Tag: photoshoot

  • ಬರ್ತ್ ಡೇಗೂ ಮುನ್ನವೇ ಐರಾಳ ಕ್ಯೂಟ್ ಫೋಟೋಶೂಟ್

    ಬರ್ತ್ ಡೇಗೂ ಮುನ್ನವೇ ಐರಾಳ ಕ್ಯೂಟ್ ಫೋಟೋಶೂಟ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದು ಮಗಳು ಐರಾಳ ಹುಟ್ಟುಹಬ್ಬ ಸೋಮವಾರವಿದೆ. ಈ ಹಿನ್ನೆಲೆಯಲ್ಲಿ ಎರಡು ದಿನದಿಂದ ಐರಾಳ ಹೊಸ ಫೋಟೋಶೂಟ್ ಮಾಡಿಸಲಾಗುತ್ತಿದೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ರಾಧಿಕಾ 2018 ಡಿಸೆಂಬರ್ 2 ರಂದು ಐರಾಳಿಗೆ ಜನ್ಮ ನೀಡಿದ್ದರು. ಹೀಗಾಗಿ ಸೋಮವಾರ ಐರಾಗೆ ಒಂದು ವರ್ಷ ತುಂಬುತ್ತದೆ. ಈ ಹಿನ್ನೆಲೆಯಲ್ಲಿ ರಾಧಿಕಾ ಮಗಳಿಗೆ ಒಂದು ವರ್ಷದ ಫೋಟೋಶೂಟ್ ಮಾಡಿಸಿದ್ದಾರೆ. ಮನೆಯೊಳಗೆ ಮತ್ತು ಹೊರಗೆ ಐರಾಳನ್ನು ಕೂರಿಸಿ ಫೋಟೋ ಕ್ಲಿಕ್ಕಿಸಲಾಗಿದೆ. ಜೊತೆಗೆ ಐರಾ ಕೂಡ ಕ್ಯಾಮೆರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾಳೆ.

    ಐರಾಳ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಐರಾ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಇತ್ತೀಚೆಗಷ್ಟೆ ರಾಧಿಕಾ, ಮಗಳು ಐರಾ ಬಿಸಿಲಲ್ಲಿ ನೋಡುವುದು ಹೇಗೆ ಎಂದು ತೋರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ಲಕ್ಷಾಂತರ ಅಭಿಮಾನಿಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ನಟಿ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಐರಾ, ಸಹೋದರನ ಜೊತೆ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

    https://www.instagram.com/p/B5b7DtMgwbS/

  • ಕಾಡಿನಲ್ಲಿ ಅಮೀರ್ ಮಗಳ ಹಾಟ್ ಫೋಟೋಶೂಟ್

    ಕಾಡಿನಲ್ಲಿ ಅಮೀರ್ ಮಗಳ ಹಾಟ್ ಫೋಟೋಶೂಟ್

    ನವದೆಹಲಿ: ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಕಾಡಿನಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಇರಾ ಕಾಡಿನಂತೆ ಇರುವ ಜಾಗದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ಅವರ ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲವು ಫೋಟೋಗಳಲ್ಲಿ ಇರಾ ಗೋಲ್ಡನ್ ಹಾಗೂ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೆ ಕೆಲವು ಫೋಟೋಗಳಲ್ಲಿ ಮೆರೂನ್ ಬಣ್ಣದ ಗೌನ್‍ನಲ್ಲಿ ಮಿಂಚಿದ್ದಾರೆ.

    ಈ ಫೋಟೋಗಳನ್ನು ಇರಾ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅವರ ಪೋಸ್ಟ್ ಗೆ ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

    ಕೆಲವರು ‘ಬಾರ್ನ್ ಸ್ಟಾರ್’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇರಾ ಅವರ ಸೌಂದರ್ಯವನ್ನು ಹೊಗಳಿದ್ದಾರೆ. ಇನ್ನು ಕೆಲವರು ನೀನು ನಿನ್ನ ತಂದೆಯ ಮರ್ಯಾದೆಯನ್ನು ಕಾಪಾಡಬೇಕು. ಅದನ್ನು ಬಿಟ್ಟು ಈ ರೀತಿ ಫೋಟೋಶೂಟ್ ಮಾಡಿಸಿದ್ದೀಯಾ ನಿನಗೆ ನಾಚಿಕೆ ಆಗಬೇಕು ಎಂದು ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

