ಪ್ರಾಚೀನ ಶೈಲಿ ಆಗಾಗ ಪುನಾವರ್ತನೆ ಆಗುತ್ತಿರುವ ಕಾಲವಿದು. ಪ್ರಾಚೀನ ಆಭರಣ, ಸೀರೆ ಈಗ ಜನಪ್ರಿಯ ಶೈಲಿಯಾಗಿದೆ. ಇದೀಗ ಹಳೆಯ ಕಾಲದ ಸೀರೆಯಲ್ಲಿ ಹೊಸ ರೂಪದಲ್ಲಿ ಮಿಂಚಿದ್ದಾರೆ ವಜ್ರಕಾಯ ಬೆಡಗಿ ನಭಾ ನಟೇಶ್.
ಚಿಕ್ಕಮಗಳೂರಿನ ಈ ಚೆಲುವೆ ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ವಜ್ರಕಾಯ ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆ್ಯಕ್ಟೀವ್ ಇರುವ ಈ ಚೆಲುವೆ ಇದೀಗ ಅಮ್ಮನ ಹಳೆಯ ಸೀರೆಗೆ ಹೊಸ ಮೆರುಗು ಕೊಟ್ಟು ಈ ದೀಪಾವಳಿ ಹಬ್ಬಕ್ಕಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಮ್ಮನ ಹಳೆಯ ಫೋಟೋದೊಂದಿದೆ ತಮ್ಮ ಫೋಟೋವನ್ನ ಸೇರಿಸಿ ಅದರ ವಿಶೇಷತೆಯನ್ನು ಬಿಚ್ಚಿಟ್ಟಿದ್ದಾರೆ. “ಅಮ್ಮನ ಸೀರೆಯುಡೋದ್ರಲ್ಲಿ ಅದೇನೋ ಮ್ಯಾಜಿಕ್ ಇದೆ, ಅದರಲ್ಲೂ ಅಪ್ಪ ಅಮ್ಮನಿಗಾಗಿ ನೀಡಿದ ಮೊದಲ ಉಡುಗೊರೆಯ ಸೀರೆ” ಎಂದಿದ್ದಾರೆ.
ಹಳೆಯ ಸೀರೆಗೆ ಹೊಸ ಡಿಸೈನರ್ ರವಿಕೆ ಧರಿಸಿ ಪೋಸ್ ಕೊಟ್ಟಿದ್ದಾರೆ ನಭಾ. ಸೋಶಿಯಲ್ ಮೀಡಿಯಾದಲ್ಲಿ ಗ್ಲ್ಯಾಮರ್ ಫೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ಪ್ರಚಲಿತದಲ್ಲಿರುವ ನಭಾ ಇದೀಗ ಸಾಂಪ್ರದಾಯಿಕ ಲುಕ್‌ಗೆ ಆಧುನಿಕತೆ ಟಚ್ ಕೊಟ್ಟು ಮಿಂಚಿದ್ದಾರೆ. ನಭಾ ಸೀರೆಯ ಗುಟ್ಟು ಹಾಗೂ ಲುಕ್ಕು ಎರಡೂ ವೈರಲ್ ಆಗಿದೆ.
ದುಬೈ: ಏಷ್ಯಾ ಕಪ್ ಫೈನಲ್ (Asia Cup Final) ಫೋಟೋಶೂಟ್‌ನಲ್ಲಿ ಭಾಗವಹಿಸದ ಮೂಲಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ (Pakistan) ನಾಯಕ ಸಲ್ಮಾನ್ ಅಲಿ ಆಘಾ, ಫೋಟೋಶೂಟ್ ನಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂಬುದು ಸೂರ್ಯಕುಮಾರ್ ಅವರ ನಿರ್ಧಾರ. ಈ ವಿಚಾರದ ಬಗ್ಗೆ ನಾನು ಏನು ಹೇಳಲಾರೆ ಎಂದು ತಿಳಿಸಿದರು.
