ಪುನೀತ್ ರಾಜ್‌ಕುಮಾರ್ ನಟನೆಯ `ರಣವಿಕ್ರಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಅದಾ ಶರ್ಮಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಅದಾ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಪುನೀತ್ ಚಿತ್ರದ ನಾಯಕಿಯ ಅವತಾರ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ.
ಸದಾ ತನ್ನ ಬೋಲ್ಡ್ ಫೋಟೋಶೂಟ್ ಮೂಲಕ ಗಮನ ಸೆಳೆದಿರುವ ನಟಿ ಅದಾ ಶರ್ಮಾ ಈಗ ತಾವು ತರಕಾರಿ ಮಾರುತ್ತಿರುವ ಫೋಟೋ ಶೇರ್ ಮಾಡಿ, ಎಲ್ಲರನ್ನೂ ಅಚ್ಚರಿಪಡಿಸಿದ್ದಾರೆ. ಫುಟ್ ಪಾತ್‌ನಲ್ಲಿ ತರಕಾರಿ ಮಾರುತ್ತಿರುವ ಫೋಟೋ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ನಟಿಯ ಅವತಾರ ನೋಡಿ ಅದೇನಾಯ್ತಪ್ಪಾ ಅಂತಾ ಬೆರಗಾಗಿದ್ದಾರೆ.
ಬಹುಭಾಷಾ ನಟಿಯಾಗಿ ಸದ್ದು ಮಾಡುತ್ತಿರುವ ಬೆಡಗಿ ಅದಾ ಶರ್ಮಾ, ತರಕಾರಿ ಮಾರುತ್ತಿರುವ ಈ ಫೋಟೋ ತಮ್ಮ ಮುಂದಿನ ಚಿತ್ರದ ಲುಕ್ ಆಗಿದೆ. ಈ ಫೋಟೋ ಜತೆ ಎಲೆಗಳಿಂದಲೇ ಡಿಸೈನ್ ಮಾಡಿಸಿರುವ ಡ್ರೆಸ್ ತೊಟ್ಟು ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಶೇರ್ ಮಾಡುವುದರ ಜತೆಗೆ ಅಭಿಮಾನಿಗಳಿಗೆ ಸಂದೇಶ ಕೂಡ ನೀಡಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್ ಕೊಟ್ರು ಬ್ರೇಕಿಂಗ್ ನ್ಯೂಸ್
View this post on Instagram
ಸೊಪ್ಪಿನಲ್ಲಿ ಮೈಮುಚ್ಚಿಕೊಂಡಿರುವ ಫೋಟೋ ಶೇರ್ ಮಾಡಿ, ಫೋಟೋ ಜೊತೆಗೆ ಆದಾ ಶರ್ಮಾ ಈ ರೀತಿ ಬರೆದುಕೊಂಡಿದ್ದು, ತರಕಾರಿ ಬೆಲೆ ಏರಿಕೆಯಾಗಿದೆ ಎಂದು ಕೇಳಿದೆ. ಫ್ಯಾಶನ್ ಎಂದರೆ ಮೋಜು ಮಾಡುವುದು. ಆದರೆ ನೀವು ತಿನ್ನುವ ಪ್ರತಿಯೊಂದು ವಸ್ತುವನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಇದಲ್ಲದೇ ನನ್ನ ಫ್ಯಾಷನ್‌ಗೆ ಸ್ಪೂರ್ತಿ ನೇಚರ್, ಅಲ್ಲದೇ ಈ ಪ್ರಕೃತಿಯಲ್ಲಿ ಯಾವುದೂ ಪರಿಪೂರ್ಣವಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನು ಆದಾ ಶರ್ಮಾ ಹೊಸ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.


`ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಿರುವ ನಟಿ ಸದ್ಯ ಬಾಲಿವುಡ್‌ನಲ್ಲಿ ಭರ್ಜರಿ ಡಿಮ್ಯಾಂಡ್‌ನಲ್ಲಿದ್ದಾರೆ. ಸಾಲು ಸಾಲು ಅವಕಾಶಗಳು ರಶ್ಮಿಕಾ ಕಡೆ ಹರಿದು ಬರುತ್ತಿದೆ. ಈ ಮಧ್ಯೆ ಚೆಂದದೊಂದು ಫೋಟೋಶೂಟ್ ಮಾಡಿಸಿರೋದು, ಪಡ್ಡೆಹುಡುಗರ ನಿದ್ದೆಗೆಡಿಸಿದೆ.ಇದನ್ನೂ ಓದಿ:

ವೀರಮದಕರಿ, ಕೆಂಪೇಗೌಡ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿರುವ ರಾಗಿಣಿ, ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ರಾಗಿಣಿಯ ನಯಾ ಲುಕ್‌ನಿಂದ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬ್ಲ್ಯಾಕ್ ಕಲರ್ ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:

ಪುನೀತ್ ನಟನೆಯ `ರಾಮ್’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ, ನಂತರ ಸಾಲು ಸಾಲು ಕನ್ನಡ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಟಾಲಿವುಡ್ ಮತ್ತು ಬಾಲಿವುಡ್‌ನಲ್ಲೂ ಬಹುಬೇಡಿಕೆಯ ನಟಿಯಾಗಿ ಮಿಂಚ್ತಿದ್ದಾರೆ. ಈಗ ಸಿನಿಮಾಗಳ ಮಧ್ಯೆ ಕೊಂಚ ಫೋಟೋಶೂಟ್‌ಗೆ ಟೈಮ್ ಕೊಟ್ಟು, ಕ್ಯಾಮೆರಾ ಎದುರು ಮಿರ ಮಿರ ಅಂತಾ ಮಿಂಚಿದ್ದಾರೆ. ಇದನ್ನೂ ಓದಿ:



`ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ನಾಯಕಿಯಾಗಿ ಸಿನಿಪ್ರೇಕ್ಷಕರ ಗಮನ ಸೆಳೆದ ನಟಿ ಅಮೂಲ್ಯ, ನಂತರ ಕನ್ನಡ ಸಾಕಷ್ಟು ಸಿನಿಮಾಗಳಿಗೆ ಸೂಪರ್ ಸ್ಟಾರ್‌ಗಳ ಜತೆ ತೆರೆ ಹಂಚಿಕೊಂಡರು. ಬಳಿಕ ಗುರು ಹಿರಿಯರ ಸಮ್ಮುಖದಲ್ಲಿ ಜಗದೀಶ್ ಚಂದ್ರ ಜತೆ ಹಸೆಮಣೆ ಏರಿದ್ದರು. ಈಗ ಅವಳಿ ಮಕ್ಕಳ ತಾಯಿಯಾಗಿ ಅವರ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: 


