Tag: photoshoot

  • ಈ ನಟಿ ಮೈಮೇಲೆ ಬಟ್ಟೆ ನಿಲ್ಲೋದೇ ಇಲ್ವಂತೆ- ಫೋಟೋ ವೈರಲ್

    ಈ ನಟಿ ಮೈಮೇಲೆ ಬಟ್ಟೆ ನಿಲ್ಲೋದೇ ಇಲ್ವಂತೆ- ಫೋಟೋ ವೈರಲ್

    ಮುಂಬೈ: ಮೈ ಮೇಲೆ ಬಟ್ಟೆ ಧರಿಸದೆ ಫೋಟೋಗೆ ಪೋಸು ನೀಡುತ್ತಿರುವ ಬಾಲಿವುಡ್ ಟೀನಾ ದತ್ತಾ ಅವರ ಫೋಟೋ ವೈರಲ್ ಆಗಿದೆ.

    ನಟಿ ಟೀನಾ ದತ್ತಾ ಮತ್ತೊಮ್ಮೆ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋ ಹಂಚಿಕೊಳ್ಳುವ ಮೂಲಕ ತನ್ನತ್ತ ಸೆಳೆಯವಂತೆ ಮಾಡಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ

    ಹೊಸ ತಿಂಗಳು ಬದಲಾವಣೆಗೆ ಅರ್ಹವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದು ಎಡಿಟ್ ಮಾಡಿದ ಚಿತ್ರವಾಗಿದೆ. ನಿಮ್ಮ ಚರ್ಮ ಸರಿಯಾಗಿದ್ದರೆ ನೀವು ಆರಾಮದಾಯಕವಾಗಿರುತ್ತೀರಿ ಎಂದು ಭಾವಿಸುತ್ತೇನೆ. ಇತರರು ನಿಮ್ಮ ಚರ್ಮದ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಚಿಂತೆಯನ್ನು ತೆಗೆದುಹಾಕಿ ಎಂದು ನಟಿ ಬರೆದುಕೊಂಡು ಕೆಲವು  ಹಾಟ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಉತ್ತರನ್ ಖ್ಯಾತಿಯ ನಟಿ ಟೀನಾ ಅವರು ನಟನೆ ಮಾತ್ರವಲ್ಲದೆ ಇದೀಗ ಮೈಮಾಟದಿಂದಳೂ ಯುವಕರ ನಿದ್ದೆ ಕೆಡಿಸುವ ಕೆಲಸ ಮಾಡಿದ್ದಾರೆ. ಸಾಕಷ್ಟು ಜನರು ಆಕೆಯ ಫೋಟೋಗೆ ಲೈಕ್ಸ್ ಮಾಡಿದ್ದಾರೆ. ಕಮೆಂಟ್ ಸೆಕ್ಷನ್ ಬ್ಲಾಕ್ ಮಾಡಿದ್ದರೂ ಸಾಮಾಜಿಕ ಜಾಲತಣದಲ್ಲಿ ಜನ ಕಮೆಂಟ್ ಮಾಡಿ ಈ ಫೋಟೋ ಅಪ್ಲೋಡ್ ಮಾಡುತ್ತಿದ್ದಾರೆ.

  • ಮತ್ತು ಬರಿಸುವಂತಿದೆ ಶ್ರೀಲೀಲಾ ಫೋಟೋ ಶೂಟ್

    ಮತ್ತು ಬರಿಸುವಂತಿದೆ ಶ್ರೀಲೀಲಾ ಫೋಟೋ ಶೂಟ್

    ಬೆಂಗಳೂರು: ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ ಮಾದಕ ನೋಟದಲ್ಲಿ ಮತ್ತು ಬರಿಸುತ್ತಿರುವ ಹಾಗೇ ಫೋಸ್ ಕೊಟ್ಟ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

    ಕಿಸ್, ಭರಾಟೆ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಶ್ರೀಲೀಲಾ ಧ್ರುವ ಸರ್ಜಾ ಅಭಿನಯದ ದುಬಾರಿ ಚಿತ್ರದಲ್ಲೂ ಅಭಿನಯಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಸ್ಯಾಂಡಲ್‍ವುಡ್ ಬ್ಯೂಟಿಗೆ ಟಾಲಿವುಡ್‍ನಲ್ಲೂ ನಟಿಸುವ ಅವಕಾಶ ಸಿಕ್ಕಿದ್ದೂ, ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?

