Tag: Physiotherapy

  • ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಫಿಸಿಯೋಥೆರಪಿ ಚಿಕಿತ್ಸೆ

    ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಫಿಸಿಯೋಥೆರಪಿ ಚಿಕಿತ್ಸೆ

    ಬಳ್ಳಾರಿ: ಬೆನ್ನುನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ನಟ ದರ್ಶನ್‌ (Darshan) ಅವರಿಗೆ ಫಿಸಿಯೋಥೆರಪಿ (Physiotherapy) ಚಿಕಿತ್ಸೆ ನೀಡಲಾಗಿದೆ.

    ಶುಕ್ರವಾರ ಸಂಜೆ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಜೈಲಿನ ಹೈ ಸೆಕ್ಯೂರಿಟಿ ಸೆಲ್‌ನಲ್ಲೇ ದರ್ಶನ್ ಗೆ ಒಂದು ಗಂಟೆ ಫಿಸಿಯೋಥೆರಪಿ ಮಾಡಲಾಗಿದೆ.

    ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ L1, L5 ನಲ್ಲಿ ಊತ ಕಾಣಿಸಿಕೊಂಡಿತ್ತು. ಹೀಗಾಗಿ ವಿಮ್ಸ್ ಆಸ್ಪತ್ರೆಯ ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ಸ್ಕ್ಯಾನಿಂಗ್, ಸರ್ಜರಿ ಹಾಗೂ ಫಿಸಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ದರು. ಇದನ್ನೂ ಓದಿ: ಸಿಎಂ ಪತ್ನಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ

     

    ವೈದ್ಯರ ಸಲಹೆಯಂತೆ ಬುಧವಾರವೇ ಆರೋಪಿ ದರ್ಶನ್‌ಗೆ ಫಿಸಿಯೋಥೆರಪಿ ಆರಂಭಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಫಿಸಿಯೋಥೆರಪಿ ಮಾಡಿಸಲು ಸಾಧ್ಯವಾಗಿರಲಿಲ್ಲ.

    ಶುಕ್ರವಾರ ಸಂಜೆ ಆರೋಪಿ ದರ್ಶನ್ ಗೆ ಫಿಸಿಯೋಥೆರಪಿ ಮಾಡಲಾಗಿದೆ. ಈಗಾಗಲೇ ವೈದ್ಯರ ಸೂಚನೆ ಮೇರೆಗೆ ಮೆಡಿಕಲ್ ಬೆಡ್, ದಿಂಬು, ಚೇರ್ ಕೊಡಲಾಗಿದ್ದು, ಕೊಂಚ ಮಟ್ಟಿಗೆ ದರ್ಶನ್ ಬೆನ್ನು ನೋವು ಕಡಿಮೆ ಆಗಿದೆ ಎನ್ನಲಾಗಿದೆ.

     

  • ಟ್ರಾಫಿಕ್ ತಲೆನೋವಿನಿಂದ ರಿಲ್ಯಾಕ್ಸ್ ಆಗಲು ಸಂಚಾರಿ ಪೊಲೀಸರ ಯೋಗ, ಬಾಡಿ ಮಸಾಜ್

    ಟ್ರಾಫಿಕ್ ತಲೆನೋವಿನಿಂದ ರಿಲ್ಯಾಕ್ಸ್ ಆಗಲು ಸಂಚಾರಿ ಪೊಲೀಸರ ಯೋಗ, ಬಾಡಿ ಮಸಾಜ್

    – ಠಾಣೆಯಲ್ಲೇ ಸಿಬ್ಬಂದಿಯ ಯೋಗಾಭ್ಯಾಸ

    ಬೆಂಗಳೂರು: ಟ್ರಾಫಿಕ್ ಕ್ಲಿಯರ್ ಮಾಡಿ ರೋಸಿಹೋಗಿರುವ ಸಿಲಿಕಾನ್ ಸಿಟಿ ಸಂಚಾರಿ ಪೊಲೀಸರು ರಿಲ್ಯಾಕ್ಸ್ ಆಗಲು ಪ್ರತಿದಿನ ಬೆಳಗ್ಗೆ ಠಾಣೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.

    ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರತಿದಿನ ಯೋಗ ಮಾಡುತ್ತಿದ್ದಾರೆ. ಖ್ಯಾತ ಯೋಗತಜ್ಞ ರಾಮಕೃಷ್ಣ ಅವರಿಂದ ಸಿಬ್ಬಂದಿಗೆ ಯೋಗ ತರಬೇತಿ ನೀಡಲಾಗುತ್ತಿದೆ. ಕೆಲಸದಿಂದ ದೇಹದ ಮೇಲಾಗುವ ಒತ್ತಡ ಕಡಿಮೆ ಮಾಡಲು ಬನಶಂಕರಿ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಕೃಷ್ಣ ನೇತೃತ್ವದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ.

    45 ದಿನಗಳ ಕಾಲ ಬನಶಂಕರಿ ಸಂಚಾರಿ ಠಾಣೆಯಲ್ಲೇ ಯೋಗಾಭ್ಯಾಸ ಮಾಡಲಾಗುತ್ತದೆ. ಇದರ ಜೊತೆಗೆ ಪಿಸಿಯೋಥೆರಪಿ ಮೂಲಕ ಸಿಬ್ಬಂದಿಗೆ ಬಾಡಿ ಮಸಾಜ್ ಕೂಡ ಮಾಡಲಾಗುತ್ತಿದೆ. ಟ್ರಾಫಿಕ್ ಕ್ಲೀಯರ್ ಮಾಡಲು ನಿಂತು ಸಿಬ್ಬಂದಿಗೆ ತೀವ್ರ ಕಾಲು ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿನಿತ್ಯ ನುರಿತ ವೈದ್ಯರಿಂದ ಸಿಬ್ಬಂದಿಗೆ ಪಿಸಿಯೋಥೆರಪಿ ಮಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.