Tag: photoshoot

  • ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು

    ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು

    ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಹೋದ ನವಜೋಡಿ ತೆಪ್ಪ ಮುಳಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ತಲಕಾಡಿನಲ್ಲಿ ನಡೆದಿದೆ.

    ಇತ್ತೀಚೆಗೆ ಮದುವೆಗೂ ಮುಂಚೆ ವಧು ಮತ್ತು ವರ ಸ್ಟೈಲಿಶ್ ಆಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಫೋಟೋ ವಿಭಿನ್ನವಾಗಿ ಮತ್ತು ಚೆನ್ನಾಗಿ ಬರಬೇಕು ಎಂದು ಹುಚ್ಚು ಸಾಹಸಕ್ಕೆ ಕೈಹಾಕಿ ಜೋಡಿಗಳು ಫೋಟೋ ಶೂಟ್ ಮಾಡಿಸುತ್ತಾರೆ. ಹೀಗೆ ಫೋಟೋ ಶೂಟ್ ಮಾಡಿಸಲು ಹೋಗಿ ನವಜೋಡಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

    ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿದ್ದ ಚಂದ್ರು ಮತ್ತು ಶಶಿಕಲಾ ಮದುವೆ ನಿಶ್ಚಯವಾಗಿತ್ತು. ಅಂತೆಯೇ ನವೆಂಬರ್ 22ರಂದು ಮದುವೆ ಮಾಡಲು ಕುಟುಂಬಸ್ಥರು ತಯಾರಿ ಕೂಡ ನಡೆಸಿದ್ದರು. ಆದರೆ ಚಂದ್ರು ಮತ್ತು ಶಶಿಕಲಾ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಮನೆಯವರಿಗೆ ಹೇಳದೇ ಮೈಸೂರಿನ ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಗೆ ಹೋಗಿದ್ದಾರೆ.

    ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪವನ್ನು ತೆಗೆದುಕೊಂಡು ಮಧ್ಯಭಾಗದಲ್ಲಿ ಫೋಟೋಶೂಟ್ ಮಾಡಿಸಲು ತೆರೆಳಿದ್ದಾರೆ. ಈ ವೇಳೆ ತೆಪ್ಪ ಮುಳುಗಿ ನವಜೋಡಿಗಳಿಬ್ಬರು ನೀರುಪಾಲಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ಮಾಡಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಪವನ್ ಒಡೆಯರ್ ದಂಪತಿ – ಫೋಟೋಶೂಟ್

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಪವನ್ ಒಡೆಯರ್ ದಂಪತಿ – ಫೋಟೋಶೂಟ್

    ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ದಂಪತಿ ಗುಡ್‍ನ್ಯೂಸ್ ಕೊಟ್ಟಿದ್ದು, ಶೀಫ್ರದಲ್ಲೇ ತಂದೆ-ತಾಯಿಯಾಗುತ್ತಿದ್ದಾರೆ.

    ಹೌದು..ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ಪವನ್ ಒಡೆಯರ್ ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೇ ಅಪೇಕ್ಷಾ ಪುರೋಹಿತ್ ಗರ್ಭಿಣಿ ಫೋಟೋಶೂಟ್ ಮಾಡಿಸಿದ್ದಾರೆ. ಪತ್ನಿಯ ಜೊತೆ ಪವನ್ ಒಡೆಯರ್ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ವಿವಿಧ ರೀತಿಯಲ್ಲಿ ದಂಪತಿ ಫೋಟೋಶೂಟ್ ಮಾಡಿದ್ದು, ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಈ ಫೋಟೋವನ್ನು ಪವನ್ ಅವರು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದು, “ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ. ಹಾಡಿನ ರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ” ಎಂದು ಬರೆದುಕೊಂಡಿದ್ದಾರೆ.

    ಪವನ್ ಒಡೆಯರ್ ಹಾಡಿನ ಮೂಲಕ ತಾವು ತಂದೆಯಾಗುತ್ತಿರುವ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಫ್ರದಲ್ಲೇ ಹಾಡನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಪವನ್ ಒಡೆಯರ್ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

    ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರು 2018ರ ಮೇ 20ರಂದು ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

    ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ‘ತ್ರಿವೇಣಿ ಸಂಗಮ’, ‘ಕಿನ್ನರಿ’, ‘ಸಾಗುತ ದೂರ ದೂರ’ ‘ಮರಳಿ ಬಂದಳು ಸೀತೆ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಟಿಎನ್ ಸೀತಾರಾಮ್ ಅವರ ‘ಕಾಫೀ ತೋಟ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

    ನಿರ್ದೇಶಕ ಪವನ್ ಒಡೆಯರ್ ‘ರಣವಿಕ್ರಮ’, ‘ನಟರಾಜ ಸರ್ವಿಸ್’, ‘ಗೂಗ್ಲಿ’, ‘ಗೋವಿಂದಾಯ ನಮಃ’ ಹಾಗೂ ‘ನಟ ಸಾರ್ವಭೌಮ’ ಸಿನಿಮಾಗಳನ್ನು ಮಾಡಿದ್ದಾರೆ.

