Tag: photoshoot

  • ಬೇಬಿ ಬಂಪ್ ಫೋಟೋಶೂಟ್‍ನಲ್ಲಿ ನಟಿ ಅಮೂಲ್ಯ

    ಬೇಬಿ ಬಂಪ್ ಫೋಟೋಶೂಟ್‍ನಲ್ಲಿ ನಟಿ ಅಮೂಲ್ಯ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಅವರು ತುಂಬು ಗರ್ಭಿಣಿ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಇದೀಗ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

    ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ತುಂಬು ಗರ್ಭಿಣಿಯಾಗಿರುವ ನಟಿ ಅಮೂಲ್ಯ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ.

     

    View this post on Instagram

     

    A post shared by Amulya (@nimmaamulya)

    ತಾವು ತಾಯಿಯಾಗುತ್ತಿರುವ ವಿಚಾರವನ್ನು ಸ್ವತಃ ಅಮೂಲ್ಯ ಅವರೇ ತಿಳಿಸಿದ್ದರು. ಪತಿ ಜಗದೀಶ್ ಜೊತೆ ಇರುವ ಒಂದು ವಿಶೇಷ ಫೋಟೋವನ್ನು ಹಂಚಿಕೊಂಡು ಸದ್ಯ ನಾವು ಈಗ ಇಬ್ಬರಲ್ಲ. 2022ರಲ್ಲಿ ಮೂವರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದರು. ಇದೀಗ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಪತಿಗೆ ತಾನು ಇಟ್ಟಿರೋ ಹೆಸರನ್ನು ಮೊದಲ ಬಾರಿ ರಿವೀಲ್ ಮಾಡಿದ ರಾಧಿಕಾ

     

    View this post on Instagram

     

    A post shared by Amulya (@nimmaamulya)

    ಅಮೂಲ್ಯ ಸ್ಯಾಂಡಲ್‍ವುಡ್‍ಗೆ ಬಾಲನಟಿಯಾಗಿ ಎಂಟ್ರಿಕೊಟ್ಟರು. ನಂತರ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್ ಆಗಿ ಚಿರಪರಿಚಿತರಾದರು. ಉತ್ತಮವಾದ ನಟನೆಯ ಮೂಲಕವಾಗಿ ಅಭಿಮಾನಿಗಳ ಮನದಲ್ಲಿ ಜಾಗ ಗಿಟ್ಟಿಸಿಕೊಂಡರು. 2017ರಲ್ಲಿ ಜಗದೀಶ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ಸಖತ್ ಸದ್ದು ಮಾಡುತ್ತಿದೆ ಜಡ್ಡುವಿನ ಪುಷ್ಟ ಲುಕ್

  • ಮಣ್ಣಿಗೆ ಬಿದ್ದರೂ ಜೋಡಿಯ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾತ್ರ ಸೂಪರ್!

    ಮಣ್ಣಿಗೆ ಬಿದ್ದರೂ ಜೋಡಿಯ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾತ್ರ ಸೂಪರ್!

    ನೂರ್- ಸುಲ್ತಾನ್: ಇತ್ತೀಚಿನ ದಿನಗಳಲ್ಲಿ ಪ್ರಿ-ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಗಳು ಕಾಮನ್ ಆಗಿವೆ. ನೆನಪಿನಾಳದಲ್ಲಿ ಉಳಿಯುವಂತಹ ಈ ಫೋಟೋಶೂಟ್ ಗಳನ್ನು ವಿಶೇಷವಾಗಿ ಮಾಡಿಕೊಳ್ಳಬೇಕೆಂಬ ಬಯಕೆ ಪ್ರತಿಯೊಬ್ಬರಿಗೂ ಇದೆ. ಅಂತೆಯೇ ಇಲ್ಲೊಂದು ಜೋಡಿಯ ಫೋಟೋಶೂಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುವಂತೆ ಆಗಿದೆ.

    ಹೌದು. ಕಜಕಿಸ್ತಾನದ ಮುರಾಟ್ ಜುರಾಯೆವ್ ಹಾಗೂ ಕಾಮಿಲ್ಲಾ ಜೋಡಿಯೊಂದು ಫೋಟೋಶೂಟ್‍ಗೆಂದು ಹೊರಾಂಗಣಕ್ಕೆ ತೆರಳಿದೆ. ಆದರೆ ಅಲ್ಲಿ ಫಜೀತಿ ನಡೆದರೂ ಅವರ ಫೋಟೋ ಮಾತ್ರ ಸೂಪರ್ ಆಗಿ ಬಂದಿವೆ. ಮುರಾಟ್ ಹಾಗೂ ಕಾಮಿಲ್ಲಾ ಮದುವೆ ಧಿರಿಸಿನಲ್ಲಿಯೇ ಫೋಟೋ ತೆಗೆಸಿಕೊಳ್ಳಬೇಕೆಂದು ಇಚ್ಛಿಸಿದ್ದಾರೆ. ಇದನ್ನೂ ಓದಿ: ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ

    ಹಿಂದೆ ಪರ್ವತಗಳು ಕಾಣುವಂತೆ ಫೋಟೋಶೂಟ್ ಮಾಡಿಸಿಕೊಳ್ಳಲು ಸುಂದರವಾದ ಜಾಗವನ್ನು ಹುಡುಕಿಕೊಂಡು ತೆರಳಿದ್ದಾರೆ. ಅಂತೆಯೇ ಆ ಸ್ಥಳಕ್ಕೆ ತೆರಳಿ ಇನ್ನೇನು ಫೋಟೋ ಕ್ಲಿಕ್ ಮಾಡಬೇಕೆನ್ನುವಷ್ಟರಲ್ಲಿ ಇಬ್ಬರೂ ಆಕಸ್ಮತ್ತಾಗಿ ಕೆಸರಿಗೆ ಬಿದ್ದಿದ್ದಾರೆ. ಆದರೆ ಫೋಟೋಗ್ರಾಫರ್ ಜೋಡಿಯನ್ನು ರಕ್ಷಿಸಲು ತೆರಳಲಿಲ್ಲ. ಬದಲಾಗಿ ಜೋಡಿ ಕೆಸರಿಗೆ ಬೀಳುತ್ತಿದ್ದಂತೆಯೇ ಹಲವಾರು ರೋಮ್ಯಾಂಟಿಕ್ ರೀತಿಯ ಫೋಟೋಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಒಟ್ಟಿನಲ್ಲಿ ಕೆಸರಿನಲ್ಲಿ ಬಿದ್ದರೂ ಜೋಡಿಯ ಫೋಟೋಗಳು ಮಾತ್ರ ಸಖತ್ತಾಗಿ ಬಂದಿವೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಪರ-ವಿರೋಧ ಕಾಮೆಂಟ್ ಗಳು ಬರುತ್ತಿವೆ. ಅಲ್ಲದೆ ಕ್ಯಾಮೆರಾಮೆನ್ ಕೈಚಳಕ್ಕೆ ನೆಟ್ಟಿಗರು ಮನಸೋತಿದ್ದಾರೆ.

  • ಸಮವಸ್ತ್ರದಲ್ಲೇ ಫೋಟೋಶೂಟ್ ಮಾಡಿಸಿಕೊಂಡು ಮಹಿಳಾ ಸಬ್ ಇನ್ಸ್‌ಪೆಕ್ಟರ್ ಎಡವಟ್ಟು!

    ಸಮವಸ್ತ್ರದಲ್ಲೇ ಫೋಟೋಶೂಟ್ ಮಾಡಿಸಿಕೊಂಡು ಮಹಿಳಾ ಸಬ್ ಇನ್ಸ್‌ಪೆಕ್ಟರ್ ಎಡವಟ್ಟು!

    ಕೊಯಿಕ್ಕೋಡ್: ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರು ತಮ್ಮ ಸಮವಸ್ತ್ರದಲ್ಲಿಯೇ ಫೋಟೋಶೂಟ್ ಮಾಡಿಕೊಂಡು ಎಡವಟ್ಟು ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ.

    ಮಹಿಳಾ ಸಬ್ ಇನ್ಸ್ ಪೆಕ್ಟರ್ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ ಈ ಫೋಟೋ ಪೊಲೀಸ್ ಇಲಾಖೆಯಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ಕೋಯಿಕ್ಕೋಡ್ ನಗರದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಅವರು ಯೂನಿಫಾರ್ಮ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಸೇವ್ ದಿ ಡೆಟ್ ಎಂಬ ಟ್ಯಾಗ್ ಲೈನ್ ನೊಂದಿಗೆ ಫೋಟೋ ಹರಿದಾಡಲು ಆರಂಭವಾಗಿದೆ.

    ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಮವಸ್ತ್ರವನ್ನು ಧರಿಸಿರುವ ಫೋಟೋಗಳನ್ನು ಪೋಸ್ಟ್ ಮಾಡದಿರುವಂತೆ 2015ರಲ್ಲಿಯೇ ಕೇರಳ ಡಿಜಿಪಿ ಆಗಿದ್ದ ಟಿ.ಪಿ ಸೆನ್ ಕುಮಾರ್ ಅವರು ಆದೇಶ ಹೊರಡಿಸಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಂವಹನ ನಡೆಸುವುದಕ್ಕೆ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದರು. ಇದನ್ನೂ ಓದಿ: 154 ದಿನಗಳ ನಂತರ ಡಿಸ್ಚಾರ್ಜ್ – ಸಾವನ್ನು ಗೆದ್ದ ಕೊಪ್ಪಳದ ಮಹಿಳೆ

    ಆದರೆ ಇದೀಗ ಈ ಮಹಿಳಾ ಪೊಲೀಸ್, ಈ ಆದೇಶವನ್ನು ಉಲ್ಲಂಘಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಲ್ಲದೇ ಅವುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಠಿಣ ಕ್ರಮ ಎದುರಿಸಲಿದ್ದಾರೆ. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ

  • ಗುರುದ್ವಾರದಲ್ಲಿ ಫೋಟೋಶೂಟ್ – ಮಾಡೆಲ್ ವಿರುದ್ಧ ನೆಟ್ಟಿಗರು ಗರಂ

    ಗುರುದ್ವಾರದಲ್ಲಿ ಫೋಟೋಶೂಟ್ – ಮಾಡೆಲ್ ವಿರುದ್ಧ ನೆಟ್ಟಿಗರು ಗರಂ

    ಇಸ್ಲಾಮಾಬಾದ್: ಗುರುದ್ವಾರದಲ್ಲಿ ಧಾರ್ಮಿಕ ನಿಯಮವನ್ನು ಉಲ್ಲಂಘಿಸಿ ಪಾಕಿಸ್ತಾನಿ ಮಾಡೆಲ್ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ನೋಡಿದ ನೆಟ್ಟಿಗರು ಮಾಡೆಲ್ ಮೇಲೆ ಫುಲ್ ಗರಂ ಆಗಿದ್ದಾರೆ.

    ಧಾರ್ಮಿಕ ಸ್ಥಳವಾದ ಗುರುದ್ವಾರ ದರ್ಬಾರ್ ಸಾಹಿಬ್(ಕರ್ತಾರ್‍ಪುರ್ ಸಾಹಿಬ್) ಆವರಣದಲ್ಲಿ ಪಾಕಿಸ್ತಾನಿ ಮಾಡೆಲ್ ಭಾರತೀಯ ಉಡುಪನ್ನು ಧರಿಸಿ, ತಲೆ ಮೇಲೆ ಬಟ್ಟೆ ಹಾಕಿಕೊಳ್ಳದೆ ಫೋಟೋಗೆ ಪೋಸ್ ನೀಡಿದ್ದಾಳೆ. ಆ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಆ ಫೋಟೋಗಳನ್ನು ನೋಡಿ ಮಾಡೆಲ್ ಮೇಲೆ ಕೋಪಗೊಂಡಿದ್ದಾರೆ.

    ಏನಿದು ಘಟನೆ?
    ಲಾಹೋರ್ ಮೂಲದ ಈ ಮಾಡೆಲ್ ಪಾಕಿಸ್ತಾನದಲ್ಲಿ ಸಿದ್ಧ ಉಡುಪುಗಳ ಮಹಿಳಾ ಆನ್‍ಲೈನ್ ಬಟ್ಟೆಗಳ ರಾಯಭಾರಿಯಾಗಿದ್ದಳು. ಇತ್ತೀಚೆಗೆ ಕರ್ತಾರ್‍ಪುರ ಸಾಹಿಬ್‍ನ ಗುರುದ್ವಾರದಲ್ಲಿ ತಲೆ ಮೇಲೆ ಬಟ್ಟೆ ಹಾಕಿಕೊಳ್ಳದೆ ಭಾರತೀಯ ಉಡುಪನ್ನು ಧರಿಸಿ ಮಾಡೆಲ್ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋಗಳನ್ನು ಬಟ್ಟೆಗಳ ಪ್ರಮೋಷನ್ ಗೆ ಬಳಸಿಕೊಳ್ಳಲಾಗಿದೆ. ಫೋಟೋ ನೋಡಿದ ನೆಟ್ಟಿಗರು, ಧಾರ್ಮಿಕ ಸ್ಥಳವಾದ ಗುರುದ್ವಾರದಲ್ಲಿ ತಲೆ ಮೇಲೆ ಬಟ್ಟೆ ಹಾಕಿಕೊಳ್ಳದೆ ಪಾಕಿಸ್ತಾನಿ ಯುವತಿ ಫೋಟೋಗಳಿಗೆ ಪೋಸ್ ಕೊಟ್ಟಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

    ಆನ್‍ಲೈನ್ ಸ್ಟೋರ್‌ನ ಮಾಲೀಕ ‘ಮನ್ನತ್_ಕ್ಲೋಥಿಂಗ್’ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ಬುರ್ಖಾವಿಲ್ಲದೇ ತೆಗೆಸಿದ ಮಾಡೆಲ್‍ನ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ನೋಡಲು ಓಡುತ್ತ ಹೊರಟ ಮೂರು ಮಕ್ಕಳ ತಾಯಿ

    ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಮಾಡೆಲ್ ಮತ್ತು ಬ್ರಾಂಡ್‍ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಈ ರೀತಿ ಮಾಡಿದ್ದೀರಾ! ಗುರುದ್ವಾರದಲ್ಲಿ ನೀವು ಈ ರೀತಿ ನಡೆದುಕೊಂಡಿರುವುದು ಗೌರವ ತಂದುಕೊಂಡುವುದಿಲ್ಲ ಎಂದು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಈ ಪೋಸ್ಟ್ ಅನ್ನು ‘ನಾಚಿಕೆಗೇಡು’ ಎಂದು ಹೇಳಿ ಡಿಲೀಟ್ ಮಾಡುವಂತೆ ಕಮೆಂಟ್ ಮಾಡುತ್ತಿದ್ದಾರೆ. ಇದು ನಿಮ್ಮ ಪ್ರವಾಸಿ ತಾಣವಲ್ಲ, ಮೊದಲು ತಲೆ ಮೇಲೆ ಬಟ್ಟೆ ಹಾಕಿಕೊಳ್ಳಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಪರಮ್‍ಜಿತ್ ಸಿಂಗ್ ಸರ್ನಾ, ಇದು ಅತ್ಯಂತ ಆಕ್ಷೇಪಾರ್ಹ ಕೃತ್ಯವಾಗಿದ್ದು, ಸಿಖ್ ಧಾರ್ಮಿಕ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡುವವರು ಗುರುದ್ವಾರಗಳಲ್ಲಿ ಅನ್ವಯಿಸುವ ಸಿಖ್ ನೀತಿ ಸಂಹಿತೆಯ ಬಗ್ಗೆ ಸಂವೇದನಾಶೀಲತೆಯನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

    ಎಸ್‍ಜಿಪಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿ ಕಿರಣ್‍ಜೋತ್ ಕೌರ್ ಈ ಕುರಿತು ಮಾತನಾಡಿದ್ದು, ಧಾರ್ಮಿಕ ಸ್ಥಳವನ್ನು ವ್ಯಾಪಾರೀಕರಣ ಮಾಡುವುದು ಅತ್ಯಂತ ಆಕ್ಷೇಪಾರ್ಹವಾಗಿದೆ. ಇದರ ವಿರುದ್ಧ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

  • ಬಾತ್ ಟಬ್‍ನಲ್ಲಿ ಕುಳಿತು ಹಾಟ್ ಪೋಸ್ ಕೊಟ್ಟ ಹೀನಾ ಖಾನ್

    ಬಾತ್ ಟಬ್‍ನಲ್ಲಿ ಕುಳಿತು ಹಾಟ್ ಪೋಸ್ ಕೊಟ್ಟ ಹೀನಾ ಖಾನ್

    ಮುಂಬೈ: ಬಾಲಿವುಡ್ ನಟಿ ಹೀನಾ ಖಾನ್ ಬಾತ್ ಟಬ್‍ನಲ್ಲಿ ಕುಳಿತು ಹಾಟ್  ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

    ತಮ್ಮ ಅದ್ಭುತವಾದ ಹಾಟ್ ಮತ್ತು ಮಾದಕ ಫೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಆಗಾಗ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿರುತ್ತಾರೆ. ಇದೀಗ ಅಂತಹದ್ದೇ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

     

    View this post on Instagram

     

    A post shared by HK (@realhinakhan)

    ಬಿಳಿ ಮತ್ತು ಕೆಂಪು ಬಣ್ಣದ ಉಡುಪು ಧರಿಸಿ, ನಟಿ ಬಾತ್ ಟಬ್‍ನಲ್ಲಿ ಕುಳಿತು ವಿಭಿನ್ನ ಶೈಲಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ 15.4 ಮಿಲಿಯನ್‍ಗಿಂತ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಹೀನಾ ಅವರು ಈ  ಫೋಟೋಗಳ ಮೂಲಕವಾಗಿ ಈಗ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

    ಹೀನಾ ಖಾನ್ 2009 ರಿಂದ ಕಿರುತೆರೆ, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದಾರೆ. ಕಳೆದ ಒಂದು ದಶಕದಿಂದ ಹೀನಾ ಗ್ಲಾಮರ್ ಚೆಲುವೆ ಎಂದು ಗುರುತಿಸಿಕೊಂಡಿದ್ದು, ಒಂದಾದ ಮೇಲೆ ಒಂದು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈಗ ಅವರ ಹಾಟ್ ಫೋಟೋಗಳ ಮೂಲಕವಾಗಿ ಸುದ್ದಿಯಾಗಿದ್ದಾರೆ.

  • ಮೊದಲ ಬಾರಿಗೆ ಮಗುವಿನ ಮುದ್ದಾದ ಫೋಟೋ ಶೇರ್ ಮಾಡಿದ ನಟಿ

    ಮೊದಲ ಬಾರಿಗೆ ಮಗುವಿನ ಮುದ್ದಾದ ಫೋಟೋ ಶೇರ್ ಮಾಡಿದ ನಟಿ

    ಬೆಂಗಳೂರು: ಕಿರುತೆರೆ ನಟಿ ಚೈತ್ರಾ ರೈ ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ತಮ್ಮ ಮಗಳ ಫೋಟೋವನ್ನು ಇದೇ ಮೊದಲ ಸಲ ಪೋಸ್ಟ್ ಮಾಡಿದ್ದಾರೆ.

