Tag: Physics

  • 11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ

    11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ

    ಬ್ರಸೆಲ್ಸ್: 11 ವರ್ಷಕ್ಕೆ ಭೌತಶಾಸ್ತ್ರ ವಿಷಯದಲ್ಲಿ ಡಿಗ್ರಿ ಮುಗಿಸುವ ಮೂಲಕವಾಗಿ ಬೆಲ್ಜಿಯಮ್ ಬಾಲಕನೋರ್ವ ಸುದ್ದಿಯಾಗಿದ್ದಾನೆ.  ಇದನ್ನೂ ಓದಿ:  ಗಂಡು ಮಗುವಿನ ತಂದೆಯಾದ ಹರ್ಭಜನ್ ಸಿಂಗ್

     20 ವರ್ಷಕ್ಕೆ ಮುಗಿಸಬೇಕಾದ ಡಿಗ್ರಿಯನ್ನು ಲೌರೆಂಟ್ ಸಿಮೋನ್ಸ್ ಕೇವಲ 11 ವರ್ಷಕ್ಕೆ ಪೂರ್ಣಗೊಳಿಸಿದ್ದಾನೆ. ಅತೀ ಸಣ್ಣ ವಯಸ್ಸಿನಲ್ಲೇ ಈ ಬಾಲಕ ಮಾಡಿದ ಸಾಧನೆಗೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಬೆಲ್ಜಿಯಂನ ಒಸ್ಟೆಂಡ್‍ನ ನಿವಾಸಿಯಾದ ಸಿಮೋನ್ಸ್ 11 ವರ್ಷಕ್ಕೆ ವಿಶ್ವವಿದ್ಯಾಲಯವೊಂದರಲ್ಲಿ ಡಿಗ್ರಿ ಸರ್ಟಿಫಿಕೇಟ್ ಪಡೆಯುವ ಮೂಲಕವಾಗಿ ಜಗತ್ತಿನ 2ನೇ ಅತೀ ಪುಟ್ಟ ಪದವೀಧರ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಸಿಮೋನ್ಸ್ ಆಂಟ್ವರ್ಪ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಗಲ್ಲಿ ಪದವಿ ಪ್ರಮಾಣ ಪತ್ರ ಪಡೆದಿದ್ದಾನೆ. ಸಾಮಾನ್ಯವಾಗಿ ಎಲ್ಲರೂ ಮೂರು ವರ್ಷ ಡಿಗ್ರಿ ಮುಗಿಸುತ್ತಾರೆ. ಆದರೆ, ಸಿಮೋನ್ಸ್ ಮಾತ್ರ ಕೇವಲ ಒಂದೇ ವರ್ಷದಲ್ಲಿ ಪದವಿ ಪೂರ್ಣಗೊಳಿಸಿ ಸಾಧನೆ ಮಾಡಿದ್ದಾನೆ.

    ಬಾಲಕ ಶೇ. 85 ಅಂಕ ಗಳಿಸಿದ್ದಾನೆ. ಈ ಬಾಲಕ ಸಣ್ಣ ವಯಸ್ಸಿನಲ್ಲೇ ಪದವಿಯನ್ನು ಪಡೆದ 2ನೇ ಅತೀ ಚಿಕ್ಕ ಪುಟ್ಟ ಬಾಲಕನಾಗಿದ್ದಾನೆ. ಈ ಹಿಂದೆ 1994ರಲ್ಲಿ ಮೈಕಲ್ ಕೀರ್ನಿ ಎಂಬವ 10ವರ್ಷದವನಿದ್ದಾಗಲೇ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದಲ್ಲಿ ಪದವಿ ಸಂಪಾದಿಸಿದ್ದ. ಈ ದಾಖಲೆಯನ್ನು ಸಿಮೋನ್ಸ್ ಮರಿಯಬಹುದಿತ್ತು. ಆದರೆ 2019ರಲ್ಲಿ ನೆದರ್‍ಲೆಂಡ್‍ನ ಐಂಡ್‍ಹೋವನ್ ವಿಶ್ವವಿದ್ಯಾಲಯವು ಸಿಮೋನ್ಸ್ ಗೆ 10 ವರ್ಷ ವಯಸ್ಸಾಗದ ಹೊರತ ಡಿಗ್ರಿ ಓದಲು ಅವಕಾಶ ಇಲ್ಲ ಎಂದು ಹೇಳಿತ್ತು. ಬಾಲಕನ ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ನಿವೃತ್ತಿ ನಂತ್ರವೂ ಮನದ `ಗ್ರಹಣ’ ಬಿಡಿಸಲು ಹೋರಾಡ್ತಿದ್ದಾರೆ ಉಡುಪಿಯ ಎ.ಪಿ ಭಟ್