ಈ ಬಾರಿಯ ಏಷ್ಯಾ ಕಪ್‌ನಲ್ಲಿ ಭಾರತ ಪಾಕಿಸ್ತಾನ ಮೂರನೇ ಬಾರಿ ಮುಖಾಮುಖಿಯಾಗುತ್ತಿವೆ. ಲೀಗ್ ಮತ್ತು ಸೂಪರ್ 4 ಎರಡೂ ಪಂದ್ಯಗಳಲ್ಲಿ ಭಾರತವೇ ಜಯಗಳಿಸಿದೆ. ಅಷ್ಟೇ ಅಲ್ಲದೇ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಇದೀಗ ಬ್ಯುಸಿನೆಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ನೂರಾರು ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದ ನಂತರ ಟೆಂಪಲ್ ರನ್ ಮಾಡಿದ್ದ ಪವಿತ್ರಾ ಗೌಡ (Pavithra Gowda), ಆನಂತರ ರೆಡ್ ಕಾರ್ಪೆಟ್ (Red Carpet) ಕಂಪನಿಯಲ್ಲಿ ತೊಡಗಿಕೊಂಡಿದ್ದರು. ಅದಕ್ಕಾಗಿ ಹಲವು ರಾಜ್ಯಗಳನ್ನೂ ಸುತ್ತಿದ್ದರು. ಇದೀಗ ಆ ಬ್ಯುಸಿನೆಸನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಒಂದು ಕಡೆ ಪವಿತ್ರಾ ಗೌಡ ಬ್ಯುಸಿನೆಸ್ ಕೆಲಸಗಳನ್ನು ತೊಡಗಿಕೊಂಡಿದ್ದರೆ, ಮತ್ತೊಂದು ಕಡೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದು ಕುರಿತಾದ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ನೀಡಿರುವ ಜಾಮೀನನ್ನು ಸುಪ್ರೀಂಕೋರ್ಟ್ (Supreme Court) ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಾರೆ. ಯಾಕೆ ಜಾಮೀನು ರದ್ದು ಮಾಡಬಾರದು ಎಂದು ಕೇಳಿದ್ದಾರೆ. ಒಂದು ವೇಳೆ ಜಾಮೀನು ರದ್ದಾದರೆ, ಮತ್ತೆ ಪವಿತ್ರಾಗೆ ಜೈಲೇ ಗತಿ. ಇದನ್ನೂ ಓದಿ: ರಾಮ-ಲಕ್ಷ್ಮಣರ ಜೊತೆ `ರಾಮಾಯಣ’ ಸೃಷ್ಟಿಕರ್ತ!
ಈ ಟೆನ್ಷನ್ ನಡುವೆಯೇ ರೆಡ್ ಕಾರ್ಪೆಟ್‌ಗಾಗಿ ಅವರು ಫೋಟೋಶೂಟ್ ಮಾಡಿಸಿದ್ದಾರೆ. ರೂಪದರ್ಶಿಗೆ ಪೋಸ್ ಹೇಗೆ ಕೊಡಬೇಕು ಎನ್ನುವುದನ್ನು ಪವಿತ್ರಾ ಗೌಡ ಪಾಠ ಮಾಡುತ್ತಿದ್ದಾರೆ. ಆ ವೀಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ಸದ್ಯ ವೈರಲ್ ಆಗಿದೆ. ಜುಲೈ 22ರಂದು ಜಾಮೀನು ಕುರಿತಾದ ತೀರ್ಪು ಬರಲಿದ್ದು, ಏನಾಗಲಿದೆ ಎಂದು ಕಾದು ನೋಡಬೇಕು.
ನಟನೆ ಜೊತೆ ಫ್ಯಾಶನ್ ಲೋಕದಲ್ಲಿ ಟಾಲಿವುಡ್ ನಟಿ ಸಮಂತಾ (Samantha ) ಟ್ರೆಂಡ್ ಸೆಟರ್. ಇದೀಗ ಫ್ಯಾಶನ್ (Fashion) ಪ್ರಿಯರು ಬೆರಗಾಗುವಂತೆ ಉಡುಗೆ ಧರಿಸಿ ಪೋಸ್ ಕೊಟ್ಟಿದ್ದಾರೆ ಸಮಂತಾ.