    ಇರಾ ಖಾನ್, ಅಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತ ಅವರ ಎರಡನೇ ಮಗಳು. ಇರಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

  • ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

    ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

    ಹಾವೇರಿ: ಜಿಲ್ಲೆಯ ಬ್ಯಾಡಗಿ ನಗರದ ರಸ್ತೆಗಳ ದುಸ್ಥಿತಿ ಬಗ್ಗೆ ತಿಳಿಸಲು ದಂಪತಿ ಹಾಗೂ ಮಗ ವಿಭಿನ್ನ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

    ಬ್ಯಾಡಗಿ ನಗರದ ರಸ್ತೆಯ ತಗ್ಗುಗುಂಡಿಗಳ ಬಗ್ಗೆ ವಿಭಿನ್ನ ಫೋಟೋಶೂಟ್ ಮಾಡಿಸಿ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯಲು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಬ್ಯಾಡಗಿ ನಗರದ ನಿವಾಸಿಗಳಾದ ಕಿರಣ್ ಕುಮಾರ್, ಅವರ ಪತ್ನಿ ಹಾಗೂ ಮಗ ಮೂವರು ಸೇರಿ ಹದಗೆಟ್ಟ ರಸ್ತೆಗಳ ಬಗ್ಗೆ ವಿಡಂಭನಾತ್ಮಕ ಫೋಟೋಶೂಟ್ ಮಾಡಿರುವುದು ಎಲ್ಲರ ಗಮನ ಸೆಳೆಸಿದೆ. ಇದನ್ನು ನೋಡಿ ಇನ್ನಾದರೂ ರಸ್ತೆ ಸರಿಮಾಡ್ರಪ್ಪ ಎಂದು ಜನರು ಜನಪ್ರತಿನಿಧಿಗಳ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ:ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

    ದಂಪತಿ ತಗ್ಗು ಗುಂಡಿಗಳಲ್ಲಿ ಬೈಕ್ ನಿಲ್ಲಿಸಿ, ಬೈಕ್ ಮೇಲೆ ತಗ್ಗುಗುಂಡಿಗಳಲ್ಲಿ ಅಪಾಯಕಾರಿ ಪ್ರಯಾಣ ಬಿಂಬಿಸುವ ಫೋಟೋ, ತಾಯಿ ಮಗನೊಂದಿಗೆ ಬೈಕಿನಲ್ಲಿ ಕಿತ್ತು ಹೋಗಿರುವ ಡಾಂಬರ್ ರಸ್ತೆ ಹೋಗುತ್ತಿರುವ ಫೋಟೋ, ರಸ್ತೆ ತಗ್ಗು ಗುಂಡಿಯ ಅಕ್ಕಪಕ್ಕ ಕೈ ಹಿಡಿದು ನಿಂತ ದಂಪತಿ, ಹದಗೆಟ್ಟ ರಸ್ತೆ ಮೇಲೆ ಕುಳಿತ ಪೋಸ್, ತಗ್ಗು ಗುಂಡಿ ಮುಂದೆ ಮಲಗಿದ ಫೋಟೋ ಹಾಗೂ ತಂದೆ-ಮಗ ಒಳಚರಂಡಿ ಮ್ಯಾನ್ ಹೋಲ್ ಮೇಲೆ ಕೈ ಮುಗಿದು ನಿಂತಿರುವುದು, ಮಕ್ಕಳ ಜೊತೆ ಮಗ ರಸ್ತೆಯಲ್ಲಿ ನಿಂತ ನೀರಲ್ಲಿ ದೋಣಿ ಬಿಡುತ್ತಿರುವ ಹಾಗೆ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

    ಈ ಫೋಟೋಗಳನ್ನು ಕಿರಣ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ದಂಪತಿಯ ವಿಭಿನ್ನ ಫೋಟೋಶೂಟ್ ಎಲ್ಲರ ಗಮನ ಸೆಳೆದಿದೆ.

  • ಬಿಕಿನಿ ತೊಟ್ಟು ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ ಅಲಿಯಾ

    ಬಿಕಿನಿ ತೊಟ್ಟು ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ ಅಲಿಯಾ

    ಮುಂಬೈ: ಬಾಲಿವುಡ್ ಬೆಡಗಿ ಅಲಿಯಾ ಭಟ್ ಬಿಕಿನಿ ತೊಟ್ಟು ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದು, ಇದೀಗ ಆ ಫೋಟೋಗಳು ವೈರಲ್ ಆಗುತ್ತಿದೆ.