    ನಿವೃತ್ತಿ ನಂತ್ರವೂ ಮನದ `ಗ್ರಹಣ’ ಬಿಡಿಸಲು ಹೋರಾಡ್ತಿದ್ದಾರೆ ಉಡುಪಿಯ ಎ.ಪಿ ಭಟ್

    ಉಡುಪಿ: ಗ್ರಹಣ ಬಂತು ಅಂದರೆ ಜ್ಯೋತಿಷಿಗಳು ತಮ್ಮದೇ  ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣ  ಮಾಡುತ್ತಾರೆ. ಆ ಹೋಮ ಮಾಡಿ, ಈ ಪೂಜೆ ಮಾಡಿಸಿ ಅಂತ ಜನರಲ್ಲಿ ಭಯ ಹುಟ್ಟಿಸ್ತಾರೆ. ಆದರೆ ಇಲ್ಲೊಬ್ಬ ಭೌತಶಾಸ್ತ್ರಜ್ಞ ಡಿಸೆಂಬರ್ 26 ರ ಕಂಕಣ ಸೂರ್ಯಗ್ರಹಣ ನೋಡಿ ಅಂತ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದ ಸಾವಿರ ಶಾಲೆಗಳತ್ತ ಹೊರಟಿದ್ದಾರೆ. ಅವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಉಡುಪಿಯ ಅನಂತ ಪದ್ಮನಾಭ ಭಟ್ ಅವರು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾಗಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರು. ಆದರೆ ನಿವೃತ್ತಿ ನಂತರವೂ ಎಪಿ ಭಟ್ ಮಾತ್ರ ಸುಮ್ಮನೆ ಕುಳಿತಿಲ್ಲ . ರಾಜ್ಯದ ಒಂದು ಲಕ್ಷ ಮಕ್ಕಳ ಕಣ್ಮುಂದೆ ಖಗೋಳ ವಿಸ್ಮಯ ತೆರೆದಿಡಲು ಹೊರಟಿದ್ದಾರೆ. ಡಿಸೆಂಬರ್ 26ರಂದು ನಡೆಯುವ ಕಂಕಣ ಸೂರ್ಯಗ್ರಹಣದ ಬಗ್ಗೆ ಮಕ್ಕಳಿಗೆ ಜಾಗೃತಿ ಮತ್ತು ಮಾಹಿತಿ ಕೊಡುತ್ತಾ ಈಗಾಗಲೇ ಮುನ್ನೂರು ಶಾಲೆಗಳಿಗೆ ತಲುಪಿದ್ದಾರೆ. ಸಾವಿರ ಶಾಲೆಗಳ ಟಾರ್ಗೆಟ್ಟನ್ನು ಹಾಕಿಕೊಂಡಿದ್ದಾರೆ.

    ಪೂರ್ಣಪ್ರಜ್ಞ ಖಗೋಳ ವೀಕ್ಷಕರ ಸಂಘವನ್ನು ಹುಟ್ಟು ಹಾಕಿರುವ ಎಪಿ ಭಟ್, ವರ್ಷಪೂರ್ತಿ ಆಕಾಶ ವೀಕ್ಷಣಾ ಕಾರ್ಯಕ್ರಮ ಮಾಡುತ್ತಾರೆ. ಚಂದ್ರಗ್ರಹಣ, ಸೂರ್ಯಗ್ರಹಣ, ನಕ್ಷತ್ರಗಳು, ಗ್ರಹಗಳ ಬಗ್ಗೆ ಜನರಿಗೆ, ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ಮೂಲಕ ಮಾಹಿತಿ ಕೊಡುತ್ತಾರೆ. ಮಕ್ಕಳ ಜೊತೆ ಮಕ್ಕಳಂತೆ ಮಾತನಾಡುತ್ತಲೇ  ಭೌತ ವಿಜ್ಞಾನದ ಬಗ್ಗೆ ಅರಿವು ಮೂಡಿಸುತ್ತಾರೆ.

