Tag: Photography

  • ಪಬ್ಲಿಕ್ ಟಿವಿ ಕ್ಯಾಮರಾಮನ್ ಸುರೇಂದ್ರ ಕುಡಾಳಕರ್‌ಗೆ ಈ ವರ್ಷದ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರದಾನ

    ಪಬ್ಲಿಕ್ ಟಿವಿ ಕ್ಯಾಮರಾಮನ್ ಸುರೇಂದ್ರ ಕುಡಾಳಕರ್‌ಗೆ ಈ ವರ್ಷದ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರದಾನ

    ಕಾರವಾರ: ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಈ ವರ್ಷದ ಟ್ಯಾಗೋರ್ ಪತ್ರಿಕಾ ಪ್ರಶಸ್ತಿಯು ಪಬ್ಲಿಕ್ ಟಿವಿಯ ಕ್ಯಾಮರಾಮನ್ ಸುರೇಂದ್ರ ಕುಡಾಳಕರ್‌ಗೆ ಸಂದಿದೆ.

    ಮಾಧ್ಯಮದಲ್ಲಿ ಛಾಯಾಗ್ರಾಹಕರಾಗಿ ಸೇವೆ ಹಾಗೂ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಉತ್ತಮ ಸುದ್ದಿ ಛಾಯಾಗ್ರಹಣಕ್ಕೆ ಈ ಪ್ರಶಸ್ತಿ ನೀಡಲಾಗಿದೆ. ಇದನ್ನೂ ಓದಿ: BSY ಮಾಸ್ ಲೀಡರ್, ಆದ್ರೆ ಟಿಕೆಟ್ ಫೈನಲ್ ಮಾಡೋದು ಪಾರ್ಲಿಮೆಂಟರಿ ಬೋರ್ಡ್: ಸಿ.ಟಿ.ರವಿ

    ಪ್ರಶಸ್ತಿ ಹಾಗೂ ನಗದು ಪುರಸ್ಕಾರವನ್ನು ಇಂದು ಕಾರವಾರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಗಣಪತಿ ಉಳವೇಕರ್ ಅವರು ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸುಭಾಷ್ ಧೂಪದಹೊಂಡ, ವರದಿಗಾರ ಮಯೂರ್ ಹೆಗಡೆಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದನ್ನೂ ಓದಿ: ಅಭಿಮಾನಿಯ ಹೊಸ ಜೀಪ್ ಓಡಿಸಿ ಮಹಿಳೆಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರೇಣುಕಾಚಾರ್ಯ

    ಕಾರ್ಯಕ್ರಮದಲ್ಲಿ ಕಾರವಾರ ವಿಧಾನಸಭಾ ಸದಸ್ಯರಾದ ರೂಪಾಲಿ ನಾಯ್ಕ, ನಗರಸಭಾ ಅಧ್ಯಕ್ಷ ನಿತಿನ್ ಪಿಕಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾಂಗಾ ಎಂ, ಪತ್ರಕರ್ತ ಸಂಘದ ಅಧ್ಯಕ್ಷ ಟಿಬಿ ಹರಿಕಾಂತ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ತಮ್ಮೊಳಗಿನ ಛಾಯಾಗ್ರಾಹಕನಿಗೆ ಕೆಲಸ ನೀಡಿ ಅಭಿಮಾನಿಗಳ ಮನ ಗೆದ್ದ ಧೋನಿ

    ತಮ್ಮೊಳಗಿನ ಛಾಯಾಗ್ರಾಹಕನಿಗೆ ಕೆಲಸ ನೀಡಿ ಅಭಿಮಾನಿಗಳ ಮನ ಗೆದ್ದ ಧೋನಿ

    ನವದೆಹಲಿ: ಮುಂದಿನ ತಿಂಗಳು ಐಪಿಎಲ್ ಟೂರ್ನಿ ಮೂಲಕ ಕ್ರಿಕೆಟ್‍ಗೆ ಮರಳಲಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇತ್ತೀಚೆಗೆ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಧೋನಿ ತಮ್ಮೊಳಗಿನ ಛಾಯಾಗ್ರಾಹಕನಿಗೆ ಕೆಲಸ ನೀಡಿ, ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಎಂ.ಎಸ್.ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಕಳೆದ ತಿಂಗಳು ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಎಂಎಸ್ ಧೋನಿ ಅವರು ರಾಷ್ಟ್ರೀಯ ಉದ್ಯಾನವನದ ಭೇಟಿ ಅತ್ಯುತ್ತಮವಾಗಿತ್ತು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ವಿವರಿಸಿದ್ದಾರೆ. ಜೊತೆಗೆ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ರಾಷ್ಟ್ರೀಯ ಪ್ರಾಣಿ ಹುಲಿಯ ಫೋಟೋವನ್ನು ಧೋನಿ ಹಂಚಿಕೊಂಡಿದ್ದಾರೆ.

    https://www.instagram.com/p/B8i2DhXlwW0/

    ‘ಹುಲಿಯೊಂದನ್ನು ಕಣ್ಣೆದುರು ಕಂಡಾಗ, ಅದು ಕೆಲ ಫೋಟೋ ತೆಗೆದುಕೊಳ್ಳುವವರೆಗೂ ಸಮಯ ನೀಡಿದಾಗ ಖುಷಿಯಾಗುತ್ತದೆ. ಕಾನ್ಹಾ ಭೇಟಿ ಅತ್ಯುತ್ತಮವಾಗಿತ್ತು ಎಂದು ಧೋನಿ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳೊಬ್ಬರು ಎಂ.ಎಸ್.ಧೋನಿ ಅವರನ್ನು ಹುಲಿ ಎಂದು ಕರೆದಿದ್ದಾರೆ.