    ಇತ್ತೀಚೆಗೆ ಅಲಿಯಾ ವೋಗ್ ಮ್ಯಾಗಜೀನ್‌ಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ಅಲಿಯಾ ಹಾಗೂ ವೋಗ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಅಲಿಯಾ ಚಿಕ್ ಮೊನೊಕಿನಿ ಧರಿಸಿದ್ದಾರೆ.

    ಅಲಿಯಾ ಫೋಟೋಶೂಟ್‌ನಲ್ಲಿ ನಿಯಾನ್ ಗ್ರೀನ್, ಶಿಮರಿ ಬ್ಲೂ ಹಾಗೂ ಗುಲಾಬಿ ಬಣ್ಣದ ಮೊನೊಕಿನಿಯನ್ನು ಧರಿಸಿದ್ದಾರೆ. ಅಂಡರ್‌ವಾಟರ್‌ನಲ್ಲಿ ಫೋಟೋಗಳಿಗೆ ಬೇರೆ ಬೇರೆ ರೀತಿ ಪೋಸ್‌ಗಳನ್ನು ನೀಡುವ ಮೂಲಕ ಹಾಟ್ ಆಗಿ ಮಿಂಚಿದ್ದಾರೆ.

    ಇತ್ತೀಚೆಗೆ ರಣ್‍ಬೀರ್ ಹಾಗೂ ಅಲಿಯಾ ನವೆಂಬರ್‌ನಲ್ಲಿ  ಫ್ರಾನ್ಸ್‌ನಲ್ಲಿ ಮದುವೆ ಆಗಲಿದ್ದಾರೆ ಎಂದು ವೆಬ್‍ಸೈಟ್‍ವೊಂದು ಸುದ್ದಿ ಪ್ರಕಟಿಸಿತ್ತು. ಮದುವೆ ಬಗ್ಗೆ ಇಬ್ಬರ ಕುಟುಂಬದವರು ಅಧಿಕೃತ ಮಾಹಿತಿ ನೀಡಲಿಲ್ಲ. ಆದರೆ ಈ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿತ್ತು.

    ಕೆಲವು ದಿನಗಳ ಹಿಂದೆ ರಣ್‍ಬೀರ್ ಹಾಗೂ ಅಲಿಯಾ ಭಟ್ ಅವರ ನಕಲಿ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು. ಈ ಆಮಂತ್ರಣ ಪತ್ರಿಕೆಯಲ್ಲಿ 2020, ಜನವರಿ 22ರಂದು ಜೋಧಪುರ್‌ನ  ಉಮೇದ್ ಭವನದಲ್ಲಿ ರಣ್‍ಬೀರ್ ಹಾಗೂ ಅಲಿಯಾ ಮದುವೆಯಾಗಲಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

    ಸದ್ಯ ಅಲಿಯಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲಿಯಾ ತಮ್ಮ ತಂದೆ ಮಹೇಶ್ ಭಟ್ ನಿರ್ದೇಶನದ ‘ಸಡಕ್-2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಅಲಿಯಾ, ನಟ ರಣ್‌ಬೀರ್ ಕಪೂರ್ ಜೊತೆ ‘ಬ್ರಹ್ಮಾಸ್ತ್ರ’, ಕರಣ್ ಜೋಹರ್ ನಿರ್ದೇಶನದ ‘ತಖ್ತ್’, ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’, ಹಾಗೂ ಸಂಜಯ್ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾತಿಯಾವಾಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಅಲ್ಲಿ ನೆರೆ ಹಾನಿಯಿಂದ ಜನ ತತ್ತರ – ಇಲ್ಲಿ ಶತದಿನದ ಸಂಭ್ರಮಕ್ಕೆ ಮುಂದಾದ ಸರ್ಕಾರ

    ಅಲ್ಲಿ ನೆರೆ ಹಾನಿಯಿಂದ ಜನ ತತ್ತರ – ಇಲ್ಲಿ ಶತದಿನದ ಸಂಭ್ರಮಕ್ಕೆ ಮುಂದಾದ ಸರ್ಕಾರ

    ಬೆಂಗಳೂರು: ನವೆಂಬರ್ 2ಕ್ಕೆ ಅಧಿಕಾರಕ್ಕೆ ಬಂದು 100 ದಿನವಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಶತದಿನದ ಸಂಭ್ರಮ ಆಚರಿಸಲು ಸಿದ್ಧತೆ ನಡೆಸುತ್ತಿದೆ.