    ಆಗಸ್ಟ್ 16 ರಂದು ನಾನು ತಾಯಿಯಾದೆ. ನಾನು ಯಾರನ್ನೂ ಇಷ್ಟು ಪ್ರೀತಿಸಿಲ್ಲ. ನಾನು ತಾಯಿಯಾಗುವುದನ್ನು ಪ್ರೀತಿಸುತ್ತೇನೆ. ಮಾತೃತ್ವವು ನಿಜವಾದ ಆಶೀರ್ವಾದವಾಗಿದೆ ಎಂದು ಬರೆದುಕೊಂಡು ಅವರ ಮಗುವಿನ ಮುದ್ದಾದ ಫೋಟೋಗಳನ್ನು ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಗರ್ಭಿಣಿ ಆಗಿರುವ ವಿಚಾರ, ಸೀಮಂತ ಶಾಸ್ತ್ರದ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗಸ್ಟ್ 16ರಂದು ಚೈತ್ರ ರಾವ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳಿಗೆ ನಿಷ್ಕಾ ಶೆಟ್ಟಿ ಎಂದು ನಾಮಕರಣವನ್ನು ಮಾಡಿದ್ದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.

     

    View this post on Instagram

     

    A post shared by Chaithra Rai (@chaithrarai17)

    ದೇವರು ಮನೆಗೆ ಹೆಣ್ಣು ಮಗುವನ್ನು ಆಶೀರ್ವದಿಸಿದ್ದಾನೆ. ಇಂದು ಹಿಂದೆಂದೂ ಅನುಭವಿಸದ ಭಾವನೆಯಾಗಿದೆ. ನಾನು ನನ್ನ ಪತಿ, ಕುಟುಂಬ ತುಂಬಾ ಸಂತೋಷವಾಗಿದ್ದೇವೆ. ನಮ್ಮ ಸಣ್ಣ ಸಂತೋಷಕ್ಕೆ ಲೆಕ್ಕವಿಲ್ಲದಷ್ಟು ಆಶೀರ್ವಾದ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅಭಿಮಾನಿಗಳು ಇವರಿಗೆ ಕಾಮೆಂಟ್‍ಗಳ ಮೂಲಕ ಶುಭಾಶಯವನ್ನು ಕೋರಿದ್ದರು. ಇದೀಗ ಅವರು ಅವರ ಮುದ್ದು ಮಗಳಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್

     

    View this post on Instagram

     

    A post shared by Chaithra Rai (@chaithrarai17)

    ಹಲವು ಕಾರಣಗಳಿಂದ ನಟನೆಯಿಂದ ದೂರವಿರುವ ಈ ನಟಿ ಪ್ರಸ್ತುತ ಚೈತ್ರಾ ರೈ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಅವರ ಮಗುವಿನ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  • ತುಂಡುಡುಗೆ ತೊಟ್ಟ ಕ್ಲಾಸಿ ಲುಕ್‍ನಲ್ಲಿ ದಿವ್ಯಾ ಸುರೇಶ್

    ತುಂಡುಡುಗೆ ತೊಟ್ಟ ಕ್ಲಾಸಿ ಲುಕ್‍ನಲ್ಲಿ ದಿವ್ಯಾ ಸುರೇಶ್

    ಬೆಂಗಳೂರು: ಕಿರುತೆರೆ ನಟಿ ದಿವ್ಯಾ ಸುರೇಶ್ ಬಿಗ್‍ಬಾಸ್ ಕಾರ್ಯಕ್ರಮ ಮುಗಿದ ಮೇಲೆ ಸಖತ್ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

    ಬಿಗ್‍ಬಾಸ್ ಕನ್ನಡ ಸೀಸನ್ 8ರಲ್ಲಿ 6ನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದ ದಿವ್ಯಾ ಸುರೇಶ್ ಅವರು ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕವೇ ಹೆಚ್ಚು ಜನಪ್ರಿಯವಾಗಿದ್ದರು. ಇದೀಗ ಬಿಡುವಿಲ್ಲದಂತೆ ಫೋಟೋಶೂಟ್‍ಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಅವರ ಲೆಟೆಸ್ಟ್ ಫೋಟೋಶೂಟ್‍ನಲ್ಲಿ ಸಖತ್ ಕ್ಲಾಸಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಕಾರಿನಲ್ಲಿ ತುಂಡುಡುಗೆ ತೊಟ್ಟ ದಿವ್ಯಾ ಸುರೇಶ್ ಬಾಸ್ ಲೇಡಿಯಾಗಿದ್ದಾರೆ. ಇದನ್ನೂ ಓದಿ: ಟ್ರೆಡಿಷನಲ್ ಲುಕ್‍ನಲ್ಲಿ ಕಿರಿಕ್ ಹುಡ್ಗಿ – ನೆಚ್ಚಿನ ನಟಿ ಹೊಸ ಅವತಾರ ನೋಡಿ ಫ್ಯಾನ್ಸ್ ಫಿದಾ

     

    View this post on Instagram

     

    A post shared by Divya Suresh (@divyasuresh.official)

    ಬಾಸ್ ಬೇಬಿಯಾಗುವುದನ್ನು ಆಯ್ಕೆ ಮಾಡಿಕೊಳ್ಳುವ ಬದಲು ತಾನು ಬಾಸ್ ಲೇಡಿಯಾಗಲು ಇಷ್ಟ ಪಡುತ್ತೇನೆ ಎಂದು ದಿವ್ಯಾ ಸುರೇಶ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇವರ ಅಭಿಮಾನಿಗಳು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

    ದಿವ್ಯಾ ಸುರೇಶ್ ಬಿಗ್‍ಬಾಸ್ ಮೂಲಕವಾಗಿ ಜನಮನ್ನಣೆ ಪಡೆದುಕೊಂಡರು. ನಂತರ ಇವರಿಗೆ ಸಿನಿಮಾ ಸೇರಿದಂತೆ ಫೋಟೋಶೂಟ್‍ಗಳಲ್ಲಿ ಭಾಗವಹಿಸುವ ಅವಕಾಶಗಳು ಇವರನ್ನು ಅರಸಿ ಬಂದಿದ್ದಾವೆ. ಇದೀಗ  ಬಾಸ್ ಬೇಬೆ ಸ್ಟೈಲ್‍ನಲ್ಲಿ ಹಾಟ್ ಪೋಸ್ ಕೊಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಬಿಗ್‍ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಹೊಸ ಫೋಟೋಶೂಟ್‍ಗಳಲ್ಲಿ ಮಿಂಚುತ್ತಿರುವ ದಿವ್ಯಾ ಸುರೇಶ್‍ಗೆ ಅವರಿ ಕಿರುತೆರೆಯಲ್ಲಿ ನಟಿಸುವ ಅಕಾಶವು ಬಂದಿದೆ ಸಿಕ್ಕಿದೆ.

  • ನಿಮ್ಮPASSION ಹುಡುಕಲು ವಯಸ್ಸು ಮುಖ್ಯವಲ್ಲ: ಪ್ರಿಯಾಂಕಾ ತಿಮ್ಮೇಶ್

    ನಿಮ್ಮPASSION ಹುಡುಕಲು ವಯಸ್ಸು ಮುಖ್ಯವಲ್ಲ: ಪ್ರಿಯಾಂಕಾ ತಿಮ್ಮೇಶ್

    ಬೆಂಗಳೂರು: ನಟಿ ಪ್ರಿಯಾಂಕಾ ತಿಮ್ಮೇಶ್ ಬಿಗ್‍ಬಾಸ್ ಕಾರ್ಯಕ್ರಮ ಮುಗಿಸುತ್ತಿದ್ದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಈ ಮಧ್ಯೆ ಕ್ಯಾಮೆರಾಕ್ಕೆ ಪೋಸ್ ಕೊಡುವ ಮೂಲಕವಾಗಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.

    ಹೌದು ಪ್ರಿಯಾಂಕಾ ಬೇಬಿ ಪಿಂಕ್ ಬಟ್ಟೆಯನ್ನು ತೊಟ್ಟು, ಕಿವಿಗೆ ಹೂವಿ ಓಲೆಯನ್ನು ತೊಟ್ಟು ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನಿಮ್ಮ PASSION ಹುಡುಕಲು ವಯಸ್ಸು ಮುಖ್ಯವಲ್ಲ ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಅವರ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಇದನ್ನೂ ಓದಿ: ಮದುವೆ ಬಳಿಕ ಸತ್ಯ ಹೇಳಿದ ಯಾಮಿ ಗೌತಮ್

    ಪ್ರಿಯಾಂಕಾ ಅವರ ಫೋಟೋಗಳಿಗೆ ನೆಟ್ಟಿಗರು ಸುಂದರ, ಕ್ಯೂಟ್, ಹಾಟ್, ನೀವು ಎಂದರೆ ನಮಗೆ ತುಂಬಾ ಇಷ್ಟ ಎಂದು ಕಾಮೆಂಟ್ ಮಾಡುತ್ತಾ ಮೆಟ್ಟುಗೆಯನ್ನು ಸೂಚಿಸುತ್ತಿದ್ದಾರೆ. ಬಿಗ್‍ಬಾಸ್‍ನಿಂದ ಪ್ರಿಯಾಂಕಾ ತಿಮ್ಮೇಶ್‍ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರ ಅಭಿಮಾನಿ ಬಳಗ ಈಗ ಮೊದಲಿಗಿಂತಲೂ ಹಿರಿದಾಗಿದೆ. ಹೀಗಿರುವಾಗಲೇ ಪ್ರಿಯಾಂಕಾ ತಿಮ್ಮೇಶ್ ಹೊಸ ಫೋಟೋಶೂಟ್‍ನಲ್ಲಿ ಮಿಂಚುತ್ತಿದ್ದಾರೆ. ಇದನ್ನೂ ಓದಿ:   ಸಮಂತಾ, ನಾಗ ಚೈತನ್ಯ DIVORCEಗೆ ಅಸಲಿ ಕಾರಣ ಬಯಲು

    ವೈಲ್ಡ್ ಕಾರ್ಡ್ ಮೂಲಕ ಕನ್ನಡ ಬಿಗ್ ಬಾಸ್ ಸೀಸನ್ 8 ಪ್ರವೇಶ ಪಡೆದ ಪ್ರಿಯಾಂಕಾ ತಿಮ್ಮೇಶ್ ಸಾಕಷ್ಟು ಮಿಂಚಿದರು. ತಮ್ಮ ನೇರನುಡಿಗಳಿಂದ ಅವರು ಹೆಸರು ಮಾಡಿದರು. ಬಿಗ್‍ಬಾಸ್ ಪ್ರಿಯಾಂಕಾ ತಿಮ್ಮೇಶ್‍ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಪ್ರಿಯಾಂಕಾ ಒಂದು ಸಿನಿಮಾಕ್ಕಾಗಿ ತೂಕವನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಪಾತ್ರಕ್ಕೆ ಹೊಂದುವ ಹಾಗೆ ತೆರೆ ಮೇಲೆ ಕಾಣುವ ಉದ್ದೇಶದಿಂದ ನನ್ನ ದೇಹದ ತೂಕ ಹೆಚ್ಚಾಗಿದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  • ಮದುಮಗಳಾದ ಬಿಗ್‍ಬಾಸ್ ಖ್ಯಾತಿಯ ಧನುಶ್ರೀ

    ಮದುಮಗಳಾದ ಬಿಗ್‍ಬಾಸ್ ಖ್ಯಾತಿಯ ಧನುಶ್ರೀ

    ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್ ಧನುಶ್ರೀ ಅವರ ಜನಪ್ರಿಯತೆ ಬಿಗ್‍ಬಾಸ್ ಮನೆಗೆ ಹೋಗಿ ಬಂದ ನಂತರ ಹೆಚ್ಚಿದೆ. ಬಿಗ್‍ಬಾಸ್ ಕನ್ನಡ ಸೀಸನ್8ರ ಸ್ಪರ್ಧಿಯಾಗಿದ್ದ ಧನುಶ್ರೀ ಅವರಿಗೆ ಸಿನಿಮಾದ ಜೊತೆಗೆ ಫೋಟೋಶೂಟ್‍ಗಳಲ್ಲೂ ಅವಕಾಶ ಅರಸಿ ಬರುತ್ತಿವೆ. ಇದೀಗ ಅವರ ಒಂದು ಫೋಟೋಶೂಟ್ ಸಖತ್ ಸುದ್ದಿಯಾಗುತ್ತಿದೆ.

    ಧನುಶ್ರೀ ಇತ್ತೀಚೆಗೆ ಅಯ್ಯಂಗಾರಿ ಮದುಮಗಳ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಐಯ್ಯಂಗಾರಿ ಮಧುಮಗಳಾಗಿ ಪೋಸ್ ಕೊಟ್ಟಿರುವ ಧನುಶ್ರೀ, ಆ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ಹೊಸ ಕಾರು ಖರೀದಿಸಿದ ಬಿಗ್‍ಬಾಸ್ ಸ್ಪರ್ಧಿ ಧನುಶ್ರೀ

    ರೇಷ್ಮೆ ಸೀರೆಯುಟ್ಟು, ಮ್ಯಾಂಚಿಂಗ್ ಆಭರಣಗಳನ್ನು ಧರಿಸಿ, ಸಖತ್ ಕ್ಲಾಸಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಧನುಶ್ರೀ ಅವರ ಈ ಲುಕ್ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.

     

    View this post on Instagram

     

    A post shared by DHANUSHREE???? (@dhanushree7_)


    ಇತ್ತೀಚೆಗೆ ಧನುಶ್ರೀ ಫೋಟೋಶೂಟ್‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವರು ವಿಭಿನ್ನವಾದ ಲುಕ್ ಹಾಗೂ ಸ್ಟೈಲ್‍ನಲ್ಲಿ ಮಿಂಚುತ್ತಿದ್ದಾರೆ. ದಿನೇ ದಿನೇ ಅವರಿಗೆ ಸಿಗುತ್ತಿರುವ ಅವಕಾಶಗಳು ಹೆಚ್ಚುತ್ತಿವೆ. ಇದನ್ನೂ ಓದಿ:  ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ

    ಧನುಶ್ರೀ ಅವರು ಆಗಾಗ ತಮ್ಮ ಮೇಕಪ್ ಹಾಗೂ ಡ್ಯಾನ್ಸ್ ಮೂವ್‍ಗಳ ಕಾರಣಕ್ಕೆ ಚರ್ಚೆಯಲ್ಲಿರುತ್ತಾರೆ. ಈ ಹಿಂದೆಯೂ ಬಿಗ್‍ಬಾಸ್ ಮನೆಯಲ್ಲಿ ಮೇಕಪ್ ಕಾರಣಕ್ಕೆ ಸುದ್ದಿಯಾಗಿದ್ದರು. ಕೆಲವು ದಿನಗಳ ಹಿಂದೆ ತಾವು ಹೊಸ ಕಾರು ಖರೀದಿಸಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

