Tag: Phulbari

  • ವಿಜಿಲೆನ್ಸ್ ಅಧಿಕಾರಿ ಸೋಗಿನಲ್ಲಿ ಹಣ ಪೀಕುತ್ತಿದ್ದ ಪಿಹೆಚ್‍ಡಿ ಹೋಲ್ಡರ್ ಅರೆಸ್ಟ್

    ವಿಜಿಲೆನ್ಸ್ ಅಧಿಕಾರಿ ಸೋಗಿನಲ್ಲಿ ಹಣ ಪೀಕುತ್ತಿದ್ದ ಪಿಹೆಚ್‍ಡಿ ಹೋಲ್ಡರ್ ಅರೆಸ್ಟ್

    ಭುವನೇಶ್ವರ: ವಿಜಿಲೆನ್ಸ್ ಅಧಿಕಾರಿ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ಪೀಕುತ್ತಿದ್ದ ಪಿಎಚ್‍ಡಿ (PHD) ಹೋಲ್ಡರ್ ಒಬ್ಬನನ್ನು ಒಡಿಶಾ ವಿಶೇಷ ಪೊಲೀಸ್ ಪಡೆ (Special task force of Odisha Police) ಭಾನುವಾರ ಬಂಧಿಸಿದೆ.

    ಆರೋಪಿಯನ್ನು ಪುರಿ ಜಿಲ್ಲೆಯ ಫುಲ್ಬರಿ (Phulbari) ನಿವಾಸಿ ಮನೋಜ್ ಕುಮಾರ್ ಮಾಝಿ ಎಂದು ಗುರುತಿಸಲಾಗಿದೆ. ಆರೋಪಿ ರಸಾಯನಶಾಸ್ತ್ರದಲ್ಲಿ (Chemistry) ಎಂಎಸ್‍ಸಿ (MSc) ಪದವಿ ಪೂರೈಸಿದ್ದಾನೆ. ಅಲ್ಲದೆ ಸಂಬಲ್ಪುರ ವಿಶ್ವವಿದ್ಯಾಲಯದಿಂದ (Sambalpur University) ಪಿಎಚ್‍ಡಿ ಪಡೆದಿದ್ದಾನೆ. ಈತ ಎಂಜಿನಿಯರ್‌ಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ 15 ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 50,000 ರೂ.ಗೆ 17 ವರ್ಷದ ಅಪ್ರಾಪ್ತೆಯ ಮಾರಾಟ – ನಾಲ್ವರ ಬಂಧನ

    ಎಂಜಿನಿಯರ್ ಒಬ್ಬರಿಗೆ ಆರೋಪಿ ಒಂದು ಕೋಟಿ ರೂ. ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಎಂಜಿನಿಯರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿಯು, ಹಲವು ಅಧಿಕಾರಿಗಳಿಂದ ಹಣ ವಸೂಲಿ ಮಾಡಲು ಯತ್ನಿಸಿದ್ದೆ. ಅಲ್ಲದೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರಿಗೆ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಸದಸ್ಯೆಯ ಪತಿ ಹತ್ಯೆ ಪ್ರಕರಣ – ನಾಪತ್ತೆಯಾದ ಐವರ ವಿರುದ್ಧ ಕೇಸ್