    ಹೌದು. ಶತದಿನದ ಸಂಭ್ರಮಾಚರಣೆ ಸಂಬಂಧ ಸಿಎಂ ಯಡಿಯೂರಪ್ಪನವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನೂರು ದಿನದ ಸಾಧನೆ ತಿಳಿಸಲು ಭಾನುವಾರ ತರಹೇವಾರಿ ಪೋಸ್‍ಗಳನ್ನು ನೀಡಿ ಸಿಎಂ ಫೋಟೋಶೂಟ್ ಮಾಡಿಸಿದ್ದಾರೆ.

    ಸರ್ಕಾರದ ಈ ಸಂಭ್ರಮಾಚರಣೆಗೆ ಮುಂದಾಗುತ್ತಿರುವುದಕ್ಕೆ ಈಗ ಭಾರೀ ಟೀಕೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ನೆರೆ ಪರಿಹಾರ ಕಾರ್ಯಗಳು ನಿಂತಿಲ್ಲ. ಈ ನಡುವೆ ಮತ್ತೊಮ್ಮೆ ನೆರೆ ಉಂಟಾಗಿದ್ದು ಈ ನೋವಿನಲ್ಲಿ ಸಂಭ್ರಮಾಚರಣೆ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಎದ್ದಿದೆ.

    ನೆರೆ, ಅತಿವೃಷ್ಟಿ ಹಾನಿಯಿಂದ ಜನ ತತ್ತರಿಸುತ್ತಿದ್ದರೆ ಇತ್ತ ಸರ್ಕಾರ ಶತದಿನಗಳ ಸಂಭ್ರಮಾಚರಣೆಗೆ ತಯಾರಿ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ.

    ಮತ್ತೆ ನೆರೆ: ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ರಾತ್ರಿ ಬರೋಬ್ಬರಿ 3.25 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರದಲ್ಲಿರುವ ಡ್ಯಾಂನಿಂದ ಇಷ್ಟೊಂದು ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ಕೊಳ್ಳೂರು ಸೇತುವೆ, ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದ್ದು ಯಾದಗಿರಿ, ರಾಯಚೂರು ಜಿಲ್ಲೆಗಳ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

    ಇತ್ತ ಮಳೆಯಬ್ಬರಕ್ಕೆ ಗೋಕಾಕ್ ಫಾಲ್ಸ್ ಬಳಿ ಇರುವ ಗುಡ್ಡ ಮತ್ತೆ ಕುಸಿಯುತ್ತಿದ್ದು, ರಸ್ತೆಗೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿವೆ. ಬೆಳಗಾವಿ-ಗೋಕಾಕ್ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸವಾರರು ಆತಂಕದಲ್ಲೇ ಓಡಾಡುತ್ತಿದ್ದಾರೆ. ಉರುಳಿ ಬಿದ್ದಿರುವ ಬಂಡೆಗಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಬೆಳಗ್ಗೆ 7 ಗಂಟೆಯಿಂದ ಮತ್ತೆ ಆರಂಭವಾಗಿದೆ. ಉರುಳಿರುವ ಎರಡು ಬೃಹತ್ ಬಂಡೆಗಳನ್ನು ಮೊದಲು ಬ್ಲಾಸ್ಟ್ ಮಾಡಿ ಅವುಗಳನ್ನು ಅಲ್ಲಿಂದ ಸಾಗಿಸಲಾಗುತ್ತದೆ. ಎನ್‍ಡಿಆರ್‍ಎಫ್ ಸಿಬ್ಬಂದಿ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.

    ಮಳೆಯ ಅಬ್ಬರಕ್ಕೆ ನಾಡದೇವತೆ ಚಾಮುಂಡಿ ದರ್ಶನಕ್ಕೆ ಹೋಗುವ ಚಾಮುಂಡಿ ಬೆಟ್ಟದಲ್ಲೂ ಭೂ ಕುಸಿತವಾಗಿದೆ. ಚಾಮುಂಡಿ ಬೆಟ್ಟದ ವ್ಯೂವ್ ಪಾಯಿಂಟ್ ಬಳಿಯಲ್ಲಿ ಭೂಮಿ ಕುಸಿದಿದ್ದರಿಂದ ರಸ್ತೆಯೂ ಕುಸಿತವಾಗಿದೆ. ನಂದಿ ವಿಗ್ರಹದ ಕಡೆಗೆ ಸಾಗುವ ಮಾರ್ಗದ ಸನಿಹದಲ್ಲಿಯೇ ಈ ವ್ಯೂವ್ ಪಾಯಿಂಟ್ ಇದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದಾರೆ.

    ತುಂಗಭದ್ರಾ ಜಲಾಶಯದಿಂದ ಮಂಗಳವಾರ ಒಂದೂವರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್‍ನಲ್ಲಿ ಸೇತುವೆ ಮುಳುಗಡೆ ಆಗಿತ್ತು. ಇತ್ತ ಮಳೆ ಇಲ್ಲದೇ ಕಂಗೆಟ್ಟಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ವರುಣ ರೌದ್ರಾವತಾರ ತಾಳಿದ್ದಾನೆ. ಹೊಸದುರ್ಗ ತಾಲೂಕಿನ ಕೆಲ್ಲೋಡುವಿನಲ್ಲಿ ವೇದಾವತಿ ನದಿ ಪ್ರವಾಹಕ್ಕೆ ತೆಂಗಿನ ಮರಗಳೇ ಉರುಳಿ ಬಿದ್ದಿದ್ದು, ಕೆಲ್ಲೋಡು ಸೇತುವೆ ಬಳಿ ಮಣ್ಣು ಕುಸಿದಿದೆ.

    ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಹೀಗಾಗಿ ಸದ್ಯಕ್ಕೆ ನೆರೆಯಬ್ಬರ ತಗ್ಗುವ ಲಕ್ಷಣಗಳಿಲ್ಲ. ಬೆಳಗಾವಿ, ಧಾರವಾಡ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಕಿತ್ತಳೆ ಬಣ್ಣದ ಎಚ್ಚರಿಕೆ ನೀಡಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಬೆಂಗಳೂರಲ್ಲಿ ಶುಕ್ರವಾರದ ಬೆಳಗ್ಗಿನವರೆಗೂ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಇಲ್ಲಿವರೆಗೆ ಕರ್ನಾಟಕದಲ್ಲಿ ಪ್ರವಾಹಕ್ಕೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

  • ಕೂಲ್ ಚೆಲುವೆಯ ಹಾಟ್ ಫೋಟೋಶೂಟ್

    ಕೂಲ್ ಚೆಲುವೆಯ ಹಾಟ್ ಫೋಟೋಶೂಟ್

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಮೈಲಿಂಗ್ ಕ್ವೀನ್ ಹರ್ಷಿಕಾ ಪೂಣಚ್ಚರ ಹೊಸ ಫೋಟೋಶೂಟ್ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.

    ಬಹುತೇಕ ಕಲಾವಿದರು ಪ್ರತಿವರ್ಷ ತಮ್ಮ ಬಗೆ ಬಗೆಯ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಹೊಸ ಫೋಟೋಶೂಟ್ ಮೂಲಕ ತಮ್ಮಲ್ಲಿಯ ಬದಲಾವಣೆಯನ್ನು ತಾವೇ ಕಂಡುಕೊಳ್ಳುತ್ತಾರೆ. ಇದೀಗ ಚಂದನವನದ ಮುಗಳ್ನಗೆ ಚೆಲುವೆ ಹರ್ಷಿಕಾ ಪೂಣಚ್ಚ ಫೋಟೋಶೂಟ್ ಮಾಡಿಸಿಕೊಂಡಿದ್ದು, ನಟಿಯ ಚೆಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಹರ್ಷಿಕಾ ತಮ್ಮ ಹೊಸ ಫೋಟೋಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹೊಸ ಸಿನಿಮಗಾನೇದರೂ ಹರ್ಷಿಕಾ ಫೋಟೋಶೂಟ್ ಮಾಡಿಸಿಕೊಂದ್ರಾ ಎಂಬುದನ್ನು ಸ್ಮೈಲಿಂಗ್ ಕ್ವೀನ್ ರಿವೀಲ್ ಮಾಡಿಲ್ಲ.

    https://www.instagram.com/p/B3W8q6in-_Y/

    https://www.instagram.com/p/B3gpATHHZaE/

  • ಪತ್ನಿಗಾಗಿ ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ ಪತಿ

    ಪತ್ನಿಗಾಗಿ ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ ಪತಿ

    ವಾಷಿಂಗ್ಟನ್: ಪತಿಯೊಬ್ಬ ತನ್ನ ಪತ್ನಿಗಾಗಿ ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದು, ಈಗ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಅಮೆರಿಕದ ಕೆಂಟುಕಿಯ ವಾಸಿಸುವ ಕೆಲ್ಸೆ ಬ್ರೂವರ್ ಗರ್ಭಿಣಿಯಾಗಿದ್ದಳು. ಕೆಲ್ಸೆಗೆ ಗರ್ಭಾವಸ್ಥೆಯಲ್ಲಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಬೇಕೆಂಬ ಆಸೆ ಇತ್ತು. ಆದರೆ ವೈದ್ಯರು ಕೆಲ್ಸೆಗೆ ಬೆಡ್ ರೆಸ್ಟ್ ಮಾಡಬೇಕು ಎಂದು ಹೇಳಿದ ಕಾರಣ ಆಕೆ ತನ್ನ ಮೆಟರ್ನಿಟಿ ಫೋಟೋಶೂಟ್ ಮಾಡಿಸಲಿಲ್ಲ. ಇದರಿಂದ ಆಕೆ ಬೇಸರ ಮಾಡಿಕೊಂಡಿದ್ದಳು.

    ಕೆಲ್ಸೆ ಬೇಸರಗೊಂಡಿರುವುದನ್ನು ನೋಡಿದ ಪತಿ ಜೆರೆಡ್ ತನ್ನ ಪತ್ನಿಯನ್ನು ಖುಷಿಪಡಿಸಲು ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದಾನೆ. ಈ ಫೋಟೋವನ್ನು ಕೆಲ್ಸೆ ಸಹೋದರಿ ಕಿಯಾನಾ ಸ್ಮಿತರ್ ಸೆರೆ ಹಿಡಿದಿದ್ದಾಳೆ. ಈ ಫೋಟೋಗಳನ್ನು ಕೆಲ್ಸೆ ತನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾಳೆ.

    ಜೆರೆಡ್ ಈ ಫೋಟೋಶೂಟ್ ಆಗಿಯೇ ಆಗುತ್ತದೆ ಎಂದು ಹೇಳಿದ್ದರು. ಈ ಫೋಟೋಶೂಟ್ ಬಗ್ಗೆ ಅವರು ತಮ್ಮ ಪತ್ನಿ ಕೆಲ್ಸೆ ಬಳಿ ಏನೂ ಹೇಳಿರಲಿಲ್ಲ. ಈ ಫೋಟೋ ನೋಡಿದಾಗಲೇ ಕೆಲ್ಸೆಗೆ ಈ ವಿಷಯ ತಿಳಿಯಿತು. ಫೋಟೋ ನೋಡಿ ಆಕೆ ಸಂತೋಷದಿಂದ ಕಣ್ಣೀರು ಹಾಕಿದ್ದಳು ಎಂದು ಕಿಯಾನಾ ತಿಳಿಸಿದ್ದಾಳೆ.

    ಸೆಪ್ಟೆಂಬರ್ 28ರಂದು ಕೆಲ್ಸೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಜೆರೆಡ್‍ನ ಈ ಫೋಟೋ ವೈರಲ್ ಆಗುತ್ತಿದ್ದಂತೆ ಜನರು ಪತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಮೆಂಟ್ ಮಾಡುವ ಮೂಲಕ ಇಬ್ಬರಿಗೂ ಶುಭಾಶಯ ತಿಳಿಸುತ್ತಿದ್ದಾರೆ.

  • ಪ್ರವಾಹದ ನೀರಿನಲ್ಲಿ ಯುವತಿಯ ಫೋಟೋಶೂಟ್- ರೊಚ್ಚಿಗೆದ್ದ ನೆಟ್ಟಿಗರು

    ಪ್ರವಾಹದ ನೀರಿನಲ್ಲಿ ಯುವತಿಯ ಫೋಟೋಶೂಟ್- ರೊಚ್ಚಿಗೆದ್ದ ನೆಟ್ಟಿಗರು

    ಪಾಟ್ನಾ: ಬಿಹಾರದಲ್ಲಿ ಆಗಿರುವ ಪ್ರವಾಹದಿಂದ ಜನರು ತತ್ತರಿಸುತ್ತಿದ್ದಾರೆ. ಈ ನಡುವೆ ಯುವತಿಯೊಬ್ಬಳು ಪ್ರವಾಹದ ನೀರಿನಲ್ಲಿ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಅದಿತಿ ಸಿಂಗ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ನಿಫ್ಟ್)ನ ವಿದ್ಯಾರ್ಥಿನಿ. ಅದಿತಿ ನಡುರಸ್ತೆಯಲ್ಲಿಯೇ ಪ್ರವಾಹದ ನೀರಿನಲ್ಲಿ ಫೋಟೋಶೂಟ್ ಮಾಡಿಸಿದ್ದಾಳೆ. ಸದ್ಯ ಆಕೆಯ ಫೋಟೋವನ್ನು ಫೋಟೋಗ್ರಾಫರ್ ಸುರಭ್ ಅನುರಾಜ್ ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    ಬಿಹಾರದಲ್ಲಿ ಈಗಿನ ಸ್ಥಿತಿಯನ್ನು ವಿಭಿನ್ನವಾಗಿ ತೋರಿಸಲು ಸುರಭ್ ಈ ಫೋಟೋಶೂಟ್ ಮಾಡಿದ್ದಾರೆ. ಅಲ್ಲದೆ ‘ಮರ್‌ಮೇಡ್‌ ಇನ್ ಡಿಸಾಸ್ಟರ್’ ಟೈಟಲಿನಲ್ಲಿ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಕೆಲವರು ಸುರಭ್ ಅವರ ಕಾನ್ಸೆಪ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದು ನೈಸರ್ಗಿಕ ವಿಪತ್ತನ್ನು ವೈಭವೀಕರಿಸುತ್ತದೆ ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಸುರಭ್ ತಮ್ಮ ಫೇಸ್‍ಬುಕ್‍ನಲ್ಲಿ, “ಪಾಟ್ನಾದ ಈಗಿನ ಸ್ಥಿತಿಯನ್ನು ಎಲ್ಲರಿಗೂ ತೋರಿಸಲು ನಾನು ಈ ಫೋಟೋಶೂಟ್ ಮಾಡಿದೆ. ಅದನ್ನು ತಪ್ಪು ಅರ್ಥದಲ್ಲಿ ತೆಗೆದುಕೊಳ್ಳಬೇಡಿ” ಎಂದು ಬರೆದುಕೊಂಡಿದ್ದಾರೆ.

  • ಫೋಟೋಶೂಟ್‍ನಲ್ಲಿ ಮಿಂಚಿದ ದಿಶಾ ಪಠಾಣಿ

    ಫೋಟೋಶೂಟ್‍ನಲ್ಲಿ ಮಿಂಚಿದ ದಿಶಾ ಪಠಾಣಿ

    ನವದೆಹಲಿ: ಬಾಲಿವುಡ್ ನಟಿ ದಿಶಾ ಪಠಾಣಿ ಸಿನಿಮಾಗಳಿಗಿಂತ ಹೆಚ್ಚಾಗಿ ಫೋಟೋಶೂಟ್ ಮೂಲಕವೇ ಭರ್ಜರಿಯಾಗಿ ಮಿಂಚುತ್ತಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ದಿಶಾ, ಆಗಾಗ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ಹಿಂದೆ ಬಿಕಿನಿ ಧರಿಸಿದ್ದ ಹಾಗೂ ಬಾತ್ ಟಬ್‍ನಲ್ಲಿ ಕುಳಿತಿದ್ದ ಹಾಟ್ ಫೋಟೋಗಳನ್ನು ದಿಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ದಿಶಾ ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ದಿಶಾ ಬಿಳಿ ಬಣ್ಣದ ಟಾಪ್, ತಿಳಿ ಹಸಿರು ಜಾಕೆಟ್ ಹಾಗೂ ಪ್ಯಾಂಟ್‍ನಲ್ಲಿ ಸಖತ್ ಮಿಂಚಿದ್ದಾರೆ. ಮತ್ತೊಂದು ಫೋಟೋದಲ್ಲಿ ಅವರು ಧರಿಸಿದ್ದ ಆಭರಣ ಹೈಲೆಟ್ ಆಗಿವೆ. ಬಾಲಿವುಟ್ ಹಾಟ್ ನಟಿ ದಿಶಾ ಫೋಟೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

