Tag: Photoshop

  • ಫ್ರಿಡ್ಜ್ ಒಳಗಡೆ ವ್ಯಕ್ತಿ – ನೆಟ್ಟಿಗರಿಂದ ಫೋಟೋಗೆ ಲೈಕ್ಸ್‌ಗಳ ಸುರಿಮಳೆ

    ಫ್ರಿಡ್ಜ್ ಒಳಗಡೆ ವ್ಯಕ್ತಿ – ನೆಟ್ಟಿಗರಿಂದ ಫೋಟೋಗೆ ಲೈಕ್ಸ್‌ಗಳ ಸುರಿಮಳೆ

    ರಮಲ್ಲಾ: ಫ್ರಿಡ್ಜ್ ಒಳಗಡೆ ಇರುವ ವ್ಯಕ್ತಿ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೇಸರವನ್ನು ಕಳೆಯಲು ಸಯೀದ್ ಎಂಬ ಪ್ಯಾಲೇಸ್ಟಿನಿಯನ್ ವ್ಯಕ್ತಿ, ಬಿಡುವಿನ ಸಮಯದಲ್ಲಿ ರೆಫ್ರಿಜರೇಟರ್ ಬಾಗಿಲುಗಳ ಮೇಲೆ ಫೋಟೋಶಾಪ್ ಮಾಡಿ ಫೋಟೋಗಳನ್ನು ಅಂಟಿಸಿದ್ದಾರೆ, ಈ ಫೋಟೋಗಳನ್ನು ನೋಡಿದರೆ ಆತ ರೆಫ್ರಿಜರೇಟರ್ ಒಳಗಡೆ ಇದ್ದಂತೆ ಕಾಣಿಸುತ್ತದೆ.

    ಈ ವಿಚಾರವಾಗಿ ಸಯೀದ್, ನನಗೆ ಬೇಸರವಾದಾಗ ನಾನು ಫ್ರಿಡ್ಜ್ ಮೇಲೆ ಮಾಡಿರುವ ಫೋಟೋಶಾಪ್‍ಗಳನ್ನು ನೋಡುತ್ತೇನೆ. ಆಗ ನಾನು ಫ್ರಿಡ್ಜ್  ಮೇಲೆಯೇ ಇರುವಂತೆ ಕಾಣಿಸುತ್ತದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಲ್ಲದೆ ಶೇರ್ ಮಾಡಿರುವ ಈ ಎರಡು ಫೋಟೋಗಳಲ್ಲಿ, ಒಂದು ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವಂತೆ ಕಾಣಿಸುತ್ತಿದ್ದರೆ, ಮತ್ತೊಂದರಲ್ಲಿ ಸಯೀದ್ ಕೆಲವು ವಸ್ತುಗಳ ಮೇಲೆ ಕುಳಿತುಕೊಂಡಿರುವಂತೆ ಕಾಣಿಸುತ್ತದೆ.

    https://twitter.com/SaeedDiCaprio/status/1369690655795126283

    ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈವರೆಗೂ 7,29,600 ಲೈಕ್ಸ್ ಮತ್ತು 73,700 ಕಮೆಂಟ್ಸ್ ಬಂದಿದೆ.

  • ರಿಯಾಲಿಟಿ ಚೆಕ್ – ಛೋಟಾ ರಾಜನ್ ಜೊತೆಗೆ ಮೋದಿ ಫೋಟೋ ವೈರಲ್

    ರಿಯಾಲಿಟಿ ಚೆಕ್ – ಛೋಟಾ ರಾಜನ್ ಜೊತೆಗೆ ಮೋದಿ ಫೋಟೋ ವೈರಲ್

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಜೊತೆ ಭೂಗತ ಪಾತಕಿ ಛೋಟಾ ರಾಜನ್ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಮೋದಿ ಅವರು ಬಿಳಿ ಬಣ್ಣದ ಶರ್ಟ್ ಹಾಕಿಕೊಂಡಿದ್ದಾರೆ. ಇವರ ಜೊತೆಗೆ ಮೋದಿಯ ಹಿಂಬದಿಯಲ್ಲಿ ಡಾನ್ ಛೋಟಾ ರಾಜನ್ ಕೂಡ ಇರುವುದು ಕಂಡು ಬಂದಿದೆ. ಇವರ ಜೊತೆ ಪ್ರಸ್ತುತ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಇದ್ದಾರೆ.