38ನೇ ವಯಸ್ಸಿನಲ್ಲೂ ಭಾರೀ ಫಿಟ್ ಆಗಿರುವ ಸಮಂತಾ ಇದೀಗ ಸ್ಕಿನ್ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ. ಮ್ಯಾಗ್‌ಜಿನ್‌ವೊಂದರ ಫೋಟೋಶೂಟ್‌ಗಾಗಿ (Photoshoot) ಸಮಂತಾ ಈ ರೀತಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಕ್ತಸಿಕ್ತ ಅವತಾರದಲ್ಲಿ ನಟಿ ರಶ್ಮಿಕಾ ಮಂದಣ್ಣ
ಭಾರೀ ಬೋಲ್ಡ್ ಲುಕ್ ಒಳಗೊಂಡ ಫೋಟೋಶೂಟ್‌ನಲ್ಲಿ ಸಮಂತಾ ಸ್ಕಿನ್ ಕಲರ್ ನೆಟೆಡ್ ಗೌನ್ ಧರಿಸಿದ್ದಾರೆ. ಯಾವುದೇ ಬಟ್ಟೆ ಧರಿಸಿದರೂ ಅದನ್ನ ಆತ್ಮವಿಶ್ವಾಸದಿಂದ ಕ್ಯಾರಿ ಮಾಡಿದರೆ ಮುಜುಗರ ಅನ್ನಿಸುವುದಿಲ್ಲ. ಇದೀಗ ಸಮಂತಾ ಧರಿಸಿದಿರುವ ಉಡುಗೆಯಂತೂ ಥಟ್ ಅಂತ ನೋಡಿದ್ರೆ ಬೆರಗಾಗೋದು ಗ್ಯಾರಂಟಿ. ಅಂಥಹ ಬೋಲ್ಡ್ ಲುಕ್‌ನಲ್ಲೂ ಸ್ಯಾಮ್ ಆತ್ಮವಿಶ್ವಾಸದಿಂದ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ಜೂ.ಎನ್‌ಟಿಆರ್ ಕೈಯಲ್ಲಿ `ಗಾಡ್ ಆಫ್ ವಾರ್ ಮುರುಗ’ ಬುಕ್ ಯಾಕೆ?
ಕಡಿಮೆ ಸಿನಿಮಾಗಳು, ಆಗಾಗ ವೆಬ್ ಸಿರೀಸ್‌ಗಳು, ಕಂಪನಿ ಪ್ರಚಾರ ಸಮಂತಾ ಆಯ್ಕೆಯ ಲಿಸ್ಟ್‌ಗಳು. ಮಾಡೆಲಿಂಗ್ ಕ್ಷೇತ್ರದಲ್ಲಿ ಸೂಪರ್ ಮಾಡೆಲ್ ಆಗಿ ಮಿಂಚುವ ಸಮಂತಾ ಬೋಲ್ಡ್ ಉಡುಗೆಗಳಿಗೆ ಹೇಳಿ ಮಾಡಿಸಿದ ದೇಹಸಿರಿ ಕಾಪಾಡಿಕೊಂಡಿದ್ದಾರೆ. ಆದರೆ ಇಷ್ಟೊಂದು ಬೋಲ್ಡ್ ಅವತಾರದಲ್ಲಿ ಕಾಣಿಸ್ಕೊಂಡಿರೋದು ಇದೇ ಮೊದಲಲ್ಲ. ಆದರೀಗ ಸ್ಯಾಮ್ ಬೆಂಕಿ ಲುಕ್‌ಗೆ ಹೊಗಳಿಕೆಯ ಜೊತೆ ತೆಗಳಿಕೆಯೂ ಬರ್ತಿದೆ. ಅದ್ಯಾವ್ದುದಕ್ಕೂ ಸಮಂತಾ ತೆಲೆಕೆಡಿಸಿಕೊಳ್ಳೋದಿಲ್ಲ ಅನ್ನೋದು ಅಷ್ಟೇ ಸತ್ಯ.
ಇನ್ನು ಕೆಲವೇ ದಿನಗಳಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಲು ತಯಾರಾಗಿರುವ ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚ (Harshika Poonachcha) ಹೊಸದೊಂದು ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬೆಲೆಕಟ್ಟಲಾಗದ ಕುಂಚ ಮಾಂತ್ರಿಕ ರವಿಮರ್ಮರ ಪೇಂಟಿಂಗ್ ರೀತಿ ಪೋಸ್ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ಸೀರೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ನೋಟದಲ್ಲಿ ಕಂಗೊಳಿಸಿದ್ದಾರೆ.