    https://www.instagram.com/p/B2eXAnug5Cm/

    ದಿಶಾ ಪಠಾಣಿ ಇತ್ತೀಚೆಗಷ್ಟೇ ಹಾಟ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು, ನೀವು ನಿನ್ನೆಗಿಂತ ಇಂದು ಉತ್ತರಮವಾಗಿರಿ ಎಂದು ಬರೆದುಕೊಂಡಿದ್ದರು. ಇದಕ್ಕೆ ಕಮೆಂಟ್ ಮಾಡಿದ್ದ ನೆಟ್ಟಿಗರು, ಅದ್ಭುತ ಮೈಕಟ್ಟು. ಬಾಲಿವುಟ್ ನಟ ಟೈಗರ್ ಶ್ರಾಫ್ ಅವರಂತೆ ನಿಮ್ಮ ದೇಹವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಇತ್ತೀಚೆಗೆ ರಿಲೀಸ್ ಆಗಿ ಪ್ರೇಕ್ಷಕರು ಹಾಗೂ ಅಭಿಮಾನಿಗಳ ಮನ ಗೆದ್ದ ಸಲ್ಮಾನ್ ಖಾನ್ ನಾಯಕತ್ವದ ‘ಭಾರತ್’ ಚಿತ್ರದಲ್ಲಿ ದಿಶಾ ಅವರು ‘ರಾಧಾ’ ಪಾತ್ರದಲ್ಲಿ ದಿಶಾ ಮಿಂಚಿದ್ದಾರೆ. ಸದ್ಯಕ್ಕೆ ಮೋಹಿತ್ ಸೂರಿ ನಿರ್ದೇಶನದ ‘ಮಲಾಂಗ್’ ಸಿನಿಮಾ ಚಿತ್ರೀಕರಣದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈ ಚಿತ್ರವು 2020ರ ‘ಪ್ರೇಮಿಗಳ ದಿನ’ ಅಂದ್ರೆ ಫೆಬ್ರವರಿ 14ರಂದು ತೆರೆಗೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    https://www.instagram.com/p/B2eTHN2gz-6/

  • ಸೀಮಂತ ಕಾರ್ಯಕ್ರಮದಲ್ಲಿ ಮಿಂಚಿದ ವಿಲನ್ ಬ್ಯೂಟಿ

    ಸೀಮಂತ ಕಾರ್ಯಕ್ರಮದಲ್ಲಿ ಮಿಂಚಿದ ವಿಲನ್ ಬ್ಯೂಟಿ

    ಲಂಡನ್: ಬ್ರಿಟಿಷ್ ಬ್ಯೂಟಿ ಆ್ಯಮಿ ಜಾಕ್ಸನ್ ಅವರು ತಮ್ಮ ಪ್ರೆಗ್ನಿಂಸಿಯನ್ನು ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ಆ್ಯಮಿ ಅವರು ತಮ್ಮ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಆ್ಯಮಿ ತಮ್ಮ ಸೀಮಂತದ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನನ್ನ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರು ನನ್ನ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನನ್ನ ಮಗ ತುಂಬಾ ಅದೃಷ್ಟವಂತ ಏಕೆಂದರೆ ಆತನನ್ನು ಪ್ರೀತಿಸುವ ಸಾಕಷ್ಟು ಮಹಿಳೆಯರು ಇಲ್ಲಿ ಇದ್ದಾರೆ. ಹೂವಿನ ಅಲಂಕಾರಕ್ಕಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    ನಟಿ ಆ್ಯಮಿ ಗರ್ಭಿಣಿಯಾದಾಗಿನಿಂದಲೂ ಹೊಸ ಹೊಸ ಫೋಟೋಶೂಟ್‍ನಲ್ಲಿ ಮಿಂಚುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಆ್ಯಮಿ ಸ್ವಿಮಿಂಗ್ ಪೂಲ್‍ನಲ್ಲಿ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಇರುವ ಕೂಲ್ ಫೋಟೋವನ್ನು ಇನ್‍ಸ್ಟಾಗ್ರಾಂ ಹಂಚಿಕೊಂಡಿದ್ದರು. ಈ ಮೊದಲು ಆ್ಯಮಿ ಟಾಪ್‍ಲೆಸ್ ಆಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

    2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳವುದಾಗಿ ಘೋಷಿಸಿದ್ದರು. ಬ್ರಿಟನ್ ಮದರ್ಸ್ ಡೇಯಂದು ಆ್ಯಮಿ ಜಾಕ್ಸನ್ ಗೆಳೆಯನೊಂದಿಗೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು. ಗರ್ಭಿಣಿಯಾದ ಬಳಿಕ ಗೆಳೆಯ ಜಾರ್ಜ್ ಜೊತೆ ಮೇ 5ರಂದು ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು.