ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ಸಿನಿಮಾ ವಿಚಾರದಿಂದ ಮತ್ತು ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದ್ದಾರೆ. ಸದ್ಯ ರೆಡ್ ಕಲರ್ ಡ್ರೆಸ್‌ನಲ್ಲಿ ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ.
ಸಮಂತಾ ನಾಗಚೈತನ್ಯ ಜತೆಗಿನ ಸಂಬಂಧಕ್ಕೆ ಅದ್ಯಾವಾಗ ಎಳ್ಳು ನೀರು ಬಿಟ್ರೋ ಅಲ್ಲಿಂದ ಸಮಂತಾ ಕುಂತರೂ ಸುದ್ದಿ, ನಿಂತರೂ ಸುದ್ದಿಯಾಗುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಮೇಲೆ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳತ್ತಿರೋ ಸಮಂತಾ ಈಗ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಆಮ್ ಆದ್ಮಿ ಪಾರ್ಟಿ ಸೇರಿಕೊಂಡ ‘ಮುಖ್ಯಮಂತ್ರಿ’
ಎಲ್ಲಾ ವುಡ್‌ಗಳಲ್ಲೂ ಬ್ಯುಸಿಯಿರೋ ನಟಿ ಸಮಂತಾ ಈಗ ರೆಡ್ ಕಲರ್ ಡ್ರೆಸ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ಪಡ್ಡೆ ಹುಡುಗರ ಕಣ್ಣು ಕುಕ್ಕುವಂತೆ ಸಮಂತಾ ರೆಡಿಯಾಗಿದ್ದು, ನಟಿಯ ಹಾಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.
ಉರ್ಫಿ ಜಾವೇದ್ ಬೋಲ್ಡ್ ಅವತಾರದ ಮೂಲಕ ಸುದ್ದಿಯಾಗಿರುವ ನಟಿ. ಈಕೆಯ ಹೆಸರು ಬಂದರೆ ಸಾಕು, ಅಬ್ಬಬ್ಬ ಉರ್ಫಿ ಈ ಬಾರಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾಳೆ, ಯಾವ ಅವತಾರದಲ್ಲಿ ಬರಲಿದ್ದಾಳೆ. ಉರ್ಫಿ ಎಲ್ಲಾದಕ್ಕಿಂತಲೂ ತನ್ನ ನಿತ್ಯದ ಉಡುಪುಗಳಿಂದೇ ಹೆಚ್ಚು ಸುದ್ದಿ ಆಗುತ್ತಾಳೆ.
ಪ್ರತಿದಿನ ಉರ್ಫಿಯ ಹಿಂದೆ ಕ್ಯಾಮೆರಾಗಳು ಸಾಲು ಗಟ್ಟಿ ನಿಲ್ಲುತ್ತವೆ. ನಿತ್ಯವೂ ಉರ್ಫಿ ಜಾವೇದ್ ಒಂದಲ್ಲಾ ಒಂದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೊಸ, ಹೊಸದಾಗಿ ಡ್ರೆಸ್‌ಗಳನ್ನು ಪ್ರಯೋಗ ಮಾಡುತ್ತಾ ಸುದ್ದಿಯಲ್ಲಿರುತ್ತಾರೆ. ಹಾಗಾಗಿ ಆಕೆಯ ವಿಚಿತ್ರ ಅವತಾರ ನೋಡಲೆಂದೇ ಹಲವು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಇದನ್ನೂ ಓದಿ:ಯಂಗ್ ಟೈಗರ್ -ಪ್ರಶಾಂತ್ ನೀಲ್ ಚಿತ್ರಕ್ಕೆ ಶಿವಣ್ಣನ ಸಿನಿಮಾದ ಟೈಟಲ್ ಫಿಕ್ಸ್
ಸಾಮಾಜಿಕ ಮಾಧ್ಯಮದಲ್ಲಿ ಉರ್ಫಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಫಿ ಈ ಬಾರಿಯೂ ತಮ್ಮ ಬೋಲ್ಡ್ ಅವತಾರದೊಂದಿಗೆ ಸಿಕ್ಕಾಪಟ್ಟೆ ಸುದ್ದಿ ಆಗಿದ್ದಾರೆ. ಅಷ್ಟೇ ಅಲ್ಲಾ ಟ್ರೋಲ್‌ಗೂ ಕೂಡ ಉರ್ಫಿ ಮತ್ತೆ ತುತ್ತಾಗಿದ್ದಾರೆ.
