Tag: Photos

  • ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಮಾಡುವಂತಿಲ್ಲ

    ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಮಾಡುವಂತಿಲ್ಲ

    ಬೆಂಗಳೂರು: ಇನ್ನುಮುಂದೆ ಸರ್ಕಾರಿ ಕಚೇರಿಗಳಲ್ಲಿ ಅನುಮತಿಯಿಲ್ಲದೇ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

    ಈ ಕುರಿತು ರಾಜ್ಯ ಸರ್ಕಾರದ ಪರವಾಗಿ ಅಧೀನ ಕಾರ್ಯದರ್ಶಿ ಕೆ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: 44 ಕಿಮೀ ಸುತ್ತಾಡಿ ಕಾರಿನಲ್ಲಿಯೇ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಅರೆಸ್ಟ್

    ಆದೇಶ ಪ್ರತಿಯಲ್ಲಿ ಏನಿದೆ?
    ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲ್ಲೂಕು ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅವರವರ ಕೆಲಸ ಕಾರ್ಯಗಳ ನಿಮಿತ್ತ ಅಲ್ಲಿಗೆ ಆಗಮಿಸುವುದು ಸರ್ವೇ ಸಾಮಾನ್ಯ. ಆದರೆ ಕೆಲ ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಬಂದು ಫೋಟೋ, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಇದರಿಂದ ಇಲಾಖೆ ಹಾಗೂ ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ಹಾಗೂ ವೀಡಿಯೋ ತೆಗೆಯುವುದನ್ನು ನಿಷೇಧಿಸುವಂತೆ ಅಧಿಕೃತವಾಗಿ ಆದೇಶ ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕಾನ್ಪುರ ಹಿಂಸಾಚಾರ – 40 ದಂಗೆಕೋರರ ಫೋಟೋ ರಿಲೀಸ್, ಇಬ್ಬರು ಅರೆಸ್ಟ್

    ಕಾನ್ಪುರ ಹಿಂಸಾಚಾರ – 40 ದಂಗೆಕೋರರ ಫೋಟೋ ರಿಲೀಸ್, ಇಬ್ಬರು ಅರೆಸ್ಟ್

    ಲಕ್ನೋ: ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಕಾನ್ಪುರ ಪೊಲೀಸರು ಗಂಟೆಗಳ ಸಿಸಿಟಿವಿ ಮತ್ತು ವೀಡಿಯೋ ತುಣುಕಿನ ಮೂಲಕ 40 ಗಲಭೆಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

    ಶುಕ್ರವಾರದ ಹಿಂಸಾಚಾರದಲ್ಲಿ ಈ ವ್ಯಕ್ತಿಗಳು ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ 40 ಗಲಭೆಕೋರರ ಫೋಟೋಗಳನ್ನು ಬಿಡುಗಡೆ ಮಾಡಿದ ಪೊಲೀಸರು, ಸಾರ್ವಜನಿಕರಿಗೆ ಇವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೂ ಕೂಡಲೇ ತಿಳಿಸಿ ಎಂದು ಘೋಷಿಸಿದ್ದಾರೆ.

    ಫೋಟೋಗಳು ಸಾರ್ವಜನಿಕವಾಗಿ ಪ್ರಕಟವಾದಾಗಿನಿಂದ ಪೊಲೀಸರಿಗೆ ಫೋನ್ ಕರೆಗಳು ಬರುತ್ತಿವೆ. 40 ಶಂಕಿತರ ಪೈಕಿ ನಾಲ್ವರ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ- ಇಕ್ಕಟ್ಟಿಗೆ ಸಿಲುಕಿದ ಚಾಮರಾಜಪೇಟೆ ಪೊಲೀಸರು

    ಉತ್ತರ ಪ್ರದೇಶ ಪೊಲೀಸರು ಹಿಂಸಾಚಾರದ ಪ್ರಮುಖ ಶಂಕಿತ ವ್ಯಕ್ತಿಗಳ ಫೋಟೋಗಳನ್ನು ಪೀಡಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಹಾಕಲು ನಿರ್ಧರಿಸಿದ್ದಾರೆ. ಅಲ್ಲದೇ ಶಂಕಿತರ ಬಗ್ಗೆ ಮಾಹಿತಿ ನೀಡಲು ಫೋಟೋಗಳ ಕೆಳಗೆ ಸ್ಟೇಷನ್ ಹೌಸ್ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜೂನ್ 3 ರ ಹಿಂಸಾಚಾರದಲ್ಲಿ ಭಾಗವಹಿಸಿದ್ದಾರೆ ಎನ್ನಲಾದ ಸುಮಾರು 20 ಪ್ರಮುಖ ಆರೋಪಿಗಳ ಭಾವಚಿತ್ರವಿರುವ 25 ಫೋಟೋಗಳನ್ನು ಪೀಡಿತ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಹಾಕಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ), ಪ್ರಮೋದ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಂಪೂರ್ಣ ಪಠ್ಯ ಪುಸ್ತಕ ಪರಿಷ್ಕರಣೆ ಕೈ ಬಿಡೋಲ್ಲ: ಬಿ.ಸಿ.ನಾಗೇಶ್

    ನಾವು ಇನ್ನೂ 100 ಗಲಭೆಕೋರರನ್ನು ಸಿಸಿಟಿವಿ ದೃಶ್ಯಗಳು ಮತ್ತು ವೀಡಿಯೊ ತುಣುಕುಗಳ ಮೂಲಕ ಗುರುತಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್, ಕಾನೂನು ಮತ್ತು ಸುವ್ಯವಸ್ಥೆ ಆನಂದ್ ಪ್ರಕಾಶ್ ತಿವಾರಿ ತಿಳಿಸಿದ್ದಾರೆ.

    ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಮಾಡಿದ ಟೀಕೆ ಖಂಡಿಸಿ ಜನರು ಬಲವಂತವಾಗಿ ಅಂಗಡಿ ಮುಚ್ಚಲು ಮುಂದಾಗಿದ್ದರು. ಇದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿತ್ತು. ಪೊಲೀಸರು ಟಿಯರ್ ಗ್ಯಾಸ್ ಬಳಸಿ ಘರ್ಷಣೆಯನ್ನು ನಿಲ್ಲಿಸಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 38 ಮಂದಿಯನ್ನು ಬಂಧಿಸಿದ್ದಾರೆ.

  • ದಿಶಾ ಪಟಾನಿ ಬಿಕಿನಿ ಫೋಟೋಗೆ ಪಡ್ಡೆಗಳು ಫಿದಾ

    ದಿಶಾ ಪಟಾನಿ ಬಿಕಿನಿ ಫೋಟೋಗೆ ಪಡ್ಡೆಗಳು ಫಿದಾ

    ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಬೀಚ್‍ನಲ್ಲಿ ಕುಳಿತು ಫೊಟೋ ಪೋಸ್ ಕೊಟ್ಟ ಹಾಟ್ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದಿಶಾ ಪಟಾನಿಯ ಇನ್‍ಸ್ಟಾಗ್ರಾಮ್‍ನಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬೀಚ್‍ನಲ್ಲಿ ಬಿಕಿನಿ ಧರಿಸಿ ದಿಶಾ ಪಟಾನಿ ತೆಗೆಸಿಕೊಂಡಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.

     

    View this post on Instagram

     

    A post shared by disha patani (paatni) (@dishapatani)

    ಎಂ.ಎಸ್. ಧೋನಿ, ರಾಧೆ ಸಿನಿಮಾ ಖ್ಯಾತಿಯ ದಿಶಾ ಪಟಾನಿಗೆ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಕೊರೊನಾ ಹಾವಳಿಯಿಂದಾಗಿ ಶೂಟಿಂಗ್‍ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ನಡುವೆ ಹಾಟ್ ಫೋಟೋಶೂಟ್ ಪೋಸ್ ಕೊಟ್ಟ ಫೋಟೋಗಳು ಮಾತ್ರ ಸಖತ್ ವೈರಲ್ ಆಗುತ್ತಿವೆ.

     

    View this post on Instagram

     

    A post shared by disha patani (paatni) (@dishapatani)

    ಉತ್ತರಾಖಂಡ ಮೂಲದ ದಿಶಾ ಪಟಾನಿ ಹುಟ್ಟಿದ್ದು ಉತ್ತರ ಪ್ರದೇಶದ ಬರೇಲಿಯಲ್ಲಿನ ರಜಪೂತ್ ಮನೆತನದಲ್ಲಾಗಿದೆ. ದಿಶಾ ಪಟಾನಿ ಅವರ ತಂದೆ ಪೊಲೀಸ್ ಆಫೀಸರ್ ಆಗಿದ್ದಾರೆ. ದಿಶಾ ಪಟಾನಿ ಮೊದಲು ಅಭಿನಯಿಸಿದ ಸಿನಿಮಾ ತೆಲುಗು ಭಾಷೆಯ ಲೋಫರ್. ವರುಣ್ ತೇಜ ಜೊತೆ ನಾಯಕಿಯಾಗಿ ದಿಶಾ ಅಭಿನಯಿಸಿದ ಈ ಸಿನಿಮಾ ಆಕೆಗೆ ಭಾರೀ ಹೆಸರು ತಂದುಕೊಟ್ಟಿತು.

     

    View this post on Instagram

     

    A post shared by disha patani (paatni) (@dishapatani)

    ಎಂ.ಎಸ್. ಧೋನಿ, ಅನ್‍ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೋಡಿಯಾಗಿ ನಟಿಸಿದ ದಿಶಾ ಪಟಾನಿಗೆ ಆ ಸಿನಿಮಾ ದೊಡ್ಡ ಬ್ರೇಕ್ ನೀಡಿತು. ಜಾಕಿ ಚಾನ್ ಅವರ ಕುಂಗ್ ಫು ಯೋಗ ಸಿನಿಮಾದಲ್ಲಿ ದಿಶಾ ಪಟಾನಿ ಸೋನು ಸೂದ್‍ಗೆ ಜೊತೆಯಾಗಿ ನಟಿಸಿದ್ದಾರೆ. ಬಾಘಿ ಸಿನಿಮಾದಲ್ಲಿ ಟೈಗರ್ ಶ್ರಾಫ್ ಜೊತೆ ತೆರೆ ಹಂಚಿಕೊಂಡಿದ್ದ ದಿಶಾ ಪಟಾನಿ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಸಿನಿಮಾಗಳ ಮೂಲಕವಾಗಿ ಸುದ್ದಿ ಮಾಡುವ ದಿಶಾ ಪಟಾನಿ ಇದೀಗ ಹಾಟ್ ಫೋಟೋ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.

  • ಅಭಿಮಾನಿಯಿಂದ ಬಿಗ್ ಬಿಯ 7 ಸಾವಿರಕ್ಕೂ ಅಧಿಕ ಫೋಟೋ ಸಂಗ್ರಹ

    ಅಭಿಮಾನಿಯಿಂದ ಬಿಗ್ ಬಿಯ 7 ಸಾವಿರಕ್ಕೂ ಅಧಿಕ ಫೋಟೋ ಸಂಗ್ರಹ

    – 1999ರಿಂದ ಫೋಟೋಗಳು ಕಲೆಕ್ಟ್

    ಗಾಂಧಿನಗರ: ಇಂದು ಬಾಲಿವುಡ್‍ನ ಬಿಗ್‍ಬಿ ಅಮಿತಾಭ್ ಬಚ್ಚನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ಬಿಗ್ ಬಿ ಅವರ ಏಳು ಸಾವಿರ ಫೋಟೋಗಳನ್ನು ಕಲೆಕ್ಟ್ ಮಾಡುವ ಮೂಲಕ ಬರ್ತ್ ಡೇಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಭಾಸ್ ಸಿನಿಮಾದಲ್ಲಿ ಬಿಗ್ ಬಿ, ದೀಪಿಕಾ- ಟಾಲಿವುಡ್‍ನಲ್ಲಿ ಮತ್ತೊಂದು ಬಿಗ್ ಫಿಲ್ಮ್

    ಹೌದು.. ಇಂದು ಬಾಲಿವುಡ್‍ನ ಬಿಗ್‍ಬಿ ಅಮಿತಾಭ್ ಬಚ್ಚನ್ 78ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬದವರು, ಸಿನಿಮಾ ಗಣ್ಯರು ಸೇರಿದಂತೆ ಅಪಾರ ಅಭಿಮಾನಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಗುಜರಾತ್‍ನಲ್ಲಿ ಅಭಿಮಾನಿಯೊಬ್ಬರು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಮಿತಾಭ್ ಬಚ್ಚನ್ ಅವರಿಗೆ ಒಂದು ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ.

    ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟರ 5-6 ಫೋಟೋಗಳನ್ನು ಕಲೆಕ್ಟ್ ಮಾಡಿಕೊಂಡು ಇಟ್ಟುಕೊಳ್ಳುತ್ತಾರೆ. ಆದರೆ ಸೂರತ್ ನಿವಾಸಿಯೊಬ್ಬರು ತಮ್ಮ ನೆಚ್ಚಿನ ನಟ ಅಮಿತಾಭ್ ಬಚ್ಚನ್ ಅವರ 7 ಸಾವಿರಕ್ಕೂ ಹೆಚ್ಚಿನ ಫೋಟೋಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಅಭಿಮಾನಿ ದಿವ್ಯೇಶ್ ಅವರು ಅಮಿತಾಭ್ ಬಚ್ಚನ್ ಅವರ ದೊಡ್ಡ ಅಭಿಮಾನಿ. ಹೀಗಾಗಿ ಅವರ ಫೋಟೋಗಳನ್ನು ಅನೇಕ ವರ್ಷಗಳಿಂದ ಕಲೆಕ್ಟ್ ಮಾಡುತ್ತಿದ್ದಾರೆ.

     

    “ನಾನು 1999ರಿಂದ ನಟ ಅಮಿತಾಭ್ ಬಚ್ಚನ್ ಅವರು ಫೋಟೋಗಳನ್ನು ಸಂಗ್ರಹಿಸುತ್ತಿದ್ದೇನೆ. ಇದುವರೆಗೂ ನಾನು ಅಮಿತ್ ಜೀ ಅವರ 7 ಸಾವಿರಕ್ಕೂ ಹೆಚ್ಚಿನ ಫೋಟೋಗಳನ್ನು ಕಲೆಕ್ಟ್ ಮಾಡಿದ್ದಾನೆ. ನನ್ನ ಜೀವನದಲ್ಲಿ ಇದುವರೆಗೂ ಹತ್ತು ಬಾರಿ ಅವರನ್ನು ಭೇಟಿ ಮಾಡಿದ್ದೇನೆ” ಎಂದು ದಿವ್ಯೇಶ್ ತಿಳಿಸಿದ್ದಾರೆ.

    ಅಷ್ಟೇ ಅಲ್ಲದೇ ದಿವ್ಯೇಶ್ ಪ್ರತಿವರ್ಷ ಅಮಿತಾಭ್ ಬಚ್ಚನ್ ಹುಟ್ಟುಹಬ್ಬದ ದಿನದಂದು 11 ಸಸಿಗಳನ್ನು ನೆಡುವ ಮೂಲಕ ಪರಿಸರ ಕಾಳಜಿ ಕೂಡ ಮೆರೆಯುತ್ತಿದ್ದಾರೆ.

  • ಫೇಸ್‍ಬುಕ್‍ನಲ್ಲಿ ಅಶ್ಲೀಲ ಫೋಟೋ, ವಿಡಿಯೋ ಹಾಕುತ್ತಿದ್ದ ಯುವಕ ಅರೆಸ್ಟ್

    ಫೇಸ್‍ಬುಕ್‍ನಲ್ಲಿ ಅಶ್ಲೀಲ ಫೋಟೋ, ವಿಡಿಯೋ ಹಾಕುತ್ತಿದ್ದ ಯುವಕ ಅರೆಸ್ಟ್

    ರಾಯಚೂರು: ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಪೋಸ್ಟ್ ಹಾಕುತ್ತಿದ್ದ ಪುಂಡ ಯುವಕನನ್ನ ಜಿಲ್ಲೆಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ.

    ಸಿರವಾರ ತಾಲೂಕಿನ ಮರಕಿಗುಡ್ಡ ತಾಂಡಾದ ಅಮರೇಶ್ ಬಂಧಿತ ಆರೋಪಿ. ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆಯಲು ಸಹಕರಿಸಿದ್ದ ಇನ್ನೊಬ್ಬ ಆರೋಪಿ ರಾಜು ಪವಾರ ಪರಾರಿಯಾಗಿದ್ದಾನೆ.

    ಈ ಇಬ್ಬರು ಪುಂಡರು ಓರ್ವ ಮಹಿಳೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದರು. ಮಹಿಳೆ ಫೋಟೋವನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಫೇಸ್‍ಬುಕ್‍ಗೆ ಅಪ್ಲೋಡ್ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಕೆಲವು ವಿಡಿಯೋಗಳನ್ನು ಆರೋಪಿಗಳು ಅಪ್ಲೋಟ್ ಮಾಡಿದ್ದಾರೆ.

    ಈ ಕುರಿತು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ಆರೋಪಿಗಳು ಫೋಟೋ ಹಾಗೂ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಕಂಪ್ಯೂಟರ್ ಐಪಿ ಅಡ್ರೆಸ್ ಸಿಕ್ಕಿತ್ತು. ಅದರ ಆಧಾರದ ಮೇಲೆ ಶೋಧಕಾರ್ಯ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಪತ್ನಿ ಜೊತೆ ತಿರುನಲ್ಲರ್ ಶನೇಶ್ವರನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್

    ಪತ್ನಿ ಜೊತೆ ತಿರುನಲ್ಲರ್ ಶನೇಶ್ವರನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಚಿತ್ರೀಕರಣ ಮುಗಿಸಿ ಬ್ರೇಕ್ ಪಡೆದಿದ್ದು, ಪತ್ನಿ ವಿಜಯಲಕ್ಷ್ಮಿ ಜೊತೆ ಟೆಂಪಲ್ ರನ್ ಮಾಡುತ್ತಿದ್ದಾರೆ.

    ಹೌದು. ದರ್ಶನ್ ದಂಪತಿ ಈಗ ತಮಿಳುನಾಡಿನ ತಿರುನಲ್ಲರ್ ನ ಪ್ರಸಿದ್ಧ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶನೇಶ್ವರನಿಗೆ ದರ್ಶನ್ ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ. ದರ್ಶನ್ ತಿರುನಲ್ಲರ್ ಗೆ ಭೇಟಿ ನೀಡಿರುವುದು ಇದೆ ಮೊದಲ ಬಾರಿ ಅಲ್ಲ. ಪ್ರತಿವರ್ಷ ಕೂಡ ತಿರುನಲ್ಲರ್ ಗೆ ಬಂದು ದರ್ಶನ್ ದಂಪತಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತ ಬಂದಿದ್ದಾರೆ.

    ಈ ಹಿಂದೆ ಶನೇಶ್ವರನ ದರ್ಶನಕ್ಕೆ ಬಂದಾಗ ಡಿ ಬಾಸ್ ತುಲಾಭಾರ ಮಾಡಿಸಿದ್ದರು. ಆದರೆ ಈ ಬಾರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ತಮ್ಮ ಸ್ನೇಹಿತರ ಜೊತೆ ನಿಂತು ದರ್ಶನ್ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ದರ್ಶನ್ ಪತ್ನಿ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಇಷ್ಟು ದಿನ ರಾಬರ್ಟ್ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಿದ್ದ ದರ್ಶನ್ ಈಗ ರಾಜವೀರ ಮದಕರಿ ನಾಯಕ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ. ಸಿನಿಮಾಗಾಗಿ ಚಿತ್ರತಂಡ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಫೆಬ್ರವರಿ 10ರಿಂದ ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಇತ್ತೀಚಿಗಷ್ಟೆ ಉತ್ತರಾಖಂಡ ಅರಣ್ಯದಲ್ಲಿ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡಲು ಹೋಗಿದ್ದ ದರ್ಶನ್ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಆಗಿದ್ದರು. ವನ್ಯಜೀವಿ ಮತ್ತು ಪ್ರಾಣಿಪಕ್ಷಿಗಳನ್ನು ಅತಿಯಾಗಿ ಪ್ರೀತಿಸುವ ದರ್ಶನ್ ಇತ್ತೀಚೆಗೆ ಉತ್ತರಾಖಂಡ್ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಛಾಯಾಗ್ರಹಣ ಮಾಡಿದ್ದರು. ದೊಡ್ಡ ಕ್ಯಾಮೆರಾ ಹೆಗಲಿಗೆ ಹಾಕೊಂಡು ವೈಲ್ಡ್‍ಲೈಫ್ ಫೋಟೋಗ್ರಾಫರ್ ಟೀಂ ಜೊತೆ ಕಲ್ಲು, ಬಂಡೆಯ ನಡುವೆ ಸಾಗಿ ಕಾಡು ಸುತ್ತಿದ್ದರು. ಆ ದಟ್ಟಕಾಡಿನಲ್ಲಿ ದಾಸ ಮಾಡಿರುವ ಸಾಹಸಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿತ್ತು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.

  • ಬಾಲಕನನ್ನ ಬಲಿ ಪಡೆದಿದ್ದ ನರ ಭಕ್ಷಕ ಚಿರತೆಯ ಚಲನವಲನ ಕ್ಯಾಮೆರಾದಲ್ಲಿ ಸೆರೆ

    ಬಾಲಕನನ್ನ ಬಲಿ ಪಡೆದಿದ್ದ ನರ ಭಕ್ಷಕ ಚಿರತೆಯ ಚಲನವಲನ ಕ್ಯಾಮೆರಾದಲ್ಲಿ ಸೆರೆ

    ತುಮಕೂರು: ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ ಗ್ರಾಮದಲ್ಲಿ ಬಾಲಕನನ್ನ ಬಲಿ ಪಡೆದಿದ್ದ ನರ ಭಕ್ಷಕ ಚಿರತೆಗಳ ಚಲನವಲನ ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ತುಮಕೂರಿನ ಬನ್ನಿಕುಪ್ಪೆ-ಕುಣಿಗಲ್ ದೊಡ್ಡ ಮಳಲವಾಡಿ ಅರಣ್ಯ ಪ್ರದೇಶದಲ್ಲಿ ಇರಿಸಿದ್ದ ಕ್ಯಾಮೆರಾದಲ್ಲಿ ಚಿರತೆಗಳ ಚಲನವಲನ ಸೆರೆಯಾಗಿದೆ. ಒಟ್ಟು ಮೂರು ವಿಭಾಗದಿಂದ ನಾಲ್ಕು ಚಿರತೆಯ ಚಿತ್ರ ದೊರೆತಿದ್ದು, ಒಂದು ಹೆಣ್ಣು, ಒಂದು ಗಂಡು ಎರಡು ಮದ್ಯ ವಯಸ್ಸಿನ ಚಿರತೆ ಎಂದು ಪತ್ತೆಹಚ್ಚಲಾಗಿದೆ. ಕಳೆದ ರಾತ್ರಿಯಿಂದ ಮುಂಜಾನೆಯವರೆಗೂ ಚಿರತೆಯ ಚಲನವಲನ ಸೆರೆಯಾಗಿದೆ.

    ಈ ನಡುವೆ ಮೂರನೇ ದಿನವಾದ ಇಂದು ಅರಣ್ಯ ಇಲಾಖೆ ಕೂಂಬಿಂಗ್ ಮುಂದುವರಿಸಿದೆ. ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ, ಸಿಎಸ್ಪುರ, ಮಾವಿನಹಳ್ಳಿ, ಹೆಬ್ಬೂರು ಹೋಬಳಿಗಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ನೇತೃತ್ವದಲ್ಲಿ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಪ್ರದೇಶಗಳಲ್ಲಿ 20 ಬೋನ್‍ಗಳನ್ನ ಇಟ್ಟು ನರಭಕ್ಷಕ ಚಿರತೆಗಳಿಗೆ ಖೆಡ್ಡಾ ತೋಡಿದ್ದಾರೆ.

    ನಡೆದಿದ್ದು ಏನು?

    ಗುರುವಾರ ಸಂಜೆ ನರಭಕ್ಷಕ ಚಿರತೆ 5 ವರ್ಷದ ಬಾಲಕನನ್ನು ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ಬಲಿ ತಗೆದುಕೊಂಡಿತ್ತು. ದನ ಮೇಯಿಸಲು ಹೊಲಕ್ಕೆ ತೆರಳಿದ್ದ ತಂದೆ ಶಿವಕುಮಾರ್, ತಾಯಿ ಪುಷ್ಪಲತಾ ಜತೆ ಹಠವಿಡಿದು ಬಾಲಕ ಸಮರ್ಥ ಗೌಡ(5) ಕೂಡ ತೆರಳಿದ್ದನು. ಅಲ್ಲೇ ಪಕ್ಕದಲ್ಲಿ ಆಟವಾಡುವಾಗ ಕಿರಾತಕ ಚಿರತೆ ಏಕಾಏಕಿ ದಾಳಿ ನಡೆಸಿ ಬಾಲಕನ ರಕ್ತಹೀರಿತ್ತು.

    ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸಮರ್ಥ್ ಗೌಡನ ಕುತ್ತಿಗೆಗೆ ಬಾಯಿಹಾಕಿ ರಕ್ತ ಹೀರುವ ಸಂದರ್ಭದಲ್ಲಿ ಅಪ್ಪ, ಅಮ್ಮ ಎಂದು ಕಣ್ಣೀರಿಟ್ಟಿದ್ದರು. ತಮ್ಮ ಕಣ್ಣೆದುರೇ ಇದ್ದ ಒಬ್ಬನೇ ಮಗ ಚಿರತೆಗೆ ಆಹಾರವಾಗುತ್ತಿದ್ದನ್ನು ಕಂಡು ಚೀರಾಡಿ ಸಹಾಯಕ್ಕೆ ಧಾವಿಸುವಷ್ಟರಲ್ಲಿ ಚಿರತೆ ಅರಣ್ಯದ ಒಳಗಡೆ ಜಿಗಿದು ಕಣ್ಮರೆಯಾಗಿತ್ತು.

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುಟಾಣಿ ಬಾಲಕನ ಶವ ಕಂಡು ಸ್ಥಳೀಯರು ಮರುಗಿದ್ದರು. ಚಿರತೆ ಹಿಡಿಯಲಾಗದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಇದೇ ಚಿರತೆ ಹೆಬ್ಬೂರು ಹೋಬಳಿ ಬನ್ನಿಕುಪ್ಪೆ ಲಕ್ಷ್ಮಮ್ಮ, ಕುಣಿಗಲ್ ತಾಲೂಕು ದೊಡ್ಡಮರಳವಾಡಿ ಆನಂದಯ್ಯ ಎಂಬುವವರನ್ನು ತಿಂದು ಮುಗಿಸಿದ ಘಟನೆ ಹಸಿರಾಗಿರುವಾಗಲೇ ಈಗ ಮತ್ತೊಂದು ಭಯಾನಕ ಘಟನೆ ನಡೆದಿತ್ತು.

    ದನ ಕಾಯಲು ತೆರಳುವಾಗ ನಾನು ಬರುತ್ತೇನೆ ಎಂದು ಹಠವಿಡಿದು ಬಂದ ಮುದ್ದು ಕಂದ ಸಮರ್ಥ್ ಗೌಡನನ್ನು ಆತನ ತಾಯಿ ಪುಷ್ಪಲತಾ ಎಚ್ಚರಿಕೆಯಿಂದಲೇ ಎತ್ತಿಕೊಂಡು ಜೋಪಾನ ಮಾಡಿದ್ದರು. ಪೊದೆಯಲ್ಲಿ ಚಿರತೆಯಿರುವುದನ್ನು ಗ್ರಹಿಸಿ ಬೆಚ್ಚಿ ಓಡಿಹೋದ ಹಸುಗಳನ್ನು ನೋಡಲು ಮಗು ಕೆಳಗಿಳಿಸಿ ಸ್ವಲ್ಪ ದೂರ ಹೋಗಿದ್ದೇ ತಡ ನರ ಭಕ್ಷಕ ಚಿರತೆ ಪುಟಾಣಿ ಕಂದನ ರಕ್ತ ಹೀರಿತ್ತು. ಅಪಾಯ ಅರಿತು ಕೆಲವೇ ನಿಮಿಷದಲ್ಲಿ ತಾಯಿ ವಾಪಸಾದರೂ ಕಾಲ ಮಿಂಚಿ ಹೋಗಿತ್ತು.

  • ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡೋದಾಗಿ ಬೆದರಿಸಿದ ಸೈಕೋಪಾತ್ ಪತಿ

    ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡೋದಾಗಿ ಬೆದರಿಸಿದ ಸೈಕೋಪಾತ್ ಪತಿ

    ಬೆಂಗಳೂರು: ಪ್ರೀತಿಸಿ ಮದುವೆ ಮಾಡಿಕೊಂಡ ಪತಿಯೇ ಈಗ ಪತ್ನಿಯ ಬದುಕಿನಲ್ಲಿ ವಿಲನ್ ಆಗಿದ್ದಾನೆ. ನಿನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತೇನೆ ಎಂದು ಸೈಕೋಪಾತ್ ಪತಿ ಪತ್ನಿಗೆ ಬೆದರಿಕೆ ಒಡ್ಡಿದ್ದಾನೆ.

    ಬೆಂಗಳೂರು ನಿವಾಸಿ ಅನಿಶ್ ಡ್ಯಾನಿಯಲ್ ಡಿಸೋಜ ಪತ್ನಿಗೆ ಬೆದರಿಕೆ ಒಡ್ಡಿರುವ ಸೈಕೋ ಪತಿರಾಯ. ಯುವತಿಯೊಬ್ಬಳನ್ನು ಅನೀಶ್ ಪ್ರೀತಿಸಿ ಮದುವೆಯಾಗಿದ್ದನು. ಆಕೆಯ ಜೊತೆ ಚೆನ್ನಾಗಿ ಸಂಸಾರ ಕೂಡ ನಡೆಸುತ್ತಿದ್ದನು. ಪತ್ನಿಯ 10 ಸಾವಿರಕ್ಕೂ ಅಧಿಕ ಖಾಸಗಿ ಫೋಟೋಗಳನ್ನು ಆತ ಕ್ಲಿಕ್ಕಿಸಿ ಇಟ್ಟುಕೊಂಡಿದ್ದನು. ಆದರೆ ಈ ವಿಚಾರ ಪತ್ನಿಗೆ ತಿಳಿದಿರಲಿಲ್ಲ. ಈಗ ಸ್ವತಃ ಆರೋಪಿಯೇ ಫೋಟೋಗಳ ಬಗ್ಗೆ ಪತ್ನಿಗೆ ಹೇಳಿದ್ದಾನೆ. ಅಲ್ಲದೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಪತ್ನಿಗೆ ಬೆದರಿಕೆ ಹಾಕಿದ್ದಾನೆ.

    ಜೊತೆಗೆ ನಿನ್ನ ತಂಗಿ ಹಾಗೂ ತಾಯಿಯ ಖಾಸಗಿ ಫೋಟೋಗಳು ಕೂಡ ನನ್ನ ಬಳಿ ಇದೆ. ಅದನ್ನು ಕೂಡ ಶೇರ್ ಮಾಡುತ್ತೇನೆ ಎಂದು ಅನಿಶ್ ಪತ್ನಿಗೆ ಹೆದರಿಸಿದ್ದಾನೆ. ಯಾವ ಕಾರಣಕ್ಕೆ ಹೀಗೆ ಆರೋಪಿ ಪತ್ನಿಗೆ ಹೆದರಿಸುತ್ತಿದ್ದನೋ ತಿಳಿದಿಲ್ಲ. ಆದರೆ ಪತಿಯ ಹುಚ್ಚುತನಕ್ಕೆ ಬೇಸತ್ತ ಪತ್ನಿ ಪೊಲೀಸರ ಮೊರೆ ಹೋಗಿದ್ದಾಳೆ.

    ಸದ್ಯ ಅನಿಶ್ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪೂಲ್‍ನಲ್ಲಿ ಕೂಲ್ ಪೋಸ್ ನೀಡಿದ ಗರ್ಭಿಣಿ ಆ್ಯಮಿ

    ಪೂಲ್‍ನಲ್ಲಿ ಕೂಲ್ ಪೋಸ್ ನೀಡಿದ ಗರ್ಭಿಣಿ ಆ್ಯಮಿ

    ನವದೆಹಲಿ: ನಟಿ ಆ್ಯಮಿ ಜಾಕ್ಸನ್ ಕುಟುಂಬಕ್ಕೆ ಶೀಘ್ರದಲ್ಲೇ ಹೊಸ ಸದಸ್ಯನ ಆಗಮನವಾಗಲಿದೆ. ಗರ್ಭಿಣಿಯಾದಾಗಿನಿಂದಲೂ ಹೊಸ ಹೊಸ ಫೋಟೋಶೂಟ್‍ನಲ್ಲಿ ಆ್ಯಮಿ ಮಿಂಚುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಹಾಗೆಯೇ ಈಗ ಸ್ವಿಮಿಂಗ್ ಪೂಲ್‍ನಲ್ಲಿ ಆ್ಯಮಿ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಇರುವ ಕೂಲ್ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಸ್ವಿಮಿಂಗ್ ಪೂಲ್‍ನಲ್ಲಿ ಫುಲ್ ಮಸ್ತಿ ಮಾಡುತ್ತಾ, ಖುಷಿಯಿಂದ ಜಾರ್ಜ್ ಜೊತೆ ಕಾಲ ಕಳೆದ ಫೋಟೋವನ್ನು ಆ್ಯಮಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕೂಲ್ ಫೋಟೋಗೆ ಆ್ಯಮಿ ಅಭಿಮಾನಿಗಳು ಮನಸೋತಿದ್ದಾರೆ. ಆ್ಯಮಿ ಗರ್ಭಿಣಿಯಾದಾಗಿನಿಂದಲೂ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತ ತಮ್ಮ ಪ್ರೆಗ್ನೆಸ್ಸಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ವಿಧವಿಧವಾಗಿ ಫೋಟೋಗೆ ಪೋಸ್ ಕೊಡುತ್ತಾ ಮಿಂಚುತ್ತಿದ್ದಾರೆ.