    ಜ್ಯೋತಿಷಿಗಳಿಗೆ ಗ್ರಹಣಗಳು ಕೆಟ್ಟ ಪರಿಣಾಮ ಬೀರುವ ಬೀರುವ ವಿದ್ಯಮಾನ. ಆದರೆ ಭೌತ ಶಾಸ್ತ್ರಜ್ಞರಿಗೆ ಅದೊಂದು ಅದ್ಭುತ. ಗ್ರಹಣದ ಬಗ್ಗೆ ಭಯ ಹುಟ್ಟಿಸುವ ಬದಲು, ಮಕ್ಕಳಲ್ಲಿ ಈ ಬಗ್ಗೆ ಜ್ಞಾನ ಬೆಳೆಸುವುದು ಒಂದೊಳ್ಳೆ ಕೆಲವೇ ಸರಿ.

  • ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ನವದೆಹಲಿ: ಅಮೆರಿಕ ಇಂಧನ ಇಲಾಖೆಯ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್’ ಅನ್ನು ಅಭಿವೃದ್ಧಿಪಡಿಸಿದೆ.

    ವಿಜ್ಞಾನದಲ್ಲಿನ ಆವಿಷ್ಕಾರಗಳಿಗೆ ಅಭೂತಪೂರ್ವ ಸಾಮಥ್ರ್ಯ ಇರುವ ಸೂಪರ್ ಕಂಪ್ಯೂಟರ್ ಗಳ ಅವಶ್ಯಕತೆ ಇದೆ. ಹಾಗಾಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಸಮಿತ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ಟೈಟಾನ್ ಸೂಪರ್ ಕಂಪ್ಯೂಟರ್ ಗಿಂತ 8 ಪಟ್ಟು ವೇಗವಾಗಿ ಸಮಿತ್ ಕೆಲಸ ನಿರ್ವಹಿಸುತ್ತದೆ.

    ಸಮಿತ್ ನ ಕಾರ್ಯನಿರ್ವಹಣಾ ಸಾಮರ್ಥ್ಯ 200 ಪೆಟಾ ಫ್ಲಾಪ್ಸ್ ಆಗಿದ್ದು 5 ವರ್ಷ ಹಿಂದಿನ ಚೈನಾದ 93 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ತೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಹಿಂದಿಕ್ಕಿದೆ. ವಿಜ್ಞಾನಿಗಳು ಸಮಿತ್ ಅನ್ನು ತಮ್ಮ ಜಿನೋಮ್ ಗಳ ಅಧ್ಯಯನದಲ್ಲಿ ಬಳಸಿದ್ದಾರೆ. ಹಿಂದಿನ ಸೂಪರ್ ಕಂಪ್ಯೂಟರ್ ಗಳಿಗಿಂತ ಕ್ಷಣಮಾತ್ರದಲ್ಲಿ ಲಕ್ಷಾಂತರ ಜಿನೋಮ್ ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

    ಆರೋಗ್ಯ, ಕೃತಕ ಬುದ್ಧಿಮತ್ತೆ, ಶಕ್ತಿ, ಹವಾಮಾನ, ಭೌತಶಾಸ್ತ್ರ ಹಾಗೂ ಇತರ ಸಂಶೋಧನ ಕ್ಷೇತ್ರಗಳಲ್ಲಿ ಬೇಕಾಗಿದ್ದ ನಂಬಲು ಅಸಾಧ್ಯವಾದ ಸೂಪರ್ ಕಂಪ್ಯೂಟರ್ ಸಮಿತ್ ಆಗಿದೆ. ಈ ಸಂಶೋಧನೆಗಳಿಂದ ಬ್ರಹ್ಮಾಂಡವನ್ನು ಇನ್ನೂ ಸರಿಯಾಗಿ ಅರ್ಥೈಸಬಹುದಾಗಿದ್ದು ಅಮೆರಿಕಾದ ಆರ್ಥಿಕ ವ್ಯವಸ್ಥೆಯನ್ನು ಇನ್ನೂ ಸ್ಪರ್ಧಾತ್ಮಕವಾಗಿಸುವುದರ ಜೊತೆಗೆ ಉತ್ತಮ ಭವಿಷ್ಯಕ್ಕೆ ಸಹಾಯವಾಗಲಿದೆ.

    4,608 ಸರ್ವರ್ ಗಳನ್ನು ಹೊಂದಿರುವ ಸಮಿತ್ 2 ಟೆನ್ನಿಸ್ ಕೋರ್ಟ್‍ಗಳ ಜಾಗವನ್ನು ತೆಗೆದುಕೊಳ್ಳಲಿದೆ. 9 ಸಾವಿರ 22-ಕೋರ್ ಐಬಿಎಂ ಪವರ್ 9 ಪ್ರೊಸೆಸರ್ ಗಳನ್ನು ಒಳಗೊಂಡಿದ್ದೂ 27 ಸಾವಿರಕ್ಕೂ ಹೆಚ್ಚು ಎನ್ವಿಡಿಯಾ ಟೆಸ್ಲಾ ವಿ100 ಗ್ರಾಫಿಕ್ ಪ್ರೊಸೆಸರ್ ಗಳನ್ನು ಹೊಂದಿದೆ. ಇಡೀ ವ್ಯವಸ್ಥೆಯನ್ನು ತಂಪಾಗಿಡಲು ಒಂದು ನಿಮಿಷಕ್ಕೆ 15 ಸಾವಿರ ಲೀಟರ್ ನಷ್ಟು ನೀರು ಬೇಕಾಗುತ್ತದೆ. 8100 ಮನೆಗಳು ಬಳಸುವಷ್ಟು ವಿದ್ಯುತ್ ಅನ್ನು ಸಮಿತ್ ಬಳಸುತ್ತದೆ.

    ಅಮೆರಿಕಾ, ಚೈನಾ ದೇಶಗಳಲ್ಲದೆ ಯುರೋಪ್, ಜಪಾನ್ ಹಾಗೂ ಇತರ ದೇಶಗಳ ನಡುವೆ ವೇಗದ ಸೂಪರ್ ಕಂಪ್ಯೂಟರ್ ತಯಾರು ಮಾಡಲು ಸ್ಪರ್ಧೆ ಏರ್ಪಟ್ಟಿದೆ. ಆರೋಗ್ಯ, ಪರಿಸರ ಕ್ಷೇತ್ರಗಳಲ್ಲದೆ ವಿಮಾನ ವಿನ್ಯಾಸ, ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲೂ ಸೂಪರ್ ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ.

    ಕಂಪ್ಯೂಟರ್ ಸಾಮಥ್ರ್ಯ ಮತ್ತು ಫ್ಲಾಪ್ಸ್
    ಫ್ಲಾಪ್ಸ್ (FLOPS) ಎಂದರೆ ಕಂಪ್ಯೂಟರ್ ನ ಸಾಮರ್ಥ್ಯ ಅಳೆಯಲು ಬಳಸುವ ಮಾನದಂಡ. ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್ (Floating Point Operations per Second) ಎಂಬುದು ಇದರ ವಿಸ್ತೃತ ರೂಪ. ಅಂದರೆ, ಒಂದು ಸೆಕೆಂಡ್ ಅವಧಿಯಲ್ಲಿ ಲೆಕ್ಕ ಮಾಡುವ ಕಂಪ್ಯೂಟರ್ ನ ಸಾಮರ್ಥ್ಯ. ಕಂಪ್ಯೂಟರ್ ನ ಕಾರ್ಯನಿರ್ವಹಣಾ ಸಾಮರ್ಥ್ಯ ಒಂದು ಪೆಟಾ ಫ್ಲಾಪ್ಸ್ ಇದ್ದರೆ ಆ ಕಂಪ್ಯೂಟರ್ ಒಂದು ಸೆಕೆಂಡ್‍ನಲ್ಲಿ ಸಾವಿರ ಲಕ್ಷಕೋಟಿಗಳಷ್ಟು ಲೆಕ್ಕಾಚಾರ ಮಾಡುವ ಸಾಮರ್ಥ್ಯ ಹೊಂದಿದೆ ಎಂದರ್ಥ.