ದಿನದಿಂದ ದಿನಕ್ಕೆ ಮತ್ತಷ್ಟು ವಿಚಿತ್ರವಾಗಿ ಕಾಣಿಕೊಳ್ಳುತ್ತಾರೆ ಉರ್ಫಿ. ಈ ಬಾರಿ ಗೋಣಿ ಚೀಲದ ಬಟ್ಟೆ ತೊಟ್ಟಿದ್ದಾರೆ. ಹಾಗಂತ ಉರ್ಫಿ ಗೋಣಿಚೀಲದ ಮಾದರಿಯಲ್ಲಿರುವ ಬಟ್ಟೆಯನ್ನು ಧರಿಸಿಲ್ಲ. ಬದಲಿಗೆ ಗೋಣಿ ಚೀಲವನ್ನೇ ಹರಿದು ಕ್ರಾಪ್ ಟಾಪ್ ಮತ್ತು ಸ್ಕ್ರರ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಒಟ್ನಲ್ಲಿ ಉರ್ಫಿ ಗೋಣಿ ಚೀಲದ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ, ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಮಂತಾ ಸಿನಿಮಾ, ನಟನೆಯ ವಿಷ್ಯವಾಗಿ ಅದೆಷ್ಟು ಸುದ್ದಿಯಲಲಿರುತ್ತಾರೋ ಅಷ್ಟೇ ವಯಕ್ತಿಕ ವಿಚಾರವಾಗಿ ಅಷ್ಟೇ ಸುದ್ದಿಯಲ್ಲಿರುತ್ತಾರೆ. ಈಗ ಆಪಲ್ ಬ್ಯೂಟಿ ಸಮಂತಾ ಹೊಸ ಫೋಟೋಶೂಟ್ ವಿಷ್ಯವಾಗಿ ಸಖತ್ ಸುದ್ದಿ ಮಾಡ್ತಿದ್ದಾರೆ.
ಚಿತ್ರರಂಗದಲ್ಲಿ ಸದ್ಯ ಸಮಂತಾದೇ ಸದ್ದು ಸುದ್ದಿ, ಕಳೆದ ಸಲ ಹಾಟ್ ಫೋಟೋಶೂಟ್‌ನಿಂದ ಗಮನ ಸೆಳೆದಿದ್ದ ನಟಿ ಈಗ ಮುಸ್ಲಿಂ ವರ್ಗದ ಹುಡುಗಿಯಾಗಿ ಬೇಗಂ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಕಲರ್ ಡ್ರೆಸ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ಸಮಂತಾ ನ್ಯೂ ಲುಕ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸರಾಯಿ ಜೊತೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಟಿ
ಇತ್ತೀಚೆಗಷ್ಟೇ ತೆರೆಕಂಡಿದ್ದ ಕಾತುವಾಕುಲ ಎರಡು ಕಾದಲ್ ಚಿತ್ರದಲ್ಲಿ ಖತೀಜಾ ಪಾತ್ರದಲ್ಲಿ ಸಮಂತಾ ಬಣ್ಣ ಹಚ್ಚಿದ್ದರು. ಈ ಚಿತ್ರದ ಸಮಂತಾ ಸಾಕಷ್ಟು ಲುಕ್ ರಿವೀಲ್ ಆಗಿತ್ತು. ಆದರೆ ಖತೀಜಾ ಪಾತ್ರದ ಈ ಲುಕ್ ರಿವೀಲ್ ಆಗಿರಲಿಲ್ಲ. ಈಗ ಸಮಂತಾ ರೆಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರೋ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಸಮಂತಾ ಫ್ಯಾನ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್ವುಡ್ ಲೈಫು ಇಷ್ಟೇನೆ, ಬರ್ಫಿ, ಒಗ್ಗರಣೆ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸಂಯುಕ್ತಾ ಹೊರನಾಡ್ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಲೈಫು ಇಷ್ಟೇನೆ ನಟಿಯ ಬೋಲ್ಡ್ ಅವತಾರ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ಬ್ಯೂಸಿಯಿರೋ ನಟಿ ಸಂಯುಕ್ತಾ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಜಾಲಿ ಮೂಡ್‌ನಲ್ಲಿದ್ದಾರೆ. ಬ್ರೇಕ್‌ನ ನಂತರ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ತೆರಳಿದ್ದಾರೆ. ರೆಡ್ ಕಲರ್ ಡ್ರೆಸ್‌ನಲ್ಲಿ ಮಿಂಚುತ್ತಾ, ಬೀಚ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಈ ಫೋಟೊ ಸದ್ಯ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ರಾಖಿ ಸಾವಂತ್- ಉರ್ಫಿ ಜಾವೇದ್ ಮಸ್ತ್ ಡ್ಯಾನ್ಸ್‌ಗೆ ಫ್ಯಾನ್ಸ್ ಏನಂದ್ರು ಗೊತ್ತಾ?