ಹಿಂದೆಯೂ ಹರ್ಷಿಕಾ ಪೂಣಚ್ಚ ರವಿವರ್ಮರ ಕುಂಚದಲ್ಲಿ ಅರಳಿದ ಸುಂದರ ನಾರಿಯ ಪೋಸ್‌ನ್ನೇ ಹೋಲುವಂತೆ ಫೋಟೋಶೂಟ್ ಮಾಡಿಸಿದ್ದರು. ಅದು ಬಹಳ ಮೆಚ್ಚುಗೆ ಬಂದ ಕಾರಣ ಇದೀಗ ರವಿವರ್ಮರ ಇನ್ನೊಂದು ಕಲಾಕೃತಿ ಹಂಸ ದಮಯಂತಿ ಚಿತ್ರದಂತೆ ಪೋಸ್ ಕೊಟ್ಟಿದ್ದಾರೆ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚಾ.
ಅಕ್ಟೋಬರ್ ತಿಂಗಳಲ್ಲಿ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ತಾರಾದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮಗುವಿನ ಆಗಮನದ ಖುಷಿಯನ್ನ ಇನ್ಸ್ಟಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ವಿಭಿನ್ನ ಶೈಲಿಯಲ್ಲಿ ಫೋಟೂಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ ಗರ್ಭಿಣಿ ನಟಿ ಹರ್ಷಿಕಾ.
ಸಹಜ ಅಭಿನಯ, ಸರಳ ಸೌಂದರ್ಯದಿಂದಲೇ ಸ್ಯಾಂಡಲ್ ವುಡ್ ನ್ಯೂ ಕ್ರಶ್ ಎನಿಸಿಕೊಂಡಿರುವ ಸಂಜನಾ ಆನಂದ್ (Sanjana Anand) ಹೊಸ ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದಾರೆ. ಈ ಫೋಟೋಗಳು ಪಡ್ಡೆಗಳ ನಿದ್ದೆ ಹಾಳು ಮಾಡುವೆ. ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವ ಸಂಜನಾ, ರಸಿಕರ ಎದೆ ಬಡಿತ ಹೆಚ್ಚಿಸಿದ್ದಾರೆ.
ಸದ್ಯ ಸಂಜನಾ ಆನಂದ್ ಮುಧೋಳ್ (Mudhol) ಹೆಸರಿನ ಸಿನಿಮಾ ಬಳಗ ಸೇರಿಕೊಂಡಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸಂಜನಾ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋ ಜೊತೆ ತೆರೆಹಂಚಿಕೊಳ್ಳುವ ಅವಕಾಶಗಿಟ್ಟಿಸಿಕೊಂಡರು.
ದುನಿಯಾ ವಿಜಯ್ ಸಾರಥ್ಯದ ಸಲಗ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಬ್ಯೂಟಿ ಟಾಲಿವುಡ್ ಕೂಡ ಪ್ರವೇಶಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು ಅಂಗಳದಲ್ಲಿಯೂ ಬ್ಯುಸಿಯಾಗಿರುವ ಸಂಜನಾ ಆನಂದ್ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಜೊತೆ ರೋಮ್ಯಾನ್ಸ್ ಮಾಡಲು ಒಕೆ ಎಂದಿದ್ದಾರೆ.
‘ತ್ರಿವಿಕ್ರಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ (Vikram Ravichandran) ಈಗ ಎರಡನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮುಧೋಳ್ ಮೂಲಕ ಸಖತ್ ಮಾಸ್ ಅವತಾರ ತಾಳಿರುವ ವಿಕ್ಕಿಗೆ ನಾಯಕಿಯಾಗಿ ರಾಯಲ್ ಹುಡುಗಿ ನಟಿಸುತ್ತಿದ್ದಾರೆ.ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಂಜನಾ ನಾಯಕಿ ಎಂಬ ವಿಷ್ಯ ಹರಿದಾಡಿತ್ತು. ಆದ್ರೆ ಚಿತ್ರತಂಡ ಮಾತ್ರ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಸಲಗ ಸುಂದರಿ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಸಮಾಚಾರವನ್ನು ಅಧಿಕೃತಗೊಳಿಸಿತ್ತು.