    ಈ ಫೋಟೋವನ್ನು ಫೇಸ್‍ಬುಕ್ ಟ್ವಿಟ್ಟರ್‍ನಲ್ಲಿ ಮೊದಲಿಗೆ ವಿಜಯ್ ಅಕ್ಷಿತ್ ಎಂಬವರ ಖಾತೆಯಿಂದ ಶೇರ್ ಆಗಿದ್ದು, ಭೂಗತ ಪಾತಕಿಗೂ ಪ್ರಧಾನಿ ಮೋದಿ ಅವರಿಗೂ ಯಾವ ರೀತಿಯ ಸಂಬಂಧ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಎಲ್ಲ ಕಡೆ ತುಂಬ ವೈರಲ್ ಆಗುತ್ತಿದೆ.

    ಈ ರೀತಿಯ ಫೋಟೋ ವೈರಲ್ ಆಗುತ್ತಿದ್ದಂತೆ ಈ ಫೋಟೋ ನಿಜವೋ ಸಳ್ಳೋ, ಮೋದಿ ಅವರಿಗೆ ಛೋಟಾ ರಾಜನ್‍ಗೂ ಈ ಹಿಂದೆ ಸಂಪರ್ಕ ಇತ್ತ ಎಂದು ಅನುಮಾನಗಳು ಮೂಡಿದ್ದವು. ಆದರೆ ಈಗ ಈ ಫೋಟೋ ಅಸಲಿಯತ್ತು ಬಯಲಾಗಿದ್ದು, ಈ ಫೋಟೋ ನಿಜವಲ್ಲ ಯಾರೋ ಕಿಡಿಗೇಡಿಗಳು ಫೋಟೋಶಾಪ್ ಮಾಡಿ ಎಡಿಟ್ ಮಾಡಿ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ತಿಳಿದು ಬಂದಿದೆ.

    https://www.facebook.com/photo.php?fbid=2346207449030344&set=a.1411675955816836&type=3&theater

    ಈ ಫೋಟೋ ಬಗ್ಗೆ ಸುದ್ದಿ ಸಂಸ್ಥೆಯೊಂದು ಈ ಹಿಂದಿನ ಇಮೇಜ್‍ಗಳನ್ನು ಪರಿಶೀಲಿಸಿದಾಗ. ಈ ಫೋಟೋ ಮೋದಿ ಅವರು 1990 ರಲ್ಲಿ ಅಮೆರಿಕ ಪ್ರವಾಸಕ್ಕೆ ಹೋದಾಗ ತೆಗೆಸಿಕೊಂಡ ಫೋಟೋ ಆಗಿದ್ದು, ಆ ವೇಳೆ ಅವರ ಜೊತೆ ದೇವೇಂದ್ರ ಫಡ್ನವೀಸ್ ಅವರು ಹೋಗಿದ್ದರು ಎಂದು ತಿಳಿದು ಬಂದಿದೆ. ಈ ಫೋಟೋವನ್ನು 2014 ರಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ಒಂದು ಲೇಖನದ ಮೂಲಕ ಪ್ರಕಟಮಾಡಿತ್ತು.

    ಈ ಫೋಟೋವನ್ನು ತೆಗೆದುಕೊಂಡ ಕೆಲ ಕಿಡಿಗೇಡಿಗಳು ಮೋದಿ ಅವರ ಹಿಂದೆ ನಿಂತಿದ್ದ ವ್ಯಕ್ತಿಯ ಮುಖಕ್ಕೆ ಛೋಟಾ ರಾಜನ್ ಅವರ ಮುಖವನ್ನು ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  • ಧೋನಿ ಔಟಾಗುತ್ತಿದಂತೆ ಕಣ್ಣೀರಿಟ್ಟ ಫೋಟೋಗ್ರಾಫರ್ – ಬಯಲಾಯ್ತು ಫೋಟೋ ಹಿಂದಿನ ನೈಜ ಕಹಾನಿ

    ಧೋನಿ ಔಟಾಗುತ್ತಿದಂತೆ ಕಣ್ಣೀರಿಟ್ಟ ಫೋಟೋಗ್ರಾಫರ್ – ಬಯಲಾಯ್ತು ಫೋಟೋ ಹಿಂದಿನ ನೈಜ ಕಹಾನಿ

    ಬೆಂಗಳೂರು: ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಅಭಿಮಾನಿಗಳಿಗೆ ಭಾರೀ ಶಾಕ್ ನೀಡಿತ್ತು. ಆದರೆ ಧೋನಿ ಔಟಾಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಇದರಲ್ಲಿ ಪಂದ್ಯವನ್ನು ಕವರೇಜ್ ಮಾಡುತ್ತಿದ್ದ ಫೋಟೋಗ್ರಾಫರ್ ಅಳುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು.