ನಟಿ ಸಂಯುಕ್ತಾ ಮನೋಜ್ಞ ನಟನೆಯ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಕನ್ನಡ ಮತ್ತು ತಮಿಳಿನ ಒಂದಿಷ್ಟು ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.
ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗಷ್ಟೇ ಸೀಮಂತದ ಶಾಸ್ತ್ರದ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. 9 ತಿಂಗಳ ತುಂಬು ಗರ್ಭಿಣಿಯಾಗಿರುವ ಸಂಜನಾ ಇದೀಗ ಹೊಸ ಫೋಟೋಶೂಟ್‌ನಿಂದ ಗಮನ ಸೆಳೆದಿದ್ದಾರೆ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
`ಗಂಡ ಹೆಂಡತಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಲಗ್ಗೆಯಿಟ್ಟ ನಟಿ ಸಂಜನಾ ಗಲ್ರಾನಿ, ಬಳಿಕ ಸಾಕಷ್ಟು ಸಿನಿಮಾಗಳ ಸಂಚನ ಮೂಡಿಸಿದ್ರು. ಕನ್ನಡ ಮಾತ್ರವಲ್ಲದೇ ಬಹುಭಾಷಾ ನಟಿಯಾಗಿ ಗಮನ ಸೆಳೆದರು. ಬಳಿಕ ಅಜೀಜ್ ಪಾಷಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಿನಿಮಾಗಳಿಂದ ಸ್ವಲ್ಪ ಅಂತರ ಕಾಯ್ದುಕೊಂಡಿರುವ ನಟಿ ಸಂಜನಾ ಈಗ ವಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋಶೂಟ್, ಸೀಮಂತ ಶಾಸ್ತ್ರದ ವಿಚಾರವಾಗಿ ಸುದ್ದಿಯಾಗಿದ್ರು. ಈಗ ಹೊಸ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಚೇತನಾ ರಾಜ್ ಸಾವು: ಬಾಡಿ ಶೇಮಿಂಗ್ ವಿರುದ್ಧ ದನಿಯೆತ್ತಿದ ಅಶ್ವಿತಿ ಶೆಟ್ಟಿ
ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದ ಪ್ರಕಾರ ಇತ್ತೀಚೆಗೆ ಸಂಜನಾ ಸೀಮಂತ ನೆರವೇರಿತ್ತು. ಈಗ ಕಲರ್‌ಫುಲ್ ಲುಕ್ಕಿನಲ್ಲಿ ಗ್ರೀನ್ ಕಲರ್ ಗೌನ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವೆಲ್ವೆಟ್ ಕಲರ್ ಗೌನ್‌ನಲ್ಲಿ ಮಿರ ಮಿರ ಅಂತಾ ಸಂಜನಾ ಗಲ್ರಾನಿ ಮಿಂಚಿದ್ದಾರೆ. ಈ ಸದ್ಯ ಈ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
