Tag: photoshoot

  • ‘ಕಾಂತಾರ’ ಚಿತ್ರಕ್ಕಾಗಿ ನಡೆದ ಫೋಟೋ ಶೂಟ್ : ಲೀಲಾ ಮತ್ತು ಶಿವ ಮುದ್ದು ಮುದ್ದು

    ‘ಕಾಂತಾರ’ ಚಿತ್ರಕ್ಕಾಗಿ ನಡೆದ ಫೋಟೋ ಶೂಟ್ : ಲೀಲಾ ಮತ್ತು ಶಿವ ಮುದ್ದು ಮುದ್ದು

    ಕಾಂತಾರ (Kantara) ಸಿನಿಮಾದ ನಂತರ ಈ ಸಿನಿಮಾದ ನಾಯಕಿ ಸಪ್ತಮಿ ಗೌಡಗೆ (Sapthami Gowda) ಸಖತ್ ಡಿಮಾಂಡ್ ಕ್ರಿಯೇಟ್ ಆಗಿದೆ. ಕನ್ನಡದಲ್ಲೇ ಈಗಾಗಲೇ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈ ಹೊತ್ತಲ್ಲಿ ಸಪ್ತಮಿ ಗೌಡ ಕಾಂತಾರ ಸಿನಿಮಾದ ಲೀಲಾ ಪಾತ್ರಕ್ಕಾಗಿ ನಡೆಸಿದ ಫೋಟೋ ಶೂಟ್ (Photoshoot) ಆಚೆ ಬಂದಿದೆ. ಈ ಫೋಟೋದಲ್ಲಿ ಸಪ್ತಮಿ ಗೌಡ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಿಷಬ್ ಶೆಟ್ಟಿ (Rishabh Shetty) ಕೂಡ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ನಡುವೆ ಸಪ್ತಮಿ ಗೌಡ ಅವರಿಗೆ ಪರಭಾಷೆಯಿಂದಲೂ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಪರಭಾಷೆಯಿಂದ ಆಫರ್ಸ್ ಬರುತ್ತಿವೆ ಎಂದು ಅವರು ಈಗಾಗಲೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದಕ್ಕೂ ಮುನ್ನ ಕನ್ನಡದ ಮತ್ತೊಂದು ಸಿನಿಮಾದಲ್ಲಿ ಅವರು ನಟಿಸುವ ಸಾಧ್ಯತೆ ಇದ್ದು, ಮಾತುಕತೆ ಕೂಡ ಆಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಪತಿ ರಘು ಮುಖರ್ಜಿ ಮಾತಿಗೆ ಕಣ್ಣೀರಿಟ್ಟ ಅನುಪ್ರಭಾಕರ್

    ಪೈಲ್ವಾನ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣ ಇದೀಗ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರಿಗೆ ಸಿನಿಮಾವೊಂದು ಮಾಡುತ್ತಿದ್ದು, ಈಗಾಗಲೇ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಸಿನಿಮಾ ಟೈಟಲ್ ಸೇರಿದಂತೆ ಹಲವು ವಿಚಾರಗಳನ್ನೂ ಕೃಷ್ಣ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಇದೇ ಸಿನಿಮಾಗೆ ಸಪ್ತಮಿ ಗೌಡ  ಅವರನ್ನೂ ಕೇಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಸಪ್ತಮಿ ಗೌಡ ಅವರನ್ನು ಕೃಷ್ಣ  ಭೇಟಿಯಾಗಿ ಸಿನಿಮಾದ ಕಥೆ ಮತ್ತು ಪಾತ್ರದ ಹಿನ್ನೆಲೆಯನ್ನು ಹೇಳಿದ್ದಾರೆ ಎಂದು ಗೊತ್ತಾಗಿದ್ದು, ಬಹುಶಃ ಸಪ್ತಮಿ ಅವರೇ ಈ ಚಿತ್ರದ ನಾಯಕಿ ಎನ್ನುತ್ತಿದೆ ಗಾಂಧಿ ನಗರ ಮೂಲ. ಆದರೆ, ಈ ಕುರಿತು ಕೃಷ್ಣ ಆಗಲಿ ಅಥವಾ ಸಪ್ತಮಿ ಗೌಡ ಆಗಲಿ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಹೇಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