  • ಟಾಪ್‍ಲೆಸ್ ಫೋಟೋ ಶೂಟ್‍ನಲ್ಲಿ ನಟಿ ಕಿಯಾರಾ ಅಡ್ವಾಣಿ ಸಖತ್ ಹಾಟ್

    ಟಾಪ್‍ಲೆಸ್ ಫೋಟೋ ಶೂಟ್‍ನಲ್ಲಿ ನಟಿ ಕಿಯಾರಾ ಅಡ್ವಾಣಿ ಸಖತ್ ಹಾಟ್

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕ್ಯಾಲೆಂಡರ್ ಫೋಟೋಶೂಟ್‍ಗಾಗಿ ಮತ್ತೊಮ್ಮೆ ಟಾಪ್‍ಲೆಸ್ ಆಗಿರುವ ಫೋಟೋ ಶೂಟ್ ಮಾಡಿಸಿದ್ದಾರೆ.

    ನಟಿ ಕಿಯಾರಾ ಅಡ್ವಾಣಿ ಕಳೆದ ವರ್ಷ ಸಹ ಫೋಟೋಶೂಟ್ ಒಂದರಲ್ಲಿ ಟಾಪ್‍ಲೆಸ್ ಆಗಿ ಎಲೆ ಮರೆಯಲ್ಲಿ ನಿಂತು ಪೋಸ್ ಕೊಟ್ಟು ಚರ್ಚೆಯ ವಿಷಯವಾಗಿದ್ದರು. ಆದರೆ ಈ ಸಲವೂ ಸಹ ಮತ್ತೆ ಕಿಯಾರಾ ಟಾಪ್‍ಲೆಸ್ ಆಗಿ ಪೋಸ್ ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:  ಸನ್ನಿ ಲಿಯೋನ್ ಸಮ್ಮರ್ ಫೋಟೋ- ನಿದ್ದೆಗೆಡಿಸಿಕೊಂಡ ತುಂಡ್ ಹೈಕ್ಳು

    ಕಿಯಾರಾ ಅಡ್ವಾಣಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸುವುದರೊಂದಿಗೆ ಫೋಟೋಶೂಟ್‍ಗಳಿಗೂ ಹಾಟ್ ಆಗಿ ಪೋಸ್ ಕೊಡುವುದಕ್ಕೆ ಫೇಮಸ್. ಕಳೆದ ವರ್ಷ ಕಿಯಾರಾ ಅಡ್ವಾಣಿ ಟಾಪ್‍ಲೆಸ್ ಆಗಿ ಪೋಸ್ ಕೊಟ್ಟಿದ್ದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಲೆ ಮರೆಯಲ್ಲಿ ನಿಂತು ಟಾಪ್‍ಲೆಸ್ ಆಗಿ ಪೋಸ್ ಕೊಟ್ಟಿದ್ದ ಈ ಫೋಟೋ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು.

     

    View this post on Instagram

     

    A post shared by KIARA (@kiaraaliaadvani)

    ಬಾಲಿವುಡ್‍ನ ಖ್ಯಾತ ಫ್ಯಾಷನ್ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್‍ಗೆ ಕಿಯಾರಾ ಪ್ರತಿ ವರ್ಷ ಪೋಸ್ ಕೊಡುತ್ತಾರೆ. ಈ ಸಲವೂ ಕಿಯಾರಾ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಕಿಯಾರಾ ಟಾಪ್‍ಲೆಸ್ ಆಗಿ ಪೋಸ್ ಕೊಟ್ಟಿರುವ ಪೋಸ್ ಕೊಟ್ಟಿರುವ ಈ ಚಿತ್ರದಲ್ಲಿ ತಮ್ಮ ಕಿಲ್ಲರ್ ಲುಕ್ಸ್ ನಿಂದಲೇ ನೆಟ್ಟಿಗರ ಮನ ಕದ್ದಿದ್ದಾರೆ. ಕಿಯಾರಾ ಅವರ ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ಮೊದಲು ಡಬ್ಬೂ ರತ್ನಾನಿ ಅವರ ಕ್ಯಾಲೆಂಡರ್ ಶೂಟ್‍ಗೆ ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್ ಸೇರಿದಂತೆ ಬಾಲಿವುಡ್ ನಟಿ, ನಟರು ಪೋಸ್ ಕೊಟ್ಟಿದ್ದಾರೆ. ಸನ್ನಿ ಲಿಯೋನ್ ಕೂಡಾ ಅರೆಬೆತ್ತಲಾಗಿ ಪೋಸ್ ಕೊಟ್ಟಿದ್ದರು, ಇದೀಗ ಕಿಯಾರ ಅಡ್ನಾನಿ ಪೋಸ್ ಕೊಟ್ಟಿದ್ದು ಸಖತ್ ಸುದ್ದಿಯಲ್ಲಿದೆ.