ವಿಕ್ರಮ್ ಮುಧೋಳ್ ಸಿನಿಮಾದ ನಾಯಕಿಯಾಗಿರುವ ಸಂಜನಾ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ. ಇಲ್ಲಿವರೆಗೂ ಅವರು ನಟಿಸಿದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೇ ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಸಂಜನಾ ಆನಂದ್ ಮುಧೋಳ್ ಸಿನಿಮಾ ಜೊತೆಗೆ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಹಾಗೂ ತೆಲುಗಿನ ಫುಲ್ ಬಾಟೆಲ್ ಎಂಬ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಧನ್ವೀರ್ ಗೌಡ ನಟಿಸುತ್ತಿರುವ ಹಯಗ್ರೀವ್ ಗೂ ನಾಯಕಿಯಾಗಿರುವ ರಾಯಲ್ ಕ್ವೀನ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಯುಗಾದಿ (Ugadi) ಹಬ್ಬಕ್ಕೆ ನಗುವಿನ ಸುಂದರಿ ಬೃಂದಾ ಆಚಾರ್ಯ ಹೊಸ ಕಳೆ ತಂದಿದ್ದಾರೆ. ರೇಷ್ಮೆ ಸೀರೆಯುಟ್ಟು ಸ್ಟೈಲಿಷ್ ಜ್ಯೂಯಲ್ಸ್ ತೊಟ್ಟು ಕ್ಯಾಮರಾಗೆ ಸಖತ್ತಾಗೆ ಪೋಸ್ ಕೊಟ್ಟಿದ್ದಾರೆ. ಪ್ರೇಮಂ ಪೂಜ್ಯಂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಸ್ಮೈಲಿ ಕ್ವೀನ್ ಬೃಂದಾ, ಕರುನಾಡ ಕ್ರಷ್ ಪಟ್ಟಕ್ಕೇರಿ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.
ಈ ನಡುವೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಜೊತೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ ನಟಿ ಬೃಂದಾ ಆಚಾರ್ಯ (Brinda Acharya). ಹೊಸ ತಂಡದ ಚೊಚ್ಚಲ ಪ್ರಯತ್ನ ಇದಾಗಿದ್ದು, ಈ ಸಿನಿಮಾದಲ್ಲಿ ಬೃಂದಾ ಸೋಷಿಯಲ್ ಮೀಡಿಯಾ ಇನ್ಫ್ಯೂಲೆಷನರ್ ಪಾತ್ರ ಮಾಡಲಿದ್ದಾರಂತೆ. ಇವರ ಜೊತೆಗೆ ಅಂಕಿತಾ ಅಮರ್ ಕೂಡ ಮತ್ತೊಂದು ಪಾತ್ರವನ್ನು ನಿರ್ವಹಿಸಲಿದ್ದಾರೆ.
ನಿರೂಪ್ ಭಂಡಾರಿ (Nirup Bhandari) ರಾಜರಥ, ವಿಕ್ರಾಂತ್ ರೋಣ, ಆದಿ ಲಕ್ಷ್ಮಿ ಪುರಾಣ ಮತ್ತು ವಿಂಡೋ ಸೀಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ನಿಭಾಯಿಸುತ್ತಿರುವ ಯುವ ಪ್ರತಿಭೆ ಸಚಿನ್ ವಾಲಿ ಜೊತೆ ಕೈ ಜೋಡಿಸಿದ್ದಾರೆ. ಹೊಸ ಚಿತ್ರಕ್ಕೆ ಸಚಿನ್ ವಾಲಿ ನಿರ್ದೇಶಕ.
ಕೆಲವೊಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಸಚಿನ್ ವಾಲಿ (Sachin Wali) ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ ಟೈನರ್ ಕಥಾಹಂದರ ಹೇಳಲು ಸಚಿನ್ ಹೊರಟ್ಟಿದ್ದಾರೆ. ಅವರ ಚೊಚ್ಚಲ ಪ್ರಯತ್ನದಲ್ಲಿ ನಾಯಕನಾಗಿ ನಿರೂಪ್ ಭಂಡಾರಿ ಬಣ್ಣ ಹಚ್ಚಲಿದ್ದಾರೆ.
ಅಂಕೆತ್ ಸಿನಿಮಾಸ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರ ನಿರ್ಮಿಸಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರ್ (Sachin Basrur) ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಕಾಟೇರ (Katera) ಸಿನಿಮಾದ ನಂತರ ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ (Aradhana) ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಕಾಟೇರ ಅದ್ಭುತ ಯಶಸ್ಸು ಕಂಡರೂ, ನಾಯಕಿಯ ಮತ್ತೊಂದು ಸಿನಿಮಾ ಘೋಷಣೆ ಆಗದೇ ಇರುವುದಕ್ಕೆ ಹಲವಾರು ಚರ್ಚೆಗಳು ಕೂಡ ನಡೆದಿವೆ. ಕಾಟೇರ ಗೆಲುವಿನ ನಂತರವೂ ಅವರಿಗೆ ಅವಕಾಶ ಸಿಕ್ಕಿಲ್ಲ ಎನ್ನುವ ಮಾತು ಕೇಳಿ ಬಂದಿವೆ.
ಆರಾಧನಾ ಆಪ್ತರ ಮಾಹಿತಿಯ ಪ್ರಕಾರ ಕಾಟೇರ ನಂತರ ಸಾಕಷ್ಟು ಅವಕಾಶಗಳು ಬಂದಿವೆ ಅಂತೆ. ಆದರೆ, ಅಳೆದು ತೂಗಿ ಪಾತ್ರಗಳನ್ನು ಮತ್ತು ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ ಆರಾಧನಾ ರಾಮ್. ಹೊಸ ಸಿನಿಮಾದ ಪಾತ್ರಕ್ಕಾಗಿಯೂ ಅವರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರಂತೆ.
ಕಾಟೇರ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಟೆಂಪಲ್ ರನ್ ಮಾಡಿದ್ದ ಆರಾಧನಾ, ಆನಂತರ ಸೀರಿಯಸ್ ಆಗಿ ಹಲವು ಕಥೆಗಳನ್ನು ಕೇಳಿದ್ದಾರಂತೆ. ಜೊತೆಗೆ ಮತ್ತಷ್ಟು ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರಂತೆ.
ಸದ್ಯ ಆರಾಧನಾ ಫೋಟೋ ಶೂಟ್ ನಲ್ಲಿ ಭಾಗಿ ಆಗಿದ್ದು, ಆ ಫೋಟೋಗಳು ಸಿನಿಮಾಗಳ ಒಂದೊಂದು ಲುಕ್ ಟೆಸ್ಟ್ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.
ಬೆಂಗಳೂರಿನ ಬೆಡಗಿ ಪ್ರಿಯಾಮಣಿ (Priyamani) ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ‘ಜವಾನ್’ (Jawan) ಸಕ್ಸಸ್ ನಂತರ ಕನ್ನಡದ ಹುಡುಗಿಗೆ ಬಿಟೌನ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ಹಾಗಾಗಿ ಹೊಸ ಹೊಸ ಫೋಟೋ ಶೂಟ್ ಗಳಲ್ಲಿ ಅವರು ಭಾಗಿ ಆಗುತ್ತಲೇ ಇದ್ದಾರೆ. ನಿನ್ನೆಯಷ್ಟೇ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ರವಿಕೆ ರಹಿತ ಸೀರೆ (saree) ತೊಟ್ಟು ಸಖತ್ತಾಗಿಯೇ ಪೋಸ್ ನೀಡಿದ್ದಾರೆ. ಆ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪ್ರಿಯಾಮಣಿ ಪ್ರತಿಭಾವಂತ ನಟಿ. ಯಾವುದೇ ಅಡ್ಡದಾರಿ ತುಳಿಯದೇ ತಮ್ಮ ಬದುಕನ್ನು ಕಟ್ಟಿಕೊಂಡವರು. ಹಾಗಾಗಿ ಯಾವುದಕ್ಕೂ ಮುಲಾಜು ನೋಡದೇ ನೇರವಾಗಿ ಹೇಳುತ್ತಾರೆ. ಇತ್ತೀಚೆಗಷ್ಟೇ ಅವರು ಬಾಲಿವುಡ್‌ನ ಕರಾಳ ಸತ್ಯವನ್ನು ರವೀಲ್ ಮಾಡಿದ್ದರು. ಪಬ್ಲಿಸಿಟಿಗಾಗಿ ಸೆಲೆಬ್ರಿಟಿಗಳು ಏನೆಲ್ಲ ಮಾಡುತ್ತಾರೆ ಎಂಬುದನ್ನು ಬಹಿರಂಗ ಪಡಿಸಿದ್ದರು. ಬಾಲಿವುಡ್ ಸೆಲೆಬ್ರೆಟಿಗಳು ಜಿಮ್‌ಗೆ ಹೋಗಲಿ, ಸಲೂನ್‌ಗೆ ಹೋಗಲಿ, ಮನೆ, ಪಾರ್ಟಿ, ವಿಮಾನ ನಿಲ್ದಾಣಕ್ಕೆ ಹೋದ್ರು ಪಾಪರಾಜಿಗಳು ಮುತ್ತಿಕೊಳ್ತಾರೆ. ಹೇಗೆ ಬರ್ತಾರೆ ಇವರೆಲ್ಲಾ ಅಂತ ಅನೇಕರು ಯೋಚಿಸುತ್ತಾರೆ. ಇದಕ್ಕೆಲ್ಲಾ ಈಗ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದರು.