‘ರವಿ ವರ್ಮನ ಕುಂಚದ ಕಲೆ ಬಲೆ ಸಾಕಾರವೋ.. ಕವಿಕಲ್ಪನೆ ಕಾಣುವೆ ಚೆಲುವಿನಾ ಜಾಲವೋ..’ ಎಂದು ಸೊಸೆ ತಂದ ಸೌಭಾಗ್ಯ ಚಿತ್ರಕ್ಕಾಗಿ ಆರ್.ಎನ್.ಜಯಗೋಪಾಲ್ ಅವರು ರವಿ ವರ್ಮನ ಕುಂಚದಲ್ಲಿ ಮೂಡಿ ಬಂದ ಕಲೆಯನ್ನು ಬಣ್ಣಿಸಿದ್ದರು. ಮುಂದುವರೆದು ‘ಉಯ್ಯಾಲೆಯಾ ಆಡಿ ನಲಿವಾ ರೂಪಸೀ, ಸುರಲೋಕದಿಂದ ಇಳಿದು ಬಂದ ನಿಜ ಊರ್ವಶೀ’ ಎಂದೆಲ್ಲ ರೂಪಸಿಯನ್ನು ಹಾಡಿ ಅಟ್ಟಕ್ಕೇರಿಸಿದ್ದರು. ಆ ರೂಪಸಿಯೂ ಹಾಗೇ ಇದ್ದಳು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ
ರವಿ ವರ್ಮನ ಕುಂಚದಲ್ಲಿ ಮೂಡಿ ಬಂದ ಅಷ್ಟೂ ರೂಪಸಿಯರು ರಸಿಕರ ಕಂಗಳಲ್ಲಿ ಇವತ್ತಿಗೂ ಶಾಶ್ವತ ಸ್ಥಾನ ಪಡೆದಿದ್ದಾರೆ. ಕವಿತೆಯಾಗಿ, ಚಿತ್ರವಾಗಿ, ಕಲ್ಪನೆಯ ರಂಗಾಗಿ ಕಾಡಿದ್ದಾರೆ. ಇಂಥದ್ದೊಂದು ಕಾಡುವಿಕೆಯನ್ನು ತಮ್ಮದೇ ಆದ ರೀತಿಯಲ್ಲಿ ಪ್ರಚುರ ಪಡಿಸಿದ್ದಾರೆ ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ
29 ಏಪ್ರಿಲ್ 1848 ವಿಶ್ವಕಂಡ ಶ್ರೇಷ್ಠ ಚಿತ್ರಕಾರ ರಾಜಾ ರವಿವರ್ಮಾ ಅವರ ಹುಟ್ಟುಹಬ್ಬ. ಅದರ ನೆನಪಿಗಾಗಿ ಜನಾರ್ದನ್ ರೆಡ್ಡಿ ಅವರು ರವಿವರ್ಮಾ ಅವರ ಗ್ರೇಟ್ ಚಿತ್ರಗಳನ್ನು ಹೋಲುವಂತೆ ತಮ್ಮ ಪತ್ನಿಯ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ರಾಜ ಮನೆತನದ ಅದ್ಭುತ ಕಲಾವಿದನನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್
ರವಿ ವರ್ಮಾ ರಾಜಮನೆತನದಲ್ಲಿ ಹುಟ್ಟಿದ್ದರೂ, ಅವರು ಕಲೆಗೆ ಕೊಟ್ಟ ಪ್ರೋತ್ಸಾಹ ಅಪಾರ. ಅಲ್ಲದೇ, ಅನೇಕ ಮಹರಾಜರುಗಳು ಇವರನ್ನು ತಮ್ಮ ಆಸ್ಥಾನಗಳಿಗೆ ಕರೆಯಿಸಿಕೊಂಡು ತಮ್ಮ ಪತ್ನಿಯರ ಸೌಂದರ್ಯವನ್ನು ಇವರ ಕುಂಚದ ಮೂಲ ಇಂಚಿಂಚೂ ಕಂಡವರು. ಅದರಲ್ಲೂ ಸಾಂಪ್ರದಾಯಿಕ ಉಡುಪಿನೊಂದಿಗೆ ರವಿವರ್ಮಾ ಚಿತ್ರಿಸಿದ ಸುಂದರಿಯರು ಜಗತ್ತಿನ ಸುಂದರಿಯರಾಗಿ ಮೆರೆದವರು. ಇಂತಹ ಕೆಲವು ಚಿತ್ರಗಳಲ್ಲಿ ಆಯ್ದ ಕೆಲವು ಚಿತ್ರಗಳಿಗೆ ತಮ್ಮ ಪತ್ನಿಯ ಫೋಟೋಶೂಟ್ ಮಾಡಿಸಿದ್ದಾರೆ ಜನಾರ್ದನ ರೆಡ್ಡಿ. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು
ನಳ-ದಮಯಂತಿ, ಮತ್ಸ್ಯಗಂಧಿ, ರಾಧಾ, ದೇವಕಿ, ಸುಭದ್ರೆ, ಮೇನಕೆ, ತಾರಾಮತಿ, ಸೀತಾ, ಗಂಗೆ ಸೇರಿದಂತೆ 14ಕ್ಕೂ ಹೆಚ್ಚು ತೈಲ ಚಿತ್ರಗಳನ್ನು ರಾಜಾ ರವಿವರ್ಮಾ ಬಿಡಿಸಿದ್ದಾರೆ. ಇವುಗಳಲ್ಲಿ ಆಯ್ದ ಚಿತ್ರಗಳ ಮಾದರಿಯಲ್ಲೇ ಜನಾರ್ದನ ರೆಡ್ಡಿ ಅವರ ಪತ್ನಿ ಫೋಟೋಗೋ ಫೋಸ್ ಕೊಟ್ಟಿರುವುದು ವಿಶೇಷ. ಇದನ್ನೂ ಓದಿ: ಮಗಳ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ ಶಿವಣ್ಣ ಆಕ್ಟಿಂಗ್
ಈ ಹಿಂದೆಯೂ ಹೆಣ್ಣಿನ ಅಂದದ ಜೊತೆ ಆಕೆಯ ಖುಷಿ, ನೋವು, ತಲ್ಲಣಗಳನ್ನು ಅಭಿವ್ಯಕ್ತಿಸುವ ರಾಜಾ ರವಿವರ್ಮರ ತೈಲ ಚಿತ್ರಗಳನ್ನು ಹೋಲುವಂತೆ ದಕ್ಷಿಣ ಭಾರತದ ನಟಿಯರಾದ ಶ್ರುತಿ ಹಾಸನ್, ಐಶ್ವರ್ಯಾ ರಾಜೇಶ್, ರಮ್ಯಾ ಕೃಷ್ಣ ಮತ್ತು ಸಮಂತಾ ಫೋಟೋ ಶೂಟ್ ಮಾಡಿಸಿದ್ದರು. ಆ ಫೋಟೋಗಳು ಸಖತ್ ವೈರಲ್ ಕೂಡ ಆಗಿದ್ದವು. ಇದೀಗ ಅದೇ ಮಾದರಿಯಲ್ಲೇ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಕಾಣಿಸಿಕೊಂಡಿರುವುದು ವಿಶೇಷ.
ಸೌಂದರ್ಯದ ಜೊತೆ ಪ್ರತಿಭೆಯಿರೋ ಸ್ಯಾಂಡಲ್‌ವುಡ್ ಮುದ್ದು ನಟಿ ರಾಗಿಣಿ ದ್ವಿವೇದಿ, ಕಿಚ್ಚ ಸುದೀಪ್‌ಗೆ ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ರು. ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕಲರ್‌ಫುಲ್ ಫೋಟೋಶೂಟ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸದ್ಯ ರಾಗಿಣಿ ನಯಾ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.
`ತುಪ್ಪ ಬೇಕಾ ತುಪ್ಪ’ ಅಂತಾ ಗಂಡ್ ಹೈಕ್ಳ ಹಾರ್ಟಿಗೆ ಲಗ್ಗೆಯಿಟ್ಟ ಸುಂದರಿ ರಾಗಿಣಿ ಮತ್ತೆ ಸಿನಿಮಾಗಳತ್ತ ಆಕ್ಟೀವ್ ಆಗಿದ್ದಾರೆ. ರಾಗಿಣಿ ಲಿಸ್ಟ್ನಲ್ಲಿ ಕೈತುಂಬಾ ಚಿತ್ರಗಳಿವೆ. ಶೂಟಿಂಗ್ ಮಧ್ಯೆ ಸ್ವಲ್ಪ ಫ್ರೀ ಮಾಡಿಕೊಂಡು, ಇದೀಗ ನಟಿ ಬೋಲ್ಡ್ ಲುಕ್ಕಿನಲ್ಲಿ ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ್ದಾರೆ.
ಸದ್ಯ ರಾಗಿಣಿ ಕೈಯಲ್ಲಿ `ಸಾರಿ ಕರ್ಮ ರಿಟನ್ಸ್’, `ಒನ್ ಟು ಒನ್’,`ಜಾನಿವಾಕರ್’, ಮತ್ತು `ಕರ್ವ 3′ ಚಿತ್ರಗಳಿವೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ರಾಗಿಣಿ ನಟನೆಯ ಚಿತ್ರಗಳಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.
