಬಾವನ್ನು ನೋಡಿ ಹೆದರಿದ ಹುಲಿ- ವಿಡಿಯೋ ವೈರಲ್

    ಹೆಬ್ಬಾವನ್ನು ನೋಡಿ ಹೆದರಿದ ಹುಲಿ- ವಿಡಿಯೋ ವೈರಲ್

    ಮೈಸೂರು: ಹೆಬ್ಬಾವನ್ನು ನೋಡಿ ಹುಲಿ ಹೆದರಿಕೊಂಡ ಅಪರೂಪದ ದೃಶ್ಯವೊಂದು ಸಫಾರಿಗೆ ತೆರಳಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಾಗರಹೊಳೆ ಅರಣ್ಯದಲ್ಲಿ ಕ್ಯಾಮೆರಾಗೆ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಅರಣ್ಯದಲ್ಲಿ ಹುಲಿಗೆ ಹೆಬ್ಬಾವು ಎದುರಾಗಿದೆ. ಈ ವೇಳೆ ಹೆಬ್ಬಾವನ್ನು ಕಂಡು ಹುಲಿ ಹೆದರಿಕೊಂಡಿದೆ. ಸದ್ಯ ಈ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸಫಾರಿಗೆ ತೆರಳಿದರೆ ಹುಲಿಗಳು ಅಪರೂಪವಾಗಿ ಕಾಣಿಸುತ್ತದೆ. ಈ ವೇಳೆ ಪ್ರವಾಸಿಗರು ಹೆಬ್ಬಾವು ಮತ್ತು ಹುಲಿಯನ್ನು ಒಟ್ಟಿಗೆ ನೋಡಿದ್ದಾರೆ. ಸಾಮಾನ್ಯವಾಗಿ ಹುಲಿಗಳು ಹೆಬ್ಬಾವನ್ನು ಕಂಡರೆ ಅದನ್ನು ತಿನ್ನುತ್ತದೆ. ಆದರೆ ಇಲ್ಲಿ ಹುಲಿ ಹೆಬ್ಬಾವನ್ನು ಕಂಡು ಹೆದರುಕೊಂಡಿದೆ.

    ಸದ್ಯ ಹುಲಿ ಹೆಬ್ಬಾವನ್ನು ಕಂಡು ಹೆದರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=PF9B5GRW3SU&feature=youtu.be