    ಎಂ.ಎಸ್.ಧೋನಿ, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹೆಚ್ಚು ಫೋಟೋಗಳನ್ನು ಶೇರ್ ಮಾಡುವುದಿಲ್ಲ. ಆದರೆ ಅವರು ಪೋಸ್ಟ್ ಮಾಡಿದ ಫೋಟೋ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿಗುತ್ತವೆ. ಎಂ.ಎಸ್.ಧೋನಿ ಅವರು ಕೊನೆಯದಾಗಿ ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಆರ್.ಪಿ.ಸಿಂಗ್ ಹಾಗೂ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರೊಂದಿಗೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದ ವಿಡಿಯೋ ಹಾಗೂ ಫೋಟೋ ಹಂಚಿಕೊಂಡಿದ್ದರು.

    https://www.instagram.com/p/B7EVRdDlPDl/

    2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‍ನಿಂದ ವಿರಾಮ ತೆಗೆದುಕೊಂಡ ಎಂ.ಎಸ್.ಧೋನಿ, ಐಪಿಎಲ್ ಮೂಲಕ ಕ್ರಿಕೆಟ್‍ಗೆ ಎಂಟ್ರಿ ಕೊಡಲಿದ್ದಾರೆ. ಮಾರ್ಚ್ 29ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಎಂಎಸ್ ಧೋನಿ ಮುಂದಿನ ತಿಂಗಳು ಮತ್ತೆ ಮೈದಾನಕ್ಕೆ ಬರಲಿದ್ದಾರೆ.

    ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಧೋನಿ, ತಂಡಕ್ಕೆ ಮೂರು ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಕಳೆದ ಬಾರಿಯೂ ಸೂಪರ್ ಕಿಂಗ್ಸ್ ಫೈನಲ್ ತಲುಪಿತ್ತಾದರೂ ನಾಲ್ಕು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ನಿರಾಸೆ ಅನುಭವಿಸಿತ್ತು.

  • ಮೈಸೂರು ಅರಮನೆ ಆಯ್ತು, ಈಗ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್

    ಮೈಸೂರು ಅರಮನೆ ಆಯ್ತು, ಈಗ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್

    ಬಳ್ಳಾರಿ: ಮೈಸೂರು ಅರಮನೆಯಲ್ಲಿ ಅನುಮತಿ ಪಡೆಯದೇ ಫೋಟೋಶೂಟ್ ಮಾಡಿದ್ದ ಛಾಯಾಚಿತ್ರಗಾರ ವೆಂಕಿ ಈಗ ಅಂತದ್ದೆ ಕಿತಾಪತಿ ಮಾಡಿದ್ದಾರೆ.

    ಹೈದ್ರಾಬಾದ್ ಮೂಲದ ಫೋಟೋಗ್ರಾಫರ್ ವೆಂಕಿ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್ ಮಾಡಿದ್ದಾರೆ. ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ಬಳಿ ನವ ಜೋಡಿಯ ಫೋಟೋಶೂಟ್ ಮಾಡಲಾಗಿದೆ. ಹಂಪಿಯ ಅರಮನೆ, ಮಹನವಮಿ ದಿಬ್ಬ, ಮಾತಂಗ ಪರ್ವತ ಸೇರಿದಂತೆ ಹಲವು ಸ್ಮಾರಕಗಳ ಸುತ್ತ ಫೋಟೋಶೂಟ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

    ಹಂಪಿ ಸ್ಮಾರಕಗಳು, ಹಂಪಿಯ ಸುತ್ತಮುತ್ತ ಫೋಟೋಗ್ರಫಿ ಮಾಡಲು ಪ್ರಾಚ್ಯವಸ್ತು ಇಲಾಖೆಯ ಅನುಮತಿ ಪಡೆಯಲೇಬೇಕು. ಸ್ಥಳೀಯರಿಗೆ ಫೋಟೋ ತೆಗೆಯಲು ಬಿಡದ ಪ್ರಾಚ್ಯವಸ್ತು ಅಧಿಕಾರಿಗಳು ವೆಂಕಿಗೆ ಹೇಗೆ ಫೋಟೋಶೂಟ್ ಮಾಡಲು ಅವಕಾಶ ಕಲ್ಪಿಸಿದ್ರು ಅನ್ನೋ ಪ್ರಶ್ನೆ ಈಗ ಕಾಡುತ್ತಿದೆ.

    ಮೈಸೂರು ಅರಮನೆಯಲ್ಲಿ ಇದೇ ವೆಂಕಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸಿದ್ದು ಸಾಕಷ್ಟು ಸುದ್ದಿಯಾಗಿತ್ತು.