ಬಾಲಿವುಡ್ ಕಿರುತೆರೆ ನಾಗಿನ್, ಕೆಜಿಎಫ್ ಬೆಡಗಿ ಮೌನಿ ರಾಯ್ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು, 84 ಸಾವಿರ ರೂ. ಸೀರೆ ಧರಿಸಿ ಮಿಂಚುತ್ತಿದ್ದಾರೆ.
ಅಭಿಮಾನಿಗಳೊಂದಿಗೆ ಯಾವಾಗಲೂ ಕನೆಕ್ಟ್ ಆಗಿರುವ ಮೌನಿ ತಮ್ಮ ಅಪ್ಡೇಟ್‍ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ತಿಂಗಳು ಸೂರಜ್ ನಂಬಿಯಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿ, ತಮ್ಮ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್ ಏಕೆ ಮಾಡಿಸಿದ್ದಾರೆ ಎಂಬುದನ್ನು ಸಹ ಮೌನಿ ಹಂಚಿಕೊಂಡಿದ್ದು, ಮತ್ತೆ ತಾನು ವೃತ್ತಿ ಜೀವನಕ್ಕೆ ಮರಳುತ್ತಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಧರಿಸಿರುವ ಗೌನ್ ಬೆಲೆಯಷ್ಟು ಗೊತ್ತಾ? ಲಕಲಕ ಹೊಳಿತಿದ್ದಾಳೆ ರವಿಮಾಮನ ಬೆಡಗಿ
ಮೌನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿದ್ದು, ನೀವು ಏನು ನೋಡುತ್ತೀರಿ ಎಂಬುದು ಮುಖ್ಯವಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಮೌನಿ ಗ್ಲಾಮರಸ್ ಆಗಿ ಕಾಣುತ್ತಿದ್ದು, ಕ್ಯಾಮರಾಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಮೌನಿ ಲುಕ್ ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರೆಟಿಗಳು ‘ವಾವ್ಹ್’ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಫೋಟೋದಲ್ಲಿ ಮೌನಿ ಕೇಶವಿನ್ಯಾಸ ಸಹ ಭಿನ್ನವಾಗಿ ಮಾಡಿಸಿಕೊಂಡಿದ್ದು, ಕಣ್ಣುಗಳು ಹೆಚ್ಚು ಐಲೆಟ್ ಆಗುವ ರೀತಿ ಮೇಕಪ್ ಮಾಡಿಸಿಕೊಂಡಿದ್ದಾರೆ. ಆಡಂಬರದ ಯಾವುದೇ ಆಭರಣಗಳನ್ನು ಧರಿಸದ ಮೌನಿ ಸಿಂಪಲ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಸೂಪರ್ ಡ್ಯಾನ್ಸರ್ ಆಗಿರುವ ಈ ನಟಿ ಡ್ಯಾನ್ಸ್ ಶೋಗೆ ತೀರ್ಪುಗಾರ್ತಿಯಾಗಿ ಮರಳಿದ್ದಾರೆ. ಇವರ ಡ್ಯಾನ್ಸ್ ನೋಡಿ ಫಿದಾ ಆಗಿದ್ದ ಜನರು ಇವರನ್ನು ಮತ್ತೆ ಡ್ಯಾನ್ಸ್ ಶೋ ಮೂಲಕವೇ ನೋಡಲು ಸಂತೋಷಗೊಂಡಿದ್ದಾರೆ. ಮೌನಿ ಇದೇ ಮೊದಲ ಬಾರಿಗೆ ಶೋವೊಂದರ ತೀರ್ಪುಗಾರ್ತಿಯಾಗಿದ್ದು, ಮತ್ತೆ ಇವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನೂ ಓದಿ: ಕಾರು ಡ್ರೈವಿಂಗ್ ಮಾಡ್ಕೊಂಡೆ ಆಸ್ಪತ್ರೆಗೆ – ಹೆಣ್ಣು ಮಗುವಿನ ತಾಯಿಯಾದ ದಿಶಾ ಮದನ್
ಬೆಂಗಳೂರು: ಸ್ಯಾಂಡಲ್‍ವುಡ್‍ನ ಗೋಲ್ಡನ್ ಕ್ವೀನ್ ಅಮೂಲ್ಯ ತಾಯಿ ಆಗುತ್ತಿರುವ ವಿಚಾರ ತಿಳಿದಿದೆ. ಸೀಮಂತವನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದ ಅಮೂಲ್ಯ ಅವರು ಇದೀಗ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.
