Tag: Physician

  • ಆರೋಗ್ಯ ಇಲಾಖೆಯಲ್ಲಿ ಗೋಲ್ಮಾಲ್: ಪ್ರಶ್ನಿಸಿದ್ದಕ್ಕೆ ಹಿರಿಯ ವೈದ್ಯರಿಗೆ ಹಿಂಭಡ್ತಿ!

    ಆರೋಗ್ಯ ಇಲಾಖೆಯಲ್ಲಿ ಗೋಲ್ಮಾಲ್: ಪ್ರಶ್ನಿಸಿದ್ದಕ್ಕೆ ಹಿರಿಯ ವೈದ್ಯರಿಗೆ ಹಿಂಭಡ್ತಿ!

    ನೆಲಮಂಗಲ: ಆರೋಗ್ಯ ಇಲಾಖೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆ ಆಗುತ್ತಿರುವ ಔಷಧಿಗಳು, ಮಾತ್ರೆ, ಯಂತ್ರೋಪಕರಣಗಳು ಸೇರಿದಂತೆ ಇನ್ನಿತರ ವಸ್ತುಗಳ ವಿತರಣೆಯಲ್ಲಿ ಭಾರೀ ಗೋಲ್ಮಾಲ್ ನಡೆಯುತ್ತಿರುವ ಬಗ್ಗೆ, ಸ್ವತಃ ಹಿರಿಯ ವೈದ್ಯರೇ ಈಗ ಗಂಭೀರ ಆರೋಪ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕು ಸರ್ಕಾರಿ ಆಸ್ಪತ್ರೆಯ ಡಾ.ಅಮರ್‍ನಾಥ್ ಈ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ನೆಲಮಂಗಲ ತಾಲೂಕು ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಮಾಡುತಿದ್ದೆ. ಈ ವೇಳೆ ಅಲ್ಲಿ ನಡೆಯುತ್ತಿದ್ದ ಅಕ್ರಮಗಳ ತಡೆದಿದ್ದೆ. ಅಕ್ರಮಗಳಿಗೆ ಬ್ರೇಕ್ ಹಾಕಿದ್ದಕ್ಕೆ ನನಗೆ ಹಿಂಭಡ್ತಿ ನೀಡಲಾಗಿದೆ ಎಂದು ಅವರು ಆರೋಪಿಸಿದರು.

    ಗ್ರಾಮಾಂತರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜೇಶ್ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಂಬಳ ತಡೆಹಿಡಿದು ಕೆಲಸದಲ್ಲಿ ಕಿರಿಕಿರಿ ಮಾಡುತ್ತಿದ್ದಾರೆ. ವರ್ಗಾವಣೆಗೆ ತಡೆ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸಿಕ್ಕ ಸಿಕ್ಕವರ ಕೈಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸುಕಾಸುಮ್ಮನೆ ಆರೋಪಗಳನ್ನ ಮಾಡಿಸಿ, ತೇಜೋವಧೆ ಮಾಡಿ ನಾನು ಈ ಆಸ್ಪತ್ರೆಯಲ್ಲಿ ಕೆಲಸನೇ ಮಾಡಿಲ್ಲ, ಬಿಟ್ಟಿಯಾಗಿ ಸಂಬಳ ಪಡೆಯುತ್ತಿರುವ ಬಗ್ಗೆ ದಾಖಲೆಗಳನ್ನ ಒದಗಿಸಿದ್ದಾರೆ ಎಂದು ಅವರು ದೂರಿದರು.

    ಡಾ.ರಾಜೇಶ್ ಆಕ್ರಮದ ಬಗ್ಗೆ ಸಾರ್ವಜನಿಕರು ಸೇರಿದಂತೆ ಜನಪ್ರತಿನಿಧಿಗಳು, ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇನ್ನು ಮುಂದೆ ನನಗೆ ಆತ್ಮಹತ್ಯೆ ಒಂದೇ ದಾರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಯುಪಿಎಸ್ ಬ್ಯಾಟರಿ, ಸಿಸಿಟಿವಿ ಅಡವಡಿಕೆ, ಬಲ್ಪ್, ಮೇಜಿನ ಮೇಲಿನ ಗ್ಲಾಸು, ಇನ್ನಿತರ ವಸ್ತುಗಳಿಗೆ ನಾಲ್ಕೈದು ಬಾರಿ ಹಣವನ್ನ ರಾಜೇಶ್ ಅವರು ಬಿಡುಗಡೆ ಮಾಡಿರುವ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.