Tag: Photojournalist

  • ಕತಾರ್‌ನಲ್ಲಿ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗಲೇ ಮತ್ತೊಬ್ಬ ಪತ್ರಕರ್ತ ಸಾವು

    ಕತಾರ್‌ನಲ್ಲಿ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದಾಗಲೇ ಮತ್ತೊಬ್ಬ ಪತ್ರಕರ್ತ ಸಾವು

    ಕತಾರ್: ‘ಎಲ್‌ಜಿಬಿಟಿಕ್ಯು’ (ಸಲಿಂಗಕಾಮಿ ಅಥವಾ ತೃತೀಯಲಿಂಗಿ) ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲಿನ ಟೀ ಶರ್ಟ್ (Rainbow Shirt) ಧರಿಸಿದ್ದ ಅಮೆರಿಕದ ವರದಿಗಾರ (Journalist) ಕತಾರ್‌ನಲ್ಲಿ (Qatar) ಫಿಫಾ ವಿಶ್ವಕಪ್ (FIFA World Cup) ವರದಿಮಾಡುತ್ತಿದ್ದಾಗ ಸಾವನ್ನಪ್ಪಿದ್ದ. ಈ ಘಟನೆ ನಡೆದ ಕೇವಲ 2 ದಿನದ ಬಳಿಕ ಮತ್ತೊಬ್ಬ ವರದಿಗಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಕತಾರ್‌ನ ಫೋಟೋ ಜರ್ನಲಿಸ್ಟ್ (Photojournalist), ಅಲ್ ಕಾಸ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಖಾಲಿದ್ ಅಲ್-ಮಿಸ್ಲಾಮ್ ಭಾನುವಾರ ವಿಶ್ವಕಪ್ ವರದಿ ಮಾಡುತ್ತಿದ್ದ ಸಂದರ್ಭ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಅವರ ಸಾವಿಗೆ ಅಧಿಕೃತ ಕಾರಣ ಏನೆಂಬುದನ್ನು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ.

    ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ವರದಿ ಮಾಡುತ್ತಿದ್ದ ಸಂದರ್ಭ ಫೋಟೋ ಜರ್ನಲಿಸ್ಟ್ ಅಲ್-ಮಿಸ್ಲಾಮ್ ಸಾವನ್ನಪ್ಪಿದ್ದಾರೆ ಎಂದು ಗಲ್ಫ್ ಟೈಮ್ಸ್ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಅಲ್ ಕಾಸ್ ಟಿವಿ ಕೂಡಾ ನೇರ ಪ್ರಸಾರದಲ್ಲಿ ಈ ಘಟನೆಯನ್ನು ದೃಢಪಡಿಸಿದೆ. ಹೆಚ್ಚಿನ ವಿವರಗಳಿಗೆ ಕಾಯುತ್ತಿರುವುದಾಗಿ ಹೇಳಿದೆ. ಇದನ್ನೂ ಓದಿ: ಶರದ್ ಪವಾರ್‌ಗೆ ಜೀವ ಬೆದರಿಕೆ – ಕೇಸ್ ದಾಖಲು

    ಈ ಘಟನೆಗೂ 2 ದಿನ ಮೊದಲು ಶುಕ್ರವಾರ ವಿಶ್ವಕಪ್ ವೇಳೆ ವರದಿ ಮಾಡುತ್ತಿದ್ದ ಅಮೆರಿಕದ ಪತ್ರಕರ್ತ ಗ್ರಾಂಟ್ ವಾಲ್ ಅವರು ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದರು. ಗ್ರಾಂಟ್ ಅವರು ಕತಾರ್‌ನಲ್ಲಿ ವಿಶ್ವಕಪ್ ಪ್ರಾರಂಭವಾದ ದಿನ ಎಲ್‌ಜಿಬಿಟಿಕ್ಯು ಸಮುದಾಯವನ್ನು ಬೆಂಬಲಿಸಿ ಮಳೆಬಿಲ್ಲಿನ ಟೀಶರ್ಟ್ ಧರಿಸಿ ವರದಿ ಮಾಡಲು ಬಂದಿದ್ದರು. ಈ ಹಿನ್ನೆಲೆ ಕತಾರ್‌ನಲ್ಲಿ ಅಧಿಕಾರಿಗಳು ಗ್ರಾಂಟ್ ಅವರನ್ನು ವಶಕ್ಕೆ ಪಡೆದಿದ್ದರು. ಘಟನೆಯನ್ನು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲು ಮುಂದಾಗಿದ್ದಾಗ ಅವರ ಫೋನ್ ಅನ್ನು ಕಸಿದುಕೊಳ್ಳಲಾಗಿತ್ತು ಎಂದು ಗ್ರಾಂಟ್ ಬಳಿಕ ತಿಳಿಸಿದ್ದರು.

    ಈ ಎಲ್ಲಾ ಘಟನೆಯ ಬಳಿಕ ಭದ್ರತಾ ಅಧಿಕಾರಿಯೊಬ್ಬರು ಗ್ರಾಂಟ್ ಅವರನ್ನು ಸಂಪರ್ಕಿಸಿ, ಕ್ಷಮೆಯಾಚಿಸಿದ್ದರು. ಅವರಿಗೆ ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಅನುಮತಿಯನ್ನೂ ನೀಡಲಾಗಿತ್ತು. ಆದರೆ ಶುಕ್ರವಾರ ಅವರ ಹಠಾತ್ ನಿಧನವಾಗಿದೆ. ಅವರ ಸಾವಿನ ಹಿಂದೆ ಕತಾರ್ ಸರ್ಕಾರದ ಕೈವಾಡವಿದೆ ಎಂದು ಗ್ರಾಂಟ್ ಸಹೋದರ ಎರಿಕ್ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ: ಅಮಿತ್ ಶಾ

    Live Tv
    [brid partner=56869869 player=32851 video=960834 autoplay=true]

  • ಪ್ಯಾರಿಸ್‌ಗೆ ಹೋಗ್ತಿದ್ದ ಪುಲಿಟ್ಜರ್ ವಿಜೇತೆಗೆ ದೆಹಲಿ ಏರ್‌ಪೋರ್ಟ್‌ನಲ್ಲಿ ತಡೆ

    ಪ್ಯಾರಿಸ್‌ಗೆ ಹೋಗ್ತಿದ್ದ ಪುಲಿಟ್ಜರ್ ವಿಜೇತೆಗೆ ದೆಹಲಿ ಏರ್‌ಪೋರ್ಟ್‌ನಲ್ಲಿ ತಡೆ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲಿಟ್ಜರ್ ವಿಜೇತೆ, ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ಯಾರಿಸ್‌ಗೆ ಹೋಗಬೇಕಿತ್ತು. ಆದರೆ ದೆಹಲಿಯಲ್ಲಿ ತಮ್ಮನ್ನು ವಿಮಾನ ಹತ್ತಲು ಅಧಿಕಾರಿಗಳು ಬಿಡಲಿಲ್ಲ ಎಂಬುದಾಗಿ ಆರೋಪ ಹೊರಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಮಟ್ಟೂ, ತಮ್ಮ ಬೋರ್ಡಿಂಗ್ ಪಾಸ್ ಹಾಗೂ ಪಾಸ್‌ಪೋರ್ಟ್‌ನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅದರ ಮೇಲೆ ಪೂರ್ವಾಗ್ರಹವಿಲ್ಲದೇ ರದ್ದುಗೊಳಿಸಲಾಗಿದೆ(ಕ್ಯಾನ್ಸಲ್ಡ್ ವಿದೌಟ್ ಪ್ರೆಜುಡೈಸ್) ಎಂದು ಕೆಂಪು ಶಾಯಿಯಲ್ಲಿ ಮುದ್ರಿಸಲಾಗಿದೆ. ಆದರೆ ತಮಗೆ ಪ್ಯಾರಿಸ್‌ಗೆ ಹೋಗಲು ಏಕೆ ಬಿಡಲಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳು ಯಾವುದೇ ಉತ್ತರ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸುವವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ: ಸಿದ್ದುಗೆ ತಿರುಗೇಟು ನೀಡಿದ ಜೋಶಿ

    ನಾನು ಸೆರೆಂಡಿಪಿಟಿ ಆರ್ಲೆಸ್ ಅನುದಾನದ 2022ರ 10 ಪ್ರಶಸ್ತಿ ವಿಜೇತರಲ್ಲಿ ಒಬ್ಬಳಾಗಿ, ಪುಸ್ತಕ ಬಿಡುಗಡೆ ಹಾಗೂ ಛಾಯಾಗ್ರಹಣ ಪ್ರದರ್ಶನಕ್ಕಾಗಿ ಇಂದು ದೆಹಲಿಯಿಂದ ಪ್ಯಾರಿಸ್‌ಗೆ ಪ್ರಯಾಣಿಸಲು ನಿರ್ಧರಿಸಿದ್ದೆ. ನನ್ನ ಬಳಿ ಫ್ರೆಂಚ್ ವೀಸಾ ಇದ್ದರೂ ನನ್ನನ್ನು ದೆಹಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ ಡೆಸ್ಕ್‌ನಲ್ಲಿ ನಿಲ್ಲಿಸಲಾಯಿತು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    ಯಾವುದೇ ಕಾರಣವಿಲ್ಲದೇ ನನ್ನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಎಂದು ಮಟ್ಟೂ ಆರೋಪಿಸಿದ್ದರೂ ಅವರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿಗಾ ಇರಿಸುವಂತೆ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಅವರ ವಿದೇಶ ಪ್ರಯಾಣವನ್ನು ತಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಭಾರೀ ಮಳೆಯಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧ – ರಾಜ್ಯದ ವಿವಿಧೆಡೆ ಭೂಕುಸಿತ, ಭೂಮಿ ಕಂಪಿಸಿದ ಅನುಭವ

    ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತರ ಸಂಘ ಪುಲಿಟ್ಜರ್ ವಿಜೇತೆಯ ವಿದೇಶ ಪ್ರಯಾಣವನ್ನು ರದ್ದುಗೊಳಿಸಿರುವ ಕ್ರಮವನ್ನು ಖಂಡಿಸಿದೆ. ಪ್ರಯಾಣ ನಿರ್ಬಂಧದ ಹೆಸರಿನಲ್ಲಿ ಹಲವಾರು ಜನರ ಅವಕಾಶಗಳನ್ನು ಕಸಿದುಕೊಂಡಿದೆ ಎಂದು ಕಾಶ್ಮೀರದ ಜರ್ನಲಿಸ್ಟ್ ಫೆಡರೇಶನ್ ಟ್ವೀಟ್ ಮಾಡಿದೆ.

    Live Tv