ಅಮೂಲ್ಯ ಅವರು ಪತಿ ಜಗದೀಶ್ ಜೊತೆ ಬೇಬಿ ಶವರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನೀಲಿ ಬಣ್ಣದ ಡ್ರೆಸ್ ಧರಿಸಿ, ನೀರಿನ ನಡುವೆ ಹೂವಿನ ಉಯ್ಯಾಲೆಯ ಮೇಲೆ ಕುಳಿತು ಅಮೂಲ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಸುಂದರವಾದ ಫೋಟೋಗಳು ಅಭಿಮಾನಿಗಳಿಗೂ ತುಂಬಾ ಇಷ್ಟವಾಗಿದೆ. ಜ್ಯೂನಿಯರ್ ಅಮೂಲ್ಯರನ್ನು ನೋಡಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು
ಇತ್ತೀಚೆಗಷ್ಟೇ ತಾವು ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ನಟಿ ಅಮೂಲ್ಯ ಶೇರ್ ಮಾಡಿಕೊಂಡಿದ್ದರು. ಪತಿ ಜಗದೀಶ್ ಜೊತೆ ಫೋಟೋಶೂಟ್ ಮಾಡಿಸಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಬರೆದುಕೊಂಡಿದ್ದರು. ಅಭಿಮಾನಿಗಳು. ಸ್ನೇಹಿತರು, ಕಲಾವಿದರು ಕಾಮೆಂಟ್ ಮಾಡುವ ಮೂಲಕವಾಗಿ ಶುಭಕೋರಿದ್ದರು.
ಅಮೂಲ್ಯ ಅವರು ಹೊಸದಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗೆ ಅಮೂಲ್ಯ ಅವರ ಸೀಮಂತ ಶಾಸ್ತ್ರ ನಡೆಯಿತು ಪತಿ ಜಗದೀಶ್ ಮತ್ತು ಅಮೂಲ್ಯ ಅವರ ಇಡೀ ಕುಟುಂಬದವರು ಸೀಮಂತ ಶಾಸ್ತ್ರದಲ್ಲಿ ಹಾಜರಿದ್ದರು.
ಬಾಲನಟಿಯಾಗಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿದ್ದಾರೆ ಅಮೂಲ್ಯ. ಮದುವೆ ನಂತರ ನಟನೆಯಿಂದ ಸ್ವಲ್ಪ ದೂರ ಉಳಿದಿದ್ದಾರೆ. ಇದೀಗ ಅಮೂಲ್ಯ ತಾವು ತಾಯಿ ಆಗುತ್ತಿರುವ ಕ್ಷಣಗಳಿಗೆ ಎದುರು ನೋಡುತ್ತಿದ್ದಾರೆ.
ಚಿಕ್ಕೋಡಿ: ಜಲಾಶಯದ ಬಳಿ ಫೋಟೋಶೂಟ್‍ಗೆ ಹೋಗಿದ್ದ ವಿದ್ಯಾರ್ಥಿ ಈಜಲು ಹೋಗಿ ಆಯತಪ್ಪಿ ನದಿಯಲ್ಲಿ ಬಿದ್ದು, ಮುಳಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯದ ಬಳಿ ನಡೆದಿದೆ.
ಇಂದು ಘಟಪ್ರಭಾ ನದಿಯ ಹಿಡಕಲ್ಲ ಜಲಾಶಯದ ಬಳಿ ಗೆಳೆಯರೊಂದಿಗೆ ಫೋಟೋಶೂಟ್ ಮಾಡಲು ಹೋಗಿದ್ದ. ಈ ವೇಳೆ ಯುವಕ ನದಿಯಲ್ಲಿ ಈಜಲು ಹೋಗಿ ನದಿಗೆ ಬಿದ್ದು ಪ್ರಾಣ ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸಚಿವ ಈಶ್ವರಪ್ಪ ನಿವಾಸಕ್ಕೆ ಯೂತ್ ಕಾಂಗ್ರೆಸ್ ಮುತ್ತಿಗೆ
ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನದಿಯಿಂದ ಯುವಕನ ಮೃತ ದೇಹ ಹೊರ ತೆಗೆದಿದ್ದಾರೆ. ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.