    ಸಿನಿಮಾಗಳಿಂದ ದೂರ ಉಳಿದಿರುವ ಗರ್ಭಿಣಿ ಆ್ಯಮಿ ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ಈ ಹಿಂದೆ ಆ್ಯಮಿ ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದರು. ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಯ್ದುಕೊಳ್ಳುವುದು ಅವಶ್ಯಕ ಹೀಗಾಗಿ ಯೋಗ, ಧ್ಯಾನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದರು. ಅಲ್ಲದೆ ಟಾಪ್‍ಲೆಸ್ ಆಗಿರುವ ಫೋಟೋವನ್ನು ಆ್ಯಮಿ ಜಾಕ್ಸನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

    2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳವುದಾಗಿ ಘೋಷಿಸಿದ್ದರು. ಬ್ರಿಟನ್ ಮದರ್ಸ್ ಡೇಯಂದು ಆ್ಯಮಿ ಜಾಕ್ಸನ್ ಗೆಳೆಯನೊಂದಿಗೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು. ಗರ್ಭಿಣಿಯಾದ ಬಳಿಕ ಗೆಳೆಯ ಜಾರ್ಜ್ ಜೊತೆ ಮೇ 5ರಂದು ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು.

    ಗರ್ಭಿಣಿಯಾದ ನಂತರವೂ ಆ್ಯಮಿ ಹಲವು ಬಾರಿ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದರು. ಆದರೆ ಆ್ಯಮಿಯ ಟಾಪ್‍ಲೆಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು.

    ಆ್ಯಮಿ 6 ತಿಂಗಳ ಗರ್ಭಿಣಿಯಾಗಿದ್ದಾಗ ಯುರೋಪ್‍ಗೆ ರೋಡ್ ಟ್ರಿಪ್ ಹೋಗಿದ್ದರು. ವಿವಿಧ ಸಾಮಾಜಿಕ ಕಾರಣಗಳಿಗಾಗಿ ಹಣವನ್ನು ಸಂಗ್ರಹಿಸಲು ಕ್ಯಾಶ್ ಆ್ಯಂಡ್ ರಾಕೆಟ್ ಸಂಸ್ಥೆ ಜೊತೆ ಕೈಜೊಡಿಸಿ ಜಾಗತಿಕ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ಈ ಕೆಲಸ ನನಗೆ ತುಂಬಾ ಖುಷಿ ತಂದಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದರು.

  • ಗಾಯಗೊಂಡಿದ್ದ ಚಿರತೆ ಫೋಟೋ ಕ್ಲಿಕ್ಕಿಸಲು ಹೋಗಿ ಪಜೀತಿಗೆ ಸಿಲುಕಿದ

    ಗಾಯಗೊಂಡಿದ್ದ ಚಿರತೆ ಫೋಟೋ ಕ್ಲಿಕ್ಕಿಸಲು ಹೋಗಿ ಪಜೀತಿಗೆ ಸಿಲುಕಿದ

    ಕೋಲ್ಕತ್ತಾ: ಗಾಯಗೊಂಡಿದ್ದ ಚಿರತೆ ಫೋಟೋ ಕ್ಲಿಕ್ಕಿಸಲು ಹೋಗಿ ವ್ಯಕ್ತಿಯೊಬ್ಬ ಪಜೀತಿಗೆ ಸಿಲುಕಿದ ಘಟನೆ ಪಶ್ಚಿಮ ಬಂಗಾಳದ ಅಲಿಪುರ್‍ದುರ್ ಜಿಲ್ಲೆಯಲ್ಲಿ ನಡೆದಿದೆ.

    ಚಿರತೆ ದಾಳಿಗೆ ಒಳಗಾದ ವ್ಯಕ್ತಿಯು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆಗಿದ್ದೇನು?:
    ಗಾಯಗೊಂಡಿದ್ದ ಚಿರತೆಯು ರಸ್ತೆ ಬದಿಯ ಕಾಲುವೆಯಲ್ಲಿ ಮಲಗಿತ್ತು. ಅದನ್ನು ನೋಡಿದ್ದ ಬೈಕ್ ಸವಾರರು, ಪ್ರಯಾಣಿಕರು ಹಾಗೂ ಸ್ಥಳೀಯರು ಚಿರತೆಯ ಸಮೀಪ ಹೋಗಿದ್ದಾರೆ. ಕೆಲವರು ದೂರದಲ್ಲಿ ನಿಂತು ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದರು. ಆದರೆ ಇಬ್ಬರು ವ್ಯಕ್ತಿಗಳು ಚಿರತೆ ಹತ್ತಿರ ನಿಂತು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಆಗ ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿತು. ಇದರಿಂದ ಗಾಬರಿಗೊಂಡ ಜನರು ಅಲ್ಲಿಂದ ಓಡಲು ಆರಂಭಿಸಿದರು.

    ಚಿರತೆ ದಾಳಿಯಿಂದ ಸ್ವಲ್ಪ ಸಮಯದಲ್ಲೇ ತಪ್ಪಿಸಿಕೊಂಡ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣವೇ ಆತನನ್ನು ಸ್ಥಳದಲ್ಲಿದ್ದ ಜನರು ಆಸ್ಪತ್ರೆಗೆ ಸಾಗಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.