    ಕಾಳಿ ಸಿನಿಮಾದ ಕಥೆಯೂ ರೋಚಕವಾಗಿದೆ. ಕಾವೇರಿ ನದಿ ಗಲಾಟೆಯಲ್ಲಿ ನಡೆದಂತಹ ನೈಜ ಪ್ರೇಮಕಥೆಯನ್ನು ಈ ಸಿನಿಮಾಗಾಗಿ ನಿರ್ದೇಶಕರು ಅಳವಡಿಸಿಕೊಂಡಿದ್ದಾರೆ. ಅಲ್ಲದೇ, ರೆಬಲ್ ಈ ಸಿನಿಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಸದ್ಯ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಕಾಳಿ ಸಿನಿಮಾದ ಶೂಟಿಂಗ್ ನಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡ ರಾಗಿಣಿ ದ್ವಿವೇದಿ

    ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡ ರಾಗಿಣಿ ದ್ವಿವೇದಿ

    ನ್ನಷ್ಟೇ ತೆರೆಗೆ ಬರಲು ಸಿದ್ದವಾಗಿರುವ ವಿಭಿನ್ನ ಕಥಾಹಂದರದ  “ಶಂಭೋ ಶಿವ ಶಂಕರ” ಚಿತ್ರವನ್ನು ಶಂಕರ್ ಕೋನಮಾನಹಳ್ಳಿ (Shankar Konamanahalli) ನಿರ್ದೇಶಿಸಿದ್ದಾರೆ. ಆ ಚಿತ್ರ ತೆರೆಗೆ ಬರುವ ಮುಂಚೆಯೇ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಎರಡನೇ  ಚಿತ್ರವನ್ನು ನಿರ್ದೇಶಿಸುವ ತಯಾರಿಯಲ್ಲಿದ್ದಾರೆ. ತಮ್ಮ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ರಾಗಿಣಿ ದ್ವಿವೇದಿ (Ragini) ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಈ ನೂತನ ಚಿತ್ರದ ಚಿತ್ರೀಕರಣವನ್ನು ನವೆಂಬರ್ ನಲ್ಲಿ ನಡೆಯಲಿದೆ.

    ಇದೀಗ ತುಪ್ಪದ ಹುಡುಗಿ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅವೆಲ್ಲವೂ ವಿಭಿನ್ನವಾದ ಪಾತ್ರಗಳಾಗಿವೆ. ಹಾಗಾಗಿಯೇ ರಾಗಿಣಿ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾಳೆ. ಅದಕ್ಕಾಗಿ ಹೊಸ ಫೋಟೋಶೂಟ್ (Photoshoot)ಕೂಡ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್‌ ಶೆಟ್ಟಿ

    ಕೆಂಪೇಗೌಡ, ವೀರಮದಕರಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಾಗಿಣಿ, ಮಹಿಳಾ ಪ್ರಧಾನ ಸಿನಿಮಾಗಳನ್ನೂ ಮಾಡಿದರು. ಅದರಲ್ಲಿ ಯಶಸ್ಸೂ ಕಂಡರು. ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಕೂಡ ಇವರದ್ದು. ಹಾಗಾಗಿ ರಾಗಿಣಿ ಕೂಡ ಸ್ಟಾರ್ ನಟಿಯಾಗಿಯೇ ಮಿಂಚಿದವರು.

    ಗಾಂಧಿಗಿರಿ, ಒನ್ ಟು ಒನ್, ಕರ್ವ 3, ಜಾನಿವಾಕರ್ ಸೇರಿದಂತೆ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ಇವರು, ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತೆಲುಗು ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಸಂತಾನಂ ಈ ಸಿನಿಮಾದ ಹೀರೋ. ನಾಯಕಿಯಾಗಿ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ.

    ಹಿಂದಿ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ತಯಾರಾಗುತ್ತಿರುವ ಸಾರಿ ಕರ್ಮ ರಿಟನರ್ಸ್ ಸಿನಿಮಾದಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೊಂದು ಸಸ್ಪನ್ಸ್ ಮತ್ತು ಥ್ರಿಲ್ಲರ್ ಆಧರಿಸಿದ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಅವರು ವಿಶೇಷ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರಂತೆ.