    https://www.instagram.com/p/CF63JisHbav/?igshid=1hp2sfdnxt7i0

  • ಗೆಳೆಯನ ಜೊತೆ ನಯನತಾರಾ ಓಣಂ ಆಚರಣೆ – ರೊಮ್ಯಾಂಟಿಕ್ ಫೋಟೋಶೂಟ್

    ಗೆಳೆಯನ ಜೊತೆ ನಯನತಾರಾ ಓಣಂ ಆಚರಣೆ – ರೊಮ್ಯಾಂಟಿಕ್ ಫೋಟೋಶೂಟ್

    ತಿರುವನಂತಪುರಂ: ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿರುವುದು ತಿಳಿದಿರುವ ವಿಚಾರ. ಶೀಘ್ರದಲ್ಲೇ ಈ ಜೋಡಿ ವಿವಾಹ ಸಹ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಈ ಜೋಡಿ ಒಟ್ಟಿಗೆ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

    ಕೇರಳದ ಅತೀ ದೊಡ್ಡ ಹಬ್ಬ ಓಣಂ. ಹೀಗಾಗಿ ಕೊರೊನಾ ನಡುವೆಯೂ ಪ್ರಪಂಚದಾದ್ಯಂತ ಮಲಯಾಳಿಗಳು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅದೇ ರೀತಿ ನಟಿ ನಯನತಾರಾ ತಮ್ಮ ಹುಟ್ಟೂರಿನಲ್ಲಿ ಓಣಂ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಗೆಳೆಯ ವಿಘ್ನೇಶ್ ಸಹ ಜೊತೆಯಲ್ಲಿ ಇದ್ದಿದ್ದು ಓಣಂ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ.

    https://www.instagram.com/p/CEjZ16VB_q2/?igshid=3qzdep2f1uzt

    ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ಜೊತೆ ತಮ್ಮ ಹುಟ್ಟೂರು ಕೊಚ್ಚಿಗೆ ಹೋಗಿದ್ದಾರೆ. ಅಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಹಬ್ಬದ ಜೊತೆಗೆ ಇಬ್ಬರು ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಪು ಧರಿಸಿರುವ ನಯನತಾರಾ ಮತ್ತು ವಿಘ್ನೇಶ್ ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರು ಇನ್‍ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಆ ಫೋಟೋಗಳಿಗೆ “ಖುಷಿಯಾಗಿರಲು ಕಾರಣಗಳನ್ನು ಕಂಡುಕೊಳ್ಳೋಣ. ಅವುಗಳನ್ನು ಎಲ್ಲರೊಂದಿಗೆ ಭರವಸೆಯಿಂದ ಹೆಚ್ಚಿಕೊಳ್ಳೋಣ. ಈ ಕೊರೊನಾ ಸಂದರ್ಭದಲ್ಲಿಯೂ ಮುಖದಲ್ಲಿ ಮಂದಹಾಸವನ್ನು ಆಹ್ವಾನಿಸುವ ಏಕೈಕ ಮಾರ್ಗವಾಗಿದೆ” ಎಂದು ವಿಘ್ನೇಶ್ ಬರೆದುಕೊಂಡಿದ್ದಾರೆ.

    https://www.instagram.com/p/CEjRm3-Be7S/?igshid=13lry2wyew4uh

    ಈ ಜೋಡಿಯ ಜೊತೆ ನಯನತಾರಾ ತಾಯಿ ಕೂಡ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಷನ್‍ಶಿಪ್‍ನಲ್ಲಿದ್ದು, ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವಾಗ ಮದುವೆಯಾಗುತ್ತದೆ ಎಂದು ಇಬ್ಬರೂ ಅಧಿಕೃತವಾಗಿ ಹೇಳಿಲ್ಲ.

    https://www.instagram.com/p/CEjPqFDhqNn/?igshid=2hto1mjpkaey

  • ಚಾರ್ಮಾಡಿ ಘಾಟ್ ರಸ್ತೆ ತಿರುವಿನಲ್ಲಿ ನವಜೋಡಿಯ ಫೋಟೋಶೂಟ್

    ಚಾರ್ಮಾಡಿ ಘಾಟ್ ರಸ್ತೆ ತಿರುವಿನಲ್ಲಿ ನವಜೋಡಿಯ ಫೋಟೋಶೂಟ್

    – ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

    ಚಿಕ್ಕಮಗಳೂರು: ಮಂಗಳೂರು-ಚಿಕ್ಕಮಗಳೂರು ಸಂಪರ್ಕಿಸುವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಈಗಾಗಲೇ ಸೆಲ್ಫಿಗೆ ನಿಷೇಧ ಹೇರಲಾಗಿದೆ. ಆದರೆ ಇದೀಗ ನವಜೋಡಿಯೊಂದು ರಸ್ತೆ ತಿರುವಿನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಹೌದು. ಹಾಸನ ಮೂಲದ ನವ ಜೋಡಿ ರಾಷ್ಟ್ರೀಯ ಹೆದ್ದಾರಿ, ಅರಣ್ಯ ಪ್ರದೇಶದ ಆಸು-ಪಾಸಿನಲ್ಲಿ ನಾನಾ ಭಂಗಿಯ ಫೋಟೋಗಳನ್ನು ತೆಗೆಯಲಾಗಿದೆ. ನಡುರಸ್ತೆಯಲ್ಲೇ ನವ ಜೋಡಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ. ಆದರೆ ಚಾರ್ಮಾಡಿ ಘಾಟ್ ನಲ್ಲಿ ಸೆಲ್ಫಿಗೆ ನಿಷೇಧವಿದ್ದರೂ ಫೋಟೋ ಶೂಟ್ ಮಾಡಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಅಪಾಯದ ಸ್ಥಳ, ರಸ್ತೆಯ ತಿರುವಿನಲ್ಲಿ ನವ ಜೋಡಿಯ ಫೋಟೋ ಶೂಟ್‍ಗೆ ಭಾರೀ ವಿರೋಧ ವ್ಯಕ್ತವಾಗಿದೆ.