    ಈ ಫೋಟೋ ನೈಜತೆಯ ಕುರಿತು ಫ್ಯಾಕ್ಟ್ ಚೇಕ್ ಮಾಡುವ ಸಂದರ್ಭದಲ್ಲಿ ಇದು ಫೋಟೋಶಾಪ್ ಮಾಡಿದ ಫೋಟೋ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅಂದಹಾಗೇ ಫೋಟೋದಲ್ಲಿರುವ ವ್ಯಕ್ತಿ ಅಳುತ್ತಿರುವುದು ನಿಜವೇ ಆದರೂ ಆ ಘಟನೆ ನಡೆದಿದ್ದು ಜನವರಿಯಲ್ಲಿ ನಡೆದ ಏಷ್ಯಾ ಫುಟ್ಬಾಲ್ ಕಪ್ ಟೂರ್ನಿಯಲ್ಲಿ.

    ಇರಾಕ್ ದೇಶದ ಫೋಟೋಗ್ರಾಫರ್ ತನ್ನ ದೇಶ ಟೂರ್ನಿಯಲ್ಲಿ ಸೋಲುಂಡ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದರು. ಈ ಫೋಟೋಗೆ ಧೋನಿ ಔಟಾದ ಬಳಿಕ ಫೆವಿಲಿಯನ್ ಕಡೆ ತರಳುತ್ತಿರುವ ಫೋಟೋವನ್ನು ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಅಲ್ಲದೇ ಧೋನಿ ಔಟಾಗುತ್ತಿದಂತೆ ಕ್ರೀಡಾಂಗಣದಲ್ಲಿದ್ದ ಫೋಟೋಗ್ರಾಫರ್ ಕಣ್ಣೀರಿಟ್ಟಿದ್ದಾರೆ ಎಂದು ಹಣೆಬರಹ ನೀಡಲಾಗಿತ್ತು. ಇದನ್ನು ಕಂಡ ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ವೈರಲ್ ಮಾಡಿದ್ದರು.

    https://twitter.com/PankajS31291146/status/1149554842785894401

  • ಫೋಟೋಶಾಪ್ ಫೋಟೋ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ

    ಫೋಟೋಶಾಪ್ ಫೋಟೋ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಮ್ಯಾ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ ರಮ್ಯಾ, ಫೋಟೋ ಶಾಪ್ ಮಾಡಿದ್ದಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯಲು ಪ್ರಯತ್ನಿಸಿದ್ದು, ಆದರೆ ನೈಜ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ನೆಟ್ಟಿಗರು ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.

    ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಈ ಫೋಟೋದಲ್ಲಿ ಹಿಟ್ಲರ್ ಅವರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ಮಗುವಿನೊಂದಿಗೆ ಇರುವ ಹಿಟ್ಲರ್ ಫೋಟೋವನ್ನು ಮಗುವಿನ ಕಿವಿ ಹಿಂಡುವಂತೆ ಫೋಟೋಶಾಪ್ ಮಾಡಲಾಗಿದೆ. ಇದೇ ರೀತಿ ಮೋದಿ ಅವರ ಪುಟ್ಟ ಬಾಲಕನೊಂದಿಗೆ ಇರುವ ಫೋಟೋಗೆ ಹೋಲಿಕೆ ಮಾಡಿ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿ ರಮ್ಯಾ ಟ್ವೀಟ್ ಮಾಡಿದ್ದಾರೆ.

    ರಮ್ಯಾ ಅವರ ಟ್ವೀಟ್‍ಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಹಲವು ಮಂದಿ ಹಿಟ್ಲರ್ ಮಗುವಿನೊಂದಿಗೆ ಇರುವ ಆಸಲಿ ಫೋಟೋ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಫೋಟೋಶಾಪ್ ಮಾಡಿದ ಫೋಟೋವನ್ನು ನೀವು ಟ್ವೀಟ್ ಮಾಡಿದ್ದು, ಆಸಲಿ ಫೋಟೋ ಇಲ್ಲಿದೆ ನೋಡಿ ಎಂದಿದ್ದಾರೆ. ಅಲ್ಲದೇ ಅಪ್ಪು ಎಂಬವರು ರಾಜೀವ್ ಗಾಂಧಿ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇರುವ ಫೋಟೋವನ್ನು ಹಿಟ್ಲರ್‍ಗೆ ಹೋಲಿಕೆ ಮಾಡಿ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಹಲವರು ರಮ್ಯಾ ಅವರು ವೋಟ್ ಮಾಡದ ಬಗ್ಗೆ ಪ್ರಸ್ತಾಪ ಮಾಡಿ ಕಾಲೆಳೆದಿದ್ದು, ಮೊದಲು ನೀವು ವೋಟ್ ಮಾಡಿ ಮೇಡಂ. ಆ ಬಳಿಕ ಇತರರಿಗೆ ಬುದ್ಧಿ ಹೇಳಿ ಎಂದು ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.

    https://twitter.com/17_appu/status/1122759483891994624

  • ಬೆಳ್ಳಂದೂರು ಕಲುಷಿತ ಕೆರೆಯೊಳಗೆ ಫೋಟೋಶೂಟ್: ರಶ್ಮಿಕಾ ಮಂದಣ್ಣ ಸ್ಪಷ್ಟನೆ

    ಬೆಳ್ಳಂದೂರು ಕಲುಷಿತ ಕೆರೆಯೊಳಗೆ ಫೋಟೋಶೂಟ್: ರಶ್ಮಿಕಾ ಮಂದಣ್ಣ ಸ್ಪಷ್ಟನೆ

    ಬೆಂಗಳೂರು: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯ ಪಕ್ಕ ನಿಂತಿರುವುದು ಮತ್ತು ಮುಳುಗಿರುವ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ಯಾಕೆಂದರೆ ಬೆಳ್ಳಂದೂರು ಕೆರೆಯ ಬಳಿ ಜನರು ಹೋಗಲು ಇಷ್ಟ ಪಡುವುದಿಲ್ಲ. ಅಷ್ಟೊಂದು ಕೊಳಚೆಯಾಗಿ ವಾಸನೆ ಬರುತ್ತಿರುತ್ತದೆ. ಆದರೆ ರಶ್ಮಿಕಾ ಹೇಗೆ ಕೆರೆಯಲ್ಲಿ ಮುಳುಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳಲ್ಲಿ ಗೊಂದಲ ಮೂಡಿತ್ತು. ಇದನ್ನೂ ಓದಿ: ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, “ಆ ಕೆರೆ ನೀರನ್ನು ನೀವೇನಾದರೂ ನೋಡಿದರೆ ಹತ್ತಿರ ಹೋಗಲೂ ಭಯವಾಗುತ್ತದೆ. ಅಲ್ಲಿನ ಕೆಟ್ಟ ವಾಸನೆಯಿಂದ ರಸ್ತೆಯಲ್ಲಿ ಹೋಗುವಾಗಲೂ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಅಲ್ಲಿಗೆ ಹೋದಾಗ ನನಗೆ ಕಾರಿನಿಂದ ಕೆಳಗೆ ಇಳಿಯಲೂ ಸಾಧ್ಯವಾಗದಂತಹ ವಾತಾವರಣವಿತ್ತು. ಅಂದಮೇಲೆ ನಾನು ಆ ನೀರಿನಲ್ಲಿ ಮುಳುಗಿ ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ ಎಂದು ಜನರು ಹೇಗೆ ಅಂದುಕೊಂಡರೋ ಖಂಡಿತವಾಗಿಯೂ ನನಗೆ ಗೊತ್ತಾಗುತ್ತಿಲ್ಲ. ನಾನು ಬೆಳ್ಳಂದೂರು ಕೆರೆಯ ದಡದಲ್ಲಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ. ಆದರೆ ಅದರೊಳಗೆ ಇಳಿದಿಲ್ಲ. ಬೆಳ್ಳಂದೂರು ಕೆರೆ ಕೆಮಿಕಲ್‍ನಿಂದ ಆವೃತವಾದ ಕಾರಣ ಇಳಿಯೋದು ಅಸಾಧ್ಯ. ಈ ರೀತಿಯಾಗಿ ಫೋಟೋ ಮೂಲಕ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸೋದಕ್ಕಾಗಿ ಸ್ವಿಮ್ಮಿಂಗ್ ಫೂಲ್‍ನಲ್ಲಿ ಈ ಫೋಟೋವೊಂದನ್ನ ಶೂಟ್ ಮಾಡಲಾಗಿದೆ” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ಕೆಲ ದಿನಗಳ ಹಿಂದೆ ಕೆರೆಗಳ ಸಂರಕ್ಷಣೆ ಬಗ್ಗೆ ಫೋಟೋಶೂಟ್ ಮೂಲಕ ಜಾಗೃತಿ ಮೂಡಿಸಲು ಎಂದು ಸನ್ಮತಿ ಪ್ರಸಾದ್ ಅನ್ನೋರು ರಶ್ಮಿಕಾರನ್ನು ಕೇಳಿದ್ದರು. ಇದಕ್ಕೆ ಒಪ್ಪಿದ್ದ ರಶ್ಮಿಕಾ ನೊರೆ ಕೆರೆಯ ಪಕ್ಕ ನಿಂತು ಫೋಟೋಗೆ ಪೋಸ್ ನೀಡಿದ್ದರು. ಇದಕ್ಕೆ ಸಂಭಾವನೆ ಕೂಡ ಪಡೆದಿರಲಿಲ್ಲ. ಆದರೆ ಅಪ್ಪಿ ತಪ್ಪಿಯೂ ಕೆರೆಗೆ ಇಳಿದಿರಲಿಲ್ಲ. ಆದರೆ ಈ ಫೋಟೋಶೂಟ್ ರಶ್ಮಿಕಾ ಗೆಳತಿಯ ಮನೆಯಲ್ಲಿರುವ ಈಜುಕೊಳದಲ್ಲಿ ಮಾಡಲಾಗಿದೆ.

    ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ನೀರಿನಲ್ಲಿ ತೇಲುತ್ತಿರುವಾಗ ಅದರ ಮಧ್ಯದಲ್ಲಿ ರಶ್ಮಿಕಾ ಇರುವಂತೆ ಅಂಡರ್ ವಾಟರ್‍ನಲ್ಲಿ ಮಾಡಿದ್ದ ಫೋಟೋಶೂಟ್ ಇದಾಗಿದೆ. ಆದರೆ ಆ ಫೋಟೋಗಳನ್ನು ನೋಡಿ ಎಲ್ಲರೂ ರಶ್ಮಿಕಾ ಕಲುಷಿತ ಕೆರೆಯಲ್ಲಿ ಈಜಾಡಿದ್ದಾರೆ ಅಂತ ಸುದ್ದಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಐಪಿಎಸ್ ಅಧಿಕಾರಿ ಡಿ. ರೂಪರಿಂದ ಫ್ಯಾಷನ್ ಫೋಟೋಶೂಟ್

    ಐಪಿಎಸ್ ಅಧಿಕಾರಿ ಡಿ. ರೂಪರಿಂದ ಫ್ಯಾಷನ್ ಫೋಟೋಶೂಟ್

    ಬೆಂಗಳೂರು: ಐಪಿಎಸ್ ಅಧಿಕಾರಿ ಡಿಐಜಿ ಡಿ ರೂಪ ಅವರು ಫ್ಯಾಷನ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

    ಖ್ಯಾತ ಮಹಿಳಾ ಫ್ಯಾಶನ್ ಡಿಸೈನರ್ ಮೀನು ಸರವಣನ್ ಅವರು ಡಿಸೈನ್ ಮಾಡಿದ್ದ ಕಡು ನೀಲಿ ಬಣ್ಣದ ಗೌನ್ ಧರಿಸಿ ಮಾಡೆಲ್ ರೀತಿಯಾಗಿ ಮಿಂಚಿದ್ದಾರೆ. ರೂಪಾ ಅವರ ಮನೆಯಲ್ಲೇ ಈ ಫೋಟೋ ಶೂಟ್ ನಡೆದಿದ್ದು, ಯಾವ ಮಾಡೆಲ್‍ಗೂ ಕಡಿಮೆ ಇಲ್ಲದಂತೆ ಐಪಿಎಸ್ ಅಧಿಕಾರಿ ಮಿಂಚುತ್ತಿದ್ದಾರೆ. ಈ ವೇಳೆ ರೂಪ ಅವರು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ರೂಪ ಅವರು 1998 ರಲ್ಲಿ ಮಿಸ್ ಬೆಂಗಳೂರು ಯುನಿವರ್ಸಿಟಿ ಕಿರೀಟ ಮತ್ತು ಮಿಸ್ ದಾವಣಗೆರೆ ಪ್ರಶಸ್ತಿಯನ್ನು ಗೆದ್ದಿದ್ದರು.

    ನಾನು ಪೊಲೀಸ್ ಕೆಲಸ ಬಿಟ್ಟು ಮಾಡೆಲಿಂಗ್ ಗೆ ಹೋಗಿಲ್ಲ. ಈ ಮೂಲಕ ಒಬ್ಬ ಸಬಲೀಕೃತ ಮಹಿಳೆ ಕೂಡ ಫ್ಯಾಷನ್ ಆಗಿ ಇರಬಲ್ಲಳು. ಕೇವಲ ಮಾಡೆಲ್ ಮತ್ತು ಚಿತ್ರ ತಾರೆಯರು ಮಾತ್ರ ಫ್ಯಾಷನ್ ಮಾಡಬಲ್ಲರು, ಸಾಮಾನ್ಯ ಜನರು ಕೂಡ ಫ್ಯಾಷನ್ ಮಾಡಬಲ್ಲರು ಎಂಬ ಸಂದೇಶವನ್ನು ತಿಳಿಸಲು ಈ ರೀತಿ ಮಾಡಿದ್ದೇನೆ. ನನ್ನ ಜೊತೆಗೆ ಮೂರು-ನಾಲ್ಕು ಸಾಮಾನ್ಯ ಮಹಿಳೆಯರು ಫೋಟೋ ಶೂಟ್ ಮಾಡಿಸಿದ್ದಾರೆ ಎಂದು ರೂಪ ಅವರು ಹೇಳಿದ್ದಾರೆ.

    “ನಾನು ಮೊದಲಿಗೆ ನಾಗರಿಕ ಸೇವೆಗಳಲ್ಲಿ ಸೇರಿಕೊಂಡಾಗ, ನಾನು ಕಾಲೇಜಿನಲ್ಲಿ ನನ್ನ ಸಾಧನೆಗಳ ಬಗ್ಗೆ ಯಾರಿಗೂ ಹೇಳಲಿಲ್ಲ. ಯಾಕೆಂದರೆ ಜನರು ನನ್ನನ್ನು ಅಧಿಕಾರಿ ಎಂದು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಮೀನು ಸರವಣನ್ ಅವರು ನನಗೆ ಸುಮಾರು 10 ತಿಂಗಳುಗಳ ಕಾಲ ಸಲಹೆ ನೀಡುತ್ತಿದ್ದರು. ನಾನು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಅವರ ಒತ್ತಾಯಪೂರ್ವಕವಾಗಿ ನಾನು ಯೋಚಿಸಿ ಫೋಟೋಶೂಟ್ ಮಾಡಿಸಿಕೊಂಡೆ ಎಂದು ಹೇಳಿದ್ದಾರೆ.

    ರೂಪ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಾಲ್‍ ನಲ್ಲಿ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದ ಮಾಡೆಲ್ ಅರೆಸ್ಟ್

    ಮಾಲ್‍ ನಲ್ಲಿ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದ ಮಾಡೆಲ್ ಅರೆಸ್ಟ್

    ಹ್ಯಾರಿಸ್ಬರ್ಗ್: ಮಾಡೆಲ್ ಒಬ್ಬರು ಬೆತ್ತಲಾಗಿ ಫೋಟೋಶೂಟ್ ಮಾಡಿಸಿದ್ದಕ್ಕೆ ಆಕೆಯನ್ನು ಮತ್ತು ಫೋಟೋಗ್ರಾಫರ್ ಇಬ್ಬರು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.

    22 ವರ್ಷದ ಚೆಲ್ಸಿಯಾ ಗುರ್ರಾ ಮಾಡೆಲ್ ಮತ್ತು ಫ್ಯಾಶನ್ ಛಾಯಾಗ್ರಾಹಕ 64 ವರ್ಷದ ಮೈಕೆಲ್ ವಾರ್ನಾಕ್ ನನ್ನು ಬಂಧಿಸಲಾಗಿತ್ತು.

    ಇತ್ತೀಚೆಗೆ ಚೆಲ್ಸಿಯಾ ಮಾಲ್ ನಲ್ಲಿ ನಗ್ನವಾಗಿ ಫೋಟೋಶಾಟ್ ಮಾಡಿಸುತ್ತಿದ್ದರು. ಆದ್ದರಿಂದ ಇಬ್ಬರನ್ನು ಬಂಧಿಸಲಾಗಿತ್ತು. ವಾರ್ನಾಕ್ ಪೆನ್ಸಿಲ್ವೇನಿಯಾದ ಮಾನ್ರೋವಿಲ್ಲೆನಲ್ಲಿ ಜನಸಂದಣಿ ಇದ್ದ ಮಿರಾಕಲ್ ಮೈಲ್ ಶಾಪಿಂಗ್ ಸೆಂಟರ್ ನಲ್ಲಿ ಸುಮಾರು 11 ಗಂಟೆಗೆ ಫೋಟೋಶೂಟ್ ನಡೆಸುತ್ತಿದ್ದರು. ಈ ವೇಳೆ ಸಾರ್ವಜನಿಕರೊಬ್ಬರು ಪೊಲೀಸರಿಗೆ ಕರೆ ಮಾಡಿ ಫೋಟೋಶೂಟ್ ಬಗ್ಗೆ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗ ಮಾಡೆಲ್ ಮಾಲ್ ನ ಮುಂಭಾಗದಲ್ಲಿ ಬಟ್ಟೆ ಇಲ್ಲದೆ ಬರೀ ಎತ್ತರದ ಪಾದರಕ್ಷೆಯನ್ನು ಧರಿಸಿಕೊಂಡಿದ್ದು, ವಾರ್ನಾಕ್ ಆಕೆಯ ಫೋಟೋಗಳನ್ನು ತೆಗೆಯುತ್ತಿದ್ದನು. ನಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

    ಮಾಡೆಲ್ ಗುರ್ರಾ ತನ್ನ ಪತಿ ನಗ್ನ ಫೋಟೋಶೂಟ್ ಗೆ ಸುಮಾರು 300 ಡಾಲರ್ ಸಂಭಾವನೆ ಪಡೆಯುತ್ತಾರೆ. ಪೊಲೀಸರು ಈ ರೀತಿಯ ಫೋಟೋಶೂಟ್ ಬಗ್ಗೆ ಪ್ರಶ್ನೆ ಕೇಳಿದಾಗ ಆಕೆ, “ನನ್ನ ನಗ್ನ ಮಾಡೆಲಿಂಗ್ ಪ್ರಾಮಾಣಿಕ ಕೆಲಸವಾಗಿದೆ. ನನ್ನ ಕಾಲೇಜು ಜೀವನಕ್ಕಾಗಿ ಈ ಹಣವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

    ಮಾಡೆಲ್ ಮತ್ತು ಛಾಯಗ್ರಾಹಕನ ವಿರುದ್ಧ ಕ್ರಿಮಿನಲ್ ವಿಜ್ಞಾಪನೆ, ಅಸಭ್ಯವಾಗಿ ಫೋಟೋಶೂಟ್ ಮಾಡಿಸಿಕೊಳ್ಳುವುದು ಮತ್ತು ಮಾದಕ ವಸ್ತುಗಳ ಅಸಮರ್ಪಕ ನಡವಳಿಕೆ ಅನ್ವಯ ಅಡಿಯಲ್ಲಿ ಇಬ್ಬರನ್ನೂ ಬಂಧಿಸಲಾಗಿತ್ತು.

    ಬಂಧಿತರಾಗಿದ್ದ ರೂಪದರ್ಶಿಗೆ 300 ಡಾಲರ್ (19,530 ರೂ.) ದಂಡವನ್ನು ವಿಧಿಸಲಾಗಿದೆ. ಜೊತೆಗೆ ಇಬ್ಬರ ವಿರುದ್ಧ ಇತರೆ ಆರೋಪಗಳನ್ನು ಕೈಬಿಡಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಯಲ್ಲಿ ತಿಳಿಸಿದೆ.