ವಾಷಿಂಗ್ಟನ್: ಮೆಟ್ರೋ ರೈಲಿನಲ್ಲಿ ಯುವತಿ ಗ್ಲಾಮರಸ್ ಫೋಟೋಶೂಟ್ ನಡೆಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ನ್ಯೂಯಾರ್ಕ್ನ ಜೆಸ್ಸಿಕಾ ಜಾರ್ಜ್ ಎಂಬ ಯುವತಿ ರೈಲಿನಲ್ಲಿ ಹೋಗುತ್ತಿದ್ದಳು. ಈ ವೇಳೆ ಆಕೆ ತನ್ನ ಮೊಬೈಲಿನಲ್ಲಿ ಟೈಮರ್ ಇಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಳು. ಇದನ್ನು ನೋಡಿ ಆಕೆಯ ಸಹ ಪ್ರಯಾಣಿಕ ಬೆನ್ ಯಹಾರ್ ಆಕೆಯ ವಿಡಿಯೋ ಸೆರೆ ಹಿಡಿದಿದ್ದಾರೆ.

ಜೆಸ್ಸಿಕಾ ರೈಲಿನಲ್ಲಿ ಇದ್ದವರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮೊಬೈಲಿನಲ್ಲಿ ಟೈಮರ್ ಸೆಟ್ ಮಾಡಿ ಗ್ಲಾಮರಸ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾಳೆ. ಇದನ್ನು ಸೆರೆ ಹಿಡಿದ ಬೆನ್ ಯಹಾರ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಈ ವಿಡಿಯೋವನ್ನು ಬೆನ್ ಯಹಾರ್ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋ ಇದುವರೆಗೂ 87 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದ್ದು, ಜನರು ವಿಭಿನ್ನವಾಗಿ ಕಮೆಂಟ್ ಮಾಡುತ್ತಿದ್ದಾರೆ.
https://twitter.com/jessiica_george/status/1162866116181577728?ref_src=twsrc%5Etfw%7Ctwcamp%5Etweetembed%7Ctwterm%5E1162866116181577728&ref_url=https%3A%2F%2Fwww.ndtv.com%2Foffbeat%2Fwomans-photoshoot-on-a-train-is-viral-and-people-love-her-confidence-2088085
ಈ ವಿಡಿಯೋ ವೈರಲ್ ಆದ ನಂತರ ಜೆಸ್ಸಿಕಾ ಕೂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಲಿಸುತ್ತಿದ್ದ ರೈಲಿನಲ್ಲಿ ಅಷ್ಟು ಜನರ ನಡುವೆ ಜೆಸ್ಸಿಕಾ ಫೋಟೋಶೂಟ್ ನಡೆಸಿದ್ದನ್ನು ನೋಡಿ ಆಕೆಯ ಕಾನ್ಫಿಡೆನ್ಸ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಳಿಕ ಜೆಸ್ಸಿಕಾ ತನ್ನ ಮೈಕ್ರೋ ಬ್ಲಾಗಿಂಗ್ ಸೈಟ್ನಲ್ಲಿ, “ಪ್ರತಿಯೊಬ್ಬರು ವ್ಯಕ್ತಪಡಿಸಿದ ಮಾತುಗಳಿಂದ ನಾನು ಖುಷಿಯಾಗಿದ್ದೇನೆ. ನಾನು ಎಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ” ಎಂದು ಬರೆದುಕೊಂಡಿದ್ದಾಳೆ.
https://twitter.com/benyahr/status/1162847464036024320?ref_src=twsrc%5Etfw%7Ctwcamp%5Etweetembed%7Ctwterm%5E1162847464036024320&ref_url=https%3A%2F%2Fwww.ndtv.com%2Foffbeat%2Fwomans-photoshoot-on-a-train-is-viral-and-people-love-her-confidence-2088085