    ಕೋವಿಡ್ ವೇಳೆಯಲ್ಲಿ ಸಮಾಜಮುಖಿ ಕೆಲಸಗಳನ್ನೂ ಮಾಡಿದ್ದ ರಾಗಿಣಿ, ಡ್ರಗ್ಸ್ ಕೇಸಿನಲ್ಲಿ ಪಡಬಾರದ ಕಷ್ಟ ಪಟ್ಟರು. ಜೈಲಿಗೂ ಹೋಗಿ ಬಂದರು. ಜೈಲಿನಿಂದ ವಾಪಸ್ಸಾದ ನಂತರ ಮತ್ತೆ ಅವರು ಸಿನಿಮಾ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತುಪ್ಪದ ಹುಡುಗಿ ರಾಗಿಣಿ ಮತ್ತೆ ಹಾಟ್ ಹಾಟ್: ಕೈ ತುಂಬಾ ಕೆಲಸ

    ತುಪ್ಪದ ಹುಡುಗಿ ರಾಗಿಣಿ ಮತ್ತೆ ಹಾಟ್ ಹಾಟ್: ಕೈ ತುಂಬಾ ಕೆಲಸ

    ಡ್ರಗ್ಸ್ ಕೇಸ್ ನಂತರ ರಾಗಿಣಿ (Ragini Dwivedi) ಸ್ವಲ್ಪ ಮಂಕಾದಂತೆ ಕಂಡಿದ್ದರು. ಸಿನಿಮಾಗಳು ಕೂಡ ಅಷ್ಟಕಷ್ಟೇ ಎನ್ನುವಂತಿದ್ದವು. ಆದರೆ, ಇದೀಗ ತುಪ್ಪದ ಹುಡುಗಿ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅವೆಲ್ಲವೂ ವಿಭಿನ್ನವಾದ ಪಾತ್ರಗಳಾಗಿವೆ. ಹಾಗಾಗಿಯೇ ರಾಗಿಣಿ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾಳೆ. ಅದಕ್ಕಾಗಿ ಹೊಸ ಫೋಟೋಶೂಟ್ (Photoshoot) ಕೂಡ ಮಾಡಿಸಿಕೊಂಡಿದ್ದಾರೆ.

    ಕೆಂಪೇಗೌಡ, ವೀರಮದಕರಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಾಗಿಣಿ, ಮಹಿಳಾ ಪ್ರಧಾನ ಸಿನಿಮಾಗಳನ್ನೂ ಮಾಡಿದರು. ಅದರಲ್ಲಿ ಯಶಸ್ಸೂ ಕಂಡರು. ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಕೂಡ ಇವರದ್ದು. ಹಾಗಾಗಿ ರಾಗಿಣಿ ಕೂಡ ಸ್ಟಾರ್ ನಟಿಯಾಗಿಯೇ ಮಿಂಚಿದವರು.

    ಗಾಂಧಿಗಿರಿ, ಒನ್ ಟು ಒನ್, ಕರ್ವ 3, ಜಾನಿವಾಕರ್ ಸೇರಿದಂತೆ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ಇವರು, ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತೆಲುಗು ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಸಂತಾನಂ ಈ ಸಿನಿಮಾದ ಹೀರೋ. ನಾಯಕಿಯಾಗಿ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಹಿಂದಿ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ತಯಾರಾಗುತ್ತಿರುವ ಸಾರಿ ಕರ್ಮ ರಿಟನರ್ಸ್ ಸಿನಿಮಾದಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೊಂದು ಸಸ್ಪನ್ಸ್ ಮತ್ತು ಥ್ರಿಲ್ಲರ್ ಆಧರಿಸಿದ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಅವರು ವಿಶೇಷ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರಂತೆ.

    ಕೋವಿಡ್ ವೇಳೆಯಲ್ಲಿ ಸಮಾಜಮುಖಿ ಕೆಲಸಗಳನ್ನೂ ಮಾಡಿದ್ದ ರಾಗಿಣಿ, ಡ್ರಗ್ಸ್ (Drugs) ಕೇಸಿನಲ್ಲಿ ಪಡಬಾರದ ಕಷ್ಟ ಪಟ್ಟರು. ಜೈಲಿಗೂ ಹೋಗಿ ಬಂದರು. ಜೈಲಿನಿಂದ ವಾಪಸ್ಸಾದ ನಂತರ ಮತ್ತೆ ಅವರು ಸಿನಿಮಾ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ರಾಜಕುಮಾರಿ’ಯ ಲುಕ್ ನಲ್ಲಿ ಮಿಂಚಿದ ಖ್ಯಾತ ನಟಿ ಕಾರುಣ್ಯ ರಾಮ್

    ‘ರಾಜಕುಮಾರಿ’ಯ ಲುಕ್ ನಲ್ಲಿ ಮಿಂಚಿದ ಖ್ಯಾತ ನಟಿ ಕಾರುಣ್ಯ ರಾಮ್

    ನಾಡಿನಾದ್ಯಂತ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲೂ ದಸರಾ ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸುತ್ತಿದ್ದಾರೆ. ನಟಿ ಕಾರುಣ್ಯ ರಾಮ್ (Karunya Ram) ಇದೇ ಸಂದರ್ಭದಲ್ಲಿ ಫೋಟೋ ಶೂಟ್ ಮಾಡಿಸಿದ್ದು, ರಾಜಕುಮಾರಿ ಲುಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ದಸರಾಗೂ ಮತ್ತು ಅರಮನೆಗೂ ನಂಟಿರುವ ಕಾರಣದ ಕಾನ್ಸೆಪ್ಟ್ ನಲ್ಲಿ ಈ ಫೋಟೋ ಶೂಟ್ (Photoshoot) ನಡೆದಿದೆ. ಅಂಥದ್ದೇ ಲೋಕೇಶ್ ಹುಡುಕಿ ಅಲ್ಲಿಯೇ ಫೋಟೋಗಳನ್ನು ಸೆರೆ ಹಿಡಿದಿರುವುದು ವಿಶೇಷ.

    ಇದು ವಿಶೇಷವಾಗಿ ನವರಾತ್ರಿಗೆಂದೇ ಮಾಡಲಾದ ಫೋಟೋ ಶೂಟ್. ಕಾನ್ಸೆಪ್ಟ್ ಹಾಗೂ ಡಿಸೈನ್ ಬಿಂದು ರೆಡ್ಡಿ (Bindu Reddy) ಅವರು ಮಾಡಿದ್ದು, ಮಧುರಾ (Madhura) ಅವರ ಫೋಟೋಗ್ರಫಿ ಹಾಗೂ  ನಿಖಿತಾ ಆನಂದ್ (Nikita Anand) ಮೇಕಪ್  ಮಾಡಿದ್ದಾರೆ. ಇದೊಂದು ನನ್ನ ಜೀವನದ ಸುಂದರ ಕ್ಷಣ. ಎಲ್ಲ ಫೋಟೋಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಅಂತಾರೆ ಕಾರುಣ್ಯ. ಇದನ್ನೂ ಓದಿ:ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ಮೊನ್ನೆಯಷ್ಟೇ ಕಾರುಣ್ಯ ರಾಮ್ ನಟನೆಯ ಪೆಟ್ರೊಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿದೆ. ಕಾರುಣ್ಯ ನಿರ್ವಹಿಸಿದ ಪಾತ್ರಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅಲ್ಲದೇ, ಪವನ್ ಒಡೆಯರ್ ನಿರ್ದೇಶನದ ರೆಮೋ ಸಿನಿಮಾದಲ್ಲಿ ಕಾರುಣ್ಯ ನಟಿಸಿದ್ದು, ಈ ಸಿನಿಮಾದಲ್ಲಿ ಅವರು ಪ್ರಿಯಾ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಆ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ.

    ನಾನಾ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಕಾರುಣ್ಯ ಕಿರಗೂರಿನ ಗಯ್ಯಾಳಿಗಳು, ಮನೆ ಮಾರಾಟಕ್ಕಿದೆ ಸೇರಿದಂತೆ ಪ್ರಯೋಗಾತ್ಮಕ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಮನೆ ಮಾರಾಟಕ್ಕಿದೆ ಸಿನಿಮಾದ ನಟನೆಗಾಗಿ ಇವರು ಸೈಮಾ ಪ್ರಶಸ್ತಿ ಕೂಡ ದೊರೆತಿದೆ. ಸಿನಿಮಾಗಳಲ್ಲಿ ಮಾತ್ರವಲ್ಲ, ಕಿರುತೆರೆ ಹಲವಾರು ಶೋಗಳಲ್ಲಿ ಕಾರುಣ್ಯ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಕೂಡ ಇವರಾಗಿದ್ದಾರೆ.

    ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ತಮಿಳಿನ ಎರಡು ಚಿತ್ರಗಳಲ್ಲೂ ಕಾರುಣ್ಯ ನಟಿಸಿದ್ದಾರೆ. ಆ ಮೂಲಕ ತಮಿಳು ಪ್ರೇಕ್ಷಕರಿಗೂ ಇವರು ಹತ್ತಿರವಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂವಾದಿಸುವ ಇವರು, ಟ್ರಾವೆಲ್ ಪ್ರಿಯೆ. ಸದಾ ದೇಶಗಳನ್ನು ಸುತ್ತುತ್ತಲೇ ಇರುತ್ತಾರೆ. ಅವುಗಳ ಮಾಹಿತಿಯನ್ನೂ ಹಂಚಿಕೊಳ್ಳುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ಬಾಲಿವುಡ್‌ ನಟಿ ಬಿಪಾಶಾ ಬಸು

    ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ಬಾಲಿವುಡ್‌ ನಟಿ ಬಿಪಾಶಾ ಬಸು

    ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿಯನ್ನ ಸ್ವಾಗತಿಸಲು ಖುಷಿಯಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಮತ್ತೊಮ್ಮೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ.

     

    View this post on Instagram

     

    A post shared by Bipasha Basu (@bipashabasu)

    ನಟಿ ಬಿಪಾಶಾ ಮತ್ತು ಕರಣ್ ಪರಸ್ಪರ ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಏಪ್ರಿಲ್ 30, 2016ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲ ವರ್ಷಗಳ ನಂತರ ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನ ಅಭಿಮಾನಿಗಳ ಜತೆ ಬೇಬಿ ಬಂಪ್ ಫೋಟೋಶೂಟ್ ಶೇರ್ ಮಾಡುವ ಮೂಲಕ ತಿಳಿಸಿದ್ದರು. ಇದೀಗ ಮತ್ತೊಮ್ಮೆ ಬೋಲ್ಡ್ ಅವತಾರ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಶಾಕಿಂಗ್‌ ನ್ಯೂಸ್‌ ಕೊಟ್ರು ನಯನತಾರಾ

     

    View this post on Instagram

     

    A post shared by Bipasha Basu (@bipashabasu)

    ಬಿಪಾಶಾ ಬಸು ಟ್ರಾನ್ಸ್ಪರೆಂಟ್ ಉಡುಗೆಯಲ್ಲಿ ಮತ್ತೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ.

     

    View this post on Instagram

     

    A post shared by Bipasha Basu (@bipashabasu)

    ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿಗೆ ಫ್ಯಾನ್ಸ್ ಶುಭ ಹಾರೈಸಿದ್ದಾರೆ. ಸದ್ಯ ಫೋಟೋಶೂಟ್ ಮೂಲಕ ನಟಿ ಬಿಪಾಶಾ, ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುಸ್ತಕಗಳ ಮಧ್ಯ ತಮ್ಮ ಪುಟಾಣಿ ಮಕ್ಕಳ ಮಲಗಿಸಿ ‘ಹ್ಯಾಪಿ ಗಣೇಶ’ ಎಂದ ನಟಿ ಅಮೂಲ್ಯ

    ಪುಸ್ತಕಗಳ ಮಧ್ಯ ತಮ್ಮ ಪುಟಾಣಿ ಮಕ್ಕಳ ಮಲಗಿಸಿ ‘ಹ್ಯಾಪಿ ಗಣೇಶ’ ಎಂದ ನಟಿ ಅಮೂಲ್ಯ

    ಣೇಶನನ್ನು ವಿದ್ಯೆವಿನಾಯಕ ಅಂತಾನೂ ಕರೆಯುತ್ತಾರೆ. ವಿದ್ಯೆಗೆ ಅಧಿಪತಿ ವಿನಾಯಕ ಎನ್ನುವುದು ವಾಡಿಕೆ. ಹಾಗಾಗಿ ಗಣೇಶ ಹಬ್ಬದ ದಿನದಂದು ತಮ್ಮಿಬ್ಬರ ಮಕ್ಕಳ ಸುತ್ತಲೂ ಪುಸ್ತಕಗಳನ್ನು ಇಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ ನಟಿ ಅಮೂಲ್ಯ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.

    ಮೊನ್ನೆಯಷ್ಟೇ ತಮ್ಮ ಎರಡು ಪುಟಾಣಿ ಮಕ್ಕಳ ವಿಶೇಷ ಫೋಟೋ ಶೂಟ್ ಮಾಡಿಸಿದ್ದರು ಅಮೂಲ್ಯ. ಅವಳಿ ಜವಳಿ ಮಕ್ಕಳ ಫೋಟೋ ಶೂಟ್ ಗೆ ಒಂದು ಕಾನ್ಸೆಪ್ಟ್ ಕೂಡ ಮಾಡಿದ್ದಾರೆ. ಪತಿ ಜಗದೀಶ್ ಮತ್ತು ಅಮೂಲ್ಯ ಇಬ್ಬರೂ ಮಕ್ಕಳ ಜೊತೆಗೆ ಮಕ್ಕಳಂತೆಯೇ ಕ್ಯೂಟ್ ಆಗಿ ಕಂಡಿದ್ದರು. ಆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಪುಟಾಣಿ ಮಕ್ಕಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದರು. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಈಗ ಗಣೇಶ ಹಬ್ಬಕಾಗಿ ವಿಶೇಷ ಫೋಟೋ ಶೂಟ್ ಮಾಡಿಸಿದ್ದು, ವಿದ್ಯೆ ವಿನಾಯಕನನ್ನು ತಮ್ಮ ಮಕ್ಕಳು ಮೂಲಕ ನೆನೆದಿದ್ದಾರೆ ಅಮೂಲ್ಯ. ತಮ್ಮ ಮಕ್ಕಳ ಮೇಲೆ ಎಲ್ಲರ ಪ್ರೀತಿ, ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ಸಿನಿಮಾ ರಂಗದಿಂದ ಸದ್ಯ ದೂರವಾಗಿರುವ ಅಮೂಲ್ಯ, ಮಕ್ಕಳೊಂದಿಗೆ ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಹೊಸ ಫೋಟೋಶೂಟ್‌ನಿಂದ ಪಡ್ಡೆಹೈಕ್ಳ ನಿದ್ದೆಗೆಡಿಸಿದ ಉರ್ಫಿ ಜಾವೇದ್

    ಮತ್ತೆ ಹೊಸ ಫೋಟೋಶೂಟ್‌ನಿಂದ ಪಡ್ಡೆಹೈಕ್ಳ ನಿದ್ದೆಗೆಡಿಸಿದ ಉರ್ಫಿ ಜಾವೇದ್

    ಸೋಷಿಯಲ್ ಮೀಡಿಯಾ ಸೆನ್ಸೇಷನಲ್ ಉರ್ಫಿ ಜಾವೇದ್ ಮತ್ತೆ ಹೊಸ ಫೋಟೋಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಸೇರಿದ್ದ ಉರ್ಫಿ ಈಗ ಮತ್ತೆ ಹಾಟ್ ಫೋಟೋಶೂಟ್ ಮೂಲಕ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ.

     

    View this post on Instagram

     

    A post shared by Uorfi (@urf7i)


    ಹಿಂದಿ ಕಿರುತೆರೆಯ ಮೂಲಕ ಮನೆಮಾತಾಗಿದ್ದ ನಟಿ ಉರ್ಫಿ ಬಳಿಕ ಬಿಗ್ ಬಾಸ್ ಓಟಿಟಿ ಮೂಲಕ ಅಭಿಮಾನಿಗಳ ಗಮನ ಸೆಳೆದರು. ಬಳಿಕ ಚಿತ್ರ, ವಿಚಿತ್ರ ಫೋಟೋಶೂಟ್ ಮೂಲಕ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿಸಿದ್ದರು. ಈಗ ಲ್ಯಾವೆಂಡರ್ ಬಣ್ಣದ ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಉರ್ಫಿ ಮಿಂಚಿದ್ದಾರೆ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

     

    View this post on Instagram

     

    A post shared by Uorfi (@urf7i)

    ಇತ್ತೀಚೆಗಷ್ಟೇ ಉರ್ಫಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಸೇರಿದ್ದರು. ಈಗ ಗುಣಮುಖರಾಗಿ, ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಆಕ್ಟೀವ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೆಡ್ ಕಲರ್ ಲೆಹೆಂಗಾದಲ್ಲಿ ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಮಿಂಚಿದ ರಶ್ಮಿಕಾ ಮಂದಣ್ಣ

    ರೆಡ್ ಕಲರ್ ಲೆಹೆಂಗಾದಲ್ಲಿ ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಮಿಂಚಿದ ರಶ್ಮಿಕಾ ಮಂದಣ್ಣ

    ಚಿತ್ರರಂಗದ ಲಕ್ಕಿ ನಟಿ ರಶ್ಮಿಕಾ ಇದೀಗ ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮಧ್ಯೆ ಹೊಸ ಬಗೆಯ ಫೋಟೋಶೂಟ್ ಮಾಡಿಸಿ, ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

    `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿ ಪಯಣ ಶುರು ಮಾಡಿದ ನಟಿ ಈಗ ಪರಭಾಷೆಗಳಲ್ಲಿ ಸಖತ್ ಬೇಡಿಕೆಯಲ್ಲಿದ್ದಾರೆ. ಮುಂಬೈ, ಹೈದರಾಬಾದ್, ಚೆನ್ನೈ, ಅಂತಾ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿಯಿರುವ ನಟಿ ಈ ಮಧ್ಯೆ ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ್ದಾರೆ. ಅಷ್ಟೇ ಅಲ್ಲ, ದೆಹಲಿಯಲ್ಲಿ ಫ್ಯಾಷನ್ ವಿಕ್‌ನಲ್ಲಿ ಮೊದಲ ಬಾರಿಗೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಅಲ್ಲಿನ ಕೆಲವು ತುಣುಕುಗಳನ್ನ ರಶ್ಮಿಕಾ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ

    ರೆಡ್ ಕಲರ್ ಲೆಹೆಂಗಾದಲ್ಲಿ ರಶ್ಮಿಕಾ ಮಿರ ಮಿರ ಅಂತಾ ಮಿಂಚಿದ್ದಾರೆ. ಎಲ್ಲರ ಕಣ್ಣು ಕುಕ್ಕುವಂತೆ ಹಾಟ್ ಆಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ಬಿಟೌನ್‌ನಲ್ಲಿ ವಿಚಿತ್ರ ಬಟ್ಟೆ ಧರಿಸುವ ಮೂಲಕ ಸೆನ್ಸೇಷನ್‌ ಕ್ರಿಯೇಟ್‌ ಮಾಡಿರುವ ನಟ ರಣ್‌ವೀರ್ ಸಿಂಗ್, ಸದಾ ಚಿತ್ರ ವಿಚಿತ್ರ ಬಟ್ಟೆ ತೊಟ್ಟು ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಈ ಬಾರಿ ಬಟ್ಟೆ ಧರಿಸದೇ ಇರೋದಕ್ಕೆ ರಣ್‌ವೀರ್ ಸಿಂಗ್ ಟ್ರೋಲ್ ಆಗಿದ್ದಾರೆ. ರಣ್‌ವೀರ್ ಸಿಂಗ್ ನಗ್ನ ಅವತಾರಕ್ಕೆ ದೀಪಿಕಾ ಪಡುಕೋಣೆ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

     

    View this post on Instagram

     

    A post shared by DietSabya® (@dietsabya)

    ಹಿಂದಿ ಚಿತ್ರರಂಗದ ಸ್ಟಾರ್ ನಟ ರಣ್‌ವೀರ್ ಸಿಂಗ್ ಈ ಬಾರಿ ವಿಚಿತ್ರ ಬಟ್ಟೆ ತೊಡದೇ ಸಂಪೂರ್ಣ ನಗ್ನ ಅವತಾರದಲ್ಲಿ ಬಂದಿರೋದು ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಖಾಸಗಿ ಮ್ಯಾಗಜಿನ್‌ನ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ರಣ್‌ವೀರ್ ಪೋಸ್ ಮಾಡಿದ್ದಾರೆ. ನಟನ ಬೆತ್ತಲೆ ಅವತಾರಕ್ಕೆ ದೀಪಿಕಾರನ್ನು ಪ್ರಶ್ನಿಸಿದ್ದಾರೆ. ದೀಪಿಕಾ ಪಡುಕೋಣೆ ಅವರೇ ಸ್ವಲ್ಪ ಈ ಕಡೆ ನೋಡಿ ಎಂದು ದೀಪಿಕಾಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಪತಿಗೆ ತಿಳಿ ಹೇಳಿ ಎಂದು ನಟಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಚಿತ್ರ ನಿರ್ಮಾಣಕ್ಕಿಳಿದ ನಟಿ ಮೇಘನಾ ರಾಜ್

    ಖಾಸಗಿ ಮ್ಯಾಗಜಿನ್‌ವೊಂದಕ್ಕೆ ಬೆತ್ತಲೆ ಫೋಟೋಶೂಟ್ ಅಷ್ಟೇ ನೀಡಿರುವುದಲ್ಲ. ಸಂದರ್ಶನ ಕೂಡ ನೀಡಿದ್ದಾರೆ. ನಟಿಸುವಾಗ ನನಗೆ ಬೆತ್ತಲಾಗುವುದು ನನಗೆ ತುಂಬಾ ಸುಲಭ ಆದರೆ ನೋಡುಗರು ನನ್ನ ನೋಡಿ ಮುಜುಗರ ಪಡುತ್ತಾರೆ ಅಂತಾ ಹೇಳಿಕೆ ನೀಡಿದ್ದಾರೆ. ಒಟ್ನಲ್ಲಿ ರಣ್‌ವೀರ್ ಸಿಂಗ್ ಎನೇ ಮಾಡಿದ್ದರು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುವುದು ಮಾತ್ರ ತಪ್ಪಲ್ಲ. ರಣ್‌ವೀರ್ ಸಿಂಗ್ ನಗ್ನ ಫೋಟೋಶೂಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ಸ್ ಹರಿದು ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸೆಕ್ಸಿ ಬಿಕಿನಿಯಲ್ಲಿ ಟೆಂಪ್ರೇಚರ್ ಹೆಚ್ಚಿಸಿದ ಪೂನಂ ಪಾಂಡೆ

    ಸೆಕ್ಸಿ ಬಿಕಿನಿಯಲ್ಲಿ ಟೆಂಪ್ರೇಚರ್ ಹೆಚ್ಚಿಸಿದ ಪೂನಂ ಪಾಂಡೆ

    ಬಾಲಿವುಡ್ ಬ್ಯೂಟಿ ಪೂನಂ ಪಾಂಡೆ ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಬಿಟೌನ್ ಅಡ್ಡಾದಲ್ಲಿ ಸೌಂಡ್ ಮಾಡುತ್ತಲೇ ಇರುತ್ತಾರೆ. ಈಗ ಬಿಕಿನಿ ಫೋಟೋಶೂಟ್‌ನಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಬಿಕಿನಿ ಫೋಟೋ ಹರಿಬಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದ್ದಾರೆ.

     

    View this post on Instagram

     

    A post shared by Poonam Pandey (@poonampandeyreal)

    ನಟಿ ಪೂನಂ ಪಾಂಡೆ ಸಿನಿಮಾಗಳಿಗಿಂತ, ವಿವಾದಗಳಿಂದ ಮತ್ತು ಬೋಲ್ಡ್ ಅವತಾರದ ಮೂಲಕ ಸೌಂಡ್ ಮಾಡುತ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಫೋಟೋಶೂಟ್ ಅನ್ನು ಶೇರ್ ಮಾಡಿ, ಯುವಕರ ನಿದ್ದೆ ಕದ್ದಿದ್ದಾರೆ. ಬೀಚ್‌ನಲ್ಲಿ ಬಿಕಿನಿ ಅವತಾರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸೆಕ್ಸಿ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸುಶ್ಮಿತಾ ಸೇನ್ ಬಲೆಗೆ ಬಿದ್ದ ಲಲಿತ್ ಮೋದಿ : ನಾನು ಲಂಚ ತಗೆದುಕೊಂಡು ದೇಶ ಬಿಟ್ಟಿಲ್ಲ ಎಂದು ತಿರುಗೇಟು

     

    View this post on Instagram

     

    A post shared by Poonam Pandey (@poonampandeyreal)

    ಪಡ್ಡೆ ಹುಡುಗರ ಪಾಲಿಗೆ ಕನಸಿನ ರಾಣಿಯಾಗಿರುವ ಪೂನಂ ಪಾಂಡೆ, ನಟಿಯ ಬಿಕಿನಿಯ ಹಾಟ್ ಅವತಾರ ಯುವಕರ ಹಾರ್ಟ್ನಲ್ಲಿ ಹಲ್‌ಚಲ್ ಎಬ್ಬಿಸಿದೆ. ಒಟ್ನಲ್ಲಿ ಪೂನಂ ನಯಾ ಅವತಾರ ನೋಡಿ ಪಡ್ಡೆಹುಡುಗರು ಕಣ್ತುಂಬಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]