     

    View this post on Instagram

     

    A post shared by Sreeleela (@sreeleela14)

    ಲಾಕ್‍ಡೌನ್ ಇರುವುದರಿಂದ ಸಿನಿಮಾ ಚಿತ್ರೀಕರಣ ಸ್ಥಗಿತವಾಗಿರುವುದರಿಂದ ನಟಿ ಫೋಟೋ ಶೂಟ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಾ ಪಡ್ಡೆ ಹುಡುಗರ ಮನಸ್ಸನ್ನು ಕದಿಯುತ್ತಿದ್ದಾರೆ. ಶ್ರೀಲೀಲಾ ತನ್ನದೇ ಆಗಿರುವ ಅಭಿಮಾನಿಬಳಗವನ್ನು ಹೊಂದಿದ್ದಾರೆ. ಇದನ್ನೂ ಓದಿ: ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

     

    View this post on Instagram

     

    A post shared by Sreeleela (@sreeleela14)

    ಪೆಳ್ಳಿಸಂದದಿ ಎಂಬ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಈ ಚಿತ್ರ ಲಿರಿಕಲ್ ವಿಡಿಯೋ ಹಾಡು ಇತ್ತೀಚೆಗಷ್ಟೆ ರಲೀಸ್ ಆಗಿದೆ. ಸಿನಿಮಾಗಳ ಜತೆಗೆ ಶ್ರೀಲೀಲಾ ಫೋಟೋಶೂಟ್‍ಗಳಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಟಿ ಶ್ರೀಲೀಲಾ ಅವರ ಲೆಟೆಸ್ಟ್ ಫೋಟೋ ಶೂಟ್‍ನ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  • ಬೆತ್ತಲಾಗಿ ಕಸದ ಗಾಡಿಯಲ್ಲಿ ಕುಳಿತ ಪರಿಣಿತಿ ಚೋಪ್ರಾ

    ಬೆತ್ತಲಾಗಿ ಕಸದ ಗಾಡಿಯಲ್ಲಿ ಕುಳಿತ ಪರಿಣಿತಿ ಚೋಪ್ರಾ

    ಮುಂಬೈ: ಸಿನಿಮಾ ಕಲಾವಿದರಿಗೆ ಫೋಟೋಶೂಟ್ ಮಾಡಿಸಿಕೊಳ್ಳೋದು ಅಂದ್ರೆ ಇಷ್ಟ. ಹಾಗಾಗಿ ಫೋಟೋಶೂಟ್ ಲಕ್ಷ ಲಕ್ಷ ಹಣವನ್ನ ನೀರಿನಂತೆ ಚೆಲ್ಲಲು ಸಿದ್ಧ ಇರ್ತಾರೆ. ಫೋಟೋಶೂಟ್‍ಗಾಗಿ ಡಿಸೈನರ್ ನಿಂದ ವಿನ್ಯಾಸಗೊಂಡ ಸ್ಪೆಷಲ್ ಧಿರಿಸು, ಒಳ್ಳೆಯ ಕ್ಯಾಮೆರಾಮ್ಯಾನ್, ಸುಂದರ ಸ್ಥಳ ಹೀಗೆ ಹಲವು ವಿಷಯಗಳ ಬಗ್ಗೆ ಗಮನ ಕೊಡುತ್ತಾರೆ. ಆದ್ರೆ ಪರಿಣಿತಿ ಚೋಪ್ರಾ ಬೆತ್ತಲಾಗಿ ಕಸದ ಗಾಡಿಯಲ್ಲಿ ಕುಳಿತು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಫೋಟೋಗಳು ವೈರಲ್ ಆಗಿದ್ದು, ಟ್ರೋಲ್ ಆಗುತ್ತಿವೆ.

    ದಬೂ ರತ್ನಾನಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಆಗಬೇಕು ಅಂತ ಎಷ್ಟೋ ಜನ ಕಾಯುತ್ತಿರುತ್ತಾರೆ. ಅದಕ್ಕೆ ಕಾರಣ ದಬೂ ರತ್ನಾನಿ ಕ್ಯಾಮೆರಾ ಕೈಚಳಕ. ಪ್ರತಿವರ್ಷ ದಬೂ ರತ್ನಾನಿ ಹೊರ ತರುವ ಸ್ಟಾರ್ ಗಳ ಕ್ಯಾಲೆಂಡರ್ ಗಾಗಿ ಇಡೀ ಬಣ್ಣದ ಲೋಕ ವೇಟ್ ಮಾಡ್ತಿರುತ್ತೆ. ನಟ-ನಟಿಯರನ್ನ ಮತ್ತಷ್ಟು ಮೋಹಕವಾಗಿ ಕಾಣಿಸುವಂತೆ ಮಾಡುವಲ್ಲಿ ರತ್ನಾನಿ ಪಂಟರು. ರತ್ನಾನಿ ಫೋಟೋಶೂಟ್ ಗೆ ಆಯ್ಕೆ ಮಾಡಿಕೊಳ್ಳುವ ಸ್ಥಳಗಳು ಡಿಫರೆಂಟ್.