ಟಿವಿ ಸಂದರ್ಶನವೊಂದರಲ್ಲಿ ಮಾತಾಡಿದ ಪ್ರಿಯಾಮಣಿ, ಸೆಲೆಬ್ರಿಟಿಗಳು ಒಂದು ರೀತಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ತಂತ್ರ ಎಂದಿದ್ದಾರೆ. ಸೆಲೆಬ್ರೆಟಿಗಳು ಸೂಟ್‌ನಲ್ಲಿ ಇರೋದು, ಸಲೂನ್‌ಗೆ ಹೋದಾಗಲೂ ಪಾಪರಾಜಿಗಳ ಕ್ಯಾಮೆರಾಗೆ ಸಿಗ್ತಾರೆ. ಪಾಪರಾಜಿಗಳೇ ಅವರ ಹಿಂದೆ ಓಡಾಡ್ತಿರುತ್ತಾರೆ ಎಂದು ಜನಸಾಮಾನ್ಯರು ಊಹಿಸಿರುತ್ತಾರೆ. ಆದರೆ ಅಸಲಿ ಸಂಗತಿಯೇ ಬೇರೇ ಇದೆ ಎಂದಿದ್ದರು. ಪ್ರಚಾರಕ್ಕಾಗಿ ಪಿಆರ್‌ಗಳ ಮೂಲಕ ಸೆಲೆಬ್ರೆಟಿಗಳೇ ಪಾಪರಾಜಿಗಳಿಗೆ ದುಡ್ಡು ಕೊಟ್ಟು ಕರೆಸಿಕೊಳ್ತಾರೆ. ದುಡ್ಡು ಕೊಟ್ಟರಷ್ಟೇ ಅವರು ಬಂದು ಫೋಟೋ-ವಿಡಿಯೋ ತೆಗೆದು ಪ್ರಚಾರ ಮಾಡೋದು ಅಂತ ನಟಿ ಪ್ರಿಯಾಮಣಿ ಹೇಳಿದ್ದರು. ಪ್ರಿಯಾಮಣಿ ಹೇಳಿಕೆ ಈಗ ಸಖತ್ ಸದ್ದು ಮಾಡುತ್ತಿದೆ. ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.
ನೇರವಂತಿಕೆಯ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲೂ ಅವರು ತೊಡಗಿದ್ದಾರೆ. ಮೊನ್ನೆಯಷ್ಟೇ ದೇವಸ್ಥಾನವೊಂದಕ್ಕೆ ಮೆಕ್ಯಾನಿಕಲ್ ಆನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಪ್ರಿಯಾಮಣಿ. ನಟಿಯ ನಡೆಗೆ ಅಭಿಮಾನಿಗಳು ಶ್ಲಾಘಿಸಿದ್ದಾರೆ
ಎರ್ನಾಕುಲಂ ಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಆನೆಯನ್ನು ಗಿಫ್ಟ್ ಆಗಿ ಪ್ರಿಯಾಮಣಿ ನೀಡಿದ್ದಾರೆ. ಇದರ ಗಾತ್ರ ಮತ್ತು ಎತ್ತರ ನಿಜವಾದ ಆನೆಯನ್ನು ಮೀರಿಸುವಂತಿದೆ. ಇದನ್ನು ನೋಡಿ ಗ್ರಾಮಸ್ಥರು ಬೆರಗಾಗಿದ್ದಾರೆ.
ಪ್ರಿಯಾಮಣಿ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ ಮೆಕ್ಯಾನಿಕಲ್ ಆನೆಯು 3 ಮೀಟರ್ ಎತ್ತರ ಮತ್ತು 800 ಕೆಜಿ ತೂಕವಿದೆ. ರೋಬೋ ಆನೆಯನ್ನು ದೇಶದಾದ್ಯಂತ ತೆಗೆದುಕೊಂಡು ಹೋಗಲು ಅನುಮತಿ ಕೂಡ ನೀಡುತ್ತಾರೆ ಎಂದು ದೇವಾಲಯದ ಅಧಿಕಾರಿಗಳು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಧ್ರುವ ಸರ್ಜಾ ನಟನೆಯ ಕೇಡಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುತ್ತಿರುವ ಶಿಲ್ಪಾ ಶೆಟ್ಟಿ(Shilpa Shetty) , ಮತ್ತೆ ಮತ್ತೆ ಫೋಟೋಶೂಟ್ (Photoshoot) ನಲ್ಲಿ ಭಾಗಿ ಆಗುತ್ತಲೇ ಇರುತ್ತಾರೆ. ಈ ಬಾರಿಯೂ ಅವರು ಡಬಲ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅದರಲ್ಲೂ ಕಪ್ಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಸಿಕೊಂಡಿದ್ದಾರೆ. ಅವರು ಹಾಕಿದ ಕಾಸ್ಟ್ಯೂಮ್ ಡಿಸೈನ್ ಹೊಸ ರೀತಿಯದ್ದಿದೆ.
ಒಂದಿಲ್ಲೊಂದು ಕೆಲಸ ಮಾಡುತ್ತಾ ಸದಾ ಎಂಗೇಜ್ ಆಗಿರುವ ಶಿಲ್ಪಾ ಶೆಟ್ಟಿ, ಇತ್ತೀಚೆಗಷ್ಟೇ ‘ಕೆಡಿ’ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿಗೆ (Mysore) ಬಂದಿಳಿದಿದ್ದರು. ಮೈಸೂರು ಸುಪ್ರಸಿದ್ಧ ಮೈಸೂರು ಪಾಕ್ ಅನ್ನು ಶಿಲ್ಪಾ ಸವಿದಿದ್ದರು. ಆ ವಿಡಿಯೋವನ್ನು ಇನ್ಸ್ಟಾದಲ್ಲೂ ಹಂಚಿಕೊಂಡು ಮೈಸೂರು ಪಾಕ್ ಬಗ್ಗೆ ಮತ್ತಷ್ಟು ಜನರಿಗೆ ತಿಳಿಯುವಂತೆ ಮಾಡಿದ್ದರು.
ಕೆವಿಎನ್ ನಿರ್ಮಾಣದ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ಪ್ರೇಮ್ (Director Prem) ಕಾಂಬಿನೇಷನ್ ಸಿನಿಮಾ ನಾನಾ ಕಾರಣಗಳಿಂದಾಗಿ ಸಖತ್ ಸದ್ದು ಮಾಡ್ತಿದೆ. ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ರವಿಚಂದ್ರನ್ (Ravichandran) ಕೂಡ ಇದ್ದಾರೆ.
ಈ ನಡುವೆ ಶಿಲ್ಪಾ ಶೆಟ್ಟಿ ಕಿರುತೆರೆ ಶೋಗಳಲ್ಲಿ ಅತಿಥಿಯಾಗಿ, ಜಡ್ಜ್ ಆಗಿ ಭಾಗಿ ಆಗುತ್ತಿದ್ದಾರೆ. ಅದರಲ್ಲೂ ಡಾನ್ಸ್ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಇವರು ಖಾಯಂ ಅತಿಥಿ. ವೇದಿಕೆಯ ಮೇಲೆ ಬಳುಕು ಬಳ್ಳಿಯಂತೆ ಡಾನ್ಸ್ ಮಾಡುವುದನ್ನು ನೋಡುವುದೇ ಚಂದ.
ರವಿಚಂದ್ರನ್ ಜೊತೆ ಶಿಲ್ಪಾ ಶೆಟ್ಟಿ ನಟಿಸಿದಾಗಿಂದ ಒಂದು ರೀತಿಯಲ್ಲಿ ಅವರು ಕನ್ನಡದ ನಟಿಯೇ ಆಗಿದ್ದಾರೆ. ಆಗಾಗ್ಗೆ ಕನ್ನಡದ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ಕನ್ನಡದ ಚಿತ್ರಗಳಲ್ಲಿ ನಟಿಸುತ್ತಾ ತಾವೂ ಕನ್ನಡತಿ ಎನ್ನುವುದನ್ನು ಪದೇ ಪದೇ ಸಾಬೀತು ಪಡಿಸುತ್ತಾರೆ.