  • ಅನುಷ್ಕಾ ಶರ್ಮಾ ಹಾಟ್ ಫೋಟೋಗಳಿಗೆ ಕೊಹ್ಲಿ ರಿಯಾಕ್ಷನ್..!

    ಅನುಷ್ಕಾ ಶರ್ಮಾ ಹಾಟ್ ಫೋಟೋಗಳಿಗೆ ಕೊಹ್ಲಿ ರಿಯಾಕ್ಷನ್..!

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ಬಳಿಕವೂ ಸಿನಿಮಾಗಳಿಂದ ದೂರವೇ ಉಳಿದ್ದರೂ ತಮ್ಮ ಹಾಟ್ ಫೋಟೋಶೂಟ್ ಸಾಕಷ್ಟು ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಅನುಷ್ಕಾ ಅಭಿಮಾನಿಗಳೊಂದಿಗೆ ತಮ್ಮ ಹೊಸ ಫೋಟೋಶೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ಅನುಷ್ಕಾ ಶರ್ಮಾ ವೋಗ್ ಇಂಡಿಯಾಗಾಗಿ ಫೋಟೋಶೂಟ್ ಮಾಡಿದ್ದು, ಈ ಫೋಟೋವೊಂದನ್ನು ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಕೂಡ ಪ್ರತಿಕ್ರಿಯೆ ನೀಡಿ ಕಾಮೆಂಟ್ ಮಾಡಿದ್ದು, ಹಾರ್ಟ್ ಸಿಂಬಲ್ ಇಮೋಜಿ ಹಾಕುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

    32 ವರ್ಷದ ಅನುಷ್ಕಾ ಶರ್ಮಾ ‘ಝೀರೋ’ ಸಿನಿಮಾದಲ್ಲಿ ಅಂತಿಮವಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆ ಬಳಿಕ ‘ಅಂಗ್ರೇಜಿ ಮಿಡಿಯಂ’ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಮದುವೆ ಬಳಿಕ ನಟನೆಯಿಂದ ದೂರವೇ ಉಳಿದಿರುವ ಅನುಷ್ಕಾ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಅನುಷ್ಕಾ ಲೀಡ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಸಿನಿಮಾ ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಬೇಕಿದೆ.

    ಮದುವೆ ಬಳಿಕ ನಿರ್ಮಾಪಕರಾಗಿ ಬದಲಾಗಿರುವ ಅನುಷ್ಕಾ ಶರ್ಮಾ, ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ ಮೂಲಕ ‘ಪಾತಾಳ್ ಲೋಕ್’ ಮತ್ತು ‘ಬುಲ್‍ಬುಲ್’ ಎಂಬ ವೆಬ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅಲ್ಲದೇ ಉತ್ತಮ ಪ್ರಚಾರವನ್ನು ಪಡೆದಿದ್ದ ಅನುಷ್ಕಾ ಶರ್ಮಾ ನಿರ್ಮಾಣದ ಸಿನಿಮಾಗಳಿಗೆ ವಿಮರ್ಶಕರು ಮತ್ತು ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

    ಕೊರೊನಾ ಅನ್‍ಲಾಕ್ ನಡುವೆಯೂ ಅನುಷ್ಕಾ ವೋಗ್ ಇಂಡಿಯಾ ಫೋಟೋಶೂಟ್‍ನಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಲಾಕ್‍ಡೌನ್ ಸಂದರ್ಭದ ಕುರಿತು ಇನ್‍ಸ್ಟಾ ಲೈವ್‍ನಲ್ಲಿ ಮಾತನಾಡಿದ್ದ ಕೊಹ್ಲಿ, ಮದುವೆ ಬಳಿಕ ಒಂದೇ ಸ್ಥಳದಲ್ಲಿ ಇಷ್ಟು ದಿನಗಳನ್ನು ನಾವಿಬ್ಬರೂ ಒಟ್ಟಿಗೆ ಕಳೆದಿದ್ದೇವೆ. ಇದು ನಿಜಕ್ಕೂ ಅಚ್ಚರಿ ವಿಚಾರವಾದರೂ ಸಾಕಷ್ಟು ಸಂತಸ ತಂದಿದೆ. ಅಲ್ಲದೇ ಎಚ್ಚರಿಕೆಯಿಂದಲೂ ಇದ್ದೇವೆ ಎಂದು ಕೊಹ್ಲಿ ಹೇಳಿದ್ದರು.

  • ಬೋಲ್ಡ್ ಅವತಾರದಲ್ಲಿ ಮಿಂಚಿದ ಅಗ್ನಿಸಾಕ್ಷಿ ಸನ್ನಿಧಿ

    ಬೋಲ್ಡ್ ಅವತಾರದಲ್ಲಿ ಮಿಂಚಿದ ಅಗ್ನಿಸಾಕ್ಷಿ ಸನ್ನಿಧಿ

    ಬೆಂಗಳೂರು: ಕಿರುತೆರೆ ಖ್ಯಾತ ಅಗ್ನಿಸಾಕ್ಷಿ ಧಾರಾವಾಹಿ ಮುಗಿದು ಹೋಗಿದೆ. ಈ ಸೀರಿಯಲ್‍ನಲ್ಲಿ ನಟಿಸುತ್ತಿದ್ದ ಸನ್ನಿಧಿ ಪಾತ್ರಧಾರಿಯ ವೈಷ್ಣವಿ ಗೌಡ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವೈಷ್ಣವಿ ಆಗಾಗ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಇನ್‍ಸ್ಟಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಯಾವಾಗಲೂ ಸಾಂಪ್ರದಾಯಿಕವಾಗಿ ಮಿಂಚುತ್ತಿದ್ದ ವೈಷ್ಣವಿ, ಇದೀಗ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

    ಅಗ್ನಿಸಾಕ್ಷಿ ಧಾರಾವಾಹಿ ಸುಮಾರು ವರ್ಷಗಳಿಂದ ಪ್ರಸಾರವಾಗಿದ್ದು, ಜನವರಿ 3ರಂದು ಮುಕ್ತಾಯಗೊಂಡಿತ್ತು. ಕಿರುತೆರೆ ಮಾತ್ರವಲ್ಲದೆ ವೈಷ್ಣವಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋವೊಂದರಲ್ಲಿ ಕೂಡ ನಿರೂಪಕಿ ಆಗಿದ್ದರು. ಇದರ ಜೊತೆಗೆ ವೈಷ್ಣವಿ ‘ಗಿರ್ ಗಿಟ್ಲೆ’ ಚಿತ್ರದಲ್ಲೂ ನಟಿಸಿದ್ದರು.

    2013ರಿಂದ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಜನವರಿ 3ರಂದು ಮುಕ್ತಾಯವಾಗಿದೆ. ಅಗ್ನಿಸಾಕ್ಷಿ 1500ಕ್ಕೂ ಹೆಚ್ಚು ಸಂಚಿಕೆ ಪ್ರಸಾರವಾಗಿದ್ದು, ಕನ್ನಡ ಪ್ರೇಕ್ಷಕರಿಗೆ ಸಾಕಷ್ಟು ಇಷ್ಟವಾಗಿತ್ತು. ಈ ಧಾರಾವಾಹಿಯಲ್ಲಿ ಸನ್ನಿಧಿ ಹಾಗೂ ಸಿದ್ಧಾರ್ಥ್ ಪಾತ್ರ ಎಲ್ಲರ ಮನೆ ಮಾತಾಗಿತ್ತು.

    ಅಗ್ನಿಸಾಕ್ಷಿ ಮುಗಿದ ನಂತರ ವೈಷ್ಣವಿ ಅವರಿಗೆ ಬೇರೆ ಧಾರಾವಾಹಿಗಳಲ್ಲಿ ಸಾಕಷ್ಟು ಅವಕಾಶ ಸಿಕ್ಕಿದೆ. ಆದರೆ ವೈಷ್ಣವಿ ಯಾವುದೇ ಧಾರಾವಾಹಿಗಳನ್ನು ಒಪ್ಪಿಕೊಳ್ಳದೆ ಮಾಡೆಲಿಂಗ್‍ನಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್‍ಸ್ಟಾದಲ್ಲಿ ಯಾವಾಗಲೂ ಸಕ್ರಿಯರಾಗಿರುವ ವೈಷ್ಣವಿ ತಮ್ಮ ಫೋಟೋಶೂಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

  • ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ನಿಷೇಧ- ತಪ್ಪಿದ್ರೆ ಠಾಣೆ ಮೆಟ್ಟಿಲು ಹತ್ಲೇಬೇಕು

    ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ನಿಷೇಧ- ತಪ್ಪಿದ್ರೆ ಠಾಣೆ ಮೆಟ್ಟಿಲು ಹತ್ಲೇಬೇಕು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಕಳ್ಳಾಟ ಬಲು ಜೋರಾಗಿದೆ. ಬೇಡ ಬೇಡ ಅಂತ ಹೇಳಿದರೂ ಕದ್ದು ಮುಚ್ಚಿ ಮಾಡ್ತಾನೆ ಇರುತ್ತಾರೆ. ಲಾಲ್‍ಬಾಗ್‍ನಲ್ಲಿ ನಿಷೇಧ ಗೊತ್ತಿದ್ದರೂ ಫೋಟೋಶೂಟ್ ಮಾಡಿಸಿಕೊಳ್ಳುವವರು ಯಾವುದೇ ಕಾರಣಕ್ಕೆ ಸುಮ್ಮನೆ ಇರಲ್ಲ.

    ಹೌದು. ಲಾಲ್‍ಬಾಗ್‍ನಲ್ಲಿ ಕಳೆದ 6 ತಿಂಗಳಿಂದ ಚಿತ್ರೀಕರಣವನ್ನ ನಿಷೇಧಿಸಲಾಗಿದೆ. ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೊಟೋಶೂಟ್ ಬ್ಯಾನ್ ಮಾಡಲಾಗಿದೆ. ಅದರಲ್ಲೂ ಜನರು ಮಾತ್ರ ಬಿಡಲ್ಲ. ಕದ್ದು ಮುಚ್ಚಿ ನೀ ಹಿಂಗೆ ನಿಂತ್ಕೋ, ಈ ಜಾಗದಲ್ಲಿ ಈ ಫೋಟೋ ಓಕೆ, ಮತ್ತೆ ಬ್ಯಾಗ್ರೌಂಡ್‍ಗೆ ತಕ್ಕಂತೆ ಡ್ರೆಸ್ ಚೇಂಜ್ ಮಾಡು ಅಂತ ಫೋಟೋಶೂಟ್ ಕಳ್ಳಾಟ ನಿತ್ಯ ನಡೆಯುತ್ತಿದೆ. ಇದು ತೋಟಗಾರಿಕೆ ಇಲಾಖೆ ಪ್ರಕಾರ ನಿಯಮ ಬಾಹಿರವಾಗಿದೆ.

    ಸ್ಲೋ ಲೈಫು ಬೋರ್ ಆಗಿದೆ ಅನ್ನುವಂತೆ ಎಲ್ಲರೂ ಸಿನಿಮೀಯ ಮಾದರಿಗೆ ಮೊರೆ ಹೋಗ್ತಾ ಇದ್ದಾರೆ. ಮಕ್ಕಳನ್ನ ಮರದ ಮೇಲೆ ಹತ್ತಿಸುವುದು. ಮತ್ತೆ ಅಪ್ಪ-ಅಮ್ಮನ ಮೇಲೆ ಪ್ರೀತಿಯಿಂದ ಎಗರುವುದು. ಹೀಗೆ ಮಂಗಾಟದ ಫೋಟೋ ಶೂಟ್‍ಗೆ ಮುಗಿ ಬೀಳ್ತಾ ಇದ್ದಾರೆ. ಈ ಹಿಂದೆ 2016ರಲ್ಲಿ 6 ವರ್ಷದ ವಿಕ್ರಮ್ ಎಂಬ ಬಾಲಕ ಸೆಲ್ಫಿ ತೆಗೆಸಿಕೊಳ್ಳುವಾಗ ಕಲ್ಲು ಬಿದ್ದು ಸಾವನ್ನಪ್ಪಿದ ಪ್ರಕರಣ ಈಗಲೂ ಪೋಷಕರ ಎದೆನಡುಗಿಸುತ್ತದೆ. ಈ ಹಿನ್ನೆಲೆಯಲ್ಲಿ ಕೆಲ ಕಡೆ ಸೆಲ್ಫಿ ನಿಷೇಧವಿದೆ. ಅದಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

    ನಾನು ಕಾಡಿಗೆ ಹೋಗಿದ್ದೆ, ಟ್ರಕ್ಕಿಂಗ್ ಮಾಡಿದ್ದೆ. ಹೀಗೆ ಬಡಾಯಿ ಕೊಚ್ಚಿಕೊಳ್ಳಲು ಕೆಲ ಪಡ್ಡೆ ಯುವಪಡೆ ತಂಡ ಲಾಲ್‍ಬಾಗ್‍ಗೆ ಬಂದು ಬಿಡುತ್ತೆ. ಕಾಡಿನ ಸೀನ್‍ಗೆ ಮ್ಯಾಚ್ ಆಗುವಂತೆ ಇಲ್ಲೂ ಮರಗಳ ರೆಂಬೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ತಾ ಇದ್ದಾರೆ. 250 ಎಕರೆಯ ಲಾಲ್‍ಬಾಗ್‍ನಲ್ಲಿ ನೂರಾರು ಕುರ್ಚಿಗಳಿವೆ. ಅದರಲ್ಲಿ ಕುಳಿತುಕೊಳ್ಳುವ ಬದಲು ಜನರು ಹುಲ್ಲಿನ ಕುಳಿತುಕೊಳ್ತಾರೆ. ಇದರಿಂದ ಸುತ್ತಮುತ್ತಲಿನವರೆಗೆ ಮುಜುಗರ. ಅದರಲ್ಲಿ ಫೋಟೋಶೂಟ್ ಬೇರೆ ಮಾಡ್ತಾರೆ. ಇದೆಲ್ಲ ತಪ್ಪು ಅಂತ ಭದ್ರತಾ ಸಿಬ್ಬಂದಿ ವಾರ್ನಿಂಗ್ ಕೊಟ್ಟರೂ ಡೋಂಟ್ ಕೇರ್ ಅಂತಾರೆ.

    ಲಾಲ್‍ಬಾಗ್‍ ಜನರ ಆರ್ಕಷಣೆ ಮಾಡುವ ಕೇಂದ್ರವಾಗಿದ್ದು, ಲಕ್ಷಾಂತರ, ಸಾವಿರಾರು ಜನರು ಭೇಟಿ ಕೊಡುತ್ತಾ ಇರುವ ಜಾಗವಾಗಿದೆ. ಹೀಗಿರೊವಾಗ ಲಾಲ್‍ಬಾಗ್‍ನಲ್ಲಿ ಈ ಫೋಟೋಶೂಟ್ ಅದಕ್ಕಾಗಿ ಬಟ್ಟೆ ಬದಲಾಯಿಸುವುದು ಸಾಕಷ್ಟು ಮುಜುಗರ ತಂದಿದೆ. ಹೀಗಾಗಿ ಸಂಪೂರ್ಣವಾಗಿ ಲಾಲ್‍ಬಾಗ್‍ನಲ್ಲಿ ಫೋಟೋಶೂಟ್ ಬ್ಯಾನ್ ಮಾಡಿದ್ದಾರೆ. ಆದರೂ ಕಳ್ಳಾಟ ಮಾಡಿ ಫೋಟೋ ಕ್ಲಿಕ್ಕಿಸೋರ ಸಂಖ್ಯೆನೇ ಜಾಸ್ತಿ. ಫೋಟೋಶೂಟ್ ನಿಷೇಧದ ನಡುವೆ ಫೋಟೋ ತೆಗೆದ್ರೆ, ಡೇಂಜರ್ ಅಂತ ಬರೆದಿರುವ ಕಡೆ ಫೋಟೊ ತೆಗೆಯುವುದು, ಅಶ್ಲೀಲವಾಗಿ ಕೂತು ಫೋಟೋ ತೆಗೆಯೋದು ಮಾಡಿದರೆ ಭದ್ರತೆ ಸಿಬ್ಬಂದಿ ವಾರ್ನಿಂಗ್ ಕೊಡ್ತಾರೆ. ಬಗ್ಗದಿದ್ರೆ ಠಾಣೆ ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ಆಯುಕ್ತ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

  • ಟಾಪ್ ಲೆಸ್ ಫೋಟೋಶೂಟ್ ಮಾಡಿಸಿದ ನಟಿಗೆ ಸೀರೆ ಉಡಿಸಿದ ನೆಟ್ಟಿಗರು

    ಟಾಪ್ ಲೆಸ್ ಫೋಟೋಶೂಟ್ ಮಾಡಿಸಿದ ನಟಿಗೆ ಸೀರೆ ಉಡಿಸಿದ ನೆಟ್ಟಿಗರು

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ಟಾಪ್‍ಲೆಸ್ ಫೋಟೋಶೂಟ್‍ನಲ್ಲಿ ಪೋಸ್ ಕೊಟ್ಟಿದ್ದರು. ಈ ಫೋಟೋವನ್ನು ನೋಡಿದ ನೆಟ್ಟಿಗರು ಕಿಯಾರಾ ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದು, ಟಾಪ್ ಲೆಸ್ ಫೋಟೋನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿಗೆ ಸೀರೆ ಉಡಿಸಿ ಸಾಂಪ್ರದಾಯಿಕ ಲುಕ್ ನೀಡಿದ್ದಾರೆ.

    ಹೌದು. ಕಿಯಾರಾ ಅಡ್ವಾಣಿ ಇದೀಗ ಫೋಟೋ ಶೂಟ್ ಒಂದರಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಪ್ರಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ನಡೆಸಿದ ಕ್ಯಾಲೆಂಡರ್ ಫೋಟೋಶೂಟ್‍ನಲ್ಲಿ ಕಿಯಾರಾ ಟಾಪ್ ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ. ದೊಡ್ಡ ಎಲೆ ಹಿಂದೆ ನಿಂತು ಬೆತ್ತಲಾಗಿ ಕಿಯಾರ ಪೋಸ್ ಕೊಟ್ಟ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರಿಗೆ ಟ್ರೋಲ್ ಮಾಡಲು ವಿಷಯ ದೊರೆತಂತಾಗಿದೆ.

    https://www.instagram.com/p/B8tb_w5HCtW/

    ಫೋಟೋಶೂಟ್‍ನಲ್ಲಿ ಕಿಯಾರಾ ನೋಡಲು ಚೆನ್ನಾಗೆ ಕಾಣಿಸುತ್ತಾರೆ. ಆದರೆ ಟಾಪ್ ಲೆಸ್ ಆಗಿ ಪೋಸ್ ಕೊಟ್ಟು ಸದ್ಯ ಟ್ರೋಲ್ ಆಗುತ್ತಿದ್ದಾರೆ. ಟಾಪ್ ಲೆಸ್ ಆಗಿದ್ದ ಕಿಯಾರಾಗೆ ನೆಟ್ಟಿಗರು ಸೀರೆ ತೊಡಿಸಿ, ಇದು ನಿಜವಾದ ಅಂದ ಎಂದು ಕಾಲೆಳೆಯುತ್ತಿದ್ದಾರೆ.

    ಎಲೆ ಹಿಂದೆ ಬೆತ್ತಲಾಗಿರುವ ಕಿಯಾರಾರಿಗೆ ಸೀರೆ ಉಡಿಸಿ ನೆಟ್ಟಿಗರು ಮದುಮಗಳಂತೆ ಸಿಂಗರಿಸಿ, ಕೈಯಲ್ಲಿ ಹಿಡಿದಿರುವ ಎಲೆ ಮೇಲೆ ಮದುವೆ ಊಟವನ್ನೂ ಬಡಿಸಿರುವ ಹಾಗೆ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು ಸಖತ್ ಟ್ರೋಲ್ ಆಗುತ್ತಿದೆ.

    ಅಷ್ಟೇ ಅಲ್ಲದೆ ಡಬೂ ರತ್ನಾನಿ ನಡೆಸಿರುವ ಟಾಪ್ ಲೆಸ್ ಕ್ಯಾಲೆಂಡರ್ ಫೋಟೋಶೂಟ್ ಕೆಲ ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದ್ದು, ದಯವಿಟ್ಟು ಸರಿಯಾದ ಬಟ್ಟೆ ಹಾಕಿ ಎಂದು ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ. ಡಬೂ ರತ್ನಾನಿ ನಡೆಸಿದ ಲೇಟೆಸ್ಟ್ ಕ್ಯಾಲೆಂಡರ್ ಫೋಟೋಶೂಟ್‍ನಲ್ಲಿ ಕೇವಲ ಕಿಯಾರಾ ಅಡ್ವಾಣಿ ಮಾತ್ರವಲ್ಲ ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಮತ್ತು ಸನ್ನಿ ಲಿಯೋನ್ ಕೂಡ ಟಾಪ್ ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ.

    https://twitter.com/BrutalBhau/status/1229805948803407872

    ಡಬೂ ರತ್ನಾನಿಗೆ ಸೇರೆ ಉಡಿಸಿ ಟ್ರೋಲ್:
    ಕೆಲ ನೆಟ್ಟಿಗರು ಟಾಪ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ನಟಿಗೆ ಸೀರೆ ಉಡಿಸಿದರೆ, ಇನ್ನೂ ಕೆಲವರು ಒಂದು ಸ್ಟೆಪ್ ಮುಂದಕ್ಕೆ ಹೋಗಿ ಟಾಪ್ ಲೆಸ್ ಫೋಟೋ ಶೂಟ್ ನಡೆಸಿದ ಡಬೂ ರತ್ನಾನಿಗೆ ಸೀರೆ ಉಡಿಸಿ ಫೋಟೋ ಎಡಿಟ್ ಮಾಡಿದ್ದಾರೆ. ಈ ಫೋಟೋಗಳು ಕೂಡ ಎಲ್ಲೆಡೆ ಸಖತ್ ಟ್ರೋಲ್ ಆಗುತ್ತಿದೆ.

  • ಪತಿಯನ್ನು ಖುಷಿಪಡಿಸಲು ಪತ್ನಿಯಿಂದ ನಗ್ನ ಫೋಟೋಶೂಟ್

    ಪತಿಯನ್ನು ಖುಷಿಪಡಿಸಲು ಪತ್ನಿಯಿಂದ ನಗ್ನ ಫೋಟೋಶೂಟ್

    – ಫೋಟೋ ನೋಡಿ ಖುಷಿಯಾಗಿ ರೊಚ್ಚಿಗೆದ್ದ ಪತಿ

    ವಾಷಿಂಗ್ಟನ್: ಪತಿಯನ್ನು ಖುಷಿಪಡಿಸಲು ಪತ್ನಿ ನಗ್ನ ಫೋಟೋಶೂಟ್ ಮಾಡಿಸಿ ಅದನ್ನು ಉಡುಗೊರೆಯಾಗಿ ನೀಡಿದ ಘಟನೆ ಅಮೆರಿಕದಲ್ಲಿ ನಡೆದಿದೆ.

    ನನ್ನ ಪತ್ನಿ ನಗ್ನವಾಗಿ ಬೋಲ್ಡ್ ಫೋಟೋಶೂಟ್ ಮಾಡಿಸಿ ಅದನ್ನು ಆಲ್ಬಂ ಮಾಡಿ ನನಗೆ ಉಡುಗೊರೆಯಾಗಿ ನೀಡಿದ್ದಳು. ನನ್ನ ಪತ್ನಿಯ ಈ ಬೋಲ್ಡ್ ಅವತಾರ ನೋಡಿ ನನಗೆ ಖುಷಿಯಾಯಿತು ಎಂದು ಪತಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾನೆ.

    ಆಲ್ಬಂ ನೋಡಿ ನಾನು ನನ್ನ ಪತ್ನಿಯನ್ನು ಹೊಗಳಲು ಶುರು ಮಾಡಿದೆ. ಬಳಿಕ ಈ ಫೋಟೋಗಳನ್ನು ಸ್ವತಃ ನೀನೇ ಕ್ಲಿಕ್ಕಿಸಿದ್ದೀಯಾ ಎಂದು ನಾನು ಆಕೆಯನ್ನು ಆಶ್ಚರ್ಯದಿಂದ ಪ್ರಶ್ನಿಸಿದೆ. ಆಗ ಆಕೆ ಇಲ್ಲ ಎಂದು ಉತ್ತರಿಸಿದಳು. ಬಳಿಕ ಮಹಿಳಾ ಫೋಟೋಗ್ರಾಫರ್ ಈ ಫೋಟೋ ಕ್ಲಿಕ್ಕಿಸಿದ್ದಾರಾ ಎಂದು ಪ್ರಶ್ನಿಸಿದೆ. ಆಗಲೂ ಆಕೆ ಇಲ್ಲ ಎಂದಳು. ನನ್ನ ಪತ್ನಿಯ ಉತ್ತರ ಕೇಳಿ ನಾನು ಕೋಪಗೊಂಡೆ ಎಂದನು.

    ನನ್ನ ಪತ್ನಿ ಇನ್ನೊಬ್ಬ ಪುರುಷನ ಮುಂದೆ ಹೇಗೆ ನಗ್ನವಾಗಿ ಫೋಟೋಶೂಟ್ ಮಾಡಿಸಬಹುದು. ಆಕೆ ಈ ರೀತಿಯ ಫೋಟೋಶೂಟ್ ಮಾಡಿಸುವ ಮೊದಲು ನನಗೆ ಅನುಮತಿ ಪಡೆಯಬೇಕಿತ್ತು ಎಂದು ಪತಿ ಬೇಸರ ವ್ಯಕ್ತಪಡಿಸಿದನು. ಇನ್ನೊಬ್ಬ ಪುರುಷನ ಮುಂದೆ ನೀನು ನಗ್ನವಾಗಿ ಪೋಸ್ ಕೊಟ್ಟಿದ್ದು, ನನಗೆ ಸ್ವಲ್ಪವೂ ಇಷ್ಟವಿಲ್ಲ ಎಂದು ನಾನು ನನ್ನ ಪತ್ನಿಗೆ ಹೇಳಿದೆ. ಆಗ ಆಕೆ ಈ ಉಡುಗೊರೆಯಿಂದ ಖುಷಿ ಆಗಬೇಕು ಹೊರತು ಕೋಪ ಮಾಡಿಕೊಳ್ಳಬಾರದು ಎಂದಳು ಎಂದು ಪತಿ ತಿಳಿಸಿದ್ದಾನೆ.

    ನನಗೆ ನನ್ನ ಪತ್ನಿ ನೀಡಿದ ಉಡುಗೊರೆ ನೋಡಿ ತುಂಬಾ ಖುಷಿ ಆಯಿತು. ಆದರೆ ಬೇರೆ ಪುರುಷನ ಮುಂದೆ ನಗ್ನವಾಗಿ ಫೋಟೋಶೂಟ್ ಮಾಡಿಸಿ ತಪ್ಪು ಕೆಲಸ ಮಾಡಿದ್ದಾಳೆ. ನಾನು ಈ ಮಾತನ್ನು ಆಕೆಗೆ ಪದೇ ಪದೇ ಹೇಳುತ್ತಿದೆ. ಇದರಿಂದ ಕೋಪಗೊಂಡು ಆಕೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  • 20ನೇ ಲವ್ ಆನಿವರ್ಸರಿ- ಶ್ರೀಮುರಳಿ ದಂಪತಿಯ ಫೋಟೋಶೂಟ್

    20ನೇ ಲವ್ ಆನಿವರ್ಸರಿ- ಶ್ರೀಮುರಳಿ ದಂಪತಿಯ ಫೋಟೋಶೂಟ್

    ಬೆಂಗಳೂರು: ಸಾಮಾನ್ಯವಾಗಿ ಮದುವೆಯಾದ ನಂತರ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಇದೀಗ ಸ್ಯಾಂಡಲ್‍ವುಡ್ ನಟ ಶ್ರೀಮುರಳಿ ತಮ್ಮ ಲವ್ ವಾರ್ಷಿಕೋತ್ಸವವನ್ನು ಸೆಲಬ್ರೇಷನ್ ಮಾಡಿ, ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

    ಹೌದು, ನಟ ಶ್ರೀಮುರಳಿ ತಮ್ಮ 20ನೇ ಲವ್ ಆನಿವರ್ಸರಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಅಂದರೆ 1999 ಡಿಸೆಂಬರ್ 30 ರಂದು ಶ್ರೀಮುರಳಿ ತಮ್ಮ ಪತ್ನಿ ವಿದ್ಯಾ ಅವರಿಗೆ ಪ್ರಪೋಸ್ ಮಾಡಿದ್ದರು. ಹೀಗಾಗಿ ಅದೇ ದಿನ ತಮ್ಮ ಪ್ರೀತಿಯ ವಾರ್ಷಿಕೋತ್ಸವವನ್ನು ಆಚರಣೆ ಮಾಡಿದ್ದಾರೆ.

    “1999ರಿಂದ ನೀವು ನನ್ನ ಪಕ್ಕದ್ದಲ್ಲಿದ್ದೀರಿ, ಹೀಗಾಗಿ ಜೀವನದಲ್ಲಿ ನಾನು ತುಂಬಾ ಸಂತೋಷದಿಂದ ಇದ್ದೇನೆ. ನನ್ನ ಕಾಲೇಜಿನ ಪ್ರಿಯತಮೆ, ನಮ್ಮ ಎರಡು ಮಕ್ಕಳ ತಾಯಿ, ನಿಮ್ಮೊಂದಿಗೆ ನಾನು 2 ದಶಕಗಳನ್ನು ಕಳೆದಿದ್ದೇನೆ. ನಿಜಕ್ಕೂ ಇದೊಂದು ಸುಂದರ ಪ್ರಯಾಣವಾಗಿದೆ. ನಾನು ಬದುಕಿರುವವರೆಗೂ ತುಂಬಾ ಪ್ರೀತಿಸುತ್ತೇನೆ. 20ನೇ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ಶ್ರೀಮುರಳಿ ಬಿಳಿ ಬಣ್ಣ ಕುರ್ತಾ ಧರಿಸಿದರೆ, ವಿದ್ಯಾ ಅವರು ಕೂಡ ಬಿಳಿ ಬಣ್ಣದ ಸೀರೆ ತೊಟ್ಟಿದ್ದರು. ಇಬ್ಬರು ತುಂಬಾ ಮುದ್ದಾಗಿ ಕಾಣಿಸುತ್ತಿದ್ದರು. ಶ್ರೀಮುರಳಿ ಮತ್ತು ವಿದ್ಯಾ ಇಬ್ಬರು 2008ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

    https://www.instagram.com/p/B6sjpJrnDfw/