     

    View this post on Instagram

     

    A post shared by Dabboo Ratnani (@dabbooratnani)

    ಈಗ ಸುಂದರಿ ಪರಿಣಿತಿಯನ್ನ ಕಸದ ಗಾಡಿಯಲ್ಲಿ ಕೂರಿಸಿ ಫೋಟೋ ಕ್ಲಿಕ್ ಮಾಡಿದ್ದು, ನಟಿಯ ಹಾಲಿನ ಹೊಳಪಿನ ಮೈ ಬಣ್ಣದಲ್ಲಿ ನೋಡಗರು ತೇಲಾಡ್ತಿದ್ದಾರೆ. ಇನ್ನೂ ಕೆಲ ನೆಟ್ಟಿಗರು ಕಸದ ಗಾಡಿಗೂ ಒಂದು ವ್ಯಾಲ್ಯೂ ಬಂತು. ಆ ಗಾಡಿಗೆ ನಮಗೆ ಕೊಡಿ ಪ್ಲೀಸ್ ಅಂತ ಕಮೆಂಟ್ ಮಾಡುತ್ತಿದ್ದಾರೆ.

  • ನಿದ್ದೆಯಲ್ಲಿದ್ದ ಸಿಂಹದ ಜೊತೆ ಜೋಡಿಯ ಫೋಟೋಶೂಟ್

    ನಿದ್ದೆಯಲ್ಲಿದ್ದ ಸಿಂಹದ ಜೊತೆ ಜೋಡಿಯ ಫೋಟೋಶೂಟ್

    ಇಸ್ಲಾಮಾಬಾದ್: ನಿದ್ದಯೆಯಲ್ಲಿದ್ದ ಸಿಂಹದ ಮರಿ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡ ಪಾಕಿಸ್ತಾನದ ಜೋಡಿ ಇಕ್ಕಟ್ಟಿಗೆ ಸಿಲುಕಿದೆ.

    ಪಾಕಿಸ್ತಾನದ ಲಾಹೋರ್ ಮೂಲದ ದಂಪತಿ ತಮ್ಮ ವಿವಾಹ ಫೊಟೋಶೂಟ್‍ನಲ್ಲಿ ಸಿಂಹದ ಮರಿ ಬಳಸಿಕೊಂಡು ಟೀಕೆಗೆ ಒಳಗಾಗಿದ್ದಾರೆ. ನಿದ್ದೆ ಮಾಡುತ್ತಿರುವ ಸಿಂಹದ ಮರಿಜೊತೆಗೆ ದಂಪತಿ ಪೋಸ್ ಕೊಟ್ಟಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಚರ್ಚೆಗಳಾಗುತ್ತಿದೆ.

    ಫೋಟೋ ಸ್ಟುಡಿಯೋ ಸ್ನೇಹಿತರೊಬ್ಬರು ಸಿಂಹದ ಮರಿಯನ್ನು ಸ್ಟುಡಿಯೋಗೆ ತಂದಿದ್ದರು. ಈ ವೇಳೆ ದಂಪತಿ ಫೋಟೋಶೂಟ್ ಮಾಡಿಸಿದ್ದಾರೆ. ಈ ವೇಳೆ ಆ ಸಿಂಹದ ಮರಿಯೊಂದಿಗೆ ಒಂದೆರಡು ಫೋಟೋವನ್ನು ತೆಗೆಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದ ಫೋಟೋಗಳನ್ನು ಫೋಟೋಗ್ರಾಫರ್ ಖಾತೆಯಿಂದ ತೆಗೆದುಹಾಕಿದ್ದಾರೆ. ಆದರೆ ಸ್ಕ್ರೀನ್ ಶಾಟ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

  • ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಕ್ವೆಲಿನ್ ಟಾಪ್‍ಲೆಸ್ ಫೋಟೋ

    ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಕ್ವೆಲಿನ್ ಟಾಪ್‍ಲೆಸ್ ಫೋಟೋ

    ಮುಂಬೈ: ನಟಿ ಮಣಿಯರಿಗೆ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಒಂಥರಾ ಕ್ರೇಜ್, ಅದೇ ರೀತಿ ಇದೀಗ ಜಾಕ್ವೆಲಿನ್ ಫರ್ನಾಂಡಿಸ್ ಅವರ ಲೆಟೆಸ್ಟ್ ಫೋಟೋ ಶೂಟ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಟಾಪ್‍ಲೆಸ್ ಫೋಟೋ ಶೂಟ್ ಮಾಡಿಸುವ ಮೂಲಕ ನಟಿ ಗಮನ ಸೆಳೆದಿದ್ದಾರೆ.

    ಫೋಟೋಶೂಟ್‍ನ ಕೆಲ ಚಿತ್ರಗಳನ್ನು ಜಾಕ್ವೆಲಿನ್ ಇನ್‍ಸ್ಟಾಗ್ರಾಂನಲ್ಲಿ ಅಪ್‍ಲೋಡ್ ಮಾಡಿದ್ದು, ಅವರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಚರ್ಚೆಯಲ್ಲಿ ಬ್ಯುಸಿಯಾಗಿದ್ದಾರೆ. ಟಾಪ್‍ಲೆಸ್ ಆಗಿ ಸೋಫಾ ಮೇಲೆ ಮಲಗಿ ಪೋಸ್ ನೀಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಬ್ಲಾಕ್ ಆ್ಯಂಡ್ ವೈಟ್ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ಅವರು, ವಾವಾ ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೇವಲ ಒಂದು ಗಂಟೆಯೊಳಗೆ ಬರೋಬ್ಬರಿ 4 ಲಕ್ಷ ಲೈಕ್ಸ್ ಪಡೆದಿದೆ. ಕಮೆಂಟ್ ಸೆಕ್ಷನ್‍ನಲ್ಲಿ ಹಾಟ್ ಹಾಗೂ ಹಾರ್ಟ್ ಎಮೋಜಿಗಳೇ ಕಾಣುತ್ತಿವೆ. ಅಬ್ಸಲ್ಯೂಟ್ಲಿ ಸ್ಟನ್ನಿಂಗ್ ಎಂದು ಒಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಯೂ ಪರ್ಫೆಕ್ಟ್ ಎಂದು ಹೇಳಿದ್ದಾನೆ. ಹೀಗೆ ಹಲವರು ಕಮೆಂಟ್ ಮಾಡುವ ಮೂಲಕ ನೆಚ್ಚಿನ ನಟಿಯ ಫೋಟೋ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಜಾಕ್ವೆಲಿನ್ ಫರ್ನಾಂಡಿಸ್ ಸದ್ಯ ಭೂತ್ ಪೊಲೀಸ್ ಚಿತ್ರದಲ್ಲಿ ನಟಿಸುತ್ತಿದ್ದು, ಸೈಫ್ ಅಲಿ ಖಾನ್, ಅರ್ಜುನ್ ಕಪೂರ್ ಹಾಗೂ ಯಮಿ ಗೌತಮ್ ಸಹ ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

  • ಸರ್ಕಾರಿ ಹೆಲಿಕಾಪ್ಟರ್ ನಲ್ಲಿ ಬಿಜೆಪಿ ನಾಯಕನ ವೆಡ್ಡಿಂಗ್ ಫೋಟೋಶೂಟ್

    ಸರ್ಕಾರಿ ಹೆಲಿಕಾಪ್ಟರ್ ನಲ್ಲಿ ಬಿಜೆಪಿ ನಾಯಕನ ವೆಡ್ಡಿಂಗ್ ಫೋಟೋಶೂಟ್

    – ಓರ್ವ ಅಮಾನತು, ತನಿಖೆಗೆ ಆದೇಶ

    ರಾಯ್ಪುರ: ಸ್ಥಳೀಯ ಬಿಜೆಪಿ ನಾಯಕ ಸರ್ಕಾರಿ ಹೆಲಿಕಾಪ್ಟರ್ ನಲ್ಲಿ ಪತ್ನಿ ಜೊತೆ ಫೋಟೋಶೂಟ್ ಮಾಡಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಬಿಜೆಪಿ ನಾಯಕನಿಂದಾಗಿ ಓರ್ವ ಅಮಾನತುಗೊಂಡಿದ್ರೆ, ಮೂವರ ವಿರುದ್ಧ ತನಿಖೆಗೆ ಸಚಿವಾಲಯ ಆದೇಶಿಸಿದೆ. ಏಳು ದಿನಗಳಲ್ಲಿ ತನಿಖಾ ವರದಿ ನೀಡುವಂತೆ ಸೂಚನೆ ನೀಡಿದೆ.

    ಮಾಜಿ ಶಾಸಕ, ಜಶಪುರ ಬಿಜೆಪಿ ಜಿಲ್ಲಾಧ್ಯಕ್ಷ ಸಂಕೇತ್ ಸಾಯ್ ಫೋಟೋಶೂಟ್ ಮಾಡಿಸಿಕೊಂಡ ನಾಯಕ. ಕೆಲ ದಿನಗಳ ಹಿಂದೆ ಸಂಕೇತ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಭಾನುವಾರ ಹೆಲಿಕಾಪ್ಟರ್ ನಿಲ್ಲಿಸಿದ ಹೈಂಗರ್ ಪ್ರದೇಶಕ್ಕೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಗಂಟೆಗೂ ಅಧಿಕ ಕಾಲ ಫೋಟೋಶೂಟ್ ನಡೆಸಿದ್ರೂ ಅಧಿಕಾರಿಗಳು ತಡೆಯಲು ಮುಂದಾಗಿಲ್ಲ ಎನ್ನಲಾಗಿದೆ.

    ಭಾನುವಾರ ಸಂಜೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬಳಿಕ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರಿ ಹೆಲಿಕಾಪ್ಟರ್ ಖಾಸಗಿಗೆ ಬಳಸಿಕೊಂಡಿದ್ದು ಎಷ್ಟು ಸರಿ? ಮುಖ್ಯಮಂತ್ರಿಗಳು ಪ್ರಯಾಣಿಸುವ ಕಾಪ್ಟರ್ ಇದಾಗಿದ್ದು, ಭದ್ರತಾ ಸಿಬ್ಬಂದಿ ಫೋಟೋಶೂಟ್ ಗೆ ಅವಕಾಶ ನೀಡಿದ್ದು ದೊಡ್ಡ ನಿರ್ಲಕ್ಷ್ಯ ಎಂದು ವಿಪಕ್ಷಗಳು ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡಿವೆ.

  • ಮತ್ತೆ ಪ್ರೆಗ್ನೆನ್ಸಿ ಫೋಟೋಶೂಟ್ – ಮಯೂರಿಗೆ ಹೆಣ್ಣು ಮಗುವೆಂದ ಅಭಿಮಾನಿಗಳು

    ಮತ್ತೆ ಪ್ರೆಗ್ನೆನ್ಸಿ ಫೋಟೋಶೂಟ್ – ಮಯೂರಿಗೆ ಹೆಣ್ಣು ಮಗುವೆಂದ ಅಭಿಮಾನಿಗಳು

    ಬೆಂಗಳೂರು: ತುಂಬು ಗರ್ಭಿಣಿ ನಟಿ ಮಯೂರಿ ಇದೀಗ ಮತ್ತೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ದಂಪತಿ ಮುದ್ದು ಮುದ್ದಾದ ಪೋಸ್ ನೀಡಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

    ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಮಯೂರಿ ಹಾಗೂ ಅರುಣ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಪ್ರಸವಕ್ಕೆ ದಿನಗಣನೆ ಆರಂಭವಾಗಿದ್ದು, ಮೊದಲ ಗರ್ಭದ ಸವಿ ನೆನಪಿಗಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ ಈ ಸೆಲೆಬ್ರಿಟಿ ದಂಪತಿ. ಈ ಫೋಟೋವನ್ನು ಮಯೂರಿ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


    ಸ್ನೇಹಿತರೆಲ್ಲ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ. ತಂದೆ-ತಾಯಿ ಆಗುತ್ತಿರುವ ಮಯೂರಿಗೆ ಸ್ನೇಹಿತರು ಶುಭಕೋರಿ ಸಂಭ್ರಮಿಸಿದ್ದಾರೆ. ಈ ವೇಳೆ ತೆಗೆದಿರುವ ಕೆಲವು ಫೋಟೋಗಳನ್ನು ಮಯೂರಿ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತುಂಬಾ ವಿಶೇಷವಾಗಿದೆ ಎಂದು ಬರೆದುಕೊಂಡು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ತುಂಬು ಗರ್ಭಿಣಿ ಮಯೂರಿಗೆ ಶುಭಕೊರುವುದರ ಜೊತೆಗೆ ನಿಮಗೆ ಹೆಣ್ಣು ಮಗುವಾಗುತ್ತದೆ ಎಂದು ಹೆಚ್ಚಿನವರು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by mayuri (@mayurikyatari)

    ಮದುವೆ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದ ಮಯೂರಿ, ದೀಪಾವಳಿ ದಿನದಂದು ತಾನು ತಾಯಿಯಾಗುತ್ತಿರುವ ವಿಚಾರ ಹೇಳಿಕೊಂಡಿದ್ದರು. ಈಗಾಗಲೇ ಮೊದಲು ಒಂದು ಬಾರಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಈ ಶುಭದಿನದಂದು ನಾವು ಪುಟ್ಟ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದರು. ನಟಿಯ ಪೋಸ್ಟ್ ಗೆ ಎಲ್ಲರೂ ಕಾಮೆಂಟ್ ಮಾಡಿ ಕಂಗ್ರಾಟ್ಸ್ ಹೇಳುವ ಮೂಲಕವಾಗಿ ಶುಭಕೋರಿದ್ದರು.

  • ಈಜುಕೊಳದಲ್ಲಿ ಕಿರುತೆರೆ ನಟಿಯ ಹಾಟ್ ಫೋಟೋಶೂಟ್

    ಈಜುಕೊಳದಲ್ಲಿ ಕಿರುತೆರೆ ನಟಿಯ ಹಾಟ್ ಫೋಟೋಶೂಟ್

    – ಪಡ್ಡೆಹುಡುಗರ ಮೈ ಬೆಚ್ಚಗಾಗಿಸಿದ ಬಿಕಿನಿ ಫೋಟೋ

    ಮುಂಬೈ: ಬಾಲಿಕಾ ವಧು ಸಿರೀಯಲ್ ಮೂಲಕ ಎಲ್ಲರ ಮನೆಮಾತಾಗಿದ್ದ ಅವಿಕಾ ಗೋರ್ ಬಿಕಿನಿ ತೊಟ್ಟು ಸೂರ್ಯನಿಗೆ ಮೈಯೊಡ್ಡುತ್ತಿರುವ ಫೋಟೋ ಇದೀಗ ಭಾರೀ ಸದ್ದು ಮಾಡುತ್ತಿದೆ.

    ತನ್ನ ಹಾಟ್- ಹಾಟ್ ಫೋಟೋಗಳ ಮೂಲಕ ಕಳೆದ ವರ್ಷ ಸುದ್ದಿಯಾಗಿದ್ದ ಅವಿಕಾ ಮತ್ತೆ ಇದೀಗ ಹೊಸ ಸೆಕ್ಸಿ ಫೋಟೋ ಒಂದನ್ನು ಅಪ್‍ಲೋಡ್ ಮಾಡಿದ್ದಾರೆ. ಬಿಕಿನಿತೊಟ್ಟು ಈಜುಕೊಳದ ದಡದಲ್ಲಿ ಮಲಗಿರುವ ಚಿತ್ರಗಳು ಇದೀಗ ವೈರಲ್ ಆಗುತ್ತಿದೆ.

    ಅವಿಕಾ ಗೋರ್ ಕಳೆದ ಅಕ್ಟೋಬರ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಮಯ ಕಳೆದಿದ್ದರು. ಇದರ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಇವರು ಕಳೆದ ವರ್ಷ ನನಗೆ ಸರಿಯಾಗಿ ನೆನಪಿದೆ ನಾನು ಕನ್ನಡಿ ಮುಂದೆ ನಿಂತು ನನನ್ನು ನೋಡಿದಾಗ ಕುಸಿದು ಬಿದ್ದೆ. ನನ್ನನ್ನು ನಾನೆ ನೋಡಿಕೊಂಡಾಗ ನನಗೆ ಇಷ್ಟವಾಗಿರಲಿಲ್ಲ. ತೋಳು ಮತ್ತು ಕಾಲುಗಳ ಜೊತೆ ಹೊಟ್ಟೆಯು ತುಂಬಾ ಬೆಳೆದಿತ್ತು. ಇದಕ್ಕೆ ಕಾರಣ ನಾನು ಥೈರಾಯ್ಡ್ ಮತ್ತು ಪಿಸಿಒಡಿ ಕಾಯಿಲೆಯಿಂದ ಬಳಲುತ್ತಿದ್ದೆ. ನಂತರ ಇದೀಗ ಚಿಕಿತ್ಸೆ ಪಡೆದು ಸರಿಯಾದ ಆಹಾರ ಕ್ರಮವನ್ನು ಪಾಲಿಸುತ್ತಿದ್ದೇನೆ. ಇದರಿಂದ ನನ್ನ ಆರೋಗ್ಯ ಸಮಸ್ಯೆ ಸರಿಹೊಂದಿದೆ. ನನ್ನಲ್ಲಿದ್ದ ಭಾವನೆಯನ್ನು ಸರಿಯಾಗಿ ಮೈಗೂಡಿಸಿಕೊಂಡು ಸರಿಯಾದ ಆಹಾರ ಕ್ರಮ ಮತ್ತು ಡ್ಯಾನ್ಸ್‍ನಲ್ಲಿ ತುಂಬಾ ಗಮನಹರಿಸಿ ಉತ್ತಮವಾದ ಮೈ ಕಟ್ಟನ್ನು ಪಡೆದುಕೊಂಡಿದ್ದೇನೆ. ಇದು ನನಗೆ ಖುಷಿ ಕೊಟ್ಟಿದೆ ಎಂದು ಬರೆದುಕೊಂಡಿದ್ದರು.

    ಈ ಚಿತ್ರದ ಕುರಿತು ಅವರ ಅಭಿಮಾನಿಗಳು ಹೆಚ್ಚು ಪ್ರತಿಕ್ರಿಯಿಸಿದ್ದು, ಡ್ಯಾಶಿಂಗ್ ಲುಕ್ ಮತ್ತು ಪವರ್ ಟು ಯು ಗರ್ಲ್ ಎಂಬ ಕಮೆಂಟ್ ಹಾಕಿದ್ದಾರೆ. ಇನ್ನೂ ಕೆಲವರು ಹಾರ್ಟ್ ಎಮೋಜಿ ಹಾಕಿ ಅಭಿಮಾನ ಮೆರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫಿಟ್ ಮೈಕಟ್ಟಿನ ಫೋಟೋ ಕಾಣುತ್ತಿದ್ದಂತೆ ಪಡ್ಡೆಹುಡುಗರ ಮೈ ಬೆಚ್ಚಗಾಗಿದೆ.

    ಪ್ರಸ್ತುತ ಅವಿಕಾ ಗೋರ್ ಕ್ಯಾಂಪ್ ಡೈರೀಸ್ ಎನ್‍ಜಿಒದ ಸ್ಥಾಪಕ, ರೋಡೀಸ್ ರಿಯಲ್ ಹಿರೋಸ್‍ನ ಮಾಜಿ ಸ್ಪರ್ಧಿ ಮಿಲಿಂದ್ ಚಾಂದ್ವನಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ.

    ಖಾಸಗಿ ಚಾನಲ್‍ನಲ್ಲಿ ಪ್ರಸಾರವಾಗುವ ಬಾಲಿಕಾ ವಧು ಸಿರೀಯಲ್‍ನಲ್ಲಿ ಬಾಲಪ್ರತಿಭೆಯಾಗಿ ಅವಿಕಾ ಗೋರ್ ಮಿಂಚಿದ್ದರು. ನಂತರ ‘ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ‘ಉಯಲಾ ಜಂಪಾಲಾ’, ‘ಪಾಠಾಶಾಲಾ’, ‘ಮಾರ್ನಿಂಗ್ ವಾಕ್’ ಮತ್ತು ‘ರಾಜು ಗರಿ ಗಡಿ 3’ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.

  • ಸರ್ಕಾರಿ ಕಾರಿನಲ್ಲಿ ಯುವತಿ ಫೋಟೋಶೂಟ್- ಸಾರ್ವಜನಿಕರಿಂದ ಟೀಕೆ

    ಸರ್ಕಾರಿ ಕಾರಿನಲ್ಲಿ ಯುವತಿ ಫೋಟೋಶೂಟ್- ಸಾರ್ವಜನಿಕರಿಂದ ಟೀಕೆ

    ಕಾರವಾರ: ಸರ್ಕಾರಿ ಕಾರಿನಲ್ಲಿ ಯುವತಿಯೊಬ್ಬಳು ವಿವಿಧ ಭಂಗಿಯಲ್ಲಿ ಕುಳಿತು, ಮಲಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಸದ್ಯ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಶಿರಸಿ ಅರಣ್ಯ ವಿಭಾಗದ ವಾಹನದ ಮೇಲೆ ಯುವತಿ ವಿವಿಧ ಭಂಗಿಯಲ್ಲಿ ಕುಳಿತು ಫೋಟೋ ಶೂಟ್ ಮಾಡಿದ್ದಾಳೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಯಲ್ಲಾಪುರ ಎಸಿಎಫ್‍ಗೆ ಸೇರಿದ ವಾಹನ ಇದಾಗಿದ್ದು, ಯುವತಿ ಕುಳಿತು ಫೋಟೋ ತೆಗೆಸಿಕೊಂಡು ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸದ್ಯ ಈ ಫೋಟೋ ವೈರಲ್ ಆಗಿದ್ದು, ಸರ್ಕಾರಿ ವಾಹನವನ್ನು ಫೋಟೋ ಶೂಟ್‍ಗೆ ಬಳಸಿಕೊಂಡ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.

    ಸಾರ್ವಜನಿಕರ ಆಕ್ರೋಶದ ಬಳಿಕ ಫೋಟೋ ಶೂಟ್ ಮಾಡಿಸಿಕೊಂಡವರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

  • ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಡಿ ಸಾವು – ಕಾರಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು

    ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಡಿ ಸಾವು – ಕಾರಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು

    ಮೈಸೂರು: ಇತ್ತೀಚೆಗೆ ನವಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ನೀರಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರತ್ಯಕ್ಷದರ್ಶಿಗಳು ಅದರ ಕಾರಣ ಬಿಚ್ಚಿಟ್ಟಿದ್ದಾರೆ.

    ಹೌದು. ಪೊಲೀಸರ ಮುಂದೆ ಪ್ರತ್ಯಕ್ಷದರ್ಶಿಗಳು ತಮ್ಮ ಹೇಳಿಕೆ ದಾಖಲಿಸಿದ್ದು, ಹೀಲ್ಡ್ ಚಪ್ಪಲಿ ಹಾಗೂ ಭಾರವಾದ ಡ್ರೆಸ್ ಧರಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಜೋಡಿ ಫೋಟೋಶೂಟ್ ವೇಳೆ ಏಕಾಏಕಿ ತೆಪ್ಪ ಮಗುಚಿ ಬಿದ್ದಿದೆ. ತೆಪ್ಪ ಮಗುಚಲು ಹೀಲ್ಡ್ ಚಪ್ಪಲಿ, ಭಾರದ ಡ್ರೆಸ್ ಕೂಡ ಕಾರಣ ಎಂದು ಅವರು ಪೊಲೀಸರ ಮುಂದೆ ವಿವರಿಸಿದ್ದಾರೆ.

    ಮೈಸೂರಿನಿಂದ ಫೋಟೋಶೂಟ್‍ಗಾಗಿ ಮುಡುಕುತೊರೆಗೆ ಆಗಮಿಸಿದ್ದ ಜೋಡಿ, ನದಿ ನೋಡಿದ ಮೇಲೆ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ನಿರ್ಧಾರ ಮಾಡಿದರು. ಹೀಗಾಗಿ ಹೈಹೀಲ್ಡ್ ಚಪ್ಪಲಿ ಹಾಕಿಕೊಂಡು ತೆಪ್ಪ ಹತ್ತಿದ ಶಶಿಕಲಾ, ಕೆಲಕಾಲ ನಿಂತುಕೊಂಡೇ ಇದ್ದರು. ನಂತರ ಕುಳಿತುಕೊಳ್ಳಲು ಹೋದಾಗ ಹೀಲ್ಡ್ ಚಪ್ಪಲಿ ಸ್ಲಿಪ್ ಆಗಿದ್ದು, ತೆಪ್ಪ ಏಕಾಏಕಿ ಮಗುಚಿದೆ. ಪರಿಣಾಮ ಈಜುಬಾರದೆ ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೃತಪಟ್ಟಿದ್ದಾರೆ.

    ಘಟನೆ ಸಂಬಂಧ ಫೋಟೋಗ್ರಾಫರ್ ಕೀರ್ತಿ, ನಾವಿಕ ಮೂಗಪ್ಪ ಮೇಲೂ ಪ್ರಕರಣ ದಾಖಲು ಮಾಡಲಾಗಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು